Share

ಮತ್ತೆ ಮತ್ತೆ ನೆನಪಾಗುವ ಬೋದಿಲೇರ್
ನಾಗರಾಜ್ ಹರಪನಹಳ್ಳಿ

  • Page Views 119
  • ದಾ ಏನನ್ನಾದರೂ ಕುಡಿದಿರು
    ಎಂದ
    ಕಡು ವ್ಯಾಮೋಹಿ ಮನುಷ್ಯ ಕವಿ
    ಇದೀಗ
    ನನ್ನ ದೇಶದಲ್ಲಿ ಹುಟ್ಟಬೇಕಿತ್ತು

    ಕಾವ್ಯಕ್ಕಾಗಿ
    ಅವನೆದರು ಬೆತ್ತಲಾದ ಇಶಾಗುಪ್ತಾ, ಕಲ್ಕಿಯ ಚಿತ್ರಗಳಿರಬೇಕಿತ್ತು
    ನೆಂಚಿಕೊಳ್ಳಲು
    ಲಂಕೇಶರ ಪದ್ಯಗಳಿರಬೇಕಿತ್ತು
    ತನ್ನೊಂದಿಗೆ ತಾನೇ ಪೈಪೋಟಿಗೆ ಬಿದ್ದಂತೆ ಬರೆಯುತ್ತಿದ್ದನೇನೋ ಅವನು

    ***

    ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸಿ ಆರಾಧಿಸುವ
    ಕ್ಷಣಮಾತ್ರದಲ್ಲಿ ಅದೇ ಹೆಣ್ಣ ತೋಳುಗಳಲ್ಲಿ, ತೊಡೆಗಳಲ್ಲಿ ತಾಯ್ತನವನ್ನೂ ಒಡಹುಟ್ಟಿದವಳನ್ನೂ ಕಾಣುವ
    ಮನಸನ್ನು ಸ್ವಚ್ಚಂದ ಗಾಳಿಯಲಿ
    ಹರಿಬಿಡುವ
    ಓ ಬೋದಿಲೇರ್ ಮಹಾಶಯ
    ನನ್ನ ದೇಶದ
    ಅರೆನಗ್ನ ಸುಂದರಿಯರ
    ಸರೋವರದಲ್ಲಿ ನಿನಗೆ ಕಾವ್ಯದ
    ಬುಟ್ಟಿ ಬುಟ್ಟಿ ಮೀನುಗಳು
    ಬೇಕಾಬಿಟ್ಟಿ ಸಿಗುತ್ತಿದ್ದವು

    ***

    ತೊಡೆ ತೋಳು ಬೋಟಿ ಖಲೀಜದ
    ಸಮೂಹಸನ್ನಿಯ ಸನ್ನಿಲೀಯೋನ್
    ಸುಂದರಿಯಂತವರ ಪಡೆಯೇ ಇದೆ ಇಲ್ಲಿ ಈ ದೇಶದಲ್ಲಿ…
    ಕ್ಯಾಮರಾಗಳ ಎದುರು ಎಗ್ಗಿಲ್ಲದೇ ಬೆತ್ತಲಾಗುವ ಸುಂದರಿಯರು
    ನಿನ್ನ ಕಾವ್ಯದ ಕ್ಯಾನವಾಸ ಮೊನಚು
    ಪೆನ್ನಿನ ನಿಬ್ಬಲ್ಲಿ ಅಳಿಸಲಾದ ಕಲಾತ್ಮಕ ಚಿತ್ರಗಳಾಗುತ್ತಿದ್ದರು

    ***

    ನಿನ್ನ ಕಾವ್ಯದ ಅಕ್ಷರಗಳ ಎದೆ ತುಂಬಿಕೊಳ್ಳಲು ಕಾದೆ
    ಒಂದಿಷ್ಟು ದಿನಗಳಿಂದ
    ಬರಲಿಲ್ಲ ನೀನು
    ಕಳುಹಿಸುತ್ತೇನೆಂದ ಗೆಳತಿ
    ನಿನ್ನ ಕಾವ್ಯದೊಂದಿಗಿನ ಸಲ್ಲಾಪದಲ್ಲಿ ಕಳೆದುಹೋದಳು

    ಬಿಡಲಿಲ್ಲ ಹುಡುಕಿದೆ
    ಕನ್ನಡ ಕವಿಗಳ ಎದೆಯಲ್ಲಿ ಜೀವಂತವಾಗಿದ್ದ ನೀನು ಸಿಕ್ಕೆ…ನಿನ್ನ ಅತ್ಯಂತ ಉಲ್ಲಾಸದ ಆಕೆಯೂ ಸಿಕ್ಕಳು….
    ಒಂದಷ್ಟು ದಿನಕ್ಕಾಗಿ
    ನಿನ್ನ ಕಡು ವ್ಯಾಮೋಹವ
    ಕಡಪಡೆದಿದ್ದೇನೆ
    ಮತ್ತೂ ಮತ್ತೂ ಓದುತ್ತಿರುವೆ
    ಋಣಿಯಾಗಿಯೂ ಇರುವೆ
    ನಿನ್ನ ಪರಿಭಾಷೆಗೆ.

    ————-

    ನಾಗರಾಜ್ ಹರಪನಹಳ್ಳಿ

    nhಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ  ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಸದ್ಯ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ, ಲೋಕದರ್ಶನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ  ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.

    Share

    Related Post

    Related Blogpost

    Leave a comment

    Your email address will not be published. Required fields are marked *

    Recent Posts More

    • 4 hours ago No comment

      ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

      ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

    • 18 hours ago No comment

      ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

      ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

    • 1 day ago No comment

      ಒಂದು ಗಜಲ್; ಒಂದು ಗೆಜ್ಜೆ

      ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

    • 1 day ago No comment

      ಬದುಕು ಬರಿ ಗಿಲೀಟು

      (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

    • 2 days ago One Comment

      ನಾನು ಮತ್ತು ನೀನು

      ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


    POPULAR IN CONNECTKANNADA

    Type in
    Details available only for Indian languages
    Settings
    Help
    Indian language typing help
    View Detailed Help