Share

ಕತೆ ಕತೆ ಕಾರಣ
ಪ್ರಸಾದ್ ನಾಯ್ಕ್ ಕಾಲಂ

ತೆಗಳನ್ನು ಹುಡುಕಿಕೊಂಡು ಹೋಗುವುದು ಬೇರೆ. ಕತೆಗಳೇ ನಮ್ಮನ್ನು ಸ್ವತಃ ಹುಡುಕಿಕೊಂಡು ಬರುವುದು ಬೇರೆ.

ಇಂಥದ್ದೊಂದು ಅನುಭವವಾಗಿದ್ದು ದೆಹಲಿಯ ದರಿಯಾಗಂಜ್ ಹೆಸರಿನ ಗಲ್ಲಿಗಳಲ್ಲಿ ನಾನು ಅಡ್ಡಾಡುತ್ತಿದ್ದಾಗ. ದರಿಯಾಗಂಜ್ ಮಾರುಕಟ್ಟೆ ಪುಸ್ತಕಪ್ರಿಯರ ಸ್ವರ್ಗ. ಅಲ್ಲಿ ದಾರಿಯುದ್ದಕ್ಕೂ ನಮಗೆ ಕಾಣುವುದು ಪುಸ್ತಕಗಳದ್ದೇ ರಾಶಿ. ಫಸ್ಟ್ ಹ್ಯಾಂಡ್, ಸೆಕೆಂಡ್ ಹ್ಯಾಂಡ್ ಗಳಿಂದ ಹಿಡಿದು ಅದೆಷ್ಟೋ ಕೈಗಳಿಂದ ಕೈಗಳಿಗೆ ಸಾಗುತ್ತಾ ಬಂದಿರುವ ಪುಸ್ತಕಗಳ ಕಾಶಿಯಿದು. ಅದರಲ್ಲೂ ನೀವು ಚೌಕಾಸಿ ಮಾಡುವುದರಲ್ಲಿ ಪರಿಣತರಾಗಿದ್ದರೆ ಇದಕ್ಕಿಂತ ಪ್ರಶಸ್ತವಾದ ಜಾಗ ಬೇರೊಂದಿಲ್ಲ. ಯಾವ ರೀತಿಯಲ್ಲೂ ಹಳೆಯದೆಂಬಂತೆ ಕಾಣದ, ಆದರೂ ಸೆಕೆಂಡ್ ಹ್ಯಾಂಡ್ ಎಂಬ ಹೆಸರಿನಲ್ಲಿ ತೀರಾ ಕಡಿಮೆ ದರದಲ್ಲಿ ಬಿಕರಿಯಾಗುವ ಹಲವು ಪುಸ್ತಕಗಳನ್ನು ನಾವು ಈ ದರಿಯಾಗಂಜ್ ನಿಂದ ಎತ್ತಿಕೊಂಡು ಬಂದಿದ್ದಿದೆ. ಎಲ್ಲೂ ಸಿಗದ ಕೆಲ ಅಪರೂಪದ ಪುಸ್ತಕಗಳು ಇಲ್ಲಿ ಅಚಾನಕ್ಕಾಗಿ ಕಾಣಸಿಕ್ಕರೆ ಸೋಜಿಗದ ಸಂಗತಿಯೇನಲ್ಲ.

ಖ್ಯಾತ ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ರವರ “ಸರ್ವಂಟ್ಸ್ ಆಫ್ ಇಂಡಿಯಾ” ಕೃತಿಯು ನನಗೆ ಸಿಕ್ಕಿದ್ದು ಈ ಮಾರುಕಟ್ಟೆಯಲ್ಲೇ. ಪುಸ್ತಕದ ಹೆಸರೇ ಹೇಳುವಂತೆ ಇದು ಕೆಲಸಗಾರರ ಕತೆಗಳ ಗುಚ್ಛ. ಬಾಣಸಿಗ, ಕಾರು ಚಾಲಕ, ಮನೆಕೆಲಸದಾಕೆ… ಹೀಗೆ ನಮ್ಮ ನಡುವಿನ ಸಾಮಾನ್ಯರ ಕತೆಗಳನ್ನೇ ಹಾಸ್ಯದ ಧಾಟಿಯಲ್ಲಿ ಲೇಖಕರು ಅಕ್ಷರರೂಪಕ್ಕೆ ತಂದಿರುವಂಥದ್ದು. ಇಂಥಾ ಕೃತಿಗಳು ಹಿಂದೆಯೂ ಬಂದಿರಬಹುದೋ ಏನೋ! ಆದರೆ ಆರ್. ಕೆ. ಲಕ್ಷ್ಮಣ್ ಅವರ ನವಿರಾದ ಹಾಸ್ಯದ ನಿರೂಪಣಾ ಶೈಲಿಯು ಓದುಗನಿಗೆ ಹಿತವಾಗಿ ಕಚಗುಳಿಯಿಡುತ್ತದೆ. ಇನ್ನು ಪುಟಗಳಲ್ಲಿ ಮೂಡಿಬಂದಿರುವ ಲಕ್ಷ್ಮಣ್ ಅವರ ಚಿತ್ರಗಳು ಓದುಗನಿಗೆ ಬೋನಸ್ ಪಾಯಿಂಟ್ ಇದ್ದಂತೆ.

