Share

ಮರಳಿನ ಕಣವನ್ನು ‘ಮುತ್ತಾ’ಗಿಸೋಣ ಅಂದರೆ…
ಅರ್ಚನಾ ಎ ಪಿ

 

 

ಮುಳ್ಳು ಎಲೆ ಮೇಲೆ ಬಿದ್ರೂ, ಎಲೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳಿಗೆ ಯಾರೂ ಏನೂ ಅನ್ನಲ್ಲ; ಹೆಸರು ಬರೋದು ಎಲೆಗೇನೇ.

 

 

 

 

You know why God has created gap between fingers???

So that…
So that… ಕಾರಣ…

ತೆರೆ ಜೈಸೆ ಯಾರ್ ಕಹಾಂ…ಕಹಾಂ ಐಸಾ ಯಾರಾನಾ…
ಯಾದ್ ಕರೇಗಾ ದುನಿಯಾ…ತೇರೆ ಮೇರಾ ಅಫ್ ಸಾನಾ…

ಅಂತ ಅಮಿತಾಬ್ ಬಚ್ಚನ್ ನಾವಾಗಿ, ಅಮ್ಜದ್ ಖಾನ್ ನಿಭಾಯಿಸೋ ಸ್ನೇಹದ ಪರಮಾವಧಿಯನ್ನು ನೆನೆದು ಹಾಡೋಕೆ ಇರಬಹುದಾ???

ಅಥವಾ

ಕ್ವಾಪಕೂ ಒಂದು ಕೈ ದೋಸ್ತಿ ದಾಸ್ತಿ ಕಣೋ/ ಕಣೇ ಅಂತ ಚಡ್ಡಿ ದೋಸ್ತ್/ ಲಂಗ ಫ್ರೆಂಡ್ ನ ನೆನೆದು ಎಲ್ಲಾ ಅಂತಸ್ತನ್ನು ಮೀರಿದ ಕುಚಿಕೂ ಹಾಡಾಡೋಕಾ???

ಅಥವಾ

25 ಪೈಸೆ ಕೊಟ್ಟು ಕಾಲುಗಂಟೆ ಬಾಡಿಗೆಗೆ ಅಂತ ಬ್ರೇಕಿಲ್ಲದ, ಆಗಿನ ಸಮಯದ ನಮ್ಮ ಏರೋಪ್ಲೇನ್ ಆದ ‘ಸೈಕಲ್’ ಮೇಲೆ ಕೂತು ಸೀಟಲ್ಲದ ಸೀಟಲ್ಲಿ ಒನ್ ಬೈ ಟೂ ನಿಂತು ಅಪ್ ಹತ್ತಿ, ಡೌನ್ ವರೆಗೆ ಜುಂ ಅಂತ ಹೊರಡೋಕಾ???

ಅಥವಾ

ಸ್ಕೂಲ್ ನಲ್ಲಿ ಮಾನಿಟರ್, ಮಾತಾಡೋರ ಹೆಸರಿನ ಮುಂದೆ +++ ಸೇರಿಸ್ತಾ ಇರಬೇಕಾದರೆ, ಅವರೊಂದಿಗೆ ಜಗಳ ಆಡಿ, ಗೆಳೆಯನ / ಗೆಳತಿಯ ಹೆಸರಿನ ಜೊತೆಗೆ ನಮ್ಮ ಹೆಸರೂ ಬರೆದು, ಟೀಚರ್ ಗೆ ‘ಅಯ್ಯೋ, ಮತ್ತೆ ಇವರಿಬ್ಬರದೇನಾ ಹೆಸರು? ಹೋಗ್ಲಿ..’ ಈ ಬಾರಿ ಬಿಟ್ಟಿದ್ದೀನಿ…ಅಂತ ಮೂಗಿನ ಮೇಲಿರೋ ಕನ್ನಡಕದ ಮೇಲಿಂದ ಇಣುಕಿ ನೋಡಿ ಹೇಳಿದಾಗ, ನಾವ್ ಮುಖ ಮುಖ ನೋಡಿಕೊಂಡು, ವಿಶ್ವಕಪ್ ಗೆದ್ದ ಖುಷಿ ಅನುಭವಿಸೋಕಾ???

