Share

ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…
ಅರ್ಚನಾ ಎ ಪಿ

 

 

 

 

ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…

 

 

ದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ಹೇಳ್ತಿದ್ರಲ್ಲ ಹಾಗೆ…

ಇದನ್ನೇ ನಾವು ಸಂಬಂಧಗಳಿಗೂ ಅನ್ವಯಿಸಿಕೊಂಡು ನೋಡಿದರೆ, ಎಂತಹ ಮನಮುಟ್ಟುವ, ಅಂತರಂಗದ ಮುಚ್ಚಿದ ಬಾಗಿಲುಗಳನ್ನು ತೆರೆದು, ಶುಭ್ರ ಗಾಳಿಯನ್ನು ಉಸಿರಾಡಲು ಸಾಧ್ಯವಾಗುವ ಅವಕಾಶ ಅನುವಾಗುತ್ತದೇನೋ…

ಬರೀ ತತ್ವ ಆಯ್ತು, ನಿಜ ಜೀವನದಲ್ಲಿ ಇವೆಲ್ಲವೂ ಸಾಧ್ಯ ಇಲ್ಲವೇನೋ ಅಂತ ನನಗೂ ಅನ್ನಿಸ್ತಿತ್ತು, ಆದರೆ ನಿಧಾನವಾಗಿ, ಒಂದೊಂದೇ ಹಂತದಲ್ಲಿ, ಒಂದೊಂದು ಕೆಲಸದ ಜಾಗದಲ್ಲಿ ಅಳವಡಿಸಿಕೊಳ್ಳಲು ಶುರು ಮಾಡಿದಾಗ ಗೊತ್ತಾಯ್ತು, ಆಡೋದೇ ಕಷ್ಟ ಮಾಡೋದೇ ಸುಲಭ ಅಂತ.

ಇದಕ್ಕೆಲ್ಲಾ ಯಾವುದಾದರೂ ಒಂದು ಪ್ರೇರಣೆ, ದೀಪ ಹತ್ತೋಕೆ ಒಂದು ಕಿಡಿ ಬೇಕಲ್ವಾ ಆ ಮಿಂಚು ಹೊಳೆದದ್ದು ತರಂಗ ವಾರಪತ್ರಿಕೆಯಲ್ಲಿ ಆ ಕಥೆ (ಘಟನೆ) ಓದಿದಾಗ. ಅದರ ಸಾರ ಇಷ್ಟೇ:

ಒಂದು ಕುಟುಂಬ… ಎಲ್ಲರ ಮನೆ ಅಂದರೆ ಅತ್ತೆ ಸೊಸೆಯರಿರೋ ಪರಿವಾರದಲ್ಲಿ ಎದುರಾಗುವ ದೈನಂದಿನ ಸಮಸ್ಯೆಯೇ. ಸೊಸೆ ಆ ಸಮಸ್ಯೆ ಹಿಡಿದುಬಂದಿದ್ದು ಒಬ್ಬ ಗುರುಗಳ ಹತ್ತಿರ. ಅವರು ಹೇಳಿದ್ದೂ ಇದನ್ನೇ. ಪ್ರೀತಿ ‘ಕೊಡು’ವಿಕೆ ಬಗ್ಗೆ. ಆಗಲ್ಲ ಅಂದಾಗ ವಿಧಾನವೊಂದನ್ನು ಹೇಳಿಕೊಟ್ಟರು. ಅವಳದನ್ನು ಶುರು ಮಾಡಿ ಯಾವ ಹಂತ ತಲುಪಿತು ಅಂದ್ರೆ ಅತ್ತೆಯ ಕೊನೆಯ ಕಾಲದಲ್ಲಿ ಅತ್ಯಂತ ದುಃಖಪಡೋಷ್ಟು. ಹೆತ್ತ ತಾಯಿಯನ್ನು miss ಮಾಡಿಕೊಳ್ಳುವಷ್ಟು…

