Share

ಪುರುಷ ಪ್ರಧಾನ ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವ ಮಹಿಳಾ ಜೀವಪರ ಕಾವ್ಯ
ನಾಗರಾಜ ಹರಪನಹಳ್ಳಿ

ಪುಸ್ತಕ ಪರಿಚಯ

————-

ಕಾವ್ಯಬೋಧಿ-ಮಹಿಳಾ ಕಾವ್ಯ 2014
ಸಂ: ಡಾ. ಎಚ್ ಎಸ್ ಅನುಪಮಾ
ಪ್ರ: ಕವಿ ಪ್ರಕಾಶನ, ಕವಲಕ್ಕಿ, ಹೊನ್ನಾವರ. ಬೆಲೆ; 170

ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರತಿಭಟಿಸಿದ ಮೊದಲ ಕಾವ್ಯ 12ನೇ ಶತಮಾನದಲ್ಲೇ ಬಂದಿದೆ. ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಮೊದಲ ಬಂಡಾಯ ವಚನಕಾರ್ತಿ. ಈ ಹಿನ್ನೆಲೆ ಮತ್ತು ಪರಂಪರೆ ಇರುವ ಕನ್ನಡ ಕಾವ್ಯ 21ನೇ ಶತಮಾನದಲ್ಲಿ ವ್ಯವಸ್ಥೆಗೆ, ಅದರಲ್ಲೂ ಪುರುಷ ಸ್ಥಾಪಿತ ವ್ಯವಸ್ಥೆಗೆ ಹೇಗೆ ಮುಖಾಮುಖಿಯಾಗಿದೆ? ಹೆಣ್ಣಿನ ಅಂತರಂಗದ ಧ್ವನಿ ಏನು? ಅದು ಸ್ಥಾಪಿತ, ಪುರುಷ ಪ್ರಧಾನ ಪೋಷಿತ ವ್ಯವಸ್ಥೆಯನ್ನು ಹೇಗೆ ಎದುರಿಸಿದೆ? ಹೆಣ್ಣಿನ ಅಂತರಂಗದ ಕುದಿತ, ಬೇಗುದಿ ಏನು ಎಂಬುದನ್ನು ಅರಿಯಲು 2014ರಲ್ಲಿ ‘ಕಾವ್ಯಬೋಧಿ’ ಎಂಬ ಮಹಿಳಾ ಕಾವ್ಯ-2014ರಲ್ಲಿ ಬಂದ ಪುಸ್ತಕವನ್ನು ಗಮನಿಸಬೇಕು. ಕನ್ನಡದ 59 ಜನ ಕವಯತ್ರಿಯರ 118 ಕವಿತೆಗಳನ್ನು ಒಂದೆಡೆ ತಂದು ಕನ್ನಡಿಗರಿಗೆ ನೀಡಿದ್ದಾರೆ ಡಾ.ಎಚ್.ಎಸ್.ಅನುಪಮಾ.