ಅಥವಾ

ಅಯ್ಯೋ.. ಅಥವಾ… ಅಥವಾ.. ಪಟ್ಟಿ ಯಾಕೋ ಈ ನಮ್ ಸರ್ಕಾರದ ಎಲ್ಲಾ ‘ಮುಗಿಯದ’ ಯೋಜನೆಗಳ ಥರಾ ಮುಗಿಯೋ ಹಂಗೆ ಕಾಣ್ತಿಲ್ಲ…ಅಲ್ವಾ???

ಹೇಗೆ ಮುಗಿಯತ್ತೆ ಹೇಳಿ…
ಅಲ್ಲಾ… ಯಾಕ್ ಮುಗಿಯಬೇಕು ಅಂತೀನಿ!

ಛೆ..ಛೆ.. ಎಷ್ಟು… ಮುಗಿಯುವುದು, ಮುಗಿಸೋದು ಅಂತ ಪೂರ್ಣವಿರಾಮ ಹಾಕೋದ್ರಲ್ಲಿ ಬಿಜಿಯಾಗಿ ಬಿಟ್ಟಿರೋದು… ಎಲ್ಲರೂ ಎಲ್ಲವೂ.

ಮುಂದುವರಿಸೋದೇನನ್ನು? ಮುಗಿಸೋದೇನನ್ನು? ಎಷ್ಟೊಂದು confusion… ಎಲ್ಲೋ ಲಿಂಕೊಂದು ಮಿಸ್ ಆಗ್ತಿದೆ…

ಹಾಂ ಸಿಕ್ತು ಈಗ ಕೊಂಡಿ…
ಬೆರಳುಗಳ ನಡುವೆ ಸೃಷ್ಟಿಯಾಗಿರೋ ಖಾಲಿ ಜಾಗದ್ದು…
ತುಂಬೋದಕ್ಕೆ…
ತುಂಬಿಸೋದಕ್ಕೆ…

ಭಕ್ತನೊಬ್ಬ, ನಾನು ನಿಮ್ ಪಾದದ ಧೂಳು ಅಂತಿದ್ದನಂತೆ ಅತೀ ವಿನಯದಿಂದ ತನ್ನ ಗುರುಗಳಿಗೆ. ಒಮ್ಮೆ ಅವರು, ನಾನೂ ನಿನ್ನನ್ನು ಅದಕ್ಕೇ ಅರ್ಹ ಅಂದುಕೊಂಡಿದ್ದೀನಿ ಅಂದಾಗ ಭಕ್ತನಿಗೆ ಕೋಪ ಬಂದು, ‘ಗುರುಗಳೇ ಇದೇನು ನೀವ್ ಹಿಂಗಂತೀರಿ?’ ಅಂತ ಬಾಲ ಸುಟ್ಟ ಬೆಕ್ಕಿನ ಥರ ಬುಸುಗುಡ್ತಾ ಹೋದವನು ತಿರುಗಿ ಬರಲೇ ಇಲ್ವಂತೆ.

ಸರಿ, ಬೆರಳುಗಳ ನಡುವಿನ ಜಾಗದ ಭರ್ತಿಗೂ, ಇದಕ್ಕೂ ಏನು, ಕಾಮನಬಿಲ್ಲಿಗೂ ಬಿಸಿಲುಮಳೆಗೂ ಇರೋ ಸಂಬಂಧದಂತೆ ಕೊಂಡಿ ಕೂಡಿಸಬಹುದಾ? ಅಂತ ತಾಳೆ ಹಾಕಿ‌ನೋಡಿದ್ರೆ ಸರಿಯಾಗಿ ಹೊಂದ್ಕೊಂಡಿದೆ…

