Share

ಎದೆಯಾಳದಲಿ ಮಧು ಹುಟ್ಟಲಿಲ್ಲ
ನಾಗರೇಖಾ ಗಾಂವಕರ

 • Page Views 84
 • ಏರಿದ ಏಣಿಯ ನೂಕುವ ನಡಿಗೆ

  ತೆರೆದುಕೊಂಡ ಏಣಿಯ ಮೆಟ್ಟಿಲುಗಳು
  ವಿಕಸನದ ಕೊಂಡಿಗಳ ಹರವು ಬಿತ್ತರಗೊಂಡಿತು.
  ಆ ದಟ್ಟಕಾನನದ ಹಸಿರು ಮರಗಳೊಡನೆಯೊಡನಾಟ
  ಅವನದು?
  ಮುತ್ತನೊತ್ತುವ ಎಲೆಗಳ ಕೂಡ
  ಹಸಿರ ಉಸಿರ ಹೊತ್ತು
  ಹಾರುತ್ತಿದ್ದ ಅತ್ತಿಂದಿತ್ತ.
  ಶಕ್ತ ನೆಲದ ಸಂದಿಗೊಂದಿಗಳ ಬದುಕ ಹಾಡಿನ ಜಾಡಿದು.

  ಅರೇ!ಅವನದೇ ಅಲ್ಲವೇ
  ಗಡುಸಾದ ಹೆಜ್ಜೆಗಳ ಊರು
  ಉಬ್ಬೆತ್ತಿದೆದೆ ಕೊರಳು ಬಲಿತ ಜಂಘಾಬಲ
  ಅವನ ಏಣಿ ಆಗಸಕ್ಕೆ
  ನೆಲಕೆ ನಾಲಗೆಯೊತ್ತಿದ ರಸ ಸವಿಯಲೊಲ್ಲದ
  ದುಸ್ತರಗೊಂಡ ಸ್ತರಸ್ತರಗಳು
  ಮಸುಕಾಯಿತು ಹಸಿರ ಬಲೆ ಎದುಸಿರು ಏಗುತ್ತ
  ಕೃಶಶರೀರ, ತಪನ ತಂಪಿಲ್ಲ
  ಮೆಲುಕು ದಿವಟೀಗೆ
  ಉರಿಯ ಉತ್ತಿದ್ದು ಬಿತ್ತಿದ್ದು ಉಣ್ಣಲೇ ಬೇಕು
  ಇಂದಲ್ಲ ನಾಳೆ.

  ಮೊದಲಿನಂತಿಲ್ಲದವನ ಮೊಗ ಮುಖವಾಡವೇ?
  ಸಹಮತ ಇರದ ಸಹಬಾಳ್ವೆಗೆ ದಳದಳನೆ
  ಉದುರಿದ ದಳಗಳಲಿ ತಂಬೆಲರ ಪಸರೆಂತು?
  ಕಪ್ಪು ಟಾರು ಹುಡಿಯೆದ್ದು ಕೆಂಪಾದ ನೆಲ
  ಕಾರದ ಸುಳಿವಿಲ್ಲ
  ಧಗೆಯೇರಿದ ಬಗೆಗೆ ಹಸಿರು ಕುಸುರಿ ಕಟ್ಟಲಿಲ್ಲ
  ಎದೆಯಾಳದಲಿ ಮಧು ಹುಟ್ಟಲಿಲ್ಲ.
  ನೆಲಗಾಣದ ನಡಿಗೆ ಗೆಜ್ಜೆ ಕಟ್ಟಿದರೂ
  ನಗಾರಿ ನುಡಿಯಲಿಲ್ಲ ಮನ

  ನವಿರುಸಿರ ಉಸುರಿದಿಳೆ ಕಂಗೆಟ್ಟಳು
  ಜೊತೆ ಬೆಳೆದ ತರುಲತೆ ಕಳೆಗೆಟ್ಟವು
  ಪೊರಕೆಯಾಟದ ಸಂತೆಯಲಿ
  ಟೊಂಕ ಕಟ್ಟಿ ನಿಂತವನ
  ಬಿಂಕದೆದೆಗೆ ನಾಳೆ ಬೆಂಕಿ ಸುರಿಯದೇ?

