Share

ಕಣ್ಣಂಚಿನ ಹನಿಯೊಂದು ಎಲ್ಲಾ ಹೇಳುತ್ತಿದೆ…
ಅರ್ಚನಾ ಎ ಪಿ

 

 

 

ಈ ಹೃದಯ ‘ಬೇಡದ’ ವಿಷಯದಲ್ಲಿ ಮೂಗು ತೂರಿಸಿ ಏನೇನೋ ಅನಾಹುತಕ್ಕೆ ಕಾರಣವಾಗತ್ತೆ.

 

 

 

ಕೆಹೆದೂಂ ತುಮ್ಹೇ…
ಯಾ ಚುಪ್ ರಹೂಂ…
ದಿಲ್ ಮೆ ಮೆರೇ ಆಜ್ ಕ್ಯಾ ಹೈ…

ಕ್ಯಾ ಹೈ…
ಹೌದು .. ಏನಿದೆ…

ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಸ್ವರ್ಣಬಣ್ಣದ ಸೂರ್ಯ ಕಿರಣಗಳಿಂದ ಕಂಗೊಳಿಸುವ ಹಿಮಾಚ್ಛಾದಿತ ಪರ್ವತ ದರ್ಶನವಿದೆ. ಸ್ವಾತಿ ಮಳೆಗಾಗಿ ನಿರಂತರ ಕಾಯುವ ಪಕ್ಷಿಯ ಕಣ್ಣಲ್ಲಿ ಕಾಯುವಿಕೆಯ ಖುಷಿ ಇದೆ. ಪಶ್ಚಿಮದವರ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿರುವ ‘ಪೂರ್ವ’ದವರ ಊಟದೆಲೆಯಲ್ಲಿ ಷಡ್ರಸೋಪೇತವಾದ ಪ್ರಾದೇಶಿಕ ಆಹಾರ ಬಿಟ್ಟು, ರೋಗಕಾರಕ ವಸ್ತುಗಳ ದಂಡೇ ಇದೆ. ಮನುಷ್ಯನ ಅತ್ಯಾಚಾರ ತಾಳಲಾರದೆ ಸಿಡಿಯಲು, ಒಮ್ಮೆಲೆ ಬಾಯ್ತೆರೆದು ಆಪೋಶನ ತೊಗೊಳ್ಳುವ ಇರಾದೆಯಿದೆ, ಭೂಮಿಯ ಅಂತರಾಳದಲ್ಲಿ ಕುದಿಯುತ್ತಿರುವ ಲಾವಾಗೆ. ಹಲ್ಲುಜ್ಜುವ ಪೇಸ್ಟಿನಲ್ಲಿ ಉಪ್ಪು ಮತ್ತು ಇದ್ದಿಲಿದೆ. ಕುಡಿಯುವ ನಿಂಬೆ ಪಾನಕದಲ್ಲಿ ‘ಎಸೆನ್ಸ್’ ಇದ್ರೆ, ಪಾತ್ರೆಯುಜ್ಜುವ ಪುಡಿಯಲ್ಲಿ ನಿಂಬೆಹಣ್ಣಿನ ಸಾರವೇ ಇದೆ.

ಧಾರಾವಾಹಿಯಲ್ಲಿ ಬರೋ ಖಳನಾಯಕಿಯರ ಹಣೆಯಲ್ಲಿ ಕಂಡರಿಯದ ಢಾಳಾದ ‘ತಿಲಕ’? (ಹೌದಾ) ಇದೆ. ಬೇಕೋ ಬೇಡವೋ ಅಂತೂ ಸಿನೆಮಾಗಳಲ್ಲಿ (ನೂರಕ್ಕೆ ತೊಂಬತ್ತೊಂಭತ್ತು) ‘ಐಟಮ್’ ಸಾಂಗ್ ಇದೆ. ಮೂಲೆಗೊಂದು ‘day care’ ಸೆಂಟರುಗಳಿವೆ, ವೃದ್ಧಾಶ್ರಮಗಳೂ ಇವೆ. ಎರಡಕ್ಕೂ ದುಡ್ಡು ಕೊಡೋಷ್ಟು ‘ಅಪ್ಪ ಅಮ್ಮ’ ಮತ್ತು ‘ಮಕ್ಕಳ’ ಬಳಿ ‘ದೊಡ್ಡ’ ಆರಂಕಿ ಸಂಬಳವೂ ಇದೆ. ಎಸಿ ಕಾರಿದೆ, ಕಾರಲ್ಲಿ ಪ್ರಾಣರಕ್ಷಣೆಗೆ ತೆರೆದುಕೊಳ್ಳುವ ‘air bag’ಗಳಿವೆ. ಪಾನಿಪುರಿಯಲ್ಲಿ ಕಡಲೆಕಾಳು, ಬಟಾಣಿ ಇದೆ.

