Share

ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ
ಮೋಹನ್‍ಕುಮಾರ್ ಕೊಂಡಜ್ಜಿ, ಎಂಎಲ್‍ಸಿ

ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ.

*
*
*

 

ಗೌರಿ, ಮೇಷ್ಟ್ರು ಎಂದೇ ಅನುಯಾಯಿಗಳಿಗೆಲ್ಲ ಚಿರಪರಿಚಿತರಾಗಿದ್ದ ಪಿ ಲಂಕೇಶ್ ಅವರ ಮಗಳಾಗಿದ್ದರು. ಲಂಕೇಶರು ಕನ್ನಡದ ಒಬ್ಬ ಅತ್ಯುತ್ತಮ ಬರಹಗಾರ ಮತ್ತು ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ನಿಲುವನ್ನು ದೃಢವಾಗಿ ನಂಬಿದ್ದವರು. ಅಣುವಿಜ್ಞಾನಿ ಮತ್ತು ಆಗಿನ ಸಿಪಿಎಂ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ ಕೆ ಭಟ್ ಅವರ ಪ್ರಭಾವದಿಂದಾಗಿ ನಾನು ರಾಜ್ಯದಲ್ಲಿ ಎಸ್‍ಎಫ್‍ಐನ ಭಾಗವಾಗಿದ್ದೆ. ತಮಿಳ್ನಾಡಿನಲ್ಲಿ ಡಿಎಂಕೆ ರಾಜಕೀಯ ಅಧಿಕಾರಕ್ಕೇರಲು ದ್ರಾವಿಡ ಚಳವಳಿ ಸಾಂಸ್ಕೃತಿಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ಗುರುತು ಮೂಡಿಸಿದ್ದು ಕಾರಣವಾದ ಹಿನ್ನೆಲೆಯಲ್ಲಿ ಸಿಪಿಎಂ ಕೂಡ ಈ ಕ್ಷೇತ್ರದಲ್ಲಿ ಹಣ ತೊಡಗಿಸಲು ತೀರ್ಮಾನಿಸಿತು. ಸಿಪಿಎಂಗೆ ಸೇರಿದವರಾಗಿದ್ದ ನ್ಯಾಯವಾದಿ ಜಯಪಾಲ್ ಮೆನನ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿನ ಹೂಡಿಕೆ ಸಂಬಂಧಿತ ಜವಾಬ್ದಾರಿ ವಹಿಸಲಾಯಿತು ಮತ್ತು ನಾನು ನವಶಕ್ತಿ ಫಿಲ್ಮ್ಸ್ ಪ್ರೈವೇಟ್ ಲಿ. ಕಾರ್ಯನಿರ್ವಾಹಕ ನಿರ್ದೇಶಕನಾಗಿ ನೇಮಕಗೊಂಡೆ. ನಮ್ಮ ನಿರ್ಮಾಣದ ಚಿತ್ರವಾಗಿ 1980ರ ಫಿಲಂಫೇರ್ ಮತ್ತು ರಾಜ್ಯಪ್ರಶಸ್ತಿಯನ್ನು ಗಳಿಸಿದ ‘ಎಲ್ಲಿಂದಲೋ ಬಂದವರು’ ಸಿನಿಮಾವನ್ನು ಲಂಕೇಶರು ನಿರ್ದೇಶಿಸಬೇಕೆಂದು ಅಂದು ತೀರ್ಮಾನಿಸಿದ್ದವರು ಜಯಪಾಲ್ ಮೆನನ್. ಆ ಚಿತ್ರದ ನಿರ್ಮಾಣ ಮತ್ತು ವಿತರಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ನಾನು ಲಂಕೇಶರಿಗೆ ಅತಿ ಹತ್ತಿರದವನಾದೆ. ಅದು ಮುಂದೆ ‘ಲಂಕೇಶ್ ಪತ್ರಿಕೆ’ ಹೊರಬರುವುದರಲ್ಲಿ ನಾನು ತೊಡಗಿಸಿಕೊಳ್ಳುವುದಕ್ಕೂ ಕಾರಣವಾಯಿತು.

ಆಗ ಲಂಕೇಶರು ಬೆಂಗಳೂರು ವಿವಿಯ ತಮ್ಮ ಇಂಗ್ಲಿಷ್ ಬೋಧಕನ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಬಸವನಗುಡಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಇಂದಿರಾ ಮತ್ತು ಮೂವರು ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದರು. ಅದೇ ವೇಳೆ ಎಂ ಕೆ ಭಟ್ ಅವರ ರಾಜಕೀಯ ಪ್ರೋತ್ಸಾಹದೊಂದಿಗೆ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ‘ಸಮುದಾಯ’ ರಂಗತಂಡ ರಚನೆಯಾಗಿತ್ತು.

