Share

ಪೆಗ್ಗಿನ ಹಿಗ್ಗು
ಪ್ರಸಾದ್ ನಾಯ್ಕ್ ಕಾಲಂ

 

“ಹೊಸವರ್ಷ ಬಂತಂದ್ರೆ ಒಳ್ಳೆಯ ವ್ಯಾಪಾರ” ಎಂದು ಅನ್ನುತ್ತಿದ್ದರು, ಆ ಬಾರಿನ ಮಾಲೀಕ.

ಹೊಸವರ್ಷದ ಆಗಮನದ ನೆಪದಲ್ಲಿ ಅದೆಷ್ಟು ಗುಂಡುಪಾರ್ಟಿಗಳಾಗುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನನಗಿಲ್ಲಿ ಸ್ವಾರಸ್ಯಕರವೆನಿಸುವುದು ಇದರದ್ದೇ ಮತ್ತೊಂದು ಅಂಶ. ಹೊಸವರ್ಷದ ಹೆಸರಿನಲ್ಲಿ ಅದೆಷ್ಟು ಜನ ಕುಡಿಯುವ ಉಮೇದಿನಲ್ಲಿರುತ್ತಾರೋ, ಕುಡಿಯುವ ಚಟಕ್ಕೆ ಎಳ್ಳುನೀರು ಬಿಡುವ ಉತ್ಸಾಹದಲ್ಲೂ ಬಹುತೇಕ ಅಷ್ಟೇ ಸಂಖ್ಯೆಯ ಜನರಿರುತ್ತಾರೆ. ಡಿಸೆಂಬರ್ 31ರಂದು ಎಲ್ಲರ ಪ್ರತಿಜ್ಞೆಗಳಂತೆ ಕುಡುಕರದ್ದೂ ಒಂದು ಪ್ರತಿಜ್ಞೆ. ನಾಳೆಯಿಂದ ಎಣ್ಣೆಯನ್ನು ಕಣ್ಣೆತ್ತಿಯೂ ನೋಡೋದಿಲ್ಲ ಎಂದು. ಜೊತೆಗೇ ನಾಳೆಯಿಂದ ಗುಂಡು ಮುಟ್ಟೋದಿಲ್ಲವೆಂದು ಇವತ್ತು ಗಲ್ಲಿಗೇರುವವನ ಕೊನೆಯಾಸೆಯಂತೆ ಕಂಠಪೂರ್ತಿ ಕುಡಿಯುವ ಆತುರ. ಇನ್ನು ಆ ಹ್ಯಾಂಗೋವರ್ ಇಳಿದು ಹೋಗಲೇ ಎರಡು ದಿನ ಬೇಕು. ಅಷ್ಟರ ಹೊತ್ತಿಗೆ ಪ್ರತಿಜ್ಞೆಯು ನೆನಪಿದ್ದರೆ ಆ ಪ್ರತಿಜ್ಞೆಯ ಪುಣ್ಯ. ಇಲ್ಲವಾದರೆ ಅದೇ ಪ್ರತಿಜ್ಞೆಯು ಮುಂದಿನ ವರ್ಷದ ಕೊನೆಯ ದಿನದಂದು ಮತ್ತೆ ಪುನರಾವರ್ತನೆಯಾಗುತ್ತದೆ. “ಇದನ್ನು ಕಳೆದ ವರ್ಷವೂ ನೀ ಹೇಳಿದ್ಯಲ್ಲೇನು?” ಎಂದು ಈ ಬಗ್ಗೆ ನಾಲ್ಕು ಜನ ನಗುತ್ತಾರೆ. ನಂತರ ಏನೋ ಒಂದು ಸಬೂಬು ಹೇಳಿ ತಿಪ್ಪೆ ಸಾರಿಸುವ ಯತ್ನಗಳಾಗುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ಮದುವೆ ಮತ್ತು ಪತ್ನಿಯರನ್ನು ಹೊರತುಪಡಿಸಿದರೆ ನಾನು ಹೆಚ್ಚಿನ ಜೋಕುಗಳನ್ನು ಓದಿರುವುದು ಗುಂಡಿನ ಬಗ್ಗೆಯೇ. ಹಾಗೆ ನೋಡಿದರೆ ಮೊದಲ ಸಿಗರೇಟು, ಮೊದಲ ಗುಂಡುಪಾನ ಇವೆಲ್ಲವೂ ಮೊದಲ ಪ್ರೀತಿಯಂತೆಯೇ. ಅದೆಷ್ಟೋ ಮರೆಗುಳಿತನದ ಮನುಷ್ಯನಿಗೂ ಇವುಗಳು ಸಾಮಾನ್ಯವಾಗಿ ಸ್ಪಷ್ಟವಾಗಿ ನೆನಪಿರುತ್ತವೆ. ನನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಕೊನೆಯ ದಿನಗಳಲ್ಲಿ ನಾನೊಮ್ಮೆ ನಮ್ಮ ಗೆಳೆಯನ ಮನೆಗೆ ಪುಟ್ಟ ಔತಣಕೂಟಕ್ಕೆಂದು ಹೋಗಿದ್ದೆ. ಹೀಗೆ ರಾತ್ರಿಯಲ್ಲಿ ನಡೆಯುವ ಈ ಪಾರ್ಟಿಗೆ ಹೋಗಲು ಮನೆಯವರನ್ನು ಅದ್ಹೇಗೆ ಒಪ್ಪಿಸಿದ್ದೆನೋ ನನಗೀಗ ನೆನಪಿಲ್ಲ. ಏಕೆಂದರೆ ಇಲ್ಲಸಲ್ಲದ ಬಾಲಿಶ ಕಾರಣಗಳನ್ನು ಮುಂದಿಟ್ಟು ವಿದ್ಯಾಸಂಸ್ಥೆಯ ಹಾಸ್ಟೆಲ್ ಸೇರಿದಂತೆ ಎಲ್ಲೆಲ್ಲೋ ಟೆಂಟು ಹಾಕುವ ಅಭ್ಯಾಸಗಳಿಗೆ ನಮ್ಮ ಮನೆಯಲ್ಲಿ ಅನುಮತಿಯಿರಲಿಲ್ಲ. ಅದರಲ್ಲೂ ಔತಣಕೂಟಗಳ ಹೆಸರಿನಲ್ಲಿ ಈ ವಯಸ್ಸಿನ ಹುಡುಗರು ಏನೆಲ್ಲಾ ಕಾರು’ಬಾರು’ಗಳನ್ನು ಮಾಡುತ್ತಾರೆ ಎಂಬ ಬಗ್ಗೆಯೂ ಮನೆಯ ಹಿರಿಯರಿಗೆ ಸಂಶಯಗಳಿದ್ದಿದ್ದು ಸ್ಪಷ್ಟ.

