Share

ತೂಗು ಹಾಕಿದ ದುಃಖ : ವಿಡಂಬನೆಯ ಮೊನಚು
ನಾಗರೇಖಾ ಗಾಂವಕರ

 

 

 

ಪುಸ್ತಕ ಪ್ರಸ್ತಾಪ

|

ಯುವಕವಿ ನರೇಶ ನಾಯ್ಕ ಕವಿತೆಗಳು

 

 

 

 

ವಿಯೊಬ್ಬನ ಅನುಭವಗಳ ಹೂರಣ ಪದಗಳ ಮಾಲಿಕೆಯಲ್ಲಿ ಸುಂದರವಾಗಿ ಪೋಣಿಸಲ್ಪಟ್ಟು ಓದುಗನ ಮನಸ್ಸನ್ನು ಆಕರ್ಷಿಸಿ ಸಾರ್ವತ್ರಿಕ ಅನುಭವದ ರೂಪ ಪಡೆದುಕೊಳ್ಳುವುದು. ಹಾಗಾಗಿ ಕವಿ ಬದುಕಿನ ಉತ್ಕಟತೆ. ಮಾಗಿದ ಜೀವನಾನುಭವಗಳು ಅರಿವಿಗೆ ಬೆಳಕಾಗುತ್ತವೆ. ಅಂತಹ ಅರಿವಿನ ಸೂಕ್ಷ್ಮಗ್ರಾಹಿತ್ವ ಕವಿಗೆ ಅಗತ್ಯ. ಯುವ ಕವಿ ನರೇಶ ನಾಯ್ಕ ಕವಿ ಅನ್ನುವುದಕ್ಕಿಂತ ಮುಂಚೆ ಕಥೆಗಾರ. ಮೆತ್ತಗಿನ ನುಡಿಯಲ್ಲಿ ಮಾತಾಡುವ ನರೇಶ ಎಂದಿಗೂ ಏರುದನಿ ತೆಗೆದವರಲ್ಲ. ಅವರ ಕವಿತೆಗಳು ಹಾಗೆ ಮೆತ್ತಗಿನ ಬಿರುಸು ವ್ಯಂಗ್ಯದಲ್ಲಿ ಲೋಕದ ಡೊಂಕಿಗೆ ಕನ್ನಡಿ ಹಿಡಿಯುತ್ತವೆ. ಬಹುತೇಕ ಕವಿತೆಗಳು ವಿಡಂಬನೆಯನ್ನೇ ಮೂಲವಾಗಿಟ್ಟುಕೊಂಡು ಅರಳಿವೆ.

ಶೀರ್ಷಿಕೆ ಕವನ ‘ತೂಗು ಹಾಕಿದ ದುಃಖ’ದಲ್ಲಿ ಕವಿಯ ಮನಸ್ಸಿನ ಮೂಲಸೆಲೆ ನೈರಾಶ್ಯ. ಆಧುನಿಕ ಭರಾಟೆಯ ಈ ದಿನಗಳಲ್ಲಿ ಜಗತ್ತಿನಲ್ಲಿ ನಮಗಾರು ಹಿತವರು ಎಂದು ದುರ್ಬೀನು ಹಾಕಿ ನೋಡಿದರೂ ಸಿಗದ ಸ್ಥಿತಿ ಇದೆ. ಎಲ್ಲರೂ ಸ್ವಯಂಕೇಂದ್ರಿತ ಸ್ವಾರ್ಥಮುಖಿಗಳಾಗಿದ್ದಾರೆ. ತನ್ನ ನೋವು ಸಹೃದಯರ ಕಿವಿ ತಲುಪಲಿ ಎಂದು ಕವಿ ದುಃಖವನ್ನು ರಾಗವಾಗಿಸುತ್ತಾನೆ. ಆದರೆ ನೋವನ್ನು ಹಂಚಿಕೊಳ್ಳುವ ಸಹೃದಯರು ಸಿಗದೆ ನೊಂದಿದ್ದಾನೆ. ಹಾಗೆಂದೇ ಕೊನೆಯಲ್ಲಿ ಹೇಳುವ ಸಾಲು ಸಮಂಜಸವೆನಿಸುತ್ತವೆ.