‘ಎಲ್ಲಿಂದಲೋ ಬಂದವರು’ ಸಿನಿಮಾದ ಚಿತ್ರೀಕರಣ ನಡೆದದ್ದು ಮೈಸೂರಿನ ಕುಪ್ಪೇಗಾಲ ಎಂಬ ಹಳ್ಳಿಯಲ್ಲಿನ ವೈ ಮಹೇಶ್ ಎಂಬವರ ತೋಟದ ಮನೆಯಲ್ಲಿ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವನೂರ ಮಹದೇವ ಮತ್ತು ಶ್ರೀಕೃಷ್ಣ ಆಲನಹಳ್ಳಿ ಅವರಿಗೆ ಅತ್ಯಂತ ಆಪ್ತರಾಗಿದ್ದವರು. ಸಿನಿಮಾ ಪೂರ್ಣಗೊಂಡ ಬಳಿಕ ನಮಗೆ ಗಾಂಧಿನಗರದಲ್ಲಿ ಯಾವುದೇ ವಿತರಕರು ಸಿಗದೇ ಇದ್ದಾಗ ನಮ್ಮ ರಕ್ಷಣೆಗೆ ಬಂದಿದ್ದವರು ಆಗ ಇಡೀ ದಕ್ಷಿಣ ಭಾರತದಲ್ಲೇ ಚಿತ್ರರಂಗದ ದೊಡ್ಡ ಹೆಸರಾಗಿದ್ದ ಎಂ ಭಕ್ತವತ್ಸಲ. ಮುಂಗಣ ಹಣ ಕೊಟ್ಟದ್ದು ಮಾತ್ರವಲ್ಲದೆ, ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಥಿಯೇಟರುಗಳನ್ನೂ ನಮ್ಮ ಸಿನಿಮಾ ಬಿಡುಗಡೆಗೆ ಅವರು ಒದಗಿಸಿದ್ದರು.

ಸಿನಿಮಾ ಬಿಡುಗಡೆ ಸಂಕಟಕ್ಕಿಂತ ಮೊದಲು ಎಂ ಭಕ್ತವತ್ಸಲ ಮತ್ತು ಕೆ ಎನ್ ಹರಿಕುಮಾರ್ (ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ನಿರ್ದೇಶಕ ಮಂಡಳಿ) ಪ್ರೋತ್ಸಾಹದಿಂದಾಗಿ ಪ್ರಜಾವಾಣಿಯಲ್ಲಿ ಪ್ರತಿ ಶನಿವಾರ ರಾಜಕೀಯ ವಿಚಾರದ ಮೇಲೆ ಅಂಕಣ ಬರೆಯುವ ಅವಕಾಶ ಲಂಕೇಶರಿಗೆ ಸಿಕ್ಕಿತ್ತು. ಆಗ ಕೇಂದ್ರದಲ್ಲಿ ಜನತಾ ಪಕ್ಷ ಮತ್ತದರ ಸರ್ಕಾರ ಒಳಜಗಳ ಮತ್ತು ಅಧಿಕಾರ ಲಾಲಸೆಯ ಕಾರಣದಿಂದಾಗಿ ನೆಲ ಕಚ್ಚಿತ್ತು. ಇದೇ ರಾಜಕೀಯ ಸನ್ನಿವೇಶವನ್ನು ಎತ್ತಿಕೊಂಡು ಜನತಾ ಪಕ್ಷದ ನಾಯಕರುಗಳನ್ನು ಲಂಕೇಶರು ತಮ್ಮ ಅಂಕಣದಲ್ಲಿ ಚಿತ್ರಿಸುತ್ತ ಹೋದರು ಮತ್ತು ಅದು ಅತ್ಯಂತ ಜನಪ್ರಿಯವಾಯಿತು. ಅವರ ಅಂಕಣ ಬರುವ ದಿನ ಪ್ರಜಾವಾಣಿಯ ಪ್ರಸಾರ ಸಂಖ್ಯೆ ಹಲವು ಸಾವಿರಗಳಿಗೆ ಏರುತ್ತಿತ್ತೆಂದೂ ಹೇಳಲಾಗುತ್ತಿತ್ತು. ಆದರೆ ದಿಢೀರನೆ ಒಂದಿನ ಲಂಕೇಶರ ಅಂಕಣವನ್ನು ನಿಲ್ಲಿಸಲಾಯಿತು. ಲಂಕೇಶ್ ಅದರಿಂದ ತುಂಬ ವ್ಯಥೆಪಟ್ಟಿದ್ದರು. ಅವರು ನಿರ್ದೇಶಿಸಿದ್ದ ಸಿನಿಮಾ ಕೂಡ ಸರಿಯಾಗಿ ವಿತರಣೆ ಕಾಣದೆ ಕುಟುಂಬವನ್ನು ಮುನ್ನಡೆಸುವುದಕ್ಕೂ ಪ್ರಾಯಶಃ ಅವರು ಕಷ್ಟಪಡುವಂತಾಗಿತ್ತು. ಆ ಹೊತ್ತಲ್ಲಿ ಅವರ ಪತ್ನಿ ಇಂದಿರಾ ಅವರು ಮನೆಯಿಂದಲೇ ಸೀರೆ ವ್ಯಾಪಾರ ಆರಂಭಿಸಿ, ಕುಟುಂಬದ ನಿರ್ವಹಣೆಗೆ ಬಲವಾದರು.

