Share

ಮನದಲ್ಲೇ ಮೊದಲು
ಸುಧಾ ಶರ್ಮ ಚವತ್ತಿ ಕಾಲಂ

ಮ್ಮ ಜೀವನದಲ್ಲಿ ಎಲ್ಲವೂ ಎರಡು ಸಾರಿ ನಡೆಯುತ್ತದೆ. ಒಂದು ಮನಸ್ಸಿನಲ್ಲಿ, ಇನ್ನೊಂದು ಬಾಹ್ಯದಲ್ಲಿ. ಒಂದು ಒಳಗಡೆ ಇನ್ನೊಂದು ಹೊರಗಡೆ. ಪ್ರೀತಿಯಿಂದ ಹಿಡಿದು ದ್ವೇಷದವರೆಗೆ, ಸೋಲಿನಿಂದ ಹಿಡಿದು ಗೆಲುವಿನವರೆಗೆ ಎಲ್ಲವೂ ಮೊದಲು ಮನಸ್ಸಿನಲ್ಲಿ ರೂಪ ತಳೆದ ನಂತರವೇ ನಿಜ ಜೀವನದಲ್ಲಿ ಘಟಿಸುತ್ತದೆ. ಕೆಲವು ಆಕಸ್ಮಿಕಗಳನ್ನು ಹೊರತುಪಡಿಸಿ ಉಳಿದದ್ದು ಎಲ್ಲವೂ ಮನಸ್ಸಿನಲ್ಲಿ ಚಿತ್ರದಂತೆ ಮೂಡಿದ್ದು ನಂತರ ನಿಜವಾಗಿ ಘಟಿಸುತ್ತದೆ. ಮನಸ್ಸಿನಲ್ಲಿ ಅದು ಸ್ಪಷ್ಟವಾಗದಿದ್ದರೆ, ನಿಚ್ಚಳವಾಗದಿದ್ದರೆ ನಿಜ ಜೀವನದಲ್ಲಿ ನಿಚ್ಚಳವಾಗುವುದಾದರೂ ಹೇಗೆ?

ಕೆಲವರು ಬದುಕಿನುದ್ದಕ್ಕೂ ಸೋಲಬಾರದು ಎಂದು ಯೋಚಿಸುತ್ತಾರೆ. ಖಾಯಿಲೆ ಬರಬಾರದು ಎಂದು ಯೋಚಿಸುತ್ತೇವೆ. ಮೂರು ಹೊತ್ತು ಅದೇ ಯೋಚನೆ. ನೋಡಿ ಸೋಲಬಾರದು ಎಂದು ಯೋಚಿಸುವ ಬದಲು ಗೆಲ್ಲಬೇಕು ಎಂದು ಯೋಚಿಸಬಹುದಲ್ಲಾ? ಖಾಯಿಲೆ ಬರಬಾರದು ಎಂದು ಆಲೋಚಿಸುವ ಬದಲು ಆರೋಗ್ಯವಾಗಿರಬೇಕು ಎಂದು ಯೋಚಿಸಬಹುದಲ್ಲಾ? ಎರಡೂ ಅರ್ಥ ಒಂದೇ; ಆದರೆ ಮನಸ್ಸು ಗ್ರಹಿಸುವ ರೀತಿ ಬೇರೆ. ಇತ್ತೀಚೆಗೆ ಹಾಗೇ ಆಗಿದೆ. ಖಾಯಿಲೆ ಬರಬಾರದು ಎಂದೇ ಫೋಕಸ್ ಮಾಡುತ್ತಿದ್ದಾರೆ. ಆದರೆ ಆರೋಗ್ಯವಾಗಿ ಇರುವುದರ ಕಡೆಗೆ ಅಲ್ಲ. ಅಷ್ಟೇ ಅಲ್ಲ ಏನಾದರೂ ಖಾಯಿಲೆ ಬಂದುಬಿಟ್ಟರೆ ಎನ್ನುವ ಭಯಕ್ಕೆ ಹೆದರಿ ಹಲವು ತಪಾಸಣೆಗಳ ಹುಚ್ಚು ಹಿಡಿಸಿಕೊಂಡಿರುತ್ತಾರೆ. ಖಾಯಿಲೆ ಬರದಿದ್ದರೂ ಖಾಯಿಲೆ ಬಂದವರ ಹಾಗೆ ಬದುಕನ್ನು ನಿರಾಸೆಯಲ್ಲಿ ಮುಳುಗಿಸಿಕೊಳ್ಳುತ್ತಾರೆ.

