Share

ನಿತ್ಯವೂ ನೂರಾರು ಬಲಿ ಕೇಳುವ ಅತ್ಯಾಚಾರ!
ಸಂಪಾದಕ

ಗತಾನೆ ನಡೆಯಲು ಕಲಿತಿದ್ದ 21 ತಿಂಗಳ ಬಾಲೆ ನೆರೆಹೊರೆಯಲ್ಲೇ ಇದ್ದ ಕಾಮುಕನ ತುತ್ತಾಗಿಬಿಡುತ್ತಾಳೆ (ದಿಲ್ಲಿ).

ಬಯಲಿಗೆ ಶೌಚಕ್ಕೆಂದು ಹೋದವಳ ಮೇಲೆ ಒಬ್ಬಿಬ್ಬರಲ್ಲ, ಎಂಟು ಜನರಿಂದ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ (ಬಿಹಾರ್).

ಐದು ವರ್ಷದ ಕಂದಮ್ಮನನ್ನು ಅತ್ಯಾಚಾರ ಮಾಡಿ, ಗುಪ್ತಾಂಗವನ್ನು ಕೋಲಿನಿಂದ ಇರಿದು ಸಾಯಿಸಿ ಸಂಭ್ರಮಿಸುತ್ತಾರೆ ನೀಚರು (ಹರ್ಯಾಣ).

ಮದುವೆಯಾಗಲು ಒಪ್ಪದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲ್ಲಲಾಗುತ್ತದೆ (ರೋಹ್ಟಕ್, ಹರ್ಯಾಣ).

ಸಲಿಂಗಕಾಮಿ 16ರ ಯುವತಿಯನ್ನು ಆತನ ಅಪ್ಪನೇ ಅತ್ಯಾಚಾರ ಮಾಡಿ, ಗಂಡಸರೊಂದಿಗೆ ಸೆಕ್ಸ್ ಎಷ್ಟು ಚೆನ್ನಾಗಿರುತ್ತದೆ ಎಂದು ಅವಳಿಗೆ ಗೊತ್ತಾಗಲಿ ಎನ್ನುತ್ತಾನೆ (ದಿಲ್ಲಿ).

ಏಳು ವರ್ಷದ ಬಾಲೆ ಅವಳ ಶಾಲೆಯ ಆವರಣದಲ್ಲೇ ಅತ್ಯಾಚಾರಕ್ಕೊಳಗಾಗಿ ಹೆಣವಾಗುತ್ತಾಳೆ (ಆಗ್ರಾ).

ಓಡುತ್ತಿರುವ ಕಾರಿನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕಾರಿನಿಂದ ಆಕೆಯನ್ನು ಎಸೆಯಲಾಗುತ್ತದೆ (ಗುರ್‍ಗಾಂವ್).

ಯುವತಿಯೊಬ್ಬಳ ಮೇಲೆ ಆಕೆಯ ಪ್ರಿಯಕರ ಅವಳ ಮನೆಯೊಳಗೇ ಅತ್ಯಾಚಾರ ನಡೆಸಿ, ಬಳಿಕ ಬೆಂಕಿ ಹಚ್ಚಿ ಕೊಲ್ಲುತ್ತಾನೆ (ಬಿಹಾರ್).

ಹದಿನೈದು ವರ್ಷದ ಹುಡುಗಿಯ ಮೇಲೆ ಬಸ್ಸಿನಲ್ಲೇ ಆತ್ಯಾಚಾರ ನಡೆಯುತ್ತದೆ (ತಮಿಳ್ನಾಡು).

ಅಪ್ರಾಪ್ತೆಯೊಬ್ಬಳು ದೊಡ್ಡ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗುತ್ತಾಳೆ (ಗುಜರಾತ್).

ಏಳು ವರ್ಷದ ಬಾಲೆಯೊಬ್ಬಳನ್ನು 46 ವರ್ಷದ ಚಿಕ್ಕಪ್ಪನೇ ಅತ್ಯಾಚಾರವೆಸಗಿ ಕೊಂದುಹಾಕುತ್ತಾನೆ (ಕೊಲ್ಲಂ, ಕೇರಳ).

