Share

ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು
ಪ್ರದೀಪ್ ಕುಮಾರ್ ಶೆಟ್ಟಿ ಕ್ಯಂಚ್ನೂರ್

 

 

 

 

ಶಿಕ್ಷಣದಿಂದ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಿದ್ದಾನೆಯೇ ಹೊರತು ಮಾನವ ಸಂಬಂಧ, ನಿಸರ್ಗ ಪ್ರೀತಿ, ತಾದಾತ್ಮ್ಯ, ಸಹಬಾಳ್ವೆ, ಸಂತುಲಿತ ಅಭಿವೃದ್ಧಿ ಮುಂತಾದ ಗುಣ ಪ್ರವೃತ್ತಿಗಳನ್ನು ಸಾಧಿಸಿಲ್ಲವೇನೋ.

 

 

 

 

 

ಸುಮಾರು 1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ LPG- Libaralisation, Privatisation, Globalisation ಪ್ರಕ್ರಿಯೆಗಳು ಬರೀ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಲ್ಲಿ ಮಾತ್ರ ತನ್ನ ಪರಿಣಾಮಗಳನ್ನು ಉಂಟುಮಾಡಲಿಲ್ಲ, ಬದಲಿಗೆ ಶಿಕ್ಷಣವನ್ನೂ ಒಳಗೊಂಡಂತೆ ಸಾಂಸ್ಕೃತಿಕವಾಗಿ ಅದು ಉಂಟುಮಾಡಿದ ಪರಿಣಾಮ ಅತ್ಯಂತ ಮಹತ್ವದ್ದು. ಅದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವೆರಡನ್ನೂ ಉಂಟುಮಾಡಿತಾದರೂ ಕೂಡಾ, ಸಿಂಹಪಾಲು ಪರಿಣಾಮ ಅಧನಾತ್ಮಕವಾದುದು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಕಷ್ಟು ರಚನೀಯ ಬದಲಾವಣೆಯನ್ನು ಉಂಟುಮಾಡಿತು. ಭಾರತದಲ್ಲಿನ ಕೇಂದ್ರ ಶಿಕ್ಷಣ ವ್ಯವಸ್ಥೆಯ ಭಾಗಗಳಾದ UGC, AICTE ಗಳು ಜಾಗತೀಕೃತ ವಿಶ್ವ ಆರ್ಥಿಕ ವ್ಯವಸ್ಥೆಗೆ ಅನುರೂಪವಾಗಿ ತಮ್ಮ ನೀತಿ ನಿಲುಮೆಯನ್ನು ಬದಲಾಯಿಸಿಕೊಂಡುವು. ಇಂತಹ ಪ್ರಯತ್ನ ಇಡೀ ಭಾರತದಲ್ಲಿ ಒಂದು ಶಿಕ್ಷಣ ಉದ್ಯಮವನ್ನು ಸೃಷ್ಟಿ ಮಾಡಿತು. ಬಂಡವಾಳ, ಮಾರುಕಟ್ಟೆ, ವಿನಿಮಯ ಉತ್ಪಾದನೆಗಳೇ ಅದರ ಮಂತ್ರವಾದುವು. ಇದು ಮುಖ್ಯವಾಗಿ 3 ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು: ಶಿಕ್ಷಣವನ್ನು ಔಪಚಾರಿಕ ಉದ್ಯಮ-ಮಾರುಕಟ್ಟೆಯನ್ನಾಗಿಸಿ ಭಾರತದ ಶಿಕ್ಷಣ ವ್ಯವಸ್ಥೆಯ ಉದ್ಯಮವನ್ನು ಅಂತರಾಷ್ಟ್ರೀಯ ಶಿಕ್ಷಣ ವಾಣಿಜ್ಯದ ಜತೆಗೆ ಜೋಡಿಸಲು ಪ್ರಯತ್ನಿಸಿದ್ದು, ಎರಡು: ಮಾರುಕಟ್ಟೆಯ ಭರದಲ್ಲಿ ಶಿಕ್ಷಣವನ್ನು ಉದ್ಯಮವಾಗಿಸಿ ಕಲಿಕೆ ಅತ್ಯಂತ ಮಹತ್ವದ ಗುರಿಗಳನ್ನು ಮೂಲೆಗುಂಪಾಗಿಸಿದ್ದು, ಮೂರು: ಭಾರತೀಯ ಅಥವಾ ದೇಶೀಯ ಅನ್ನಬಹುದಾದ ಹಲವು ಶಿಕ್ಷಣ ಪರಂಪರೆ, ಯೋಚನೆ, ಚಿಂತನಾಕ್ರಮ, ಅತ್ಯಂತ ಮುಖ್ಯವಾಗಿ ಕಲಿಕೆಯ ಕ್ರಮವನ್ನು ನಿರಾಕರಿಸುತ್ತಾ ಇದು ಸಾಗಿತು ಮತ್ತು ಇದು ಪ್ರಜ್ಞೀಯ ಮತ್ತು ಅಪ್ರಜ್ಞೀಯ ನೆಲೆಯಲ್ಲಿ ತನ್ನದಲ್ಲದ ಕ್ರಮವನ್ನು ಮೂಲೆಗುಂಪಾಗಿಸುತ್ತದೆ. ಅಮೆರಿಕಾ-ಯುರೋಪ್ ಪ್ರಣೀತ ‘ಶಿಕ್ಷಣ’ವೆನ್ನುವ ಮಾದರಿ ಬಹು ವೈವಿಧ್ಯದ ಕಲಿಕೆಯ ಕ್ರಮವನ್ನು ಸಾಯಿಸಿತು. ಭಾರತದಲ್ಲಿ ಕಲಿಕೆಯ ಕ್ರಮದ ವಿಶ್ವಗಳಿದ್ದುವು. ಇದನ್ನು ನಿರಾಕರಿಸಿ ಜಾಗತೀಕರಣ ಶಿಕ್ಷಣವನ್ನು ಪ್ರಭಾವಿಸಿ ಒಂದು ಏಕಶಿಲೀಯ (ಮೊನೋಲಿಥಿಕ್) ನೆಲೆಯ ಕ್ರಮವನ್ನು ಹೇರಿತು. ಇದು ಭಾರತದ ಮಟ್ಟಿಗೆ ಒಂದು ರೀತಿಯಲ್ಲಿ ಹೇಳುವುದಾದರೆ ಹೊಸದಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಮಾಡಬಹುದಾದ ಆಕ್ರಮಣವನ್ನು ಅಥವಾ ಒಂದು ನೆಲೆಯ ನಿಯೋಕಲ್ಚರಲ್ ಇಂಪೀರಿಯಲಿಸಮ್‍ನ್ನು ಕ್ರಮವನ್ನು ಸೃಷ್ಟಿಸಿತು ಎನ್ನಬಹುದಾಗಿದೆ. ಥಾಮಸ್ ಫ್ರೀಡ್‍ಮನ್ ಬಳಸುವ ಕಲ್ಚರಲ್ ಇಂಪೀರಿಯಲಿಸಮ್ ಪರಿಭಾಷೆ ಕೂಡಾ ಇದನ್ನೇ ಧ್ವನಿಸುತ್ತದೆ. ಈ ಒಂದು ಪ್ರಕ್ರಿಯೆ ಭಾರತದಂತಹ ರಾಷ್ಟ್ರಕ್ಕೆ ತುಂಬಾ ಅಪಾಯಕಾರಿ. ಇದು ಇಲ್ಲಿನ ವೈವಿಧ್ಯತೆ, ಸಹಜತೆ ಮತ್ತು ಸೃಜನಶೀಲತೆಯನ್ನೇ ಹೊಸಕಿ ಹಾಕಬಲ್ಲದು ಎಂಬುದು ಈ ಸಂದರ್ಭದ ಭಾರತೀಯ ಶಿಕ್ಷಣ ತಜ್ಞ ಮಧು ಎಸ್. ಪ್ರಕಾಶ್ ಸೇರಿದಂತೆ ಹಲವರ ಅಭಿಪ್ರಾಯ.

