Share

ಅವತ್ತು ಅಮ್ಮನ ಕಣ್ಣಲ್ಲಿದ್ದ ನೀರು ಇನ್ನೂ ಕಾಡುತ್ತಿದೆ!
ನಾಗರೇಖಾ ಗಾಂವಕರ

 

 

ಬಾಲ್ಯ ಬಂಗಾರ

 

 

 

 

ಬಾಲ್ಯದ ಬವಣೆಗಳ ಹೆಣೆಯುತ್ತ ಹೋದರೆ ಅದು ಹೊಸ ಬದುಕಿನ ಖುಷಿಯಲ್ಲಿ ತನ್ನ ಇರುವನ್ನು ತೋರಿಸುತ್ತದೆ. ಅದರೊಂದಿಗೆ ಕಷ್ಣ ಸಹಿಷ್ಣುತೆಗೆ ಗಟ್ಟಿ ತಳಪಾಯದ ಬೇರನ್ನು ಹೊಸೆಯುತ್ತದೆ.

ಹೌದು. ಅಂದು ತಂದೆ ಸ್ವಯಂನಿವೃತ್ತಿ ಪಡೆದು ಬಂದು ಮನೆಯಲ್ಲಿ ಇರಬೇಕಾದ ಅನಿವಾರ್ಯತೆಗೆ ಆಗಾಗ ಬೇಸರಿಸುತ್ತಿದ್ದರು. ಬರುವ ಪೆನ್ಷನ್ ಎಂಟು ಜನರ ಬದುಕಿನ ಬಂಡಿ ಎಳೆಯಲು ಸಾಲುತ್ತಿರಲಿಲ್ಲ. ಮನೆಯ ಕೃಷಿಯ ಉತ್ಪನ್ನಗಳು ಆಗಷ್ಟೇ ಕೈಗೆ ನಿಲುಕಲಾರಂಭಿಸಿದ್ದವು. ಅದು ತೀರಾ ಸಣ್ಣ ಪ್ರಮಾಣದಲ್ಲಿ. ಸಮಾಜದಲ್ಲಿ ಅದಾಗಲೇ ದೊಡ್ಡ ಮನೆಯವರೆಂದು ಹೆಸರಾಗಿದ್ದ ಕಾರಣ, ‘ಹೆಸರಿಗೆ ಹೆಬ್ಬಾರ ಮೊಸರಿಗೆ ತತ್ವಾರ’ ಅನ್ನುವಂತೆ ಮನೆಯ ಸಂಕಟಗಳ ಅನ್ಯರೆದುರು ತೋಡಿಕೊಳ್ಳಲು ಆಗದ, ನುಂಗಿ ಬದುಕಲು ಆಗದ ದ್ವಂದ್ವದಲ್ಲಿ ತೊಳಲಾಡುವ ಪರಿಸ್ಥಿತಿ ಅದಾಗಿತ್ತು. ಅಮ್ಮ ಅಪ್ಪ ಆಗಾಗ ಸಮಸ್ಯೆಗಳ ಬಗ್ಗೆ ತೀರಾ ವಿಷಾದದಿಂದ ಹಳಹಳಿಸುತ್ತಿದ್ದರು.