ಅಸಲಿಗೆ ನಾನು ಇಂಜಿನಿಯರಿಂಗ್ ವಿದ್ಯಾಭ್ಯಾಸದುದ್ದಕ್ಕೂ ಮನೆಯಿಂದಲೇ ಹೋಗಿಬರುತ್ತಿದ್ದರಿಂದ ಹಾಸ್ಟೆಲ್ ನಲ್ಲಿ ಉಳಿಯುವ ಭಾಗ್ಯವೇ ಬಂದಿರಲಿಲ್ಲ. ಹೀಗಾಗಿ ನನಗಂತೂ ಆ ವಯಸ್ಸಿನಲ್ಲೂ ಬ್ಯಾಗನ್ನು ಹೆಗಲಿಗೇರಿಸಿ ಶಾಲೆಗೆ ಹೊರಟಂತಾಗುತ್ತಿತ್ತು. ಇನ್ನು ಹಾಸ್ಟೆಲ್ ನಲ್ಲಿ ನೆಲೆಸಿಲ್ಲವಾದ್ದರಿಂದ ಆ ವಯಸ್ಸಿನಲ್ಲಿ ಮಾಡಬೇಕಾಗಿರುವ ಪಾಪಗಳನ್ನು ಮಾಡಬೇಕಾದ ಅವಕಾಶಗಳೇ ನನಗೆ ಸಿಕ್ಕಿರಲಿಲ್ಲ ಎಂದು ಎಲ್ಲರಿಂದ ಕಾಲೆಳೆಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದನ್ನೇ ಗಮನದಲ್ಲಿರಿಸಿ ನನ್ನ ಕೆಲ ಸಹಪಾಠಿಗಳು ಏನೇನೋ ನೆಪಹೇಳಿ ನನ್ನನ್ನು ಈ ಪಾರ್ಟಿಯೆಂಬ ಗುಂಡಿನ ಗೌಜಿಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅವರಿಗೂ ಆದಷ್ಟು ಬೇಗ ನನಗೆ ತೀರ್ಥಪಾನವನ್ನು ಮಾಡಿಸೋ ಅವಸರ. ಕೋತಿಯೊಂದಕ್ಕೆ ಹೊಸದಾಗಿ ಹೆಂಡ ಕುಡಿಸಿ ಮೋಜು ನೋಡುವುದರ ಮಜಾನೇ ಬೇರೆಯಲ್ಲವೇ! ಮಹಾಕುಡುಕರು ಕಂಠಪೂರ್ತಿ ಕುಡಿದಾದ ಮೇಲೆ ಮೈಕಲ್ ಜಾಕ್ಸನ್ನಿನಂತೆ ಮೂನ್ ವಾಕ್ ಅನ್ನೇ ಮಾಡಬಹುದು. ಆದರೆ ಹೊಸ ಮಿಕದ ಅವಸ್ಥೆಯನ್ನು ನೋಡುವ ಮೋಜೇ ಬೇರೆ.