ಗುಸ್ತೆವೋ ಎಸ್ತೆವಾ

ಶಿಕ್ಷಣ ಯುಗ ಅಥವಾ ಶಿಕ್ಷಣ ಎನ್ನುವ ಪ್ರಕ್ರಿಯೆ ಕೊನೆಗೊಂಡಿದೆ. ಅದರ ನಾಶ ಆರಂಭವಾಗಿದೆ. ಶಿಕ್ಷಣ ಎನ್ನುವ ಕ್ರಮವನ್ನು ಯಾರಿಂದಲೂ ಕೂಡಾ ರಿಪೇರಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಶಿಕ್ಷಣ ಎನ್ನುವ ಸಂಗತಿಯೇ ಸಂಪೂರ್ಣ ನಿರುಪಯುಕ್ತ. ನಿರುಪಯುಕ್ತ ಸಂಗತಿಯನ್ನು ಬಿಸಾಡುವುದು ಒಳಿತೇ ಹೊರತು ಬಳಸಯೋಗ್ಯವಲ್ಲ. ಇಂತಹ ಶಿಕ್ಷಣ, ಶಿಕ್ಷಣಕ್ರಮ ಮಾನವನನ್ನು, ಆತನ ಬದುಕನ್ನು ತಯಾರು ಮಾಡುತ್ತಿಲ್ಲ, ಬದಲು ನಿರರ್ಥಕವಾಗಿದೆ ಎನ್ನುವ ಕಾರಣಕ್ಕೆ ಶಿಕ್ಷಣ ಸಾಯುತ್ತಿದೆ ಎನ್ನುವ ವಾದವಿರುವುದು. ಇದನ್ನು ತುರ್ತುಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕದಲ್ಲಿಟ್ಟು ಕೂಡಾ ಸಂರಕ್ಷಿಸಲು ಸಾಧ್ಯವಿಲ್ಲ.