ಒಂದಿನ ಲಂಕೇಶರಿಗೆ ತಮ್ಮದೇ ಸ್ವಂತ ವಾರಪತ್ರಿಕೆ ಆರಂಭಿಸುವ ಆಲೋಚನೆ ಬಂತು. ಯಾವುದೇ ಜಾಹೀರಾತುಗಳಿಲ್ಲದೆ ನಡೆಯುತ್ತಿದ್ದ ಮುಂಬೈನ ಶಂಕರ್ಸ್ ವೀಕ್ಲಿ ಮತ್ತು ಬೆಂಗಳೂರಿನ ಶೇಷಪ್ಪ ಅವರ ‘ಕಿಡಿ’ ಪತ್ರಿಕೆಗಳು ಅವರೆದುರ ಮಾದರಿಯಾಗಿದ್ದವು. ‘ಲಂಕೇಶ್ ಪತ್ರಿಕೆ’ ಹುಟ್ಟಿದ್ದು ಹೀಗೆ. ಕವಿ, ಲೇಖಕ, ಚಿತ್ರ ನಿರ್ದೇಶಕ, ಅಂಕಣಕಾರರಾಗಿ ಲಂಕೇಶರಿಗಿದ್ದ ಹೆಸರಿನಿಂದಾಗಿ ಆರಂಭದಿಂದಲೇ ಲಂಕೇಶ್ ಪತ್ರಿಕೆ ಯಶಸ್ಸಿನ ಹಾದಿಯಲ್ಲಿ ಸಾಗಿತು. ಮೊದಲ ಸಂಚಿಕೆಗೆ ಹಿತೈಷಿಗಳಿಂದ ಜಾಹಿರಾತು ತೆಗೆದುಕೊಂಡೆವು ಮತ್ತು ವಾರಪತ್ರಿಕೆಯನ್ನು ಓದುಗರ ಬೆಂಬಲದಿಂದಲೇ ಮುನ್ನಡೆಸಲು ತೀರ್ಮಾನಿಸಿದೆವು. ಎಂ ಭಕ್ತವತ್ಸಲ ಮತ್ತು ಹರಿಕುಮಾರ್ ಅವರು ಉದಾರ ಹೃದಯದಿಂದ ನ್ಯೂಸ್ ಪ್ರಿಂಟ್ ಒದಗಿಸುವ ಮೂಲಕ ಲಂಕೇಶರಿಗೆ ನೆರವಾದರು. ಶುರುವಿನಲ್ಲಿ 2 ಸಾವಿರದಷ್ಟಿದ್ದ ಪತ್ರಿಕೆ ಪ್ರಸಾರ ಸಂಖ್ಯೆ ಅದರ ಉತ್ತುಂಗದ ಕಾಲದಲ್ಲಿ ಒಂದೂವರೆ ಲಕ್ಷ ದಾಟಿತ್ತು. 1983ರಲ್ಲಿ ಜನತಾ ಕ್ರಾಂತಿರಂಗ ಸರ್ಕಾರ ರಚನೆಯನ್ನು ಬೆಂಬಲಿಸುವ ಮೂಲಕ ಕಾಂಗೆಸ್ಸೇತರ ಸರ್ಕಾರ ರಚನೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಲಂಕೇಶ್ ಪತ್ರಿಕೆ. ರಾಜಕೀಯ ಆಟದಲ್ಲಿ ಬಂಗಾರಪ್ಪನವರಿಗೆ ನೆಲೆ ತಪ್ಪಿಸಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಗೇರಿದರು. ಮುಂದಿನೆಲ್ಲ ರಾಜಕೀಯ ಬೆಳವಣಿಗೆಗಳು ಪತ್ರಿಕೆಗೆ ಬಹಳ ಒಳ್ಳೆಯ ಆಹಾರ ಒದಗಿಸಿದ್ದವು.