ಯಾರು ತುಂಬಿಸಬೇಕು ಆ ಜಾಗವನ್ನು? ಎಂಥಾ ದೊಡ್ಡ ಪ್ರಶ್ನೆ ಮುಂದಿಟ್ಟುಕೊಂಡು, ಶಾಲೆ, ಕಾಲೇಜು, ಮನೆ, ಕೆಲಸದ ಜಾಗದಂತಹ ‘ಪರಿಚಿತ’ ವಲಯದಿಂದಾಚೆಗೆ ಧೈರ್ಯ ಮಾಡಿ, ಇವತ್ತಿನ ತಂತ್ರಜ್ಞಾನಕ್ಕೆ update ಆಗ್ತಾ ‘ಅಪರಿಚಿತ’ ಸ್ನೇಹ ಕೋರಿಕೆಗೆ ಒಪ್ಪಿಗೆಯ ಮುದ್ರೆ ಒತ್ತಿದ್ದು ಈಗಷ್ಟೇ ಆದಂತಿದೆ. ತರುವಾಯ ಪರಿಚಯ, ಇನ್ನೂ ಮುಂದೆ ಹೋಗಿ ಕರೆಮಾಡಿ ಮಾತು, ಮೊದಲ ಭೇಟಿ ಆಗೋಷ್ಟರಲ್ಲಿ… ಮೂರು ಸಲ ಮಾತ್ ಬಿಟ್ಟು, ನಾಲ್ಕು ಸಲ ಅವರ ಪಾಲಿನ ಎರಡೂ ಹೆಜ್ಜೆ ನಾನೇ ಇಟ್ಟು ಕಳಚಿಹೋಗದ ಹಾಗೆ ಕಾಪಾಡಿದ್ದು ಯಾಕೆ? ಯಾಕೆಂದರೆ ನೀನ್ ಸಹನೆಯ ಸಂಪತ್ತು, ಕ್ಷಮಯಾ ಧರಿತ್ರಿ ಅನ್ನೋ ಪಟ್ಟ ಕೊಟ್ಟಿದ್ರಲ್ಲ, ಹೇಗೆ ಉಳಿಸಿಕೊಳ್ಳದೇ ಇರೋದು?

ಸ್ನೇಹ ಅಂದರೆ ಪರಸ್ಪರರಿಬ್ಬರೂ ತಮ್ಮ strength and weaknessಗಳ ಜೊತೆಗೇ ಒಪ್ಕೊಳೋದಲ್ವಾ… ವಯಸ್ಸು, ಅಂತಸ್ತು, ಸ್ಥಾನ ಎಲ್ಲಾ ಪರಿಧಿಯಾಚೆಗೆ ಹೆಮ್ಮೆಯಿಂದ ಇವನು/ ಇವಳು ನನ್ನ friend ಅಂತ ಹೇಳಿಕೊಳ್ಳಲ್ಲ ಅಂದರೆ ಆ ಭಾವದ ಹಿಂದೆ ಯಾವ ರಹಸ್ಯ ಅಡಗಿದೆ ತಿಳೀತಿಲ್ಲ… ತಿಳಿಯೋಣ ಅಂತ ಒಂದ್‌ ಸಣ್ಣ ಪರೀಕ್ಷೆ ಮಾಡಿದೆ…

ನಾನ್ ಏನೇ ಬರಲಿ ಈ ಸ್ನೇಹ ಉಳಿಸಿಕೊಳ್ತೀನಿ ಅಂತ್ ಬಾಯ್ ಮಾತಲ್ಲಿ ಹೇಳಿದ್ದನ್ನು, ಹೌದಾ ಅಂತ ನನ್ನ ಇಷ್ಟ ಅ ಇಷ್ಟವನ್ನು ಬೇಕಂತಲೇ ಹೇಳಿದಾಗ ಪ್ರತಿಕ್ರಿಯೆಯಲ್ಲಿ ಕರೆ ‘ಕಟ್’ ಆಯ್ತಷ್ಟೆ. ಮತ್ತದೇ ಕಾಯುವಿಕೆಯೇ.

ಬಂದ ಪ್ರತಿಕ್ರಿಯೆಯಲ್ಲೂ… ಇಷ್ಟುದ್ದದ ಸಂದೇಶದಲ್ಲಿ ಎಲ್ಲವನ್ನೂ ಹೇಳಿ (ಅದರಲ್ಲಿ ನನ್ನ ‘ತಪ್ಪು’ಗಳು? ಆರೋಪಗಳೇ ಹೆಚ್ಚಾಗಿವೆ) ಕೊನೆಯಲ್ಲಿ “ಮುಂದೆ ಮಾತನಾಡಿಸುವ ಸಂದರ್ಭ ಬಂದರೆ” ಅಂತ ತಾವೇ ನೀಡಿದ, ಮಾಡಿದ ವಚನವನ್ನು ಮರೆತು ಪೂರ್ಣವಿರಾಮ ಹಾಕಿರುವುದನ್ನು, ಸ್ನೇಹಕ್ಕೆ ಚಿರಋಣಿ ಅಂತ ಧನ್ಯವಾದ ಹೇಳಿ ತಿಲಾಂಜಲಿ ಬಿಟ್ಟಿರುವುದನ್ನು ಕಂಡು ಕಣ್ಣಾಲಿಗಳೇಕೋ ತೇವವಾಗಿವೆ…

