Share

ಸಂಶನಾ ಇಲ್ಲ; ಆತ ಅಲ್ಲಾಹ್ ಅಜ್ಜ, ಈತ ಶ್ರೀಕೃಷ್ಣಪ್ಪ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

 

 

“ಈರಣ್ಣನ ಜಾತ್ರಿ ಇಲ್ಲೇ ನಡೀಲಿ, ಪೀರಪ್ಪನ ಉರುಸು ಅಲ್ಲೇ ನಡೀಲಿ…” ಅಂದ.

 

 

 

ಡುಪಿ ಶ್ರೀಗಳು ಶ್ರೀ ಕೃಷ್ಣ ಮಠದಾಗ ಮುಸ್ಲಿಮ್ ಬಾಂಧವರಿಗೆ ಇಫ್ತರ್ ಕೊಟ್ರಲ್ಲ ಅವತ್ತೇನಾತು ಗೊತ್ತಾ? ನಾನು ವಾಕಿಂಗ್ ಹೋಗಿದ್ನಾ ಅವತ್ತ ಚಂಜೀ ಹೊತ್ತು, ಅಲ್ಲೇ ಕಂಚಗಾಲಪುರದ ದಾರಿ ಹಿಡಿದು ಹೊಂಟಿದ್ದೆ. ಅಲ್ಲೆ ಬೀಳು ಬಿದ್ದ ಹೊಲದಾಗ ಯಾಡು ಫೂಲ್ ಕಟ್ಟಿ ಅದಾವಲ್ಲ ಅದರ ಮ್ಯಾಲೆ ದಿನಾಲೂ ನಾನು ಹೋಗಿ ಕುಂದ್ರೂದು. ಆದ್ರ ಇಫ್ತರ್ ದಿನ ನನಗ ಆಶ್ಚರ್ಯಾತು. ಸುಮಾರು ದೂರದಿಂದ ನೋಡೀದೆ. ಒಬ್ಬ ಬಿಳಿ ಟೋಪಿ, ದೊಡ್ಡ ದಗಲೆ ಅಂಗಿ – ಚೊಣ್ಣ ಹಾಕಿಕೊಂಡಿದ್ದ ಮುಲ್ಲಾ ಅಜ್ಜ ಕುಂತಿದ್ದ. ಆತಗ ಎದುರಿನ ಪೂಲ್ ಕಟ್ಟಿ ಮ್ಯಾಲೆ ಇನ್ನೊಬ್ಬಾತ ಚಿರಯುವಕ ಕುಂತಿದ್ದ. ಆತ ಹಳದಿ ಟವಲ್ ಹೆಗಲು ಮ್ಯಾಲೆ ಹಾಕ್ಕೊಂಡಿದ್ದ. ಕೈಯ್ಯಾಗ ಒಂದು ಕೋಲಿನಂಥಾದ್ದು ಹಿಡಕೊಂಡಿದ್ನಾ. ಆತನ ಹೆಗಲ ಮ್ಯಾಲೆ ಒಂದ ಬಾರಕೋಲು ಸೈತ ಇತ್ತು. ಒಂದೀಟ ಸಮೀಪ ಹೋದೆ ಮೆಲ್ಲಕ. ಸಂಶನಾ ಇಲ್ಲ. ಆತ ಅಲ್ಲಾಹ್ ಅಜ್ಜ. ಈತ ಶ್ರೀಕೃಷ್ಣಪ್ಪ.

