Share

ಮೂರಂಕದ ಕ್ರಿಸ್ಮಸ್
ಪ್ರಸಾದ್ ನಾಯ್ಕ್ ಕಾಲಂ

 

ಮೊದಲ ಅಂಕ: ಅಂಗೋಲಾ

ಅಂಗೋಲಾಕ್ಕೆ ಬಂದ ನಂತರ ಕ್ರಿಸ್ಮಸ್ ಹಬ್ಬವು ನನ್ನ ಮಟ್ಟಿಗೆ ಮೂರು ಅಂಕಗಳಲ್ಲಿ ಹಂಚಿಹೋಗಿದ್ದಂತೂ ಹೌದು.

ಡಿಸೆಂಬರ್ ಬಂದಾಕ್ಷಣ ವಿಶ್ವದ ಬಹುತೇಕ ಎಲ್ಲಾ ದೇಶಗಳಂತೆಯೇ ಅಂಗೋಲಾ ಕೂಡ ಮೆಲ್ಲಗೆ ಮೈಕೊಡವಿ ತನ್ನ ಕುಂಭಕರ್ಣ modeನಿಂದ ಜಾಗೃತ ಸ್ಥಿತಿಗೆ ಬರುತ್ತದೆ. ಕೆಲವೊಮ್ಮೆ ನನಗೆ ಅನ್ನಿಸುವುದುಂಟು. ಅಂಗೋಲನ್ನರು, ಅದರಲ್ಲೂ ಅಂಗೋಲನ್ ಪುರುಷರು ಎಚ್ಚರವಾಗುವುದೇ ಶುಕ್ರವಾರ ಮತ್ತು ಕ್ರಿಸ್ಮಸ್ ಹಬ್ಬದ ಅವಧಿಯಲ್ಲಿ ಎಂದು. ಶುಕ್ರವಾರವು ಇಲ್ಲಿಯವರಿಗೆ ‘Day of Man’ (ಗಂಡಸರ ದಿನ). ಅಂದರೆ ಶುಕ್ರವಾರ ಸಂಜೆಯಾಯಿತೆಂದರೆ ಕೂಕಾ (ಅಂಗೋಲಾದ ಜನಪ್ರಿಯ ಬಿಯರ್) ತುಂಬಿದ ಗ್ಲಾಸುಗಳು ಇಲ್ಲಿ ಸದ್ದು ಮಾಡುತ್ತವೆ. ಇನ್ನು ಶುಕ್ರವಾರ ಮತ್ತು ವಾರ್ಷಿಕ ಕಾರ್ನಿವಲ್ ಉತ್ಸವಗಳನ್ನು ಬಿಟ್ಟರೆ ದೊಡ್ಡ ಮಟ್ಟದ ಉತ್ಸಾಹವು ಬಂದುಬಿಡುವುದು ಕ್ರಿಸ್ಮಸ್ ಹಬ್ಬಕ್ಕೇ!