‘ಶಿಕ್ಷಣ’ ಅನ್ನುವ ಸ್ವರ್ಗ ಸದೃಶ ಸಂಗತಿ ಇಡೀ ಮಾನವ ಜನಾಂಗವನ್ನು ಉನ್ನತೀಕರಿಸುತ್ತದೆ ಎನ್ನುವ ಭ್ರಮೆಯಿಂದಲೇ ಸುಮಾರು 16ನೇ ಶತಕದ ಫ್ರೆಂಚ್ ಸಮಾಜದಲ್ಲಿ ಈ ಶಿಕ್ಷಣ ಊಹೆ ಮತ್ತು ಅಂದಾಜಿನ ಮೇಲೆ ಆರಂಭವಾಯ್ತು. ಇಂತಹ ಶಿಕ್ಷಣ ನಿಖರತೆ, ಸ್ಪಷ್ಟತೆ, ಅನುಭವಜನ್ಯತೆಯಂತಹ ಗುಣಗಳನ್ನು ತನ್ನ ಮೇಲೆ ಆರೋಪಿಸಿಕೊಂಡ ಕ್ರಮವಂತೂ ಒಂದು ವಿಡಂಬನೆ. ಅಕ್ಷರಶಃ ಇಂತಹ ಎರವಲು ಪಡೆದ ಶಿಕ್ಷಣ ಎನ್ನುವ ಕ್ರಮ ಭಾರತೀಯ ಸಮಕಾಲೀನ ಸಂದರ್ಭದಲ್ಲಿ ಹುಟ್ಟುಹಾಕಿದ ಸಮಸ್ಯೆ, ಸಂಕೀರ್ಣತೆಗಳು ನಿಜವಾಗಿಯೂ ಘೋರರೂಪಿಯಾದದ್ದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಒಂದು ಕಮ್ಯೂನಿಸ್ಟ್ ಸಮಾನತೆ ಸ್ಥಾಪನೆ ಆಶಯದ ಹೋರಾಟವೋ ಅಥವಾ ಇಡೀ ಜಗತ್ತಿನ ಒಂದು ಆದರ್ಶವೆಂಬಂತೇನೇ ಬಿಂಬಿತವಾದ ‘ಗಾಂಧಿ’-ಅಹಿಂಸಾತ್ಮಕ ತಾತ್ವಿಕ ಹೋರಾಟವೋ ಮೂಡಬೇಕು ಎನ್ನುವ ಕೆಲವು ಚಿಂತಕರ ಅಭಿಪ್ರಾಯಗಳು ಅತ್ಯಂತ ಪ್ರಮುಖವೆಂದೇ ನನ್ನ ಗ್ರಹಿಕೆ. ಅತ್ಯಂತ ಮುಖ್ಯವಾಗಿ ಬಂಡವಾಳೀಕೃತ ಶಿಕ್ಷಣ ವ್ಯವಸ್ಥೆಯು ಸೃಷ್ಟಿಸಿರುವ 2 ವರ್ಗಗಳು. ಅಂದರೆ ಸಮಕಾಲೀನ ಜಗತ್ತಿನ ಪ್ರಮುಖ ಶಿಕ್ಷಣ ಚಿಂತಕರುಗಳಾದ ಇವಾನ್ ಇಲ್ಲಿಚ್ ಮತ್ತು ಎಸ್ತೆವಾ ಗುಸ್ತೆವಾ ಹೇಳುವ ಹಾಗೆ, ಜ್ಞಾನ ಬಂಡವಾಳಿಗರು ಮತ್ತು ‘ಜ್ಞಾನ ದರಿದ್ರರು ಎನ್ನುವ ಸಮಾಜೋ-ಸಾಂಸ್ಕೃತಿಕ ಅಸಮಾನತೆಯ ಮಾದರಿಯ ವರ್ಗಗಳನ್ನು ನಿರ್ಮಾಣ ಮಾಡಿದೆ. ಇದು ಬರಿಯ ವರ್ಗ ಸೃಷ್ಟಿಯಾಗಿರದೇ ‘ಜ್ಞಾನ ದರಿದ್ರರ’ ಅಸ್ತಿತ್ವ ಮತ್ತು ಆತ್ಮಸಾಕ್ಷಿಯನ್ನೇ ನಾಶಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಭಾರತೀಯ ಮತ್ತು ಕನ್ನಡದ ಸಂದರ್ಭದಲ್ಲಂತೂ, ಒಂದು ಕಡೆ ಶ್ರೀಮಂತ, ಮಾಹಿತಿ ಇರುವ ಮತ್ತು ಜ್ಞಾನ ಉದ್ಯಮ-ಬಂಡವಾಳದ ಕ್ರಿಯೆಯಲ್ಲಿ ಭಾಗಿಯಾಗಿರುವ ಜನ ವ್ಯಾಪಕವಾಗಿ IIT, IIM, IISC, BITS PILANI ಮುಂತಾದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಈ ಪ್ರಕ್ರಿಯೆಯ ಕೇಂದ್ರ ಮತ್ತು ಪರಿಧಿ-ಎರಡೂ ಕಡೆ ಇಲ್ಲದೇ ತ್ರಿಶಂಕುಗಳಾಗಿರುವ ಬಡವರು, ಆದಿವಾಸಿಗಳು, ಬುಡಕಟ್ಟು ಜನರು ಮತ್ತು ಭಾರತದ ಬಹುಪಾಲು ಹಳ್ಳಿಗಳಲ್ಲಿ ವಾಸವಾಗಿರುವ ಕುಗ್ರಾಮವಾಸಿಗಳು ಈ ವ್ಯವಸ್ಥೆ ಒಳಗೆ ಬರುವುದಿರಲಿ, ಬದಲು ಈ ವ್ಯವಸ್ಥೆಯ ಬಣ್ಣ, ಭಾಷೆ, ಸ್ವರೂಪ, ಆಕೃತಿ, ಔಪಚಾರಿಕತೆಯನ್ನು ಕಂಡು ಭಯಭೀತರಾಗಿದ್ದಾರೆ ಮತ್ತು ಹೆಚ್ಚು ಹೆಚ್ಚು ಕನ್‍ಫ್ಯೂಶನ್‍ಗೆ ಒಳಗಾಗಿದ್ದಾರೆ. ಹೀಗೆ ಅತ್ಯಂತ ಸ್ಪಷ್ಟವಾಗಿ ಈ ಶಿಕ್ಷಣವೆಂಬ ತಥಾಕಥಿತ ವಿದ್ಯಮಾನ ಸೃಷ್ಟಿಸಿರುವ ಮನೋಭಾವ-ದೃಷ್ಟಿಯಂತೂ ಅಪಾಯಕಾರಿಯಾಗಿದೆ. ಅದು ಮಾನವ ಸಮಾನತೆ, ಮಾನವ ಘನತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಾಮಾಜೀಕರಣಗೊಳಿಸುವುದೇ ಇಲ್ಲ, ಬದಲಿಗೆ ಬಂಡವಾಳ ವ್ಯವಸ್ಥೆಯ ಭಾಗವಾಗಿರುವ ಅಸಮಾನತೆ, ವರ್ಗ ತಾರತಮ್ಯವನ್ನು ಪ್ರಚೋದಿಸುತ್ತದೆ. ಒಟ್ಟಾರೆ ಪ್ರಜಾಪ್ರಭುತ್ವದ ಸೂಕ್ಷ್ಮಬೇರುಗಳನ್ನೂ ಕೂಡಾ ನಾಶಮಾಡಹೊರಟಿದೆ ಎಂಬುದೇ ನನ್ನ ಅಭಿಮತ. ವೃತ್ತಿಪರ ನೆಲೆಯಿಂದ ಕೂಡಾ ‘ಶಿಕ್ಷಣ’ ಎನ್ನುವ ಪರಿಸ್ಥಿತಿ ವಿಫಲವಾಗಿದೆಯೆಂದೇ ನನ್ನ ಅಭಿಮತ. ಅದು ತನ್ನ ಉದ್ಯಮ-ಬಂಡವಾಳ-ಮಾರುಕಟ್ಟೆಯ ಪ್ರಕ್ರಿಯೆಯಲ್ಲಿ ಮೊದಲು ಒಂದು ವರ್ಗಕ್ಕೆ ಭಾಗವಹಿಸಲು ಅವಕಾಶ ಕೊಡುವುದಿಲ್ಲ. ಅದೇ ರೀತಿ ಅವರನ್ನು ಮಾನವ ಸಂಪನ್ಮೂಲಗಳೆಂದು ಪರಿಗಣಿಸದೇನೇ ಅವರನ್ನು ವೃತ್ತಿಪರೀಯ ಅವಕಾಶಗಳಿಂದ ವಂಚಿಸುತ್ತದೆ. ಅಂತಹ ಜ್ಞಾನದರಿದ್ರರು ಅಕ್ಷರಶಃ ಅಕ್ಷರ ಅಸ್ಪೃಶ್ಯರಾಗಿ ಉಳಿದುಬಿಡುತ್ತಾರೆ. ಶಿಕ್ಷಣದ ಉದ್ಯಮದಲ್ಲಿ, ಹೊಸ ವರ್ಗ ಸಂಘರ್ಷದಲ್ಲಿ ಹೆಚ್ಚು ಜ್ಞಾನವನ್ನು ಬಳಸುವ ಜನವರ್ಗಕ್ಕೆ ಹೆಚ್ಚು ಮೌಲ್ಯ. ಸಮಾಜ ಅವರ ಮೇಲೆ ಸಾಕಷ್ಟು ಹಣ ಹೂಡಿ ಅವರನ್ನು ಮಾನವ ಸಂಪನ್ಮೂಲವಾಗಿ ರೂಪಿಸಿರುತ್ತದೆಯಾದ್ದರಿಂದ ಉತ್ಪಾದನಾ ಸಾಧನಗಳು ಬಹುವಾಗಿ ಅವರಿಗಾಗಿಯೇ ಮೀಸಲು. ಅಂಥ ಶಿಕ್ಷಿತರು ಮಾತ್ರವೇ ಈ ಸಮಾಜದಲ್ಲಿ ಎಲ್ಲ ಅನುಕೂಲಗಳಿಗೆ ಹಕ್ಕುದಾರರಾಗುತ್ತಾರೆ. ಉಳಿದ ಬಹುಸಂಖ್ಯಾತರ ಸಾಲಿಗೆ ಉಳಿಯುವುದು ದಾರಿದ್ರ್ಯ ಮತ್ತು ಅನರ್ಹತೆಗಳು ಮಾತ್ರ. ಮುಖ್ಯವಾಗಿ ನಾನು ಶಿಕ್ಷಣವೆಂಬ, ಕಲಿಕೆಯ ವಿರುದ್ಧದ ಪ್ರಕ್ರಿಯೆ ನಿವಾರಣೆಯಾಗಬೇಕೆಂದೇ ಅಭಿಪ್ರಾಯಪಡುತ್ತೇನೆ. ಈ ಶಿಕ್ಷಣವೆಂಬುದರ ಬದಲಿಗೆ ಜಗತ್ತಿನ ಅದೆಷ್ಟೋ ನಾಗರೀಕತೆ ಮತ್ತು ಸಮುದಾಯಗಳಲ್ಲಿ ಕಾಲ-ದೇಶ-ಭೂಗೋಳ ಸಾಪೇಕ್ಷವಾದ ಅತ್ಯಂತ ಅನನ್ಯವಾದ, ವೈವಿಧ್ಯಮಯವಾದಂತಹ ‘ಕಲಿಕೆ’ (Learning) ಯ ಕ್ರಮಗಳು ಇಂತಹ ‘ಶಿಕ್ಷಣ’ವೆನ್ನುವ ಸಂಗತಿಯನ್ನು ಪುನಃ ಸ್ಥಾಪಿಸಿದರೆ ಮಾತ್ರ ಇದು ಕೈಗೂಡುತ್ತದೆ. ಅದೂ ಅಲ್ಲದೆ ಈ ‘ಶಿಕ್ಷಣ’ವೆನ್ನುವ ಮಹಾಮಂತ್ರ ಅಥವಾ ಅಜೆಂಡಾ ಅಥವಾ ಕಾರ್ಯಸೂಚಿ ಅಥವಾ ಉದ್ಯಮಸೂಚಿಯು ಜನರನ್ನು ಬದುಕುವುದಕ್ಕಾಗಲೀ ಅಥವಾ ಕೆಲಸ ಮಾಡುವುದಕ್ಕಾಗಲೀ ತಯಾರು ಮಾಡುತ್ತಿಲ್ಲ. ಅದು ಅಕ್ಷರಶಃ ಯಾಂತ್ರಿಕವಾಗಿ ಕಾರ್ಖಾನೆಯಲ್ಲಿ ಹೆಂಚನ್ನು, ಪದಾರ್ಥವನ್ನು ಉತ್ಪಾದಿಸುವ ಹಾಗೆ, ಅದರ ಪ್ರಯೋಜನ, ನಿಷ್ಪ್ರಯೋಜನದ ವಿವಕ್ಷೆಯ ಹೊರತಾಗಿಯೂ ಕೂಡಾ ಉತ್ಪಾದಿಸುತ್ತದೆ. ಅರ್ಥಶಾಸ್ತ್ರ ಮತ್ತು ಸಾಮಾನ್ಯ ಗ್ರಹಿಕೆಯೂ ಹೇಳುವ ಹಾಗೆ ಬೇಡಿಕೆಗಿಂತ ಜಾಸ್ತಿ ಒಂದು ವಸ್ತು ಉತ್ಪಾದಿತವಾದರೆ ಅದು ಸಹಜವಾಗಿ ತನ್ನ ಬೇಡಿಕೆಯನ್ನು ಕಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಕೊನೆಗೆ ಅದು ಅಕ್ಷರಶಃ ತ್ಯಾಜ್ಯವಾಗುತ್ತದೆ, ಜಂಕ್ ಆಗುತ್ತದೆ. ಒಬ್ಬ ವ್ಯಕ್ತಿ 3 ವರ್ಷ ಪದವಿ ಪಡೆದರೂ ಕೂಡಾ ಅದು ಆತ ಎಷ್ಟು ದಿನ ತರಗತಿಯ ಬೆಂಚ್‍ನಲ್ಲಿ ಕುಳಿತಿದ್ದ ಎನ್ನುವುದನ್ನು ಸೂಚಿಸುತ್ತದೆಯೇ ಹೊರತು, ಆತ ಕಸುಬು ಕಲಿತದ್ದಕ್ಕಾಗಲೀ ಅಥವಾ ತಜ್ಞತೆಯನ್ನು ಗಳಿಸಿದ್ದಕ್ಕಾಗಲೀ ಪ್ರಮಾಣಪತ್ರವಾಗಲಾರದು. ಉದ್ಯೋಗ ಭರವಸೆಗಿಂತ ಅದು ಖಾಯಂ ನೈರಾಶ್ಯವನ್ನು ಉಂಟುಮಾಡುತ್ತದೆ. ಟ್ಯಾಕ್ಷಿ ಚಾಲಕರಾಗಿ ಅಥವಾ ಹೋಟೆಲು ಕೆಲಸಗಾರರಾಗಿ ದುಡಿಯಬೇಕಾಗಿ ಬರುವ ಇಂಜಿನಿಯರ್‍ಗಳು ಮತ್ತು ಲಾಯರುಗಳು ಅನುಭವಿಸುವ ಅವಮಾನವೇ ಇದಕ್ಕೆ ಸಾಕ್ಷಿ. ಆದರೆ ಇನ್ನೊಂದು ದಿಕ್ಕಿನಿಂದ, ಶಿಕ್ಷಿತರ ಇಂಥ ಅವಮಾನವೇ ಅಂಥ ಪದವಿಗಳಿಲ್ಲದವರಿಗೆ ಒಂದು ಬಿಡುಗಡೆಯ ಅನುಕೂಲವಾಗಿ ಕಾಣಿಸುವುದೂ ಇದೆ. ಯಾಕೆಂದರೆ ಅಂಥ ಸ್ಥಿತಿಯಲ್ಲಿಯೇ ಅವರು ತಮ್ಮಲ್ಲಿರುವ ಬುದ್ಧಿ, ಕೌಶಲ ಮತ್ತು ಕಸುಬುಗಾರಿಕೆಯನ್ನು ಅರಿತು ತಮ್ಮನ್ನೇ ಪುನರ್ ಮೌಲ್ಯೀಕರಿಸಿಕೊಳ್ಳುತ್ತಾರೆ, ಬದುಕುತ್ತಾರೆ.