ಇಬ್ಬರು ಮಕ್ಕಳ ತಂದೆ ನೆರೆಮನೆಯ 18 ತಿಂಗಳ ಮಗುವಿನ ಮೇಲೆ ಮಕ್ಕಳ ಎದುರಲ್ಲೆ ಅತ್ಯಾಚಾರ ಮಾಡುತ್ತಾನೆ (ದಿಲ್ಲಿ).

8 ವರ್ಷದ ಬಾಲಕಿಯ ಮೇಲೆ ಅವನೊಬ್ಬ ತನ್ನ ಹದಿನಾರರ ಹರೆಯದ ಮಗಳ ಎದುರಲ್ಲೇ ಕಾಮತೃಷೆ ತೀರಿಸಿಕೊಳ್ಳುತ್ತಾನೆ (ದಿಲ್ಲಿ).

ಅಪ್ಪನ ಎದುರಲ್ಲೇ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರವಾಗುತ್ತದೆ (ಗುಜರಾತ್).

ಸಲಹಬೇಕಾದ ಅಪ್ಪನೇ ತನ್ನ ಮಗಳ ಮೇಲೆ ಮತ್ತೆ ಮತ್ತೆ ಅತ್ಯಾಚಾರವೆಸಗುತ್ತಾನೆ (ವಡೋದರಾ).

ಕಾಲೇಜು ಯುವತಿ ಮೇಲೆ ನಾಲ್ವರಿಂದ ಮೂರು ತಾಸುಗಳತನಕ ಅತ್ಯಾಚಾರ ನಡೆಯುತ್ತದೆ (ಭೋಪಾಲ್).

ಹನ್ನೆರಡರ ಹುಡುಗಿಯ ಮೇಲೆ ಆಕೆಯ ಶಾಲೆಯಲ್ಲೇ ಪ್ರಿನ್ಸಿಪಾಲ್ ಮತ್ತು ಉಳಿದ ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರವಾಗುತ್ತದೆ (ಬಿಹಾರ್).

ಅದೊಂದು ಅನಾಥಾಶ್ರಮದಲ್ಲಿ ಏಳು ವರ್ಷದವಳ ಮೇಲೆ ಎರಡು ತಿಂಗಳಿಗೂ ಹೆಚ್ಚು ಕಾಲ ಅತ್ಯಾಚಾರ ನಡೆಯುತ್ತಿರುತ್ತದೆ (ಕೇರಳ).

ಪ್ರೇಮಿಯ ಜೊತೆ ಓಡಿಹೋದದ್ದಕ್ಕೆ ಶಿಕ್ಷೆಯಾಗಿ ಯುವತಿ ಮೇಲೆ ಆಕೆಯ ಅಪ್ಪ ಮತ್ತು ಅಣ್ಣನೇ ಅತ್ಯಾಚಾರವೆಸಗುತ್ತಾರೆ (ಮೀರತ್).

ಶಾಲೆಯೊಂದರಲ್ಲಿ ಐದು ವರ್ಷದ ಮಗುವಿನ ಮೇಲೆ ಪ್ಯೂನ್ ಅತ್ಯಾಚಾರ ಮಾಡುತ್ತಾನೆ (ದಿಲ್ಲಿ).

ಅಂಗವಿಕಲೆಯೊಬ್ಬಳ ಮೇಲೆ ದೇವಸ್ಥಾನದೊಳಗೆ ಅತ್ಯಾಚಾರ ನಡೆಯುತ್ತದೆ (ಪುರಿ).

ಬುಡಕಟ್ಟು ಹುಡುಗಿಯೊಬ್ಬಳ ಮೇಲೆ ಆಕೆಯ ಗೆಳೆಯನೆದುರೇ ಎಂಟು ಜನ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ (ಜಾರ್ಖಂಡ್).

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಕಾಮುಕರು ತೃಷೆ ತೀರಿಸಿಕೊಳ್ಳುತ್ತಾರೆ (ಬೆಂಗಳೂರು).

ಏಳು ವರ್ಷದ ಹುಡುಗಿಯ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ ನಡೆಯುತ್ತದೆ (ರಾಜಸ್ತಾನ).