ವರ್ಷವಿಡೀ ಅದೇನು ಮೋಜು-ಮಸ್ತಿ ಮಾಡಿದ್ದರೂ ಕ್ರಿಸ್ಮಸ್ ಮಾತ್ರ ಬಲು ವಿಶೇಷ. ಹಬ್ಬಕ್ಕೆ ಇಲ್ಲಿಯ ಹಲವು ಸಂಸ್ಥೆಗಳಿಗೆ ಹತ್ತರಿಂದ ಹದಿನೈದು ದಿನಗಳ ರಜೆಯೆಂದರೆ ಸಾಮಾನ್ಯವೇ? ಹೀಗಾಗಿ ನವೆಂಬರ್ ತಿಂಗಳಿನಿಂದಲೇ ತಯಾರಿಗಳು ಶುರುವಾಗುತ್ತವೆ. ಇರುವ ಬೆರಳೆಣಿಕೆಯ ಸೂಪರ್ ಮಾರ್ಕೆಟ್ಟುಗಳು ಮತ್ತಷ್ಟು ಸಾಮಾನುಗಳನ್ನು ತರಿಸಿಕೊಳ್ಳುತ್ತವೆ. ರ್ಯಾಕುಗಳಲ್ಲಿ ಪುಟ್ಟ ಕ್ರಿಸ್ಮಸ್ ಮರಗಳು, ಸಾಂತಾಕ್ಲಾಸ್, ವಿವಿಧ ಬಗೆಯ ಚಾಕ್ಲೇಟುಗಳು ಬಂದು ದಂಡಿಯಾಗಿ ಕುಳಿತುಕೊಳ್ಳುತ್ತವೆ. ಹೊಸ ಹೊಸ ಆಫರ್ ಗಳಿಂದ ಆಕರ್ಷಿತರಾಗಿ ಬರುವ ಗ್ರಾಹಕರಿಗೋಸ್ಕರ ಸೂಪರ್ ಮಾರ್ಕೆಟ್ಟುಗಳು ಮದುವಣಗಿತ್ತಿಯಂತೆ ಸಜ್ಜಾಗುತ್ತವೆ. ಇತ್ತ ಜನಸಾಮಾನ್ಯರೂ ಕೂಡ ಹಬ್ಬಕ್ಕೆಂದೇ ಕೂಡಿಟ್ಟಿದ್ದ ಒಂದಿಟ್ಟು ಹಣವನ್ನು ತಮ್ಮ ಪಿಗ್ಗಿ ಬ್ಯಾಂಕಿನಿಂದ ತೆಗೆದು ಖರೀದಿಗೆ ತಯಾರಾಗುತ್ತಾರೆ. ಕ್ರೇಟುಗಟ್ಟಲೆ ಕೂಕಾಗಳು, ಮಾಂಸ, ಶಾಂಪೇನ್ ಇತ್ಯಾದಿಗಳು ಬಂದ ವೇಗದಲ್ಲೇ ಅಂಗಡಿಗಳಲ್ಲಿ ಖಾಲಿಯಾಗುತ್ತವೆ.