ಅವರು ಉಡುಪಿ ದಿಕ್ಕಿನ ಕಡೆ ಹೊಳ್ಳಿ ಏನೇನೊ ಮಾತಾಡ್ತಿದ್ರು. ಇಬ್ರದೂ ಯಾವದೊ ದೇವಭಾಷೆ. ನನಗ ಜೀವ ತಡೀಲಾರದಕ್ಕ ನಾನೂ ಅಲ್ಲೀಗಿ ಹೋದೆ. ಅವರಿಬ್ಬರ ಮುಂದ ಮಂಡಿ ಊರಿ ಕುಂತು ನಮಸ್ಕಾರ ಮಾಡೀದೆ. ಅಲ್ಲಾಹ್ ಅಜ್ಜ ಏನೊ ಕೇಳೀದ. ನನಗ ಅರ್ಥಾಗ್ಲಿಲ್ಲ. ಶ್ರೀ ಕೃಷ್ಣಪ್ಪನೂ ಸಂಸ್ಕೃತದಾಗ ಏನೊ ಕೇಳೀದ. ಚೂರು ಅರ್ಥಾತು. “ನನಗ ದಿಕ್ಕಾ ತೋಚ್ವಲ್ದೊ ತಂದೆ. ಯಾವ ಊರು ನನ್ನದು ಅಂತ ಹೇಳಿ, ಹುಟ್ಟಿ ಬೆಳೆದದ್ದು ಲಕ್ಕುಂಡಿ, ನಿಂತ ಕರ್ಮಭೂಮಿ ತುಮಕೂರು, ತಾಳಿ ಕಟ್ಟಿಸಿಕೊಂಡು ಹೋಗಿದ್ದು ಮಂಡ್ಯನೊ ಎಪ್ಪಾ..” ಅಂದೆ ದೀನಳಾಗಿ.

ಆಗ ಅವರಿಬ್ಬರಿಗೂ ಗೊತ್ತಾತು ನಾನು ಅಪ್ಪಟ ಕನ್ನಡತಿ ಅಂತ. “ಸರಿಬಿಡುಬೇ ತಂಗಿ. ಎಲ್ಲಿರ್ತೀ ಅಲ್ಲೀ ಜನ ನಿನ್ನಾರ ಅಂತ ತಿಳಿ” ಅಂತ ಅಲ್ಲಾಹ್ ಅಜ್ಜ ಹೇಳೀದ. ಆಗ, “ಅಲ್ಲೊ ಮಾರಾಯ ಹಂಗ ತಿಳ್ಕೊಂಡು ಬಾಳಿದ್ಕಾ ಈ ಹೆಣ್ಮಗಳ್ನ ಎಲ್ಲಾ ಪರೀಕ್ಷೆದಾಗ ಪಾಸ್ ಮಾಡ್ಯಾರ ನನ್ನ ದಾಸರು” ಅಂತ ಮುಗುಳ್ನಕ್ಕ. ಆಗ ಅಲ್ಲಾಹ್ ಅಜ್ಜ, “ನಿಮ್ಮ ಲಕ್ಕುಂಡ್ಯಾಗ ಜನರು ಹೆಂಗಾದರಬೇ ತಂಗಿ..” ಅಂತ ಕೇಳೀದ. “ಇರೂದೇನು ಮಸ್ತ್ ಅದಾರ ಎಜ್ಜ.. ಮಳಿ ಬೆಳಿ ತೀರ ಹೆಚ್ಚೂ ಆಗಂಗಿಲ್ಲ, ಕಮ್ಮೀನೂ ಆಗಂಗಿಲ್ಲ, ಟಿಂವ್ ಅಂತ ಜೀವ ಹಿಡ್ಕೊಂಡು ಅದಾರ..” ಅಂದೆ.