ಅಂಧ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿ ಕತ್ತು ಸೀಳಿ ಕೊಲ್ಲಲಾಗುತ್ತದೆ (ಬೆರ್‍ಹಾಂಪುರ್, ಒಡಿಶಾ).

ಯುವತಿಯೊಬ್ಬಳು ತನ್ನನ್ನು ಬೆಂಬತ್ತಿರುವವನೊಬ್ಬನ ಕಾಟ ತಡೆಯಲಾರದೆ ಓದನ್ನು ಅರ್ಧಕ್ಕೇ ಬಿಟ್ಟು ಆ ನಗರವನ್ನೇ ತೊರೆಯುತ್ತಾಳೆ (ಮುಂಬೈ).

ಚಲಿಸುತ್ತಿದ್ದ ಆಟೋದಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ (ಚಂಡೀಘಡ).

ಅಪ್ರಾಪ್ತೆಯೊಬ್ಬಳ ಮೇಲೆ ಸತತ ಎರಡು ತಿಂಗಳ ಕಾಲ ಅತ್ಯಾಚಾರ ನಡೆಸಿ ಕಡೆಗೆ ಬೆಂಕಿ ಹಚ್ಚಿ ಕೊಲ್ಲಲಾಗುತ್ತದೆ (ಮಣಿಪುರಿ, ಉತ್ತರಪ್ರದೇಶ).

ಹತ್ತು ವರ್ಷದವಳೊಬ್ಬಳ ಮೇಲೆ ತಿಂಗಳುಗಳ ಕಾಲ ಅತ್ಯಾಚಾರ ನಡೆಸುತ್ತಾರೆ (ಭೋಪಾಲ್).

ಸೆಕ್ಸ್ ನಿರಾಕರಿಸಿದ್ದಕ್ಕೆ ಹೆಂಡತಿಯ ಗುಪ್ತಾಂಗಗಳ ಮೇಲೆ ಆ್ಯಸಿಡ್ ಸುರಿಯುತ್ತಾನೆ ಅವನೊಬ್ಬ (ಲಖ್ನೌ).

15 ವರ್ಷದ ಕ್ಯಾನ್ಸರ್ ರೋಗಿ ಹುಡುಗಿ ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿ ದಾರಿಹೋಕನೊಬ್ಬನನ್ನು ನೆರವಿಗೆ ಅಂಗಲಾಚಿದಾಗ ಅವನಿಂದಲೂ ಅತ್ಯಾಚಾರ ನಡೆಯುತ್ತದೆ (ಲಖ್ನೌ).

ಡ್ರಗ್ಸ್ ತೆಗೆದುಕೊಳ್ಳಲು ದುಡ್ಡು ಬೇಕೆಂದು ಹೆಂಡತಿಯ ಮೇಲೆಯೇ ಸಾಮೂಹಿಕ ಅತ್ಯಾಚಾರವೆಸಗಲು ಏಳು ಮಂದಿ ಗೆಳೆಯರಿಗೆ ಅವಕಾಶ ಮಾಡಿಕೊಡುತ್ತಾನೆ ಒಬ್ಬ ಗಂಡ (ಪಂಜಾಬ್).

ನೂರು ವರ್ಷದ ವೃದ್ಧೆಯೊಬ್ಬಳ ಮೇಲೆ ಅತ್ಯಾಚಾರ ನಡೆದು, ಆಕೆ ಸತ್ತೇಹೋಗುತ್ತಾಳೆ (ಉತ್ತರಪ್ರದೇಶ).

ಹಾಡಹಗಲೇ ಮಹಿಳೆಯ ಮೇಲೆ ಫುಟ್‍ಪಾತ್‍ನಲ್ಲೇ ಅತ್ಯಾಚಾರ ನಡೆಯುತ್ತದೆ; ದುರಂತವೆಂದರೆ ಯಾರೊಬ್ಬರೂ ಅವಳ ನೆರವಿಗೆ ಧಾವಿಸುವುದೇ ಇಲ್ಲ (ವೈಜಾಗ್, ವಿಶಾಖಪಟ್ಣಂ).