ಜಾಗತೀಕೃತ ಮತ್ತು ಜಾಗತೀಕೃತೋತ್ತರ ವಿಶ್ವದಲ್ಲಿ ಶಿಕ್ಷಣ ಎಂಬ ವ್ಯವಸ್ಥೆ ಬೇಡ ಎಂಬ ವಾದವನ್ನು ಮತ್ತು ಈ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ತರಬೇಕೆನ್ನುವ ಮೂರು ವರ್ಗಗಳಿವೆ: ಒಂದು; ಶಿಕ್ಷಣ ಕೇಂದ್ರದ ಭೌತಿಕ ಪರಿಸರ ಸುಧಾರಿಸಬೇಕು, ಎರಡು; ಪ್ರತೀ ಸಮುದಾಯ ಮತ್ತು ಮಕ್ಕಳ ಪಾಲಕರಿಂದಲೇ ಅವರ ಇಚ್ಛೆಯ ಶಿಕ್ಷಣ ವ್ಯವಸ್ಥೆಯ ಐಚ್ಛಿಕ ಆಯ್ಕೆ, ಮೂರು; ಸಮಾಜವೇ ಕಲಿಕೆಯ ಕೇಂದ್ರವಾಗಬೇಕು, ಅಂದರೆ ಶಿಕ್ಷಣ ಮುಕ್ತವಾಗಿ ಸಿಗಬೇಕು ಎನ್ನುವುದು ಮತ್ತು ಈ ಮುಕ್ತತೆ-ಮಾರುಕಟ್ಟೆ ಪರಸ್ಪರ ಸಂಪರ್ಕವನ್ನು ಪಡೆಯಬೇಕು ಎನ್ನುವುದು ತಾತ್ವಿಕವಾಗಿ ಶಿಕ್ಷಣ ಸುಧಾರಣೆ, ಮುಕ್ತ ಶಿಕ್ಷಣ ಮತ್ತು ಜಾಗತೀಕೃತ ವಿಶಾಲವಾದ ನೆಲೆಯನ್ನು ಹೊಂದಿದ ಸಂಗತಿಗಳನ್ನು ಸೃಷ್ಟಿಸುವುದಾಗಿದೆ. ಆದರೆ ಇವುಗಳು ವ್ಯಕ್ತಿಗಳನ್ನೂ, ವ್ಯಕ್ತಿಶಃ ಮತ್ತು ಸಾಂಸ್ಥಿಕವಾಗಿ ನಿಯಂತ್ರಿಸುವ ಸಾಧನಗಳಾಗಿ ಬಿಡುವ ಅಪಾಯವೇ ಜಾಸ್ತಿ. ಇವುಗಳು ಕ್ರಮೇಣ close circuit cameraಗಳಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು, ಮತ್ತವು ಸೃಜನಶೀಲ ಸಾಧ್ಯತೆಗಳನ್ನು ನಿರಾಕರಿಸುತ್ತಾ ಸಾಗುತ್ತದೆ.

