Share

ಬೂಮ್‍ರಾಂಗ್
ಎಂ ಆರ್ ಭಗವತಿ

 

 

 

 

 

ಹಿಂದಿನ ಜನ್ಮದ ಕರ್ಮ ಫಲ ಅನ್ನುವುದು ನಂಬಿಕೆಯ ಮಾತಾದರೂ ಹಲವಾರು ವಿಷಯಗಳಲ್ಲಿ ಕಾಕತಾಳೀಯವಾಗಿ ನಿಜವಾಗಿ ಕಾಣಿಸುತ್ತಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಸನ್ನಿವೇಶಗಳಲ್ಲಿ ನಾವು ಮಾಡಿದ ಕರ್ಮಫಲಗಳನ್ನು ಅನುಭವಿಸುತ್ತಿರುತ್ತೇವೆ. ನಾವು ಮಾಡಿದ್ದು ನಮಗೆ; ಅದಂತೂ ಶತಃಸಿದ್ಧ!! ಒಳ್ಳೆಯವರಿಗೆ ಕಾಲವಿಲ್ಲ ಅನ್ನುವುದು ಹೆಚ್ಚಿನಂಶ ನಿಜವಾಗುತ್ತಿದ್ದರೂ ಕೂಡ.

ಇದೆಲ್ಲ ಯಾಕೆ ಪದೇ ಪದೇ ನೆನಪಾಗುತ್ತಿದೆಯೆಂದರೆ: ಕಳೆದ ವಾರ ಗೆಳತಿಯೊಬ್ಬಳು ಮೆತ್ತಗಿದ್ದರೆ ತುಂಬಾ ಕಷ್ಟ ಕಣೆ ಅಂತ ಕಣ್ಣೀರು ಹಾಕಿದಳು. ಯಾಕೆಂದರೆ ಅಂಥವರ ಮೇಲೆ ಉಳಿದವರ ಜೋರು ಇದ್ದೇ ಇರುತ್ತದೆ. ಆದರೆ ತನ್ನ ತಪ್ಪಿಲ್ಲದೆ ಒಂದು ಮನಸ್ಸನ್ನು ವಿನಾಕಾರಣ ಘಾಸಿಗೊಳಿಸಿದಾಗ ಆ ಮನಸ್ಸು ನೊಂದುಕೊಂಡರೆ, ಘಾಸಿಗೊಳಿಸಿದ ವ್ಯಕ್ತಿ ಒಂದಲ್ಲ ಒಂದು ದಿನ ಪಶ್ಚಾತ್ತಾಪಗೊಳ್ಳುವುದು ಖಂಡಿತ. ಅದು ಯಾರೇ ಆಗಿರಲಿ. ನಮ್ಮನ್ನೂ ಸೇರಿಸಿಕೊಂಡು…

ಇಂಥ ವಿಚಾರಗಳನ್ನು ಬಹಳಷ್ಟು ಜನ ಹೇಳುವುದನ್ನು ಕೇಳಿದ್ದೇನೆ. ಆದರೆ ವಿನಾಕಾರಣ ಘಾಸಿಗೊಳಿಸುವ ಮನಸ್ಸಿನ ಹಿಂದೆ ಏನೆಲ್ಲಾ ವಿಚಾರಗಳು ಕೆಲಸ ಮಾಡುತ್ತಿರುತ್ತವೆ ಎಂದು ಯೋಚಿಸುವಾಗ ಮುಖ್ಯವಾಗಿ ನೆನಪಾಗುವುದು ಅನಾದರ. ವ್ಯಕ್ತಿಯೊಬ್ಬನ ಬಗ್ಗೆ ಬಹಳ ಬೇಗನೆ ತೀರ್ಮಾನಕ್ಕೆ ಬರುವುದು. ಹಲವಾರು ವರ್ಷಗಳಿಂದಲೂ ಪರಿಚಯಸ್ಥರಾಗಿದ್ದರೂ ಆತ್ಮೀಯರಾಗಿದ್ದರೂ ತನ್ನೊಡನೆ ಒಡನಾಡುವ ವ್ಯಕ್ತಿಯ ಬಗ್ಗೆ ಅವರ ಇಷ್ಟಾನಿಷ್ಟಗಳ ಬಗ್ಗೆ ತಿಳಿಯದೆ ಮಾತಾಡುವ, ನೆನಪಿಸಿಕೊಳ್ಳಲು ಒದ್ದಾಡುವ ಜನರನ್ನು ನೋಡಿದ್ದೇನೆ. ನನಗೆ ಚಿತ್ರವೊಂದನ್ನು ಬರೆಯಲು, ನರ್ತಿಸಲು, ಹಾಡೊಂದನ್ನು ಹಾಡಲು ಬರುತ್ತದೆ ಎಂದಾಗ ಜತೆಗಿರುವ ವ್ಯಕ್ತಿಯು ಕೂಡ ಅಂಥ ಒಂದು ಪ್ರತಿಭೆ ಹೊಂದಿದೆ ಎಂಬುದನ್ನು ಗುರುತಿಸಲು ಎಷ್ಟು ವರ್ಷಗಳು ಬೇಕಾಗಬಹುದು? ಅದನ್ನು ತಿಳಿಯದೆ, ನಿಮಗೆ ಹಾಡನ್ನು ಹಾಡಲು ಬರುವುದಿಲ್ಲ, ಬರೆಯಲು ಬರುವುದಿಲ್ಲ, ನರ್ತಿಸಲು ಬರುವುದಿಲ್ಲ ಎಂದರೆ…? ಎದುರಿನ ವ್ಯಕ್ತಿಯು ಸೂಕ್ಷ್ಮ ಮನಸ್ಸಿನವನಾಗಿದ್ದರೆ ಏನಾಗಬಹುದು? ಇದು ಅಂಥ ಸಣ್ಣ ಉದಾಹರಣೆ ಅಷ್ಟೆ.