ಮಹಿಳೆಯೊಬ್ಬಳನ್ನು ಅಪಹರಿಸಿ 23 ಗಂಡಸರು ಅವಳ ಮೇಲೆ ಎರಗುತ್ತಾರೆ (ಬಿಕಾನೇರ್, ರಾಜಸ್ತಾನ).

16 ವರ್ಷದ ಕಿವುಡ ಮೂಗ ಹುಡುಗಿಯೊಬ್ಬಳ ಮೇಲೆ ಅವನೊಬ್ಬ ತಿಂಗಳುಗಳ ಕಾಲ ಅತ್ಯಾಚಾರ ನಡೆಸುತ್ತಾನೆ (ಪುಣೆ).

ಅತ್ಯಾಚಾರಿಗಳಿಂದ ಪಾರಾಗಲು ಚಲಿಸುತ್ತಿದ್ದ ವ್ಯಾನಿನಿಂದ ಹೊರಗೆ ಹಾರಿದ ಗರ್ಭಿಣಿಯೊಬ್ಬಳು ಮಗಳು ನೋಡನೋಡುತ್ತಿರುವಾಗಲೇ ಸಾಯುತ್ತಾಳೆ (ಮೇದಕ್, ತೆಲಂಗಾಣ).

ಅತ್ಯಾಚಾರಕ್ಕೊಳಗಾಗಿ ಬದುಕುಳಿದವಳ ಮೇಲೆ ಒಂದೆರಡಲ್ಲ, ನಾಲ್ಕು ಬಾರಿ ಆ್ಯಸಿಡ್ ದಾಳಿಯಾಗುತ್ತದೆ (ಉತ್ತರಪ್ರದೇಶ).

*

ಈ ವರ್ಷ (2017) ಈ ದೇಶದಲ್ಲಿ ಹೆಣ್ಣಿನ ಮೇಲೆ ನಡೆದ ಭಯಂಕರ ಪೌರುಷಗಳ ಅತ್ಯಂತ ಸಣ್ಣ ಪಟ್ಟಿ ಮಾತ್ರ ಇದು. ಮೊನ್ನೆಯಷ್ಟೇ ವಿಜಯಪುರದಲ್ಲಿ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಅದು ಸುದ್ದಿಯಾಯಿತು. ಸುದ್ದಿಯಾಗದೇ ಹೋಗುವ ಅದೆಷ್ಟು ಇಂಥ ಘಟನೆಗಳಿವೆಯೊ. ವರದಿಯೇ ಆಗದವುಗಳ ಅಂದಾಜು ಮಾಡಿಕೊಳ್ಳುವುದೂ ಬೇಡ. ಅದು ಅಸಹನೀಯ. ಯಾಕೆಂದರೆ ಒಂದೊಂದು ರಾಜ್ಯದಲ್ಲೂ ವರ್ಷವೂ ಸಾವಿರ ಸಾವಿರಗಳ ಲೆಕ್ಕದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತದೆ.

ಈ ಘಟನೆಗಳ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಮನಸ್ಸು ಕಲಕಿಹೋಗುತ್ತದೆ. ಅದೆಂಥ ರಕ್ಕಸರ ನೆಲದಲ್ಲಿ ಹೆಣ್ಣು ತನ್ನನ್ನು ತಾನು ಕಾಯ್ದುಕೊಂಡೇ ತನ್ನವರನ್ನೂ ಕಾಯಬೇಕಾಗಿದೆಯಲ್ಲ ಎನ್ನಿಸುತ್ತದೆ. ಅತ್ಯಾಚಾರ, ಅತ್ಯಾಚಾವೆಸಗಿ ಕೊಲೆ ಮಾಡುವುದು, ಸ್ಟಾಕಿಂಗ್, ಇರಿದು ಕೊಲ್ಲುವುದು, ಗುಂಡಿಟ್ಟು ಸಾಯಿಸುವುದು, ಆ್ಯಸಿಡ್ ದಾಳಿ ಒಂದೆರಡಲ್ಲ. ಅತ್ಯಾಚಾರ ಪ್ರಕರಣಗಳದ್ದಂತೂ ಕರಾಳ ಮಟ್ಟ.