ಯಾಕೆಂದರೆ ತಂದೆಯ ಆಸ್ಪತ್ರೆಯ ಖರ್ಚು, ತದನಂತರ ಔಷಧೋಪಚಾರದ ಖರ್ಚು ಏರಿತ್ತು. ಇದೇ ಹೊತ್ತಿಗೆ ಹಿರಿಯಣ್ಣ ಕಾಲೇಜಿನಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡಿದ್ದು, ಆತನ ವಿದ್ಯಾಭ್ಯಾಸದ ಖರ್ಚು ಎಲ್ಲವೂ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದವು. ಇನ್ನು ಊರಲ್ಲಿ ಹೈಸ್ಕೂಲು ಇರಲಿಲ್ಲವಾದ್ದರಿಂದ ಪಟ್ಟಣದಲ್ಲಿ ಮನೆಮಾಡಿ ಮಕ್ಕಳೆಲ್ಲಾ ಅಲ್ಲೇ ಇದ್ದರು. ದೊಡ್ಡಕ್ಕ, ಅಣ್ಣ, ಕಿರಿಯಣ್ಣ ಸೇರಿ ಒಂದು ರೂಮು ಮಾಡಿದ್ದರು. ಮನೆಯಿಂದ ಅಕ್ಕಿ ತೆಂಗಿನ ಕಾಯಿ ಬಿಟ್ಟರೆ ಬೇರೆಲ್ಲ ಕೊಂಡುಕೊಳ್ಳಬೇಕಿತ್ತು. ಇದರಿಂದ ಎರಡು ಮನೆಗಳ ನಿಭಾಯಿಸಬೇಕಾದ ಜವಾಬ್ದಾರಿ ತಂದೆಯದಾಗಿತ್ತು. ರೂಮು ಬಾಡಿಗೆ, ದಿನಸಿ ತಂದುಕೊಡುವುದು, ಪ್ರತಿ ಶನಿವಾರ ಮನೆಗೆ ಬರುವ ಮಕ್ಕಳ ಬಸ್ಸಿನ ಖರ್ಚು, ಶಾಲೆಯ ಪಠ್ಯಪುಸ್ತಕದ ಖರ್ಚು ಒಂದೇ ಎರಡೇ? ಎಲ್ಲ ಖರ್ಚಿನ ಬಾಬತ್ತುಗಳೇ ಆಗಿದ್ದವು. ಆದಾಯ ಕಮ್ಮಿ ಖರ್ಚೂ ಜಾಸ್ತಿ ಎನ್ನುತ್ತಾರಲ್ಲ ಹಾಗೆ. ಹಿಂದೆಲ್ಲ ನೌಕರಿಯಲ್ಲಿದ್ದಾಗ ತಂದೆ ಯಾವತ್ತೂ ಕೈಹಿಡಿದು ಖರ್ಚು ಮಾಡಿದವರಾಗಿರಲಿಲ್ಲ. ದಿಲ್‍ದಾರ್ ಮನುಷ್ಯನೆಂದೆ ಹೆಸರಾಗಿದ್ದರು. ಆದರೆ ಈಗ ಬರುತ್ತಿರುವ ಪೆನ್‍ಶನ್ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಾಗಿ ಅವರಲ್ಲಿ ಒಂದು ರೀತಿಯ ಹತಾಶೆ ಆಗಾಗ ಪ್ರಕಟಗೊಳ್ಳುತ್ತಿತ್ತು. ಅಮ್ಮ ಸಮಾಧಾನಿಸುತ್ತಿದ್ದರು.ಈಗ ಸ್ವಲ್ಪ ಸಹನೆ ಇದ್ದರೆ ಮುಂದೆ ಎಲ್ಲ ಒಳಿತಾಗುವುದೆಂಬ ಆಶಾವಾದ ಅವರದಾಗಿತ್ತು.

ಶಾಲೆ ಬಿಟ್ಟು ಕೃಷಿಗೆ ತನ್ನ ಒಪ್ಪಿಸಿಕೊಂಡ ಎರಡನೇ ಅಣ್ಣ ಹಾಗೂ ಅಮ್ಮ ಆಳುಗಳೊಂದಿಗೆ ಗದ್ದೆಯ ಕೆಲಸಗಳಿದ್ದಾಗ ಹೊರಟು ಹೋಗುತ್ತಿದ್ದರು. ಆಗ ಪ್ರಾಥಮಿಕ ಹಂತದಲ್ಲಿ ಕಲಿಯುತ್ತಿದ್ದ ನಾನು ನನ್ನ ಎರಡನೇ ಅಕ್ಕ ಮನೆಯ ಕೆಲಸಗಳನ್ನು ಮಾಡಿ ಶಾಲೆಗೆ ಹೋಗುವ ಅನಿವಾರ್ಯತೆ. ನಾನಾಗ ಮೂರು ನಾಲ್ಕನೇ ತರಗತಿ. ನನಗಿಂತ ಎರಡೂವರೆ ವರ್ಷಕ್ಕೆ ಹಿರಿಯಳಾದ ಅಕ್ಕ ಅಮ್ಮ ಹಾಕಿಟ್ಟ ಮಸಾಲೆ ರುಬ್ಬಿ ಕೊಡುತ್ತಿದ್ದಳು. ನಾನು ಮನೆಯ ನೆಲ ಗುಡಿಸಿ ಒರೆಸಿ ಹೋಗಬೇಕಿತ್ತು. ಅಮ್ಮ ಅಡುಗೆ ಮಾಡಿಟ್ಟು ಗದ್ದೆಗೆ ನಡೆದುಬಿಡುತ್ತಿದ್ದರು. ನಾವು ಬೆಳಿಗ್ಗೆ ನಮ್ಮ ಪಾಲಿನ ಮನೆಗೆಲಸ ಮುಗಿಸಿ ತಿಂಡಿ ತಿಂದು ಶಾಲೆಗೆ ಹೋಗುತ್ತಿದ್ದೆವು.

