Share

ಊರೆಂಬುದು ಊರಾಗಿ ಉಳಿಯುತ್ತಿಲ್ಲ
ಸಂಪಾದಕ

ರಡು ವರದಿಗಳ ಬಗ್ಗೆ ಹೇಳಬೇಕು:

ಮೊದಲನೆಯದು, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದದ್ದರ ಕುರಿತದ್ದು. ದದಲಿತ ಕುಟುಂಬವೊಂದರಲ್ಲಿ ಸಾವು ಸಂಭವಿಸಿದೆ. ಅಂತ್ಯಸಂಸ್ಕಾರಕ್ಕೆಂದು ಶವ ಹೊತ್ತು ಸ್ಮಶಾನಕ್ಕೆ ಹೋದವರಿಗೆ ಬಹು ದೊಡ್ಡ ಆಘಾತ. ಮೇಲ್ಜಾತಿಯವರ ಒಂದು ಗುಂಪು ಕುಟುಂಬವನ್ನು ಸ್ಮಶಾನದೊಳಕ್ಕೆ ಹೋಗಲೂ ಬಿಡದೆ ಅಟ್ಟಿದೆ. ಈ ಸ್ಮಶಾನದ ಮೇಲೆ ತಮಗೇ ವಿಶೇಷವಾದ ಹಕ್ಕು ಇರುವುದೆಂದು ಅದು ಅಬ್ಬರಿಸಿದೆ. ಬೇರೆ ದಾರಿ ಕಾಣದೆ ಕಂಗಾಲಾದ ಆ ದಲಿತ ಕುಟುಂಬ ಕಡೆಗೆ ಶವವನ್ನು ಮನೆಯ ಹೊರಗಡೆಯೇ ಇಟ್ಟು ಸುಟ್ಟಿದೆ.

ಇನ್ನೊಂದು ವರದಿ, ಜಾರ್ಖಂಡ್ ರಾಜ್ಯದ ಹಳ್ಳಿಯೊಂದರಲ್ಲಿ ಆಗಿರುವ ಘಟನೆಯ ಬಗೆಗಿನದು. ಆ ಹೆಣ್ಣುಮಗಳೊಬ್ಬಳಿಗೆ ರೇಶನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಲಾರದೆ ಪಡಿತರವೇ ಸಿಗದೇ ಹೋಗಿದೆ. ಪಡಿತರವಿಲ್ಲದೆ ಹಸಿವಿನಿಂದ ನರಳಿ ಆಕೆಯ ಮಗಳು ಸತ್ತಿದ್ದಾಳೆ. ಈಗ ಅಧಿಕಾರಿಗಳು ವಾದಿಸುತ್ತಿರುವುದೇನೆಂದರೆ ಅವಳ ಮಗಳು ಹಸಿವಿನಿಂದಲ್ಲ, ಮಲೇರಿಯಾದಿಂದ ಸತ್ತಿರುವುದು ಎಂದು. ತನ್ನ ಮಗಳಿಗೆ ಯಾವ ಕಾಯಿಲೆಯೂ ಬಂದಿರಲಿಲ್ಲ ಎಂಬುದು ಆ ತಾಯಿಯ ಅಹವಾಲು. ಮಗಳನ್ನು ಕಳಕೊಂಡು ದುಃಖಿತಳಾಗಿ ನಿಂತವಳ ಮೇಲೆ ಆ ರಾಜ್ಯದ ಮುಖ್ಯಮಂತ್ರಿಯೇ ಕೆಂಡ ಕಾರಿದ್ದಾರೆ. ಅವರ ಪ್ರಕಾರ, ಆಕೆ ಹಸಿವಿನಿಂದ ಮಗಳು ಸತ್ತಳೆಂದು ಹೇಳಿ ಆ ಹಳ್ಳಿಯ ಮರ್ಯಾದೆಯನ್ನೇ ಕಳೆದಿದ್ದಾಳಂತೆ. ಇದರೊಂದಿಗೇ ಹಳ್ಳಿಯ ಮೇಲ್ಜಾತಿಯವರೆಲ್ಲ ಸೇರಿ ಆಕೆಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಒಂದು ಸಾಮಾನ್ಯ ಸಂಗತಿಯಿದೆ. ಏನೆಂದರೆ ಸಾವಿನ ಎದುರಲ್ಲೂ ಎಂಥ ಕ್ರೌರ್ಯ ಝಳಪಿಸುತ್ತದಲ್ಲ ಅನ್ನೋದು. ಬಡವರನ್ನು, ಕೆಳಜಾತಿಯವರನ್ನು ನಡೆಸಿಕೊಳ್ಳುವ ರೀತಿ ಎಷ್ಟು ಅಮಾನವೀಯ ಎಂಬುದು ಒಂದೆಡೆಗಾದರೆ, ಸಾವಿನ ಎದುರಲ್ಲೂ ಒಂದು ಹನಿ ಕರುಣೆ ವ್ಯಕ್ತವಾಗುವುದಿಲ್ಲವಲ್ಲ ಈ ಕಟುಕರ ಕಣ್ಣಲ್ಲಿ ಎಂಬುದು ದೊಡ್ಡ ಸಂಕಟವಾಗಿ ಉಳಿದುಬಿಡುತ್ತದೆ.