ಶ್ರೀಕಷ್ಣಪ್ಪ ಮುಗುಳ್ನಕ್ಕೊಂತ ಕುಂತಿದ್ದ. ಅಲ್ಲಾಹ್ ಅಜ್ಜನ ಕಣ್ತುಂಬ ಕುತೂಹಲ. “ಅದು ಸರಿ ಬಿಡುಬೆ. ಅದಲ್ಲ ತಂಗಿ ಹಿಂದೂ, ಮುಸ್ಲಿಮ್ ಮಂದಿ ಈ ಮಂಗಳೂರು ಕಡೆ ಜನರಂಗ ಒಬ್ಬರಿಗೊಬ್ಬರು ಬುಸುಗುಡ್ತಾರೇನು ಇಲ್ಲಾ ಎಲ್ಲರೂ ನಕ್ಕೊಂತ ಇರ್ತಾರ ಹೇಳಬೇ..” ಅಂದ. ನನಗೊಂದೀಟು ಸಿಟ್ಟು ಬಂತು. “ಏ ಹೋಗಾ ಎಜ್ಜ, ನೀನು ಬರೀ ಕಾಬಾದಾಗ ಇದ್ರ ಹೆಂಗ? ಈಗ ಹೆಂಗೂ ಬಂದೀಯಲ್ಲಾ ನಮ್ಮ ಲಕ್ಕುಂಡಿಗೂ ಹೋಗಿ ನೋಡ್ಕೊಂಬಾ ಹೋಗು. ನಾನು ಯಾಡು ಮೈಲು ದೂರ ನಡಿಗಿ ಮುಗಿಸ್ಬೇಕು. ಜಾಸ್ತಿ ಮಾತಾಡಂಗಿಲ್ಲ..” ಅಂದೆ. ಆಗ ಶ್ರೀ ಕೃಷ್ಣಪ್ಪ ಬಾಯಿಬಿಟ್ಟ, “ಹೇ ಮಗಳೇ ಶಾವಕ್ಕ, ನನ್ನ ಮಾತು ಕೇಳು, ಅಜ್ಜನ ಪ್ರಶ್ನೆಗೆ ಉತ್ತರ ಹೇಳಿ ಹೋಗಿ ಬಿಡುಬೇ. ನಮವ್ವ ಶಾಣೇಕಿ” ಅಂತ ನನ್ನ ಚಟ್ರನೆತ್ತಿ ಸವರಿ ರಮಿಸಿ ಹೇಳೀದ.

ಶ್ರೀಕೃಷ್ಣಪ್ಪನ ಆಜ್ಞೆ ಮೀರಂಗಿಲ್ಲಲ್ಲಾ.. ನಮ್ಮೂರ ಜನರ ಬಗ್ಗೆ‌ ಹೇಳಾಕ್ಹತ್ತೀದೆ. “ಎಜ್ಜಾ ನಮ್ಮೂರಾಗ ಕುರುಬರು, ಕುಂಬಾರು, ಸುಣಗಾರರು, ನೇಕಾರರು, ಗೊಲ್ಲರು, ಸಿಂಪಿಗರು, ಮಾದರು, ಜಾಢರು, ಕೊರ್ರು, ಬ್ರಾಹ್ಮಣರು, ಲಿಂಗಾಯತರು, ಮುಸ್ಲಿಮರು, ಪಿಂಜಾರರು… ಇನ್ನೂ ಎಷ್ಟೊ ಜಾತೀ ಜನ ಅದೀವಿ. ಆದ್ರ ಕ್ವಾಟಿ ಈರಣ್ಣನ ಜಾತ್ರಿ, ಹಾಲಗುಂಡಿ ಬಸವಣ್ಣನ ಜಾತ್ರಿ, ಶ್ರೀಕೃಷ್ಣಾಷ್ಟಮಿ ಹಬ್ಬಗಳ್ನ ಮಾಡೂವಾಗ ಅನಕೂಲಾದಾರು ಎಲ್ಲರೂ ಭಾಗವಹಿಸ್ತೀವಿ. ಪಂಕ್ತಿಭೇದ ಇಲ್ಲದಾ ಊಟ ಮಾಡ್ತೀವಿ. ಆದ್ರ ಶ್ರೀಕೃಷ್ಣನ ಅಷ್ಟಮಿ ದಿನ ಮಸೀದಿಯೊಳಗ ಹೋಗಿ ತೊಟ್ಟಲಕ್ಕ ಎಂದೂ ಹಾಕಿಲ್ಲ. ಆದ್ರ ಆತನ ಸ್ಥಾನದಾಗ ಆತಗ ಸಿಂಗಾರ ಬಂಗಾರ ಮಾಡೂವಾಗ ಪಿಂಜಾರು, ಮುಸುಲ್ರು, ಜಂಗಮರು ಅಂತ ಭೇದ ಇಲ್ಲದಾ ಬಂದಾರ್ನೆಲ್ಲಾರ್ನೂ ಕರ್ಕೊಂತೀವಿ..” ಅಂದೆ. “ಮತ್ತೆ?” ಅಂತ ಅಜ್ಜ ಗಡ್ಡ ನೀವಿಕೊಂಡ. ಶ್ರೀಕೃಷ್ಣ ಒಂದು ನಮನಿ ಧ್ಯಾನಕ್ಕ ಕುಂತಂಗ ಕುಂತಿದ್ದ.

