Share

ಇಂತಿ ನದಿ ಮತ್ತು ಸಲಸಲದ ಪಾಡು
ಮಲ್ಲಿಕಾರ್ಜುನಗೌಡ ತೂಲಹಳ್ಳಿ | ಆನಂದ ಋಗ್ವೇದಿ

 

 

 

ಈ ಲೋಕದ ಭಾಗವಾಗಿ ಬದುಕುವ ಅಂತಃಕರಣವುಳ್ಳ ಕವಿ ಕಾಣುವ ಅನುಭವ ಕಂಡಷ್ಟರ ಪರಿಮಿತಿಯನ್ನು ದಾಟಿಯೂ ಇರುತ್ತದೆ.

 

 

 

 

 

 

 

 

ಸಲಸಲದ ಪಾಡು – ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಬೆಳದಿಂಗಳ ಕೆರಳಿಕೆಗಳ ಸಾಹಿತ್ಯ ರೂಪ.

 

 

 

 

ಸೈದ್ಧಾಂತಿಕ ಆವರಣವನ್ನು ಮೀರಿಯೂ…

 – ಮಲ್ಲಿಕಾರ್ಜುನಗೌಡ ತೂಲಹಳ್ಳಿ

ವಿಜಯಕಾಂತ ಪಾಟೀಲರ ‘ಇಂತಿ ನದಿ’ ಸಂಕಲನದಲ್ಲಿನ ಕವಿತೆಗಳನ್ನು ಓದಿದೆ. ಪಾಟೀಲರದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು. ಇದು ಈ ಸಂಕಲನದ ಬಹುತೇಕ ಕವಿತೆಗಳನ್ನು ಓದಿ ಅನ್ನಿಸಿದ್ದು.

‘ಇಂತಿ ನದಿ’ ಎಂಬ ಕವಿತೆ ನದಿಗಳ ನುಂಗಿ ನೊಣೆದು ಅವುಗಳ ಅಸಹಾಯಕವಾಗಿಸಿದ ಸಮುದ್ರದ ಜೊತೆಗೆ ಜಗಳಕ್ಕೆ ನಿಂತ ನದಿಯೊಂದರ ಪ್ರಸಂಗದ್ದು. ಚಲನಶೀಲವಾದದ್ದನ್ನೆಲ್ಲ ನುಂಗಿ ತನ್ನಿಂದ ಹಸಿರು ಸೃಷ್ಟಿಸಲಾಗದ ಕ್ರೌರ್ಯದ ಜೊತೆಗೆ ಸ್ವಗತದ ಮಾದರಿಯಲ್ಲಿ ನಡೆಸುವ ಜೀವಪರ ಜಗಳವನ್ನು ನಾಟಕೀಯಗೊಳಿಸುವ ಈ ಕವಿತೆ, ನಿರ್ಲಕ್ಷ್ಯಕ್ಕೀಡಾದ ಮಾನವೀಯತೆಯ ಬಗೆಗಿನ ನೋವನ್ನೂ ಒಳಗಿಟ್ಟುಕೊಂಡಿದೆ.

