Share

ಸವಿ ಸವಿ ನೆನಪು…
ಡಾ. ಪ್ರೇಮಲತ ಬಿ.

 • Page Views 238
 • ಭಾನುವಾರಗಳೆಂದರೆ, ಪ್ರತಿದಿನವೂ ಹಬ್ಬ!! ಅಮ್ಮ ಮಾಡುತ್ತಿದ್ದ ದೋಸೆ, ಇಡ್ಲಿ, ಹೆಣಗಾಯಿ ರೊಟ್ಟಿ, ಬಿಸಿ ಬೇಳೆ ಬಾತ್ ಆಗಬೇಕೆಂದರೆ ಅದಕ್ಕೆ ಭಾನುವಾರ ಬರಬೇಕಿತ್ತು.ಅದಕ್ಕಾಗಿ ಸಡಗರದಿಂದ ಸಿದ್ದರಾಗಿರುತ್ತಿದ್ದೆವು.
  35 ವರ್ಷಗಳ ಹಿಂದೆ ನಮ್ಮ ಮನೆ ತುಮಕೂರಿನ ಜಂಟಿ ಮನೆಯ ಒಂದು ಭಾಗ (ಸೆಮಿ ಡಿಟ್ಯಾಚೆಡ್). ಪ್ರತಿದಿನ ತರಾತುರಿಯಲ್ಲಿ ಶಾಲೆ, ಕಾಲೇಜು ಮತ್ತು ಇತರೆ ಚಟುವಟಿಕೆಗಳಿಗೆ ತೆರಳಬೇಕಿದ್ದ ನಾಲ್ವರು ಹೊಟ್ಟೆಬಾಕ ಮಕ್ಕಳಿಗೆ ಅಡುಗೆ ಮಾಡಿ ಹಾಕುತ್ತಿದ್ದ ಅಮ್ಮನಿಗೆ ಭಾನುವಾರ ಬಂತೆಂದರೆ ಇನ್ನೂ ಹೆಚ್ಚಿನ ಕೆಲಸ!!

  ರುಬ್ಬುವ ಒರಳಿನಲ್ಲಿ ಹಿಂದಿನ ದಿನವೇ ಅಕ್ಕಂದಿರು ಅಥವಾ ಅಮ್ಮ ಗುಡ-ಗುಡಿಸಿ ರುಬ್ಬಿ ಹಿಟ್ಟನ್ನು ಅರೆಯುತ್ತಿದ್ದರೆಂದರೆ ಕೊನೆಯವಳಾದ ನನಗೆ ಇನ್ನಿಲ್ಲದ ಆನಂದ!! ಇಬ್ಬರು ಅಕ್ಕಂದಿರು ಮತ್ತು ಅಮ್ಮನಿರುವಾಗ ಚಿಕ್ಕವಳಾದ ನನಗೆ ಯಾವ ಕೆಲಸಗಳೂ ಬೀಳುತ್ತಿರಲಿಲ್ಲ! ಮನೆಯಲ್ಲಿ ಮಿಕ್ಸಿಯಿದ್ದರೂ ರುಬ್ಬುವ ಒರಳಿನಲ್ಲಿ ರುಬ್ಬಿದ ಇಡ್ಲಿ-ದೋಸೆಗಳಿಗೆ ಇರುವ ರುಚಿ ಬರುವುದಿಲ್ಲ ಅಂತ ನಂಬಿಕೆಯಿಟ್ಟಿದ್ದ ಕಾಲವದು.

