Share

ರೀಲ್ ಅಮ್ಮ, ರಿಯಲ್ ಅಮ್ಮ
ಪ್ರಸಾದ್ ನಾಯ್ಸ್ ಕಾಲಂ

“ಆಜ್ ಮೇರೇ ಪಾಸ್ ಪೈಸಾ ಹೇ, ಬಂಗ್ಲಾ ಹೇ, ಗಾಡೀ ಹೇ, ಬ್ಯಾಂಕ್ ಬ್ಯಾಲೆನ್ಸ್ ಹೇ… ತುಮ್ಹಾರೇ ಪಾಸ್ ಕ್ಯಾ ಹೇ” ಅಂದಿದ್ದಕ್ಕೆ “ಮೇರೇ ಪಾಸ್ ಮಾ ಹೈ” ಎಂದು ಜಬರ್ದಸ್ತಾಗಿಯೇ ಡೈಲಾಗು ಹೊಡೆದಿದ್ದರು ಅಮಿತಾಭ್ ಬಚ್ಚನ್. ಈ ಜನಪ್ರಿಯ ಡೈಲಾಗಿನಿಂದಾಗಿ ಮೆಚ್ಚುಗೆಯ ಸಿಳ್ಳೆಗಳ ಭಾರೀ ಮಳೆಯಾಗಿದ್ದು ಬಚ್ಚನ್ ಸಾಹೇಬರಿಗಾದರೂ ತೆರೆಮರೆಯಲ್ಲಿ ಗೆದ್ದಿದ್ದು ಮಾತ್ರ ‘ಅಮ್ಮ’ ಎಂಬ ಎವರ್ಗ್ರೀನ್ ಹಿಟ್ ಫಾರ್ಮುಲಾ.

ಭಾರತೀಯ ಚಲನಚಿತ್ರರಂಗದ ಮುಖ್ಯವಾಹಿನಿಯ ಅಥವಾ ಕಮರ್ಷಿಯಲ್ ಶೈಲಿಯ ಚಿತ್ರಗಳಲ್ಲಿ ಯಶಸ್ಸು ಸಿಕ್ಕೇ ಸಿಗುವ ಫಾರ್ಮುಲಾಗಳ ಪಟ್ಟಿಯನ್ನೇನಾದರೂ ಮಾಡಿದರೆ ಅದರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ‘ತಾಯಿ ಸೆಂಟಿಮೆಂಟು’. ಇನ್ನು ಯಾವುದಾದರೊಂದು ಫಾರ್ಮುಲಾ ಕೆಲಸ ಮಾಡಿತು ಎಂದರೆ ವರ್ಷಗಟ್ಟಲೆ ಅದೊಂದಕ್ಕೇ ಜೋತುಬೀಳುವುದು ಇಂಥಾ ಚಿತ್ರಗಳ ಹುಟ್ಟುಗುಣ. ನಮ್ಮ ಕನ್ನಡ ಚಿತ್ರರಂಗದಲ್ಲೇ ಮಳೆ, ಮಚ್ಚುಗಳಂತಹ ಫಾರ್ಮುಲಾಗಳು ಅದೆಷ್ಟು ವರ್ಷಗಳವರೆಗೆ ಮುಂದುವರಿದವು ಎಂಬುದು ನಮಗೆಲ್ಲರಿಗೂ ಗೊತ್ತು. ‘ಮಾ’ ಕೂಡ ನಿಸ್ಸಂದೇಹವಾಗಿ ಇಂಥದ್ದೇ ಜನಪ್ರಿಯ ಫಾರ್ಮುಲಾಗಳಲ್ಲೊಂದು. ಈ ತಾಯಿ ಸೆಂಟಿಮೆಂಟು ಅನ್ನುವುದು ಆವತ್ತಿಗೂ ಇವತ್ತಿಗೂ ಚಿತ್ರವೊಂದನ್ನು ಗೆದ್ದೇ ಗೆಲ್ಲಿಸುವ ದಾಳ. ಯಾರೇ ಕೂಗಾಡಲಿ ಊರೇ ಹೋರಾಡಲಿ… ತಾಯಂದಿರ ನಿಶ್ಕಲ್ಮಷ ಪ್ರೀತಿಯಂತೆಯೇ ಈ ಒಂದು ಪರಿಕಲ್ಪನೆಯ ಪ್ರಸ್ತುತತೆಗೆ ಯಾವುದೇ ಭಂಗವಿಲ್ಲ.