2016ರ ಅಂಕಿ ಅಂಶಗಳನ್ನು ಗಮನಿಸಿದರೆ, ಆ ವರ್ಷ ದೇಶದಲ್ಲಿ ದಿನಕ್ಕೆ 106ರಂತೆ ಅತ್ಯಾಚಾರಗಳು ನಡೆದಿವೆ. ಇಲ್ಲಿಯೂ ದಿಲ್ಲಿಯೇ ತನ್ನ ರಾಜಧಾನಿ ಪಟ್ಟ ಉಳಿಸಿಕೊಂಡಿದೆಯೆಂಬುದು ಆತಂಕದ ವಿಚಾರ. ದಿಲ್ಲಿಯೊಂದರಲ್ಲೇ ವರದಿಯಾದ ಅತ್ಯಾಚಾರ ಪ್ರಕರಣಗಳು 2 ಸಾವಿರ. ನಂತರದ ಸ್ಥಾನದಲ್ಲಿದ್ದ ಮುಂಬೈನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏಳುನೂರಕ್ಕೂ ಹೆಚ್ಚು. ಇಲ್ಲೊಂದು ಗಮನಿಸಲೇಬೇಖಾದ ಮತ್ತು ಅತ್ಯಂತ ಆತಂಕಕಾರಿ ಸತ್ಯವಿದೆ. 2016ರಲ್ಲಿ ದಾಖಲಾದ ಮಹಿಳೆಯರ ವಿರುದ್ಧ ನಡೆದ ಎಲ್ಲ ಬಗೆಯ ಅಪರಾಧ ಪ್ರಕರಣಗಳು 3 ಲಕ್ಷ 38 ಸಾವಿರದ 954. ಅವುಗಳಲ್ಲಿ ಹೆಚ್ಚಿನವು ಗಂಡಂದಿರು ಮತ್ತು ಪರಿಚಿತ ಪುರುಷರಿಂದಲೇ ನಡೆದವುಗಳು. ದಾಖಲಾದ ಒಟ್ಟು 38 ಸಾವಿರದ 947 ಅತ್ಯಾಚಾರ ಪ್ರಕರಣಗಳಲ್ಲಿ ಬಹುತೇಕ ಅಂದರೆ ಶೇ. 95ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತ ಯುವತಿ ಅಥವಾ ಮಹಿಳೆಯರಿಗೆ ಗೊತ್ತಿರುವವರಿಂದಲೇ ಅತ್ಯಾಚಾರ ನಡೆದದ್ದು. ಮತ್ತು ಇದು 2016ರ ಪ್ರಕರಣಗಳ ಸ್ವರೂಪ ಮಾತ್ರವಲ್ಲ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್‍ಸಿಆರ್‍ಬಿ) ಹೇಳುವುದೂ ಇದನ್ನೇ. ನೆರೆಹೊರೆಯವರು, ಕುಟುಂಬದವರು, ಸಂಬಂಧಿಗಳು, ಅಪ್ಪಂದಿರು, ಗಂಡಂದಿರು ಅಥವಾ ಲೈವ್ ಇನ್ ಸಂಬಂಧದಲ್ಲಿದ್ದವರು, ಕೆಲಸ ಮಾಡುವ ಕಂಪನಿಯ ಮಾಲೀಕ ಅಥವಾ ಸಹೋದ್ಯೋಗಿಗಳು ಹೀಗೆ ಗೊತ್ತಿರುವವರೇ ಅಂದರೆ ಜೊತೆಜೊತೆಗಿರುವವರೇ ಅತ್ಯಾಚಾರದ ಮನಃಸ್ಥಿತಿ ಹೊತ್ತವರಾಗಿರುತ್ತಾರೆ ಎಂಬುದು ಪ್ರತಿಯೊಬ್ಬ ಹೆಣ್ಣಿನ ಪಾಲಿಗೆ ಬಹುದೊಡ್ಡ ಕಠೋರ ಸತ್ಯ.