ಮನುಷ್ಯನ ಕ್ರೌರ್ಯ ಸೋಗಲಾಡಿತನದ ಮುಸುಕಿನಲ್ಲಿ ಮರೆಯಾಗಿರುತ್ತದೆ. ಅದು ಬೇಟೆಯ ಅವಕಾಶಕ್ಕಾಗಿ ಕಾದು ಕುಳಿತಿರುತ್ತದೆ. ಮಾನವೀಯ ಸೂಕ್ಷ್ಮರಹಿತವಾದ ಈ ಇದು ದುರ್ಬಲ, ಕೋಮಲವಾದದ್ದರ ಮೇಲೆ ಆಕ್ರಮಣವೆಸಗಲು ನಿರಂತರ ಕಣ್ಣಿಟ್ಟುರುತ್ತದೆ. ಇಂಥದ್ದೊಂದು ದಾರುಣ ಪ್ರಸಂಗವನ್ನು ಪ್ರಾಣಿಗಳ ರೂಪಕದ ಮೂಲಕ ವಿಜಯಕಾಂತ ಪಾಟೀಲರು ‘ಹೌದೋ ಅಲ್ಲವೋ’ ಎಂಬ ಕವಿತೆಯಲ್ಲಿ ಎದೆ ತಾಗುವಂತೆ ಸರಳಾತಿಸರಳ ಭಾಷೆಯಲ್ಲಿ ಮುಂದಿಡುತ್ತಾರೆ. ಪ್ರಕೃತಿಯಲ್ಲಿ ಮಾನವಶ್ರೇಷ್ಢ ಅಹಂಕಾರದಿಂದ ಜರುಗುವ ಈ ಕ್ರೌರ್ಯ ಸಮಾಜದಲ್ಲಿ ಕುಲ, ಜಾತಿ, ಅಧಿಕಾರ ,ಧರ್ಮ ಶ್ರೇಷ್ಠತೆಯ ಅಹಮ್ಮಿಕೆಗಳಿಂದ ನಿತ್ಯ ನಡೆಯುವ ಬೇಟೆಗಳನ್ನು ಧ್ವನಿಸುತ್ತದೆ. ಹಾಗೆಯೇ ದುರಾಸೆಯ ಫಲದಿಂದ ಹುಟ್ಟಬಹುದಾದ ನಶ್ವರತೆಯನ್ನು ಹೊಳೆಯಿಸುತ್ತದೆ.

‘ದಾರಿ ಬಿಟ್ಟ ಮಾತು’ ಎನ್ನುವ ಮತ್ತೊಂದು ಕವಿತೆ ಕೂಡ ಸಮಕಾಲೀನತೆಗೆ ಪ್ರತಿಸ್ಪಂದಿಸಿದ್ದು. ಈ ಕವಿತೆ ನಿರ್ಲಿಪ್ತ ಮನೋಧರ್ಮದವರ ನಿಲುವುಗಳನ್ನು ಟೀಕಿಸಿ,ದುಗುಡಗೊಂಡು, ಸಿಡಿಮಿಡಿಯ ಮನೋಧರ್ಮದಲ್ಲಿ ಸಾಗುತ್ತಲೇ ಮಾನವ ಸಮಾಜದ ಐಕ್ಯತೆಯನ್ನು ಕೇವಲ ಮಾತಿನ ತೆವಲಾಗಿಸಿಕೊಂಡವರನ್ನು
“ಎಣ್ಣೆ ಹಾಕದೇ ‘ಹಚ್ಚೇವು..’/ ಎಂದು ದೀಪ ಹಿಡಿದು ಕುಣಿದದ್ದು/ಇದ್ಯಾವ ಒಂದೇ?
ಇದ್ಯಾವ ದಂಧೆ?”
ಎಂದು ತರಾಟೆಗೂ ತೆಗೆದುಕೊಳ್ಳುತ್ತದೆ.

ಪ್ರಜಾಸತ್ತೆಯ ಬಹು ಮುಖ್ಯ ಭಾಗವಾದ ಜನಪ್ರತಿನಿಧಿಗಳು ತಮ್ಮ ನಿರ್ಲಜ್ಜೆತನದ ಪರಮಾವಧಿಯಿಂದ ಜೈಲುಪಾಲಾಗುತ್ತ ಪ್ರಜಾಪ್ರಭುತ್ವ ವ್ಯವಸ್ಥಗೆ ಕಂಟಕಪ್ರಾಯರಾಗಿರುವುದರ ಬಗ್ಗೆ ಅಸಹನೆಯನ್ನು ‘ಕವಿ, ಕನಸು ಮತ್ತೆ ಅಧಿಕಾರ’ ಎಂಬ ಕವಿತೆಯಲ್ಲಿ ಕಾಣಬಹುದು.ಈ ಅವ್ಯವಸ್ಥೆಯನ್ನು ಸರಿಪಡಿಸಲು “ಕವಿಗಳು ಬರುವರು ದಾರಿ ಬಿಡಿ/ಕವಿಗಳ ಕೈಯಿಗೆ ರಾಜ್ಯ ಕೊಡಿ” ಎಂಬಂತಹ ಸಾಲನ್ನು ಕವಿತೆಯ ನಾಯಕ (ಆತನೂ ಕವಿಯೇ) ತಿರುಚಿಕೊಂಡು ಓದಿದ ಭಾಸವಾಗಿ ಮತ್ತಷ್ಟೂ ಗಲಿಬಿಲಿಗೊಳ್ಳುತ್ತಾನೆ. ಕನಸು ಕಾಣಲು ಸದಾ ಬಯಸುವ ಕವಿಗಳು ರಾಜ್ಯಾಧಿಕಾರ ನಡೆಸುತ್ತಾ ಬೆಳಕನ್ನೇ ಮರೆಮಾಚಿಬಿಟ್ಟಾರೆಂಬ ಆತಂಕ ಕವಿದ ಆತ ಕವಿತೆಯ ಸಹವಾಸವನ್ನೇ ತೊರೆದು ದಿಕ್ಕುಗಾಣದಾಗುತ್ತಾನೆ. ಜನಗಳ ಪಾಲ್ಗೊಳ್ಳುವಿಕೆಯಿಂದ, ಅಭಿಪ್ರಾಯಗಳಿಂದ ನಿತ್ಯವೂ ರೂಪು ತಳೆವ ಪ್ರಜಾಪ್ರಭುತ್ವ ಪಾಳೇಗಾರಿಕೆ ಮನೋಧರ್ಮದ ಜನನಾಯಕರಿಂದ ಕುಸಿದುಹೋಗುತ್ತಿರುವುದರ ಬಗೆಗಿನ ದಿಗ್ಭ್ರಮೆ ಈ ಕವಿತೆಯದ್ದು.