ಪುರುಷತ್ವಕ್ಕೆ ಸವಾಲು ಎಸೆಯುವ, ಹೆಣ್ತನವನ್ನು ಹೊತ್ತಿರುವ ಕಾರಣಕ್ಕೆ ಎಲ್ಲವನ್ನು ಸಹಿಸುವ ಮತ್ತು ಸಹಿಸುತ್ತಲೇ ತನ್ನತನವನ್ನು, ಸ್ತ್ರೀ ಆಸ್ಮಿತೆಯನ್ನು ಹೇಗೆ ಕಾಪಾಡಿಕೊಂಡಿದ್ದಾಳೆ; ಜೀವಪರ ನಿಲುವನ್ನು ಕಾಪಾಡುವ ಹೊಣೆಯನ್ನು ಮಹಿಳೆ ಬದುಕಿನಲ್ಲಿ ಮತ್ತು ಕಾವ್ಯದಲ್ಲಿ ಹೇಗೆ ನಿಭಾಯಿಸಿದ್ದಾಳೆ ಎಂಬುದನ್ನು ಸಾರುತ್ತವೆ ಇಲ್ಲಿನ ಕವಿತೆಗಳು. ಮಹಿಳಾ ಕಾವ್ಯದ ಸಂಪಾದಕರು ಹೇಳುವಂತೆ ಮೌಖಿಕ ಪರಂಪರೆಯಲ್ಲಿದ್ದ ಮಹಿಳಾ ಹಾಡುಗಳು ಒಂದು ಕಾಲಘಟ್ಟವನ್ನು ಪ್ರತಿನಿಧಿಸಿದರೆ, ಅಕ್ಷರ ಜಗತ್ತಿಗೆ ಜಿಗಿದ ಮಹಿಳೆ, ಆಧುನಿಕ ಮಹಿಳೆ ಪ್ರೀತಿ, ಕಾಳಜಿ, ಟೀಕೆ, ಅಸಹಾಯಕತೆ, ಪ್ರತಿರೋಧವನ್ನು ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾಳೆ. ಹಾಗೆ ಯುದ್ಧ, ಅತ್ಯಾಚಾರ,ಕೋಮು ಹಿಂಸೆ,ಪರಿಸರ ನಾಶ,ತೆರವು ಒತ್ತುವರಿಗಳ ಬಗ್ಗೆ ಕಾವ್ಯದ ಮೂಲಕ ಪ್ರತಿಕ್ರಿಯಿಸಿದ್ದಾಳೆ ಎನ್ನುತ್ತಾರೆ. ಲಿಂಗ ಸಮಾನತೆ ಬಯಸುವ ಕಾವ್ಯ, ತಾಯ್ತನ, ಒಳಗಿನ ಕುದಿತ,ಒಳನೋವು,ಅರಿವಿನ ಸ್ಫೋಟವೂ, ಅತೃಪ್ತಭಾವವೂ ಇಲ್ಲಿನ ಕವಿತೆಗಳಲ್ಲಿ ಕಾಣಬಹುದಾಗಿದೆ.

“ಎಷ್ಟು ದಿನ ನೆಟ್ಟುಕೊಳ್ಳಲಿ
ತೋರಿಕೆಯ ತುಳಸಿವನ?
ಈ ಕಂಭಯ್ಯನ
ಮಗಳ ತಲೆಯಿಂದ ಚೆಂಡಾಡಲಿ
ನಿಂಬೆಹಣ್ಣು ಹಿಡಕೊಂಡು ನಗುನಗುತ
ಹೋಗುವೆ
ಗಲ್ಲುಗಂಭಕ್ಕೆ: ಅದರೀ ಒಳ್ಳೆತನದ
ತುರುಚು ಬಳ್ಳಿ
ನಿಶ್ಚೇಷವಾಗಬೇಕು ನನ್ನ ತಲೆಗೇ” (ಒಳ್ಳೆಯ ಅಪ್ಪನ ಮಗಳು ಮತ್ತು ಒಳ್ಳೆಯ ಗಂಡನ ಹೆಂಡತಿಯೂ) – ಎನ್ನುವ ಕವಯತ್ರಿ ಲಲಿತಾ ಸಿದ್ಧಬಸಯ್ಯ ಅವರ ಕಾವ್ಯ, ಪುರುಷ ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವುದೇ ಆಗಿದೆ.

“ನಮ್ಮ ಮನೆಯಲ್ಲಿ ಇಬ್ಬರಿದ್ದೆವು
ಎರಡು ಕಾಲಗಳಲ್ಲಿ ಬದುಕುತ್ತಿದ್ದೆವು
ನಮ್ಮ ಕೊರಳುಗಳು ಒಂದು ನೊಗಕ್ಕೆ
ಕೂಡಲೇ ಇಲ್ಲ” (ಸಂಗಾತ) ಎನ್ನುವ ಪ್ರತಿಭಾ ನಂದಕುಮಾರ್ ಕವಿತೆ ಸಹ ಬದುಕಿನ ಎರಡು ದಾರಿಗಳನ್ನು ಬಿಚ್ಚಿಡುತ್ತದೆ.