ಮನೆಯೊಳಗೂ ಹೊರಗೂ ಅತ್ಯಾಚಾರಿಗಳೇ ಇದ್ದಾರೆಂಬುದೇ ಕರಾಳ. ಅವರಿಗೆ ಶಿಶುವೂ ಒಂದೇ, ಮೂರು ವಷದ ಮಗುವೂ ಒಂದೇ, ನೂರು ವರ್ಷದ ವೃದ್ಧೆಯೂ ಒಂದೇ. ಇದೆಂಥ ರಾಕ್ಷಸತ್ವ? ಯಾವ ಯುಗದಲ್ಲಿದ್ದೇವೆ ನಾವು?

ಹೀಗೆ ಅತ್ಯಾಚಾರ ಪ್ರಕರಣಗಳಾದಾಗಲೆಲ್ಲ ಹೆಣ್ಣುಮಕ್ಕಳು ಪ್ರಚೋದನಕಾರಿ ಉಡುಪು ಧರಿಸುತ್ತಾರೆ, ನಡುರಾತ್ರಿಯಲ್ಲಿ ಮನೆಯಿಂದ ಹೊರಗಡೆ ಅವರಿಗೇನು ಕೆಲಸ ಎಂಬಿತ್ಯಾದಿ ತಕರಾರುಗಳೇ ಏಳುತ್ತವೆ. ಹೆಣ್ಣುಮಕ್ಕಳ ಉಡುಪಿನ ಬಗ್ಗೆ ತಕರಾರೆತ್ತುವ ಮತ್ತು ನಡುರಾತ್ರಿ ಅವರು ಹೊರಗೆ ಕಾಣಿಸಿಕೊಳ್ಳಬಾರದೆನ್ನುವ ಸಂಪ್ರದಾಯವಾದಿ ಮನಃಸ್ಥಿತಿಗಳಿಗೆ ಮೈತುಂಬ ಬಟ್ಟೆಯಿರುವ ಮುಗ್ಧೆ ಅತ್ಯಾಚಾರಕ್ಕೆ ತುತ್ತಾದಾಗಲಾಗಲೀ, ಹಾಡಹಗಲಲ್ಲೇ ಅತ್ಯಾಚಾರ ನಡೆದಾಗಲಾಗಲೀ ಬಾಯೇ ಬರುವುದಿಲ್ಲ. ಯಾವ ಅತ್ಯಾಚಾರಿಯ ತಾಯ್ತಂದೆಯರೂ ತಮ್ಮ ಮಗನನ್ನು ಬೆಳೆಸುವಲ್ಲಿ ಎಲ್ಲಿ ಎಡವಿದೆವು ಎಂದು ಯೋಚಿಸುವುದಿಲ್ಲ. ತನ್ನ ಅತ್ಯಾಚಾರಿ ಮಗನನ್ನು ರಕ್ಷಿಸಿಕೊಳ್ಳಲು ಚಡಪಡಿಸುವ ತಾಯಿಗೆ, ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳು ಅನುಭವಿಸುವ ನರಕವಾಗಲಿ, ಅವಳ ಕೊಲೆಯಾದರೆ ಆ ಸಾವಾಗಲೀ ಕೊಂಚವೂ ಕಾಡುವುದಿಲ್ಲವೆ?