ತುಂಬಾ ಮುದ್ದು ಮಾಡೋ ಒಂದು ಸ್ನೇಹ ಈಗ ಸ್ವಂತ ಅಂತ ಉಬ್ಬಿದ್ದ ಆಸೆಯ ಬಲೂನಿಗೆ ಎಷ್ಟು ಸುಲಭವಾಗಿ ಸೂಜಿ ಚುಚ್ಚಿ ಬಿಡೋ ಹಂಬಲವೇಕೆ???
ಇದಕ್ಕೆ ಅಂಕಪಟ್ಟಿಯಲ್ಲಿ ಎಷ್ಟಂಕ ಕೊಡಲಿ?

ದೊಡ್ಡವರು ಹೇಳೋ ಮಾತು ನೂರ್ಕಾಲಕ್ಕೂ ಅಲ್ಲ, ಸಾವಿರ ಕಾಲಕ್ಕೂ ಸತ್ಯ. ಮುಳ್ಳು ಎಲೆ ಮೇಲೆ ಬಿದ್ರೂ, ಎಲೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳಿಗೆ ಯಾರೂ ಏನೂ ಅನ್ನಲ್ಲ; ಹೆಸರು ಬರೋದು ಎಲೆಗೇನೇ. ಹರಿಯೋದು ಅದರ ಇಂಚಿಂಚೂ, ಚದುರಿಹೋಗೋದೂ ಅದರ ಹಣೆಬರಹವೇ?

ಇದಕ್ಕೂ ಉತ್ತರವಿಲ್ಲ…
ಹಾಗಾದರೆ ಅಪರಿಚಿತರೊಂದಿಗಿನ ಎಲ್ಲಾ ಆಯ್ಕೆಗಳೂ ಹೀಗೆ ಕೊನೆಯಾಗೋದಾ?
ಏನೂ ಸ್ವಾರ್ಥವಿಲ್ಲದೆ, ಹಿಡಿ ಪ್ರೀತಿಯನ್ನಷ್ಟೇ ಬಯಸಿ, ಚಿಪ್ಪಿನಿಂದ ಇಣುಕಿ, ಮರಳಿನ ಕಣವನ್ನು ‘ಮುತ್ತಾ’ಗಿಸೋಣ ಅಂದರೆ… ಅಷ್ಟು ಧೈರ್ಯನಾ ಎಲೆಯೇ ಅಂತ ಸಾವಿರಕಾಲಿನ ಹುಳು ಮುದುಡಿಕೊಳ್ಳುವ ಹಾಗೆ ಇನ್ನೆಂದೂ ಅರಳದ ಹಾಗೆ ಮಾಡ್ತಾರಲ್ಲ ಯಾಕೆ?

ನಿಜ ಇರಬಹುದು…
ಅಪರಿಚಿತರೊಂದಿಗಿನ ಈ ಬಾಂಧವ್ಯ.
ಆದರೆ… ವರ್ಷಗಟ್ಟಲೆ ಒಟ್ಟಿಗೆ ಓದಿ, ಕಂಡು, ಕೇಳಿ, ತಿಳಿದು, ಅರಿತೂ, ಕಡೆಯದಾಗಿ ಇಂಥಾ ಅನುಭವವಾದರೆ ಹೇಗಿರಬೇಕು ಆ ಸ್ಥಿತಿಯೂ…