ಮಹಾನಗರ ಪಾಲಿಕೆಗೆ ಕಸದ ಸಮಸ್ಯೆ ನಿವಾರಣೆಯಾಗದೆ ಹುಟ್ಟಿಕೊಂಡ ತಲೆನೋವಿದೆ. ಎಲ್ಲಾ ಮಾಧ್ಯಮಗಳ ಬಳಿಯೂ, ನಗರದಲ್ಲಿ ಅಥವಾ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಯಾವುದೇ ‘ಘಟನೆ’ ನಡೆದರೂ ಮಾತಾಡಲು, ಕಣ್ರೆಪ್ಪೆ ಬಡಿಯೋಷ್ಟರಲ್ಲಿ, ‘ಹಾಜರಾ’ಗುವ ‘ತಜ್ಞರ’ ದಂಡೇ ಇದೆ.

ಸಿಗ್ನಲ್ಲಿನಲ್ಲಿ ತನ್ನ ಪಕ್ಕದಲ್ಲಿ ನಿಂತ ಬೆಂಜ್ ಕಾರಿನವನನ್ನು ನೋಡಿದ ಸ್ಕೂಟರ್ ಸವಾರನ ಮುಖದಲ್ಲಿ ಆಸೆ ಇದೆ. ಅದೇ ಆ ಸ್ಕೂಟರಿನವನನ್ನು ದಿಟ್ಟಿಸಿ ನೋಡುತ್ತಿರುವ, ಕಾಲಿಲ್ಲದ ಭಿಕ್ಷೆ ಬೇಡುತ್ತಿರುವವನ ಆ ಕಣ್ಣುಗಳಲ್ಲಿ ಯಾವ ಭಾವವಿದೆ? ತಿಳಿಯದಾಗಿದೆ…

ಅಬ್ಬಬ್ಬಾ….. ಏನಿದೆ ಅನ್ನೋ ಪಟ್ಟಿ ಉದ್ದವಾಗುತ್ತಲೇ ಹೋಗ್ತಿದೆ. ಪ್ರಕೃತಿಯಲ್ಲಿ ಕಣಕಣವೂ ಸಮತೋಲನದಲ್ಲಿದೆ. ಆದರದನ್ನು ಹಾಗಿರಲು ಬಿಡದೇ ತೀರುತ್ತೇನೆ ಎಂಬ ಹುಂಬತನವಿದೆ ‘ಬುದ್ಧಿವಂತ’ ಮನುಷ್ಯನಲ್ಲಿ. ಅದಕ್ಕೆಂದೇ ಬಹುಶಃ ರಾಮಾಯಣ ಮಹಾಭಾರತದ ಯುಗದಲ್ಲಿ ನಡೆಯದ, ನಂತರದಲ್ಲಿ, ನಡೆದ ಪ್ರಕೃತಿ ವಿಕೋಪದ ಅಪಾಯಗಳು… ಈ ಕಲಿಯುಗದಲ್ಲಿ ಶತಕಗಳಿಂದ ವರ್ಷಗಳಿಗಿಳಿದು, ಈಗ ಪ್ರತೀ ವರ್ಷವೂ ಇಂತಹ ಭಾರೀ ವಿಕೋಪಗಳಿಗೆ ಎದುರಾಗುತ್ತಿರುವುದು… ಪ್ರಾಯಶಃ… ನಮ್ಮ ‘ಕೈ’ಚಳಕದ ಪರಿಣಾಮವೇ ಇರಬಹುದು.

ಅಲ್ಲಾ…. ಮಾತು ಶುರುವಾಗಿದ್ದು… ‘ಏನಿದೆ’ ಅಂತ’…

ಏನಿದೆ ಹೃದಯದಲ್ಲಿ…
ಏನಿರಬೇಕಿತ್ತು ಹೃದಯದಲ್ಲಿ???

ಎಂಥ ದೊಡ್ಡ ದೊಡ್ಡ ಪ್ರಶ್ನೆಗಳು… ಉತ್ತರ ಹುಡುಕಲು ಪ್ರಯತ್ನ ಮಾಡ್ತಾ ಮಾಡ್ತಾ ಜೀವನವೇ ಮುಗಿದು ಹೋಗತ್ತೇ ಹೊರತು, ಪರಿಹಾರವಂತೂ ಇಲ್ಲವೇ ಇಲ್ಲ… ಆದರೂ ತಿಳಿದವರು ಹೇಳೋ ಪ್ರಕಾರ ಹೃದಯ ಇರೋದು ರಕ್ತ ಪಂಪ್ ಮಾಡೋಕೆ. ಜೀವಶಾಸ್ತ್ರ ಅದನ್ನೇ ಹೇಳತ್ತೆ. ಆದರೆ ಪಂಪ್ ಮಾಡೋದ್ರ ಜೊತೆಗೆ ಬೇಕಾಗಿಯೋ ಬೇಡವಾಗಿಯೋ ‘ಬೇಡದ’ ವಿಷಯದಲ್ಲಿ ಮೂಗು ತೂರಿಸಿ ಏನೇನೋ ಅನಾಹುತಕ್ಕೆ ಕಾರಣವಾಗತ್ತೆ.

ಹೇಗೆ…

ಹೇಗೆ ಅನ್ನೋದಕ್ಕೆ ಎಷ್ಟು ಬೇಕಾದರೂ ಉದಾಹರಣೆಗಳನ್ನು ಕೊಡಬಹುದು…

ಓಹೋ… ಆ ತಯಾರಿಯೂ ಆಗಿದೆಯೇ ಅಂತೀರಾ?