ಚಂಪಾ ಅವರ ಜನಪ್ರಿಯ ವ್ಯಕ್ತಿತ್ವದ ಕಾರಣದಿಂದಲೇ ಗಮನ ಸೆಳೆವ ವಿಜಯಕಾಂತ ಪಾಟೀಲರ ಎರಡು ಕವಿತೆ ‘ಚಂಪಾ ಚಿತ್ರ’ ಮತ್ತು ‘ಚಂಪಾಗಿರಿಯಲ್ಲಿ’. ಇವು ಅವರ ಬದ್ಧತೆ, ಬಂಡಾಯ ಮನೋಧರ್ಮ ಕಟ್ಟಿಕೊಡುವುದರ ಜೊತೆಗೇ ಅವರ ಮಾನವೀಯ ಹಾಗೂ ಸ್ನೇಹ ಸ್ವಭಾವವನ್ನು ತೋರುತ್ತವೆ. ಎಲ್ಲೇ ಇದ್ದರೂ ಉತ್ತರ ಕರ್ನಾಟಕದ ಅವರ ಜವಾರಿತನವನ್ನು ನೆನಪಿಸುತ್ತವೆ.

ಇನ್ನು ಜೀವನ ಪ್ರಯಾಣದಲ್ಲೆದುರಾಗುವ ಬದುಕಿನ ದಾರುಣ ಚಿತ್ರಗಳೂ ಈ ಸಂಕಲನದಲ್ಲಿ ಕವಿತೆಯ ಜಾಗ ಪಡೆದುಕೊಂಡಿವೆ. ‘ಹುರಿಗಡಲೆ ಮಾರುವ ಹುಡುಗ’ ಮತ್ತು ‘ಉದರ ರಾಗ’ ಎಂಬುವು ಅಂತಹ ಕವಿತೆಗಳು. ಹುರಿಗಡಲೆ ಮಾರಿ ಜೀವನಾಧಾರ ಕಂಡುಕೊಳ್ಳಲೆತ್ನಿಸುವ ಹುಡುಗನ ಕೌಟುಂಬಿಕ ಬಡತನದ ಭೀಕರತೆ ನಮ್ಮ ನಿದ್ದೆಯನ್ನೂ ಕೆಡಿಸುವಂತಿದೆ. ಅಂತೆಯೇ ಹಾರ್ಮೋನಿಯಮ್ ನುಡಿಸಿ, ಹಾಡುತ್ತ ಅನ್ನ ಕಾಣಲೆತ್ನಿಸುವ ತಾಯಿಯೊಬ್ಬಳ ಚಿತ್ರ ಕೂಡ.

