Share

ಕೇಳಿಕೊಳ್ಳುತ್ತಿರಬೇಕು ಇಂಥ ಪ್ರಶ್ನೆಗಳನ್ನು ಆಗಾಗ….
ಎಂ ಆರ್ ಭಗವತಿ

ನಕ್ಷತ್ರದ ಬೆಳಕು
ಅಷ್ಟು ವರ್ಷ ಹಳೆಯದೆಂದು
ಹೇಳಲು
ಇಷ್ಟು ದಿನ ಕಾಯಬೇಕಿತ್ತೆ?

**

ಬೆರಗಿನಲ್ಲೇ ಮುಗಿಯುವುದು
ಜೀವದ ಕನಸು
ಪ್ರಕೃತಿಯ ಕನಸು
ಇನ್ನು ನಕ್ಷತ್ರವ ಎಣಿಸುವೆನೆ?

**

ಇಷ್ಟೊಂದು ಚುಕ್ಕೆ
ಎಣಿಸುವಷ್ಟರಲ್ಲೇ
ಮುಗಿಯಿತೆ ಕವಿತೆ?

ಕವಿತೆಯ ಆಯಸ್ಸು ಇಷ್ಟೇ

**

ಈ ಗಾಳಿ, ಬೆಳಕು,
ನೆತ್ತಿಯ ಮೇಲಿನ ಸೂರ್ಯ, ಕಣ್ಣ ಮುಂದಿನ ಬೆಳಕು
ಹಾರುವ ಹಕ್ಕಿ, ರಾತ್ರಿಯ ಚಂದ್ರಮ
ನಿಂತ ನೆಲವೂ ನನ್ನದಲ್ಲ!
ಚಿತ್ರ ಹೇಗೆ ಬರೆಯಲಿ?

**

ಬಲೂನು ಗಾಳಿ ಟುಸ್ಸ್ ಅನ್ನದೆ
ಒಂದೇ ಹದದಲ್ಲಿ
ಇರುವುದು ಬೆಚ್ಚಗೆ
ಬಲೂನಿನ ಒಳಗೆ;
ಕಲಿಸಿದ್ದು ಪ್ರಕೃತಿ !!

ಜಾತಿ ಕೇಳಿದವನ
ಮನೆಯ ಅಂಗಳದಲ್ಲಿ
ಎಷ್ಟೊಂದು ತುಳಸಿ ಗಿಡಗಳು ಅರಳಿವೆ !?

**

ಮರದಿಂದ ಉದುರುವ
ಎಲೆ
ಲಾಲಿತ್ಯದಿಂದ
ಜಾರುತ್ತಿದೆ
ಮರವನ್ನು ತೆಗಳದೆ

**

ಖಾಲಿ ಕಾಗದದ
ಮೇಲೆ
ಕಪ್ಪು ಇರುವೆಗಳ ಸಾಲು
ಸಾಲು ದಾಟಿದ ಮೇಲೆ
ಒಂದೇ ಉಳಿಯಿತು
ಖಾಲಿ ಕಾಗದ !

**
ಖಾಲಿ ಜಾಗ ಬಿಡು
ಸುಮ್ಮನೆ ಮೆಚ್ಚಬೇಡ
ಕೃತಿಮಕ್ಕಿಂತ ವಾಸಿ

**

ಅಕ್ಷರಗಳು ಹೇಳಿದ್ದು:
ಬರೆದೆನೆಂದು ಬೀಗಬೇಡ
ಉಳಿಯಿತು
ಖಾಲಿ ಹಾಳೆ!

———-

ಎಂ ಆರ್ ಭಗವತಿ

bhagavathi1 ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

4 Comments For "ಕೇಳಿಕೊಳ್ಳುತ್ತಿರಬೇಕು ಇಂಥ ಪ್ರಶ್ನೆಗಳನ್ನು ಆಗಾಗ….
ಎಂ ಆರ್ ಭಗವತಿ
"

  1. Vasudev nadig
    19th July 2017

    ಖಾಲಿ ಜಾಗ ಬಿಡು…..

    Reply
  2. ಒಂದು ಚಂದದ ಕವಿತೆ ಬಹಳಷ್ಟು ವಿಚಾರಗಳ ಒಡಲೊಳಗೆ ಹರಿದಾಡಿದೆ , ಕವಿತೆಯನ್ನು ಕಲ್ಪಿಸಿಕೊಂಡ ನಿಮಗೆ ವಂದನೆಗಳು.

    Reply
    • ಭಗವತಿ ಎಂ. ಆರ್
      22nd July 2017

      ಧನ್ಯವಾದ ಸರ್.

      Reply
  3. ಭಗವತಿ ಎಂ. ಆರ್
    22nd July 2017

    ಧನ್ಯವಾದ ಸರ್.

    Reply

Leave a comment

Your email address will not be published. Required fields are marked *

Recent Posts More

  • 21 hours ago No comment

    ಜೋಪಾನವಾಗಿಟ್ಟ ನವಿಲುಗರಿಗಳಿಗೆಲ್ಲ ಹೊಸಮರಿ

        ಕವಿಸಾಲು       ನೆನಪುಗಳು – ಒಂದು ಬೆಳ್ಳಂಬೆಳಗು ನಸುನಕ್ಕು ಮತ್ತೆ ಬಂದಿಹೆನೆಂಬ ಹೊತ್ತಲ್ಲಿ ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ ವರ್ತಮಾನವ ಕದಡದಿರಿ ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ ನೋವು ನಲಿವುಗಳ ಚಿತ್ತಾರದ ರಂಗೋಲಿ ಹಾಲುಕ್ಕಿ ಹರಿದ ಬದುಕಿನಲಿ ಒಂದೊಂದೇ ಪಾರಿಜಾತಗಳು ಜಾರಿ ಉದುರಿ ಭೂತದ ನೆರಳುಗಳಿಗೆ ಇಂದು ಹೊಸರೆಕ್ಕೆ ಕಟ್ಟಿ ಅಗಲಿಕೆಯ ನೋವು, ವಿರಹದ ಕಾವು ತುಂಬಿಹ ಬೆಂಗಾಡಿನ ಮಾಯೆ ಮರುಳಿಗೆ ಹೊತ್ತೊಯ್ಯದಿರಿ ...

  • 1 day ago No comment

    ಯಾವುದೋ ಅಜ್ಞಾತ ಕಣ್ಣೀರಿನ ಕಥೆ

        ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

  • 2 days ago No comment

    ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

        ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

  • 3 days ago No comment

    ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

        ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

  • 3 days ago No comment

    ಗಟ್ಟಿಗಿತ್ತಿ

        ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...


Editor's Wall

  • 07 December 2017
    5 days ago No comment

    ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                          ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

  • 05 December 2017
    7 days ago No comment

    ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

            ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

  • 04 December 2017
    1 week ago No comment

    ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

    ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

  • 03 December 2017
    1 week ago One Comment

    ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

              | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

  • 30 November 2017
    2 weeks ago No comment

    ಪೀಹೂ ಎಂದರೆ ಹಾಡುವ ಹೂ…

                          ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...