Share

ಹಾಡಿಗೊಂದು ಹೊಸ ಕಿರುನಗೆ ಚೆಲ್ಲುವಂತೆ
ಅರ್ಚನಾ ಎ ಪಿ

 

 

ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಕೂತಿದ್ರೂ ಕೆಲವು ಸಂಬಂಧಗಳು ಬಹಳ ದೂರ ಹೊರಟು ನಿಂತಿರುತ್ತವೆ… ಹೆಸರೇ ಇರದ, ಹೆಸರು ಬೇಡದ ಕೆಲವು ಮೈತ್ರಿ ಇಲ್ಲೇ ಎಲ್ಲೋ ಸುಳಿದಾಡಿದಂತೆ ಅನ್ನಿಸ್ತಾ ಇರತ್ತೆ…

 

 

 

ಮೇರಾ ವಕ್ತ್ ಜೈಸೆ ಠಹರ್ ಹೀ ಗಯಾ ಹೈ…

ದೀಪಗಳು ಆರಿ ಹೋಗುವುವು, ಹೊಗೆಯೇಳುವುದು
ಉಳಿದ ಬತ್ತಿಗಳಿಂದ ನೆನಪಿನಂತೆ

ಹೇಳಿಬಿಡುವ ತವಕದಲ್ಲಿ, ಏನೂ ಹೇಳದಿರುವಂಥದಕ್ಕೂ ಅಭಿವ್ಯಕ್ತಿ ಸಿಕ್ಕೇ ಬಿಡತ್ತೆ. ಕೆಲವೊಂದನ್ನು ಹಾಗೇ ಹೇಳದೆ ಬಿಟ್ಟರೆ, ಆಗ ಅದಕ್ಕೆ ತುಂಬು ಹೊಳೆಯ ಹೊಸ ನೀರಿನಲ್ಲಿ ಮಿಂದ ಅನುಭವವನ್ನು ಪಡೆಯೋ ತನ್ಮಯತೆ ಬರತ್ತೆ. ಹೇಗೆಂದರೆ, ಸ್ವಚ್ಛ ಸುಂದರ ಸಮುದ್ರ ತಡಿಯಲ್ಲಿ ಸುಮ್ಮನೆ ಕೂತೋ ಇಲ್ಲಾ ಮರಳಿಗೆ ಬೆನ್ನು ಹಚ್ಚಿ, ಆಕಾಶದ ನೀಲಿಯೇ ಸಮುದ್ರದ ನೀರಿನ ಬಣ್ಣವಾಗಿದೆಯಾ ಅಥವಾ ಸಮುದ್ರದ ಬಣ್ಣವೇ ಆಕಾಶದಲ್ಲಿ ಪ್ರತಿಬಿಂಬಿಸ್ತಿದೆಯಾ ಅಂತ ಕಲ್ಪನಾ ಲೋಕದಲ್ಲಿ ತೇಲಿಹೋಗುವಾಗ, ಅಲೆಗಳು ಬಂದು ನಾವೂ ಇದ್ದೇವೆ ನಿನ್ ಜೊತೆ, ನಮಗೂ ದಿನಾ ಬಡಿದೂ ಬಡಿದೂ ಸಾಕಾಗಿದೆ, ನಮ್ಮ ಮೌನಕ್ಕೂ ನಿನ್ನ ಸದ್ಯದ ಸ್ಥಿತಿಗೂ ಸರೀ ಹೊಂದಾಣಿಕೆಯಾಗತ್ತೆ ಅಂತ ಹತ್ತಾರು ಬಗೆಯ ಭಾವಗಳ, ಎದೆಯಲ್ಲಿ ಸುಳಿವ ಅಭಿಲಾಷೆಗಳಿಗೆ ಸ್ಪಂದಿಸುವುದನ್ನು ಕಣ್ಮುಚ್ಚಿ ಅನುಭವಿಸುವುದು.