ಇದನ್ನು ನನ್ನ ಸಹೋದ್ಯೋಗಿಗಳ ಜೊತೆಗೆ, ಸ್ನೇಹಿತರ ಜೊತೆಗೆ ಇರಬೇಕಾದರೂ ಪಾಲನೆ ಮಾಡಲು ಶುರು ಮಾಡಿದಾಗ ಮೊದಲಿಗೆ ಎಲ್ಲರ ಹಾಗೆ ಹೊಸ ಬದಲಾವಣೆಗೆ ಮನಸ್ಸು ಒಪ್ಪಲ್ಲ, ಸ್ವೀಕರಿಸೋದೂ ಇಲ್ಲ ಅಂತಾರಲ್ಲ ಹಾಗೇ ಆಯ್ತು. ಆದರೆ ಸಂಬಂಧ ಉಳಿಯಬೇಕಾದರೆ ಪರಸ್ಪರರೂ ಎರಡೆರಡು ಹೆಜ್ಜೆ ಇಟ್ಟರೆ ಸರಿ. ಇಲ್ಲಾ ನೀನೇ ನಾಲ್ಕೂ ಹೆಜ್ಜೆ ನಡೆದು ಬಾ ಅಂದಾಗ ಅಲ್ಲಿ ನಿಜವಾಗಿಯೂ ಯಾವ ಬಂಧವೂ ಇರಲ್ವೇನೋ…

ಹೀಗಿರುವಾಗ ನೋಡೇಬಿಡೋಣ ಅಂತ…

ಹಿರಿಯ ಸಹೋದ್ಯೋಗಿ ಒಬ್ಬರು – ನಾನ್ ಯಾವುದೋ ಭಾವಚಿತ್ರ ಹಾಕೊಕೊಂಡಿದ್ದೆ WhatsAppನಲ್ಲಿ, ಜೊತೆಗೆ ಇರುವವರು ಯಾರು ಅಂತ ತಮಗೆ ಬೇಡದ ವಿಚಾರವಾಗಿ (ಅವರ ಸ್ವಭಾವವೇ ಅಂಥಾದ್ದು) ಕೇಳಿದಾಗ ಸಹಜವಾಗಿಯೇ ಕೋಪ ಬಂದು ಒರಟಾಗಿ ಉತ್ತರ ಕೊಟ್ಟಿದ್ದೆ. ಅದಕ್ಕೆ ಮುನಿಸಿಕೊಂಡು ಮಾತು ಬಿಟ್ಟಾಗ ನಾನೇ ಅವರ ಪಾಲಿನ ಎರಡು ಹೆಜ್ಜೆನೂ ಇಟ್ಟು ಮಾತಾಡಿಸಿದಾಗ ಪರಿಸ್ಥಿತಿ ತಿಳಿಯಾಗಿರುವುದಂತೂ ಸುಳ್ಳಲ್ಲ.