ಎಲ್ಲವೂ ಹೇಗೆ ಎರಡು ಸಾರಿ ಘಟಿಸುತ್ತದೆಯೋ ಮೊದಲು ಮನಸ್ಸಿನಲ್ಲಿ ಅನಂತರ ನಿಜದಲ್ಲಿ, ಅದೇ ರೀತಿ ನಮ್ಮ ಆಲೋಚನೆಗೆ ತಕ್ಕ ಹಾಗೆ ನಮಗೆ ಹೊರಗಿನ ಎಲ್ಲ ವಸ್ತು ವಿಷಯಗಳೂ ಕಾಣಿಸುತ್ತದೆ. ನಾವು ಯಾವ ಭಾವನೆಯಿಂದ ನೋಡುತ್ತೇವೋ ಅದೇ ರೀತಿಯಾಗಿ ಅದು ನಮಗೆ ಕಾಣಿಸುತ್ತದೆ; ಇದು ವ್ಯಕ್ತಿಗಳು, ಸಂದರ್ಭಗಳು, ಸನ್ನಿವೇಶಗಳು ಯಾವುದೂ ಇರಬಹುದು. ಆ ವ್ಯಕ್ತಿ ಒಳ್ಳೆಯವನು/ಒಳ್ಳೆಯವಳು ಎಂದು ಭಾವಿಸಿದರೆ, ಹಾಗೆ ನಾವು ನಡೆದುಕೊಂಡರೆ ನಮಗೆ ಅವರು ಮಾಡುವ ಎಲ್ಲ ಕೆಲಸ, ಮಾತು ,ಕಥೆಗಳಲ್ಲಿ ಎಲ್ಲ ಒಳ್ಳೆತನವೇ ಕಾಣುತ್ತದೆ. ಯಾವುದೇ ಸಂದರ್ಭವೂ ಇರಬಹುದು. ಅದನ್ನಾ ನಾವು ಹೇಗೆ ನೋಡುತ್ತೇವೆ ಅನ್ನುವುದರ ಮೇಲೆ ಆ ಸಂಧರ್ಭ, ವ್ಯಕ್ತಿ ಅವಲಂಬಿತವಾಗಿದೆ. ಇದನ್ನೇ ದೃಷ್ಟಿಕೋನ ಎನ್ನುವುದು. ನಮ್ಮ ದೃಷ್ಟಿಕೋನ ಬದಲಾದರೆ ಸಾಕು ನಾವು ನೋಡುವ ಎಲ್ಲ ವಿಷಯಗಳು, ವಸ್ತುಗಳು ಸಂದರ್ಭಗಳು ಬದಲಾಗುತ್ತದೆ.

ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದು ಹೇಗೆ? “ನಾನು” ಎನ್ನುವುದು ಇರದಿದ್ದರೆ ಮನಸ್ಸಿನಲ್ಲಿ ಅಹಂಕಾರ ಇರದಿದ್ದರೆ ನಾವು ನೋಡುವ ಎಲ್ಲವುಗಳಲ್ಲೂ ಸ್ಪಷ್ಟತೆ ಇರುತ್ತದೆ. ನಾವು ಎಲ್ಲರನ್ನೂ, ಎಲ್ಲವನ್ನೂ ಜಡ್ಜಮೆಂಟಲ್ ಆಗಿ ನೋಡುತ್ತೇವೆ. ಮೊದಲೇ ಇರುವ ವಿಚಾರ, ಭಾವನೆಗಳ ಜೊತೆಗೆ ಜೋಡಿಸಿ ನೋಡುತ್ತೇವೆ. ಲೇಬಲ್ ಹಚ್ಚಿ ನೋಡುವುದು ನಮಗೆ ಸುಲಭ. ಮತ್ತು ಅದು ಅಭ್ಯಾಸವಾಗಿದೆ. ಅವರು ಬದಲಾದರೂ ನಾವು ಬದಲಾಗಿರುವುದಿಲ್ಲ. ಸಮಸ್ಯೆ ಇರೋದು ಇಲ್ಲಿ ನಾವು ಬದಲಾಗದೇ ಇರುವುದರಲ್ಲಿ. ಪ್ರತಿ ವ್ಯಕ್ತಿ, ಸನ್ನಿವೇಶವನ್ನು ಮೊಟ್ಟ ಮೊದಲು ನೋಡಿದಂತೆ. ಮಗುವಿನಂತೆ ನೋಡಲು ಸಾಧ್ಯವೇ. ಕಷ್ಟ ನಿಜ ಆದರೆ ಹಾಗೆ ನೋಡಿದಾಗ ಆಗುವ ಆನಂದವೇ ಬೇರೆ.