ಇದೂ ಬೇಡಾಂದ್ರೆ,
ಎಲ್ಲೋ ದೂರಕ್ಕೆ ಹೋಗಿ ಅಸ್ತವಾಗುತ್ತಿರುವ ಅರ್ಕನನ್ನೊಮ್ಮೆ… ಅಲ್ಲಾ ಬೆಳಕು ನೀಡ್ತಿರೋದೆನೋ ಸರಿ ಮಾರಾಯಾ, ಆದರೆ ಅಷ್ಟು ಕೆಂಡ ಕಾರ್ತೀಯಲ್ಲ, ನಿನಗೇನೂ ಆಗೋದೇ ಇಲ್ವಾ ಅಂತೀನಿ, ಬರಿ ರಾತ್ರಿಯ ಬಿಡುವು ಸಾಕಾ ತಂಪಾಗೋಕೆ, ಒಂದಿನ ಜ್ವರ, ಶೀತ ಅಂತ ರಜೆನಾದ್ರೂ ತೊಗೋಬಾರದಾ ಅಂತ ಕೇಳಿ ಬರೋಣ ಅಂದರೆ… ಅವನೋ… ನನ್ ಕೈಗೇ ಸಿಗದ ಹಾಗೆ ಜ್ಯೋತಿರ್ವರ್ಷಗಳಷ್ಟು ದೂರ ಇದ್ದಾನೆ…

ಆದರೆ ಒಂದಂತೂ ನಿಜ. ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಕೂತಿದ್ರೂ ಕೆಲವು ಸಂಬಂಧಗಳು ಬಹಳ ದೂರ ಹೊರಟು ನಿಂತಿರುತ್ತವೆ… ಹೆಸರೇ ಇರದ, ಹೆಸರು ಬೇಡದ ಕೆಲವು ಮೈತ್ರಿ ಇಲ್ಲೇ ಎಲ್ಲೋ ಸುಳಿದಾಡಿದಂತೆ ಅನ್ನಿಸ್ತಾ ಇರತ್ತೆ…

ಹೀಗೇ… ಸಮುದ್ರಕ್ಕೋ.. ದೂರಕ್ಕೋ…ಹೋಗಕ್ಕೆ ಆಗಲಿಲ್ಲ ಅಂದರೆ ಏನ್ ಮಾಡೋದು? ಬೆಂಗಳೂರಂಥಾ ಊರಲ್ಲಿ ಕೂರೋಕೊಂದು ಜಾಗವೂ ಸಿಗದ ಹಾಗಾಗಿದೆ… ಈ ರೋಮಿಯೋ ಜೂಲಿಯೆಟ್‌, ಲೈಲಾ ಮಜ್ನೂಗಳಂಥ ‘ಅಮರ ಪ್ರೇಮಿ’ಗಳ ಕಾಟ ತಪ್ಪಿಸಲು ಸರಿಯಾಗಿ ೧೧ರಿಂದ ಸಂಜೆ ೪ರವರೆಗೆ ಉದ್ಯಾನವನಗಳೂ ನಮ್ಮನ್ನು ಒಳಗೆ ಸೇರಿಸಿಕೊಳ್ಳುವುದಿಲ್ಲ… ಅಂಥಾದ್ದರಲ್ಲಿ ಮೌನಕ್ಕೊಂದು ಜಾಗ ಹುಡುಕಿ ಹೊರಡುವುದೆಲ್ಲಿಗೆ? ಅಲ್ವಾ?

ನಿಜ. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರತ್ತೆ… ಅದನ್ನು ಇಲ್ಲಿನ ಸಂದರ್ಭಕ್ಕೆ ಅಳವಡಿಸಿ ಕೊಳ್ಳುವುದಾದ್ರೆ, ಜಾಗ ಯಾವುದಾದರೂ ಏನು, ಮನಸ್ಸು ಮುಖ್ಯ ಅಷ್ಟೇ ಅಂದುಕೊಳ್ಳಬಹುದು.

ಹಾಂ…
ವಿಷಯ ಇರೋದೇ ಇಲ್ಲಿ…
‘ಮನಸ್ಸು’ ಅನ್ನೋ ಪದ ಇದೆಯಲ್ಲಾ… ಅದರ ಆಳ ಅಗಲ ಅಳೆಯಲು ಹೋಗಿ ಬಾಳಿನ ‘ಗಣಿತ’ ತಪ್ಪಿದವರು; ಕೊಯ್ದು, ಶಸ್ತ್ರಚಿಕಿತ್ಸೆ ಮಾಡಲು ಪ್ರಯತ್ನಿಸಿ, ಜೀವದ ಚೈತನ್ಯಕ್ಕೆ ‘ವಿಜ್ಞಾನ’ದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿಕೊಂಡವರು; ಅರ್ಥ ಮಾಡಿಕೊಳ್ಳಲು ಹಂಬಲಿಸಿ ‘ಆರ್ಥಿಕ’ ಸಂಕಷ್ಟಕ್ಕೆ ಒಳಗಾದವರನ್ನು ಕಂಡಾಗಲಂತೂ… ಅಬ್ಬಾ… ಮನಸಿನ ಜೀವಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಗಣಿತ, ರಸಾಯನಶಾಸ್ತ್ರದ ಗೋಜಿಗೆ ಹೋಗಲು ದಿಗಿಲಾಗತ್ತೆ…