ಶಿಕ್ಷಣ ಎನ್ನುವ ಮಾಯಾಮೃಗದ ಇನ್ನೊಂದು ಬಣ್ಣವೆಂದರೆ ಅದು ಚರಿತ್ರೆಯಿಂದ ಆಕರ್ಷಿಸಿ ಗಳಿಸಿಕೊಳ್ಳುವ ಮಾನ್ಯತೆ. ಆಧುನಿಕ ವಿದ್ಯಮಾನವಾದ ರಾಷ್ಟ್ರವೆಂಬ ಆಲೋಚನೆ ಚರಿತ್ರೆಯನ್ನು ಚಿತ್ತಾಕರ್ಷಕವಾಗಿ ಬಳಸಿಕೊಳ್ಳುವ ಹಾಗೆಯೇ ಇದೂ ಕೂಡಾ ಚರಿತ್ರೆಯಿಂದ ಮಾನ್ಯತೀಕರಣಕ್ಕೊಳಪಡುತ್ತದೆ. ಅದೇನೆಂದರೆ, ಈ ಶಿಕ್ಷಣವೆನ್ನುವುದು ಸೂರ್ಯಚಂದ್ರರಷ್ಟೇ ಪ್ರಾಚೀನವಾದುದು, ಜಡಶಿಲೆಗಳಷ್ಟೇ ಚಾರಿತ್ರಿಕವಾದುದು ಎಂಬ ಮಿಥಕ ರೂಪೀ ಸಂಗತಿಯನ್ನು ಶಿಕ್ಷಣದ ಜತೆ ಹಾರಿಸಿ ಬಿಟ್ಟಿರುವುದು. ಶಿಕ್ಷಣವೆಂಬ ವಿದ್ಯಮಾನ ಆಧುನಿಕತೆಯ ಹಸುಗೂಸು ಮತ್ತು ಪಶ್ಚಿಮದ ಮತ್ತು ಯುರೋಪಿನ ಬಂಡವಾಳಶಾಹೀ ಭೌತಿಕತೆಯಲ್ಲಿಯೇ ಅದು ಹುಟ್ಟಿತು. ಅದು ಕ್ಯಾಪಿಟಲಿಸಂನ ಆಶೋತ್ತರ, ಉದ್ದೇಶಗಳನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆಯೇ ಹೊರತು, ಬೇರೆ ಕಾಲಘಟ್ಟದ, ಯುಗದ ಧರ್ಮವನ್ನಲ್ಲ. ಇಡೀ ಜಗತ್ತು ಮತ್ತು ವಿಶೇಷವಾಗಿ ತೃತೀಯ ಜಗತ್ತು (decolonization) ನಿರ್ವಸಾತೀಕರಣವನ್ನು ಬೌದ್ಧಿಕ, ಸಾಂಸ್ಕøತಿಕವಾಗಿ ಆಗ್ರಹಿಸುವಂತಹ ಈ ಸಂದರ್ಭದಲ್ಲಿ, ಮರುವಸಾಹತೀಕರಣಕ್ಕೆ ಒಳಪಡುವ ಪ್ರಕ್ರಿಯೆಯ ಭಾಗವಾಗಿ ಕೂಡಾ ಅದನ್ನು ನಾವು ಗಮನಿಸಬಹುದು. ಶಿಕ್ಷಣ ಉತ್ಪನ್ನಗೊಂಡ ಕಾಲ-ಅವಕಾಶದ ಗತವನ್ನು ಕೂಡಾ ಪುನಃ ವಸಾಹತೀಕರಣಕ್ಕೆ ಒಗ್ಗಿಸುವ ವಿಚಿತ್ರ ಪ್ರಕ್ರಿಯೆಯೆಂದೇ ನಾವಿದನ್ನು ಬಗೆಯಬಹುದು. ಅಂತೆಯೇ ನಾನು ಈಗಾಗಲೇ ಉಲ್ಲೇಖಿಸಿದ ಹಾಗೆ ‘ಶಿಕ್ಷಣ’ವೆಂಬ ಈ ಆಧುನಿಕ ಪರಿಕಲ್ಪನೆಯ ಪದ ಬಳಕೆಯಾಗಿದ್ದೇ ಹದಿನೆಂಟನೆಯ ಶತಮಾನದ ಫ್ರಾನ್ಸ್ ದೇಶದಲ್ಲಿ ಅದು ಮೂಲತಃ ಕ್ರಿಶ್ಚಿಯನ್ ಥಿಯಾಲಜಿಯ ಭಾಗ ಮತ್ತು ವಾದದ ರೂಪದಲ್ಲಿ ಉದ್ಭವವಾಯಿತೇ ವಿನಃ ಮಾನವನ ಚರಿತ್ರೆಯ ಆರಂಭದಲ್ಲೇ ಇದ್ದ ಒಂದು ಭೂಗೋಳಶಾಸ್ತ್ರೀಯ, ಪುರಾಣಶಾಸ್ತ್ರೀಯ ಮತ್ತು ಚಾರಿತ್ರಿಕ ಸತ್ಯವಲ್ಲ. ಇಂತಹ ಹೇಳಿಕೆ ಅಂದರೆ ಚರಿತ್ರೆಯ ರೇಖೀಯ ಚಲನೆಯ ಆರಂಭದಲ್ಲೇ ಅದು ಇತ್ತು ಎನ್ನುವುದು ಶಿಕ್ಷಣದ capitalistic ಆಯಾಮದ propagandaವಷ್ಟೇ ಆಗಿದೆ. ಅಷ್ಟಕ್ಕೂ ಶಿಕ್ಷಣವೆಂಬ ಪರಿಕಲ್ಪನೆ ಸಂಸ್ಕಾರಕ್ಕೆ ಹೆಚ್ಚು ಹತ್ತಿರವಾಗಿತ್ತೇ ಹೊರತು ಔಪಚಾರಿಕ Education ಎಂಬುದರ ನೆಲೆಗಲ್ಲ.