ಲಂಕೇಶ್ ಪತ್ರಿಕೆ ಬಿಡುಗಡೆಯಾದ ನಾಲ್ಕು ವಾರಗಳ ಬಳಿಕ ನಮ್ಮ ಸಿನಿಮಾ ‘ಎಲ್ಲಿಂದಲೋ ಬಂದವರು’ ಬಿಡುಗಡೆಯಾಯಿತು. ಲಂಕೇಶ್ ಪತ್ರಿಕೆಯ ವ್ಯವಸ್ಥೆ ಮತ್ತು ಸರ್ಕಾರ ವಿರೋಧಿ ನಿಲುವು ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎದೆಗುಂದಿಸಿತ್ತು. ನಾನು ಈ ಮೊದಲೇ ಹೇಳಿದಂತೆ, ಎಂ ಭಕ್ತವತ್ಸಲ ಅವರ ನೆರವಿನಿಂದಾಗಿ ಅವರ ಒಡೆತನದ ಬೆಂಗಳೂರಿನಲ್ಲಿಯ ಮಿನರ್ವ, ಲಕ್ಷ್ಮಿ ಮತ್ತು ಮೈಸೂರಿನಲ್ಲಿಯ ಗಾಯತ್ರಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಯಿತು. ಮೊದಲೆರಡು ವಾರಗಳ ಕಾಲ ಸಿನಿಮಾ ತುಂಬಿದ ಚಿತ್ರಮಂದಿರಗಳಲ್ಲಿ ಓಡಿತು. ಆದರೆ ಮೊದಲೆರಡು ವಾರಕ್ಕೆ ತೆರಿಗೆ ವಿನಾಯ್ತಿ ನೀಡಿದ್ದ ಸರ್ಕಾರ ಮುಂದಿನ ನಾಲ್ಕು ವಾರಗಳಿಗೆ ತೆರಿಗೆ ವಿನಾಯ್ತಿ ನೀಡಲು ಸಮ್ಮತಿಸಲಿಲ್ಲ. ಅರ್ಥಸಚಿವ ವೀರಪ್ಪ ಮೊಯ್ಲಿ ಮತ್ತು ಆರ್ಥಿಕ ಕಾರ್ಯದರ್ಶಿ ಬಿ ಎಸ್ ಪಾಟೀಲ್ ಉದ್ದೇಶಪೂರ್ವಕವಾಗಿ ತೆರಿಗೆ ವಿನಾಯ್ತಿ ವಿಸ್ತರಣೆಯನ್ನು ತಡೆದರು. ಆಗ ನಾನು ಮೊಟ್ಟ ಮೊದಲ ಬಾರಿಗೆ ವೀರಪ್ಪ ಮೊಯ್ಲಿ ಅವರ ಮೇಲೆ ಪ್ರಭಾವ ಬೀರಲು ಆಗ ಸಂಸದರಾಗಿದ್ದ ನನ್ನ ತಂದೆ ಕೊಂಡಜ್ಜಿ ಬಸಪ್ಪ ಅವರ ಅಧಿಕಾರವನ್ನು ಬಳಸಿಕೊಂಡೆ. ಲಂಕೇಶ್ ಕೂಡ ಸಚಿವರ ಜೊತೆ ಮಾತಾಡಿ, ನಿರ್ಮಾಪಕರಿಗೆ ನೆರವಾಗಲು ಕೇಳಿಕೊಂಡರು, ಆದರೆ ಪ್ರಯೋಜನವಾಗಲಿಲ್ಲ. ಈ ವಿಚಾರವಾಗಿ ನಾನು ಕರ್ನಾಟಕ ಹೈಕೋರ್ಟ್‍ನಲ್ಲಿ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದೆ. ಈಗಿನ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಗೋಪಾಲ ಗೌಡ ಅವರು ನಮ್ಮ ವಕೀಲರಾಗಿದ್ದರು. ಅವರು ನನ್ನ ಕಾಲೇಜು ದಿನಗಳಲ್ಲಿ ಎಸ್‍ಎಫ್‍ಐ ಅಧ್ಯಕ್ಷರಾಗಿದ್ದವರು. ಸಿನಿಮಾಕ್ಕೆ ಹಾಕಿದ ದುಡ್ಡು ಬರಲಿಲ್ಲ. ಸಿಂಡಿಕೇಟ್ ಬ್ಯಾಂಕಿನಲ್ಲಿ ಮಾಡಿದ್ದ ಸಾಲವನ್ನು ನಾವೇ ಕೈಯಾರೆ ಭರಿಸಬೇಕಾಯಿತು.

ಇದು ಆಮೇಲೆ ಗುಂಡೂರಾವ್ ಸರ್ಕಾರದ ಕಡು ಭ್ರಷ್ಟತೆಯನ್ನು ಪತ್ರಿಕೆಯಲ್ಲಿ ಬಯಲು ಮಾಡಲು ಲಂಕೇಶರು ಗಟ್ಟಿ ನಿರ್ಧಾರ ಮಾಡುವುದಕ್ಕೆ ಕಾರಣವಾಯಿತು. 1983ರಲ್ಲಿ ಜನತಾ ಕ್ರಾಂತಿರಂಗ ಸರ್ಕಾರ ರಚನೆಗೆ ನಾಂದಿಯಾದದ್ದೇ ಇದು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಮಂತ್ರಿಯಾಗಿದ್ದ ನಜೀರ್ ಸಾಬ್ ಅವರು ನೀರ್ ಸಾಬ್ ಎಂದೇ ಜನಪ್ರಿಯವಾಗುವಲ್ಲಿ ಇರುವುದು ಲಂಕೇಶ್ ಪತ್ರಿಕೆಯದ್ದೇ ಪಾಲು. ಪ್ರತಿವಾರವೂ ಪತ್ರಿಕೆ ಪ್ರಸಾರ ಸಂಖ್ಯೆ ಸಾವಿರದಷ್ಟು ಏರಿಕೆಯಾಗುತ್ತಿತ್ತು. ಪ್ರತಿ ಮಂಗಳವಾರ ಬೆಳಗ್ಗೆ ಪತ್ರಿಕೆ ಕೊಳ್ಳಲು ಅಂಗಡಿಗಳಲ್ಲಿ ಜನ ಕಾಯುತ್ತಿದ್ದರು. ಪತ್ರಿಕೆಯ ಹಲವಾರು ಜಿಲ್ಲಾ ಏಜಂಟರುಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಯಿತು. ಹೊಸ ಬರಹಗಾರರು ಮತ್ತು ಕವಿಗಳಿಗೆ ಪತ್ರಿಕೆಯಲ್ಲಿ ಬರೆಯಲು ಅವಕಾಶ ಸಿಕ್ಕಿತ್ತು. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ವರದಿಗಾರ್ತಿಯಾಗಿದ್ದ ಲಂಕೇಶರ ಹಿರಿಯ ಮಗಳು ಗೌರಿ, ಪತ್ರಿಕೆಯ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದರು. ಕವಿತಾ ಮತ್ತು ಇಂದ್ರಜಿತ್ ಆಗಿನ್ನೂ ಶಾಲೆಯಲ್ಲಿ ಓದುತ್ತಿದ್ದರು.