ರಿಕಾರ್ಡೋನಂತಹ ಗ್ರಾಮೀಣ ವ್ಯಾಪಾರಿ ಈ ಪ್ರತೀವರ್ಷದ ಸಡಗರವನ್ನು ಮೊದಲೇ ಲೆಕ್ಕಹಾಕಿ ಒಂದೆರಡು ತಿಂಗಳುಗಳ ಮೊದಲೇ ತನ್ನ ಹಳ್ಳಿಯಿಂದ ರಾಜಧಾನಿಗೆ ತೆರಳಿ ಹಲವು ಸಾರಾಯಿ ಬಾಟಲುಗಳನ್ನು ತಂದಿಟ್ಟಿರುತ್ತಾನೆ. ಕೂಕಾ, ಶಾಂಪೇನ್, ವೈನ್, ಚಿಕ್ಕ ಪ್ಯಾಕೆಟ್ಟಿನಲ್ಲಿದ್ದು ನೋಡಲು ಶ್ಯಾಂಪೂವಿನಂತಿರುವ ವಿಸ್ಕಿ… ಹೀಗೆ ವಿವಿಧ ಬಗೆಯ `ತೀರ್ಥ’ಗಳನ್ನು ತಂದಿಟ್ಟು ಜಾಗಸಿಕ್ಕಲ್ಲಿ ಕೂತು ಮಾರುವ ಕನಸು ಕಾಣುತ್ತಾನೆ. ವ್ಯಾಪಾರ ಒಳ್ಳೆಯದಾದರೆ ಅವನ ಮನೆಯಲ್ಲೂ ಹಬ್ಬವು ಚೆನ್ನಾಗಿ ನಡೆಯುತ್ತದೆ. ಅಂಗೋಲಾದಲ್ಲಿ ಸಾರಾಯಿ ಮಾರಲು ಪರವಾನಗಿಯ ಅವಶ್ಯಕತೆಯಿಲ್ಲದಿರುವುದರಿಂದ ಯಾರೂ ಕೂಡ ತಂದು ಇವುಗಳನ್ನು ಮಾರಾಟಮಾಡಬಹುದು. ಇನ್ನು ಗ್ರಾಮೀಣ ಭಾಗಗಳಲ್ಲಿ ಖಾಲಿ ನೀರಿನ ಬಾಟಲಿಗೆ ಕಳ್ಳನ್ನೂ ತುಂಬಿ ಮಾರಾಟ ಮಾಡಲಾಗುತ್ತದೆ. ಅಂಗೋಲಾದ ಕಳ್ಳು ಇಲ್ಲಿಯ ಕೂಕಾದಷ್ಟೇ ಜನಪ್ರಿಯ. ಹಾಗೆಂದು ಕ್ರಿಸ್ಮಸ್ ಎಂದರೆ ಅಂಗೋಲಾದಲ್ಲಿ ಕೇವಲ ಕುಡಿತಕ್ಕಷ್ಟೇ ಸೀಮಿತ ಅಂದುಕೊಳ್ಳಬೇಡಿ. ಆದರೆ ಇವುಗಳ ದೊಡ್ಡ ಪಾತ್ರವನ್ನು ಅಲ್ಲಗಳೆಯುವಂತೆಯೂ ಇಲ್ಲ. ಇನ್ನು ಮಾಂಸಾಹಾರಿ ಖಾದ್ಯಗಳ ವಿಚಾರದಲ್ಲಿ ಶ್ರೀಮಂತವಾಗಿರುವ ಅಂಗೋಲಾ ಹಬ್ಬಕ್ಕೂ ಕೂಡ ತನ್ನದೇ ಆದ ರೀತಿಯಲ್ಲಿ ಅಣಿಯಾಗುತ್ತದೆ. ಹಸಿದವರ ಹೊಟ್ಟೆ ತಣಿಸುತ್ತದೆ. ಹಬ್ಬದೂಟಕ್ಕೆ ಮೆರುಗನ್ನು ತರುತ್ತದೆ.

ಇತ್ತ ಅಂಗೋಲಾದಲ್ಲಿ ಬೀಡುಬಿಟ್ಟಿರುವ ಸಾವಿರಾರು ವಿದೇಶೀಯರು ಒಂದು ಚಿಕ್ಕ ರಜೆ ಮುಗಿಸಿ ಬರೋಣವೆಂದು ತಮ್ಮ ತಮ್ಮ ದೇಶಗಳಿಗೆ ಮರಳಲು ಸಜ್ಜಾಗುತ್ತಾರೆ. ಈ ವಿದೇಶೀಯರಲ್ಲಿ ಎಲ್ಲರೂ ಕೂಡ ಕ್ರಿಸ್ಮಸ್ ಹಬ್ಬವನ್ನು ಆಚರಿಸಲೆಂದೇ ಮನೆಗೆ ತೆರಳುತ್ತಿರುವವರಲ್ಲ. ಆದರೆ ಹತ್ತು-ಹದಿನೈದು ದಿನಗಳ ರಜೆಯೇ ಕಣ್ಣೆದುರಿಗಿದ್ದರೆ ಅವರಾದರೂ ಕೂಡ ಇಲ್ಲಿ ಕೂತು ಎಷ್ಟೆಂದು ನೊಣ ಹೊಡೆದಾರು! ಹೀಗೆ ವಿದೇಶೀಯರೂ ಕೂಡ ಹಬ್ಬದ ನೆಪದಲ್ಲಿ ಸವಾರಿ ಹೊರಡುತ್ತಾರೆ. ಹಬ್ಬ ಇರಲಿ, ಇಲ್ಲದಿರಲಿ. ತಾಯ್ನಾಡಿಗೆ ಮರಳುವ ಸಂತಸವೇ ಉಲ್ಲಾಸದ್ದಲ್ಲವೇ? ಹೀಗಾಗಿ ಎಲ್ಲರ ಮನದಲ್ಲೂ ಹಬ್ಬವೇ ಹಬ್ಬ.