ಹೀಗೆಯೇ ಓದುತ್ತೋದುತ್ತಾ ಸಂಕಲನದ ಕೊನೆಕೊನೆಗೆ ಬರುವ ಹೊತ್ತಿಗೆ ಕಲಾತ್ಮಕತೆಯ ಬಗ್ಗೆ ಚರ್ಚೆಗೆ ಈಡು ಮಾಡಬಲ್ಲ ‘ಎಲ್ಲಕ್ಕೂ ಮಿಗಿಲಾಗಿ’ ಎಂಬ ಕವಿತೆ ಪರಿಶ್ರಮ ಮತ್ತು ಬೆವರಿನ ಸಂಬಂಧದ ಸಂಯಮದಲ್ಲಿ ಕಲಾತ್ಮಕತೆಯ ಜನನ ಗುರುತಿಸಲೆತ್ನಿಸುತ್ತದೆ.

ಇಷ್ಟೆಲ್ಲಾ ಓದಿಗೊದಗಿದ ವಿಜಯಕಾಂತ ಪಾಟೀಲರ ಕವಿತೆಗಳನ್ನು ಪೂರ್ಣಗೊಳಿಸಿದ ಮೇಲೆ ಅನ್ನಿಸಿದ್ದಿಷ್ಟು: ಈ ಲೋಕದ ಭಾಗವಾಗಿ ಬದುಕುವ ಅಂತಃಕರಣವುಳ್ಳ ಕವಿ ಕಾಣುವ ಅನುಭವ ಕಂಡಷ್ಟರ ಪರಿಮಿತಿಯನ್ನು ದಾಟಿಯೂ ಇರುತ್ತದೆ. ಆ ಅದರ ಮಿಗುವಿಕೆಯನ್ನು ಭಾಷಿಕ ಆಕೃತಿಯಲ್ಲಿ ಹೊಸದೆನ್ನುವಂತೆ ಹಿಡಿದು ತನ್ನ ಕಾವ್ಯ ಪರಂಪರೆಯ ಏಕತಾನತೆಯನ್ನು ಮುರಿಯಬಲ್ಲ ಕವಿತೆ ಮಾತ್ರ ಜೀವಂತವಾಗುಳಿಯುತ್ತದೆ. ಸೈದ್ಧಾಂತಿಕ ಆವರಣವನ್ನು ಮೀರಿಯೂ ಅನುಭವ ಜಗತ್ತಿಗೆ ಕವಿ ಮನಸ್ಸು ತೆರೆದುಕೊಂಡಾಗ ಇದು ಸಾಧ್ಯವಾಗುತ್ತದೆ. ನಿರಂತರ ಕ್ರಿಯಾಶೀಲರಾಗಿರುವ ವಿಜಯಕಾಂತ ಪಾಟೀಲರಿಂದ ಅಂತಹ ಕವಿತೆಗಳನ್ನೂ ಓದಿಗಾಗಿ ಕಾಯುತ್ತಿರುವೆ.

 

———————————————

 

ಸಾಲು ಸಾಲುಗಳ ನಡುವೆ ಹೊಂಚಿದ ಮಿಂಚಿದ ಭಾವಗೊಂಚಲು

– ಡಾ. ಆನಂದ್ ಋಗ್ವೇದಿ

ವಿಜಯಕಾಂತ ಪಾಟೀಲರು ನಮ್ಮ ವರ್ತಮಾನದ ಇತ್ಯಾತ್ಮಕ ಕವಿಗಳು. ಸಕಾರಾತ್ಮಕದ ಆಶಾವಾದ, ನೇತ್ಯಾತ್ಮಕತೆಯ ನಿಷ್ಠುರತೆ ಎರಡನ್ನೂ ಪ್ರೀತಿಯಿಂದ ಪರಿಭಾವಿಸುವ ಇತಿ ಅವರದು. ಅತಿಯಾದ ಆಡಂಬರವಿಲ್ಲದ ಅವರ ಕಾವ್ಯ ಭಾಷೆಗೆ ಅನಗತ್ಯ ಪ್ರತಿಮೆ ಹಾಗೂ ರೂಪಕಗಳ ಭಾರವೂ ಇಲ್ಲ.

