Share

ಮಾಗಿಯ ಚಂದ್ರನಿಗೆ ಗ್ರಹಣವಂತೆ!
ರೋಹಿತ್ ಶೆಟ್ಟಿ ಮೇಲಾರಿಕಲ್ಲ್

 • Page Views 113
 • ರೋಹಿತ್ ಶೆಟ್ಟಿ ಮೂರು ಕವಿತೆಗಳು
  ——————————
  ನನ್ನ ಬೀದಿ

  ನ್ನದೇ ಹಳೇಯ ಬೀದಿ
  ತಣ್ಣಗೆ ಕಾಡುತ್ತದೆ!
  ನನ್ನೆದೆಯ ಕೊರೆಯುತ್ತವೆ
  ಮೊನ್ನೆ ತಾನೆ ನೆಟ್ಟ ಹೊಸ
  ಸಾಲು ದೀಪಗಳು!

  ಇಲ್ಲೆ ಎಲ್ಲೋ ಶುರು!
  ಅದೋ ಅಲ್ಲೆ ಅಂತ್ಯ!
  ಬಿದ್ದಿದೆ ನೋಡು ಕಪ್ಪಾಗಿ
  ಉದ್ದಕ್ಕೆ ಹೆಪ್ಪಾದ ಟಾರು!
  ಅಂತೆಯೇ ನನ್ನವಳ ಪ್ರೀತಿ!

  ಸೂರ್ಯ ಹುಟ್ಟಿದ್ದು ಈ ಬೀದಿ
  ಗುಡಿಸಲು ನಿಂತ ಪೊರಕೆ ಮರಗಳ
  ಸಂದಿಯಲ್ಲೆ! ಚುಕ್ಕಿತಾರೆ ಚಂದ್ರಮರ
  ಜಾತ್ರೆ ತಲೆಕೆದರಿ ನಿಂತ ಸಂಪಿಗೆ
  ಮರಗಳ ನೆತ್ತಿಯಲ್ಲೆ!

  ಗಾಳಿಯನ್ನ ಬೆದರಿಸಿಯೇ ಉರಿದು
  ಉದುರಿಬಿದ್ದ ಅಕ್ರೋಷಿತ ತರಗೆಲೆಗಳು
  ನನ್ನವ್ವನ ಕಂಡು ಗಪ್ಪಾಗಿದ್ದು ಅಂದು
  ಹಕ್ಕಿಗಳ ಕೇಕೇ ಮುಗಿಲು ಮುಟ್ಟುವಷ್ಟು ಇಲ್ಲಿ!

  ಮಂದ ಬೆಳಕಿನಲ್ಲಿ ಚಿಟುಗುಡುವ
  ಮಬ್ಬುಮಳೆ! ಬಣ್ಣದ ಭೋರಂಗಿಗಳ
  ಇಂಪಾದ ಸದ್ದಿಗೆ
  ನಿದ್ದೆಹೋಗಿದೆಯಂದು
  ನನ್ನ ಬೀದಿ ಬೆತ್ತಲಾಗಿ
  ಸುಮ್ಮನೆ ಸದ್ದಿರದೆ
  ಬಿದ್ದು ಮೌನವಾಗಿ!

  ~

  ಒಂದು ಮುಂಜಾವು…

  ಚಿವ್ವ್ ಚಿವ್ವ್ ಅನ್ನುವ
  ಹಕ್ಕಿಗಳ ಸಂತೋಷದ
  ಗಲಾಟೆ ಮುಗಿಲು
  ಮುಟ್ಟಿದೆ, ಕೆಂಪಾದ ಆಗಸದ
  ಹೊಂಬೆಳಕಲ್ಲಿ ಓಕುಳಿಯಾಡುವ
  ಹುಮ್ಮಸ್ಸಿರಬೇಕು!

  ಸರಿರಾತ್ರಿಯಿಂದಲೂ
  ಎಲೆಯೊಂದನ್ನ ತಬ್ಬಿಕುಳಿತ
  ಮಂಜಿನ ಬಿಂದುವೊಂದು
  ನೇಸರನು ಮೇಲೇರುತ್ತಿದ್ದಂತೆಯೇ
  ಒಲ್ಲೆ ಎನ್ನುತ್ತಲೇ
  ಅಗಲುತ್ತದೆ!

