Share

ತಂಪು ಕರುಣೆಯ ಹಾಲು
ನಾಗರೇಖಾ ಗಾಂವಕರ

 • Page Views 123
 • ರಾತ್ರಿಯಲ್ಲಿ ಹಗಲಿನ ಪಾಳಿ

  ರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು
  ಸಡಿಲವಾಗಿಲ್ಲ. ದೀಪದ ಮಾದಕ ಮತ್ತು
  ಆಫೀಮು ತುಂಬಿದ ಸೀಸೆ

  ಅಮೃತಶಿಲೆಯ ಕಣ್ಣುಗಳಲ್ಲೂ
  ಕಡುಕಪ್ಪು ಗೋಲ
  ನಿದ್ದೆ ಭರಿಸದ ಯಾವುದೋ ಮಾಯೆ.

  ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ
  ಅರೆತೆರೆದ ಎದೆಯ ಆಕೆಯದಷ್ಟೇ
  ಅಲ್ಲ. ಮೂರಂತಸ್ತಿನ ಮಹಡಿಯ ಕೊನೆ
  ಕೋಣೆ ನೀಲಿ ಆಕಾಶಕ್ಕೆ ಕೈ ಚಾಚಿದೆ.

  ಉರಿದುರಿದು ಬತ್ತಿಕರಟಿ ಒಳಸರಿದರೂ
  ತೈಲದ ಋಣ ಹರಿದರೂ
  ಹಣತೆ ಮತ್ತು ಜ್ವಾಲೆ ಸದಾ
  ಕಾಯುವ ಭ್ರಮರಿಯರು
  ಮಾಯಾ ಕನ್ನಡಿಯ ಒಳಬಿಂಬದಲ್ಲಿ
  ಅದ್ಯಾವ ರಂಗೋಲಿ ಮೇಳೈಸಿದ
  ಬಣ್ಣ ಬಣ್ಣದ ಚಿತ್ತಾರಗಳು.

  ಈಗೇನೂ ಬೇಡ ತಂಗದಿರ್‍ನ
  ತಂಪು ಕರುಣೆಯ ಹಾಲು.
  ದಿನಪನ ಉರಿಯ ಉಂಡುಂಡು
  ಚರ್ಮರೋಗಗಳೆಲ್ಲ ವಾಸಿ.
  ಮತ್ತಿನ್ನೇನು? ಅಗೋ,ನೋಡು
  ಸಾಗರನ ಮೇಲೂ ಇಡುವ ಹೆಜ್ಜೆ
  ಗುರುತು ನೆಡುವ ಆಶೆ.

  ತೆಕ್ಕೆಯೊಳಗಿಳಿದ ಪದಗಳ
  ಉಸಿರೊಳಗೆ ಬಚ್ಚಿಟ್ಟುಕೊಂಡೇ
  ಕಾಯ್ದುಕೊಂಡೇ ಹಾಡು ಹೆಣೆಯುವುದೆಂದರೆ
  ರಾತ್ರಿಯಲ್ಲೂ ಹಗಲಿನ ಪಾಳಿ.

  ~

  ಊರುಗೋಲಿನ ಸುತ್ತ

  ಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ.
  ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ
  ಮಲ್ಲಿಗೆ ಅರಳಿಸುತ್ತಾಳೆ.
  “ಅಮ್ಮಾ. ಬಸಳೇ ಸೊಪ್ಪುತಂದಿ,
  ಏಗಟ್ಟೇ ಮುರ್ಕಂಡ ಬಂದಿನ್ರಾ
  ತಾಜಾನೇ ಇತು.. ಬರ್ರಾ ಬ್ಯಾಗೆ,
  ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕಾಗುಲಾ.”

  ಊರುಗೋಲಿನ ಟಕ್‍ಟಕ್ ಸದ್ದು
  ನೆಲದ ಬಸಿರಿಂದಲೇ ಹುಟ್ಟಿದಂತೆ.
  ಒಳಕೋಣೆಯಿಂದ ಒಂಟಿದನಿ
  “ಬಂದೇತಡಿಯೇ, ಈ ಮುದುಕಿಗೆ
  ಕಾಲ ಮುರ್ಕಾಅಂತ್ಯಾ..ನಾನೇನ ಹೊಂತಗಾರಿಣ್ಯೇ?”