“ಸೂಜಿಮೊನೆಯಷ್ಟೇ ನೆಲಕಚ್ಚಿ
ಹಂದರವಾಗುವ
ಬಳ್ಳಿ ದೈವವ ನೆನೆದವಳೆ,
ಕಿತ್ತು ಬಿಸುಟರೂ ಮುರಿದು ಎಸೆದರೂ
ಬೇರೊಡೆವ ಜಿಗುಟು ನೆನೆದವಳೆ” (ಆ ನೀಲಿ ಅಂಕಿಗಳು) ಎನ್ನುವ ವಿನಯಾ ವಕ್ಕುಂದ ಹೆಣ್ಣಿನ ಜೀವಸತ್ವವನ್ನು ಹೇಳಿದರೆ,
“ಒಂಟಿಕಾಲಿನ ಅವನೂ ಜಾರುತ್ತಾನೆ
ಒಮ್ಮೊಮ್ಮೆ
ಜಾರಬಾರದೆಂದರೆ ಹೇಗೆ?
ದೇವರಾದದ್ದೇ ಹಾಗೆ…..” (ನನ್ನ ದೇವರು) ಎನ್ನುವ ಕಾವ್ಯ ಕಡಮೆ ದೇವರನ್ನು ಲೌಕಿಕ ಜಗತ್ತಿಗೆ ತಂದರೆ, ಸೀರೆಯಿಂದ ಜೀನ್ಸಿಗೆ ಜಿಗಿದರೂ, ಹಾಗೇ ಇವೆ ಅಂತರಂಗದ ನಿರಿಗೆಗಳು (ರಸಗವಳ) ಎನ್ನುವ ಸಿಂಧುಚಂದ್ರ ಹೆಗಡೆ, ಬದುಕಿನ ಬವಣೆಗಳು ಬಟ್ಟೆಯಲ್ಲಿ ಆಧುನಿಕವಾದ ಮಾತ್ರಕ್ಕೆ ಬದಲಾಗುವುದಿಲ್ಲ ಎನ್ನುತ್ತಾರೆ.

“ನಿನ್ನ ಕಾಲುಂಗುರ ಅವನು
ಅವನ ಕೈ ಉಂಗುರ ನೀನು
ಹೀಗೆ ಎಷ್ಟು ಹೊತ್ತು ದೃಷ್ಟಿಸುವಿರಿ ನೀವು
ಪ್ರಶ್ನಿಸುತ್ತಿದೆ ವಟವೃಕ್ಷವೀಗ
ಉತ್ತರವಿರುವುದಿಲ್ಲ ಕೆಲವೊಂದು ಪ್ರಶ್ನೆಗಳಿಗೆ
ಬರೀ ಜೋಕಾಲಿಯಾಟ” (ಅವನು) ಎನ್ನುವ ಕವಯತ್ರಿ ರೇಣುಕಾ ರಮಾನಂದ ಮನಸ್ಸಿನ ನೈಜ ಸ್ಥಿತಿಗೆ ಕನ್ನಡಿ ಹಿಡಿಯುತ್ತಾರೆ.

ಕೋಮುದ್ವೇಷದ ದಳ್ಳುರಿಗೆ ಬಲಿಯಾಗುವವಳು ಸಹ ಅಮಾಯಕ ಹೆಣ್ಣು ಎಂಬುದನ್ನು ‘ಗುಜರಾತ್ ಒಲೆ’ ಎಂಬ ಕವಿತೆಯಲ್ಲಿ ಕವಯತ್ರಿ ಸಬಿತಾ ಬನ್ನಾಡಿ ಧ್ವನಿಪೂರ್ಣವಾಗಿ ಬರೆಯುತ್ತಾರೆ.

“ಏನಾದರೂ ಸರಿ ಹೇಗಾದರೂ ಸರಿ
ತುರುಕಿ ಬಿಡಿ ನಿಮಗೆ ಬೇಡದ್ದನ್ನೆಲ್ಲಾ
ಮುಚ್ಚಿಟ್ಟು ಸುಟ್ಟು ಬಿಡಿ
ಚಿಂತಿಸದೇ ತಂದು ಬಿಡಿ ತಂದೇ ಬಿಡಿ
ಗುಜರಾತ್ ಒಲೆ! ಗುಜರಾತ್ ಒಲೆ!!”