ಖಂಡಿತವಾಗಿ…

ಈಗ ನೋಡಿ… ಯಾವುದೋ ಅನಿವಾರ್ಯ ಕಾರಣಗಳಿಗೆ (ಅದು ಸಂಬಂಧದ ಉಳಿವಿಗೆ, ಆಸ್ತಿ ‘ಹೊರಗೆ’ ಹೋಗದಿರಲಿ ಅಂತಲೋ, ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಯಾಕೆ ವೃಥಾ ಹುಡುಕಾಟ ಇತ್ಯಾದಿ ಇತ್ಯಾದಿ) ಅಪ್ಪನ ತಂಗಿಯ ಮಗಳನ್ನೋ, ಅಮ್ಮನ ತಮ್ಮನ ಮಗನನ್ನೋ ಮದುವೆಯ ಬಂಧದಲ್ಲಿ ವರಿಸಿದಾಗಲೇ ಗೊತ್ತಾಗೋದು ನಿಜವಾಗಿಯೂ ನಮ್ಮ ಬಯಕೆ ಏನಾಗಿತ್ತು ಅಂತ…

ಆದರೆ ಅಷ್ಟೊತ್ತಿಗಾಗಲೇ… ನದಿಯ ಸಿಹಿ ನೀರು, ಉಪ್ಪಿನ ಸಮುದ್ರ ಸೇರಿ ಆಗಿರತ್ತೆ. ಮತ್ತೆ ವಾಪಸ್ಸು ಹರೀತೀನಿ ಅನ್ನೋದು ಅಸಾಧ್ಯ. ಅದಕ್ಕಂತ ದಡಕ್ಕೆ ಬಂದು ಅಲೆಗಳಾಗಿ ಅಪ್ಪಳಿಸ್ತಾ… ಯಾರಾದರೂ ಯಾವುದಾದರೂ ಒಂದು ಅಲೆಗೆ ‘ಸ್ಪಂದಿಸ’ಬಹುದು ಅಂತ ಚಾತಕ ಪಕ್ಷಿಯ ಹಾಗೆ ಕಾಯೋದು. ಹಾಗೇನೇ ಹಿಂತಿರುಗಿ ಹೋಗಿ… ಬಂಧನದ ಬಂಧ ಉಳಿಸಿಕೊಳ್ಳಲು. ಅದೇ ನೀರನ್ನು ಕುದಿಸಿ ಶೋಧಿಸಿ… ‘ಸಪ್ಪೆ’ಯೋ… ‘ಸಿಹಿ’ಯೋ ಕುಡಿದು… ಅದರಲ್ಲೇ ಬದುಕಲು ಬೇಕಾದ ‘ಖುಷಿ’ ಅನುಭವಿಸೋದು.

ಮತ್ತೆ… ಅದೇ ಅಲೆಗಳಾಗಿ ದಡಕ್ಕೆ ಅಪ್ಪಳಿಸುವ ಪ್ರಕ್ರಿಯೆಯಲ್ಲಿ ‘ತೊಡಗಿ’ಕೊಳ್ಳುವುದು…

‘ಅಲ್ಲಿ’ರುವವರಿಗೆ, ‘ಇಲ್ಲಿ’ಯವರೊಂದಿಗೆ ಒಂದು ‘healthy relationship’ ಹೊಂದೋ ಬಯಕೆ… ಆದರೆ, ‘ಇಲ್ಲಿ’ರುವವರಿಗೆ, ಸಮುದ್ರದ ವಿಶಾಲ ಆಳದಲ್ಲಿ ಕಳೆದುಹೋಗೋ ತವಕ.

ಒಟ್ಟಾರೆ ಈ ‘ಏನಿಲ್ಲದ’ ಹೃದಯದಲ್ಲಿ ಏನೋ ‘ತುಂಬಿ’ಕೊಂಡು ಓಲೈಸೋ ಹಂಬಲ.

ಮಾತೊಂದು ತುಟಿಯ ಅಂಚಿನಲ್ಲಿ ಕರಗೇ ಹೋದ ಹಾಗೆ…
ನಿಜ ಹೇಳೋ ಕಣ್ಣುಗಳು… ನಿರ್ಭಾವುಕ ಸ್ಥಿತಿ ತಲುಪಿದೆ…
ಹೇಳದೇನೇ… ಅಪ್ಪುಗೆಯ ಭದ್ರತಾ ಭಾವಕ್ಕೆ ತುಡಿಯುವ
ಅಪೇಕ್ಷೆ ಇದೆ…
ಕಣ್ಣಂಚಿನಲ್ಲಿ ಮೂಡಿ ನಿಂತಿರೋ ಹನಿಯೊಂದು…
ಎಲ್ಲಾ ಹೇಳುತ್ತಿದೆ…

ಯಾಕೋ ನನ್ನ ಕಣ್ಣುಗಳೂ ತೇವಗೊಳ್ತಿವೆ.

—-

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...