ಆ ಮನೆಯಲ್ಲಿ ಶವ ಇರುವಾಗ ಇವರ ರಾಜಕೀಯಕ್ಕೆ ರಕ್ಕಸ ಹಲ್ಲುಗಳು ಮೂಡಿಕೊಳ್ಳುತ್ತವೆ. ಅವರ ಮನೆಯ ಶವಕ್ಕೂ ಪ್ರವೇಶ ಸಿಗದಂತೆ ಸ್ಮಶಾನದ ಮೇಲೆ ಇವರು ಹಕ್ಕುದಾರರಾಗುತ್ತಾರೆ. ಅವರ ಮನೆಯ ಮಗು ಹಸಿದು ಸತ್ತರೆ, ಆ ಸತ್ಯ ಹೇಳಿ ತಮ್ಮ ಮರ್ಯಾದೆ ಕಳೆದರೆಂದು ಊರಿಂದಲೇ ಬಹಿಷ್ಕಾರ ಹಾಕುವ ಮಟ್ಟಕ್ಕೆ ಇವರ ಅಹಂಕಾರ ಬೆಳೆದು ನಿಲ್ಲುತ್ತದೆ.

ಇವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಅನ್ನುವುದೇ ಇಲ್ಲವೆ? ತಾವೇನು ಮಾಡುತ್ತಿದ್ದೇವೆ, ತುತ್ತಿಗೂ ಗತಿಯಿಲ್ಲದವರನ್ನು, ಅಸಹಾಯಕರನ್ನು, ದುರ್ಬಲರನ್ನು ಅದು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ಇಷ್ಟೇ ಇಷ್ಟೂ ಇವರನ್ನು ಕಾಡುವುದಿಲ್ಲವೆ? ತಮ್ಮ ಮರ್ಯಾದೆ ಹೋಗುತ್ತಿರುವುದು ತಮ್ಮ ನಡತೆಯಿಂದಲೇ ಎಂಬುದು ಈ ಹುಂಬರಿಗೆ ಹೊಳೆಯುವುದೇ ಇಲ್ಲವೆ?

ಮನುಷ್ಯತ್ವವೇ ಇಲ್ಲದವರ ಕಡೆ ತಿರುಗಿ ನಿಂತು ಕೇಳುತ್ತಿರುವ ಪ್ರಶ್ನೆಗಳು ಇವು. ಒಂದು ಪ್ರಾಣಿ ಕೂಡ ತನ್ನ ಸಮೂಹದ ಜೀವವೊಂದು ಸತ್ತಾಗ ತೋರಿಸುವ ಕಳವಳವನ್ನು ನೋಡಬೇಕು. ಆದರೆ ಮನುಷ್ಯರಲ್ಲಿ ಮಾತ್ರ ಏಕೆ ಮತ್ತೊಂದು ಜೀವದ ಸಾವಿನಲ್ಲೂ ಮಿಡಿಯಲಾರದ ರಕ್ಕಸತನ? ಆ ಸಾವಿನ ಮುಂದೆಯೂ ಅದಕ್ಕಿಂತ ಕ್ರೂರವಾಗಿಬಿಡುವ ಇವರೆಲ್ಲ ಸಮಾಜ, ಊರು, ಊರ ಮರ್ಯಾದೆಯ ಮಾತನಾಡುವುದೇ ಹಾಸ್ಯಾಸ್ಪದ. ಶವವನ್ನು ಸುಡಲು ಇರುವ ಜಾಗದ ಮೇಲೂ ತಮ್ಮ ಹಕ್ಕು ಬರೆಯುವ ರೀತಿಯಂತೂ ಇನ್ನೂ ಹೇಸಿಗೆಯದ್ದು.

ಊರೆಂಬುದು ಊರಾಗಿ ಉಳಿಯುತ್ತಿಲ್ಲ. ಯಾಕೆಂದರೆ ಅಲ್ಲಿ ಮನುಷ್ಯರೇ ಇಲ್ಲ!

Share

One Comment For "ಊರೆಂಬುದು ಊರಾಗಿ ಉಳಿಯುತ್ತಿಲ್ಲ
ಸಂಪಾದಕ
"

  1. Rajesh
    27th December 2017

    ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳೋದೂ ಕೂಡಾ ಮಾನವ ಕ್ರೌರ್ಯತೆಯ ಮತ್ತೊಂದು ಮುಖ

    Reply

Leave a comment

Your email address will not be published. Required fields are marked *

Recent Posts More

  • 4 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 5 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 7 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

  • 18 January 2018
    7 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 15 January 2018
    1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 14 January 2018
    2 weeks ago No comment

    ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

              | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

  • 11 January 2018
    2 weeks ago No comment

    ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                        ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

  • 04 January 2018
    3 weeks ago No comment

    ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                        ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...