ಕವಯತ್ರಿ ರೇಣುಕಾ ಹೆಳವರ ‘ಪಾರಿವಾಳ ಹದ್ದಾಗಿ’ ಕವಿತೆಯಲ್ಲಿ “ಅಲ್ಲಿ ಆಕಾಶದೆತ್ತರಕ್ಕೆ ನಿಂತ/ ಮಸೀದಿಯನ್ನು ನೆಲ ಕಚ್ಚಿಸಿದವರೇ/ ಹುಚ್ಚು ಸಾಹಸದ ಮಂದಿರ ನೆಲೆಗೊಳಿಸುವ/ಹುನ್ನಾರ ಹೂಡುತ್ತಿದ್ದಾಗ/ಇಲ್ಲಿ ನಮ್ಮ ಕೇರಿಯ ಕರುಳ ಬಳ್ಳಿಯ ಕಲರವ ಕರಗಿ/ ಮಲಗಿ ಬಿದ್ದಿವೆ ಮುಗಿಯದ ಸ್ಮಶಾನ ಮೌನ ಮರಗಿ” ಎಂಬ ವಿಷಾಧವನ್ನು ಕಟ್ಟಿಕೊಡುತ್ತಾರೆ.

ಕವಯತ್ರಿ ಷರೀಫಾ.ಕೆ. ಅವರ ‘ಹಜ್ ಯಾತ್ರೆ’ ಕವನದಲ್ಲಿ “ನಮ್ಮ ಗುಡಿಸಲಿನಲ್ಲೇ ನಾವು/ ಮೆಕ್ಕಾ,ಕಾಶಿ,ಕಾಬಾಗಳನ್ನು ಕಾಣುವೆವು/ನೀನೆಷ್ಟೇ ದೂರ ಮಾಡಿದರೂ/ಹಿಜ್ರ ಮಾಡಿ ಓಡಿ ಹೋಗಲಾರೆವು/ ಮಾತೃಭೂಮಿ ಅಗಲಲಾರೆವು” ಎಂಬಲ್ಲಿ ನೆಲದ ನಿಷ್ಠೆ ಮತ್ತು ದೇವರನ್ನು ಗುಡಿಸಲಲ್ಲಿ ಕಾಣುವ ಹಂಬಲ ಹೆಣ್ಣಿನದು ಎಂಬ ಆಶಯವನ್ನು ಕಟ್ಟುತ್ತಾರೆ.

ದು.ಸರಸ್ವತಿ ಅವರ ‘ಕಿತ್ತು ಬಿಸಾಡಿರುತ್ತಿದ್ದೆ ಎಂದೋ’ ಕವಿತೆಯಲ್ಲಿ ಹೆಣ್ತನದ ಮೇಲಿನ ಆಕ್ರೋಶವೂ ವ್ಯಕ್ತವಾಗಿರುವುದು ಹೀಗೆ… “ಹಸಿ ಕೂಸಿನ ಹಸಿವು ನೀಗಿಸಿ/ಕಸುವಾಗಿಸುವ/ಹಾಲಬುಗ್ಗೆಗಳಾಗಿರದಿದ್ದರೆ/ಕಿತ್ತು ಬಿಸಾಡಿರುತ್ತಿದ್ದೆ ಎಂದೋ/ ಮೊಲೆಯೋನಿತೊಗಲಮೆತ್ತೆಗಳ” ಎನ್ನುತ್ತಾರೆ.

“ಮುಂಗುರುಳು ಮಾಗಿ
ಮುಪ್ಪಿನ ಮಾಲೆಯ ಭಾರಕ್ಕೆ
ಕೊರಳು ಬಾಗಿದ್ದರೂ
ನನ್ನೊಳಗಿನ ಹುಡುಗಿ ಈಗಲೂ
ಸತ್ತಿಲ್ಲ ಕಂದಾ…” (ಹೌದು ಕಂದಾ) ಎನ್ನುವ ಕವಯತ್ರಿ ಸುಕನ್ಯಾ ಮಾರುತಿ ಅವರು ಹೆಣ್ಣಿನ ಜೀವಭೂಮಿಕೆಯನ್ನು ಹೆಮ್ಮೆಯಿಂದಲೇ ಪ್ರಸ್ತುತಪಡಿಸುತ್ತಾರೆ.

