Share

ನಮ್ಮೊಳಗಿನ ಭಾಷೆಯನ್ನು ಕುರಿತು…
ಸಂಪಾದಕ

 

ಎಲ್ಲ ಒಳ್ಳೆಯದನ್ನೂ, ಎಲ್ಲ ಪ್ರಾಮಾಣಿಕತೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ, ಬಲಿ ಪಡೆಯುತ್ತಿರುವ ರಾಜಕೀಯವೊಂದು ಭಾಷೆಯ ಮೃದುತ್ವವನ್ನು ಕೊಂದು, ಅದನ್ನು ಹಿಂಸೆಯನ್ನೇ ಝಳಪಿಸಲು ಪಳಗಿಸಿಕೊಂಡಿರುವ ವಾತಾವರಣ ಇವತ್ತಿನದು.

 

 

ತೆಲುಗಿನ ಆ ಪುಟ್ಟ ಊರಿಗೆ ಮತ್ತೆ ಹೋಗಿದ್ದೆ. ಮೂರನೇ ಸಲ. ಕನ್ನಡವೂ ಗೊತ್ತಿರುವ, ಬೆಂಗಳೂರಿನೊಂದಿಗೆ ಪರಮ ಬಾಂಧವ್ಯ ಹೊಂದಿರುವ ಅಲ್ಲಿನವರ ಜೊತೆ ಕನ್ನಡದಲ್ಲೇ ಮಾತನಾಡುವುದು ನಾನು. ನಾನು ತೆಲುಗಿನಲ್ಲಿ ಮಾತನಾಡಲಿ ಎಂದು ಜೊತೆಗಿರುವ ಸಂಬಂಧಿಗಳಿಗೆ ಆಸೆ. ಅದಕ್ಕೇ, ತೆಲುಗು ಬರುವುದಿಲ್ಲವಾ ಎಂದು ಅವರು ಪೂರ್ತಿ ಪ್ರಶ್ನೆ ಮುಗಿಸುವ ಮೊದಲೇ ನಮಗಿಂತ ಚೆನ್ನಾಗಿ ತೆಲುಗು ಮಾತನಾಡುತ್ತಾರೆ ಎಂದು ಅಭಿಮಾನದಿಂದ ಹೇಳಿ, ನಾನು ತೆಲುಗು ಮಾತನಾಡುವಂತೆ ಮಾಡಲು ನೋಡುತ್ತಾರೆ. ನನಗೆ ಅಲ್ಲಿಯವರ ನಿಷ್ಕಲ್ಮಷ ಒರಟುತನದ ಮುಂದೆ ಸಣ್ಣಗೆ ಸಂಕೋಚ. ಕನ್ನಡದಲ್ಲೇ ಮಾತು ಮುಂದುವರಿಸಿ, ಅವರೂ ಕನ್ನಡಕ್ಕೆ ತಿರುಗುವಂತೆ ಮಾಡುತ್ತೇನೆ. ಅದೊಂದು ಥರ ಖುಷಿ.

ಹೈದರಾಬಾದಲ್ಲಿದ್ದ ಐದೂವರೆ ವರ್ಷಗಳಲ್ಲಿ ತೆಲುಗು ಬೇರೆ ಭಾಷೆ ಎಂದೆನ್ನಿಸಿದ್ದೇ ಇಲ್ಲ. ತೆಲುಗಿನ ಶ್ರೀ ಶ್ರೀ, ವರವರ ರಾವ್, ಗದ್ದರ್ ಇವರೆಲ್ಲರ ದನಿಯ ಸಾಂಗತ್ಯ ಸ್ವಲ್ಪ ಮಟ್ಟಿಗೆ ತೆಲುಗಿನ ಮತ್ತು ಸ್ವಲ್ಪ ಮಟ್ಟಿಗೆ ಕನ್ನಡದ ಮೂಲಕ ಓದಿನ ದಿನಗಳಿಂದಲೂ ಇತ್ತು. ಹೀರೋಯಿಸಮ್ಮಿನ ವಿಲಕ್ಷಣ ಪವಾಡಗಳಿರುವ ತೆಲುಗು ಸಿನಿಮಾಗಳನ್ನು ಸುಮ್ಮನೆ ಖುಷಿಗಾಗಿ ನೋಡುವುದಾಗಲಿ, ತೆಲುಗಿನ ಸಿನಿಮಾ ಗೀತೆಗಳನ್ನು ಗುನುಗುವುದಾಗಲಿ ಆ ಭಾಷೆಯೊಳಗಿಂದ ಹೃದಯಕ್ಕೆ ಹೊಕ್ಕುವ ಎಂಥದೋ ಲಯದ ಕಾರಣಕ್ಕಾಗಿಯೇ. ಯಾವುದೋ ಸಿನಿಮಾದ ‘ಒಕ್ಕ ರೋಜು ಮುಂದು ಎಂದುಕು ಕಲವಲೇದು?’ (ಒಂದೇ ಒಂದು ದಿನ ಮುಂಚೆ ಯಾಕೆ ಸಿಗದೇ ಹೋದೆವು?) ಎಂಬ ಮಾತೊಂದು ಈಗಲೂ ಕಾಡುತ್ತಿದೆ. ಪುಟ್ಟ ಮಗಳು ‘ನುವ್ವು ಕಾದ್ರಾ, ನೇನ್ರಾ; ನೇನು ಬಾಹುಬಲಿ’ (ನೀನಲ್ಲವೊ, ನಾನು; ನಾನು ಬಾಹುಬಲಿ) ಎಂದು ನನ್ನೆದುರು ನಿಂತು ಸಿನಿಮಾದ ಡೈಲಾಗನ್ನು ತನ್ನದೇ ಬಗೆಯಲ್ಲಿ ಎದೆ ತಟ್ಟಿಕೊಳ್ಳುತ್ತ ಹೇಳುವಾಗ ತೆಲುಗು ಇನ್ನಷ್ಟು ಒಳಗಿಳಿಯುತ್ತದೆ. ನಮ್ಮ ನಾಲಗೆ ಮತ್ತು ನಡೆಯ ಜೊತೆಜೊತೆಯೇ ಬೆರೆತುಹೋಗುವ ಯಾವುದೇ ಭಾಷೆಯ ಬಗ್ಗೆಯೂ ಇದೇ ಭಾವನೆ ಬೆಳೆಯುವುದು ಸಾಧ್ಯ.