*

ಎರಡನೇ ಅಂಕ: ಆಗಸ

ಳೆದ ಎರಡು ವರ್ಷಗಳಿಂದ ಕ್ರಿಸ್ಮಸ್ ಋತುವಿನಲ್ಲೇ ಭಾರತಕ್ಕೆ ಮರಳುತ್ತಿರುವ ನನಗೆ ಹಬ್ಬದ ಉತ್ಸಾಹವು ವೈಮಾನಿಕ ಪಯಣದಲ್ಲೂ ಎಂದಿನಂತೆ ಧಾರಾಳವಾಗಿ ಕಾಣಸಿಗುತ್ತದೆ. ವಿಮಾನನಿಲ್ದಾಣಗಳಲ್ಲಿ ಕಥೆಗಳಿಗೆ ಬರವಿಲ್ಲ ಅನ್ನುವುದಂತೂ ಸತ್ಯ. ಇನ್ನು ವಿಶ್ವದೆಲ್ಲೆಡೆ ಅದ್ದೂರಿಯಾಗಿ ಆಚರಿಸಲ್ಪಡುವ ಕ್ರಿಸ್ಮಸ್ ಬಂದರೆ ಕೇಳಬೇಕೇ? ಎಲ್ಲರ ಮುಖದಲ್ಲೂ ಹಬ್ಬದ ಕಳೆ. ಸಾಮಾನು ಸರಂಜಾಮುಗಳಲ್ಲಿ ಉಡುಗೊರೆಗಳ ಚಮಕ್. ಆದಷ್ಟು ಬೇಗ ಬೆಚ್ಚಗಿನ ಮನೆಗೆ, ಪ್ರೀತಿಪಾತ್ರರ ತೆಕ್ಕೆಗೆ ಸೇರುವ ತವಕ. ಏರ್ ಪೋರ್ಟುಗಳಲ್ಲಿರುವ ಮಳಿಗೆಗಳಲ್ಲಿ ಹೆಚ್ಚಿದ ಜನಸಂದಣಿ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಅವಧಿಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವೈಮಾನಿಕ ಪ್ರಯಾಣಗಳ ಟಿಕೆಟ್ಟುಗಳಿಗೆ ಸಿಗುವ ‘ಡಿಮ್ಯಾಂಡಪ್ಪೋ ಡಿಮ್ಯಾಂಡು’ ಸ್ಥಾನಮಾನವೇ ಇದಕ್ಕೆ ಸಾಕ್ಷಿ.

ಅಂಗೋಲಾದಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಬಂದಿಳಿಯುವ ನಾನು ಪ್ರತೀಬಾರಿಯೂ ಆರಿಸಿಕೊಳ್ಳುವುದು ಎಮಿರೇಟ್ಸ್ ವಿಮಾನವನ್ನೇ. ವೈಮಾನಿಕ ಪ್ರಯಾಣಗಳನ್ನು ನಿರಂತರವಾಗಿ ಮಾಡುವವರಿಗೆ ಅದು ಸಿಂಪಲ್ಲಾಗಿ EK-513 ಅಥವಾ EK-516. ದುಬೈಯಿಂದ ದೆಹಲಿಗೆ ಬರುವ ಎಮಿರೇಟ್ಸ್ ವಿಮಾನದ ಕೋಡಿಂಗ್ ನಾಮಧೇಯವಿದು. ಕುತೂಹಲಕ್ಕಾದರೂ ಒಮ್ಮೆ ಇಥಿಯೋಪಿಯಾ ಮಾರ್ಗವಾಗಿ ಪ್ರಯಾಣಿಸಬೇಕು ಎಂದು ಯೋಜನೆ ಹಾಕಿದ್ದ ನನಗೆ ಇಲ್ಲಿಯವರೆಗೂ ಅಂಥದ್ದೊಂದು ಅವಕಾಶವು ಬರದೇ ಇದ್ದಿದ್ದು ಅಷ್ಟೇ ಸತ್ಯ. ಕಳೆದ ಬಾರಿ ನನ್ನ ಸಹೋದ್ಯೋಗಿಯೊಬ್ಬರು ಅಂಗೋಲಾದಿಂದ ಕೀನ್ಯಾ ಮಾರ್ಗವಾಗಿ ಭಾರತಕ್ಕೆ ಪ್ರಯಾಣಿಸಿ ಒಳ್ಳೆಯ ಸಸ್ಯಾಹಾರಿ ಭೋಜನವು ಸಿಕ್ಕಿಲ್ಲವೆಂದು ಪರಿತಪಿಸಿಕೊಂಡಿದ್ದರು. ಅದೇನೇ ಇರಲಿ. ಎಮಿರೇಟ್ಸ್ ವಿಶ್ವದ ಅತ್ಯುತ್ತಮ ಏರ್ ಲೈನ್ಸ್ ಗಳಲ್ಲಿ ಒಂದಾಗಿರುವುದರಿಂದ ಎಮಿರೇಟ್ಸ್ ನ ಆತಿಥ್ಯವನ್ನು ಸವಿಯುವ ಅನುಭವವೇ ವಿಶಿಷ್ಟ.

ಕ್ರಿಸ್ಮಸ್ ಹಬ್ಬದ ಋತುವಿನಲ್ಲಂತೂ ಎಮಿರೇಟ್ಸ್ ನಲ್ಲಿ ಪ್ರಯಾಣಿಸುವ ಮುದ್ದು ಮಕ್ಕಳಿಗೆ ಸರ್ಪ್ರೈಸ್ ಉಡುಗೊರೆಗಳು ಸಿಗುವುದೂ ಉಂಟು. ಎಮಿರೇಟ್ಸ್ ವಿಮಾನಗಳ ಚಿತ್ರವನ್ನು ಹೊಂದಿರುವ ಪುಟ್ಟ ಪೊಟ್ಟಣವೊಂದರಲ್ಲಿ ಆಟಿಕೆಯೋ, ಇನ್ನೇನೋ ಗಗನಸಖಿಯರಿಂದ ಈ ಚಿಣ್ಣರಿಗೆ ಕೊಡಲ್ಪಟ್ಟಾಗ ಈ ಮಕ್ಕಳ ಮೊಗದಲ್ಲಿ ಚಿಮ್ಮುವ ನಗೆಬುಗ್ಗೆಯು ನೋಡುವಂಥದ್ದು. ಪ್ರಯಾಣದ ನಡುವೆಯೂ ಟಿವಿ, ಕಾರ್ಟೂನು, ಆಟ ಎಂದೆಲ್ಲಾ ಲವಲವಿಕೆಯಿಂದ ಪುಟುಪುಟನೆ ಓಡಾಡುತ್ತಿರುವ ಮಕ್ಕಳಿಗೆ ಈ ಉಡುಗೊರೆಯೆಂಬುದು ಖುಷಿಯ ಬೋನಸ್. ಕಳೆದ ಬಾರಿ ನನ್ನ ಪಕ್ಕದಲ್ಲೇ ಕುಳಿತಿದ್ದ ಹನ್ನೆರಡರ ಅಮೆರಿಕನ್ ಪೋರನೊಬ್ಬ ನನ್ನೊಂದಿಗೆ ಸ್ಪರ್ಧೆಯಲ್ಲಿರುವವನಂತೆ ತನ್ನ ಟ್ಯಾಬ್ ನಲ್ಲಿ ಬೆನ್ನುಬೆನ್ನಿಗೆ ‘Love Actually’, ‘Serendipity’ ಮತ್ತು ‘The Holiday’ ಸಿನೆಮಾಗಳನ್ನು ನೋಡುತ್ತಿದ್ದ. ಇವನಿಗೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳೆಂದರೆ ಬಲು ಇಷ್ಟವಂತೆ. ‘Love Actually’, ‘Serendipity’ ಮತ್ತು ‘The Holiday’ಗಳು ಕ್ರಿಸ್ಮಸ್ ಹಬ್ಬವನ್ನೇ ಥೀಮ್ ಆಗಿಟ್ಟುಕೊಂಡು ಬಂದ ಪ್ರೇಮಕಥೆಗಳು ಎಂಬುದು ವಿಶೇಷ.