ಮೊನ್ನೆಯಷ್ಟೇ ‘ಮದರ್ಸ್ ಡೇ’ ಬಗ್ಗೆ ಮಾತನಾಡುತ್ತಾ ನಾವೊಂದಷ್ಟು ಜನ ಗೆಳೆಯರು ‘ಮಾಡರ್ನ್ ಮಮ್ಮಿ’ಯಂದಿರ ಬಗ್ಗೆ ವಿನೋದದ ಚರ್ಚೆಯನ್ನು ನಡೆಸುತ್ತಿದ್ದೆವು. ನನಗೆ ಗೊತ್ತಿರುವ ಕೆಲವು ಚಲನಚಿತ್ರಪ್ರಿಯ ಸ್ನೇಹಿತರು ಗಂಭೀರವೆನಿಸುವಂತಹ ಕಲಾತ್ಮಕ ಚಿತ್ರಗಳ ದೊಡ್ಡ ಅಭಿಮಾನಿಗಳಾಗಿದ್ದರೂ ಆಗಾಗ ತೊಂಭತ್ತರ ದಶಕದ ‘ಟಿಪಿಕಲ್ ಫಿಲ್ಮೀ’ ಶೈಲಿಯ ಚಿತ್ರಗಳನ್ನು ವಿನೋದಕ್ಕಾಗಿಯೇ ನೋಡುವವರು. ಅಂದಹಾಗೆ ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿದರೆ ಎಂಭತ್ತು ಮತ್ತು ತೊಂಭತ್ತರ ದಶಕದ ಹಲವು ಚಿತ್ರಗಳೂ ಕೂಡ ಇಂಥಾ ಫಾರ್ಮುಲಾಗಳಿಗೇ ಜೋತುಬಿದ್ದವುಗಳು. ಸಿರಿವಂತರ ಹುಡುಗಿ ಕಡುಬಡವನೊಬ್ಬನ ಜೊತೆ ಪ್ರೀತಿಯಲ್ಲಿ ಬೀಳುವುದು, ನಂತರ ಇಬ್ಬರ ಮನೆಯಲ್ಲೂ ವಿವಾಹಕ್ಕೆ ವಿರೋಧ, ಇವುಗಳ ಮಧ್ಯೆ ತಾಯಿ-ಮಗನ ಸೆಂಟಿಮೆಂಟು, ಒಂದು ಹೋಳಿಹಬ್ಬದ ಹಾಡು, ಕೊನೆಯ ಭಾಗದಲ್ಲಿ ಖಳನಾಯಕರು ನಾಯಕನ ತಾಯಿಯನ್ನೋ ತಂಗಿಯನ್ನೋ ಹೊತ್ತುಕೊಂಡು ಹೋಗಿ ಗೋಡೌನೊಂದರಲ್ಲೋ ಗುಹೆಯಲ್ಲೋ ಬಂಧಿಸಿಡುವುದು, ಹಳೇ ಸೇಡು, ನಂತರ ದೊಡ್ಡದೊಂದು ಹೊಡೆದಾಟ, ಕೊನೆಯಲ್ಲಿ ಬರುವ ಪೋಲೀಸರು… ಹೀಗೆ ಅವೇ ಚರ್ವಿತಚರ್ವಣಗಳ ಹಾವಳಿ. ಮುಂದೆ ಐಟಮ್ ಸಾಂಗ್, ದ್ವಂದ್ವಾರ್ಥದ ಸಂಭಾಷಣೆಗಳಂತಹ ಮತ್ತಷ್ಟು ಕಳಪೆ ಅಂಶಗಳು ಬಂದವು ಅನ್ನುವುದನ್ನು ಬಿಟ್ಟರೆ ಇಂದಿಗೂ ಇಂಥಾ ರೆಡಿಮೇಡ್ ಹಿಟ್ ಫಾಮರ್ುಲಾಗಳೇ ಜನಪ್ರಿಯ ಚಿತ್ರಗಳನ್ನು ದಡ ಸೇರಿಸುವ ದೋಣಿಗಳು. ಇರಲಿ. ಮರಳಿ ಅಮ್ಮಂದಿರ ವಿಷಯಕ್ಕೇ ಬರೋಣ.

