Share

ಛಾಯಾ ಅಕ್ಷರಗಳ ಬೆಳಕು
ಓದುಗರ ಕೈಗೆ 'ಹಿಮಗಿರಿ ಯಾನ'

  • Page Views 118
  • ಲೇಖಕಿ, ರಂಗಕರ್ಮಿ ಛಾಯಾ ಭಗವತಿಯವರ ಪ್ರವಾಸ ಕಥನ ‘ಹಿಮಗಿರಿ ಯಾನ’ ಬಿಡುಗಡೆಯಾಗಿದೆ. ತುಮಕೂರಿನ ಗೋಮಿನಿ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಆಗಸ್ಟ್ 6ರಂದು ಬೆಂಗಳೂರಿನ ನಯನ ಸಭಾಂಗನದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಓದುಗರ ಕೈಸೇರಿತು.

    “ಛಾಯಾ ಒಂದು ನಿರ್ಮಲ ಮನಸ್ಸಿನ ಜೀವ, ನಿಷ್ಕಲ್ಮಷ ಭಾವ.” (ಜಯಲಕ್ಷ್ಮಿ ಪಾಟೀಲ್)
    “ಛಾಯಾ ಎಂದರೆ ಮಾತೇ ಇಲ್ಲದೆ ತಣ್ಣಗೆ ಬೆಳಗುವ ಹಣತೆ. ಅದಕ್ಕೆ ಬೆಳಗಿ ಗೊತ್ತೇ ಹೊರತು ಯಾರನ್ನೂ ಸುಟ್ಟು ಗೊತ್ತಿಲ್ಲ.” (ಸಂಧ್ಯಾ ರಾಣಿ)

    ಇಂಥ ಛಾಯಾ ಅವರ ಅಕ್ಷರಗಳನ್ನು ಅಂತರಂಗಕ್ಕೆ ಇಳಿಸಿಕೊಳ್ಳಲೇಬೇಕು ಓದುಗ.

    ಛಾಯಾ ಅವರ ಈ ಕೃತಿ ಜೊತೆ ಇತರ ಮೂರು ಕೃತಿಗಳೂ ಇದೇ ಸಮಾರಂಭದಲ್ಲಿ ಬಿಡುಗಡೆಗೊಂಡವು.

    ಎ ಎನ್ ರಮೆಶ್ ಗುಬ್ಬಿ ಅವರ ‘ಶಕ್ತಿ ಮತ್ತು ಅಂತ’ ಅವಳಿ ನಾಟಕಗಳು, ವಿ ಗೋಪಕುಮಾರ್ ಅವರ ‘ಸಾವಿರ ರೆಕ್ಕೆಗಳ ಪುಸ್ತಕ’ ನ್ಯಾನೋ ಕಥೆಗಳು ಹಾಗೂ ಗುಬ್ಬಚ್ಚಿ ಸತೀಶ್ ಅವರ ‘Boys Of The Dawn’ ಪ್ರಬಂಧ ಸಂಕಲನ.

    ಸಮಾರಂಭದ ಕೆಲವು ನೋಟಗಳು ಇಲ್ಲಿ:

    Share

    Related Post

    Related Blogpost

    One Comment For "ಛಾಯಾ ಅಕ್ಷರಗಳ ಬೆಳಕು
    ಓದುಗರ ಕೈಗೆ 'ಹಿಮಗಿರಿ ಯಾನ'
    "

    1. nagraj Harapanahalli
      7th August 2017

      ಅಭಿನಂದನೆಗಳು ಛಾಯಾ . ಪ್ರವಾಸ ಕಥನ ಚೆನ್ನಾಗಿ ಬಂದಿರುತ್ತದೆ ಎಂಬ ವಿಶ್ವಾಸ ನನಗೆ.

      Reply

    Leave a comment

    Your email address will not be published. Required fields are marked *

    Recent Posts More

    • 4 days ago No comment

      ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ

      1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ಗೋಚರಿಸುತ್ತಿತ್ತು ಇರುಳ ಮೋಡಿತನ ಬಯಲುಗೊಳಿಸುವ ಅಸಂಖ್ಯ ನಕ್ಷತ್ರದ ನಾಡಿಗಳಿರುವಾಗ ಮಿಥ್ಯದ ಬೆನ್ನೇರಿ ಸಾಲುದೀಪದ ನಡಿಗೆ ಅಳಿಸಲು ಹೇಗೆ ಸಾಧ್ಯ! 2 ನಿನ್ನ ಎದೆಯೊಳಗೆ ಅದೆಂಥ ಎದೆಗಾರಿಕೆ ಜಗದ ...

    • 5 days ago No comment

      ಗೌರಿ : ದ್ವಿಪದಿಗಳು

      1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ಗುಂಡಿಕ್ಕಿದರು ಸಾಗರವಾದಳು 4 ಕಿಡಿಯನ್ನು ನಂದಿಸಲು ನೋಡಿದರು ಗೆಳತಿ ಬೆಳಕಿನ ಹೊನಲಾಗಿ ಬಿಟ್ಟಳು 5 ಬಂದೂಕು ಗುಬ್ಬಿಗಳ ಗೂಡು ಹುಡುಕಿಕೊಂಡು ಹೋಗಿ ಗುಂಡಿಕ್ಕತೊಡಗಿತು ನಾವು ಬಂದೂಕಿನ ನಳಿಕೆಯಲ್ಲಿ ...

    • 6 days ago No comment

      ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

      ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

    • 7 days ago No comment

      ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

      ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

    • 1 week ago No comment

      ಒಂದು ಗಜಲ್; ಒಂದು ಗೆಜ್ಜೆ

      ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...


    POPULAR IN CONNECTKANNADA

    Type in
    Details available only for Indian languages
    Settings
    Help
    Indian language typing help
    View Detailed Help