ಲಂಕೇಶರ ನಿಧನದ ಬಳಿಕ ಪತ್ರಿಕೆಯನ್ನು ನಡೆಸುವ ಹೊಣೆ ಗೌರಿಯವರ ಹೆಗಲಿಗೆ ಬಿತ್ತು. ಆದರೆ ಇದ್ದಕ್ಕಿದ್ದಂತೆ ಕೆಲವು ವಾರಗಳ ಬಳಿಕ ಸಹೋದರ ಇಂದ್ರಜಿತ್ ಜೊತೆ ವಿವಾದವೊಂದು ಹುಟ್ಟಿಕೊಂಡಿತ್ತು. ಇಂಥದೊಂದು ಸಮಸ್ಯೆಯ ವಾಸನೆ ಮೊದಲೇ ಸಿಕ್ಕಿತ್ತು ಎಂಬಂತೆ ‘ಗೌರಿ ಲಂಕೇಶ್ ಪತ್ರಿಕೆ’ ಎಂಬ ಹೆಸರನ್ನು ಅವರು ಆಗಲೇ ನೊಂದಾಯಿಸಿದ್ದರು. ಕ್ರಮೇಣ ಅವರು ಸಹೋದರನೊಂದಿಗಿನ ವಿವಾದವನ್ನು ಬಗೆಹರಿಸಿಕೊಂಡರು ಮತ್ತು ಇಬ್ಬರೂ ಸ್ವತಂತ್ರವಾಗಿ ತಮ್ಮದೇ ಪತ್ರಿಕೆಗಳನ್ನು ನಡೆಸತೊಡಗಿದ್ದರು. ಗೌರಿ ಆದರ್ಶವಾದಿಯಾಗಿದ್ದರೆ, ಇಂದ್ರಜಿತ್ ಇವತ್ತಿನ ಮಾರುಕಟ್ಟೆ ಆರ್ಥಿಕತೆಯಲ್ಲಿ ಯಶಸ್ಸು ಬಯಸುವ ಪಕ್ಕಾ ವ್ಯಾವಹಾರಿಕ ಉದ್ಯಮಿ. ಗೌರಿ ತಂದೆಯ ಹಾದಿಯನ್ನೇ ತುಳಿದರು. ಪತ್ರಿಕೆಯನ್ನು ಉಳಿಸಿಕೊಳ್ಳಲು ಅವರು ಲಂಕೇಶರ ಪುಸ್ತಕಗಳ ಪ್ರಕಟಣೆಯಿಂದ ಕೊಂಚ ಮಟ್ಟಿನ ಆರ್ಥಿಕ ಬಲ ಪಡೆಯುತ್ತಿದ್ದರು. ಹಿಂದುತ್ವದ ಧೋರಣೆಯ ಶಕ್ತಿಗಳಿಂದ ಹಿಂಸೆಗೊಳಗಾದವರನ್ನು ರಕ್ಷಿಸುವ ಚಳವಳಿಯಿಂದಾಗಿ ತಮ್ಮ ವಿಚಾರ ಮತ್ತು ಒಂದು ಕಾರಣಕ್ಕಾಗಿ ಹೋರಾಡುವ ಬದ್ಧ ಗುಂಪುಗಳ ನಡುವೆ ಗೌರಿ ಅತ್ಯಂತ ಜನಪ್ರಿಯರಾಗಿದ್ದರು. ಸರ್ಕಾರದ ಜೊತೆ ರಾಜಿ ಸಂಧಾನ ನಡೆಸಿ ಹಲವಾರು ನಕ್ಸಲರು ಸಮಾಜದ ಪ್ರಮುಖ ವಾಹಿನಿಗೆ ಮರಳಲು ಗೌರಿ ಕಾರಣರಾಗಿದ್ದರು. ಸಾರ್ವಜನಿಕ ಕಾರಣಗಳಿಗಾಗಿ ಹೋರಾಡಲು ಅವರು ಈಗಿನ ಮುಖ್ಯಮಂತ್ರಿ ಮತ್ತು ಅನೇಕ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹಲವಾರು ಸ್ವಯಂಸೇವಾ ಸಂಘಟನೆಗಳು ಸೇರಿ ಸಂಘಟಿಸಿದ್ದ ‘ನಾನು ಗೌರಿ’ ರ್ಯಾಲಿಗೆ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ರಾಜಕೀಯ ವ್ಯಕ್ತಿಗಳಿಂದಲೇ ಬೆಂಬಲ ದೊಡ್ಡ ಮಟ್ಟದಲ್ಲಿ ವ್ಯಕ್ತವಾಯಿತು. ದೇಶದ ಅನೇಕರು ಬಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶಾದ್ಯಂತ ಮಾತ್ರವಲ್ಲ, ಹೊರದೇಶಗಳಲ್ಲೂ ಗೌರಿ ಹತ್ಯೆಯನ್ನು ಖಂಡಿಸಿ ಪ್ರತಿಭಟನಾ ಸಭೆಗಳು ನಡೆದವು.