ಖಳನಾಯಕರು ಎಂದರೆ ಹೇಗೆ ಪ್ರಾಣ್, ಅಮರೀಷ್ ಪುರಿ, ಪ್ರೇಮ್ ಚೋಪ್ರಾ, ವಜ್ರಮುನಿ, ಆಶಿಷ್ ವಿದ್ಯಾರ್ಥಿ… ಇತ್ಯಾದಿ ಮುಖಗಳು ಥಟ್ಟನೆ ಕಣ್ಣೆದುರಿಗೆ ಬಂದು ನಿಲ್ಲುತ್ತವೋ ಅಮ್ಮಂದಿರ ಪಾತ್ರಗಳದ್ದೂ ಇದೇ ಕಥೆ. ಆದರೆ ಅಮ್ಮಂದಿರ ವಿಚಾರದಲ್ಲಿ ಆಯ್ಕೆಗಳು ಹೆಚ್ಚೇ ಇವೆ ಅನ್ನಿ. ಅಣ್ಣಯ್ಯ ಮತ್ತು ಬೇಟಾಗಳಲ್ಲಿ ಬಂದಿದ್ದ ಅರುಣಾ ಇರಾನಿಯವರಂತಹ ಖಡಕ್ ಅಮ್ಮ, ಕುಚ್ ಕುಚ್ ಹೋತಾ ಹೇ ಯ ಫರಿದಾ ಜಲಾಲ್ ರಂತಹ ಫೇವರಿಟ್ ಅಮ್ಮ, ಕಭೀ ಖುಷಿ ಕಭೀ ಗಮ್ ನ ಜಯಾ ಬಚ್ಚನ್ ರಂತಹ ಮುದ್ದು ಅಮ್ಮ, ನಮ್ಮನಿಮ್ಮೆಲ್ಲರ ಅಮ್ಮನಂತೆಯೇ ಕಾಣುತ್ತಿದ್ದ ಸ್ಮಿತಾ ಜಯಕರ್, ರೀಮಾ ಲಾಗೂ, ದೀನಾ ಪಾಠಕ್, ಗಾಂಭೀರ್ಯತೆಯ ಅಮ್ಮನಂತಿದ್ದ ರಾಖೀ, ಹೊಸತಲೆಮಾರಿನ ಆಧುನಿಕ ಅಮ್ಮಂದಿರಾದ ಕಿರಣ್ ಖೇರ್, ರತ್ನಾ ಪಾಠಕ್ ಶಾ… ಹೀಗೆ ನಿರುಪಾ ರಾಯ್, ಮದರ್ ಇಂಡಿಯಾ ನಗರ್ೀಸ್ರಿಂದ ಹಿಡಿದು ರತ್ನಾ ಪಾಠಕ್ ಶಾರವರೆಗೂ ತೆರೆಯ ಮೇಲೆ ಬಂದು ಹೋದ ಅಮ್ಮಂದಿರು ಬಹಳ. ಹೀಗಾಗಿಯೇ ಬಾಲಿವುಡ್ ಒಂದನ್ನೇ ಪರಿಗಣಿಸಿದರೂ ಅಮ್ಮಂದಿರ ಪಾತ್ರಗಳಲ್ಲಿರುವಷ್ಟು ಸ್ಪರ್ಧೆ ಮತ್ತು ವೈವಿಧ್ಯತೆಗಳು ಬಹುಷಃ ಇತರ ಯಾವುದೇ ಪೋಷಕಪಾತ್ರಗಳಲ್ಲೂ ಬಂದಿರಲಾರವು.