  ನಾಲ್ಕು ಮಕ್ಕಳು ಪ್ರತಿ ಭಾನುವಾರ ಒಟ್ಟಿಗೆ ಅಡಿಗೆ ಮನೆಯಲ್ಲಿ ನೆಲದ ಮೇಲೆ ಕೂರುತ್ತಿದ್ದೆವು. ಡಯನಿಂಗ್ ಟೇಬಲ್ಲು ಹಾಲಿನಲ್ಲಿ ನಿಂತಿರುತ್ತಿತ್ತು! ನಾಲ್ಕು ಮಕ್ಕಳಿಗೆ, ಗಂಡನಿಗೆ ಮತ್ತು ನಮ್ಮ ಮನೆಯ ನಾಯಿ ಟಾಮಿಗೆ ಒಂದಾದ ಮೇಲೊಂದರಂತೆ ದೋಸೆ-ರೊಟ್ಟಿಗಳನ್ನು ಅಮ್ಮ ನೇರ ಹೆಂಚಿನಿಂದ ತಟ್ಟಗೆ ಹಾಕುತ್ತಿದ್ದರು. ಅದೇನು ಸುಲಭವಾಗಿರಲಿಲ್ಲ!! ನಾಲ್ವರಲ್ಲಿ ಯಾರಿಗೆ ಮೊದಲು ಕೊಡುವುದು? ಹಿರಿಯಳಿಗೋ-ಕಿರಿಯಳಿಗೋ? ಹೆಣ್ಣುಮಗಳಿಗೋ –ಗಂಡುಮಗನಿಗೋ? ಅದಕ್ಕೆ ಕೆಲವೊಮ್ಮೆ ಹಿರಿಯ ಮಕ್ಕಳು ತಾಳ್ಮೆವಹಿಸಿ ಕಾಯಬೇಕಿತ್ತು. ಇನ್ನು ಕೆಲವೊಮ್ಮೆ ಅರ್ಧ- ಅರ್ಧ ವೆಂಬ ಸಂಧಾನವಾಗಬೇಕಿತ್ತು. ಮತ್ತೆ ಕೆಲವೊಮ್ಮೆ ಜಗಳಗಳಾಗುತ್ತಿದ್ದವು!!! ಸರತಿಯಲ್ಲಿ ಸರಬರಾಜಾದರೆ ಪ್ರತಿಯೊಬ್ಬರೂ ಮತ್ತೆ ತಮ್ಮ ಸರತಿಗೆ ಕಾಯುಬೇಕಿತ್ತು. ಆದರೆ ಮೊದಲ ದೋಸೆ –ರೊಟ್ಟಿಗಳಿಗೆ ಇನ್ನಿಲ್ಲದ ಬೇಡಿಕೆಯಿತ್ತು. ಕೆಲವೊಮ್ಮೆ ಹಿಂದಿನ ರಾತ್ರಿ ಕೂಡಿಟ್ಟ 25 ಪೈಸೆ-50 ಪೈಸೆ ಬೇರೆಯವರಿಗೆ ನೀಡಿ ಸರತಿಯ ಮೊದಲನ್ನು ನಮ್ಮದಾಗಿಸಿಕೊಳ್ಳುತ್ತಿದ್ದೆವು!!

  ನಮ್ಮ ಜೊತೆಗೆ ನಮ್ಮ ಮನೆಯ ಮೂರು ಕಾಲಿನ ನಾಯಿ ಟಾಮಿ ( 6 ತಿಂಗಳ ಮರಿಯಿದ್ದಾಗ ಲಕ್ವ ಹೊಡೆದು ಹಿಂದಿನ ಒಂದು ಕಾಲು ಮುರುಟಿಹೋಗಿತ್ತು, ಎರಡನೆಯ ಕಾಲು ಗೂಟದ ರೀತಿ ಉಪಯೋಗವಾಗುತಿತ್ತು) ಹಸಿವಾದೊಡನೆ ಅಡುಗೆ ಮನೆಯ ಹೊಸಿಲಲ್ಲಿ ಕುಳಿತು ಕುಂಯ್..ಗುಡುತ್ತಿತ್ತು! “ಕುಂಟನಿಗೆ ಎಂಟು ಚೇಷ್ಟೆ” ಎನ್ನುವಂತೆ ತನ್ನ ೧೨ ವರ್ಷದ ಬದುಕಿನಲ್ಲಿ ಟಾಮಿ ಮಾಡಿದ ತಂಟೆಗಳ ಬಗ್ಗೆಯೇ ಪುಸ್ತಕ ಬರೆಯಬಹುದು. ನಮ್ಮಲ್ಲಿ ಯಾರ ತಟ್ಟಗೆ ರೊಟ್ಟಿಬಿದ್ದರೂ ಅದಕ್ಕೆ ಒಂದೆರಡು ತುತ್ತು ಹಾಕಿಯೇ ಮುಂದುವರೆಯುತ್ತಿದ್ದೆವು!!! ಈ ಕಾರಣ ನಮ್ಮ ಭಾನುವಾರದ ತಿಂಡಿಯ ಸಮಾರಾಧನೆಯ ಸಮಾರಂಭ ಗಂಟೆಗಟ್ಟಲ ಕಾಲ ನಡೆಯುತ್ತಿತ್ತು! ತಂದೆಯಿಂದ ಬೈಗುಳವೂ ಆಗುತ್ತಿತ್ತು!!