ಈ ಸಂದರ್ಭದಲ್ಲಿ ಕನ್ನಡದ ‘ಮನಸಾರೆ’ ಚಿತ್ರದ ಸನ್ನಿವೇಶವೊಂದು ನೆನಪಾಗ್ತಿದೆ… ಮಾನಸಿಕ ಅಸ್ವಸ್ಥರ ಕುರಿತಾದದ್ದು… ಒಳಗಿರುವವರು ಮನಸ್ಸನ್ನು ನಿಯಂತ್ರಿಸಲು ಹೋದವರು, ಹೊರಗಿರುವವರು ಮನಸ್ಸನ್ನು ‘ಹಿಡಿತ’ದಲ್ಲಿಟ್ಟವರು… ಇರೋದು ಕೂದಲೆಳೆಯಷ್ಟೇ ವ್ಯತ್ಯಾಸ ಅಂತೇನೇನೋ ಹೇಳತ್ತೆ. ನಂತರ ನಾಯಕ ಆಸ್ಪತ್ರೆಯಿಂದ ಹೊರಗೋಗುವಾಗ ಅಲ್ಲಿಂದ ತಪ್ಪಿಸಿಕೊಂಡು ಹೋದವನೊಬ್ಬ ಮತ್ತೆ ಆಸ್ಪತ್ರೆ ಒಳಬರ್ತಾ… ಅಲ್ಲೇನೂ ಇಲ್ಲ… ಅಲ್ಲೇನೂ ಇಲ್ಲ… ಅಂತ ಹೇಳೋದಿದೆಯಲ್ಲಾ… ನಿಜಕ್ಕೂ so called ‘ನಾಗರಿಕ ಸಮಾಜ’ಕ್ಕೆ ಹಿಡಿಯೋ ಕನ್ನಡಿಯೇ ಇರಬೇಕು.

ಹೀಗಿರುವಾಗ…
ಮನಸ್ಸನ್ನು ಅರಿಯುವುದಾದರೂ ಹೇಗೆ ಅಂತ ಪಟ್ಟು ಹಿಡಿದು ಕೂತರೆ… ಆಹಾ… ಹುಚ್ಚು ಹುಡುಗಿ… ಅಷ್ಟು ಸುಲಭಕ್ಕೆ ಅರ್ಥವಾಗೋದಾಗಿದ್ರೆ ಹಿಂಗ್ಯಾಕಿರ್ತಿತ್ತು ಪರಿಸ್ಥಿತಿ ಅಂತ ಗೇಲಿ ಮಾಡೋದೇ?

ನಿಜ.
ಈ ಮನಸ್ಸೊಂಥರಾ ನಮ್ಮ ಬೆಂಗಳೂರಿದ್ದಂತೆ… ಇಲ್ಲಿ ಮೂರೂ ಕಾಲಗಳನ್ನೂ ಒಂದೇ ದಿನದಲ್ಲಿ ಅನುಭವಿಸಿಬಿಡ್ತೀವಿ… ಬೆಳಿಗ್ಗೆ ಚಳಿಗಾಲ. ಭಾವನೆಗಳನ್ನು ಬೆಚ್ಚಗಿರಿಸೋ ಪ್ರಯತ್ನ. ಮಧ್ಯಾಹ್ನ ಬೇಸಿಗೆ. ಸಂಜೆಯಷ್ಟರಲ್ಲಿ ಮಳೆಗಾಲ. ಅದೇ ಭಾವನೆಗಳ ಹರಿವಿಗೆ. ಪಕ್ಕದ ತಮಿಳುನಾಡಿಗೋ ಕೇರಳಕ್ಕೋ, ಆಂಧ್ರಕ್ಕೋ ವಾಯುಭಾರ ಕುಸಿತ ಉಂಟಾದರೆ ನಮ್ಮಲ್ಲಿ ಮೋಡ ಕವಿದ ವಾತಾವರಣ.