ಸಾಹಿತ್ಯಲೋಕದಾಚೆಗೆ ಹೋದರೂ ಕತೆಗಳು ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಮಗರಿವಿಲ್ಲದಂತೆಯೇ ಸೇರಿಹೋದವುಗಳು. ಬಾಲ್ಯದಲ್ಲಿದ್ದಾಗ ನಾವು ಮನೆಯ ಹಿರಿಯರನ್ನು ಕತೆ ಹೇಳಪ್ಪಾ ಎಂದು ಪೀಡಿಸುತ್ತಿದ್ದ ದಿನಗಳಿದ್ದವು. ಬೀದಿ ನಾಟಕ, ಜಾನಪದ ಕತೆಗಳಿದ್ದವು. ಕತೆಗಳನ್ನು ಸ್ಥಳೀಯ ಸಂಸ್ಕೃತಿಯ ರೂಪದಲ್ಲಿ ತರುತ್ತಿದ್ದ ಕಲಾಪ್ರಕಾರಗಳಿದ್ದವು. ಈಗಲೂ ಇವೆ. ನಮ್ಮ ಹಾಳುಹರಟೆ, ಗಾಸಿಪ್ಪುಗಳಲ್ಲೂ ಕತೆಗಳಿವೆ. ಕೆಲ ಕುಡುಕರು ಎರಡು ಪೆಗ್ಗು ಇಳಿಸಿದರೆಂದರೆ ರಸವತ್ತಾದ ಕತೆಗಳನ್ನು ಹೇಳಬಲ್ಲವರು. ಇನ್ನು ಜಾಲತಾಣಗಳಲ್ಲಿ ತಕ್ಷಣದ ಓದಿಗಾಗಿ ಕತೆಗಳು ಮಿನಿ, ಮೈಕ್ರೋ, ನ್ಯಾನೋ ರೂಪಗಳಲ್ಲಿ ಬಂದಿವೆ. ರಂಗಭೂಮಿ ಮತ್ತು ಸಿನೆಮಾಗಳಾಚೆಗೆ ಕಿರುಚಿತ್ರಗಳು ಬಂದು ಕತೆ ಹೇಳುತ್ತಿವೆ. ಇಂದಿಗೂ ಬಹಳಷ್ಟು ಮಂದಿಗೆ ಕಿರುಚಿತ್ರಗಳು ಇಷ್ಟವಾಗುವ ಮುಖ್ಯ ಕಾರಣವೆಂದರೆ ಅವುಗಳಲ್ಲಿರುವ ಕಥಾಹಂದರ. ಒಂದೊಳ್ಳೆಯ ಕತೆಯನ್ನು ಹತ್ತು ನಿಮಿಷಗಳ ಸುಂದರ ದೃಶ್ಯಕಾವ್ಯವನ್ನಾಗಿಸುವುದು ಸುಲಭದ ಮಾತಲ್ಲ. ಒಟ್ಟಾರೆಯಾಗಿ ನಮ್ಮ ಜೀವನವೆಂದರೆ ಅದೊಂದು ಕತೆಗಳದ್ದೇ ಸಾಮ್ರಾಜ್ಯ. ಕತೆಗಳಿಲ್ಲದ ಮಾನವ ಸಮಾಜವನ್ನು ಊಹಿಸುವುದೂ ಕಷ್ಟ.