“ಈಗ ದುಃಖವನ್ನು ಮನಸ್ಸಿನಲ್ಲಿ ಬಚ್ಚಿಟ್ಟಿದ್ದೇನೆ:
ಮನಸ್ಸಿಗೂ ತಿಳಿಯದ ಹಾಗೆ / ಎಂದಿಗೂ ಹೊರಬೀಳದ ಹಾಗೆ/
ಹೇಗೆಂದರೆ ಹಾಗೆ”

ಯಾಕೆಂದರೆ ನಮ್ಮ ದುಃಖ ನೋವನ್ನು ನಾವೇ ಹೊರಬೇಕಾದ ಸ್ಥಿತಿ ಇದೆ. ಅದನ್ನು ವ್ಯಕ್ತಪಡಿಸಿದರೂ ಪ್ರಯೋಜನವಿಲ್ಲವೆಂದು ಕೊನೆಯ ಸಾಲು ಮನವರಿಕೆ ಮಾಡುತ್ತದೆ.

‘ಹಣತೆ ಹಚ್ಚಿಟ್ಟ ರಾತ್ರಿ’ ಕವಿತೆಯಲ್ಲಿ ಯಾವುದೋ ಬೆಳಕಿಗೆ ಕವಿಯ ಅಂತರಂಗದ ತುಡಿತವಿದೆ.

“ನಿದಿರೆಯ ಕನಸುಗಳು/ಅವೆಷ್ಟೋ ಮಣ್ಣಾಗಿ ಹೋದವು/
ಮದಿರೆಯ ನಶೆಯಲ್ಲೂ /ನೀ ಕಾಣಲೇ ಇಲ್ಲ/
ಹಣತೆ ಹಚ್ಚಿಟ್ಟ ರಾತ್ರಿ” ಎಂದು ಕವಿ ಚಡಪಡಿಸುತ್ತಾನೆ. ಆ ಬರುವಿಕೆಗೆ ಬೆಳಕು ಸೂಡಿ ಹಿಡಿದು ಕಾದರೂ ಬರಬೇಕಾದವರ ಸುಳಿವಿಲ್ಲ. ವಿಷಾದ ಆವರಿಸಿದೆ, ದೈವವೂ ಕರುಣಿಸಲಿಲ್ಲ ಬಯಸಿದ ಜೀವವನ್ನು ಎಂಬ ಕೊರಗಿದೆ.

‘ಗಾಂಧಿ ನಕ್ಕ’ ಗಾಂಧಿ ಕನಸಿನ ರಾಮರಾಜ್ಯದಲ್ಲಿ ಭ್ರಷ್ಟತೆಯ ಸೆರಗಿನಲ್ಲಿ ನಾಶವಾಗುತ್ತಿರುವ ಮೌಲ್ಯಗಳು ದೇಶ ಸಾಗುತ್ತಿರುವುದೆಲ್ಲಿ ಎಂಬ ಜಿಜ್ಞಾಸೆ ಹುಟ್ಟಿಸುವ ಕವಿತೆ.

“ಓಟು ಹಾಕುವ ಮುನ್ನ /
ಮನೆ ಮನೆಯ ಬಾಗಿಲಿಗೆ/
ಹಂಚಲಾಗಿತ್ತು/ ಗಾಂಧಿ ಚಿತ್ರದ ನೋಟು.” ಎನ್ನುವಲ್ಲಿ ವ್ಯವಸ್ಥೆಯ ಕರಾಳತೆಯನ್ನು ಪ್ರತಿಫಲಿಸುತ್ತದೆ. ಮಹಾತ್ಮನ ತ್ಯಾಗ ನೆನಪಿಸುವುದಕ್ಕೋಸ್ಕರ ಅಚ್ಚು ಹಾಕಿಸಿದ ಗಾಂಧಿ ಇರುವ ನೋಟು ಕಾಳಸಂತೆಯ ಸರಕಾಗಿ ಬಳಕೆಯಾಗುತ್ತಿದ್ದು, ಗಾಂಧಿ ಹೆಸರೇ ಅಪಮೌಲ್ಯಕ್ಕೊಳಗಾಗುತ್ತಿರುವ ವಿಷಾದವಿದೆ.