ಅಂತೂ ನಾನು ಅಂದು ಬಾಟಲಿಗಳನ್ನು ಕಂಡು ಮುಖ ಗಿಂಜಿ ಡ್ರಾಮಾ ಮಾಡತೊಡಗಿದಾಗ ಈ ಸೈನ್ಯಕ್ಕೋ ರೋಸಿಹೋಯಿತೋ ಏನೋ! ಇದ್ದ ಸಮೂಹದಲ್ಲಿ ಒಂದಿಬ್ಬರು ಎಲ್ಲೋ ಮೂಲೆಗೆ ತೆರಳಿ ಕೋಲ್ಡ್ ಡ್ರಿಂಕ್ಸ್ ನಲ್ಲಿ ವಿವಿಧ ಬಗೆಯ ಡ್ರಿಂಕ್ ಗಳನ್ನು ಬೆರೆಸಿ ಮಹಾಸುಭಗರಂತೆ ನನ್ನೆದುರಿಗೆ ಇರಿಸಿದ್ದರು. ನಾನೂ ಕೂಡ ಹರಟೆಯ ಗುಂಗಿನಲ್ಲೇ ಬಣ್ಣದ ಪಾನೀಯವನ್ನು ಗಳಗಳ ಅಂತ ಕುಡಿದು ಬಿಟ್ಟಿದ್ದೆ. ಇದ್ಯಾವುದಪ್ಪಾ ವಿಚಿತ್ರ ರುಚಿ ಅಂತ ಒಂದು ಕ್ಷಣ ಅನ್ನಿಸಿದ್ದೇನೋ ಹೌದು. ಆದರೆ ಪಾನೀಯದ ಬಣ್ಣವೇ ಅಷ್ಟು ದಟ್ಟವಾಗಿದ್ದ ಪರಿಣಾಮವಾಗಿ ಅದರಲ್ಲೇನೇನಿದೆ ಎಂಬುದು ಮಾತ್ರ ತಿಳಿಯಲೇ ಇಲ್ಲ. ಅಂತೂ ‘ತೀರ್ಥ’ದೀಕ್ಷೆಯನ್ನು ಕೊಟ್ಟು ಇವನ ತಲೆಗೆ ಪಾಪವನ್ನು ಕಟ್ಟಿಯೇ ಬಿಟ್ಟೆವು ಎಂದು ಎಲ್ಲರೂ ಒಳಗೊಳಗೇ ಬೀಗಿಯೇ ಬಿಟ್ಟರು.

