Share

ಇಲ್ಲಿದೆ ಕಾಣಬೇಕಿರುವ ಇತಿಹಾಸ
ಡಾ. ಎನ್ ಜಗದೀಶ್ ಕೊಪ್ಪ

 

ನಾವೆಲ್ಲಾ ಇತಿಹಾಸದ ಹೆಸರಲ್ಲಿ ಓದಿಕೊಂಡಿರುವ ಅಥವಾ ಓದುತ್ತಿರುವುದರ ಆಚೆಗೂ ಬೇರೇನೋ ಇದೆ ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸುವ ಪುಸ್ತಕಗಳು ಇವು. ಹಿರಿಯ ಪತ್ರಕರ್ತ ಡಾ. ಎನ್ ಜಗದೀಶ್ ಕೊಪ್ಪ ಈ ಪುಸ್ತಕಗಳ ಬಗ್ಗೆ ಬರೆದಿರುವ ಕಿರು ಟಿಪ್ಪಣಿಗಳು.

 

 

 

ಳೆದ ವಾರ ಹಾಗೂ ಈ ವಾರ ಮೂರು ಪುಸ್ತಕಗಳು ಮನೆಗೆ ಬಂದವು. ಇವುಗಳನ್ನು ಓದುವಾಗ, ಲೇಖಕ ಅಥವಾ ಬರಹಗಾರ ಎಂಬ ಮುಖವಾಡ ಹೊತ್ತ ನನ್ನಂತಹವರ ಓದು ಮತ್ತು ಗ್ರಹಿಕೆಯ ಮಿತಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ ಎಂದು ಮನವರಿಕೆಯಾಯಿತು.

ಆಸ್ಟ್ರೇಲಿಯಾದ ಇತಿಹಾಸ ತಜ್ಞೆ ಕೇಟ್ ಬ್ರಿಟ್ಟಲ್‍ಬ್ಯಾಂಕ್ ದಾಖಲಿಸಿರುವ ಟಿಪ್ಪು ಸುಲ್ತಾನ್ ಕುರಿತ ವಸ್ತುನಿಷ್ಠ ಇತಿಹಾಸದ ಈ ಕೃತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನಾವೆಲ್ಲಾ ಕೇವಲ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಕುರಿತು ಮಾತನಾಡುತ್ತೇವೆ. ಆದರೆ, ಈಕೆ ಟಿಪ್ಪುವಿನ ಮುತ್ತಜ್ಜ ಮತ್ತು ಅಜ್ಜನ ಮೂಲಕ ಅವರ ಹಿಂದೂ ಧರ್ಮದ ಕುರಿತಂತೆ ಇರುವ ಕಳಕಳಿಯ ಮೂಲವನ್ನು ನಮ್ಮೆದುರು ತೆರದಿಡುತ್ತಾರೆ.

ಮೂಲತಃ ಮುಸ್ಲಿಂ ಧರ್ಮದ ನವಾಯಿತ ಎಂಬ ಪಂಗಡಕ್ಕೆ ಸೇರಿದ ಟಿಪ್ಪು ಮುತ್ತಜ್ಜ ಬಿಜಾಪುರದ ಆದಿಲ್‍ಶಾಹಿ ಬಳಿ ಸೈನಿಕನಾಗಿದ್ದವನು. ತನ್ನ ಮಗನಿಗೆ ಅಂದರೆ, ಹೈದರಾಲಿಯ ತಂದೆಗೆ ಗುಲ್ಬರ್ಗಾದ ಬಂದೇ ನವಾಜ್ ದರ್ಗಾದಲ್ಲಿ ಸೇವಕನಾಗಿದ್ದ ವ್ಯಕ್ತಿಯೊಬ್ಬನ ಪುತ್ರಿಯನ್ನು ತಂದು ವಿವಾಹ ಮಾಡಿಕೊಂಡಿದ್ದ. ಮೊಗಲರ ವಿರುದ್ಧದ ಹೋರಾಟದಲ್ಲಿ ಆದಿಲ್‍ಶಾಹಿ ಸಾಮ್ರಾಜ್ಯ ಪತನಗೊಂಡಾಗ, ಜೀವ ಭಯದಿಂದ ತುಮಕೂರಿನ ಸಿರಾಕ್ಕೆ (ಈಗಿನ ತಾಲ್ಲೂಕು ಕೇಂದ್ರ) ಆನಂತರ ಕೋಲಾರ ಜಿಲ್ಲೆಗೆ ವಲಸೆ ಹೋದ ವಿವರಗಳಿವೆ.