ಗೌರಿ ಎಷ್ಟು ಪ್ರಾಮಾಣಿಕರಾಗಿದ್ದರು ಮತ್ತು ಎಂಥ ದೃಢತೆ ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಲು ಈ ಕೆಲವು ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಲೇಬೇಕು. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಮಂತ್ರಿ ವಿವೇಚನಾ ಕೋಟಾದಡಿಯಲ್ಲಿ ಹಲವಾರು ಪತ್ರಕರ್ತರು ಜಿ ಕೆಟಗರಿ ನಿವೇಶನಗಳನ್ನು ಪಡೆದುಕೊಂಡಿದ್ದರು. ಅದರಲ್ಲಿ ಇಂದ್ರಜಿತ್ ಮತ್ತು ಅವರ ಪತ್ರಿಕೆ ವರದಿಗಾರ ಗಂಗಾಧರ ಕುಷ್ಟಗಿ ಕೂಡ ಸೇರಿದ್ದರು. ಈ ವಿಚಾರದಲ್ಲಿ ಗೌರಿ ಸ್ವತಃ ಸಹೋದರನ ವಿರುದ್ಧವೇ ಪತ್ರಿಕೆಯಲ್ಲಿ ಬರೆದಿದ್ದರು. ಒಂದಿನ ನನಗೆ ಅವರಿಂದ ಒಂದು ಫೋನ್ ಕರೆ ಬಂತು. ಸಿದ್ದರಾಮಯ್ಯ ಸರ್ಕಾರದಲ್ಲಿ ಎಂಎಲ್‍ಸಿ ಹುದ್ದೆಗೆ ನಾಮಕರಣಗೊಳ್ಳಲು ಇಂದ್ರಜಿತ್ ಲಾಬಿ ಮಾಡುತ್ತಿರುವ ವಿಚಾರವನ್ನು ಅವರು ಹೇಳಿದ್ದರು. ಆ ಹುದ್ದೆಗೆ ನಾನೂ ಒಬ್ಬ ಆಕಾಂಕ್ಷಿಯಾಗಿದ್ದುದರಿಂದ ಮತ್ತು ಪಕ್ಷದ ಮೊದಲ ಆದ್ಯತೆಯ ಅಭ್ಯರ್ಥಿ ನಾನೇ ಆಗಿದ್ದುದರಿಂದ ನಾನು ಆ ವಿಚಾರವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇಂದ್ರಜಿತ್ ಹಲವು ತಿಂಗಳುಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿದ್ದರೆಂಬುದು ತಿಳಿದಾಗ ಆಶ್ಚರ್ಯವಾಗಿತ್ತು. ಅವರು ತಮ್ಮ ತಂದೆಯ ಹೆಸರನ್ನು ಬಳಸಿಕೊಂಡು ಸಿದ್ದರಾಮಯ್ಯನವರ ಬಳಿಯೂ ಲಾಬಿ ನಡೆಸಿದ್ದರು.