  ಹೊಲದ ಮಧ್ಯದಲ್ಲೊಂದು
  ಇಬ್ಬನಿಯ ಹೊದ್ದ
  ಪುಟ್ಟ ಹುಲ್ಲುಕಡ್ಡಿಯೊಂದು
  ಹೂವನ್ನು ನಾಚಿಸುತ್ತದೆ
  ದಡಬಡನೆ ಹನಿಗಳ ಕೊಡವಿ
  ಆಕಾಶ ದಿಟ್ಟಿಸುತ್ತದೆ!

  ಇರುಳಿಡಿಯಾಗಿ ಶಶಿಯ
  ಚಳಿಯಾಟಕ್ಕೆ ಹುಸಿ
  ಮುನಿಸಿಕೊಂಡ ಭುವಿಯು
  ಕೆಣಕಲೆಂದೇ ಆಗಷ್ಟೆ
  ಮೂಡುತ್ತಿದ್ದ ನಿದ್ದೆಕಣ್ಣಿನ
  ರವಿಗೆ ಮೈಯೊಡ್ಡಿದ್ದಾಳೆ!

  ರಾತ್ರಿಯಿಡೀ ನಿದ್ರಿಸದ
  ಪುಟ್ಟಿರುವೆಯೊಂದು
  ನನ್ನ ಉದಾಸೀನತೆಯ
  ವಿರುದ್ಧ ಸಮರ ಸಾರಿ
  ಕೈಬೆರಳುಗಳ ಮಧ್ಯೆ
  ವೀರ ಮರಣವನ್ನಪ್ಪಿತ್ತು!

  ಆವಾಗಿಂದ ಕಾದು ಕಾದು
  ಇನ್ನೂ ಋತುಮತಿ ಆಗದೇ
  ಉಳಿದ ಹೂ ಮೊಗ್ಗೊಂದು
  ನೇಸರನ ಪ್ರಥಮ ಚುಂಬನಕೆ
  ಅರಳಿ ಹೂವಾಗಿ ಬೇಲಿಯ
  ಜವಾಬ್ದಾರಿ ಹೆಚ್ಚಿಸಿದೆ!

  ~

  ಎಲ್ಲಾ ಮುಗಿದ ಮೇಲೆ

  ಸಂತ ಮುಗಿದಿದೆ ನನಗೂ ಗೊತ್ತು ನಿನ್ನೆದೆಯ
  ಋತುವಿಗೂ ಕಾಲವೊಂದಿದ್ದು ಮಾಗಿ ಮುಗಿದಿದ್ದು!
  ಕಾಮನೆಗಳನ್ನೆಲ್ಲಾ ಕಳಚಿ ನಿಂಬೆಗಿಡದ ಮೇಲೆ
  ಒಣ ಹಾಕಿದ್ದೇನೆ!

  ಎಲ್ಲಾ ದಿಕ್ಕುಗಳಿಂದ ಹಕ್ಕಿಗಳು ಬಿಕ್ಕುಗಳಂತೆ
  ಹಾರಿಬಂದು ಕೂತು ಹಾರಿಹೋದ ದಿಕ್ಕನ್ನೆ
  ದಿಟ್ಟಿಸಿ ನೋಡುತ್ತಿದೆ ಮಾವಿನ ಮರವೀಗ !
  ಅತ್ತಿಯ ಮರದಲ್ಲಿ ಹಣ್ಣಿನ ಕಾಲವಂತೆ!

  ಅತ್ತಿತ್ತ ನೋಡಿದ ಬೆಕ್ಕು ಹಾಲಿನ ಬಟ್ಟಲಿಗೆ
  ಬಾಯಿ ಹಾಕಿದೆ! ಮುಗ್ಧತೆಗೆ ಇನ್ನೊಂದು
  ಹೆಸರೆಂಬಂತೆಯೇ ಮುಖ ಉಜ್ಜಿಕೊಳ್ಳುತ್ತಿದೆ!
  ನಾನು ಹೃದಯ ತೆರೆದು ಕಣ್ಣರಳಿಸಿ ನಕ್ಕಿದ್ದೆ!

  ನಿನ್ನೆವರೆಗೂ ಕಂಡಲ್ಲೆಲ್ಲಾ ಕದ್ದು ಕದ್ದು ನಗುತ್ತಿದ್ದವಳಿಗೆ
  ನಾಳೆಯೇ ಮದುವೆಯಂತೆ! ಕಾಲನ್ನು ಕಲ್ಲಿಗೆ ಉಜ್ಜೀ ಉಜ್ಜೀ
  ಸ್ವಚ್ಛಗೊಳಿಸುತ್ತಿದ್ದಾಳೆ ಹೃದಯವನ್ನಲ್ಲಾ!
  ನೀರು ತಂದುಕೊಡುವ ಮನಸ್ಸಾಗಿದೆ!