ನನ್ನ ಪ್ರಕಾರ ನಾವು ಒಡನಾಡುವ ಅಪರಿಚಿತ ವ್ಯಕ್ತಿಯ ಬಗೆಗೂ ಒಂದು ತರಹದ ನಂಬಿಕೆ ಬೇಕಾಗಿರುತ್ತದೆ. (ಎಲ್ಲಾ ಸಂದರ್ಭಗಳಲ್ಲೂ ಅಲ್ಲ). ಆ ವ್ಯಕ್ತಿಯ ಬಗೆಗೆ ನಮಗೆ ತಿಳಿಯದೆ ತೀರ್ಮಾನಕ್ಕೆ ಬರುವುದು, ಅಂಥ ಮಾತುಗಳನ್ನಾಡುವುದು ನಮಗೆ ತಿಳಿಯದಂತೆ ಆ ವ್ಯಕ್ತಿಯನ್ನು ಘಾಸಿಗೊಳಿಸುವ ಸಂಗತಿ.

ನಿಮ್ಮ ತಪ್ಪಿಲ್ಲದಿದ್ದಾಗ ನಿಮ್ಮನ್ನು ವಿನಾಕಾರಣ ಕಾರಣವಿಲ್ಲದೆ ಹೀಯಾಳಿಸಿ ದೂರಹೋದ ಸ್ನೇಹಿತರು, ಮಕ್ಕಳು, ಸಂಬಂಧಿಕರು, ನಿಮ್ಮ ಏಳಿಗೆಯನ್ನು ಸಹಿಸದೆ ಹೊಟ್ಟೆ ಉರಿದುಕೊಳ್ಳುವ, ಚಾಡಿ ಹೇಳಿ ನಿಮ್ಮನ್ನು ವಿನಾಕಾರಣ ಕಷ್ಟಕ್ಕೆ ಸಿಕ್ಕಿಸುವ, ನಿಮ್ಮ ಪ್ರಾಶಸ್ತ್ಯ ತಿಳಿಯದೆ ನಿಮ್ಮನ್ನು ಅವಮಾನ ಮಾಡುವ… ಪ್ರತಿನಿತ್ಯದ ಸಂಗತಿಗಳು ಕಡಿಮೆ ಅಂಕಗಳು ಬಂದಿದ್ದಕ್ಕೆ ಗೆಳೆಯನ, ಸಂಬಂಧಿಕರ ಮಕ್ಕಳನ್ನು ಹೀಯಾಳಿಸುವುದು, ನಿನ್ನ ಕೈಲಿ ಏನಾಗುತ್ತೆ, ಅಡುಗೆ ಚೆನ್ನಾಗಿ ಮಾಡುವುದಿಲ್ಲ ಇತ್ಯಾದಿ ಎಂದು ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು…

ಒಂದು ಕುಟುಂಬದಲ್ಲೇ ಆಗಲಿ, ಸಮಾಜದಲ್ಲೇ ಆಗಲಿ ಒಬ್ಬ ವ್ಯಕ್ತಿಯನ್ನು ಆತನ ಪ್ರಾಶಸ್ತ್ಯದ ಅರಿವಿಲ್ಲದೆ ಜೀವನವಿಡೀ ಅವರನ್ನು ಅವಮಾನಕ್ಕೆ, ಗೇಲಿಗೆ, ಅನಾದರಕ್ಕೆ ಒಳಪಡಿಸಿಬಿಡುತ್ತದೆ. ಇವರು ಇಷ್ಟೇ ಅನ್ನುವ ಸ್ವಯಂ ತೀರ್ಮಾನಕ್ಕೆ ಬಂದಿರುತ್ತಾರೆ.

