Share

ಏನಾದರೂ ನೆನಪಿಗೆಂದು…
ಶ್ರೀದೇವಿ ಕೆರೆಮನೆ

 • Page Views 203
 • “ಏನಾದರೂ ತೆಗೆದುಕೊ ಈ ದಿನದ ನೆನಪಿಗೆಂದು”
  ಮುಸ್ಸಂಜೆಯ ಬಾನು ಕೆಂಪಡರಿದಾಗ
  ಆತ ಕೆನ್ನೆ ನೇವರಿಸುತ್ತ ಹೇಳಿದ
  ಮೊದಲ ಸಲ ಜೊತೆಗಿದ್ದ ಸಂಭೃಮದಲ್ಲಿ
  “ನೀವಿದ್ದೀರಲ್ಲ ಜೊತೆಗೆ
  ನಿಮಗಿಂತ ಇನ್ನೇನು ಬೇಕು?”
  ಆತನ ಬುಜಕ್ಕೆ ಗಲ್ಲ ಉಜ್ಜುತ್ತ
  ಅರೆತೆರೆದ ಕಣ್ಣಲ್ಲಿ ಮುಲುಕಿದಳು
  ಪ್ರೀತಿ ಉಕ್ಕೇರಿ ಬರಸೆಳೆದ
  “ಛೆ.. ಹೊರ ಹೋಗೋಣ ಎಂದು ಕೊಂಡೆವಲ್ಲ
  ಮತ್ತೆ ಹೊಸದಾಗಿ ತಲೆ ಬಾಚಬೇಕು”
  ಎರಡು ಗಳಿಗೆಯ ಬಿಟ್ಟು
  ಕೊಂಡಾಟ ಮಾಡುತ್ತ ಸುಖದ ನಿಟ್ಟುಸಿರಿಟ್ಟು
  ಜೋಡಿ ಮಂಚದ ಮೇಲೆ ಚಲ್ಲಾಪಿಲ್ಲಿಯಾದ ಬಟ್ಟೆಗಳನ್ನಾರಿಸುತ್ತ
  ನವಿರಾಗಿ ಪಲಕುತ್ತ ಕಣ್ಣಲ್ಲೇ ನಾಚಿದಳಾಕೆ
  ಮೀಸೆಯ ಮೇಲೆ ಕೈಯ್ಯಿಟ್ಟಾತನ
  ತುಟಿಯಂಚಲ್ಲಿ ಜಗತ್ತನ್ನೇ ಸೂರೆಹೊಡೆದ ಹೆಮ್ಮೆ

  ಕೆಂಬಾನು ಬಣ್ಣ ಕಳೆದು, ಯಾರಿಗೆ ಯಾರೂ ಕಾಣಿಸದ
  ಇಳಿಸಂಜೆಯ ನಸುಗತ್ತಲ ಹೊತ್ತಲ್ಲಿ
  ಪೇಟೆಯ ಬೀದಿಗಿಳಿದವರಲ್ಲಿ
  ಯಾವ ಗಡಿಬಿಡಿಯೂ ಇಲ್ಲದ ನಿರಾಳ ಭಾವ
  ಝಗಮಗಿಸುವ ದೀಪದ ಕೆಳಗೆ
  ಒಡವೆ ವಸ್ತ್ರಗಳೆಲ್ಲ ಮಿನುಗುವಾಗ
  “ಏನಾದರೂ ಕೊಂಡುಕೋ ಈ ಖುಷಿಗಾಗಿ”
  ಮೆಲ್ಲನೆ ಪಿಸುಗುಟ್ಟಿದಾತನ ಕಣ್ಣಲ್ಲಿ ಹಿಮಾಲಯದ ಪ್ರೀತಿ
  “ನೀವಿದ್ದೀರಲ್ಲ, ಜನ್ಮಜನ್ಮದ ಉಡುಗೊರೆಯಾಗಿ
  ಇನ್ನೇನಿದೆ ಖುಷಿ ನಿಮ್ಮ ಸಾಂಗತ್ಯಕ್ಕಿಂತ”
  ಆತನ ಉದ್ದ ಬೆರಳಲಿ ತನ್ನ ಗುಬ್ಬಿಮರಿಯ
  ಕೈ ಬೆಸೆದವಳ ಧ್ವನಿಯಲ್ಲಿ ಎಂದೂ ಅಗಲದ ಆತ್ಮವಿಶ್ವಾಸ.