  ಮಾಗಿಯ ಚಂದ್ರನಿಗೆ ಗ್ರಹಣವಂತೆ!
  ತುಂಟಾಟ ಮಾಡಿ ಕಾಡುತ್ತಿದ್ದ ಮೋಡಗಳೆಲ್ಲಾ
  ಮೂಢರಂತೆ ಓಡುತ್ತಿವೆ! ತಡೆದು ಕೇಳಿದೆ ರವಿಯ ಕರೆಯಂತೆ!
  ಚಂದ್ರ ದಾರಿ ಮಾಡಿಕೊಡುತ್ತಿದ್ದಾನೆ!

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಮತ್ತೆ ಮರಳಲಿಲ್ಲ

   ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ಜಾಡಿಡಿದು ಶ್ಯಾಮ‌ಸುಂದರನ ಸೇರಲು.. ನವಿಲಿನ ಜೋಡಿಗಳೆರಡು ನಲಿವಿನಿಂದ ಕುಣಿತಿವೆ ಜಿಂಕೆ ಹಿಂಡುಗಳೆಲ್ಲಾ ತನ್ಮಯವಾಗಿ ನಿಂತಿವೆ.. ಅಗೋ ಅಲ್ಲಿ ಗೋಪಿಕೆಯರೆಲ್ಲಾ ನರ್ತಿಸ ತೊಡಗಿದ್ದಾರೆ ಒಬ್ಬಳ ಸೆರಗು ಜಾರಿ ಮೊಲೆಹಾಲು ...

  • 4 days ago No comment

   ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…

   ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ಕಣ್ಣು ತೆರೆದ ಮೌನದ ಮೇಲೆ ಮಾತ ಬಿಂಬದ ಅಚ್ಚು, ಸುಗಂಧ ಮೆತ್ತಿದ ನೆನಪು ತೊಳೆದಷ್ಟೂ ಝಳಪಿಸುವ ಕತ್ತಿಯಲಗಿನಂತೆ, ಗಂಟಿಲ್ಲದ ಮನಸ ಪೋಣಿಸಿದಷ್ಟೂ ನುಣುಚಿಕೊಂಡರೆ ಹೆಣಿಗೆ ಶೂನ್ಯ ಬರೀ ...

  • 7 days ago No comment

   ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು

   ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ಓದಬೇಕು. ಕಾವ್ಯ ಹರಿವ ನದಿಯಂತೆ. ಕವಿತೆ ಅಂದರೆ ಬೆಂಕಿ ಮತ್ತು ಬೆಳಕು. ಕಾವ್ಯ ಕ್ಷಣ ಭಂಗುರವನ್ನು ಗೆಲ್ಲುವ ಪ್ರಕ್ರಿಯೆ, ಸಾವನ್ನು ಮುಂದೂಡುವ ಶಕ್ತಿ ಉಳ್ಳದ್ದು….ಹೀಗೆ ಏನೆಲ್ಲಾ ಕವಿತೆಯನ್ನು ...

  • 7 days ago No comment

   ಕಿಡಿ

   ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ದುಡ್ಡಿನ ದೊಂಬರಾಟ ಸತ್ತ ದೇಹ ಮಣ್ಣಾಗುವಾಗ ಮತ್ತೆ ಬೆತ್ತಲೆ.

  • 1 week ago No comment

   ಸ್ವಾತಂತ್ರ್ಯದ ಸೊಬಗು

   ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ಕಣ್ಣಿಗೆ ಮಣ್ಣೆರಚುತ್ತಿದ್ದಾನೆ. ಒಂದೆರಡು ಬಾರಿ ನನ್ನ ಸಮ್ಮುಖದಲ್ಲೇ ಆತ ಈ ಬಗ್ಗೆ ಕಾರ್ಮಿಕನನ್ನು ಎಚ್ಚರಿಸಿದ್ದಾನೆ. ನಂತರವೂ ಆ ಕಾರ್ಮಿಕ ತನ್ನ ಕಣ್ಣೆದುರಿಗೇ ಮೈಗಳ್ಳತನವನ್ನು ಮುಂದುವರಿಸಿದಾಗ ಆತನಿಗೆ ಪಿತ್ತ ...


  POPULAR IN CONNECTKANNADA