ಕತೆಗಳನ್ನು ಇಂದು ಒಮ್ಮೆ ಕ್ಷಣಕಾಲ ಪುಸ್ತಕದ ಪರಿಧಿಯಾಚೆಗಿಟ್ಟು ನೋಡೋಣ. ಹಾಗೆ ನೋಡಿದರೆ ಕತೆಗಳು ಎಲ್ಲರಲ್ಲೂ ಇರುತ್ತವೆ. ನನ್ನಲ್ಲಿ ಕತೆಗಳೇ ಇಲ್ಲ ಎನ್ನುವವನಿಗೂ ಅವನ ಜೀವನವೇ ಒಂದು ಕತೆಯಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಾವು ಹಲವು ಬಗೆಯ ಕತೆಗಳನ್ನು ಕೇಳಿರುತ್ತೇವೆ. ಭೂತ, ಪ್ರೇತ, ದೈವ, ದೇವರು, ದಿಂಡು, ಸ್ಥಳಮಹಿಮೆ… ಎಂಬಿತ್ಯಾದಿ ನೂರಾರು ಕತೆಗಳು. ಇನ್ನು ಈ ಕತೆಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಮತ್ತಷ್ಟು ಕತೆಗಳು ಸಿಕ್ಕರೂ ಅಚ್ಚರಿಯಿಲ್ಲ. ನಮ್ಮ ರಾಮಾಯಣ, ಮಹಾಭಾರತಗಳಲ್ಲಿ ಮುಖ್ಯ ಕತೆಯೊಂದಿಗೆ ಉಪಕತೆಗಳು ಹೇಗಿರುತ್ತವೋ ಹಾಗೆಯೇ ಇಲ್ಲೂ ಮುಖ್ಯ ಕತೆಯ ಎಳೆಯನ್ನಿಟ್ಟುಕೊಂಡೇ ಹಲವು ಕತೆಗಳು ಬಿಚ್ಚಿಕೊಳ್ಳುತ್ತವೆ. ಈ ಕತೆಗಳಲ್ಲೂ ತರಹೇವಾರಿ ಜನರ ತರಹೇವಾರಿ ಆವೃತ್ತಿಗಳು. ಕಲ್ಪನೆ, ಸೃಜನಶೀಲತೆ, ಅನುಮಾನ, ಭಯ, ಭಕ್ತಿ, ಭ್ರಾಂತು… ಹೀಗೆ ಈ ಕತೆಗಳಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಪಾಲು. ಹೀಗಾಗಿಯೇ ಕತೆಗಳು ಕೆಲವೊಮ್ಮೆ ತೀರಾ ಉತ್ಪ್ರೇಕ್ಷಿತ ಅನ್ನಿಸುವುದುಂಟು. ಪುಸ್ತಕವಾಗಿ ಪ್ರಕಟವಾಗಿಲ್ಲ ಅನ್ನುವುದೊಂದನ್ನು ಬಿಟ್ಟರೆ ಇವುಗಳಲ್ಲೂ ಕೌತುಕ ಮತ್ತು ಸ್ವಾರಸ್ಯಗಳಿಗೇನೂ ಬರವಿಲ್ಲ.

ನಮ್ಮ ನಡುವೆಯೂ ಕೂಡ ಇಂಥಾ ಒಬ್ಬಿಬ್ಬರಿರುತ್ತಾರೆ. ಇವರುಗಳು ಅದ್ಭುತ ಮಾತುಗಾರರಲ್ಲದಿದ್ದರೂ ಕೂಡ ಕತೆಗಳನ್ನು ಆಕರ್ಷಕವಾಗಿ ಹೇಳುವವರು. ನಮ್ಮೂರಿನಲ್ಲಿ ಹಿರಿಯರಾದ ಒಬ್ಬ ಕ್ಷೌರಿಕರೊಬ್ಬರಿದ್ದಾರೆ. ಸುಮಾರು ಎರಡೂವರೆ ದಶಕಗಳಿಂದ ಹಳ್ಳಿಯಲ್ಲಿ ಈ ವೃತ್ತಿಯಲ್ಲೇ ತೊಡಗಿಸಿಕೊಂಡವರು. ವಿಶೇಷವೆಂದರೆ ಅವರು ಯಾವ ವಿಷಯದ ಬಗ್ಗೆಯೂ ಅದ್ಭುತವಾಗಿ ಮಾತಾಡುವವರು. ಪಕ್ಕದ ಬೀದಿಯ ಬಯಲಾಟದಿಂದ ಹಿಡಿದು ಸಿರಿಯಾದ ಯುದ್ಧದವರೆಗೂ ಆರಾಮಾಗಿ ಮಾತಾಡಬಲ್ಲ ಮನುಷ್ಯ. ಎಲ್ಲದರ ಬಗ್ಗೆಯೂ ಅವರಲ್ಲಿ ಹೇಳಲಿಕ್ಕೊಂದು ಕತೆ ಅನ್ನುವುದಿರುತ್ತದೆ. ಅವರು ದಪ್ಪನೆಯ ಗ್ರಂಥಗಳನ್ನೇನೂ ಓದಿಕೊಂಡವರಲ್ಲ. ಅವರ ಪುಸ್ತಕವೇನಿದ್ದರೂ ದೈನಂದಿನ ಜೀವನವೇ. ಸ್ನೇಹಮಯಿಯಾಗಿ, ಎಲ್ಲರೊಂದಿಗೆ ಬೆರೆಯುತ್ತಾ ತೂಕವುಳ್ಳ ಸಂಭಾಷಣೆಗಳನ್ನು ಈ ಹಿರಿಯರು ಮಾಡುವುದನ್ನು ನಾನು ನೋಡಿದ್ದೇನೆ. ನಾನು ಅವರಲ್ಲಿಗೆ ಹೋದಾಗಲೆಲ್ಲಾ ಆಫ್ರಿಕಾದ ಬಗ್ಗೆ ಆಸಕ್ತಿಯಿಂದ ಕೇಳುವ, ಅದೇನು ಇದೇನು ಎಂದು ಪ್ರಶ್ನಿಸುವ ಅವರ ಜೀವನಪ್ರೀತಿಯು ಯಾರನ್ನೂ ಕೂಡ ಸೆಳೆಯುವಂಥದ್ದು. ಸಹಜವಾಗಿಯೇ ಆತ ನಡೆದಾಡುವ ಕತೆಗಳ ಭಂಡಾರ.