ತುಳು, ತಮಿಳು, ಕೊಂಕಣಿ, ಮಲಯಾಳಂ ಮಾತಾಡುವವರ ಜೊತೆ ಕೆಲಸ ಮಾಡಿದ್ದೇನೆ. ಕನ್ನಡ ಕೂಡ ಚೆನ್ನಾಗಿ ಗೊತ್ತಿರುವ ಅವರಲ್ಲಿ ಕೆಲವರು ನನ್ನ ಜೊತೆ ಕನ್ನಡದಲ್ಲಿ ಮಾತನಾಡುತ್ತ, ತಮ್ಮವರಾರೋ ಬಂದಾಗ ತಕ್ಷಣ ಅವರೊಡನೆ ಅವರ ಭಾಷೆಯಲ್ಲಿ ಮಾತನಾಡಲು ಅತ್ಯಂತ ಸಹಜವಾಗಿ ತೊಡಗಿಬಿಡುತ್ತಾರೆ. ನಾನೇನಾದರೂ ಅಂದುಕೊಂಡೆನೋ ಏನೊ ಎಂದು ಇದ್ದಕ್ಕಿದ್ದಂತೆ ಅವರಿಗೆ ಅನ್ನಿಸಲು ಶುರುವಾಗುತ್ತದೆ. ತಪ್ಪು ತಿಳಿದುಕೊಳ್ಳಬೇಡಿ ಎಂದು ಕೇಳಿಕೊಳ್ಳುತ್ತಾರೆ. ನಾನೆಂದೂ ಅವರ ಮಾತುಗಳಲ್ಲಿ ಗುಟ್ಟು ಇದೆಯೆಂದು, ಇರುತ್ತದೆಂದು ಶಂಕಿಸಿದ್ದಿಲ್ಲ.

ಅನುಮಾನ ಮೂಡಬೇಕಾದರೂ ಯಾಕೆ? ಅತ್ಯಂತ ಸಹಜತೆಯೊಂದಿಗಿರುವ, ಯಾರಿಗೂ ಒಲಿವ, ಎಲ್ಲರೊಳಗೂ ಹರಿವ ಭಾಷೆಯ ಗುಣ ಬೆಸೆಯುವುದು ಮಾತ್ರವಾಗಿರುತ್ತದೆ. ಆದರೆ ಗುಟ್ಟು, ಅನುಮಾನ, ಬಿಗುಮಾನಗಳಲ್ಲೇ ಕಳೆದುಹೋಗುವ ಮನಃಸ್ಥಿತಿಯಿಂದಾಗಿ ಭಾಷೆ ಒಡೆವ ಆಯುಧವಾಗುವುದು ವಿಪರ್ಯಾಸ. ಎಲ್ಲ ಒಳ್ಳೆಯದನ್ನೂ, ಎಲ್ಲ ಪ್ರಾಮಾಣಿಕತೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ, ಬಲಿ ಪಡೆಯುತ್ತಿರುವ ರಾಜಕೀಯವೊಂದು ಭಾಷೆಯ ಮೃದುತ್ವವನ್ನು ಕೊಂದು, ಅದನ್ನು ಹಿಂಸೆಯನ್ನೇ ಝಳಪಿಸಲು ಪಳಗಿಸಿಕೊಂಡಿರುವ ಇವತ್ತಿನ ವಾತಾವರಣದಲ್ಲಿ ಪಿಸುಮಾತುಗಳೂ ಎಂಥದೋ ರಹಸ್ಯದ ನೀಲನಕ್ಷೆಯಂತೆ ಕಾಣಿಸತೊಡಗಿವೆ. ಕವಿ ಬಳಸುವ ಪದಗಳ ಮೇಲೂ ಹಿಡಿತ ಸಾಧಿಸಲು ನೋಡುವ, ಕವಿತೆಯೊಳಗೂ ಕೆಡುಕನ್ನು ಹುಡುಕಲು ತಿಣುಕಾಡುವ ದುಷ್ಟ ತರ್ಕಗಳು ಮೈಮೇಲೆ ಪರಿವೆಯಲ್ಲದಂತೆ ತೂರಾಡುತ್ತಿವೆ.