ಆದರೆ ಇವರುಗಳ ಯೋಜನೆ ಮಾತ್ರ ಬಹುಬೇಗನೇ ತಿರುಗುಬಾಣವಾಗಿದ್ದಂತೂ ಹೌದು. ಮನೆಯ ಹಾಲಿನಲ್ಲೇ ಎಲ್ಲರೊಂದಿಗೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದ ನನಗೆ ಯಾವುದೇ ಮುನ್ಸೂಚನೆಗಳಿಲ್ಲದೆ ಹೊಟ್ಟೆ ತೊಳೆಸಿದಂತಾಗಿ ಏಕಾಏಕಿ ಎಲ್ಲವನ್ನೂ ಅಲ್ಲೇ ಕಕ್ಕಿಬಿಟ್ಟಿದ್ದೆ. ಇವರೆಲ್ಲರ ಸುರಪಾನ ಷಡ್ಯಂತ್ರವು ನನ್ನಂತಹ ಬಾಲಂಗೋಚಿಯ ಮೇಲೆ ಗುಬ್ಬಚ್ಚಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿ ಎಲ್ಲವೂ ಎಡವಟ್ಟಾಗಿತ್ತು. ಮೋಜು ಮಾಡಬೇಕಿದ್ದ ಸಮಯದಲ್ಲಿ ಎಲ್ಲರೂ ಬಕೆಟ್ಟುಗಳನ್ನು ಹಿಡಿದುಕೊಂಡು ಶುಚಿ ಮಾಡಲು ತೊಡಗಿದ್ದರು. ಇತ್ತ ಇವೆಲ್ಲದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ನಾನು ನಿಂತಲ್ಲೇ ಕುಸಿದುಹೋಗಿದ್ದೆ. ಇಬ್ಬರು ನನ್ನೆರಡು ಕೈಗಳನ್ನು ಮತ್ತು ನನ್ನೆರಡು ಕಾಲುಗಳನ್ನು ಎತ್ತಿಕೊಂಡು ಹೋಗಿ ಅದೆಲ್ಲೋ ಮಲಗಿಸಿದರು. “ಕುಡಿಯೋವಾಗ ಹೀಗೆಲ್ಲಾ ಆಗೋದು ಮಾಮೂಲು ಮಾರಾಯ. ಇದನ್ನೆಲ್ಲಾ ದೊಡ್ಡ ಸಂಗತಿ ಮಾಡಬಾರದು” ಎಂದು ಯಾರೋ ಪುಣ್ಯಾತ್ಮ ಈ ಗಡಿಬಿಡಿಯಲ್ಲೇ ವೇದಾಂತ ಹೇಳಿದ. ಆ ದಿನ ನಡೆದ ಘಟನಾವಳಿಗಳಲ್ಲಿ ನನಗೆ ನೆನಪಿರುವ ಕೊನೆಯದ್ದು ಎಂದರೆ ಅದೇ.

ಆದರೆ ಬಹುಷಃ ತಮಾಷೆಗಳು ಇಲ್ಲಿಗೇ ನಿಲ್ಲುವಂಥದ್ದಾಗಿರಲಿಲ್ಲ. ಮರುದಿನ ಮುಂಜಾನೆ ಎಚ್ಚರವಾದಾಗ ನಾನು ದೊಡ್ಡದಾದ ಹಾಸಿಗೆಯೊಂದರಲ್ಲಿ ಮಲಗಿಕೊಂಡಿದ್ದೆ. ಎದ್ದು ಯಾರನ್ನಾದರೂ ಕರೆಯೋಣವೆಂದರೆ ನನ್ನ ದನಿಯು ಸಂಪೂರ್ಣವಾಗಿ ಮಾಯವಾಗಿತ್ತು. ಬಾಯಿ ತೆರೆದರೆ ನೀರಿಲ್ಲದ ನಳ್ಳಿಯಿಂದ ಬುಸುಬುಸು ಬರುವ ಗಾಳಿಯಂತೆ ಹವೆಯೇ ಬರುತ್ತಿತ್ತೇ ವಿನಃ ದನಿಯಲ್ಲ. ಥೂ ನಿನ್ನ ಎಂದು ಒಳಗೊಳಗೇ ಶಪಿಸಿಕೊಂಡ ನಾನು ಪಕ್ಕದ ಕೋಣೆಗೆ ಬರುವಷ್ಟರಲ್ಲಿ ಒಂದಿಬ್ಬರನ್ನು ಬಿಟ್ಟರೆ ಒಬ್ಬೊಬ್ಬರು ಒಂದೊಂದು ಸ್ಥಿತಿಯಲ್ಲಿದ್ದರು. “ಅದ್ಯಾವ ಕಚಡಾ ಸಾರಾಯಿ ಕುಡಿಸಿದ್ರೋ ಮಾರಾಯ? ನನ್ನ ಸ್ವರವೇ ನೆಗೆದು ಬಿದ್ದೋಗಿದೆ” ಎಂದು ಕಷ್ಟದಲ್ಲಿ ವಿಚಾರಿಸಿದೆ. “ಅಯ್ಯೋ ಪೆದ್ದಾ… ಅದು ತೀರ್ಥದ ಇಫೆಕ್ಟಲ್ಲ, ಏಸಿ ಇಫೆಕ್ಟು” ಎಂದ ಆತ. ಭಯಂಕರ ಥಂಡಿ ಏರ್ ಕಂಡೀಷನಿಂಗ್ ಯಂತ್ರದ ಕೆಳಗೆ ನನ್ನನ್ನು ಮಲಗಿಸಿ ಎಲ್ಲರೂ ಕಳೆದ ರಾತ್ರಿ ಮಾಯವಾಗಿದ್ದರು. ಫ್ರೀಜರ್ ನೊಳಗೆ ತಲೆಯನ್ನಿಟ್ಟು ಮಲಗಿದಂತೆ ನನ್ನ ತಲೆಯಷ್ಟೇ ಚಳಿಯ ಕಾಶ್ಮೀರವಾಗಿ ವಿಚಿತ್ರ ಎಡವಟ್ಟಾಗಿತ್ತು.

