Share

ಮಳೆಯೇ ಸುರಿ ಮಳೆಯೇ
ನಾಗರಾಜ್ ಹರಪನಹಳ್ಳಿ

  • Page Views 100
  • ಳೆಯೇ ಪ್ರೀತಿಯ ಮಳೆಯೇ
    ಸುರಿ ಸುರಿ ಮಳೆಯೇ
    ಇಳೆಯಾ ಕೊಳೆಯನು ತೊಳೆ ಮಳೆಯೇ //ಪಲ್ಲವಿ//

    ನೆಲದ ದಾಹವ ತಣಿಸುವ ಮಳೆಯೇ
    ಬರಡು ನೆಲವು ಹಸಿರಾಯ್ತು ಮಳೆಯೇ
    ಬರಡು ನೆಲವು ಹಸಿರಾಯ್ತು ಮಳೆಯೇ
    ಬತ್ತಿದ ಮನದಲಿ ಕನಸಾಯ್ತು ಮಳೆಯೇ
    //ಮಳೆಯೇ ಪ್ರೀತಿಯ ಮಳೆಯೇ//

    ಮನ ಮನಗಳು ಬೆಸದಾವು ಮಳೆಯೇ
    ಮಕ್ಕಳ ಕಾಲ್ಗಗಳು ಕುಣಿದಾವು ಮಳೆಯೇ
    ಹಳ್ಳ ಕೊಳ್ಳಗಳು ನಕ್ಕಾವು ಮಳೆಯೇ //
    ಹರಿಯುವ ನದಿಯು ಬಳುಕಿತು ಮಳೆಯೇ
    //ಮಳೆಯೇ ಪ್ರೀತಿಯ ಮಳೆಯೇ//

    ನದಿಗಳ ಮಿಲನಕೆ ಕಾಯಿತು ಕಡಲೇ
    ಪಡುಬೆಟ್ಟಗಳು ಕುಣಿದಾವು ಮಳೆಯೇ
    ಗಿಡ ಮರಬಳ್ಳಿಲಿ ಹೂ ಅರಳಿದವು
    ಹಕ್ಕಿಗಳ ಗಾನವೂ ಭುವಿ ತುಂಬಿತು ಮಳೆಯೇ
    //ಮಳೆಯೇ ಪ್ರೀತಿಯ ಮಳೆಯೇ//

    ————-

    ನಾಗರಾಜ್ ಹರಪನಹಳ್ಳಿ

    nhಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ  ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಸದ್ಯ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ, ಲೋಕದರ್ಶನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ  ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.

    Share

    Related Post

    Related Blogpost

    Leave a comment

    Your email address will not be published. Required fields are marked *

    Recent Posts More

    • 4 days ago No comment

      ಮತ್ತೆ ಮರಳಲಿಲ್ಲ

      ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ಜಾಡಿಡಿದು ಶ್ಯಾಮ‌ಸುಂದರನ ಸೇರಲು.. ನವಿಲಿನ ಜೋಡಿಗಳೆರಡು ನಲಿವಿನಿಂದ ಕುಣಿತಿವೆ ಜಿಂಕೆ ಹಿಂಡುಗಳೆಲ್ಲಾ ತನ್ಮಯವಾಗಿ ನಿಂತಿವೆ.. ಅಗೋ ಅಲ್ಲಿ ಗೋಪಿಕೆಯರೆಲ್ಲಾ ನರ್ತಿಸ ತೊಡಗಿದ್ದಾರೆ ಒಬ್ಬಳ ಸೆರಗು ಜಾರಿ ಮೊಲೆಹಾಲು ...

    • 4 days ago No comment

      ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…

      ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ಕಣ್ಣು ತೆರೆದ ಮೌನದ ಮೇಲೆ ಮಾತ ಬಿಂಬದ ಅಚ್ಚು, ಸುಗಂಧ ಮೆತ್ತಿದ ನೆನಪು ತೊಳೆದಷ್ಟೂ ಝಳಪಿಸುವ ಕತ್ತಿಯಲಗಿನಂತೆ, ಗಂಟಿಲ್ಲದ ಮನಸ ಪೋಣಿಸಿದಷ್ಟೂ ನುಣುಚಿಕೊಂಡರೆ ಹೆಣಿಗೆ ಶೂನ್ಯ ಬರೀ ...

    • 7 days ago No comment

      ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು

      ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ಓದಬೇಕು. ಕಾವ್ಯ ಹರಿವ ನದಿಯಂತೆ. ಕವಿತೆ ಅಂದರೆ ಬೆಂಕಿ ಮತ್ತು ಬೆಳಕು. ಕಾವ್ಯ ಕ್ಷಣ ಭಂಗುರವನ್ನು ಗೆಲ್ಲುವ ಪ್ರಕ್ರಿಯೆ, ಸಾವನ್ನು ಮುಂದೂಡುವ ಶಕ್ತಿ ಉಳ್ಳದ್ದು….ಹೀಗೆ ಏನೆಲ್ಲಾ ಕವಿತೆಯನ್ನು ...

    • 7 days ago No comment

      ಕಿಡಿ

      ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ದುಡ್ಡಿನ ದೊಂಬರಾಟ ಸತ್ತ ದೇಹ ಮಣ್ಣಾಗುವಾಗ ಮತ್ತೆ ಬೆತ್ತಲೆ.

    • 1 week ago No comment

      ಸ್ವಾತಂತ್ರ್ಯದ ಸೊಬಗು

      ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ಕಣ್ಣಿಗೆ ಮಣ್ಣೆರಚುತ್ತಿದ್ದಾನೆ. ಒಂದೆರಡು ಬಾರಿ ನನ್ನ ಸಮ್ಮುಖದಲ್ಲೇ ಆತ ಈ ಬಗ್ಗೆ ಕಾರ್ಮಿಕನನ್ನು ಎಚ್ಚರಿಸಿದ್ದಾನೆ. ನಂತರವೂ ಆ ಕಾರ್ಮಿಕ ತನ್ನ ಕಣ್ಣೆದುರಿಗೇ ಮೈಗಳ್ಳತನವನ್ನು ಮುಂದುವರಿಸಿದಾಗ ಆತನಿಗೆ ಪಿತ್ತ ...


    POPULAR IN CONNECTKANNADA