ಕತೆಗಳು ಕೇವಲ ಹಳ್ಳಿಗಳ ಸ್ವತ್ತಲ್ಲ. ಮಹಾನಗರಗಳಲ್ಲೂ ಬೇಕಾದಷ್ಟಿರುತ್ತವೆ. ಸುತ್ತಮುತ್ತಲ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸುವವನಿಗೆ ಕತೆಗಳು ಹೆಜ್ಜೆಯಿಟ್ಟಲ್ಲೆಲ್ಲಾ ಎಡತಾಕುವುದು ಸಾಮಾನ್ಯ. ಕೆಲ ವರ್ಷಗಳ ಹಿಂದೆ ದೆಹಲಿಯ ಪ್ರತಿಷ್ಠಿತ ಸಾಹಿತ್ಯಗೋಷ್ಠಿಯೊಂದರಲ್ಲಿ ನಾನು ಪಾಲ್ಗೊಂಡಿದ್ದೆ. ಕನ್ನಡವೂ ಸೇರಿದಂತೆ ದೇಶದ ಇಪ್ಪತ್ತಕ್ಕೂ ಹೆಚ್ಚಿನ ಭಾಷೆಗಳ ಘಟಾನುಘಟಿ ಲೇಖಕರು, ಅಂಕಣಕಾರರು, ಚಿತ್ರೋದ್ಯಮದ ಖ್ಯಾತನಾಮರು ಅಲ್ಲಿ ಸೇರಿದ್ದರು. ಮಾಧ್ಯಮಗಳ, ಕ್ಯಾಮೆರಾಗಳ ಅಟ್ಟಹಾಸವಿಲ್ಲದ ಆ ಸಮಾರಂಭದಲ್ಲಿ ಹಲವು ಲೇಖಕರೊಂದಿಗೆ ಖಾಸಗಿಯಾಗಿ ಸಮಯವನ್ನು ಕಳೆಯುವ ಅವಕಾಶವು ನನಗೆ ಸಿಕ್ಕಿತ್ತು. ಐದು ನಿಮಿಷಗಳ ಹಿಂದೆ ಜೊತೆಯಾಗಿ ಕ್ಯಾಮೆರಾಗೆ ಪೋಸುಕೊಡುತ್ತಿದ್ದ ಈ ಖ್ಯಾತನಾಮರು ನಂತರ ತಣ್ಣಗಿನ ಬಿಯರ್ ಹೀರುತ್ತಾ ಓರಗೆಯ ಪತ್ರಕರ್ತರನ್ನು, ಲೇಖಕರನ್ನು ಹೀಗಳೆಯುವ ದೃಶ್ಯವು ನೋಡಲು ತಮಾಷೆಯಾಗಿತ್ತು. ದೇಶವು ತಣ್ಣಗಿದೆ ಎಂಬಂತಹ ದಿನಗಳಲ್ಲೂ ಸದ್ದಿಲ್ಲದೆ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದ್ದ ಅಪರಾಧ ಲೋಕಗಳ ಕೆಲ ಕರಾಳಮುಖಗಳನ್ನು ರಾಷ್ಟ್ರರಾಜಧಾನಿಯಲ್ಲಿ ನಾನು ಕಂಡಿದ್ದೆ. ನಿದ್ರೆಯನ್ನೇ ಮಾಡದ ಮಹಾನಗರಗಳಲ್ಲಿ ಕತೆಗಳಿಗೆ ಬರವೇ?