ನನ್ನ ಘಟನೆ ಒಂದು ಸ್ಯಾಂಪಲ್ ಅಷ್ಟೇ ಆಗಿತ್ತು ಎಂದು ನಂತರವಷ್ಟೇ ತಿಳಿಯಿತು. ಆ ರಾತ್ರಿ ಬಹಳಷ್ಟು ಡ್ರಾಮಾಗಳು ಬೇರೆ ಆಗಿದ್ದವಂತೆ. ಒಬ್ಬ ಮಿತ್ರ ರಾತ್ರಿಯೇ ಮನೆ ಸೇರಬೇಕೆಂದು ಹಟಹಿಡಿದು, ಇತರರು ಬೇಡವೆಂದರೂ ರಂಪಾಟ ಮಾಡಿ ಬೈಕು ಹಿಡಿದು ಮತ್ತಿನಲ್ಲೇ ಮನೆಗೆ ಮರಳಿದ್ದ. ಇನ್ನೂ ಡಿಗ್ರಿ ಮುಗಿಸದೆ, ಪ್ಲೇಸ್-ಮೆಂಟ್ ಪಡೆಯದೆ, ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದ ಮಗ ಕುಡಿದು ಮನೆಗೆ ಬಂದಾಗ ಯಾವ ಮಟ್ಟದ ಸಮಾರಾಧನೆಯಾಗಬೇಕಿತ್ತೋ ಅಂಥದ್ದೇ ಸಮಾರಾಧನೆ ಅವನಿಗಾಯಿತು ಎಂದು ನಂತರ ತಿಳಿಯಿತು. ಇನ್ನು ಇವೆಲ್ಲದಕ್ಕೂ ನಮ್ಮ ಆತಿಥೇಯನಾಗಿದ್ದ ಮತ್ತೊಬ್ಬ ಮಿತ್ರ ಮಹಾಶಯ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಒಂದು ಡಬ್ಬದಲ್ಲಿ ರಾಶಿಹಾಕಿದ್ದ ಬಾಟಲಿಯನ್ನು ವಿಲೇವಾರಿ ಮಾಡಿಸಲು ಮಾತ್ರ ಮರೆತುಬಿಟ್ಟಿದ್ದ. ಅದೇ ದಿನ ಸಂಜೆ ಮನೆಗೆ ಅನಿರೀಕ್ಷಿತ ಭೇಟಿಕೊಟ್ಟ ಅವನ ಅನಿವಾಸಿ ಭಾರತೀಯ ತಂದೆ ಇವುಗಳನ್ನು ಆಕಸ್ಮಿಕವಾಗಿ ಕಂಡು ಆ ಬಾಟಲಿಯಲ್ಲೇ ಅವನನ್ನು ಚೆನ್ನಾಗಿ ತದುಕಿಬಿಟ್ಟರು.