ಪ್ರಕೃತಿಯಂತೆ ಕವಿಯ ಚಿತ್ತ. ಅತೀವೃಷ್ಟಿ ಅನಾವೃಷ್ಟಿ ಬರ ಕಾರ್ಪಣ್ಯ ಜೊತೆಗೇ ಭಾವ ಸಂಪನ್ನತೆ ಹನಿ ಪ್ರೀತಿ ಪರಿಭಾವಿಸುವ ನಿರ್ಲಿಪ್ತತೆಯಲ್ಲೂ ಮಮಕಾರದ ಮಾನವೀಯತೆ! ಕವಿ ವಿಜಯಕಾಂತ ಪಾಟೀಲರು ಸಹಜ ಲಯದಲ್ಲಿ ಕಟ್ಟುವ ಕವಿತೆಗೆ ಇಂತಹ ನಿರ್ಮಮ ಪ್ರಕೃತಿಯದೇ ಸೊಬಗು.

ಅವರ ಕವನ ಸಂಕಲನ ‘ಸಲಸಲದ ಪಾಡು’ ಈ ಹಿನ್ನೆಲೆಯಲ್ಲಿ ಆಪ್ತ ಮತ್ತು ಗಮನಾರ್ಹ. ಚಿಕ್ಕ ಚಿಕ್ಕ ಪದಗಳ ಸುರಗಿ ಪೋಣಿಸಿದಂತಹ ಅವರ ಕವಿತೆಯ ಸಾಲುಗಳಲ್ಲಿ ಸಾಲ್ಮಿಂಚು. ಕವಿಗೆ ಕಾಣಿಸುವ ಕಾಡಿಸುವ ಬದುಕು ಭಾವಕ್ಕಿಲ್ಲಿ ಪದಗಳ ಹೊದಿಕೆ. ಕಂಗೊಳಿಸುವ ಕಂಗೆಡಿಸುವ ಎರಡೂ ಚಿತ್ರಗಳನ್ನು ನಿರ್ಲಿಪ್ತವಾಗಿ ಬರೆಯುವ ಕವಿ ಪಾಟೀಲರು ಓದುಗರನ್ನು ಮಾತ್ರ ಕಾಡಿಸುತ್ತಾರೆ!

ಅವರದೊಂದು ಕಾಡುವ ಸಾಲು ಚಿತ್ರ ಹೀಗಿದೆ –

“ಈ ಬಾರಿ ಕಣದ ತುಂಬಾ ರಾಶಿ ರಾಶಿ ಮೌನ;
ನಟ್ಟ ನಡುವೆ ಮಾತ್ರ ಪೇರಿಸಿಟ್ಟ ಹೆಣ”
(ಬರ: ಮೂರು ಸುದ್ದಿಗಳು)

ಬಾಯಾರಿ ಊರ ಹೊಗುವ ಜಿಂಕೆಯ ಗುಳಿಕಣ್ಣಿಗೆ ಬರ ಬಿದ್ದ ನಾಡ ಮೇವು ಕಾಣುವ ವೈದೃಶ್ಯ ಮತ್ತು ಸತ್ಯವನ್ನು ಬಿಡಿ ಬಿಡಿ ಚಿತ್ರಗಳ ಮೂಲಕ ಕಟ್ಟಿಕೊಡುವ ಕವಿಗೆ ವಿಷಣ್ಣತೆಯೂ ವಾಸ್ತವದ ಭಾಗ.

ಈ ಬರ ಕೇವಲ ಪ್ರಾಕೃತಿಕ ಅಲ್ಲ. ಅದು ಮನುಷ್ಯ ಸಂವೇದನೆಗಳಿಗೂ ಸಂಬಂಧಿಸಿದ್ದು! ಹಳೆಯ ತಲೆಮಾರು ಮತ್ತು ಹೊಸ ತಲೆಮಾರ ಚಿತ್ರಗಳನ್ನು ಬಿಡಿಯಾಗಿಯೂ ಒಟ್ಟಂದದಲ್ಲಿ ಗ್ರಹಿಸುವಂತೆಯೂ ನೀಡುವ ಆಯಾಮ ಈ ಕವಿಗಿದೆ.