ದಿ. ಉಮ್ಮರಬ್ಬ (ಮಾಜಿ ಶಾಸಕ) ಮತ್ತು ನಾನು ಅದೆಷ್ಟೋ ಸಂಜೆಗಳನ್ನು ಲಂಕೇಶರ ಕಚೇರಿಯಲ್ಲಿ ಕಳೆದದ್ದಿದೆ. ವಿದೇಶಿ ಮಹಿಳೆಯಾಗಿದ್ದರೂ ಸೋನಿಯಾಗಾಂಧಿ ಯಾವುದೇ ಪೂರ್ವಕಲ್ಪಿತ ಗ್ರಹಿಕೆ, ಜಾತಿ ಕುರಿತ ಪೂರ್ವಗ್ರಹಗಳಿಲ್ಲದಿದ್ದುದರಿಂದ ಪಕ್ಷ ಮತ್ತು ದೇಶವನ್ನು ಮುನ್ನಡೆಸಬಲ್ಲ ಉತ್ತಮ ನಾಯಕಿ ಎಂಬುದನ್ನು ಲಂಕೇಶರು ಮನಗಂಡಿದ್ದವರಾಗಿದ್ದರು. ಮತ್ತು ಇದೆಲ್ಲವನ್ನೂ ಅವರು ತಮ್ಮ ಪತ್ರಿಕೆಯಲ್ಲಿ ಬರೆದಿದ್ದರು ಕೂಡ. ಅವರ ಸಾವಿನ ಬಳಿಕ ಆ ಎಲ್ಲ ಬರಹಗಳನ್ನು ನಾನು ಸೇರಿಸಿ ಪುಟ್ಟ ಹೊತ್ತಗೆ ರೂಪದಲ್ಲಿ ಪ್ರಕಟಿಸಿದ್ದೆ ಮತ್ತು ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಅದನ್ನು ಹಂಚಿದ್ದೆ. ಗೌರಿಯವರ ಮಧ್ಯಸ್ಥಿಕೆಯಿಂದಾಗಿ ಅದನ್ನು ನಾನು ಇಂಗ್ಲಿಷಿಗೂ ಅನುವಾದಿಸಿದ್ದೆ. ಆದರೆ ಜನಪಥ್‍ವರೆಗೂ ಅದನ್ನು ತಲುಪಿಸಲಾಗಲಿಲ್ಲ ಮತ್ತು ಪುಸ್ತಕ ರೂಪದಲ್ಲೂ ಪ್ರಕಟಿಸಲಿಲ್ಲ. ಆದರೆ ಇಂದ್ರಜಿತ್ ಆ ಅನುವಾದಗಳನ್ನೆಲ್ಲ ದೊರಕಿಸಿಕೊಡು ಅಚ್ಚುಕಟ್ಟಾಗಿ ಪುಸ್ತಕ ರೂಪದಲ್ಲಿ ಮುದ್ರಿಸಿ ಅದರ ಪ್ರತಿಗಳನ್ನು ಎಂಎಲ್‍ಸಿ ಹುದ್ದೆಗೆ ನಾಮಕರಣಗೊಳ್ಳಲು ದೆಹಲಿಯಲ್ಲಿ ಲಾಬಿ ನಡೆಸುವ ವೇಳೆ ಬಳಸಿದ್ದುದು ತಿಳಿದು ಅಚ್ಚರಿಯಾಗಿತ್ತು. ನಾನು ಎಂಎಲ್‍ಸಿ ಹುದ್ದೆಗೆ ನನ್ನ ಅಭ್ಯರ್ಥಿತನವನ್ನು ಹೈಕಮಾಂಡ್ ಮುಂದೆ ಮನದಟ್ಟು ಮಾಡಿಕೊಡಲು ಹೋಗಿದ್ದಾಗ ಆ ಪುಸ್ತಕವನ್ನು ನಾನು ಸಂಸದ ಆಸ್ಕರ್ ಫರ್ನಾಂಡಿಸ್ ಅವರ ಮೇಜಿನ ಮೇಲೆ ನೋಡಿದ್ದೆ. ಅದೇ ಪುಸ್ತಕವನ್ನು ಗೌರಿಯವರ ಕಚೇರಿಯಲ್ಲೂ ನಾನು ನೋಡಿದೆ. ಮತ್ತವರು ಅದನ್ನು ಸಹೋದರನ ಜೊತೆಗಿನ ಬಾಂಧವ್ಯ ಅಪಾಯಕಾರಿ ಮಟ್ಟಕ್ಕೆ ಹದಗೆಟ್ಟೀತೆಂಬ ಆತಂಕದಿಂದ ನನಗೆ ಕೊಡಲು ನಿರಾಕರಿಸಿದ್ದರು. ಇಂದ್ರಜಿತ್ ಮತ್ತು ನಾನು ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಈ ಸ್ಪರ್ಧೆಯ ವಿಚಾರವಾಗಿ ದಿಗ್ವಿಜಯ್ ಸಿಂಗ್ ಜೊತೆ ಮಾತಾಡಲು ನವದೆಹಲಿಯ ಖ್ಯಾತ ಪತ್ರಕರ್ತ ಗಿರೀಶ್ ನಿಕ್ಕಂ ಮೊರೆಹೋದೆ. ಹೈಕಮಾಂಡ್ ಮತ್ತು ಮುಖ್ಯಮಂತ್ರಿ ನನ್ನನ್ನು ಎಂಎಲ್‍ಸಿ ಎಂದು ನಾಮಕರಣ ಮಾಡಿದಾಗ, ಕಾಂಗ್ರೆಸ್ಸಿಗನಾಗಿ ಮತ್ತು ಲಂಕೇಶರ ಸಹವರ್ತಿಯಾಗಿ ಆ ಹುದ್ದೆಗೆ ತಕ್ಕವನೆಂದು ಗೌರಿ ಸಂಭ್ರಮಪಟ್ಟಿದ್ದರು.