‘ಲಿಫ್ಟ್’ ಎಂಬ ಕವಿತೆಯಲ್ಲಿ ಆರತಿ ಎಚ್.ಎನ್. “ನಮ್ಮದಲ್ಲದ ಈ ಜಾಗಕ್ಕೆ/ಧಡಕ್ಕನೇ ತೆರೆಯುವ ಬಾಗಿಲು/ ಒಳ ಹೊಕ್ಕ ಕೂಡಲೇ ಹರಡುವ/ಕೃತಕ ಕಸಿವಿಸಿಯ ಮೌನ/ಇರುವ ಒಂದು ಮುಖಕ್ಕೆ ಹತ್ತು ಪ್ರತಿಬಿಂಬ/ನೀನೋ ಬಹುರೂಪಿ, ಮುಖವಾಡ ತೊಟ್ಟವಳು ನಾನು/ಬರುವವರು ಬರಲಿ/ಲೆಕ್ಕ ಇಡವುದುಂಟೇ ಹೋದವರ” ಇಲ್ಲಿ ಸಹ ಕಾವ್ಯದ ಧ್ವನಿ ಕವಿತೆ ಓದಿದಷ್ಟೂ ಹಿಗ್ಗಿಕೊಳ್ಳುತ್ತದೆ.

ಈ ಸಂಕಲನದಲ್ಲಿ ‘ಮುಖವಾಡಗಳ ಮಾರುವ ಊರಿನಲ್ಲೊಂದು ಸುತ್ತು’ ಎಂಬ ಕವಿತೆ ಮನುಷ್ಯನ ಮಾರಿಕೊಳ್ಳುವ ಮುಖವಾಡಕ್ಕೆ ಕನ್ನಡಿ ಹಿಡಿದಂತಿದೆ. ಇದು ವೆನಿಸ್ ನಗರದಲ್ಲಿ ಮಾತ್ರವಲ್ಲ ಎಲ್ಲ ನಗರಗಳ ಕತೆಯೂ ಆಗಿದೆ. ಕವಯತ್ರಿ ಕಮಲ ಎಂ.ಆರ್. ಅವರು ಬರೆಯುತ್ತಾರೆ… “ಹಬ್ಬಕ್ಕೆಂದೇ ಮುಖವಾಡಗಳ ಧರಿಸಬೇಕಿಲ್ಲ/ ಇಲ್ಲಿ ಅದು ತೀರಾ ಚರ್ಮಕ್ಕೆ ಹತ್ತಿ ಕೂತಿದೆ/ ಮಾರಿ-ಕೊಳ್ಳುವುದಕ್ಕೆ ಬೇಕೆ ತಾಯ್ತನ, ತಾಯಿ ಭಾಷೆ?” ಎಂದು ಪ್ರಶ್ನಿಸುತ್ತಾರೆ.

ಕನ್ನಡ ಬಹುಮುಖ ಆಯಾಮದ ಕಾವ್ಯ ಕಸುವು ಮತ್ತು ಬಹುಮುಖಿ ಸಮಸ್ಯೆಗಳಿಗೆ ಸ್ಪಂದಿಸಿದ, ಪ್ರತಿಕ್ರಿಯಿಸಿದ ರೀತಿ ಈ ಕಾವ್ಯಬೋಧಿಯಲ್ಲಿದೆ. ಕನ್ನಡದಲ್ಲಿ ಮಹಿಳೆಯ ಅರಿವು, ತಿಳುವಳಿಕೆಯ ವ್ಯಾಪಕತೆ, ಅನ್ಯಾಯಕ್ಕೆ ಪ್ರತಿರೋಧ ಒಡ್ಡುವ ಮನೋಧರ್ಮ ಈ ಸಂಕಲನದಲ್ಲಿ ಓದುಗನಿಗೆ, ಸಾಹಿತ್ಯ ಪ್ರೀತಿಸುವವರಿಗೆ ಕಾಣಸಿಗುತ್ತದೆ.

————-

ನಾಗರಾಜ್ ಹರಪನಹಳ್ಳಿ

nhಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ  ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಸದ್ಯ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ, ಲೋಕದರ್ಶನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ  ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.

Share

Leave a comment

Your email address will not be published. Required fields are marked *

Recent Posts More

 • 17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 2 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 5 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 6 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...


Editor's Wall

 • 22 February 2018
  17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...