ಯಾವುದೇ ಭಾಷೆಯ ಬಗೆಗಿನ ಹೆಮ್ಮೆ ಅದರ ಪ್ರಾಚೀನತೆಯನ್ನು ಹುಡುಕಿಕೊಳ್ಳುವುದರಲ್ಲಿ ಇದೆಯೆಂದು ನಾನಂತೂ ನಂಬುವುದಿಲ್ಲ. ಬದಲಿಗೆ ಅದನ್ನು ನಾವೆಷ್ಟು ಒಳಗೊಂಡಿದ್ದೇವೆ ಎಂಬುದರ ಮೂಲಕ ನಮ್ಮನ್ನು ನಾವು ಅಳತೆ ಮಾಡಿಕೊಳ್ಳಲು ಸಾಧ್ಯ. ಕನ್ನಡವನ್ನೇ ಓದಿಕೊಂಡ ಕೆಲವರೊಳಗೆ ಹತ್ತು ಕಠಿಣ ಪದಗಳಿಗೆ ಅರ್ಥ ಸರಿಯಾಗಿ ಗೊತ್ತಿಲ್ಲದಂಥ ಪರಿಸ್ಥಿತಿಗೆ ಯಾರನ್ನು ದೂಷಿಸುವುದು ಎಂಬ ಪ್ರಶ್ನೆ ಒಂದೆಡೆಗಿದ್ದರೆ, ಕನ್ನಡವನ್ನು ಪಠ್ಯದ ಭಾಗವಾಗಿ ಓದದೆಯೂ ಅದು ಗಾಢವಾಗಿ ಭಾವದ ಭಾಗದಂತೆ ಮನಸ್ಸು ತುಂಬಿಕೊಂಡಿರುವುದರ ಸಾಕ್ಷಿಯನ್ನು ಬಳಸುವ ಪ್ರತಿ ಪದದಲ್ಲೂ ಕಾಣಿಸುವವರು ಇದ್ದಾರೆಂಬ ಬೆರಗೂ ಇನ್ನೊಂದೆಡೆಗೆ ಇದೆ. ಮೇಲಿನ ಪ್ರಶ್ನೆಗೆ ಉತ್ತರವೂ ಈ ಬೆರಗಿನಲ್ಲೇ ಇದೆ.

ಕನ್ನಡವನ್ನು ಮಾತ್ರವಲ್ಲ, ಸಂಕಷ್ಟದಲ್ಲಿರುವ ಯಾವುದೇ ಭಾಷೆಯನ್ನು ಕಾಯಲು ಒದಗುವುದು ಆ ಬೆರಗು ಮಾತ್ರ. ಅದನ್ನು ಗ್ರಹಿಸದ ಯಾವುದೇ ಭಾಷಾ ಹೋರಾಟವೂ ಅಸೂಕ್ಷ್ಮವಾಗುತ್ತದೆ; ಮತ್ತು ವ್ಯರ್ಥ ಕೂಡ.

ಒಂದು ಭಾಷೆಯ ಪರ ದನಿಯೆಂಬುದು ಇನ್ನೊಂದು ಭಾಷೆಯ ವಿರುದ್ಧದ ಗದ್ದಲವಲ್ಲ ಎಂದುಕೊಂಡರೆ ಸಾಮರಸ್ಯ ಮತ್ತು ಸಾಂಸ್ಕೃತಿಕ ವಿನಿಮಯ ಎರಡೂ ಸುರಳೀತ.

Share

One Comment For "ನಮ್ಮೊಳಗಿನ ಭಾಷೆಯನ್ನು ಕುರಿತು…
ಸಂಪಾದಕ
"

 1. R.S.Venkat Raj
  25th November 2017

  ಭಾಷೆ ಒಂದು ಸಂವಹನ ವಾಹಕ ಅಷ್ಟೇ.ಸ್ಪರ್ಶ ಸಂವಹನದಷ್ಟು ಪ್ರಬಲ ವಾಹಕ ಮತ್ತೊಂದಿದೆಯೇ?

  Reply

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 4 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...