  ~

  ಬಯಸಿದಂತೆ ಹೊಸೆಯಲಾಗದ ನೂಲು

  ದೆಗೂಡಲ್ಲಿ ಅವಿತುಕೊಂಡ ಎಳೆನೂಲನ್ನು ಬಿಡದೆ
  ಹೊಸೆಯುವುದು ಮುಗುಮ್ಮಾಗಿ ಅಭ್ಯಾಸವಾಗುವುದು
  ದಿನಕಳೆದಂತೆ
  ಸಾವಧಾನಿಯಾದ ಆಕೆಗೂ ಹೊಸತಲ್ಲ
  ಅವನ ನೆನಪಾದಾಗಲ್ಲೆಲ್ಲಾ ನಾಚಿಕೆ ಕೊಂಚ
  ತಲೆಕೆಳಗಾಗುತ್ತದೆ.
  “ಎಂದು ಬರುವೆ” ಎನ್ನುವ ಮಾತು ಅರ್ಧದಲ್ಲೆ ನಿಂತು
  ಮನಸ್ಸು ಚಡಪಡಿಸುತ್ತದೆ.

  ಝಳದ ಕಾವು ಏರಿದಂತೆಲ್ಲಾ
  ಕದಡಿದ ಕೊಳದ ಸುತ್ತ ಕಣ್ಣೀರಾಗುವ ಕುಂತಿಯರು
  ಕಡಿಮೆಯಿಲ್ಲ, ಆಲಂಭನ ವಿಭಾವದ ಆ ನೋಟ
  ತೆರೆದುಕೊಳ್ಳುವುದು ಕಣ್ಣಿನ ಗೋಲದೊಳಗೆ ಮಾತ್ರ.

  ಮರಕುಟಿಗನ ಬಾಯಿಗೆ ಬಿದ್ದ ಹುಳು
  ಮಿಂಚು ಗೊಂಚಿದರೆ ಅವನೆಂದ “ಭ್ರಾಂತಿಯ ಬೊಗಳೆ”
  ತೀರದ ಬಾಹುಗಳಲ್ಲಿ ತೂರಿಕೊಳ್ಳುವ ತುಡಿತ
  ಆಕಾಸದಂಚಿಗೆ ಮುಖಮಾಡಿ ನಿಂತರೂ
  ತಟ್ಟನೆ ಮುಸ್ಸಂಜೆ ಮೂಡಿ ಇರುಳೂ ದೀರ್ಘವಾಗುವುದು.
  ನೆತ್ತಿ ಮೇಲಿನ ಚಂದಿರ
  ಸೆಖೆಯ ಮೈಗೆ ಇಬ್ಬನಿಯ ರಗ್ಗು ಹೊದಿಸಿಬಾರದೆ?
  ಅಡ್ಡಡ್ಡ ಮಲಗಿ ಬಿಟ್ಟಿದೆ ಹೊಮ್ಮುಗಿಲು
  ಕಡಲ ಮೊರೆತ ಬುಗುರು ನೊರೆ
  ಬೆತ್ತಲಾದ ನೀರು ಮತ್ತು ಹಂಡೆ
  ಲೋಕದ ಬೆಳಕಿಗೆ ಕಣ್ಣು ನೆಟ್ಟಷ್ಟು
  ಸ್ಪಷ್ಟವಾದದ್ದು,
  ಸುಮ್ಮನೆ ಎಳೆದ ಗೆರೆಗಳು, ದಿಕ್ಕು ತಪ್ಪಿದ ದಾರಿಗಳು
  ಹಸಿರ ಕಾನನದ ಉದ್ದಗಲಕ್ಕೂ
  ಕೈ ಕೈ ಹೊಸೆದು ತೋಳಬಳಸಿ ಪಯಣಗೈದಷ್ಟು
  ತೀರುವುದೇ ಇಲ್ಲ ಹಸಿರು ಕರಗುವುದೇ ಇಲ್ಲ
  ಬಯಸಿದಂತೆಸಳೂ ಅರಳುವುದೂ ಇಲ್ಲ.

  —————

  ನಾಗರೇಖಾ ಗಾಂವಕರ

  ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help