  ಬಾಡಿದ ಮುಖದತುಂಬಾ
  ಸಿಡಿಲು ಕೊರೆದ ಚೀರುಚೀರು
  ಸೀಳು ಗೆರೆಗಳು ಮುಗುಳ್ನಗುತ್ತವೆ. ಮುದ್ದಾದ
  ನಗು ಚೆಲ್ಲುವ ಇವಳ ನೋಡುತ್ತಾ
  ಒಂದಾನೊಂದು ಕಾಲ ನೆನಪಾಗುತ್ತದೆ.

  ದುಂಡು ಮಲ್ಲಿಗೆ ಧರಿಸಿ ಬಂದ ಆಕೆ ಹೊತ್ತ
  ಬುಟ್ಟಿಯ ಕೆಳಗಿಟ್ಟು ಇರ್ಕಿ ತೆಗೆದಿರಿಸಿದಳು
  ಬಾಗಿದತುರುಬನ್ನುತಿರುತಿರುಗಿ
  ಬಿಚ್ಚಿ ಸರಿ ಮಾಡಿದಳು.
  “ಅಮ್ಮಾ.. ಏನ ಬೇಕ್ರಾ..ಬಸಳಿ, ಹರ್ಗಿ, ಬದನೀ.
  ಎಲ್ಲಾತಂದಿ”

  ಮೃದುಭಾವಗಳು ವಿನಿಮಯಗೊಳ್ಳುತ್ತ
  ಹಸಿರು ತರಕಾರಿಗಳು ನಳನಳಿಸುವಂತೆ
  ಬೆವರಿಳಿದ ಮುಖದಲ್ಲೂಒಣಗಿದಗಂಟಲಲ್ಲೂ
  ಉಕ್ಕುತ್ತದೆ ಜೀವದ್ರವ್ಯ. ನುಜ್ಜುಗುಜ್ಜಾದ ಕೈ
  ಬೆಲ್ಲ ನೀರುಡಿಸುತ್ತದೆ.

  “ಪಾಪ ಮುದುಕಿ,ನೌಕ್ರಿ ಮಾಡು ಮಕ್ಕಳೆಂತಕೆ,
  ನೋಡುದಿಲ್ಲಾ ಬಿಡುದಿಲ್ಲಾ, ಸುಮ್ನೆಈದ ಸಾಯ್ತಿದು ಮುದ್ಕಿ”
  ಅಂದುಕೊಳ್ಳುತಾ ಹಣ ಸಂಚಿಗೆ ಸೇರಿಸಿ
  ಅಂಗಳವನ್ನೆಲ್ಲಾ ಗುಡಿಸಿಟ್ಟು ಹೋಗುತ್ತಾಳೆ.

  “ಪ್ರಾಯದ ಹೆಣ್ಣು, ಎಷ್ಟೊಂದುಕಷ್ಟ. ಅಯ್ಯೋ ಹೆಣ್ಣಜನ್ಮವೇ”
  ಉಸುಗುಡುತ್ತಾ ಊರುಗೋಲು ಮೆಟ್ಟಿಲೇರಿ ಕೋಣೆ ಸೇರುತ್ತದೆ.

  —————

  ನಾಗರೇಖಾ ಗಾಂವಕರ

  ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

  Share

  Related Post

  Related Blogpost

  One Comment For "ತಂಪು ಕರುಣೆಯ ಹಾಲು
  ನಾಗರೇಖಾ ಗಾಂವಕರ
  "

  1. nagraj Harapanahalli
   2nd August 2017

   ಮೊದಲ ಕವಿತೆ ಬಿಗಿ ಹಾಗೂ ಧ್ವನಿ ಪೂರ್ಣ. ಆಂಗ್ಲ ಕಾವ್ಯದ ಪ್ರಭಾವ . ಎರಡನೇಯದು ದೇಶಿ ಸೊಗಡು. ಕಥನ ಕವನ ಮಾದರಿ.