ಈ ನೆಪದಲ್ಲೇ ತೆರೆಯ ಮೇಲೆ ಮಿಂಚಿದ ಅಪ್ಪಂದಿರನ್ನೂ ಒಮ್ಮೆ ನೋಡೋಣ. ಕನ್ನಡ ಚಿತ್ರರಂಗದಲ್ಲಿ ಅಪ್ಪನ ಪಾತ್ರಗಳಿಂದಲೇ ಖ್ಯಾತಿಯನ್ನು ಪಡೆದವರು ಪ್ರಬುದ್ಧ ನಟರಾಗಿದ್ದ ಅಶ್ವಥ್ ಮತ್ತು ಲೋಕನಾಥ್ರವರು. ಇತ್ತ ಹಿಂದಿ ಚಿತ್ರರಂಗದ ಅಪ್ಪಂದಿರ ಪಾತ್ರಗಳ ಬಗ್ಗೆ ಯೋಚಿಸಿದರೆ ನಮಗೆ ತಕ್ಷಣ ನೆನಪಿಗೆ ಬರುವ ಜನಪ್ರಿಯ ಮುಖಗಳೆಂದರೆ ಹಿರಿಯ ನಟರಾದ ಅನುಪಮ್ ಖೇರ್ ಮತ್ತು ಅಲೋಕ್ ನಾಥ್. ಅಮರೀಷ್ ಪುರಿಯವರು ಹಲವು ಬಾರಿ ತಂದೆಯ ಪಾತ್ರದಲ್ಲಿ ಮಿಂಚಿದ್ದರೂ ಕೂಡ ತಮ್ಮ ವ್ಯಕ್ತಿತ್ವ ಮತ್ತು ಗಡಸುದನಿಯ ಪ್ರಭಾವದಿಂದಾಗಿ ಖಳಪಾತ್ರದಲ್ಲೇ ಹೆಚ್ಚಾಗಿ ಗುರುತಿಸಿಕೊಂಡವರು. ಇನ್ನು ಕಿರಣ್ ಕುಮಾರ್, ಅಮಿತಾಭ್ ಬಚ್ಚನ್, ರಿಷಿ ಕಪೂರ್, ನಾಸಿರುದ್ದೀನ್ ಶಾ, ಓಂ ಪುರಿಯಂಥವರು ತಂದೆಯ ಪಾತ್ರಗಳನ್ನು ನಿರ್ವಹಿಸಿದವರಾದರೂ ಕೂಡ ಅವುಗಳಿಗೇ ಅಂಟಿಕೊಂಡವರಲ್ಲ. ಹೀಗೆ ಅಮ್ಮಂದಿರ ಸಂಖ್ಯೆಯನ್ನು ಪರಿಗಣಿಸಿದರೆ ಇವುಗಳು ಏನೇನೂ ಅಲ್ಲ! ಮೇಲೆ ಹೆಸರಿಸಿದ ಹೆಸರುಗಳನ್ನು ಹೊರತುಪಡಿಸಿದರೂ ಅದೆಷ್ಟು ಜನಪ್ರಿಯ ನಟೀಮಣಿಗಳು ಮುಂದೆ ಅಮ್ಮಂದಿರಾಗಿ ತೆರೆಯಲ್ಲಿ ಮಿಂಚಿಲ್ಲ? ಹೆಲೆನ್, ಶರ್ಮಿಳಾ ಟ್ಯಾಗೋರ್, ಅಮಲಾ ಅಕ್ಕಿನೇನಿ, ದೀಪ್ತಿ ನಾವಲ್, ಡಿಂಪಲ್ ಕಪಾಡಿಯಾ, ಶಬಾನಾ ಆಜ್ಮಿ, ಹೇಮಾಮಾಲಿನಿ… ಹೀಗೆ ಪಟ್ಟಿಯು ಬೆಳೆಯುತ್ತಲೇ ಹೋಗುತ್ತದೆ.