ಅಂದರೆ…
ಅಂದರೆ, ಓದುವಾಗ ಒಂದೇ ಹಿನ್ನೆಲೆಯಿಂದ ಬಂದಿರೋ ಕಾರಣದಿಂದ (ಮಧ್ಯಮ ವರ್ಗದ ಸಾಮ್ಯತೆ) ಪರಿಸರ, ತಿಳಿವಳಿಕೆ, ಆಸೆ, ತೃಪ್ತಿ ಎಲ್ಲ ಹೊಂದಿಕೆಯಾಗಿ ಏನೇನೋ ಬೇಕಾದ್ದು, ಬೇಡದ್ದು ಎಲ್ಲವನ್ನೂ ಹರಟುವಾಗ…

ಆಹಾಹಾ…
ಪ್ರೀತಿ ಪ್ರೇಮ ಅಂದರೆ ಕೆಂಡ ಕಾರ್ತಿದ್ದ, ವಿರುದ್ಧ ವಾದ ಮಾಡ್ತಿದ್ದ ಹಿರಿಯ ಸಂತಾನ, ಜವಾಬ್ದಾರಿ ನಂದೇ ಎಲ್ಲರಿಗೊಂದು ನೆಲೆಯಾಗುವವರೆಗೂ ಇದರ ಬಗ್ಗೆ ಯೋಚಿಸಲಾಗುವುದಿಲ್ಲ ಅಂತ್ಹೇಳಿ, ಒಂದೆರಡು ವರ್ಷ ಕಳೆದು, ಮದುವೆಯ ಕರೆಯೋಲೆ ಕೈಲಿಟ್ಟಾಗ ತಿಳೀತು ಅದು ‘ಪ್ರೇಮ ವಿವಾಹ’ ಅಂತ. ಹಾಗಾದರೆ ಎಲ್ಲಾ ಹೇಳಿಕೊಳ್ಳುತ್ತಿದ್ದ ಸ್ನೇಹದಲ್ಲಿ ಈ ಪ್ರೀತಿಯ ವಿಷಯ ಬರದಿರೋಷ್ಟು ಉಸಿರುಕಟ್ಟಿಸೋ ವಾತಾವರಣ ಸೃಷ್ಟಿಯಾಯಿತಾ? ಅಥವಾ ಹೇಳಿದ್ರೆ ನನ್ನೊಂದಿಗೆ ಆ ಪ್ರೇಮ ತಿರುಗಿಬಿಡುತ್ತೇನೋ ಅನ್ನೋ ಅಭದ್ರತಾ ಭಾವನೆಯಿತ್ತಾ? ಅಥವಾ ಬರೀ ಕಾರಣಗಳಷ್ಟೇ ಹುಡುಕೋದುಳಿದಿದೆ ಈಗ. ಮಗುವಿನೊಂದಿಗೆ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸುದ್ದಿ ತಿಳೀತು…

ನೀ ಕರೆಯದಿದ್ದರೂ
ಚಿಂತಿಲ್ಲ ಗೆಳತಿ..
ಛಂದಿರು… ಮಂದಿಮಕ್ಕಳೊಳಗೊಂದಾಗಿರು…
ಅಂತ ಬಾಯ್ತುಂಬ ಹರಸ್ತೀನಿ ಕಣೆ…

ನನಗಿನ್ನೂ ನೆನಪಿದೆ…
ನನ್ನ ಅಮ್ಮನ ಚಪಾತಿಯ ಕೊನೇ ತುತ್ತಲ್ಲಿ ಅರ್ಧರ್ಧ ಹಂಚಿ ತಿನ್ನೋ ರೂಢಿ. ಮಾತಿನ ಮಲ್ಲಿಯರು ಅನ್ನೋ ಪಟ್ಟ… ಇನ್ನೂ ಏನೇನೋ ನೆನಪಿನ ಸುರುಳಿ ಬಿಚ್ಚಿಕೊಳ್ತಿದೆ.

ಕೇಳ್ತೀಯಾ…
ನೆನಪಿದೆಯಾ…

ದುಶ್ಮನ್ ನ ಕರೇ ದೋಸ್ತ್ ನೆ ವೋ ಕಾಮ್ ಕಿಯಾ ಹೈ…
ಉಮ್ರ್ ಭರ್ ಕಾ ಗಮ್ ಹಮೇ ಇನಾಮ್ ದಿಯಾ ಹೈ…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...