ನಮ್ಮ ದೃಷ್ಟಿಕೋನವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಂಡರೂ ನೋಡುವ ಎಲ್ಲವೂ ನಮಗೆ ಬೆಕಾದ ಹಾಗೆ ಬದಲಾಗುತ್ತದೆ. ಒಂದು ವೇಳೆ ಬದಲಾಗದಿದ್ದರೂ ನಮಗೆ ಹಾನಿ ಇಲ್ಲ. ಒಳ್ಳೆಯ ಆಲೋಚನೆ ಮಾಡಿದ ಲಾಭ ನಮಗೆ ಇದ್ದೇ ಇದೆ. ಸಕಾರಾತ್ಮಕ ಆಲೋಚನೆಗಳಿಂದ ಇಡೀ ದೇಹದಲ್ಲಿ ಉಲ್ಲಸಿತವಾಗುವ ರಾಸಾಯನಿಕ ಉತ್ಪತ್ತಿಯಾಗಿ ಮನಸ್ಸೂ ಉಲ್ಲಸಿತವಾಗಿರುತ್ತದೆ. ದೇಹವೂ ಚೈತನ್ಯ ಪೂರ್ಣವಾಗಿರುತ್ತದೆ.

ನಮ್ಮ ಆಲೋಚನೆ, ಭಾವನೆಯಾಗಿ ರೂಪ ತಳೆಯುತ್ತದೆ. ನಮ್ಮ ಆಲೋಚನೆ ಬೇರೆ, ಭಾವನೆ ಬೇರೆ ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ವರ್ತನೆಯೂ ಬೇರೆ. ಒಂದಕ್ಕೊಂದು ತಾಳ ಮೇಳ ವಿಲ್ಲ. ಹೀಗಾದಾಗ ಶೃತಿ ತಪ್ಪುವುದು ಸಹಜ. ಈಗ ಆಗಿರುವುದು, ಆಗುತ್ತಿರುವುದು ಇದೇ. ಪ್ರತಿ ದಿನ ಸುಮಾರು 64,000 ಆಲೋಚನೆಗಳು ನಮ್ಮೊಳಗೆ ಮೂಡುತ್ತಿದೆ. ಇದೆಲ್ಲ ಅತ್ಯಂತ ಕ್ಷಿಪ್ರವಾಗಿ ಆಗುವಂತಹದ್ದು, ಈ ಆಲೋಚನೆಗಳಿಂದ ಮೂಡಿದ ಭಾವನೆ ಮಾತ್ರ ಹೆಚ್ಚು ಹೊತ್ತು ಇರುತ್ತದೆ. ಆದರೆ ಕ್ರಿಯೆಯಲ್ಲಿ ಇನ್ನೂ ಅದು ಗಟ್ಟಿಯಾಗುತ್ತದೆ. ಉತ್ತಮ ಆಲೋಚನೆ, ಉತ್ತಮ ಭಾವನೆ ಇರದೇ ಉತ್ತಮ ಕೆಲಸ ಮಾಡಿದರೂ ಪ್ರಯೋಜನ ಇಲ್ಲ. ಹಾಗಾಗಿ ಏನೇ ಮಾಡುವುದಾದರೂ ಮನಸ್ಸಿನಲ್ಲಿ ಮೊದಲು ಅದು ನಿಚ್ಚಳ ಆಗಲೇ ಬೇಕು.

ಬುದ್ದಿಯ ಮೂಲಕ ಯಾರು ಮನಸ್ಸನ್ನು ಪಳಗಿಸಿರುತ್ತಾರೋ ಅವರಿಗೆ ಅವರ ಮನಸ್ಸೇ ಮಿತ್ರ. ಇಲ್ಲವಾದರೆ ಅದೇ ಮನಸ್ಸೇ ಅವರಿಗೆ ಶತ್ರುವೂ ಆಗಿದೆ. ಈಗ ಅದನ್ನೇ ಪ್ಲೆಸಿಬೋ ಮತ್ತು ನಸ್ಸಿಬೋ ಪರಿಣಾಮ ಎಂದು ಕರೆಯುತ್ತಿದ್ದಾರೆ. ಮನಸ್ಸು ದೇಹಕ್ಕೆ ಇರುವ ಸಂಬಂಧಗಳ ಬಗೆಗಿನ ವೈಜ್ಞಾನಿಕ ಪ್ರಯೋಗಗಗಳ ಹೊಸ ಶಕೆಯೇ ಈಗ ಆರಂಭವಾಗಿದೆ.

————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...