“ಮತ್ತೇನಂದ್ರ‌ ಎಜ್ಜಾ ಹಜರತ್ ಜಂದೀಪೀರಪ್ಪನ ಉರುಸು ಬರುತ್ತಲ್ಲಾ ಅವಾಗ ಸೈತ ನಮ್ಮ ಇಡೀ ಊರು ಸಂಭ್ರಮದಾಗ ಮುಣಿಗಿರುತ್ತ. ಎಲ್ಲಾ ಜಾತಿಯರ ಮನ್ಯಾಗೂ ಮಾಲ್ದಿ ಮಾಡಿರ್ತೀವಿ. ಎಲ್ಲಾರೂ ದರಗಾಕ ಹೋಗಿ ಮಂಡಿಯೂರಿ ನಮಸ್ಕಾರ ಮಾಡಿ ಬರತೀವಿ. ಸಕ್ರಿ, ಊದಿನ ಕಡ್ಡಿ ಜಂದಿ ಪೀರಪ್ಪಗ ಅರ್ಪಿಸಿ ಬರ್ತೀವಿ. ಎಲ್ಲರೂ ಅಂದ್ರ ಎಲ್ಲಾರೂ ಸೇರಿ ಉರುಸು ಮಾಡ್ತೀವೊ ಎಜ್ಜಾ, ಮುಸುಲ್ರು, ಹಿಂದೂ ಅಂತ ನೆನಪಾ ಇರಂಗಿಲ್ಲ. ಬರೀ ಲಕ್ಕುಂಡಿ ಜನ ಅಂತ ಮಾತ್ರ ಮನಸಿನ್ಯಾಗಿರುತ್ತ ಎಜ್ಜಾ” ಅಂದೆ. ಆಗ ಅಲ್ಲಾಹ್ ಅಜ್ಜ, “ಅಲ್ಲಬೇ ತಂಗಿ ಒಮ್ಮೀನೂ ಜಂದಿಪೀರಪ್ಪನ ಕರ್ಕೊಂಡು ಬಂದು ಕ್ವಾಟಿ ಈರಣ್ಣನ ಗುಡಿಯಾಗಿಟ್ಡು ಉರುಸು ಮಾಡ್ಲಿಲ್ಲನು ನಿಮ್ಮೂರಾಗ” ಅಂದ.