ಪ್ರವಾಸಗಳ ಹುಚ್ಚಿರುವವರಿಗೂ ಕತೆಗಳು ಅನಾಯಾಸವಾಗಿ ದಕ್ಕಿಬಿಡುತ್ತವೆ. ಮಂಗಳೂರಿನಿಂದ ದೆಹಲಿಗೆ ಸಾಗುತ್ತಿದ್ದ ರೈಲು ಪ್ರಯಾಣವೊಂದರಲ್ಲಿ ಬಕಾಸುರನಂತೆ ತಿನ್ನುತ್ತಲೇ ಇದ್ದ ಪ್ರಯಾಣಿಕನೊಬ್ಬ ನನ್ನ ಎದುರಿನ ಆಸನದಲ್ಲಿದ್ದ. ರೈಲಿನ ಶೌಚಾಲಯದಲ್ಲಿ ನೀರಿಲ್ಲದ ಪರಿಣಾಮವಾಗಿ ನಾವು ನೀರು ಕುಡಿಯಲೂ ಹಿಂದೇಟು ಹಾಕುತ್ತಿದ್ದರೆ ಆತ ನಿರಂತರವಾಗಿ ತಿನ್ನುತ್ತಲೇ ಇದ್ದ. ನಿನ್ನನ್ನು ನೋಡಿಯೇ ನಮ್ಮ ಹಸಿವು ಇಂಗಿಹೋಯಿತು ಮಾರಾಯ ಎಂದು ಅವನನ್ನು ನಾವುಗಳು ಕಿಚಾಯಿಸಿದ್ದೆವು. ಒಮ್ಮೆ ನಾಗಾಲ್ಯಾಂಡಿನ ದಿಮಾಪುರ್ ಏರ್ ಪೋರ್ಟಿನಿಂದ ಹೊರಬಂದ ನನಗೆ ಒಂದೇ ಒಂದು ಟ್ಯಾಕ್ಸಿಯೂ ಕಂಡಿಲ್ಲದ ಪರಿಣಾಮವಾಗಿ ಭಾರೀ ಲಗೇಜುಗಳೊಂದಿಗೆ ಒಂದೂವರೆ ಗಂಟೆಗೂ ಹೆಚ್ಚಿನ ಸಮಯ ಕಾಯಬೇಕಾಗಿ ಬಂದಿತ್ತು. ನಮ್ಮ ಸಹಪ್ರಯಣಿಕರೆಲ್ಲಾ ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿ ಮರೆಯಾದ ನಂತರ ಉಳಿದಿದ್ದು ನಾನು ಮತ್ತು ಒಬ್ಬ ಅಮೆರಿಕನ್ ಪ್ರವಾಸಿಯಷ್ಟೇ. ವೃಥಾ ಕಾದು ಸುಸ್ತಾದ ನಾವಿಬ್ಬರೂ ಹರಟುತ್ತಾ ನಂತರ ಕಾಲ್ನಡಿಗೆಯಲ್ಲೇ ಬಹಳ ದೂರ ನಡೆದು ಆಟೋ ಒಂದನ್ನು ಹಿಡಿದಿದ್ದೆವು. ಏರ್ ಪೋರ್ಟ್ ಎಂದರೆ ವಾಹನ ಸೌಲಭ್ಯಗಳು ಇದ್ದೇ ಇರುತ್ತವೆ ಎಂಬ ನನ್ನ ಅಜ್ಞಾನಕ್ಕೆ ಈ ಅನುಭವವು ತಕ್ಕ ಪಾಠವನ್ನೇ ಕಲಿಸಿತ್ತು. ಆಫ್ರಿಕಾದ ಅಂಗೋಲಾದಲ್ಲಿ ದೈಹಿಕವಾಗಿ ದಷ್ಟಪುಷ್ಟವಾಗಿದ್ದ ಪೋಲೀಸಪ್ಪನೊಬ್ಬ ತನ್ನ ಡೊಳ್ಳು ಹೊಟ್ಟೆಯ ಮೇಲೆ ಕೈಯಾಡಿಸುತ್ತಾ “ಎರಡು ದಿನದಿಂದ ಏನೂ ತಿಂದಿಲ್ಲ, ಕೊಂಚ ದುಡ್ಡು ಕೊಡಿ” ಎಂದು ಬೇಡುತ್ತಾ ನನ್ನ ಹುಬ್ಬೇರಿಸಿದ್ದ. ಈ ರೀತಿಯೂ ಲಂಚ ಕೇಳುವವರಿದ್ದಾರೆ ಎಂದು ನನಗೆ ಜ್ಞಾನೋದಯವಾಗಿದ್ದೇ ಆಗ.

