Share

ಗತವೇ ಹಿತ
ಸಂಗೀತ ಹೆಚ್ ದಾವಣಗೆರೆ

  • Page Views 192
  • ಸೂರ್ಯ ಚಂದಿರರು ಮರೆಯಾಗಿ
    ತಾರೆಯರು ಮುಸುಕಾಗಿ
    ದಿಗಂತವೇ ಜ್ವಾಲೆಯ ಮಡಿಲಾಗಿ
    ಕೈ ಬೀಸಿ ಕರೆದಿರಲು…

    ಗತ ಸಾಮ್ರಾಜ್ಯದ ಈ ಇಳೆಯ ಮನವು
    ಅಂತ್ಯದಂಚಿನಲಿ ನಿಂತು ಅವಲೋಕಿಸುತಿರಲು..
    ಕಾಡೆಲ್ಲಾ ಬೀಡಾಗಿ, ಬೀಡೆಲ್ಲಾ ಬದುಕಿಗಾಗಿ
    ಬದುಕೆಲ್ಲಾ ಆಸೆಯ ಜಾಡ್ಯ ಆವರಿಸಿ
    ಮೌಲ್ಯವಿಲ್ಲದೆ ಬರಡಾಗಿ

    ಹರಿವ ಹೊಳೆಯು ಜಡವಾಗಿ
    ಉಸಿರ ಗಾಳಿಯು ವಿಷವಾಗಿ
    ಉದಯಿಸುವ ರವಿಯೋ
    ಉರಿವ ಮಡುವಾಗಿ

    ಕರುಣೆಯು ಕಟುವಾಗಿ
    ಮಮತೆಯು ಮುಳುವಾಗಿ
    ಪ್ರೀತಿ ಒಲುಮೆಯು ವ್ಯಾಪಾರವಾಗಿ
    ಸತ್ಯ ಮಿಥ್ಯಯ ಹಿಂದಡಗಿರಲು…

    ತಾಯಿಯ ಸೆರಗಲ್ಲಿ
    ರಕ್ತದೋಕುಳಿಯೇ ನಡೆದಿರಲು
    ಪಾಪಿಯ ಹೊತ್ತ ಭಾರ
    ತಾ ತಾಳಲಾಗಿ ಸೋತಿರಲು

    ನೆನ್ನೆಯು ಮಡಿದಿರಲು
    ಮೃತ್ಯುವು ಕುಣಿಯುತಿರಲು
    ಗತವೇ ಹಿತ ವೆಂದು ನೆನೆದು
    ಗತ ತಾ ಗತಿಸಿದಂತೆ
    ಬಿಕ್ಕುತಿಹಳು ಇಳೆ ತಾ ಅಬಲೆಯಾಗಿ.

    ———

    ಸಂಗೀತ ಹೆಚ್ ದಾವಣಗೆರೆ

    Share

    Related Post

    Related Blogpost

    3 Comments For "ಗತವೇ ಹಿತ
    ಸಂಗೀತ ಹೆಚ್ ದಾವಣಗೆರೆ
    "

    1. Sudha
      11th June 2017

      ತುಂಬಾ ಚೆನ್ನಾಗಿ ಮೂಡಿಬಂದಿದೆ..

      Reply
    2. Khaja
      13th June 2017

      ಬದುಕೆಲ್ಲಾ ಆಸೆಯ ಜಾಡ್ಯ ಆವರಿಸಿ
      ಮೌಲ್ಯವಿಲ್ಲದೆ ಬರಡಾಗಿ……extremely very shrewd lines.

      Reply
      • Sangeetha H Davangere
        15th June 2017

        Thank you..

        Reply

    Leave a comment

    Your email address will not be published. Required fields are marked *

    Recent Posts More

    • 4 hours ago No comment

      ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

      ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

    • 17 hours ago No comment

      ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

      ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

    • 1 day ago No comment

      ಒಂದು ಗಜಲ್; ಒಂದು ಗೆಜ್ಜೆ

      ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

    • 1 day ago No comment

      ಬದುಕು ಬರಿ ಗಿಲೀಟು

      (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

    • 2 days ago One Comment

      ನಾನು ಮತ್ತು ನೀನು

      ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


    POPULAR IN CONNECTKANNADA

    Type in
    Details available only for Indian languages
    Settings
    Help
    Indian language typing help
    View Detailed Help