ಹತ್ಯೆಗೆ ಕೆಲವೇ ದಿನಗಳ ಮುಂಚೆ ಆಕಸ್ಮಿಕವಾಗಿ ಗೌರಿಯವರನ್ನು ನಾನು ಸಿಪಿಎಂ ಕಾರ್ಯಕರ್ತೆ ವಿಮಲಾ ಅವರೊಂದಿಗೆ ವಿಧಾನಸೌಧದಲ್ಲಿ ಭೇಟಿಯಾಗಿದ್ದೆ. ಅವರು ಮುಖ್ಯಮಂತ್ರಿಯನ್ನು ಕಾಣಲು ಪ್ರಯತ್ನಿಸುತ್ತಿದ್ದರು. ಸಂಪುಟ ಸಭೆ ನಡೆಯುತ್ತಿದ್ದುದರಿಂದ ನಾವು ಊಟಕ್ಕೆ ಸೀ ರಾಕ್ ಹೊಟೇಲಿಗೆ ಹೋದೆವು. ಮುಖ್ಯಮಂತ್ರಿಗಳು ವಾರ್ತಾ ಇಲಾಖೆ ಜಾಹೀರಾತಿಗಾಗಿ ಚಿತ್ರೀಕರಣದಲ್ಲಿದ್ದಾಗ ಸಂಜೆ ಭೇಟಿ ಮಾಡಿದೆವು. ಮುಖ್ಯಮಂತ್ರಿಗಳ ಜೊತೆಗಿನ ಎರಡು ಗಂಟೆಗಳ ಭೇಟಿ ವೇಳೆ ಗೌರಿಯವರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲ್ಬುರ್ಗಿ ಹತ್ಯೆ ತನಿಖೆ ವಿಚಾರ ಕುರಿತು ಮಾತನಾಡಿದ್ದರು. ತಮ್ಮ ಸಹೋದರಿ ಕವಿತಾ ಬುಡಕಟ್ಟು ಮಕ್ಕಳ ಕುರಿತು ನಿರ್ಮಿಸುತ್ತಿರುವ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುವಂತೆ ಅವರು ಮುಖ್ಯಮತ್ರಿಗಳನ್ನು ಕೇಳಿಕೊಂಡರು. ಆದರೆ, ಆ ಪಾತ್ರಕ್ಕಾಗಿ ಬೇರೆಯವರನ್ನು ನೋಡಿಕೊಳ್ಳುವಂತೆ ಹೇಳಿದ ಮುಖ್ಯಮಂತ್ರಿ ಮಾತಿಗೆ ಗೌರಿ ತಕ್ಷಣ ಸಮ್ಮತಿಸಿದ್ದರು. ಕಡೆಗೆ ಅತ್ಯಂತ ಮುಜುಗರದಿಂದಲೇ ಅವರು ಪತ್ರಿಕೆಯ ದೀಪಾವಳಿ ಸಂಚಿಕೆಗೆ ಜಾಹೀರಾತು ಒದಗಿಸಲು ಸರ್ಕಾರದ ಇಲಾಖೆಗಳಿಗೆ ಸೂಚಿಸಬೇಕೆಂಬ ಮನವಿ ಮುಂದಿಟ್ಟಿದ್ದರು. ಅದಕ್ಕೆ ಮುಖ್ಯಮಂತ್ರಿಗಳು ಪ್ರಿನ್ಸಿಪಲ್ ಸೆಕ್ರೆಟರಿ ವಿದೇಶ ಪ್ರವಾಸದಿಮದ ಮರಳುವವರೆಗೆ ಕಾಯುವಂತೆ ಹೇಳಿ, ಬಳಿಕ ಅಗತ್ಯ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದರು. ನಂತರದ ಕೆಲವು ದಿನ ನಾವು ಸಚಿವರುಗಳಾದ ಕೆ ಜೆ ಜಾರ್ಜ್, ಸಂತೋಷ್ ಲಾಡ್, ಹೆಚ್ ಕೆ ಪಾಟೀಲ್ ಮತ್ತು ಎಂ ಬಿ ಪಾಟೀಲ್ ಅವರನ್ನು ಭೇಟಿಯಾಗಿ ದೀಪಾವಳಿ ವಿಶೇಷಾಂಕಕ್ಕೆ ಜಾಹೀರಾತು ನೀಡುವಂತೆ ಕೋರಿದ್ದೆವು. ಇಂದು ಗೌರಿ ನಮ್ಮ ಜೊತೆ ಇಲ್ಲ.

ಕೊನೆಯಲ್ಲಿ ಅವರು ನನ್ನ ಬಳಿ ಈ ಮಾತು ಹೇಳಿದ್ದರು: “ನಿಮಗೆ ಗೊತ್ತಿದೆ ಮೋಹನ್, ಅಪ್ಪ ತೀರಿಕೊಂಡ ಬಳಿಕ ನಮ್ಮ ಕುಟುಂಬದಲ್ಲಿ ಇಂದ್ರಜಿತ್ ಬಿಟ್ಟರೆ ಇನ್ನಾರೂ ಗಂಡುಮಕ್ಕಳಿಲ್ಲ. ಇಂದ್ರಜಿತ್, ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳು, ಕವಿತಾ ಮತ್ತು ಆಕೆಯ ಮಗಳು ಮತ್ತು ಅಮ್ಮ ಆಗಾಗ ಭೇಟಿಯಾಗ್ತಾರೆ. ನಾವೆಲ್ಲ ಒಟ್ಟಿಗಿರಲು ತುಂಬಾ ಖುಷಿಯಾಗುತ್ತೆ.”

ಅಮ್ಮ ಇಂದಿರಾ ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವುದರ ಬಗ್ಗೆ ಗೌರಿ ಖುಷಿಪಡುತ್ತಿದ್ದರು. ಇಂದ್ರಜಿತ್ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಅವರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಸಹೋದರನ ರಾಜಕೀಯ ಧೋರಣೆ ಬಗ್ಗೆ ಯಾರಾದರೂ ಕೇಳಿದರೆ ಅವರಿಗೆ ಸಿಟ್ಟು ಬರುತ್ತಿತ್ತು. ಇವರು ನಮ್ಮ ಗೌರಿ. ನಿಸ್ವಾರ್ಥಿಯಾಗಿದ್ದ ಅವರು, ಆದರ್ಶಕ್ಕಾಗಿ ಜೀವ ತೆತ್ತರು. ‘ನಾನು ಗೌರಿ’ ಅನ್ನೋ ಘೋಷವಾಕ್ಯ ಈ ದೇಶದ ಜನರನ್ನು ಒಗ್ಗೂಡಿಸಲಿ, ಈ ದೇಶದ ಜನರ ಬದುಕಿನಲ್ಲಿ ಬದಲಾವಣೆ ತರಲಿ.

Share

Leave a comment

Your email address will not be published. Required fields are marked *

Recent Posts More

 • 7 days ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...