ಮಧುಮಿತಾ ಪಾಂಡೆ

2012ರ ನಿರ್ಭಯಾ ಪ್ರಕರಣದ ನಂತರ, ಲಂಡನ್ನಿನಲ್ಲಿ ಕ್ರಿಮಿನಾಲಜಿ ಓದುತ್ತಿದ್ದ ದಿಲ್ಲಿಯ ಹುಡುಗಿ ಮಧುಮಿತಾ ಪಾಂಡೆ ತಮ್ಮ ಥೀಸಿಸ್‍ಗಾಗಿ ಅತ್ಯಾಚಾರಿಗಳ ಮನಃಸ್ಥಿತಿ ಅಧ್ಯಯನಿಸಲು ಅತ್ಯಾಚಾರ ಆರೋಪ ಹೊತ್ತ 100 ಕೈದಿಗಳನ್ನು ತಿಹಾರ್ ಜೈಲಿನಲ್ಲಿ ಕಂಡು ಮಾತನಾಡಿಸುತ್ತಾರೆ. ಆಕೆ ಮಾತನಾಡಿಸಿದವರಲ್ಲಿ ಬಹುತೇಕರು ಅಶಿಕ್ಷಿತರು. ಮೂರು ನಾಲ್ಕನೇ ಇಯತ್ತೆಯನ್ನೂ ಮುಗಿಸದೆ ಶಾಲೆಯಿಂದ ಹೊರಬಿದ್ದವರು. ಅವರಿಗೆ ತಾವು ಮಾಡಿರುವುದು ಅತ್ಯಾಚಾರ ಎಂದಾಗಲೀ, ಹೆಣ್ಣನ್ನು ಕೂಡುವಾಗ ಆಕೆಯ ಸಮ್ಮತಿ ಬೇಕಿರುತ್ತದೆ ಎಂಬುದರ ಬಗ್ಗೆಯಾಗಲೀ ಗೊತ್ತಿಲ್ಲ ಎಂಬುದರೊಂದಿಗೆ, ಹೆಣ್ಣಿನ ವಿರುದ್ಧ ನಡೆಯುವ ಅಪರಾಧಗಳ ಹಿನ್ನೆಲೆ ಕುರಿತ ಸತ್ಯದ ಬಹುದೊಡ್ಡ ಭಾಗದ ಮೇಲೆ ನೆರಳು ಆವರಿಸಿಕೊಳ್ಳುತ್ತದೆ. ಇವರೇನೂ ರಕ್ಕಸರಲ್ಲ, ತೀರಾ ಸಾಮಾನ್ಯರು ಎನ್ನುವ ಆಕೆ, ಅವರೊಳಗೆ ತಪ್ಪು ಮಾಡಿರುವ ಬಗ್ಗೆ ಬೇಸರವಿದೆ ಎನ್ನುತ್ತ ಕೊಡುವ ಉದಾಹರಣೆಯೊಂದನ್ನು ಗಮನಿಸಬೇಕು: ಅವನು 49 ವರ್ಷದವನು. 5 ವರ್ಷದ ಹಸುಳೆಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದವನು. ತಾನವಳ ಬದುಕನ್ನು ಹಾಳು ಮಾಡಿದೆ, ಅವಳನ್ನು ಯಾರೂ ಮದುವೆಯಾಗದ ಹಾಗೆ ಮಾಡಿದೆ ಎಂದು ಪರಿತಪಿಸುವ ಆತ ತಾನೇ ಅವಳನ್ನು ಸ್ವೀಕರಿಸಲು ಸಿದ್ಧ, ಜೈಲಿನಿಂದ ಬಿಡುಗಡೆಯಾದ ಮೇಲೆ ಅವಳನ್ನು ಮದುವೆಯಾಗುವೆ ಎನ್ನುತ್ತಾನೆ. ಅವನ ಪಶ್ಚಾತ್ತಾಪದ ಮುಂದೆ, ಆಗಲೂ ಮುಂದೆಯೂ ನರಕವೇ ಆದ ಆ ಹಸುಳೆಯ ಸ್ಥಿತಿ ಮರೆತೇಹೋಗುತ್ತದಲ್ಲ?