ಇಂತಹದೇ ಮೋಡ ಕವಿದಿದೆ… ಈಗಲೂ…
ಕೆಲವು ಬಾರಿ… ಅಲ್ಲ… ಹಲವು ಸಲ… ಅನಿಸಿದ್ದಿದೆ… ಮನಸ್ಸು ಮನಸ್ಸು ಸೇರಲು… ಹಣ, ಅಂತಸ್ತು, ಅಧಿಕಾರ ಯಾವುದೂ ಬೇಕಿಲ್ಲ ಅಂತ. ಹೌದು ಹೀಗೆ ಯಾವುದರ ಪರಿವೆಯೂ ಇಲ್ಲದೇ ಒಂದಾದ ಮನಸುಗಳು ಬಂಧಿಯಾಗೋದು ಪವಿತ್ರವಾದ ‘ಮದುವೆ’ ಎಂಬ ಬಂಧನದಲ್ಲಿ (ಆದರೆ ಅದನ್ನು ಬಂಧನ ಅಂತ ಯಾಕಂತಾರೋ).

ಹೀಗಿರೋವಾಗ…
ಅಲ್ಲಿಯವರೆಗೂ ಇರದ, ಸ್ನೇಹದ ತುಡಿತವೊಂದು ಶುರುವಾಗತ್ತೆ. ಹೇಗಿದ್ರೂ ಸಂಗಾತಿಯ ಬಾಂಧವ್ಯ ಇದ್ದೇ ಇದೆ. ಆ ‘ಜವಾಬ್ದಾರಿ’ ನಿರ್ವಹಿಸೋದು ಗೊತ್ತು.

ಆದರೆ…
ಆದರೆ…
ಅಲ್ಲಿ ಬಹುಶಃ ಸಿಗಲಾರದ (ಅಂತ ಅಂದುಕೊಂಡು) ಸ್ನೇಹವನ್ನು ಮತ್ಯಾರಲ್ಲೋ ಹುಡುಕುವ ತವಕ ಯಾಕೆ? ಒಟ್ಟಾರೆ ಎರಡು ದೋಣಿಯ ಪಯಣ… ಈ ಕಡೆಯದನ್ನು ಬಿಡುವಂತಿಲ್ಲ… ಅಲ್ಲಿದನ್ನು ಸೇರಿಸುವಂತಿಲ್ಲ… ಹಾಗಾದರೆ ಮನಸಿನ ಈ ಸ್ಥಿತಿಗೆ ಯಾವ ಹೆಸರಿಡುವುದು? ಗೊತ್ತಿಲ್ಲ…

ಈಚಲ ಮರದ ಕೆಳಗೆ ಕೂತು ನೀರು ಕುಡಿದರೂ ‘ಅದೇನೋ’ ಕುಡಿದ ಅಂತ ನಂಬುವಂಥ ‘ಸಭ್ಯ’ ಮನಸುಳ್ಳವರ ಮಧ್ಯ ಬದುಕುತ್ತಿರುವಾಗ, ಹೀಗೊಂದು ಹುಡುಕಾಟದಲ್ಲಿರುವವರಿಗೆ ಸಿಕ್ಕ ಆ ಸ್ನೇಹಿತ/ಸ್ನೇಹಿತೆಯಿಂದ ಬಯಸುವುದಾದರೂ ಏನನ್ನು?

ಸರಿ ಒಪ್ಪೋಣ… ಪರಿಶುದ್ಧ ಸ್ನೇಹವೇ ಇರಬಹುದು…
ಆದರೆ ಎಷ್ಟು ದಿನ?
ಅಷ್ಟೊಂದು ನಿಷ್ಕಲ್ಮಶವಾಗಿದ್ದರೆ ಎಲ್ಲಾ ಸ್ನೇಹಿತರನ್ನು ಮನೆಯವರಿಗೆ ಹೆಮ್ಮೆಯಿಂದ ಪರಿಚಯಿಸುವಂತೆ ಈ ಸ್ನೇಹಕ್ಕೂ ಒಂದು ಹೆಸರು ಕೊಡಬಹುದಾ?
ಇದಕ್ಕೂ ಉತ್ತರವಿಲ್ಲ…