ಸುಮ್ಮನೆ ಪದಗಳ ಜೋಡಿಸಿ ಹೆಣೆದ ಸಾಲುಗಳು ಅಲ್ಪಾಯು ಎನ್ನುವುದನ್ನು ಅಲ್ಲಗಳೆಯಲಾಗದು. ಇನ್ನು ಕವಿತೆಗಳಲ್ಲಿ ಇರಬೇಕಾದ ಗೇಯತೆ ಇಂದು ಕಡಿಮೆಯಾಗುತ್ತ ಓದುಗಬ್ಬಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಆದಾಗ್ಯೂ ಗದ್ಯಕ್ಕೂ ಪದ್ಯಕ್ಕೂ ತನ್ನದೇ ಆದ ಭಿನ್ನತೆಗಳಿವೆ. ಧ್ವನಿಪೂರ್ಣತೆ, ಲಯಬದ್ಧತೆ, ಅಲಂಕಾರ ಪ್ರತಿಮೆಗಳ ಬಳಕೆ ಇವೆಲ್ಲವೂ ಕಾವ್ಯ ಲಕ್ಷಣಗಳು. ಅರ್ಥವಂತಿಕೆ ತರುವ ಸಾದೃಶ ಸಂಪತ್ತು ಕವಿತೆಯ ಸೌಂದರ್ಯ ಹೆಚ್ಚಿಸುವ ಸಂಗತಿ.

ಇಲ್ಲಿನ ಹೆಚ್ಚಿನ ಕವಿತೆಗಳು ಓದುಗಬ್ಬಗಳೇ ಆಗಿವೆ. ಹೆಚ್ಚಿನ ಧ್ವನಿಪೂರ್ಣತೆಯ ಅಗತ್ಯ ಸಂಕಲನದ ಉದ್ದಕ್ಕೂ ಕವಿತೆಗಳಲ್ಲಿ ಕಾಣುವುದು. ಆದರೆ ಅರ್ಥ ಸ್ವಾರಸ್ಯದಲ್ಲಿ ಕವಿತೆಗಳು ಹಿಂದೆ ಬೀಳುವುದಿಲ್ಲ.

“ಸಾಹಿತ್ಯ ವೇದಿಕೆಯಲ್ಲಿ ಮೈಕು ಬಿಡದೇ
ಭಾಷಣ ಬಿಗಿದೇ ಬಿಗಿದರು ಹತ್ತು ಜನ
ಒಣಚಪ್ಪಾಳೆ ತಟ್ಟಿ ತಟ್ಟಿ ಸಮ್ಮೇಳನದ ನೆಪದಲ್ಲಿ
ಹೊಟ್ಟೆತುಂಬಾ ಉಂಡು ಹೋದರು ಹತ್ತು ಜನ” ಇದು ಸಂಕಲನದ ‘ಸಾಹಿತ್ಯ ಸಮ್ಮೇಳನ’ ಕವಿತೆಯಲ್ಲಿಯ ಪ್ರಾರಂಭಿಕ ಸಾಲುಗಳು. ಕವಿತೆ ಪ್ರಾತಿನಿಧಿಕವೆನಿಸುತ್ತದೆ. ಸಾಹಿತ್ಯ ಲೋಕದ ದೋಷಗಳನ್ನು ಸ್ವಜನ ಪಕ್ಷಪಾತವನ್ನು ತೆರೆದಿಡುತ್ತದೆ. ವೇದಿಕೆಯ ಎಲ್ಲ ಡಂಭ ಪ್ರದರ್ಶನಗಳನ್ನು ಉಳ್ಳವರ ಮೇಲ್ಮೈಯನ್ನು ಕಂಡು ಕವಿ ರೋಸಿಹೋಗಿದ್ದಾನೆ. ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರ ನಡೆನುಡಿಗಳ ಬಗ್ಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯಿಸುತ್ತಾನೆ. ಪುಸ್ತಕ ಕೊಂಡು ಓದದೇ ಉಂಡು ಹೋಗುವ ಸಾಹಿತ್ಯಾಸಕ್ತರ ಪಡೆ ಇಂದು ಹೆಚ್ಚುತ್ತಿದೆ ಎಂಬ ಕಟಕಿ ಕವನದಲ್ಲಿದೆ.