ಮನಃಶಾಸ್ತ್ರೀಯ ತೀರ್ಮಾನ ಕೊಡುವ ಇಂಥ ಅಧ್ಯಯನಗಳು ಭಾವನಾತ್ಮಕವಾಗಿದ್ದರೆ ಮಾತ್ರ ಸಾಲದು. ಅದು ಸಿಲುಕಿಕೊಂಡ ಮಿತಿಯ ಬಗ್ಗೆಯೂ ಎಚ್ಚರವಿರಬೇಕು. ಮೂರು ವರ್ಷಗಳಲ್ಲಿ ಈ ವಿದ್ಯಾರ್ಥಿನಿಯ ಸಂದರ್ಶನಕ್ಕೆ ಒಳಪಡುವವರು ಪಾಪದವರು ಮಾತ್ರ. ದೊಡ್ಡ ಸಮಾಜದ ಅತ್ಯಾಚಾರಿಗಳ್ಯಾರೂ ಈ ಸಂದರ್ಶನದ ವ್ಯಾಪ್ತಿಗೆ ಬರಲಿಲ್ಲ; ಅಥವಾ ಅಂಥವರು ಜೈಲಿನೊಳಗೇ ಇಲ್ಲ. ಅತ್ಯಾಚಾರವೆಂದರೇನೆಂದು ಗೊತ್ತೇ ಇಲ್ಲದವರಿಂದ ಮಾತ್ರವಲ್ಲ; ಅದರ ಬಗ್ಗೆ ಚೆನ್ನಾಗಿಯೇ ತಿಳಿದವರಿಂದಲೂ, ಕಾನೂನಿನ ಎಲ್ಲ ಕಟ್ಟುಗಳಿಂದ ತಪ್ಪಿಸಿಕೊಳ್ಳಲು ರಂಗೋಲಿಯ ಅಡಿ ನುಸುಳಬಲ್ಲ ಚಾಣಾಕ್ಷರಿಂದಲೂ ಅತ್ಯಾಚಾರಗಳಾಗುತ್ತಿವೆ ಎಂಬುದನ್ನು ಇಂಥ ಅಧ್ಯಯನಗಳು ಮರೆತುಬಿಡುವುದೇ ಇಂಥವುಗಳು ಉಳಿಸಿಬಿಡುವ ಬಹುದೊಡ್ಡ ಕತ್ತಲು. ಇವುಗಳಿಂದ ಉತ್ಪತ್ತಿಯಾಗುವ ತೀರ್ಮಾನಗಳು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಹೆಣ್ಣುಮಕ್ಕಳತ್ತಲೇ ಬೊಟ್ಟು ಮಾಡುವಂಥದೇ ತಪ್ಪನ್ನು ಮತ್ತೊಂದು ದಿಕ್ಕಿನಿಂದ ಮಾಡುವ ಅಪಾಯವೇ ಜಾಸ್ತಿ.

ಅತ್ಯಾಚಾರಗಳು ದಿನದಿನವೂ ಹೆಚ್ಚುತ್ತಲೇ ಇರುವುದರಲ್ಲಿ ಅತ್ಯಾಚಾರಿಗಳದ್ದಷ್ಟೇ ಅಲ್ಲ, ನಮ್ಮೆಲ್ಲರ ಪಾಲೂ ಇದೆಯೆನ್ನಿಸುತ್ತದೆ. ಪ್ರತಿ ಮನೆಯೊಳಗೂ ಹೆಣ್ಣುಮಗಳನ್ನು ಪ್ರೀತಿ ಗೌರವ ಮತ್ತು ವಿಶ್ವಾಸದ ಆಪ್ತತೆ ಮತ್ತು ಅವಳ ಸ್ವಾತಂತ್ರ್ಯದ ಕುರಿತ ತಿಳಿವಿನೊಂದಿಗೆ ಕಾಣುವುದು ಸಾಧ್ಯವಾಗುವುದಾದರೆ, ನೆರೆಮನೆಯ ಹೆಣ್ಣುಮಗಳ ಬಗ್ಗೆಯೂ ಇದೇ ಭಾವನೆ ಹುಟ್ಟುವುದಾದರೆ ಕಾನೂನಿನಿಂದ ಸಿಗುವುದಕ್ಕಿಂತಲೂ ದೊಡ್ಡ ಸುರಕ್ಷತೆ ನಿಜಗೊಳ್ಳುವುದು ಸಾಧ್ಯ.

ಆದರೆ, ಕಲ್ಪನೆಗೂ ವಾಸ್ತವಕ್ಕೂ ಎಷ್ಟೊಂದು ಅಂತರ?

ಇದನ್ನೂ ಓದಿ: ಕಾದಂಬಿನಿ ಕಾಲಂ – ಇಲ್ಲಿಗೆ ಕಥೆಯ ಮುಗಿಸಲಾಗಿದೆ

@VenkatramanaG

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...