ಶಿಕ್ಷಣದ ಇನ್ನೊಂದು ಗಿಲೀಟುವಾದವೆಂದರೆ ಆಧುನಿಕ ಪ್ರಜಾಪ್ರಭುತ್ವೀಯ ನೆಲೆಯ ಎರಡು ಮಹತ್ವದ ಸಮಾಜೋ-ರಾಜಕೀಯ ಮೌಲ್ಯಗಳಾದ ಸಮಾನತೆ ಮತ್ತು ನ್ಯಾಯಗಳ ಜತೆಯಲ್ಲಿ ಅದನ್ನು ಸೂತ್ರೀಕರಿಸುವುದು. ಶಿಕ್ಷಣದ ಗುರಿ ಮತ್ತು ಮೂಲಸ್ರೋತವೇ ಜಸ್ಟೀಸ್ ಮತ್ತು Equalityಯೆಂದು ಬಿಂಬಿಸುವ ಪ್ರಯತ್ನವಿದಷ್ಟೇ. ಆದರೆ ಶಿಕ್ಷಣವೆನ್ನುವ ಮೂಲಭೂತ ಪರಿಕಲ್ಪನೆಯೇ ಸಮಾನತೆಯನ್ನು ಧ್ವನಿಸುವುದಿಲ್ಲ ಮತ್ತು ಶುದ್ಧ ಅಸಮಾನತೆಯ ಪರವಾಗಿರುವ ಬಂಡವಾಳಶಾಹೀ ಪರವೆನ್ನುವುದು ಗುಸ್ತ್ತೆವೋ ಎಸ್ತೆವಾ ವಾದ. ಈ ನೆಲೆಯಲ್ಲಿಯೇ ಗುಸ್ತೆವೋ ಎಸ್ತೆವಾ Education ಅನ್ನು ಪ್ರಾಚೀನ ಗ್ರೀಕ್ ದೇಶದ Troy ಮರದ ಕುದುರೆಗೆ ಹೋಲಿಸುವುದು. ಸಮಾಜ, ಪ್ರಭುತ್ವ ತನ್ನ ವೈವಿಧ್ಯದ ಸಂಪನ್ಮೂಲಗಳನ್ನು ವ್ಯಯಿಸಿ ಶಿಕ್ಷಣವನ್ನು ನೀಡಿದರೂ ಕೂಡಾ ಸಮಾನವಾಗಿ ಅದು ಸಮಾಜದ ಸಾಮಾಜಿಕರನ್ನು ತಲುಪುದಿಲ್ಲ. ಬರೀ ಅಲ್ಪಸಂಖ್ಯಾತ ಜನ ಮಾತ್ರ ಪಡೆದು ಬಹು ಸಂಖ್ಯೆಯ ಜನ ಇದರಿಂದ ವಂಚಿತರಾಗುತ್ತಾರೆ. ಒಂದು ಹಂತದಲ್ಲಿ ವಂಚಿತ ಬಹುಸಂಖ್ಯೆಯ ಜನರನ್ನು ಶಿಕ್ಷಿತ ಸಮಾಜದಲ್ಲಿ ಬದುಕಲೂ ಕೂಡಾ ಅನರ್ಹರೆಂದು ಘಂಟಾಘೋಷವಾಗಿ ಸಾರಲಾಗಿ ಇದು ಅತ್ಯಂತ ದಮನಕಾರಿಯಾದ ಎರಡು ವರ್ಗಗಳನ್ನು ಸೃಷ್ಟಿಸುತ್ತದೆ; ಕ್ರಮೇಣ ವರ್ಗ ಸಂಘರ್ಷಗಳನ್ನೂ ಕೂಡಾ ಸೃಷ್ಟಿಸುವುದರ ಮೂಲಕ ಅತ್ಯಂತ ಮೂಲಭೂತವಾದ ಸಾಮಾಜಿಕ ಪರಿಕಲ್ಪನೆಗಳಾದ ಸಮಾನತೆ ಮತ್ತು ನ್ಯಾಯವನ್ನು ತಾತ್ವಿಕವಾಗಿ, ಪ್ರಾಯೋಗಿಕವಾಗಿ ಇದು ನಿರಾಕರಿಸುತ್ತದೆ. ಎಸ್ತ್ತೆವಾ ಪ್ರಕಾರ ಈ ಶಿಕ್ಷಣವೆಂಬುದು Elimination Agent ಇರುವ ಹಾಗೆ. ಇದು ತಥಾಕಥಿತ ಅರ್ಹರನ್ನು ಅನರ್ಹರನ್ನು ಒಟ್ಟಿಗಿರಿಸಿದ ನಂತರ, ಅನರ್ಹರನ್ನು ಜರಡಿ ಹಿಡಿದಾಗ ಸಿಗುವ ನಿರುಪಯುಕ್ತ ವಸ್ತುಗಳೆಂದು ಪೃಥಕ್ಕರಿಸಿ, ಭಿನ್ನವಾಗಿ ಬಗೆಯುವ ಕ್ರಮ. ಸಮಕಾಲೀನ UNESCO ಮತ್ತು UNDP ವರದಿಗಳೂ ಕೂಡಾ ಈ ರೀತಿ ಶಿಕ್ಷಣ ಜರಡಿ ಹಿಡಿಯುವ ಪ್ರಕ್ರಿಯೆಯಲ್ಲಿ ಬಹಳ ಮುಂಚೂಣಿಯಲ್ಲಿರುವುದನ್ನೂ ಮತ್ತು ಬಹುಸಂಖ್ಯಾತ ಜನರನ್ನು ತಲುಪದಿರುವುದನ್ನೂ ಕೂಡಾ ತಿಳಿಸುತ್ತದೆ. ಒಂದು UNESCO ವರದಿ ಪ್ರಕಾರ, ಒಂದನೆಯ ತರಗತಿಗೆ ಪ್ರವೇಶ ಪಡೆಯುವ ಶೇ 60ರಷ್ಟು ವಿದ್ಯಾರ್ಥಿಗಳು ಶಿಕ್ಷಣದ ವ್ಯವಸ್ಥೆಯಲ್ಲಿ ಮುಂದೆ ಸಾಗುವುದಿಲ್ಲ ಮತ್ತು ಶಿಕ್ಷಣ ಎನ್ನುವ ಸಮ್ಮೋಹಿನಿಯಿಂದ ಹೊರಗೆ ಉಳಿಯುತ್ತಾರೆ. ಕೆಲವು ರಾಷ್ಟ್ರಗಳಲ್ಲಿ, ‘ಅಕ್ಷರಸ್ಥ’ ಎನ್ನುವ ಹಂತವನ್ನೂ ಕೂಡಾ ಮುಟ್ಟುವುದಿಲ್ಲ. ಹೀಗೆ ಕಲಿಕೆ ಮತ್ತು ಸಾಂಸ್ಕೃತಿಕವಾಗಿ ಅವರು ಹಿಂದುಳಿಕೆಯನ್ನು ಹೊಂದುತ್ತಾರೆ. ಹೀಗೆ ಅತ್ಯಂತ ಪ್ರಾಥಮಿಕ ರಾಜಕೀಯ ಮೌಲ್ಯಗಳಾದ ನ್ಯಾಯ ಮತ್ತು ಸಮಾನತೆಯನ್ನು ‘ಶಿಕ್ಷಣ’ ಅನ್ನುವ ವಿದ್ಯಮಾನ ಉಂಟುಮಾಡುತ್ತದೆ ಎಂಬುದು ಅಕ್ಷರಶ: ಭ್ರಮೆಯಷ್ಟೇ. ಇಂತಹ ‘ಶಿಕ್ಷಣ’ ಎಂಬ ವ್ಯವಸ್ಥೆ ವಿಫಲತೆಯನ್ನು ಸಾಧಿಸಿದ್ದರಲ್ಲಿ ಯಾವ ಸಂಶಯವೂ ಕೂಡಾ ಬರದು. ಶಿಕ್ಷಣ, ನಿರಾಶಾವಾದವನ್ನೂ ಕೂಡಾ ಸೃಷ್ಟಿಸುತ್ತಾ, ಶಿಕ್ಷಿತರೂ ಕೂಡಾ ಉದ್ಯೋಗ ವಿರಹಿಗಳಾಗಿ ಶಿಕ್ಷಣದ ಬುಡವನ್ನೇ ಪ್ರಶ್ನಿಸತೊಡಗಿರುವುದೂ ಈ ನೆಲೆಯಿಂದ. ಅಂದರೆ ಶಿಕ್ಷಣ ಜಗತ್ತಿನ ಬಗ್ಗೆ ಕಲಿಯುವುದನ್ನು ತಿಳಿಸುತ್ತದೆಯೇ ಹೊರತು ಜಗತ್ತಿನಿಂದ ಕಲಿಯುವ ಬಗ್ಗೆ ಅಲ್ಲ. ಶಿಕ್ಷಣದ ವಿಫಲತೆಯಿರುವುದೇ ಈ ಬೀಜದಲ್ಲಿ. ಸಮಕಾಲೀನ ಸಂದರ್ಭ ಕಲಿಕೆಯ-ಜೀವನ ಕೌಶಲದ ಚರ್ಚೆಯ ಹೊತ್ತಿಗೆ ಗಾಂಧಿಯನ್ನು ಆಹ್ವಾನಿಸಿ ಪರ್ಯಾಯವನ್ನು ಯೋಚಿಸುವ ರೀತಿಯಲ್ಲೇ ಗುಸ್ತೆವೋ ಎಸ್ತೆವಾ ಚರ್ಚಿಸಿರುವುದು ನಿಜಕ್ಕೂ ಚೋದ್ಯವೇ ಸರಿ. ಗಾಂಧಿ, ಶಿಕ್ಷಣದ ಈ ಸಾಧ್ಯತೆ ಮತ್ತು ಭವಿಷ್ಯವನ್ನು 1930ರ ದಶಕದಲ್ಲಿಯೇ ಚಿಂತಿಸಿದ್ದರು. ಗಾಂಧೀಜಿಯ ಯೋಚನೆ ಹೆಚ್ಚು ಸಹಜವೂ, ಸಾವಯವವೂ ಆದದ್ದಾಗಿತ್ತು. ಅಂತಹ ದೂರದೃಷ್ಟಿಯ ಯೋಚನೆಯ ಕೆಲವು ತುಣುಕುಗಳನ್ನೇ ಗುಸ್ತೆವೋ ಎಸ್ತೆವಾ ಈಗ ಜಾರಿಯ ಜರೂರಿಗೆ ಇಡುತ್ತಿದ್ದಾರೆ.

