Share

ಮತ್ತೆ ನೆನೆವ ಕವಿತೆಗಳು
ಪೂರ್ಣಿಮಾ ಸುರೇಶ್

ಮಳೆಗಾಲದ ಹಳಹಳಿಕೆಗಳು

ಹಿಂದಿನ ಮಳೆಗಾಲದಂತೆ
ಈ ಮಳೆಗಾಲವೂ
ಧೋ…ಎಂದು ಸುರಿದು
ನನ್ನ ಅಂಗಳದ ತೋಡಿನಲ್ಲಿ
ನದಿಯ ಹುಟ್ಟಿಸಿದೆ

ಅದೇ ಮೋಡಿ
ಜೊತೆ ಕರೆವ ಧಾವಂತ
ಅದೆಷ್ಟು ಬಾರಿ
ಈ ಸೆಳೆತದಲ್ಲಿ ನಡೆದಾಡಿದ್ದು
ಹನಿಯುವ ಮಳೆಗೆ ಒದ್ದೆಯಾಗಿದ್ದು
ದಂಡೆಯಲ್ಲೇ ಜಾರಿ
ಧಕ್ಕೆಗೊಂಡಿದ್ದು
ಒಳಗೆಲ್ಲಾ ನಡುಕ ತುಂಬಿದ್ದೂ
ನೆನಪಿದೆ

ನದಿಗೆ ಹರಿವಿನ ಪುಳಕ
ಗುನುಗುತ್ತ ನಡೆಯುತ್ತಿತ್ತು
ನನಗೋ ಅದರ ಗಮ್ಯ
ನೋಡುವ ತವಕ
ಹಿಂಬಾಲಿಸುತ್ತಿದ್ದೆ

ಒಂದಷ್ಟು ದೂರ ಜೊತೆ ಸಾಗಿ
ಬಾಹುಗಳನು ಅಗಲಿಸಿ
ಕೇಕೆ ಹಾಕಿ ಓಡಿಬಿಡುತ್ತಿತ್ತು
ನಾನು ಮತ್ತೆ
ಒದ್ದೆ ಮಣ್ಣ ಪಾದಗಳಿಂದ
ಹಿಂತಿರುಗುತ್ತಿದ್ದೆ
ಅಂಗಳದಲಿ
ಪುಟ್ಟದಾಗಿ ಬಳಕುವ
ಆ ಒರತೆಯ
ಓದುವ ಯತ್ನ
ಅದರ ಒಡಲಲ್ಲಿ
ಜಾದೂವಿನಂತೆ ಚಲಿಸುವ ಪುಟ್ಟ ಪುಟ್ಟ ಮೀನು
ನನಗೋ ಅಚ್ಚರಿ
ನಾನು ಮತ್ತೆ ಮತ್ತೆ ನೆನೆಯುತ್ತಿದ್ದೆ

ಇದೀಗ ಕರೆಯದಿರು
ಒದ್ದೆಯಾಗುವ ಚಿಂತೆಯಿಲ್ಲ
ಜಾರುವ ಭಯವಿಲ್ಲ
ಒಳ ಉರಿಗೆ ಚಳಿ ಸುಟ್ಟಿದೆ
ಆದರೂ ಬರಲಾರೆ

ಹಠ ಮಾಡದಿರು:
ಎಂದಾದರೂ ಕೇಳಿದೆಯಾ?
“ತಿರುವಿನಲ್ಲಿ
ನಾನು ಕನಸ ಬೆನ್ನಟ್ಟಿ ಓಡಿದಾಗ
ನೀ ಹೇಗೆ ವಾಪಾಸಾದೆ?”

ಬಿಡು, ನೀನೂ ಒಣಗಿ
ನವೆದಾಗ ನಾನಾದರೂ
ಏನು ಮಾಡಿದೆ?

ಜೊತೆಯಾಗಿ
ಒಂದಷ್ಟು ದೂರವಾದರೂ
ಒಂದಷ್ಟು ಕಾಲ ನಡೆದೆವು

ಈಗ ನನಗೂ ಆಸೆ
ಭುಜಕ್ಕಂಟಿ
ಕುಸಿಯುವ ದಂಡೆಯಲ್ಲೆ
ನಡೆದಾಡಬೇಕು
ಮೈಮನಗಳ ಒದ್ದೆಯಾಗಿಸಬೇಕು
ಆ ತಿರುವಿನಲ್ಲಿ
ನೀನು ಬಾಹುಗಳ ತೆರೆದು
ಸಂಭ್ರಮದ ತಾರಕದಲಿ ಸ್ವರವೇರಿಸುವಾಗ
ಒಂದು ಬಾರಿಯಾದರೂ
ಅವನ ಬಾಹುಗಳು ಅರಳಿ
ನನ್ನ ತೆಕ್ಕೆಯಲಿ ತುಂಬಿಕೊಳ್ಳಬೇಕು