   ಮೊದಲ ಕವಿತೆ ಹಿಡಿಸಿತು. ಧ್ವನಿ ಪ್ರತಿಧ್ವನಿಸಿತು. ಕಾವ್ಯ ತಕ್ಷಣಕ್ಕೆ ದಕ್ಕಬಾರದು. ಓದಿದಾಗ ಇಷ್ಟಿಷ್ಟೇ ಎದೆಗೆ ಇಳಿಯಬೇಕು.‌ಹಾಗಿದೆ ಅದು ಕವಿತೆ. ಓದುಗನ ವ್ಯಾಪಾಕ ಓದಿನ ಮತ್ತು ಅನುಭವಕ್ಕೆ ತಕ್ಕಂತೆ ಅರ್ಥವ್ಯಾಪ್ತಿ ಹಿಗ್ಗುತ್ತದೆ.ಹಾಗಿದೆ ನಾಗರೇಖಾ ಅವರ ತಂಪು ಕರುಣೆಯ ಹಾಲು.

   Reply

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಮತ್ತೆ ಮರಳಲಿಲ್ಲ

   ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ಜಾಡಿಡಿದು ಶ್ಯಾಮ‌ಸುಂದರನ ಸೇರಲು.. ನವಿಲಿನ ಜೋಡಿಗಳೆರಡು ನಲಿವಿನಿಂದ ಕುಣಿತಿವೆ ಜಿಂಕೆ ಹಿಂಡುಗಳೆಲ್ಲಾ ತನ್ಮಯವಾಗಿ ನಿಂತಿವೆ.. ಅಗೋ ಅಲ್ಲಿ ಗೋಪಿಕೆಯರೆಲ್ಲಾ ನರ್ತಿಸ ತೊಡಗಿದ್ದಾರೆ ಒಬ್ಬಳ ಸೆರಗು ಜಾರಿ ಮೊಲೆಹಾಲು ...

  • 4 days ago No comment

   ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…

   ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ಕಣ್ಣು ತೆರೆದ ಮೌನದ ಮೇಲೆ ಮಾತ ಬಿಂಬದ ಅಚ್ಚು, ಸುಗಂಧ ಮೆತ್ತಿದ ನೆನಪು ತೊಳೆದಷ್ಟೂ ಝಳಪಿಸುವ ಕತ್ತಿಯಲಗಿನಂತೆ, ಗಂಟಿಲ್ಲದ ಮನಸ ಪೋಣಿಸಿದಷ್ಟೂ ನುಣುಚಿಕೊಂಡರೆ ಹೆಣಿಗೆ ಶೂನ್ಯ ಬರೀ ...

  • 7 days ago No comment

   ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು

   ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ಓದಬೇಕು. ಕಾವ್ಯ ಹರಿವ ನದಿಯಂತೆ. ಕವಿತೆ ಅಂದರೆ ಬೆಂಕಿ ಮತ್ತು ಬೆಳಕು. ಕಾವ್ಯ ಕ್ಷಣ ಭಂಗುರವನ್ನು ಗೆಲ್ಲುವ ಪ್ರಕ್ರಿಯೆ, ಸಾವನ್ನು ಮುಂದೂಡುವ ಶಕ್ತಿ ಉಳ್ಳದ್ದು….ಹೀಗೆ ಏನೆಲ್ಲಾ ಕವಿತೆಯನ್ನು ...

  • 7 days ago No comment

   ಕಿಡಿ

   ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ದುಡ್ಡಿನ ದೊಂಬರಾಟ ಸತ್ತ ದೇಹ ಮಣ್ಣಾಗುವಾಗ ಮತ್ತೆ ಬೆತ್ತಲೆ.

  • 1 week ago No comment

   ಸ್ವಾತಂತ್ರ್ಯದ ಸೊಬಗು

   ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ಕಣ್ಣಿಗೆ ಮಣ್ಣೆರಚುತ್ತಿದ್ದಾನೆ. ಒಂದೆರಡು ಬಾರಿ ನನ್ನ ಸಮ್ಮುಖದಲ್ಲೇ ಆತ ಈ ಬಗ್ಗೆ ಕಾರ್ಮಿಕನನ್ನು ಎಚ್ಚರಿಸಿದ್ದಾನೆ. ನಂತರವೂ ಆ ಕಾರ್ಮಿಕ ತನ್ನ ಕಣ್ಣೆದುರಿಗೇ ಮೈಗಳ್ಳತನವನ್ನು ಮುಂದುವರಿಸಿದಾಗ ಆತನಿಗೆ ಪಿತ್ತ ...


  POPULAR IN CONNECTKANNADA