(ಗಜಲ್)
ನಿನ್ನ ಮಾತುಗಳ ಕಣ್ಮುಚ್ಚಿ ನಂಬಿದ್ದು ನನ್ನ ತಪ್ಪು
ನೀ ತೋರಿದ ಪ್ರೀತಿ ನಿಜವೆಂದೆ ಬಗೆದಿದ್ದು ನನ್ನ ತಪ್ಪು
ಯಾವ ಹಂಬಲವಿತ್ತೋ ನಿನಗೆ ಎದೆ ಚಾಚಿ ಕರೆದೆ
‘ಕರೆ’ಯ ನಿಜ ಅರಿಯದೇ ಹೊಳೆಗೆ ಬಿದ್ದಿದ್ದು ನನ್ನ ತಪ್ಪು
ಬಂಗಾರವೇ ಎಂದೆ ಕಾಗೆಬಂಗಾರವೆಂದರಿಯದೆ
ಬಣ್ಣಗಳ ಹುಸಿಯ ಕಾಣದೇ ಹೋಗಿದ್ದು ನನ್ನ ತಪ್ಪು
ಎಲೆಯಾಗಿ ಚಿಗುರಿ ಮುಡಿಯ ಸಿಂಗರಿಸೆ ಕಾದೆ
ಹರಡಿ ಹಬ್ಬಿದ ಬಂದಳಿಕೆಯ ಅರಿಯದ್ದು ನನ್ನ ತಪ್ಪು
ಬದುಕಿನ ಗಂಟುಗಳ ಬಿಚ್ಚುವುದು ಹೇಗೆ ‘ವಿಶು’
ಪ್ರೀತಿ ಸಂಜೀವಿನಿಗೆ ಎದೆಯ ತೆರೆ ತೆರೆದಿದ್ದು ನನ್ನ ತಪ್ಪು
Leave a comment