ಹೀಗೇ ಇನ್ನೊಂದು ಸಂದರ್ಭ…

ಸಂದಿಗ್ಧ ಎದುರಾಗಿದೆ ಈಗ. ಹಿಂಗೆ ಮುಖಪುಸ್ತಕದಲ್ಲಿ ಆದ ಪರಿಚಯವದು. ಮತ್ತದೇ ಭಾವಚಿತ್ರ ಮತ್ತು status ವಿಚಾರವೇ. “ನಿಮ್ಮ ಹಿಂದಿಯಲ್ಲಿರೋ ಸ್ಟೇಟಸ್ ಮತ್ತು ನಿಮ್ಮ ನಗುಮುಖದ ಹಿಂದಿರೋ ಸೀಕ್ರೆಟ್ ನಂಗೆ ಅರ್ಥ ಆಗ್ಲಿಲ್ಲ. ಆದರೂ ಅರ್ಚನಾ, ಒಂದು ಓದಬೇಕು ಅನ್ಸತ್ತೆ, ಇನ್ನೊಂದು ನೋಡಬೇಕು ಅನ್ಸತ್ತೆ” ಅಂತ ಹೊಗಳಿ ಹೊನ್ನ ಶೂಲಕ್ಕೇರಿಸಿದಾಗ ಎಲ್ಲ ಹೆಂಗಳೆಯರಂತೆ ಹೊಗಳಿಕೆಗೆ ಮನಸೋತು ಸ್ನೇಹ ಒಪ್ಪಿಕೊಂಡು ಮಾತುಕತೆ ಮುಂದುವರೆದು, ಕಾರಣವಿಲ್ಲದೇ ನಿಂತು, ಮತ್ತೆ ಶುರುವಾಗೋದು ಆಗ್ತಿತ್ತು… ಈಗೊಂದಿಷ್ಟು ವಿರಾಮದ ಕಾಲ ಇನ್ನೊಮ್ಮೆ…

ಇದೇ ನಿಯಮದನ್ವಯ ಕೆಲಸ ಹಚ್ಕೊಳ್ಳಬೇಕಾಗಿದೆ.

ಆದರೆ ಒಮ್ಮೊಮ್ಮೆ, ಅಲ್ಲಲ್ಲ ಯಾವಾಗಲೂ ಈ ಥರದ ಸಂಬಂಧದ ಸಂದರ್ಭ ಬಂದಾಗ ನನಗೆ ಬರೋ ಪ್ರಶ್ನೆ, ನಮಗೆ ಇಷ್ಟವಿಲ್ಲದ್ದು ನಾವು ಬೇರೆಯವರಿಗೂ ಮಾಡಬಾರದಲ್ವಾ?

ಉದಾಹರಣೆಗೆ ಕೋಪಿಸಿಕೊಳ್ಳೋದು, ಮಾತು ಬಿಡುವುದು, ಬೈಯುವುದು, ಹಂಗಿಸಿಕೊಳ್ಳುವುದು, ಸ್ಪಂದಿಸದೇ ಇರೋದು, ಉತ್ತರಿಸದೇ ಇರೋದು… ಹೀಗೆ.

ಆಗ ಎಲ್ಲಾ ಬಿಟ್ಟು, ನಮ್ಮತನವನ್ನೂ ಬಿಟ್ಟು, ಏನೋ ಆ ಸಂಬಂಧದ ಅಸ್ತಿತ್ವ ನಮಗೇ ಮುಖ್ಯ ಅನ್ನೋ ಥರ ಇದ್ದುಬಿಡ್ತಾರಲ್ಲ ಎದುರಿನವರು ಅಂತ.

ಏನೇ ಆಗಲಿ, ಹೀಗೆ ನಾವು ಅಂದರೆ ಮನುಷ್ಯರೂ ಒಳ್ಳೇದೇ ಮಾಡ್ತಾರೆ. ಕಾರಣ ನಾನವರಿಗೆ ಒಳ್ಳೆಯದೇ ಶ್ರೇಷ್ಠವಾದದ್ದೇ ಮಾಡ್ತಿದ್ದೀನಿ ಅಂತ ಭೂಮಿತಾಯಿ ನಿರೀಕ್ಷಿಸದೇ ಅದಳನ್ನವಳು ಧಾರೆ ಎರೆಯುತ್ತಾಳೆ.

ನಾನವಳ ಮಗಳು. ಹೇಗೆ ಹಾಗಿರದಿರಲು ಸಾಧ್ಯ!?

ಪಂಛೀ..ನದಿಯಾಂ…ಪವನ್ ಕೆ ಝೋಂಕೆ…ಕೋಯಿ ಸರ್ಹದ್ ನಾ ಇನ್ಹೇ ರೋಕೆ… ಹಾಡು ಯಾಕೋ ನೆನಪಾಗ್ತಿದೆ…

—-

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...