ಶಿಕ್ಷಣದ ಇತಿಹಾಸ ಮತ್ತು ಕಥನದ ಗತಿಯನ್ನು ಗಮನಿಸಿದಾಗ ಅದು ಬಂಡವಾಳಷಾಹೀ ಬೆಳವಣಿಗೆಯ ಜತೆಜತೆಗೆ ಸಮಾನಂತರವಾಗಿ ಸಾಗಿರುವುದನ್ನು ಕಾಣಬಹುದು. ಇವು ಪರಸ್ಪರ ಪೂರಕ ಮತ್ತು ಅನುರೂಪವಾದವುಗಳೂ ಕೂಡಾ. ಇವೆರಡರ ಉಗಮದಲ್ಲಿ ಪ್ರಭುತ್ವ ಮತ್ತು ರಾಷ್ಟ್ರರಾಜ್ಯಗಳು ಪ್ರಭಾವ ಬೀರಿದ್ದನ್ನು ಕೂಡಾ ಗಮನಿಸಬಹುದು. ಸೈನ್ಯ, ಬಂಡವಾಳ ಮತ್ತು ತನ್ನನ್ನು ಮಾನ್ಯತೀಕರಿಸುವ ಅನೇಕ ಮಾಧ್ಯಮಗಳ ಹಾಗೆ ಶಿಕ್ಷಣವನ್ನೂ ಕೂಡಾ ಪ್ರಭುತ್ವ ಬಳಸಿದ್ದನ್ನು ಮತ್ತು ಅದರ ಮೇಲೆ ನಿಯಂತ್ರಣ, ಹತೋಟಿ ಸಾಧಿಸಿದ್ದನ್ನೂ ಕೂಡಾ ಕಾಣಬಹುದು. ಇಂತಹ ‘ಶಿಕ್ಷಣ’ ಬಂಡವಾಳಶಾಹೀ ವ್ಯವಸ್ಥೇಯ ಉಪಉತ್ಪನ್ನವೇ ಹೊರತು, ನಿರ್ವಾತದಿಂದ ಹುಟ್ಟಿದ ಪ್ರಕ್ರಿಯೆಯಲ್ಲ ಎಂಬ ಅಂಶವನ್ನೂ ಕೂಡಾ ಇದು ಮನಗಾಣಿಸುತ್ತದೆ. ಪ್ರಭುತ್ವ ತಾನು ಸೇನೆ, ಪೋಲಿಸ್‍ನ ಮೂಲಕ ಸಮಾಜದ ನಿಯಂತ್ರಣ ಮಾಡಿದ ಹಾಗೆಯೇ ಶಿಕ್ಷಣವನ್ನೂ ಕೂಡಾ ಬಳಸಿತು. ಶಿಕ್ಷಣ, ಬಂಡವಾಳಕ್ಕಿಂತ ಭಿನ್ನವಾದರೂ ಕೂಡಾ ಅದು ಸೃಷ್ಟಿಸಿದ ಕೆಲವು ಭ್ರಮೆಗಳು, ಮುಖ್ಯವಾಗಿ ಶಿಕ್ಷಣ ಸಾಮುದಾಯಿಕ ಅಗತ್ಯವೆಂದು ಬಿಂಬಿಸಿದ ಕ್ರಮ ಇತ್ಯಾದಿಗಳು ಪ್ರಭುತ್ವ ಮತ್ತು ಅಧಿಕಾರಶಾಹೀಯು ಹೇರಿದ ಹೇರಿಕೆಯ ಭಾಗವಾಗಿಯೇ ಇದೆ. ಇಂತಹ ಶಿಕ್ಷಣ, ಶಿಕ್ಷಿತರನ್ನು ಜ್ಞಾನದ ಗ್ರಾಹಕರನ್ನಾಗಿ ಮಾಡುತ್ತಾ ಜ್ಞಾನ ಬಂಡವಾಳ ಮತ್ತು ಶಿಕ್ಷಣದ ಉದ್ಯಮ ಮತ್ತು ಬಂಡವಾಳಶಾಹೀಯನ್ನು ಪೋಷಿಸುತ್ತಾ ಜಾಗತಿಕ ಕ್ಯಾಪಿಟಲ್ ಪ್ರಭುಗಳ ಎದುರು ಕೈ ಕಟ್ಟಿ ನಿಲ್ಲುವ ಕೆಲಸದಾಳುಗಳನ್ನಾಗಿ ಮಾಡಿರುವುದೂ ಕೂಡಾ ಶಿಕ್ಷಣ-ಬಂಡವಾಳಶಾಹೀ ಒಂದೇ ಚಾರಿತ್ರಿಕ ಸಂದರ್ಭದ ಶಿಶುಗಳು ಎಂಬುದನ್ನು ಶ್ರುತಪಡಿಸಿದೆ. ಇಂತಹ ಶಿಕ್ಷಣ ಎಂಬ ವ್ಯವಸ್ಥೆ ಲಿಯೋ ಟಾಲ್‍ಸ್ಟಾಯ್ ಹೇಳುವ ಹಾಗೆ “ಶಿಕ್ಷಣ ಒಬ್ಬರನ್ನು ಏನಾದರೂ ಒಂದಾಗಿ ಪ್ರಜ್ಞಾಪೂರ್ವಕವಾಗಿ ರೂಪಿಸುವ ಕೆಲಸ” ಎಂಬುದನ್ನು ಮೀರಿ ಒಂದು ನಿರ್ದಿಷ್ಟ ಬಂಡವಾಳಶಾಹೀ-ಅಧಿಕಾರಶಾಹೀ ವ್ಯವಸ್ಥೆಗೆ ಅಧೀನವಾಗಿ ರೂಪಿಸುವ ಕಸುಬಾಗಿದೆ. ಒಂದು ಶೋಷಕ ವ್ಯವಸ್ಥೆಗೆ ವರ್ಗಗಳನ್ನು ವಿಭಜಿಸಿ ಮತ್ತೊಂದು ಸಂಘರ್ಷವನ್ನು ಎದುರು ನೋಡುತ್ತಿದೆ. ಬಂಡವಾಳಶಾಹೀ ವ್ಯವಸ್ಥೆಯು ಉದ್ಯುಕ್ತವಾಗಿದ್ದ, “ಉತ್ಪಾದಕ ವಸ್ತುಗಳನ್ನು ಉತ್ಪಾದಿಸುವ ವ್ಯಸನದ ಓಟ”ದಲ್ಲಿ ಭಾಗವಹಿಸಿ ಅಂತಿಮವಾಗಿ ನಿರುಪಯುಕ್ತ ವಸ್ತ್ತು, ಮಾನವರನ್ನು ಸೃಷ್ಟಿಸಿದೆ. ಇಂತಹ ಬಂಡವಾಳಶಾಹೀ ಹಸುಗೂಸು ಶಿಕ್ಷಣಕ್ಕೆ, ತನ್ನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಶಿಕ್ಷಿತರಾದ ಎಲ್ಲರಿಗೂ ಕೂಡಾ ಸ್ಥಾನ-ಮಾನ-ಉದ್ಯೋಗ-ಅಂತಸ್ತನ್ನು ಕರುಣಿಸಲಾಗದೇ ಜೀರ್ಣಿಸಿಕೊಳ್ಳುವ, ಸಮರಸ ಮಾಡಲಾಗದ ಪರಿಸ್ಥಿತಿಯೂ ಅದನ್ನು ಪ್ರಶ್ನಿಸಲು ಕಾರಣ. ಆದ್ದರಿಂದ ಈಗ ಜಗತ್ತಿನ ಅನೇಕ ಭಾಗಗಳಲ್ಲಿ, ತೃತೀಯ ಜಗತ್ತಿನ ಅನನ್ಯ ಜಗತ್ತಿನಲ್ಲಿ ಅನೇಕ ಸಮುದಾಯ, ಮನಸ್ಸು, ಜನ ಮತ್ತು ಪ್ರಜ್ಞೆ ಶಿಕ್ಷಣ ಸಾಕು ಎನ್ನುತ್ತಿದ್ದಾರೆ ಮತ್ತು ಕಲಿಕೆ ಬೇಕು ಎನ್ನುತ್ತಿದ್ದಾರೆ.

ಈ ಮೇಲಿನ ಶಿಕ್ಷಣ ಸೃಷ್ಟಿಸಿದ ಕೆಲವು ಚರ್ಚೆ, ಸಮಸ್ಯೆಗಳಿಗೆ ಪರಿಹಾರವೇನು? ಜಗತ್ತಿನ ಆಫ್ರಿಕಾ, Latin ಅಮೆರಿಕಾದ ಮೆಕ್ಸಿಕೋ-ಚಿಲಿ-ಪೆರು, ಭಾರತದಂತಹ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆ ಎದ್ದಿದೆ. ಅದೆಂದರೆ ‘ಶಿಕ್ಷಣ’ ಸಾಕು, ಬದಲು ಹಳೆಯ ಸೃಜನಶೀಲ ಕಲಿಕೆಯ ಮಾರ್ಗಗಳು ಬೇಕು ಎಂಬ ಹೊಸ ಜಂಜಾವಾತ. ಅಂತಹ ಕಲಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಆರ್ಥಿಕ ರೂಪಾಂತರ ಮಾಡಬೇಕು ಎಂಬುದು ಈ ರೀತಿಯ ಹೊಸ ಕಾಣ್ಕೆಯನ್ನರಸುತ್ತಿರುವ ತೃತೀಯ ಜಗತ್ತು ಮತ್ತು ಅಲ್ಲಿನ ಚಿಂತಕರ, ಶಿಕ್ಷಣ ತಜ್ಞರ ಅಂಬೋಣ. ಭಾರತದಲ್ಲಿ ಸೇರಿದಂತೆ ‘ಎಜುಕೇಶನ್’ (ಶಿಕ್ಷಣ) ಎಂಬ ಪದವನ್ನು, ಹೊಸ ಪರ್ಯಾಯ ಪದವಾದ ‘ಟು ಲರ್ನ್'(ಕಲಿಯುವುದು) ಎಂಬ ಕ್ರಿಯಾಪದ ಸ್ಥಳಾಂತರಗೊಳಿಸುತ್ತಿದೆ. ಇದರೊಳಗೆ ಇರುವ ಪ್ರತಿಯೊಬ್ಬನೂ ಸರ್ಕಾರಿ ಅಥವಾ ಖಾಸಗಿ ಶಿಕ್ಷಣಸಂಸ್ಥೆಯನ್ನು ಅವಲಂಬಿಸುವುದು ಅನಿವಾರ್ಯ, ಆದರೆ ಕಲಿಯುವುದು ಎಂಬ ಕ್ರಿಯಾರೂಪವು ವ್ಯಕ್ತಿಯ ಒಳಗೆ ಇರುವ ಶಕ್ತಿ-ಸಾಮಥ್ರ್ಯವೊಂದರ ಆವಿಷ್ಕಾರ. ಅದು ಇತರರೊಂದಿಗೂ, ಪ್ರಕೃತಿಯೊಂದಿಗೂ ಇದ್ದುಕೊಂಡು ಮುನ್ನಡೆಯುವ ಒಂದು ಕ್ರಿಯಾಶೀಲ ಸಂಬಂಧ. ಅಂದರೆ ಕಲಿಯುವ ಪ್ರಕ್ರಿಯೆ ವೈಯಕ್ತಿಕವಾದ ಒಂದು ಕೆಲಸ. ಹಾಗೆ ಕಲಿಯುವುದಕ್ಕೂ ಮತ್ತು ಆ ಮೂಲಕ ಬದುಕುವ ಕ್ಷಮತೆಯನ್ನು ವರ್ಧಿಸಿಕೊಳ್ಳಲಿಕ್ಕೂ ಇರುವ ಮಾರ್ಗ ಒಂದೇ, ಅದು ನಿಸರ್ಗ ಮತ್ತು ಜಗತ್ತಿನಿಂದ ಕಲಿಯುವುದು. ಅದು ಜಗತ್ತಿನ ಬಗ್ಗೆ ಕಲಿಯುವುದಲ್ಲ. ಇಂತಹ ಹೊಸ ದೃಷ್ಟಿ, ಬೆಳಕು ಜಗತ್ತಿನ ಪ್ರತಿ ಪ್ರದೇಶವನ್ನು ವ್ಯಾಪಿಸಬೇಕಾಗಿದೆಯೇನೋ ಅತ್ಯಂತ ಶೀಘ್ರವಾಗಿ.

