Share

ಬೇಟವೋ ಬೇಟೆಯೋ!
ಡಾ. ಗೀತಾ ವಸಂತ

 • Page Views 189
 • ಲೆಯುದುರುವ ಕೋಲಾಹಲ ನಿಂತು
  ಚಿಗುರೊಡೆಯುವ ಸನ್ನಾಹದಲ್ಲಿದೆ ಕಾಲ
  ಮರ್ಮರಿಸುತಿದೆ ಮರಮರಗಳಡಿಯಲ್ಲಿ
  ಗತದ ಪಳೆಯುಳಿಕೆ
  ನಿಂತಲ್ಲೇ ಚಲಿಸುವ ಕಾಲ
  ದ ಕೆಳಗೆ ನಿಂತಿರುವೆ
  ಚಕಿತ ಹರಣಿಯಂತೆ
  ಅಟ್ಟಾಡಿಸಿಕೊಲುವ ಬೇಟೆಗಾರನ
  ಕಾಲಸದ್ದಿಗೆ ಕಿವಿಯಾಗಿ

  ಚರ್ ಚರ್ ಸದ್ದುಮಾಡುತ್ತ ಚಲಿಸುವ
  ಅವನ ಪಾದಗಳು ಮಾರ್ದನಿಸುತ್ತಿವೆ
  ಸಕಲ ಚರಾಚರಗಳಲ್ಲಿ
  ಪಾದದ ಮೇಲಿನ ಉಬ್ಬು ನರಗಳು
  ಮುಂಗಾಲ ರೋಮರಂಧ್ರಗಳಲ್ಲಿ
  ಜಿನುಗು ಎಣ್ಣೆ ಬೆವರು
  ಎಲ್ಲ ಕಾಣುತ್ತಿದೆ ದೇವರೇ….!

  ನರನರ ಹುರಿಗೊಳಿಸಿ ಹೆದೆಯೇರಿ
  ಅವನ ಬಾಣಕೆ ಬಿಲ್ಲಾಗಿರುವೆ
  ನಾನೇ ಮಾಧ್ಯಮ ನಾನೇ ಗುರಿ
  ನಾಲಗೆಗೆ ರಕ್ತದ ರುಚಿ
  ಮಾಂಸದ ಮೇಲೆ ಹಲ್ಲ ಗುರುತು
  ಕರಗುತಿದೆ ನರಳುವ ಸದ್ದು
  ಅವನ ಉನ್ಮಾದದಲಿ
  ಇದು ಬೇಟವೋ ಬೇಟೆಯೋ!
  ನಿಂತಿರುವೆ ಚಕಿತ ಹರಿಣಿಯಂತೆ

  ——-

  ಡಾ. ಗೀತಾ ವಸಂತ

  ಉತ್ತರಕನ್ನಡದ ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ ಬೆಳೆದು ಪುಟ್ಟ ಹಳ್ಳಿ ಹಾಸಣಗಿಗೆ ಸೇರಿದವರು. ಯುವ ತಲೆಮಾರಿನ ಬರಹಗಾರರಲ್ಲಿ ಕೇಳಿಬರುತ್ತಿರುವ ಭಿನ್ನ ಧ್ವನಿ ಇವರದು. ಕಾವ್ಯ, ಸಣ್ಣಕಥೆ ಮಾತ್ರವಲ್ಲ, ವಿಮರ್ಶೆ, ಮಹಿಳಾ ಅಧ್ಯಯನ, ಸಂಸ್ಕøತಿ ಚಿಂತನೆಯತ್ತಲೂ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ.

  ಶಿರಸಿಯಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ. `ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು’ ಮಹಾಪ್ರಬಂದಕ್ಕೆ ಪಿ.ಎಚ್.ಡಿ(2004) ಪದವಿ. ಶಿರಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರಿನ ಜೆ.ಎಸ್.ಎಸ್.ಕಾಲೇಜು ಹಾಗೂ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ ಡಾ.ಗೀತಾ, ಸದ್ಯ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನÀಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

  ‘ಹೊಸಿಲಾಚೆ ಹೊಸಹೆಜ್ಜೆ’ (1999) ಚೊಚ್ಚಲ ಕವನ ಸಂಕಲನ. ‘ಬೆಳಕಿನ ಬೀಜ'(2004) ಕನ್ನಡ ಕಾವ್ಯವನ್ನು ಅನುಭಾವದ ಬೆಳಕಲ್ಲಿ ಅನುಸಂಧಾನ ಮಾಡಿದ ವಿಮರ್ಶಾ ಕೃತಿ. ಇದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘವು ನೀಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ. ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಬೇಂದ್ರೆ ಫೆಲೋಶಿಪ್ ಪಡೆದು ಮಂಡಿಸಿರುವ ‘ಬೇಂದ್ರೆ ಕಾವ್ಯದಲ್ಲಿ ಅವಧೂತ ಪ್ರಜ್ಞೆ'(2010) ಪ್ರಬಂಧ ಕೂಡ ಟ್ರಸ್ಟಿನಿಂದ ಪ್ರಕಟವಾಗಿದೆ. ಎರಡನೆಯ ಕವನಸಂಕಲನ ‘ಪರಿಮಳದ ಬೀಜ’ (2010) ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ 2010ರ ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಸಿಂಧಗಿಯ ಅಂಬಿಕಾತನಯದತ್ತ ವೇದಿಕೆಯ ಬೇಂದ್ರೆ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದೆ. ಪಿ.ಎಚ್.ಡಿ ಮಹಾಪ್ರಬಂಧ ‘ಹೊಸದಿಗಂತ ಹೊಸದಾರಿ’ (2010) ಹೆಸರಲ್ಲಿ ಪ್ರಕಟಿತ. ‘ಚೌಕಟ್ಟಿನಾಚೆಯವರು’ ಕಥಾಸಂಕಲನ (2011). ಇದರ ಹಸ್ತಪ್ರತಿಗೆ 2010ರಲ್ಲಿ ಹಾನಗಲ್ಲಿನ ಕನ್ನಡ ಕ್ರಿಯಾಸಮಿತಿಯ ಡಾ.ಪಾಟಿಲ ಪುಟ್ಟಪ್ಪ ಕಥಾ ಪ್ರಶಸ್ತಿ ಹಾಗೂ ಧಾರವಾಡದ ಅವನಿ ರಸಿಕರಂಗದ ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2011ರ ವರ್ಷದ ಶ್ರೇಷ್ಠ ಕಥಾಸಂಕಲನ ಪುರಸ್ಕಾರಗಳು. ರಾಜ್ಯ, ರಾಷ್ಟ್ರಮಟ್ಟಗಳ ಹಲವಾರು ಸಮ್ಮೇಳನಗಳು, ಗೋಷ್ಠಿಗಳಲ್ಲಿ ವಿದ್ವತ್‍ಪೂರ್ಣ ಪ್ರಬಂಧಗಳ ಮಂಡನೆ. ಬೇಂದ್ರೆ ಕಾವ್ಯದ ಕುರಿತಾಗಿ ನಡೆಸಿದ ಅಧ್ಯಯನದ ಫಲವಾಗಿ ‘ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ’ ಎಂಬ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ 2014ರಲ್ಲಿ ತುಮಕೂರು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಗೌರವ. ಇದು ‘ಬೀಜದೊಳಗಣ ವೃಕ್ಷ’ ಎಂಬ ಹೆಸರಿನಲ್ಲಿ 2016ರಲ್ಲಿ ಪ್ರಕಟಿತ.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help