ಇನ್ನು ನನ್ನನ್ನೂ ಸೇರಿದಂತೆ ಉಳಿದಿಬ್ಬರೂ ಕೂಡ ಶೋಚನೀಯ ಸ್ಥಿತಿಯಲ್ಲೇ ಇದ್ದರು. ಆತಿಥೇಯನ ಮನೆಯಲ್ಲಿ ಎರಡೆರಡು ಬಾರಿ ಸ್ನಾನ ಮಾಡಿಕೊಂಡು ಮಾಡದ ಪಾಪವನ್ನು ತೊಳೆದುಕೊಂಡ ನಾನು ಮನೆಗೆ ಮರಳಲೋ ಅಥವಾ ಕಾಲೇಜಿಗೇ ಹೋಗಲೋ ಎಂದು ಬಹಳ ಚಿಂತನ-ಮಂಥನ ಮಾಡಿ ಕೊನೆಗೂ ಕಾಲೇಜನ್ನೇ ಆರಿಸಿದೆ. ಮಹಾನೆಗಡಿಯಾಗಿರುವವನಂತೆ ದನಿಯೇ ಇಲ್ಲದೆ ಒದ್ದಾಡುತ್ತಾ, ತಲೆಯಲ್ಲಿ ಅದ್ಯಾವುದೋ ಹೆಣಭಾರವನ್ನು ಹೊತ್ತುಕೊಂಡು ತರಗತಿಗೆ ತೆರಳಿದ ನಾನು ತರಗತಿಗೆ ಬಂದರೂ ತ್ರಾಣವಿಲ್ಲದೆ ಬೆಂಚೊಂದರಲ್ಲಿ ಮಲಗಿಬಿಟ್ಟೆ. ನನ್ನನ್ನು ನೋಡಿ ಹೋ ಎಂದು ಎಲ್ಲರೂ ನಕ್ಕರು. ಅಂದು ‘ಹ್ಯಾಂಗೋವರ್’ ಎಂಬ ಹೊಸ ಪದದೊಂದಿಗೆ ಪರಿಚಯವಾಯಿತು. ಕಾಲೇಜಿಗೆ ಬಂದು ಬಚಾವಾದೆ, ಮನೆಗೇನಾದರೂ ಹೋಗಿದ್ದರೆ ಜೀವಂತ ಹೂತುಬಿಡುತ್ತಿದ್ದರೋ ಏನೋ ಎಂದು ಗೆಳೆಯರ ನಡುವೆ ಕುಂಯಿಗುಟ್ಟೆ. ಅವರೋ, ನನಗೆ ಮಹಾದೀಕ್ಷೆಯನ್ನೇ ಕೊಟ್ಟಿರುವವರಂತೆ ಬೀಗುತ್ತಿದ್ದರು, ನಗೆಯಾಡುತ್ತಿದ್ದರು.