ಹೀಗೆ ಕತೆಗಳನ್ನು ಹುಡುಕಹೊರಟರೆ ನಮ್ಮ ನಿತ್ಯದ ಜೀವನದಲ್ಲೇ ಎರಡು ಜನ್ಮಗಳಿಗಾಗುವಷ್ಟು ಸಿಗುತ್ತವೆ. “ಮಳೆಯ ಹನಿಹನಿಯನ್ನೂ ತಮ್ಮೊಳಗೆ ಇಳಿಸಿಕೊಳ್ಳುವವರು ತೀರಾ ಕಮ್ಮಿ. ಉಳಿದವರು ಸುಮ್ಮನೆ ಒದ್ದೆಯಾಗುತ್ತಾರಷ್ಟೇ” ಎನ್ನುವ ಮಾತೊಂದು ಇಂಗ್ಲಿಷ್ ಭಾಷೆಯಲ್ಲಿದೆ. ಕತೆಗಳೂ ಕೂಡ ಒಂದು ರೀತಿಯಲ್ಲಿ ಹೀಗೇನೇ. ದೃಷ್ಟಿಯು ಒಂದನ್ನು ತೋರಿಸಿದರೆ ಒಳಗಣ್ಣು ಇನ್ನೇನನ್ನೋ ತೆರೆದಿಟ್ಟಿರುತ್ತದೆ.

ನೋಡನೋಡುತ್ತಲೇ ನಾವೂ ಕತೆಯಾಗಿರುತ್ತೇವೆ.

———

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 20 hours ago No comment

  ಜೋಪಾನವಾಗಿಟ್ಟ ನವಿಲುಗರಿಗಳಿಗೆಲ್ಲ ಹೊಸಮರಿ

      ಕವಿಸಾಲು       ನೆನಪುಗಳು – ಒಂದು ಬೆಳ್ಳಂಬೆಳಗು ನಸುನಕ್ಕು ಮತ್ತೆ ಬಂದಿಹೆನೆಂಬ ಹೊತ್ತಲ್ಲಿ ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ ವರ್ತಮಾನವ ಕದಡದಿರಿ ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ ನೋವು ನಲಿವುಗಳ ಚಿತ್ತಾರದ ರಂಗೋಲಿ ಹಾಲುಕ್ಕಿ ಹರಿದ ಬದುಕಿನಲಿ ಒಂದೊಂದೇ ಪಾರಿಜಾತಗಳು ಜಾರಿ ಉದುರಿ ಭೂತದ ನೆರಳುಗಳಿಗೆ ಇಂದು ಹೊಸರೆಕ್ಕೆ ಕಟ್ಟಿ ಅಗಲಿಕೆಯ ನೋವು, ವಿರಹದ ಕಾವು ತುಂಬಿಹ ಬೆಂಗಾಡಿನ ಮಾಯೆ ಮರುಳಿಗೆ ಹೊತ್ತೊಯ್ಯದಿರಿ ...

 • 1 day ago No comment

  ಯಾವುದೋ ಅಜ್ಞಾತ ಕಣ್ಣೀರಿನ ಕಥೆ

      ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

 • 2 days ago No comment

  ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

      ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

 • 3 days ago No comment

  ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

      ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

 • 3 days ago No comment

  ಗಟ್ಟಿಗಿತ್ತಿ

      ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...


Editor's Wall

 • 07 December 2017
  5 days ago No comment

  ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                        ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

 • 05 December 2017
  7 days ago No comment

  ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

          ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

 • 04 December 2017
  1 week ago No comment

  ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

  ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

 • 03 December 2017
  1 week ago One Comment

  ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

            | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

 • 30 November 2017
  2 weeks ago No comment

  ಪೀಹೂ ಎಂದರೆ ಹಾಡುವ ಹೂ…

                        ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...