ಶಿಕ್ಷಣ ಮತ್ತು ಕಲಿಕೆಯ ಸಂದರ್ಭದಲ್ಲಿ ಪ್ರಸ್ತುತ ಸಂದರ್ಭ ನೈತಿಕತೆಯ ಮೇಲೂ ಕೂಡಾ ಹೊಸ ಚರ್ಚೆಯನ್ನು ಹುಟ್ಟು ಹಾಕುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ವಿವೇಕಾನಂದರು ಹೇಳುವ ಹಾಗೆ, ‘ಮಾನವನ ಪರಿಪೂರ್ಣ ವಿಕಾಸವೇ ಶಿಕ್ಷಣ’ ಮತ್ತು ‘ಶಿಕ್ಷಣ ಕೊನೆಗೊಳ್ಳುವುದು ಗುಣಗಳ ವಿಕಾಸದ ಮೂಲಕ’ ಎನ್ನುವ ಎರಡು ವಾಕ್ಯಗಳನ್ನು ನೆನೆದರೆ ಶಿಕ್ಷಣ ಒಂದು ಹಂತದಲ್ಲಿ ತಾನು ಸಾಧಿಸಬೇಕಾದುದನ್ನು ಸಾಧಿಸದೆ ವಿಫಲವಾಗಿದೆ, ಕೃತಕವಾಗಿ ಸೊರಗಿದೆ ಎಂದೇ ನನ್ನ ಅಭಿಪ್ರಾಯ. ಶಿಕ್ಷಣದಿಂದ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಿದ್ದಾನೆಯೇ ಹೊರತು ಮಾನವ ಸಂಬಂಧ, ನಿಸರ್ಗ ಪ್ರೀತಿ, ತಾದಾತ್ಮ್ಯ, ಸಹಬಾಳ್ವೆ, ಸಂತುಲಿತ ಅಭಿವೃದ್ಧಿ ಮುಂತಾದ ಗುಣ ಪ್ರವೃತ್ತಿಗಳನ್ನು ಸಾಧಿಸಿಲ್ಲವೇನೋ ಎಂಬ ಭಾವನೆ ಮತ್ತು ಆತಂಕವನ್ನು ಮೂಡಿಸುತ್ತಿದೆ. ಒಟ್ಟಿನಲ್ಲಿ ಹೊಸ ಆತಂಕದ ಸ್ಥಿತಿ ಮತ್ತು ಒತ್ತಡದ ಮೌನಕ್ಕೂ ಇದು ಕಾರಣವಾಗಿಸಿದೆ.

—————-

ಪ್ರದೀಪ್ ಕುಮಾರ್ ಶೆಟ್ಟಿ ಕ್ಯಂಚ್ನೂರ್

ಇತಿಹಾಸದ ಅಧ್ಯಾಪಕರು. ಸಿನಿಮಾ, ಸಾಕ್ಷ್ಯಚಿತ್ರ, ಸಂಗೀತ, ಕ್ರೀಡೆ, ಪ್ರವಾಸ ಹೀಗೆ ಹಲವು ಆಸಕ್ತಿಗಳು. ಊರು ಕುಂದಾಪುರ.

Share

11 Comments For "ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು
ಪ್ರದೀಪ್ ಕುಮಾರ್ ಶೆಟ್ಟಿ ಕ್ಯಂಚ್ನೂರ್
"

 1. Madhu
  30th October 2017

  Enlightening !!

  Reply
 2. RAVIVARMA
  30th October 2017

  thought provoking write up…!
  obtains a new insight about so called education …
  great job Pradeep ji ..!

  Reply
 3. Prasanna
  30th October 2017

  Wonderful article!!

  Reply
 4. Chinmay
  31st October 2017

  ಓದಲೇಬೇಕಾದ, ಆಲೋಚನೆಗೆ ಹಚ್ಚುವ ಬರಹಕ್ಕಾಗಿ ಧನ್ಯವಾದ

  Reply
 5. Harinakshi
  31st October 2017

  Good article..friend.

  Reply
 6. Ranjith kumar shetty moodubage
  31st October 2017

  It is the article which take us in a different way and think in different way. Thought provoking article.

  Reply
 7. Karunakar Balkur
  31st October 2017

  ಪ್ರಸ್ತುತ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಎದ್ದಿರುವ ತಲ್ಲಣಗಳು ಆತಂಕಗಳನ್ನು ಈ ಲೇಖನ ಬಹಳ ಮಾರ್ಮಿಕವಾಗಿ ಕಟ್ಟಿಕೊಡುವ ಜತೆಯಲ್ಲಿ ಪ್ರಸಕ್ತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಪ್ರಭುತ್ವ ಮತ್ತು ಬಂಡವಾಳಷಾಯಿಗಳ ಕೈಯಲ್ಲಿ ಸಿಲುಕಿ ಉದ್ಯಮದ ಕೇಂದ್ರಗಳಾಗಿ ಪರಿವರ್ತನೆಯಾಗಿರುವುದು ಮತ್ತು ನೈತಿಕ ಮೌಲ್ಯಗಳ ಅಧಪತನ ಸಾಂಸ್ಕೃತಿಕ ಮನಸ್ಸುಗಳ ಹುಡುಕಾಟಗಳು ವ್ಯಕ್ತವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಈ ಲೇಖನ ಉತ್ತಮ ನಿರ್ದಶನವಾಗಿದೆ ಅಭಿನಂದನೆ ನಿಮ್ಮ ಲೇಖನಕ್ಕೆ.

  Reply
 8. Kavita patil
  1st November 2017

  Great article sir

  Reply
 9. Kavita patil
  1st November 2017

  Great article sir thank u

  Reply
 10. gopal
  6th November 2017

  Attyuttama vaicharika baraha Sir. Nijvaglu shikshanada artha mattu parinaamakaari pravrittigalige naija nele yannu astitvagolisabekaagide. Aarthikate, swaartha, jaateeyate, raajakeeyagalu …… shikshana vyavastheyannu (ha) aaluttve. Arthamadkonda samaaja aluttave!

  Reply
 11. Dr Pallavi
  14th November 2017

  Great write up!! It’s a fact but very hard to bring up the renaissance. Thought provoking. Please keep writing such articles even in the main stream media.

  Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...