ಅಮ್ಮಂದಿರ ಪಾತ್ರಗಳ ವಿಕಾಸವೂ ಅದೆಂಥಾ ವೇಗದಲ್ಲಾಯಿತು ನೋಡಿ. ಒಂದು ಕಾಲದಲ್ಲಿ ಕಣ್ಣೀರು ಹಾಕಲು, ಪ್ರತಿಜ್ಞೆ ಮಾಡಲು, ಕೈತುತ್ತು ತಿನ್ನಿಸಲು ಇತ್ಯಾದಿಗಳಿಗಷ್ಟೇ ಸೀಮಿತವಾಗಿದ್ದ ತೆರೆಯ ಮೇಲಿನ ತಾಯಂದಿರು ಅದರಾಚೆಗೂ ಬಹುಬೇಗನೆ ಬೆಳೆದುಬಿಟ್ಟರು. ಈ ವಿಚಾರದಲ್ಲಿ ನನಗೆ ತಕ್ಷಣ ನೆನಪಾಗುವುದು ಹಮ್ ತುಮ್, ದೋಸ್ತಾನಾಗಳಂತಹ ಚಿತ್ರಗಳಲ್ಲಿ ಅಮ್ಮನಾಗಿ ಮಿಂಚಿದ ಕಿರಣ್ ಖೇರ್. ಆಕೆಯದ್ದು ನಿಜಕ್ಕೂ `ಕೂಲ್ ಆಂಡ್ ಫ್ಯಾಷನೇಬಲ್’ ಮಮ್ಮಿಯ ಅವತಾರ! ಪ್ರೇಕ್ಷಕರನ್ನು ಖೇರ್ ಎಷ್ಟು ನಗಿಸಬಲ್ಲರೋ ಅಷ್ಟೇ ಅಳಿಸಲೂ ಬಲ್ಲರು. ಇನ್ನು ಕಿರಣ್ ಖೇರ್ರವರಿಗಿಂತ ಕೊಂಚ ಭಿನ್ನವಾಗಿ ತೂಕದ ಪಾತ್ರಗಳಲ್ಲಿ ಅಮ್ಮನಾಗಿ ನಟಿಸಿ ಮಿಂಚಿದವರು ರತ್ನಾ ಪಾಠಕ್ ಶಾ. ಜಾನೇ ತೂ ಯಾ ಜಾನೇ ನಾ, ಖೂಬ್ಸೂರತ್ (2014)ಗಳಂತಹ ಚಿತ್ರಗಳು ಇವುಗಳಿಗೆ ಸಾಕ್ಷಿ. ಕಪೂರ್ ಆಂಡ್ ಸನ್ಸ್ ಚಿತ್ರದಲ್ಲಂತೂ ಅಮ್ಮನಾಗಿ ಮತ್ತೊಂದು ಹೆಜ್ಜೆ ಮುಂದೆ ಹೋಗುವ ಶಾ ಮಧ್ಯಮವರ್ಗದ ಕುಟುಂಬಗಳ ತಾಯಂದಿರ ತಲ್ಲಣಗಳನ್ನು ಹಸಿಹಸಿಯಾಗಿ ಬಿಚ್ಚಿಡುತ್ತಾ ಮತ್ತಷ್ಟು ಕಾಡುತ್ತಾರೆ, ಇಷ್ಟವಾಗುತ್ತಾರೆ.