*

ಮೂರನೇ ಅಂಕ: ತಾಯ್ನಾಡು

ಕ್ರಿಸ್ಮಸ್ ಮತ್ತು ಹೊಸವರ್ಷವು ನನ್ನ ಮಟ್ಟಿಗೆ ಅರ್ಥಪೂರ್ಣ ನವೋಲ್ಲಾಸವನ್ನು ತರುವುದು ಈ ಮೂರನೇ ಅಂಕದಲ್ಲೇ. ಏಕೆಂದರೆ ನಾನು ಮಹಾನಗರಗಳ ತೆಕ್ಕೆಯಿಂದ ಬಿಡಿಸಿಕೊಂಡು ಮತ್ತೆ ಊರ ಪರಿಸರದಲ್ಲಿ ಕಳೆದುಹೋಗಿರುತ್ತೇನೆ. ಎಲ್ಲದಕ್ಕಿಂತಲೂ ಮೇಲಾಗಿ ನಮ್ಮೂರಿನ ಕ್ರಿಸ್ಮಸ್ ಆಚರಣೆಯ ವಿಧಾನವೇ ಸ್ವಾರಸ್ಯಕರವಾಗಿರುವಂಥದ್ದು. ‘ಪದ್ಮನೂರು’ ಎಂಬ ಹೆಸರಿನಲ್ಲಿ ಕರೆಯಲಾಗುವ ಈ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಜೊತೆಯಾಗಿ ಹಬ್ಬವನ್ನು ಆಚರಿಸುತ್ತಾರೆ. ಮೂರೂ ಧರ್ಮಗಳ ಧಾರ್ಮಿಕರ ನಾಯಕರುಗಳು ಅಂದು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕುಳಿತುಕೊಂಡು ಸರ್ವಧರ್ಮ ಸಾಮರಸ್ಯದ, ಸಹಬಾಳ್ವೆಯ ಸಂದೇಶವನ್ನು ನೀಡುತ್ತಾರೆ. ಊರ ಸಾಧಕರಿಗೆ ಸನ್ಮಾನ, ಸಮಾಜಸೇವೆ ಇತ್ಯಾದಿಗಳಿಗೂ ಕೂಡ ಡಿಸೆಂಬರ್ 25 ರ ಈ ವೇದಿಕೆಯು ಪ್ರತೀವರ್ಷವೂ ಸಾಕ್ಷಿಯಾಗುತ್ತದೆ. ಸಭಾಕಾರ್ಯಕ್ರಮದ ನಂತರವಂತೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಊರ ಮಕ್ಕಳು ಹಬ್ಬದ ಖುಷಿಗೆ ಮತ್ತಷ್ಟು ರಂಗೇರಿಸುತ್ತಾರೆ.