  ಈಗ ಕಿರುಗುಡುವ ಜೋಡಿಮಂಚದ ಮೇಲೆ
  ಅಂದು ಹೊರಡುವ ಗಡಿಬಿಡಿಯಲ್ಲಿ
  ಆತ ಕೈಗಿಟ್ಟ ಬಾದಾಮಿ ಎಣ್ಣೆಯ ಸೀಸೆ ಹಿಡಿದು
  ಹನಿಗಣ್ಣಾಗಿ ನೆನಪಿನ ಜೈಲೊಳಗೆ ಬಂಧಿಯಾಗಿದ್ದಾಳೆ
  “ಒಂದಲ್ಲಾ ಒಂದು ದಿನ ಅಗಲಲೇ ಬೇಕಾದ ಸತ್ಯದ
  ಅರಿವಿದ್ದೇ ನೆನಪಿನ ಕಾಣಿಕೆಗಾಗಿ ಒತ್ತಾಯಿಸಿದನೇ?
  ಬಾದಾಮಿತೈಲದ ನರುಗಂಪು ಮೂಗಡರಿ
  ಶಕುಂತಲೆಯ ಮುದ್ರೆಯುಂಗುರದ ಹೊಳಪು
  ನೆನಪಿನ ಭಿತ್ತಿಯೊಳಗೆ ಹೆಪ್ಪುಗಟ್ಟುತ್ತಿದೆ

  ———–————-

  ಶ್ರೀದೇವಿ ಕೆರೆಮನೆ

  shrಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

  Share

  Related Post

  Related Blogpost

  3 Comments For "ಏನಾದರೂ ನೆನಪಿಗೆಂದು…
  ಶ್ರೀದೇವಿ ಕೆರೆಮನೆ
  "

  1. Raju
   3rd July 2017

   Nice

   Reply
  2. ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ
   3rd July 2017

   ಶ್ರೀದೇವಿ ಮೇಡಂ ಅವರ ಕವಿತೆ ಚನ್ನಾಗಿದೆ

   Reply
  3. K. A. Wajjaramatti
   21st July 2017

   Very nice poem

   Reply

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಮತ್ತೆ ಮರಳಲಿಲ್ಲ

   ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ಜಾಡಿಡಿದು ಶ್ಯಾಮ‌ಸುಂದರನ ಸೇರಲು.. ನವಿಲಿನ ಜೋಡಿಗಳೆರಡು ನಲಿವಿನಿಂದ ಕುಣಿತಿವೆ ಜಿಂಕೆ ಹಿಂಡುಗಳೆಲ್ಲಾ ತನ್ಮಯವಾಗಿ ನಿಂತಿವೆ.. ಅಗೋ ಅಲ್ಲಿ ಗೋಪಿಕೆಯರೆಲ್ಲಾ ನರ್ತಿಸ ತೊಡಗಿದ್ದಾರೆ ಒಬ್ಬಳ ಸೆರಗು ಜಾರಿ ಮೊಲೆಹಾಲು ...

  • 4 days ago No comment

   ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…

   ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ಕಣ್ಣು ತೆರೆದ ಮೌನದ ಮೇಲೆ ಮಾತ ಬಿಂಬದ ಅಚ್ಚು, ಸುಗಂಧ ಮೆತ್ತಿದ ನೆನಪು ತೊಳೆದಷ್ಟೂ ಝಳಪಿಸುವ ಕತ್ತಿಯಲಗಿನಂತೆ, ಗಂಟಿಲ್ಲದ ಮನಸ ಪೋಣಿಸಿದಷ್ಟೂ ನುಣುಚಿಕೊಂಡರೆ ಹೆಣಿಗೆ ಶೂನ್ಯ ಬರೀ ...

  • 7 days ago No comment

   ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು

   ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ಓದಬೇಕು. ಕಾವ್ಯ ಹರಿವ ನದಿಯಂತೆ. ಕವಿತೆ ಅಂದರೆ ಬೆಂಕಿ ಮತ್ತು ಬೆಳಕು. ಕಾವ್ಯ ಕ್ಷಣ ಭಂಗುರವನ್ನು ಗೆಲ್ಲುವ ಪ್ರಕ್ರಿಯೆ, ಸಾವನ್ನು ಮುಂದೂಡುವ ಶಕ್ತಿ ಉಳ್ಳದ್ದು….ಹೀಗೆ ಏನೆಲ್ಲಾ ಕವಿತೆಯನ್ನು ...

  • 7 days ago No comment

   ಕಿಡಿ

   ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ದುಡ್ಡಿನ ದೊಂಬರಾಟ ಸತ್ತ ದೇಹ ಮಣ್ಣಾಗುವಾಗ ಮತ್ತೆ ಬೆತ್ತಲೆ.

  • 1 week ago No comment

   ಸ್ವಾತಂತ್ರ್ಯದ ಸೊಬಗು

   ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ಕಣ್ಣಿಗೆ ಮಣ್ಣೆರಚುತ್ತಿದ್ದಾನೆ. ಒಂದೆರಡು ಬಾರಿ ನನ್ನ ಸಮ್ಮುಖದಲ್ಲೇ ಆತ ಈ ಬಗ್ಗೆ ಕಾರ್ಮಿಕನನ್ನು ಎಚ್ಚರಿಸಿದ್ದಾನೆ. ನಂತರವೂ ಆ ಕಾರ್ಮಿಕ ತನ್ನ ಕಣ್ಣೆದುರಿಗೇ ಮೈಗಳ್ಳತನವನ್ನು ಮುಂದುವರಿಸಿದಾಗ ಆತನಿಗೆ ಪಿತ್ತ ...


  POPULAR IN CONNECTKANNADA