ನಮ್ಮ ಜೀವನಾನುಭವ ಜೊತೆಗೆ ಸಂವೇದನೆಗಳ ಅಂತರಚಕ್ಷು ನಮ್ಮ ಗೃಹಿಕೆಯ ದಿಕ್ಕು ಮತ್ತು ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ಯಾವುದೋ ಒಂದು ಸಂಗತಿಯ ಬರೆದರೂ ಕವಿತೆ ಎನ್ನುವ ಕಾಲವಿದು. ಆದರೆ ನಿಜದಲ್ಲಿ ಅನುಭವ ಮತ್ತು ಸಂವೇದನೆಗಳೊಂದಿಗೆ ಅರ್ಥವತ್ತಾದ ಶಬ್ದ ಸಂಪತ್ತು ಮೇಳೈಸಿ ಬಂದ ಕಾವ್ಯ ಸಾರ್ವಕಾಲಿಕ ಸಂಗತ ಸತ್ಯವಾಗುತ್ತದೆ. ಕವಿ ತಪಸ್ವಿಯಾಗಿರಬೇಕು. ಆ ಪ್ರಯತ್ನದಲ್ಲಿಯೇ ಕವಿಯೊಬ್ಬ ಸಿದ್ಧ ಪ್ರತಿಮೆಯಾಗಿ ಹೊರಬರುತ್ತಾನೆ.

ಒಂದು ಉತ್ತಮ ಕವಿತ್ವಕ್ಕೆ ಸಾಕ್ಷಿಯಾಗಿ ಪ್ರತಿಮೆಯ ಮೂಲಕ ತೆರೆದುಕೊಂಡು ಅರ್ಥಪೂರ್ಣವಾಗಿ ಮೂಡಿದ ಕವಿತೆ ‘ಹಳೆಯ ನಾಣ್ಯಗಳು’. ಕವಿಗೆ ನೆನಪೊಂದರ ಪೆಟಾರಿ ತೆರೆದುಕೊಳ್ಳುತ್ತದೆ. ಅದು ಹಳೆಯ ಬೆತ್ತದ ಪೆಟಾರಿ. ಅಲ್ಲಿರುವ ಹಳೆಯ ನಾಣ್ಯಗಳು ದೊಡ್ಡವರ ಮನೆಯಲ್ಲಿ ದುಡಿದು ದಿನಗೂಲಿ ಪಡೆದ ಅಜ್ಜಿಯ ಶ್ರಮಕ್ಕೆ, ದಿನವೀಡಿ ರಣಬಿಸಿಲಲ್ಲಿ ಸೌದೆ ಸಂಗ್ರಹಿಸಿ ಹೊರೆ ಮಾರಿ ತಂದ ಅಜ್ಜನ ಕಾಸು ದುಃಖದ ದಿನಗಳಿಗೆ ಸಾಂಕೇತಿಕವಾಗಿ ನಿಲ್ಲುತ್ತವೆ.

“ಹಳೆಯ ಬೆತ್ತದ ಪೆಟಾರೆಯಲ್ಲಿದ್ದ
ಕೆಲವು ಸಾಮಾನುಗಳ ಜೊತೆಯಲ್ಲಿ
ಗಂಟು ಕಟ್ಟಿದ ಬಟ್ಟೆಯ ಮೂಟೆಯೊಂದು
ಆವತ್ತು ಅಚಾನಕ್ಕಾಗಿ ಸಿಕ್ಕಿತು” ಅದು ಕವಿಯ ಆಸಕ್ತಿಯ ಕೆರಳಿಸಿದರೂ ಅದರಲ್ಲಿಯ ನಾಣ್ಯಗಳು ಕವಿಯ ಪೂರ್ವಿಕರ ಬದುಕನ್ನೇ ಕಣ್ಣೆದುರು ತಂದಿಡುತ್ತವೆ. ಬಡತನದ ನೋವಿನಲ್ಲಿ ನರಳಿ ಕೊರಗಿದ ಆ ಜೀವಗಳ ಬದುಕಿನ ಕರಾಳತೆ ನಾಣ್ಯಗಳು ಮಾಡಿಸುವುದು ಅದರೊಂದಿಗೆ ಹಣದ ಮುಂದೆ ದೀನವಾದ ಪ್ರಪಂಚವನ್ನು ಸೂಚ್ಯವಾಗಿ ತೆರೆದಿಡುತ್ತಾರೆ. ಹಳೆಯ ನಾಣ್ಯ ಶೋಷಣೆಯ ಮುಖವನ್ನು ಬಿಚ್ಚಿಡುತ್ತದೆ. ಆದರೆ ಇಲ್ಲಿಯೂ ಕವಿ ಕೊಂಚ ಶ್ರಮವಹಿಸಿ ಶಬ್ದಗಳ ಬಿಗಿಯನ್ನು ಸದೃಢಗೊಳಿಸಿದ್ದಲ್ಲಿ ಅಪೂರ್ವ ಕವಿತೆಯಾಗಿರುತ್ತಿತ್ತು.