ಹೀಗೆ ವಿಶಿಷ್ಟವಾಗಿ ನಡೆಯುವ ಈ ಕ್ರಿಸ್ಮಸ್ ಆಚರಣೆಯು ಇಲ್ಲಿಯ ಸಂಸ್ಕೃತಿಯೇ ಆಗಿಬಿಟ್ಟಿದೆ ಎಂದು ಅನ್ನಿಸಿದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಏಕೆಂದರೆ ಇದು ಹಲವಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬರುತ್ತಿರುವಂಥದ್ದು. ಕಾಟಾಚಾರಕ್ಕೆಂದೋ, ಡಂಬಾಚಾರಕ್ಕೆಂದೋ, ಯಾವುದೋ ಗಿಮಿಕ್ ಎಂಬಂತೆಯೋ ಮಾಡದೆ ಪರಿಶುದ್ಧ ಮನಸ್ಸಿನಿಂದ ಊರಹಬ್ಬವೆಂಬಷ್ಟು ಪ್ರೀತಿ ಮತ್ತು ಕಾಳಜಿಯಿಂದ ಆಚರಿಸಲ್ಪಡುವಂಥದ್ದು. ಹೀಗಾಗಿಯೇ ಈ ಸಂಜೆಯ ಆತಿಥ್ಯವು ನಮ್ಮದೇ ಕುಟುಂಬದ ಆಚರಣೆ ಎಂಬಷ್ಟು ಆತ್ಮೀಯವಾಗುತ್ತದೆ. ಅದೇನು ಇತಿಮಿತಿಗಳಿದ್ದರೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತದೆ ಮತ್ತು ಒಟ್ಟಾರೆಯಾಗಿ ಕ್ರಿಸ್ಮಸ್ ಹಬ್ಬದ ನೆಪದಲ್ಲಾದರೂ ಮುಗಿದುಹೋಗುತ್ತಿರುವ ವರ್ಷಕ್ಕೊಂದು ಸಾರ್ಥಕ ಅಂತ್ಯವನ್ನು ನೀಡುತ್ತಿರುವ ಮನೋಜ್ಞ ಪ್ರಯತ್ನ ಎಂಬಷ್ಟರ ಮಟ್ಟಿಗೆ ಮನದಲ್ಲಿ ಇಳಿದುಹೋಗುತ್ತದೆ, ಉಳಿದುಹೋಗುತ್ತದೆ.

*

ಉಪಸಂಹಾರ:

ಕ್ರಿಸ್ಮಸ್ ಹಬ್ಬದ ಬಗ್ಗೆ ನಾನು ಇತ್ತೀಚೆಗೆ ಓದಿದ್ದ ತಮಾಷೆಯ ಕಥೆಯೊಂದು ಇಲ್ಲಿದೆ. ನೀವೂ ಓದಿ ನೋಡಿ:

ಇಳಿವಯಸ್ಸಿನಿಂದ ಹೈರಾಣಾಗಿದ್ದ ನನ್ನ ತಾತ ಹಬ್ಬದ ಶಾಪಿಂಗ್ ಮಾಡುವ ಗೋಜಿಗೇ ಹೋಗಬಾರದೆಂದು ಕಳೆದ ವರ್ಷ ಹೊಸ ವಿಧಾನವೊಂದನ್ನು ಪ್ರಯತ್ನಿಸಲು ನಿರ್ಧರಿಸಿದ್ದ. ಈ ಪ್ರಕಾರ ಉಡುಗೊರೆಗಳನ್ನು ಖರೀದಿಸುವ ಬದಲು ಬ್ಯಾಂಕ್ ಚೆಕ್ ಗಳನ್ನು ತನ್ನ ಸ್ನೇಹಿತರಿಗೆ, ಹಿತೈಷಿಗಳಿಗೆ ಕಳಿಸುವುದೆಂದು ತಾತ ಲೆಕ್ಕಹಾಕಿದ್ದ. ಉಡುಗೊರೆ ಕೊಟ್ಟಿಲ್ಲದಿದ್ದರೇನಂತೆ, ನೀಡಿರುವ ಚೆಕ್ ನ ಮೊತ್ತದಲ್ಲಿ ತನ್ನ ಆತ್ಮೀಯರು ತಮಗೆ ಬೇಕಾದ ಉಡುಗೊರೆಯನ್ನು ತಾವೇ ಖರೀದಿಸಲಿ ಎಂಬ ಲೆಕ್ಕಾಚಾರ ಅವರದ್ದು. ಈ ಪ್ರಕಾರವೇ ಕಾರ್ಡುಗಳನ್ನು ತರಿಸಿ, ಅವುಗಳ ಮೇಲೆ ‘ನಿಮಗೆ ಬೇಕಿರುವ ಉಡುಗೊರೆಗಳನ್ನು ನೀವೇ ಖರೀದಿಸಿ’ ಎಂಬ ಸಾಲನ್ನು ಬರೆದು ಬಹುಬೇಗನೇ ಅವುಗಳನ್ನು ಕಳಿಸಿದ್ದೂ ಆಯಿತು.

