Share

ಇದು ‘ಸಮಾಜಮುಖಿ’ ಕನಸು
ಕನ್ನಡ ಪತ್ರಿಕೋದ್ಯಮದಲ್ಲೊಂದು ಅನನ್ಯ ಪ್ರಯೋಗ

“ಸಮಾಜಮುಖಿ”

ಏನೇನೆಲ್ಲ ಇದೆ ಈ ಒಂದು ಪದದಲ್ಲಿ? ಕಾಳಜಿ, ಕೈಜೋಡಿಸುವ ಮನಸ್ಸು, ಕಟ್ಟುವ ಹಂಬಲ… ಒಟ್ಟಾರೆ ಮನುಷ್ಯತ್ವದ ಮಿಡಿತ. ಸಾಮಾಜಿಕ ಕಳಕಳಿಯನ್ನು ಒಡಲೊಳಗಿಟ್ಟುಕೊಂಡ ಚಲನೆ, ಸಮಾಜಮುಖಿ.

ಬೇರೆ ಬೇರೆ ಕಾಲಘಟ್ಟಗಳಲ್ಲಿ ಮತ್ತೆ ಮತ್ತೆ ಇಂಥ ಚಲನೆ ದೊಡ್ಡ ಮಟ್ಟದಲ್ಲಿ ಈ ನೆಲದ ಜೀವಗಳನ್ನು ಜೋಪಾನ ಮಾಡಿದೆ; ಪೀಳಿಗೆಯಿಂದ ಪೀಳಿಗೆಗೆ ಕನಸುಗಳನ್ನು ದಾಟಿಸಿದೆ; ಹೋರಾಟಗಳನ್ನು ಹದಗೊಳಿಸಿದೆ; ಅದೆಷ್ಟೋ ಬದುಕುಗಳಿಗೆ ಸಹ್ಯದ ಅನುಭವವನ್ನು ಕರುಣಿಸಿದೆ. ಹೀಗೆ ಸಮಾಜಮುಖಿಯಾಗುವ ಆರ್ದ್ರವಾದ, ತೀವ್ರವಾದ ತುಡಿತವೊಂದು ಈಗ ಚಲಿಸತೊಡಗಿರುವುದು ಕನ್ನಡ ಪತ್ರಿಕೋದ್ಯಮದಲ್ಲಿ.

ಹೌದು. ಕನ್ನಡದಲ್ಲೊಂದು ವಿಶಿಷ್ಟ ಮತ್ತು ವಿಭಿನ್ನ ನಿಯತಕಾಲಿಕ “ಸಮಾಜಮುಖಿ” ಎಂಬ ಹೆಸರಿನೊಂದಿಗೆ ಹೊರಬರುತ್ತಿದೆ. ಸಮಾನ ಮನಸ್ಕ ಆಸಕ್ತರ ದೊಡ್ಡ ಹಂಬಲದ ಬೆಂಬಲದೊಂದಿಗೆ “ಸಮಾಜಮುಖಿ”ಯ ಕನಸು ಕೈಗೂಡುತ್ತಿದೆ. ‘ಅನ್ನದ ಭಾಷೆಯ ಚಿನ್ನದ ಮಾಸಿಕ’ ಎಂಬುದು ಈ ಮ್ಯಾಗಝಿನ್‍ನ ಘೋಷವಾಕ್ಯ. ಪತ್ರಿಕೆಯ ಹೂರಣದ ಹೊಣೆ ವಹಿಸಿಕೊಂಡಿರುವವರು ಹಿರಿಯ ಪತ್ರಕರ್ತ ಮತ್ತು ಕಥೆಗಾರ ಚಂದ್ರಕಾಂತ ವಡ್ಡು ಅವರು. ಈಗಾಗಲೇ ಸ್ನೇಹ ವಲಯದಲ್ಲಿ ಅವರು ಹಂಚಿಕೊಂಡಿರುವ ಮಾತುಗಳು “ಸಮಾಜಮುಖಿ” ಬಳಗದ ಕನಸು ಮತ್ತು ಆಶಯವನ್ನು ನಿಚ್ಚಳವಾಗಿ ಹೇಳಿವೆ:

“ಆಧುನಿಕ ಬದುಕಿನ ವೇಗ ತಲ್ಲಣ ಪಲ್ಲಟಗಳ ನಡುವೆ ಚದುರಿಹೋಗಿರುವ ಸಂವೇದನಾಶೀಲ ಮನಸ್ಸುಗಳು ಒಂದೆಡೆ ಸೇರಿ ಸಂವಹನ ಸಂವಾದ ಸಾಧಿಸುವ ತುರ್ತನ್ನು ಪ್ರಜ್ಞಾವಂತರಾದ ತಾವು ಸ್ವಾಭಾವಿಕವಾಗಿ ಮನಗಂಡಿರುತ್ತೀರಿ. ಪ್ರಸ್ತುತ ಕಳವಳಕಾರಿ ಸಂಕ್ರಮಣ ಸನ್ನಿವೇಶದಲ್ಲಿ ಸಮಾನ ಮನಸ್ಕರ ಅನುಸಂಧಾನಮತ್ತು ಅರ್ಥಪೂರ್ಣ ಅಭಿವ್ಯಕ್ತಿಯ ವೇದಿಕೆಯಾಗಿ ‘ಸಮಾಜಮುಖಿ’ ಮಾಸಪತ್ರಿಕೆ ರೂಪುಗೊಳ್ಳುತ್ತಿದೆ. ಸಾಮಾಜಿಕ ಕಳಕಳಿ, ಬದ್ಧತೆ ಹೊತ್ತ ವಿವಿಧ ವ್ಯಕ್ತಿ ಹಿನ್ನೆಲೆಯ ಸುಸಜ್ಜಿತ ತಂಡ ಈ ಸಾಹಸದಲ್ಲಿ ಗಂಭಿರವಾಗಿ, ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಮೊದಲಿಗೆ, ಇದು ಕನ್ನಡ ಪತ್ರಿಕಾ ರಂಗದಲ್ಲಿ ಬೆಳಕು ಕಾಣುತ್ತಿರುವ ಅನನ್ಯ ಪ್ರಯೋಗ ಎಂಬುದನ್ನು ವಿನಮ್ರವಾಗಿ ನಿವೇದಿಸಿಕೊಳ್ಳುತ್ತೇವೆ.

ಚಂದ್ರಕಾಂತ ವಡ್ಡು

“ಅತಿ ಬೌದ್ಧಿಕತೆಯ ಭಾರ ಹೊರಿಸದೆ, ಕಳಪೆ ಸರಕಿನ ಮೂಲಕ ಓದುಗರ ಘನತೆ ತಗ್ಗಿಸದೆ, ಜಾಗತಿಕ ನೆಲೆಯಲ್ಲಿ ಕನ್ನಡದ ಕಂಪು ವಿಸ್ತರಿಸುವ ಕಾಯಕದ ಭಾಗವಾಗಿ ‘ಸಮಾಜಮುಖಿ’ ಅನಾವರಣಗೊಳ್ಳಬೇಕೆಂಬ ಉದಾತ್ತ ಆಶಯ ನಮ್ಮದು. ಕನ್ನಡವನ್ನು ವಿಶ್ವದ ಮುಖ್ಯ ಭಾಷೆಗಳಲ್ಲಿ ಒಂದಾಗಿ ಕಂಡು ಕನ್ನಡದ ಓದುಗರಿಗೆ ಜಾಗತಿಕ ಆಗುಹೋಗುಗಳ ಪರಿಚಯ ಮತ್ತು ವೈಚಾರಿಕ ಸಂವಾದಗಳ ಸಾರಾಂಶ ನೀಡಿ ಸಮಕಾಲೀನ ಚರ್ಚೆಗಳೆಲ್ಲವನ್ನು ಕನ್ನಡದಲ್ಲೇ ಮುಂದುವರಿಸಲು ಸಮಾಜಮುಖಿ ಮುಂದಾಗಿದೆ. ಕನ್ನಡ ಯುವ ಜನಾಂಗ ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ಬೌದ್ಧಿಕ ಸಾಧನಗಳೆಲ್ಲವನ್ನು ನೀಡುವ ಮೂಲಕ ಕನ್ನಡವನ್ನು ಅನ್ನದ ಭಾಷೆಯಾಗಿಸುವ ಮಹದಾಸೆಯೂ ಪತ್ರಿಕೆಗಿದೆ. ಆಪಾದನೆ ಹೊರಿಸುವ, ಘೋಷಣೆ ಕೂಗುವ ಹಾಗೂ ತೀರ್ಪು ಹೇರುವ ಬರಹಗಳ ಬದಲು ಸಾಮಾಜಿಕ ರಾಜಕೀಯ ಆರ್ಥಿಕ ಪ್ರಕ್ರಿಯೆಗಳ ಅಂತಃಸತ್ವವನ್ನು ವಸ್ತುನಿಷ್ಠವಾಗಿ ಓದುಗರೆದುರು ತೆರೆದಿಡುವ ಹಾದಿಯನ್ನು ಆಯ್ದುಕೊಂಡಿದ್ದೇವೆ. ಹಾಗೆಯೇ ಉತ್ತಮ ಸಾಹಿತ್ಯಕ್ಕೆ ಮುದುಡಿದ ಮನ ಅರಳಿಸುವ ಮತ್ತು ಮುರಿದ ಮನಸ್ಸುಗಳನ್ನು ಹೆಣೆಯುವ ಚಿಕಿತ್ಸಕ ಗುಣವಿದೆಯೆಂಬ ನಂಬಿಕೆ ಪತ್ರಿಕೆಯದು.”