ಆತನ ಮಾತು ಕೇಳಿ ನನಗ ನಗು ಬಂತು. ಹೊಟ್ಟಿ ಬ್ಯಾರೆ ಗ್ಯಾಸ್ಟ್ರಿಕ್ ಪುಂಯೀಯೀಕ್ ಅಂತ ಅಪಾನವಾಯು ಹೋಗಿಬಿಟ್ತು. ಅದರ ಸದ್ದಗಿ ಎಚ್ಚರಾದನೆನೊ ಅನ್ನೂವಂಗ ಶ್ರೀಕೃಷ್ಣಪ್ಪ ಹಹಹಹಹಹಹ ಹಹಹಹ ಹಹಹ ಅಂತ ಉಸುಲ್ಹಿಡುದು ನಕ್ಕ ಬಿಟ್ಟ. ಆಗ ಅಲ್ಲಾಹ್ ನನ್ನ ಹೂಸಿನ ಕಡೆ ಗಮನ ಕೊಟ್ಟಿಲ್ಲ ಅನ್ನೂವಂಗ ಮುಖ ಮಾಡಿ, “ಏನು ಸಾಬ್, ಲಕ್ಕುಂಡ್ಯಾಗ ಒಮ್ಮೀನೂ ಜಂದಿಪೀರಪ್ಪನ ಉರುಸನ್ನ ಈರಣ್ಣನ ಗುಡಿಯಾಗಾಗ್ಲಿ, ನಿನ್ನ ಗುಡಿಯಾಗಾಗ್ಲಿ ಮಾಡಿಲ್ಲಂತ.. ಮುಂದೆ ಏರ್ಪಾಡು ಮಾಡೂನಲ್ಲಾ” ಅಂತ ಕೇಳೀದ. ಆಗ ಶ್ರೀ ಕೃಷ್ಣಪ್ಪ “ನೋಡು ದೋಸ್ತ್ ಈರಣ್ಣಗೂ ತನ್ನ ಗುಡಿ ಐತಿ. ಜಂದಿಪೀರಪ್ಪಗೂ ತನ್ನದಾ ಆದ ದರಗಾ ಐತಿ. ಈರಣ್ಣನ ಜಾತ್ರಿ ಆಗೂವಾಗ ಎಲ್ರೂ ಹೋಗಿ ಪಂಕ್ತಿಭೇದ ಇಲ್ಲದಾ‌ ಪ್ರಸಾದ ತಿಂದು ಬರತಾರ. ಮತ್ತೆ ಜಂದಿಪೀರಪ್ಪನ ಉರುಸು ನಡೆದಾಗ ಎಲ್ಲರೂ ಊರು ಮಂದಿ ಹೋಗಿ ಸಕ್ರಿ ಓದಿಸ್ಕೊಂಡು, ಇಷ್ಟ ಇದ್ದಾರು ಬ್ಯಾಟಿ ಮಾಡ್ಸಿ, ತಿಂದು ಬರತಾರ. ಈರಣ್ಣನ ಜಾತ್ರಿ ಇಲ್ಲೇ ನಡೀಲಿ, ಪೀರಪ್ಪನ ಉರುಸು ಅಲ್ಲೇ ನಡೀಲಿ…” ಅಂದ.

“ಏ ಕಪ್ರಿ ಏಳ್ಲೇ ಕೋತಿ.. ” ಅಂತ ನನ್ನ ಹುಡುಗ ಎಬ್ಬಿಸಿಬಿಟ್ಟ. ಕನಸು ಅರ್ಧ ಆತು.

—-

ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಊರು ಗದಗ ಜಿಲ್ಲೆಯ ಲಕ್ಕುಂಡಿ. ಹುಟ್ಟಿದ್ದು ಸಣ್ಣ ರೈತ ಕುಟುಂಬದಲ್ಲಿ. ವಿದ್ಯಾಭ್ಯಾಸ ಬಿ.ಇಡಿ, ಸಮಾಜಶಾಸ್ತ್ರದಲ್ಲಿ ಎಂ.ಎ. ಇನಿಶಿಯೇಟಿವ್ಸ್ ಫಾರ್ ಡೆವಲಪ್‍ಮೆಂಟ್ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆಯಲ್ಲಿ ಸಾವಯವ ಕೃಷಿ, ಶಿಕ್ಷಣ, ಕಿರುಹಣಕಾಸು, ಆರ್ಥಿಕ ಸಾಕ್ಷರತೆ, ಬ್ಯಾಂಕಿಗ್, ಮಹಿಳಾ ಸಬಲೀಕರಣ ಇತ್ಯಾದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಅನುವಾದಕಿಯಾಗಿ ಏಳು ವರ್ಷ ಕಾರ್ಯನಿರ್ವಹಿಸಿದ ಅನುಭವ. ಇದೇ ಸಂಸ್ಣೆಯಲ್ಲಿ ಕೊನೆಯ ಮೂರು ವರ್ಷ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಸೇವೆ. ಪ್ರಸ್ತುತ ಕನ್ನಡ ಶಿಕ್ಷಕಿ. ಓದುವುದು, ಲಹರಿ ಬಂದಾಗ ಬರೆಯುವುದು, ಪ್ರಯಾಣ, ಸಾಮಾಜಿಕ ಉಪಯುಕ್ತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ, ಅಡುಗೆ, ರಂಗೋಲಿ, ಹೂ ಹೆಣೆಯುವುದು, ಕೃಷಿ ಕೆಲಸದಲ್ಲಿ ತೊಡಗುವುದು ನೆಚ್ಚಿನ ಹವ್ಯಾಸಗಳು.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...