ಹೀಗೆ ಒಬ್ಬೊಬ್ಬರದ್ದು ಒಂದೊಂದು ಗುಂಡುಪುರಾಣ. ಇಂದಿಗೂ ಗುಂಡಿನ ಕಥೆಗಳನ್ನು ಕೇಳುವುದೆಂದರೆ ನನಗೊಂದು ತಮಾಷೆ. ಅದರಲ್ಲೂ ಗುಂಡಿನ ಮೊದಲ ಅನುಭವಗಳನ್ನು ಕೇಳುವುದೆಂದರೆ ಪ್ರೇಮಿಗಳನ್ನು ಎದುರಿಗೆ ಕುಳ್ಳಿರಿಸಿ “ನಿಮ್ಮ ಪ್ರೇಮಕಥೆಯನ್ನು ಮೊದಲಿನಿಂದ ಹೇಳಿ” ಎಂಬಂತೆ. ಮುಂದೆ ಖುಷ್ವಂತ್ ಸಿಂಗ್, ವೈಯನ್ಕೆಯವರಂತಹ ಪ್ರತಿಭಾವಂತರ ಗುಂಡಿನ ಕಥೆಗಳು ಮತ್ತಷ್ಟು ನನ್ನನ್ನು ರಂಜಿಸಿದವು. ಮೊನ್ನೆಯಷ್ಟೇ ಪೋರ್ಚುಗೀಸ್ ಸಹೋದ್ಯೋಗಿಯೊಬ್ಬ ಪೋರ್ಚುಗೀಸ್ ವೈನ್ ಒಂದರ ಬಗ್ಗೆ, ಅದರ ವಿಶೇಷತೆಯ ಬಗ್ಗೆ ಬಹಳ ಆಸಕ್ತಿಯಿಂದ ಕಥೆಯೊಂದನ್ನು ಹೇಳುತ್ತಿದ್ದ. ಪ್ರಸ್ತುತ ನಾನು ನೆಲೆಸಿರುವ ಅಂಗೋಲಾದಲ್ಲಿ ಯಾರೂ, ಎಲ್ಲೂ ಕೂತು ಸಾರಾಯಿಗಳನ್ನು ಮಾರಬಹುದು. ಭಾರತದಲ್ಲಿರುವಂತೆ ಅದಕ್ಕೆ ವಿಶೇಷ ಪರವಾನಗಿಯ ಅವಶ್ಯಕತೆಯೇನೂ ಇಲ್ಲಿಯವರಿಗೆ ಬೇಕಿಲ್ಲ. ಹೀಗಾಗಿ ಅಂಗೋಲಾ ನೆಲದಲ್ಲಿ ಇಂಥಾ ಕಥೆಗಳು ಹೆಚ್ಚೇ ಇರಬಹುದು ಎಂಬ ಅಂದಾಜು ನನ್ನದು.

ಪ್ರಸಕ್ತ ವರ್ಷದ ಕೊನೆ ಮತ್ತು ಮುಂದಿನ ವರ್ಷದ ಆರಂಭವು ಇನ್ನೇನು ಬರಲಿದೆ. ಗುಂಡಿಗೆ ಹೊಸ ಹೊಸ ಹೆಸರುಗಳನ್ನು ಕೊಟ್ಟು ಹೊಸ ಹೊಸ ರೂಪಗಳಲ್ಲಿ ಪ್ರಸ್ತುತಪಡಿಸಿ ಇದಕ್ಕೊಂದು ‘ಕೂಲ್’ ರೂಪವನ್ನು ಕೊಡಲಾಗಿದೆ ಮತ್ತು ಕೊಡಲಾಗುತ್ತಿದೆ. ಹಾಗೆಯೇ ‘ಸೆಲೆಬ್ರೇಷನ್’ ಎಂದರೆ ಕುಡಿತವಷ್ಟೇ ಎಂಬ ಅರ್ಥವಿಲ್ಲದ ಭ್ರಮೆಯನ್ನೂ ಕೂಡ! ಆದರೆ ಯಾರು ಅದೇನೇ ಬಾಯಿ ಬಡಿದುಕೊಂಡರೂ ಕೂಡ ಗುಂಡುಪ್ರಿಯರು ಮಾತ್ರ ಸುರಪಾನ ಮಾಡೇ ಮಾಡುತ್ತಾರೆ ಎಂಬುದರ ಬಗ್ಗೆ ಸಂಶಯವಿಲ್ಲ. ಈ ಬಾರಿ ಎಂತೆಂಥಾ ತಮಾಷೆಯ ಗುಂಡಿನ ಕಥೆಗಳು ಎದುರುಗೊಳ್ಳಲಿವೆ ಎಂಬ ಕಾತರವಷ್ಟೇ ನನ್ನದು!

ಅಂದಹಾಗೆ ನನಗಿನ್ನೂ ಒಗಟಾಗಿಯೇ ಉಳಿದಿರುವ ಒಂದು ಮಿಲಿಯನ್ ಡಾಲರ್ ಪ್ರಶ್ನೆ: ಈ ಕುಡಿದು ಟೈಟಾದವರು ಯಾವ್ಯಾವುದೋ ರಾಂಗ್ ನಂಬರ್ ಗಳಿಗೆ ಫೋನಾಯಿಸಿ ಏನೇನೋ ಗಂಟೆಗಟ್ಟಲೆ ಮಾತಾಡುತ್ತಾರಲ್ವಾ, ಅದ್ಹೇಗೆ ಅಂತ!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...