‘ಅಜ್ಜ’ ಕವಿತೆಯಲ್ಲಿ ಹಿಂದಿನ ತಲೆಮಾರಿನ ಮೌಲ್ಯ ಮತ್ತು ಸಂವೇದನೆಗಳು ಚೈತನ್ಯ ಪೂರ್ಣವೂ ಮತ್ತು ಸಾಮಯಿಕವೂ ಆಗಿ ಕಂಡರಿಸಲ್ಪಟ್ಟಿವೆ. ಅತೀವ ಜೀವ ಪ್ರೇಮದ ಅಜ್ಜ ಕಾಯಕ ತತ್ವದವ, ಸ್ನೇಹದ ಮಹತ್ತಿನವ. ಅವನ ವ್ಯಕ್ತಿತ್ವವನ್ನು ಕಂಡ ಅಜ್ಜಿ, ಗೆಳೆಯ ಮತ್ತು ಆ ಅಜ್ಜನ ಮಗನ ಮೂಲಕ ಯುವ ತಲೆಮಾರು ಅರಿಯುವ ವ್ಯಾಪಕತೆ ಪುಟ್ಟ ಕವಿತೆಯನ್ನು ಸಾಂದ್ರವಾಗಿಸಿದೆ. ಅಂತಹುದೇ ಸಾಂದ್ರತೆ ಈ ಸಂಕಲನದ ಅಜ್ಜಿ ಕವಿತೆಗೂ ಇದೆ.

ಅಜ್ಜ ಅಜ್ಜಿಯ ಚಿದ್ರೂಪದ ಜೊತೆಗೆ ಕವಿಯ ಅವಳ ರೂಪವೂ ಇದೆ ಈ ಸಾಲಿನಲ್ಲಿ! ಕಾಣದಾದ ಅವಳ ಬಗ್ಗೆ ಚುಕ್ಕಿಗಳಿಗೆ, ಹರಿವ ತೊರೆಗೆ, ಹಾರು ಹಕ್ಕಿಗೆ, ಹೂ ಗಿಡ ದುಂಬಿ… ಹೀಗೆ ಎಲ್ಲವುಗಳೊಂದಿಗೆ ಕೇಳುವ ಕವಿಯ ತೀವ್ರತೆ ಅರೆ ಕ್ಷಣ ಅಕ್ಕನ ನೆನಪಿಸಿದರೆ, ಈ ತಲ್ಲಣ ಕೊನೆಗೆ – “ಅವಳೆಂದರೆ ಅವಳೇ ಥೇಟು;
ಜೊತೆ ಚಂದಿರ” ಎಂಬ ಹುಣವಿ ನಗೆಯಾಗುತ್ತದೆ!

ಕವಿತೆಗಳ ಸಾಲು ಲಾಲಿತ್ಯ ವಸ್ತುವಿನ ಸಾತತ್ಯವನ್ನು ಸಂಕಲನದ ಕೆಲವು ಕವಿತೆಗಳ ಮೂಲಕ, ಸಾಲುಗಳ ಮಿಂಚ ಮುಖೇನ ಹಿಡಿಯ ಹೊರಡುವುದು ಕಷ್ಟ. ಅದು ಬೆಳದಿಂಗಳಿಗೆ ಬೊಗಸೆಯೊಡ್ಡಿದಂತೆ! ಬದಲಿಗೆ ಕಣ್ಣರಳಿಸಿ ನೋಡಿದರೆ; ಕಣ್ಣ ಹಿಗ್ಗಿಸಿದಷ್ಟೂ ಮುಗಿಲು, ಕಂಡಷ್ಟೂ ನವಿರು ದಿಗಿಲು. ಕವಿ ವಿಜಯಕಾಂತ ಪಾಟೀಲರ ಈ ಸಲಸಲದ ಪಾಡು – ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಬೆಳದಿಂಗಳ ಕೆರಳಿಕೆಗಳ ಸಾಹಿತ್ಯ ರೂಪ. ಸಾಲು ಸಾಲುಗಳ ನಡುವೆ ಹೊಂಚಿದ ಮಿಂಚಿದ ಭಾವಗೊಂಚಲು.

Share

One Comment For "ಇಂತಿ ನದಿ ಮತ್ತು ಸಲಸಲದ ಪಾಡು
ಮಲ್ಲಿಕಾರ್ಜುನಗೌಡ ತೂಲಹಳ್ಳಿ | ಆನಂದ ಋಗ್ವೇದಿ
"

 1. ಸಂಗೀತ ರವಿರಾಜ್
  6th November 2017

  ಚೆನ್ನಾಗಿದೆ

  Reply

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 4 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...