ಇಷ್ಟೆಲ್ಲಾ ಉತ್ತರವಿಲ್ಲದ ಪ್ರಶ್ನೆಗಳನ್ನು ‘ಮದುವೆ’ ಅನ್ನೋ ಮೂರಕ್ಷರದ ಬಂಧ ಹುಟ್ಟುಹಾಕುತ್ತದೆಯಾದರೆ ಅದರಲ್ಲಿ ‘ಬಂಧಿ’ಯಾಗಲೇಬೇಕು ಅನ್ನೋ ನಿಯಮವೇಕೆ?
ಇಲ್ಲ… ಸಮಾಜ ಒಪ್ಪಲ್ಲ… ಹೆಣ್ಣಿಗೊಂದು ಗಂಡು ದಿಕ್ಕು ಇರಲೇಬೇಕಂತೆ…
ಎಂಥದಿದು ಸಮಾಜ!
ನಾವು ನೀವು ನಮ್ಮಂಥವರೇ ಸೇರಿ ಆದದ್ದೇ ಸಮಾಜವಲ್ವಾ?

ಹೀಗೊಂದು ಎರಡು ಮುಖಗಳ (ತಿಳಿವಿಗೆ ಬರೋದಿಷ್ಟೆ… ಇನ್ನಷ್ಟೂ ಇರಬಹುದು) ಜೀವನ ನಡೆಸುವ ಅನಿವಾರ್ಯತೆಗೆ ಸಿಲುಕಿಸೋದ್ಯಾಕೆ ಈ ಸಮಾಜ? ಹಾಗಿದ್ರೆ ಮದುವೆ ಅಂದರೆ ಹೀಗೆಯೇ ಇರುತ್ತದೆಯೇ? ನಿಜವಾಗಿಯೂ ಪರಸ್ಪರರಲ್ಲಿ ಗಂಡ ಹೆಂಡತಿ ಅನ್ನುವುದಕ್ಕಿಂತ ಗೆಳೆಯ ಗೆಳತಿ ಭಾವ ಇರುವುದಿಲ್ಲವೇ ಅಂತ ಧಿಗ್ಗನೆದ್ದು ಬಂದ ಪ್ರಶ್ನೆಗಳಿಗೆ ಸದ್ಯ ಉತ್ತರ (ಸಮಾಧಾನವಾಗಿಲ್ಲ; ಕಾರಣ ಈ ಥರದ ಸನ್ನಿವೇಶ ನೂರಕ್ಕೆ ತೊಂಭತ್ತು ಇರುವುದಿಲ್ಲವಂತೆ) ಸಿಕ್ಕಿದೆ. ಹಿರಿಯ ಸಹೋದ್ಯೋಗಿಯೊಬ್ಬರು ನನ್ನೆಲ್ಲಾ ಅನುಮಾನಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ, ವಿವಾಹ ವ್ಯವಸ್ಥೆ ಇಂದೂ ತನ್ನ ಮಹತ್ವ ಪಡೆದಿದೆ, ನಾವದನ್ನು ಹೇಗೆ ನಡೆಸುತ್ತೇವೋ ಎಂಬುದನ್ನು ಆಧರಿಸಿದೆ ಅಂತ ತಮ್ಮದೇ ಸುಂದರ ಬದುಕಿನ ಸರಳ ತಿಳಿವಳಿಕೆ ಹೇಳಿದಾಗ, ಮನಸ್ಸಿನಾಳದಲ್ಲೆಲ್ಲೋ ಬದುಕಿದೆಯಾ ಬಡ ಜೀವವೇ ಅಂದನಿಸಿದ್ದು ನಿಜ…

ತುಟಿಯಿಂದ ಬರುವ ಮಾತುಗಳು…
ನಮ್ಮನ್ನು ‘ನೋಡಿಕೊಳ್ಳುತ್ತಿರುವ’ ಶಕ್ತಿ, ಆಗುವುದನ್ನು ಆಗಿಸುತ್ತಾ, ಹೋಗುವುದನ್ನು ಹೋಗಲು ಬಿಡುತ್ತಾ…

ಎಂದೋ ಕೇಳಿದ ಹಾಡಿಗೊಂದು ಹೊಸ ಕಿರುನಗೆ ಚೆಲ್ಲುವಂತೆ
ಮಾಡೋ ನಕ್ಷತ್ರ ದೀಪವೇ
ಮನಸಿನ ಮರದಲ್ಲಿ ‘ಹೂ’ ಬಿಡುವುದೆಂದಿಗೆ?
ಕಾದಿದ್ದೇನೆ…

ಇತ್ತೀಸಿ ಹಂಸಿ… ಇತ್ತೀಸಿ ಖುಷಿ…
ಬನಾಲೇ ಆಶಿಯಾಂ… ಅಂತ…

ಬರುವೆಯಾ???

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...