ಸ್ವಾರ್ಥಿ ಅನ್ನದಿರು
ಅದು ಕೊನೆಯ ಮಳೆಗಾಲವಾದರೂ ಆಗಬಹುದು…
-ಆಗಲಿ ಬಿಡು

~

ನನ್ನೊಳಗ ಜಿನುಗು

ಜಿನುಗುತ್ತಲೇ ಇದೆ
ಅದಾವುದೋ ಸೂತ್ರಕ್ಕೆ
ಕಟ್ಟುಬಿದ್ದಂತೆ
ಹನಿ ಹನಿ
ತೊಟ್ಟಿಕ್ಕುತ್ತಲೇ ಇದೆ

ದಣಿವಿರದಂತೆ
ಆಮೆಯಂತೆ ಕತ್ತನು
ಹೊರಚಾಚಿ
ಹಣುಕುತ್ತೇನೆ
ಗೊಣಗುತ್ತೇನೆ

ಇನ್ನೂ ನಿಂತಿಲ್ಲ
ನನ್ನ
ಹೊರಗೆ ಕಾಲಿಡದಂತೆ
ಬಂಧಿಯಾಗಿಸಿದೆ
ನನ್ನೊಳಗೆ

ಒದ್ದೆಯಾಗುತ್ತಲೇ
ಮುದಗೊಳ್ಳುತ್ತೇನೆ
ತೊಟ್ಟಿಕ್ಕುತ್ತಲೇ
ಹನಿಹನಿಯಾಗುತ್ತೇನೆ
ಜಿನುಗುತ್ತಲೇ ಇದ್ದೇನೆ

– ಹಾಂ, ಮಳೆ ಜಿನುಗುತ್ತಿದೆ.
ಮಾಗಿದ ಚಳಿಯೊಂದು ಒಳಗಿದೆ.

——-

ಪೂರ್ಣಿಮಾ ಸುರೇಶ್

ಉಡುಪಿ ಜಿಲ್ಲೆಯ ಹಿರಿಯಡಕ ಹುಟ್ಟೂರು. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಎಂಎ ಪದವಿ. ಎರಡು ಕವನ ಸಂಕಲನಗಳು ಪ್ರಕಟಿತ. ಸುಭಾಷಿತ – ಮಧುಸಂಚಯ ಹಾಗೂ ಕನ್ನಡ – ಕೊಂಕಣಿ ಶಬ್ದಕೋಶ ಇತರೆ ಪುಸ್ತಕಗಳು. ಅಭಿನಯ, ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ, ನಿರೂಪಣೆ ಇನ್ನಿತರ ಹವ್ಯಾಸಗಳು.

Share

One Comment For "ಮತ್ತೆ ನೆನೆವ ಕವಿತೆಗಳು
ಪೂರ್ಣಿಮಾ ಸುರೇಶ್
"

 1. nagraj Harapanahalli
  23rd August 2017

  # ಮಳೆಯೊಂದಿಗೆ ನದಿಯ ಮಾತುಕತೆ ,ಕನಸು ,ಒಂದಿಷ್ಟು ನನಸು. ಮತ್ತೊಂದಿಷ್ಟು ಕನಸು ಕಟ್ಟುತ್ತಾ ಸಾಗುವ ಕವಿತೆ …..ನದಿಯೊಂದು ಮಾತಾಡಿದಂತಿದೆ. ಇಷ್ಟವಾಯಿತು.
  * ಎರಡನೇ ಪದ್ಯ , ಕಡಿಮೆ ಪದಬಳಸಿ ಹೆಚ್ಚು ವ್ಯಾಪಿಸಿಕೊಳ್ಳುವ ಗುಣ ಹೊಂದಿದೆ.

  Reply

Leave a comment

Your email address will not be published. Required fields are marked *

Recent Posts More

 • 13 hours ago No comment

  ಯಾವುದೋ ಅಜ್ಞಾತ ಕಣ್ಣೀರಿನ ಕಥೆ

      ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

 • 18 hours ago No comment

  ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

      ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

 • 2 days ago No comment

  ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

      ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

 • 2 days ago No comment

  ಗಟ್ಟಿಗಿತ್ತಿ

      ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...

 • 3 days ago No comment

  ಇರುವುದು ಮತ್ತು ಇಲ್ಲದಿರುವುದು

        ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ಇದ್ದಲ್ಲೇ ಇರುತ್ತದೆನ್ನುವುದೂ… ಇರುವುದು ಇದ್ದೂ ಇಲ್ಲದಂತೆ ಇಲ್ಲದಿರುವುದು ಇಲ್ಲದೆಯೂ ಇದ್ದಂತೆ ಇರುತ್ತದೆ: ಮಗುವಿನೊಳಗಿನ ನಗುವಿನಂತೆ. ನನ್ನಂತೆ ನಿನ್ನಂತೆ ಅದರಂತೆ ಇದರಂತೆ ಎದರಂತೆ ಎಲ್ಲದರೊಳಗಿನ ಆತ್ಮದಂತೆ… ಇರುತ್ತದೆ ಇದ್ದೂ ...


Editor's Wall

 • 07 December 2017
  4 days ago No comment

  ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                        ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

 • 05 December 2017
  6 days ago No comment

  ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

          ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

 • 04 December 2017
  1 week ago No comment

  ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

  ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

 • 03 December 2017
  1 week ago One Comment

  ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

            | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

 • 30 November 2017
  2 weeks ago No comment

  ಪೀಹೂ ಎಂದರೆ ಹಾಡುವ ಹೂ…

                        ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...