ಈ ಕನಸಿನ ಸಾಕಾರವಾಗಿ ಮೊದಲ ಪ್ರಾಯೋಗಿಕ ಸಂಚಿಕೆ ನವೆಂಬರ್‍ನಲ್ಲಿ ಓದುಗರ ಮುಂದಿರಲಿದೆ. ಲಲಿತ ಪ್ರಬಂಧದಂಥ ಕಣ್ಮರೆಯಾಗುತ್ತಿರುವ ಸಾಹಿತ್ಯ ಪ್ರಕಾರವನ್ನು ಕಾಯುವ ಕಳಕಳಿ, ಛಾಯಾಚಿತ್ರ ಲೋಕವನ್ನು ಹೊಸ ಬಗೆಯಲ್ಲಿ ಕಾಣಿಸುವ ಕಾತರ, ಪುಸ್ತಕಗಳನ್ನು ಓದುಗರ ಮನಸಿಗೆ ತಲುಪಿಸುವ ತವಕ ಎಲ್ಲವೂ ಈ ಬಳಗಕ್ಕಿದೆ. ನಿಜಕ್ಕೂ ಇದು ದೊಡ್ಡ ಕನಸು.

‘ಸಮಾಜಮುಖಿ’ ಬರೀ ಪದವಲ್ಲ. ಹಾಗೆಯೇ ಒಂದು ಮಾಸಿಕದ ಹೆಸರಾಗಿ ‘ಸಮಾಜಮುಖಿ’ ಸಣ್ಣ ಹೆಜ್ಜೆಯಂತೂ ಅಲ್ಲ. ಅದು ನಮ್ಮೆಲ್ಲರ ನಿರೀಕ್ಷೆ. ಕಾಯೋಣ ನಾವೆಲ್ಲರೂ.

Share

4 Comments For "ಇದು ‘ಸಮಾಜಮುಖಿ’ ಕನಸು
ಕನ್ನಡ ಪತ್ರಿಕೋದ್ಯಮದಲ್ಲೊಂದು ಅನನ್ಯ ಪ್ರಯೋಗ
"

 1. l.chinnappa
  14th October 2017

  ಕಾತುರದಿ ಕಾಯುತ್ತಿದ್ದೆನೆ

  Reply
 2. ರವೀಂದ್ರ ಹವಲ್ದಾರ್
  14th October 2017

  ಅನ್ನದ ಭಾಷೆಯ ಚಿನ್ನದ ಮಾಸಿಕ
  “ಸಮಾಜ ಮುಖಿ”
  ನಿರೀಕ್ಷೆಯಲ್ಲಿ ಸಹ್ರೃದಯ ಓದುಗ

  Reply
 3. sachith
  14th October 2017

  ಸಮಾಜಮುಖಿ ಸಂಪಾದಕತ್ವ ವಹಿಸಿಕೊಂಡ ಸ್ನೇಹಿತರಿಗೆ ಅಭಿನಂದನೆಗಳು. ಮಾಸಪತ್ರಿಕೆ ಹಲವು ಕನಸು ಹೊತ್ತು ಬರುತ್ತಿರುವ ಪ್ರಯತ್ನ ಯಶಸ್ವಿಯಾಗಲಿ.

  Reply
 4. Aravind patel
  20th October 2017

  ಅತಿ ವೇಗದಿ ಓಡುತ್ತಿರುವ ಈ ದಿನಗಳಲ್ಲಿ
  ಸಾಮಾಜಿಕ ಕಳಕಳಿ ಎಂದರೆ ಏನು ಎಂದು
  ಪ್ರಶ್ನಿಸುವ ಕಾಲಘಟ್ಟದಲ್ಲಿ ತಮ್ಮ
  ಸಮಾಜಮುಖಿ ಪತ್ರಿಕೆ ಬರುತ್ತಿರುವುದು
  ನನ್ನಂಥವನಿಗೆ ಸಂತಸದ ಸಂಗತಿ
  “ಅನ್ನದ ಭಾಷೆಯ ಚಿನ್ನದ ಮಾಸಿಕ ”
  ಎಂಬುದು ಸಹ ಹಿತವೆನಿಸಿದೆ.
  ಮೊದಲ ಪತ್ರಿಕೆಯ ನಿರೀಕ್ಷೆಯಲ್ಲಿ
  ಡಾ. ಅರವಿಂದ್ ಪಟೇಲ್

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 3 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...