  ಇನ್ನು ಬಿಸಿಬೇಳೆ ಬಾತ್ ನ ವಿಚಾರ ಕೇಳುವಂತೆಯೇ ಇರಲಿಲ್ಲ!! ಮನೆಯಲ್ಲಿ ವಿದ್ಯುತ್ ಒಲೆಯಿದ್ದರೂ ಆ ದಿನ ಬೆಂಕಿಯ ಒಲೆ ಉರಿಯಿತ್ತಿತ್ತು.ಮಸಾಲೆ ಅರೆಯಲು ಯಾರಿಗೂ ತಕರಾರಿರಲಿಲ್ಲ. ಪ್ರತಿದಿನ ಹಾಲಿಗೆ ಹೆಪ್ಪು ಹಾಕಿ, ಮೊಸರು ಮಾಡಿ, ಅದನ್ನು ಕಡೆಗೋಲಲ್ಲಿ ಕಡೆದು ಮನೆಯಲ್ಲಿ ತಯಾರಾದ ಬೆಣ್ಣೆಯನ್ನು ಮಾತ್ರ ಬಿ.ಬಿ. ಬಾತ್ ಗೆ ಉಪಯೋಗಿಸುತ್ತಿದ್ದದ್ದು!! ಮಿಕ್ಕಂತೆ ಕೊಳ್ಳುತಿದ್ದ ತುಪ್ಪ-ಬೆಣ್ಣೆಗಳು ಬೇರೆಯ ಖಾದ್ಯಗಳಿಗೆ ಮಾತ್ರ ಬೀಳುತಿತ್ತು. ಆ ದಿನ ಅಟ್ಟದ ಮೇಲೆ ಸದಾ ಕುಳಿತಿರುತ್ತಿದ್ದ ದಪ್ಪ ತಳದ ಹಿತ್ತಾಳೆ ಪಾತ್ರೆ ಕೆಳಗಿಳಿಯುತ್ತಿತ್ತು. ಯಾಕೆಂದರೆ ಬಿಸಿ ಬೇಳೆ ಬಾತ್ ತಳಹತ್ತ ಬಾರದೆಂಬ ಕಾಳಜಿ. ಹಾಗೇ ಕುಕ್ಕರಿನಲ್ಲಿ ಕೂಗಿಸಿದರೆ ಅನ್ನದ ಅಗುಳುಗಳು ಒಡೆದಾವೆಂಬ ಭಯ!! ಒಲೆಯ ಉರಿಯಲ್ಲಿ ಬಟಾಣಿ ಮತ್ತು ಬೇಳೆ ಚೆನ್ನಾಗಿ ಹದವಾಗಿ ಬೇಯುತ್ತವೆ ಎಂಬ ಖಾತರಿ. ಗಂಟೆಗಟ್ಟಲೆ ಹೀಗೆ ತಯಾರಾದ ಬಿಸಿ ಬೇಳೆಬಾತಿಗೆ ಹೇರಳ ಬೆಣ್ಣೆಯ ಒಗ್ಗರಣೆ ಬಿತ್ತೆಂದರೆ ಮನೆಯಿರಲಿ ಇಡೀ ಬೀದಿಯೆ ಘಮ-ಘಮ!!! ನಮ್ಮ ಮನೆಯಲ್ಲಿ ಅವತ್ತು ಬಿಸಿ ಬೇಳೆ ಬಾತ್ ಅಂತ ಹೇಳಿಕೊಳ್ಳಲು ನನ್ನಲ್ಲಿ ಹುಟ್ಟುತ್ತಿದ್ದ ಹೆಮ್ಮೆ ಈಗಲೂ ನೆನಪಿದೆ.

  ಉಳಿದರೆ ನಾಳೆ ಶಾಲೆಯ ಊಟದ ಡಬ್ಬದಲ್ಲೂ ಅದನ್ನೇ ತಗೊಂಡು ಹೋಗಲು ಖುಷಿ. ಗೆಳತಿಯರ ಮುಂದೆಯೂ ಗರ್ವ!! ಪ್ರತಿದಿನ ನಮ್ಮ ಊಟಗಳನ್ನೆಲ್ಲ ಹಂಚಿ ತಿನ್ನುತ್ತಿದ್ದ ಗೆಳತಿಯರಿಗೂ ಈ ಬಿಸಿ ಬೇಳೆ ಬಾತ್ ನ್ನು ತಿನ್ನಲು ಕಾತುರ. ಕೆಲವೊಮ್ಮೆ ತರಕಾರಿ ಬೇಳೆಯ ಸಾರನ್ನ ತಗೊಂಡು ಹೋಗಿ ಬಿಸಿ ಬೇಳೆ ಬಾತ್ ಅಂತ ಹೇಳಿಕೊಂಡು ನನ್ನ ಸ್ಟೇಟಸ್ ಹೆಚ್ಚಿಸಿಕೊಂಡಿದ್ದೂ ಉಂಟು!!