ಇವು ಎಲ್ಲಾ ಉದಾಹರಣೆಗಳಿಗೆ ವ್ಯತಿರಿಕ್ತವಾಗಿ ಇಂಥ ಸಂದರ್ಭ ಸೃಷ್ಟಿ ಮಾಡುವ ಸಮಾಜವನ್ನು, ಕುಟುಂಬವನ್ನು, ವ್ಯಕ್ತಿಯನ್ನು… ಹಲವಾರು ಸನ್ನಿವೇಶಗಳು ಆಳುತ್ತಿರಬಹುದು. ಅಮ್ಮನಿಗೆ ಅವಮಾನ ಮಾಡಿ ಹೋದ ಮಗ ಆಫೀಸಿನಲ್ಲಿ ಬಾಸ್‍ನಿಂದ ತನ್ನ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅವಮಾನಕೊಳಗಾಗಬಹುದು, ಹೆಂಡತಿಯಿಂದ ಗಂಡ, ಗಂಡನಿಂದ ಹೆಂಡತಿ ಅನಾದರಕ್ಕೆ ಒಳಗಾಗಿದ್ದರೆ ಸ್ನೇಹಿತರು ಅವರನ್ನು ಕಡೆಗಣಿಸಬಹುದು, ಹೆಂಡತಿಯನ್ನು ಮನಬಂದಂತೆ ನೋಯಿಸಿದ ಗಂಡ ದಾರಿಯಲ್ಲಿ ಬಿದ್ದು ಗಾಯ ಮಾಡಿಕೊಳ್ಳಬಹುದು.

ಇಲ್ಲೆಲ್ಲಾ ವ್ಯಕ್ತಿಯ ಅಹಂ, ಅನಾದರ, ಕಡಿಮೆ ಮಟ್ಟದ ತಿಳುವಳಿಕೆ, ಎಲ್ಲವೂ ಕಾರಣವಾಗಿರಬಹುದು. ಇವೆಲ್ಲವನ್ನೂ ಹೇಳುವಾಗ ಹಲವಾರು ಸನ್ನಿವೇಶಗಳು ನಿಮ್ಮ ಕಣ್ಣಮುಂದೆ ಸುಳಿದಿರಬಹುದು. ಅವನ್ನೆಲ್ಲಾ ಮಾತಿಗಿಳಿಸುವುದು ಕಷ್ಟವೇ ಸರಿ. ಇವೆಲ್ಲಾ ನಮಗೆ ಕಲಿಸುವ ಪಾಠವೆಂದರೆ ಜೀವನವನ್ನು ನಾವು ಆದಷ್ಟು ಎಚ್ಚರಿಕೆಯಿಂದ ಸಂಭಾಳಿಸಬೇಕು ಎನ್ನುವುದು.

ಇವೆಲ್ಲವಕ್ಕೂ ಮೀರಿದ ಸತ್ಯವೊಂದಿದೆ: ನಿಮಗೆ ಜೀವನದಲ್ಲಿ ಅನ್ಯಾಯವಾಗಿದ್ದರೆ, ಅವಮಾನಗಳು ಪದೇ ಪದೇ ಆಗುತ್ತಿದ್ದರೆ, ಬೇಸತ್ತು ಹೋಗಿದ್ದರೆ… ಅವೆಲ್ಲಾ ಸರಿಯಾಗಬೇಕು ಎನ್ನುವುದಾದರೆ ಮುಖ್ಯ ನಮ್ಮ ಸಮಯ ಚೆನ್ನಾಗಿರಬೇಕು. ಅದಂತೂ ಸತ್ಯ!

ಎಂ ಆರ್ ಭಗವತಿ

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

One Comment For "ಬೂಮ್‍ರಾಂಗ್
ಎಂ ಆರ್ ಭಗವತಿ
"

 1. ಜೈದೇವ್ ಮೋಹನ್
  11th January 2018

  Taken for granted ಅನ್ನೋದು ಮನುಕುಲಕ್ಕೆ ಅಂಟಿದ ಶಾಪ. ಎಷ್ಟೋ ಬಾರಿ ನಮ್ಮಿಂದಲೇ ಈ ತಪ್ಪು ಆಗಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಅದರ ಅರಿವಾದರೆ ಅದೇ ನಮ್ಮೊಳಗಣ ಬದಲಾವಣೆಯ ಆರಂಭ . ಒಳ್ಳೆ ಲೇಖನ, ಬರೆಯುತ್ತಿರಿ

  Reply

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...