ನರೇಶ ನಾಯ್ಕರ ಕವಿತೆಗಳಲ್ಲಿ ವಸ್ತು ವೈವಿಧ್ಯತೆ ಇದೆ. ವ್ಯವಸ್ಥೆಯ ಬಗ್ಗೆ ತಮ್ಮದೇ ನಿಲುವಿನ ಅಸಹನೆ ಇದೆ. ಆದರೆ ಅದು ರೋಷವಾಗಿ ಹೊಮ್ಮುವುದಿಲ್ಲ. ತಣ್ಣನೆಯ ಪ್ರತಿಭಟನೆಯಂತಿವೆ. ‘ವಿನಾಶದ ಕರಿನೆರಳು’ ಜಾಗತಿಕ ನೆಲೆಯಲ್ಲಿ ಇಂದು ದೇಶದೇಶಗಳ ಶಾಂತಿ ಕದಡುತ್ತಿರುವ ಭಯೋತ್ಪಾದನೆಯ ವಿದ್ವಂಸಕ ಕೃತ್ಯವನ್ನು ತೆರೆದಿಡುತ್ತಾರೆ.

‘ಸ್ವಾಮಿಜಿ ನಿಧನದ ನಂತರ’ ಕವಿತೆ ಧರ್ಮ ವಕ್ತಾರರ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಮಠ ಮಂದಿರಗಳ ಅನೈತಿಕ ಅವ್ಯವಹಾರಗಳ ಮೇಲೊಂದು ಪ್ರಹಾರವಿದೆ. ಅದರೊಂದಿಗೆ ಅಸಹಾಯಕ ಜಗತ್ತಿನ ಆಕ್ರೋಶದೊಂದಿಗೆ ಕವಿತೆ ಕೊನೆಗೊಳ್ಳುತ್ತದೆ. ‘ಕಾಯುತ್ತೇನೆ ನಾನು’ ಕಳೆದುಕೊಂಡ ಹಳೆಯ ನೆನಪಿನ ಹಂಬಲಿಕೆ ಇದೆ.

ಸಂಕಲನದಲ್ಲಿ ಹಲವು ಕವಿತೆಗಳು ಪ್ರಶ್ತುತ ಜಗತ್ತಿನ ಲೇವಡಿ ಮಾಡುತವೆ. ತಣ್ಣಗೆ ಇರಿಯುತ್ತವೆ. ಮುಖವಾಡ, ನಾಟಕ ಮುಗಿದುಹೋದ ಮೇಲೆ, ಕಾಡ ಚಿರತಿ ಒಂದ ಊರಬಾವ್ಯಾಗ ಬಿತ್ತ ಇತ್ಯಾದಿ ಕವನಗಳು ಭಿನ್ನ ಹಿನ್ನೆಲೆಯಲ್ಲಿ ಮೂಡಿಬಂದಿದ್ದ್ದದು, ವಿಡಂಬನಾತ್ಮಕವಾಗಿವೆ.ಇನ್ನು ಹತಾಶೆಯನ್ನೆ ಕವನದ ಮೂಲವಸ್ತುವಾಗುಳ್ಳ ಹಲವು ಕವಿತೆಗಳು ಕವಿಯಲ್ಲಿ ಮಡುಗಟ್ಟಿರುವ ನಿರಾಶೆಯನ್ನು ಸಹೃದಯನಿಗೂ ಮುಟ್ಟಿಸುತ್ತವೆ.

ಇಂದಿನ ಅಬ್ಬರದ ಕಾವ್ಯ ಪ್ರವಾಹದಲ್ಲಿ ದಿವ್ಯಾನುಭೂತಿ ನೀಡುವ ದನಿಗಳು ಕಳೆದುಹೋಗುತ್ತಿವೆ. ಸಹೃದಯನ ಮನಸ್ಸನ್ನು ಗೆಲ್ಲುವ, ಆಕರ್ಷಿಸುವ ಕಾವ್ಯ ಇಂದಿನ ಅಗತ್ಯ. ಅಂತಹ ಅಗತ್ಯ ಪೂರೈಸಬಲ್ಕ್ಕೆಲ ದಾರಿಯಲ್ಲಿ ನರೇಶ ನಾಯ್ಕ ಮುಂದಿನ ದಿನಗಳ ಭರವಸೆ.

Share

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...