  ನಾಲಿಗೆ ರುಚಿಯಿದ್ದ ತಂದೆ ,ದಂಡಿಯಾಗಿ ತಂದು ಹಾಕಿ ಅಮ್ಮನಿಂದ ತರಾವರಿ ಅಡುಗೆ ಮಾಡಿಸುತ್ತಿದ್ದರು. ಹಂಚಿ ಹರಿದು ಹೋದ ಬದುಕು-ಸಂಬಂದಗಳ ಕಾರಣ ಎಲ್ಲಿ ಏನೇನನ್ನೋ ತಿಂದರೂ ಆ ದಿನಗಳಲ್ಲಿ ಒಟ್ಟಿಗೆ ಕುಳಿತು ಸರದಿ ಕಾದು,ಜಗಳವಾಡಿ ,ಗಂಟೆಗಟ್ಟಲೆ ಮಾತಾಡುತ್ತಾ ಅಮ್ಮನ ಸುತ್ತ ಕುಳಿತು ತಿನ್ನುತ್ತಿದ್ದ ನಮಗೆ, ನಮ್ಮೆಲ್ಲರ ಹೊಟ್ಟೆಗೆ ಬೀಳುವವರೆಗೂ ಸಮಾದಾನವಾಗಿ ಕಾಯುತ್ತಿದ್ದ ಅಮ್ಮನ ಹೊಟ್ಟೆಯ ಬಗ್ಗೆ ಯೋಚಿಸುವ ಬುದ್ದಿಯೇ ಇರಲಿಲ್ಲವಲ್ಲ ಅಂತ ನೆನೆದು ನಾಚಿಕೆಯಾಗುತ್ತದೆ!! ಆದರೆ ಆ ಸವಿಯಾದ ನೆನಪುಗಳಿಗೆ ಬೆಲೆಕಟ್ಟಲು ಸಾದ್ಯವೇ ಇಲ್ಲ!!!

  ————–

  ಡಾ. ಪ್ರೇಮಲತ ಬಿ.
  ವಿಳಾಸ – 127, manthorpe road, Grantham, Linconshire, England ,NG318DH

  0044-7912347713

  Share

  Related Post

  Related Blogpost

  2 Comments For "ಸವಿ ಸವಿ ನೆನಪು…
  ಡಾ. ಪ್ರೇಮಲತ ಬಿ.
  "

  1. nagraj Harapanahalli
   20th July 2017

   ತಾಯ್ತನ , ಸಹನೆ,ಪ್ರೀತಿಯ ಸಂಬಂಧ, ಸಹನೆ, ಠಾಮಿ ….ಎಲ್ಲವನ್ನು ಒಟ್ಟಾಗಿ ಜೋಡಿಸಿ; ನಮ್ಮನ್ನು ಅವ್ವನ ಅಡುಗೆ ಮನೆಗೆ ಕರೆದೊಯ್ದಿದ್ದೀರಿ…ಥ್ಯಾಂಕ್ಯೂ

   Reply
  2. Vijaya
   21st July 2017

   ಭಾನುವಾರದ ತಿಂಡಿಯ ಸಮಾರಾಧನೆಯ ನೆನಪುಗಳು ಚೆನ್ನಾಗಿ ಮೂಡಿ ಬಂದಿವೆ

   ವಿಜಯನರಸಿಂಹ

   Reply

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ

   1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ಗೋಚರಿಸುತ್ತಿತ್ತು ಇರುಳ ಮೋಡಿತನ ಬಯಲುಗೊಳಿಸುವ ಅಸಂಖ್ಯ ನಕ್ಷತ್ರದ ನಾಡಿಗಳಿರುವಾಗ ಮಿಥ್ಯದ ಬೆನ್ನೇರಿ ಸಾಲುದೀಪದ ನಡಿಗೆ ಅಳಿಸಲು ಹೇಗೆ ಸಾಧ್ಯ! 2 ನಿನ್ನ ಎದೆಯೊಳಗೆ ಅದೆಂಥ ಎದೆಗಾರಿಕೆ ಜಗದ ...

  • 5 days ago No comment

   ಗೌರಿ : ದ್ವಿಪದಿಗಳು

   1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ಗುಂಡಿಕ್ಕಿದರು ಸಾಗರವಾದಳು 4 ಕಿಡಿಯನ್ನು ನಂದಿಸಲು ನೋಡಿದರು ಗೆಳತಿ ಬೆಳಕಿನ ಹೊನಲಾಗಿ ಬಿಟ್ಟಳು 5 ಬಂದೂಕು ಗುಬ್ಬಿಗಳ ಗೂಡು ಹುಡುಕಿಕೊಂಡು ಹೋಗಿ ಗುಂಡಿಕ್ಕತೊಡಗಿತು ನಾವು ಬಂದೂಕಿನ ನಳಿಕೆಯಲ್ಲಿ ...

  • 6 days ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 7 days ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 week ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help