ದಶಕಗಳಿಂದ ತೆರೆಯ ಮೇಲೆ ಪುರುಷ ಪ್ರಧಾನ ಸಮಾಜವನ್ನೇ ಢಾಳಾಗಿ ತೋರಿಸಿದರ ಹೊರತಾಗಿಯೂ ನಮ್ಮ ಚಿತ್ರಗಳ ನಾಯಕ-ನಾಯಕಿಯರ ಪಾತ್ರಗಳನ್ನು ಬಿಟ್ಟರೆ ಉಳಿದಿರುವ ಪಾತ್ರಗಳಲ್ಲಿ ಅಮ್ಮಂದಿರ ಪಾತ್ರಗಳ ತೂಕವೇ ಹೆಚ್ಚು. ಇದೊಂಥರಾ “ಪ್ರೇಮವಿವಾಹಗಳನ್ನು ಸುಲಭವಾಗಿ ಒಪ್ಪಿಕೊಳ್ಳದಿರುವ ಭಾರತದಂತಹ ದೇಶದಲ್ಲಿ ಪ್ರೇಮಕಥೆಗಳನ್ನು ಜನರಿಗೆ ಕೊಟ್ಟೇ ನಾನು ಜನಪ್ರಿಯನಾದೆ” ಎಂದು ಶಾರೂಖ್ ಖಾನ್ ಒಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊಂಡಂತೆ. ಇವುಗಳು ವಿರೋಧಾಭಾಸಗಳಲ್ಲದೆ ಮತ್ತಿನ್ನೇನು?

ಹಾಗೆ ನೋಡಿದರೆ ಚಲನಚಿತ್ರಗಳೇ ಆಗಲಿ ರಿಯಾಲಿಟಿ ಶೋಗಳೇ ಆಗಲಿ, ನಮ್ಮ ಮನರಂಜನಾ ಮಾಧ್ಯಮಗಳು ವೀಕ್ಷಕರ ಭಾವನೆಗಳೊಂದಿಗೇ ಥಳುಕು ಹಾಕಿಕೊಂಡಿರುವಂಥವುಗಳು. ಇದರ ಪರಿಣಾಮವೋ ಏನೋ! ‘ತಾಯಿ ಸೆಂಟಿಮೆಂಟು’ ಅನ್ನುವುದು ಚಲನಚಿತ್ರಗಳಂತೆಯೇ ಕಿರುತೆರೆಯಲ್ಲೂ ಯಶಸ್ವಿಯಾಗಿಯೇ ಚಲಾವಣೆಯಾಯಿತು. ಮೆಗಾಧಾರಾವಾಹಿಗಳಲ್ಲಿ ಅತ್ತೆ-ಸೊಸೆಯರದ್ದೇ ಪ್ರಾಬಲ್ಯವಿದ್ದರೂ ರಿಯಾಲಿಟಿ ಶೋಗಳಲ್ಲಿ ಸಿಕ್ಕಾಪಟ್ಟೆ ತಲೆ ಓಡಿಸಿ ಅಮ್ಮನ ಪ್ರೀತಿಯನ್ನು ಬುದ್ಧಿವಂತಿಕೆಯಿಂದಲೇ ಆಗಾಗ ಗ್ಲೂಕೋಸ್ ಬಾಟಲಿಯಂತೆ ನೀಡುತ್ತಾ ಕಾರ್ಯಕ್ರಮಗಳು ಜನಪ್ರಿಯತೆಯನ್ನು ಗಳಿಸಿಕೊಂಡವು. ‘ಪ್ರೀತಿ’ ಎಂಬುದೇ ಎವರ್ಗ್ರೀನ್ ಫಾಮರ್ುಲಾ ಆಗಿ ಸಾಬೀತಾಗಿರುವಾಗ ಇನ್ನು ಅಮ್ಮನ ಪ್ರೀತಿಯ ಬಗ್ಗೆ ಕೇಳಬೇಕೇ? ಒಟ್ಟಾರೆಯಾಗಿ ಅಮ್ಮನ ಆಶೀರ್ವಾದವೊಂದಿದ್ದರೆ ಯಶಸ್ಸು ಕಟ್ಟಿಟ್ಟು ಬುತ್ತಿ.

ಅಮ್ಮಂದಿರ ದಿನದ ಈ ಋತುವಿನಲ್ಲಿ ರೀಲ್ ಮತ್ತು ರಿಯಲ್ ಅಮ್ಮಂದಿರೆಲ್ಲರಿಗೂ ಪ್ರೀತಿಪೂರ್ವಕ ಜಯಜಯಕಾರಗಳು.

———

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...