ಸಿಪಾಯಿಯಾಗಿದ್ದ ಹೈದರಾಲಿ ನಂತರದ ದಿನಗಳಲ್ಲಿ ಸಂಸ್ಥಾನದ ದೊರೆಯಾದ ಇತಿಹಾಸ ಎಲ್ಲರಿಗೂ ಗೊತ್ತಿರುವಂತಹದ್ದೆ. ಆಂಧ್ರದ ಚಿತ್ತೂರಿನ ಬಳಿ ಹೈದರಾಲಿ ಯುದ್ಧರಂಗದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಕೇರಳದ ಮಲಬಾರ್‍ನಲ್ಲಿ ಬ್ರಿಟಿಷರ ಜೊತೆ ಕಾಳಗದಲ್ಲಿ ನಿರತನಾಗಿದ್ದ. ಹೈದರಾಲಿ ತನ್ನ ಆಪ್ತರ ಬಳಿ ಮಗನನ್ನು ರಕ್ಷಿಸುವಂತೆ ವಚನ ತೆಗೆದುಕೊಳ್ಳುವ ಸನ್ನಿವೇಶ, ಉಪ್ಪಿನ ಋಣ ತೀರಿಸಿ ಎಂದು ಕೇಳಿಕೊಂಡು ಪ್ರಾಣ ಬಿಡುವ ಘಟನೆ, ಆನಂತರ ಹೈದರಾಲಿಯ ಸಾವಿನ ಸುದ್ಧಿಯನ್ನು ಮುಚ್ಚಿಟ್ಟು, ಟಿಪ್ಪುವಿಗೆ ಪಟ್ಟ ಕಟ್ಟಿದ ನಂತರ ಕೋಲಾರದ ಬಳಿ ಸಂರಕ್ಷಿಸಿ ಇಟ್ಟಿದ್ದ ಹೈದರಾಲಿಯ ಶವವನ್ನು ತಂದು ಹೂಳುವ ಘಟನೆ ಹೀಗೆ ಎಲ್ಲವನ್ನೂ ದಾಖಲೆ ಸಮೇತ ದಾಖಲಿಸಿದ್ದಾರೆ.

ಇನ್ನು ಭಾರತದ ವಿಭಜನೆಯ ಕುರಿತು “ದ ಗ್ರೇಟ್ ಪಾರ್ಟಿಶನ್” ಬರೆದಿರುವ ಯಾಸಿನ್ ಖಾನ್ ಎಂಬಾಕೆ ಲಂಡನ್ ನಲ್ಲಿ ಜನಿಸಿದವರು. ಈ ಲೇಖಕಿ ವಿಭಜನೆ ಕುರಿತಂತೆ ಅಂಕಿ ಅಂಶಗಳನ್ನು ದಾಖಲಿಸಿರುವ ಪರಿ ನೋಡಿದರೆ, ಈಕೆಗೆ ಇರುವ ಒಳನೋಟ ನಮಗೂ ದಕ್ಕಬಾರದೆ ಎನಿಸುತ್ತದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ಯಾಸಿನ್ ಖಾನ್ ಅವರ ಪ್ರಥಮ ಕೃತಿ ಇದಾಗಿದ್ದು, ರಾಯಲ್ ಹಿಸ್ಟಾರಿಕಲ್ ಸೊಸೈಟಿಯಿಂದ ಪ್ರಶಸ್ತಿ ಪಡೆದಿದೆ.

ಊರ್ವಶಿ ಭುಟಾಲಿಯ ಎಂಬವರು ಮಹಿಳಾ ಸಂಕಥನಗಳ ಪ್ರಕಾಶಕಿಯಾಗಿದ್ದು, ಭಾರತದ ವಿಭಜನೆಯ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಬಲಿಯಾದ ಮಕ್ಕಳು, ಮಹಿಳೆಯರು, ನೆಲೆ ಕಳೆದುಕೊಂಡ ದಲಿತರು ಹಾಗೂ ಹಿಂದುಳಿದವ ಕುರಿತು ಈ “ದ ಅದರ್ ಸೈಡ್ ಆಫ್ ದ ಸೈಲೆನ್ಸ್” ಕೃತಿಯಲ್ಲಿ ಮನೋಜ್ಞವಾಗಿ ದಾಖಲಿಸಿರುವುದು ವಿಶೇಷ. ಭಾರತದ ಅತಿ ದೊಡ್ಡ ದುರಂತಗಾಥೆ ಎಂದುಕೊಂಡಿರುವ ನಾನು ಕಳೆದ ಐದಾರು ವರ್ಷಗಳಿಂದ ವಿಭಜನೆ ಕುರಿತಂತೆ ಪ್ರಕಟವಾಗಿರುವ ಬಹುತೇಕ ಕೃತಿಗಳನ್ನು ಸಂಗ್ರಹಿಸಿದ್ದಿನಿ, ಇನ್ನೂ ಸಂಗ್ರಹಿಸುತ್ತಿದ್ದೇನೆ.

ಕೊನೆಯ ಮಾತು- ಇವುಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದು ಯಾರೂ ಹೇಳಬೇಡಿ. ನನ್ನ ಬಳಿ ಇರುವ ಕೃತಿಗಳನ್ನು ಅನುವಾದ ಮಾಡಬೇಕಾದರೆ, ಕನಿಷ್ಟ ನನಗೆ ನಾಲ್ಕು ಜನ್ಮ ಬೇಕು. ಯಾರಾದರೂ ಆಸಕ್ತರು ಇವುಗಳನ್ನು ಮಾಡಲಿ ಎಂಬ ಉದ್ದೇಶದಿಂದ ಈ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೀನಿ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 4 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...