ಅಂತೂ ಮುಂದೆ ಹಬ್ಬದ ದಿನ ಎಲ್ಲರೊಂದಿಗೆ ನಮ್ಮ ತಾತ ಖುಷಿಯಿಂದ ಆಚರಿಸಿಕೊಂಡಿದ್ದಾಯಿತು. ಆದರೆ ಈ ಬಾರಿ ತನಗೆ ಉತ್ತರವಾಗಿ ಬಂದ ಶುಭಾಶಯ ಪತ್ರಗಳು ಕೆಲವೇ ಕೆಲವು ಎಂದು ತಾತನಿಗೆ ತಿಳಿದದ್ದು ಎರಡು ದಿನಗಳ ನಂತರವೇ. ಏನಾಯ್ತಪ್ಪಾ ಎಂದು ತಲೆಕೆರೆದುಕೊಂಡ ತಾತ ತನ್ನ ಹಿತೈಷಿಗಳಿಗೆ ಈ ಬಗ್ಗೆ ಪತ್ರ ಬರೆದು ಕೇಳಲು ತನ್ನ ಸ್ಟಡಿ ರೂಮಿನತ್ತ ಧಾವಿಸಿದ. ತನ್ನ ಸ್ಟಡಿ ರೂಮಿನ ಮೇಜಿನ ಮೇಲೆ ಬಿದ್ದುಕೊಂಡಿದ್ದ ತರಹೇವಾರಿ ವಸ್ತುಗಳನ್ನು ಬದಿಗಿಟ್ಟು ಸಾವರಿಸಿಕೊಂಡಾಗಲೇ ಅಷ್ಟಕ್ಕೂ ಆಗಿದ್ದೇನು ಎಂಬ ಸತ್ಯವು ತಾತನಿಗೆ ತಿಳಿದಿದ್ದು.

ಚದುರಿಕೊಂಡಿದ್ದ ಕಾಗದಗಳ ರಾಶಿಯಡಿಯಲ್ಲಿ ತಾನು ಎಲ್ಲರಿಗೂ ಕಳಿಸಬೇಕೆಂದು ತರಿಸಿಕೊಂಡಿದ್ದ ಬ್ಯಾಂಕ್ ಚೆಕ್ ಗಳು ಹಾಗೇ ತೆಪ್ಪಗೆ ಮಲಗಿದ್ದವು. ತಾತ ಎಲ್ಲರಿಗೂ ಕ್ರಿಸ್ಮಸ್ ಕಾರ್ಡುಗಳನ್ನೇನೋ ಕಳಿಸಿದ್ದ. ಆದರೆ ಈ ಗಡಿಬಿಡಿಯಲ್ಲಿ ಅಂಚೆ ಕವರ್ ನಲ್ಲಿ ಶುಭಾಶಯ ಕೋರುವ ಕಾರ್ಡುಗಳೊಂದಿಗೆ ಚೆಕ್ ಗಳನ್ನಿಡುವುದು ಆತನಿಗೆ ಮರೆತೇಹೋಗಿತ್ತು!

—-

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...