ತಂದೆ ಅನಾರೋಗ್ಯದ ನಡುವೆಯೂ ಆಗಾಗ ಹೊಲದ ಕಡೆ ಹೋಗಿಬರುತ್ತ, ಆಳುಕಾಳುಗಳ ಲೆಕ್ಕಾಚಾರ, ಇಡುತ್ತಾ ಕೆಲವೊಮ್ಮೆ ಬೇಸರವಾದಾಗಲೆಲ್ಲ ಊರ ಅಂಗಡಿ ಕಡೆ ಹೋಗಿ ಒಂದಿಷ್ಟು ಹೊತ್ತು ಪಟ್ಟಾಂಗ ಬಿಗಿದು ಬರುತ್ತಿದ್ದರು. ಆದರೆ ಅವರು ತೃಪ್ತರಾಗಿರಲಿಲ್ಲ. ನೌಕರಿ ಮಾಡುವಾಗಿನ ಖುಷಿ ಮನೆಯಲ್ಲಿ ಉಳಿದರೆ ಆಗದು ಎನ್ನುತ್ತಿದ್ದರು.

ಅದಾಗಲೇ ದೊಡ್ಡಕ್ಕ ಎಸ್. ಎಸ್ ಎಲ್ ಸಿ ಗೆ ಬಂದು ತಲುಪಿದ್ದಳು.ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದ ಅವಳಿಗೆ ಪ್ರಾಥಮಿಕ ಶಾಲಾ ಶಿಕ್ಷಕ ತರಭೇತಿಗೆ ಹಾಕುವ ನಿರ್ಧಾರ ಮಾಡಲಾಯಿತು. ಎಸ್ ಎಸ್ ಎಲ್ ಸಿ ನಂತರ ಎರಡು ವರ್ಷಗಳ ತರಭೇತಿ ಕೋರ್ಸ ಅದು. ಆಕೆಯದೇ ಕೊನೆಯ ಬ್ಯಾಚ್. ಯಾಕೆಂದರೆ ಆನಂತರ ಟಿ.ಸಿ.ಎಚ್‍ಗೆ ಕೂಡಾ ಪೂರ್ವ ವಿದ್ಯಾರ್ಹತೆಯನ್ನು ಪಿಯುಸಿ ಮಾಡಲಾಯಿತು. ಬೇಗ ನೌಕರಿ ಸಿಗುವ ಅಲ್ಲದೇ ಹೆಣ್ಣು ಮಕ್ಕಳಿಗೆ ಯೋಗ್ಯವಾದ ಕೆಲಸ ಮಾಸ್ತರಿಕೆ ಎಂಬ ಮನೋಭಾವ ಬೇರೂರಿದ್ದ ಕಾಲವದು. ಅದಕ್ಕೆಂದೆ ಆಕೆಯನ್ನು ಆ ಕೋರ್ಸಿಗೆ ಸೇರಿಸಲಾಯಿತು. ದೊಡ್ಡ ಅಣ್ಣ ಪದವಿ ಮುಂದುವರೆಸಿದ್ದ. ಮನೆಯಲ್ಲಿ ಹಣದ
ಮುಗ್ಗಟ್ಟು.

ಅಮ್ಮನ ಬಂಗಾರದ ಒಡವೆಗಳು ನಿಧಾನವಾಗಿ ಪೆಟಾರಿಯಿಂದ ಒಂದೊಂದಾಗಿ ಖಾಲಿಯಾಗತೊಡಗಿದವು ಹೊರತು ಯಾರೊಂದಿಗೂ ಹಣಕ್ಕಾಗಿ ನನ್ನಮ್ಮ ಅಪ್ಪ ಕೈಚಾಚಿರಲಿಲ್ಲ. ತಂದೆ ನೌಕರಿಯಲ್ಲಿದ್ದಾಗ ಅಮ್ಮ ಬಂಗಾರಿಯಾಗಿಯೇ ಮೆರೆದಿದ್ದಳು. ನಮ್ಮೂರಿನಲ್ಲಿ ಯಾರ ಬಳಿಯೂ ಇಲ್ಲದಷ್ಟು ಹೇರಳ ಬಂಗಾರ ಅವರ ಬಳಿಯಿತ್ತು. ಅದು ತಂದೆಯ ಪ್ರೇಮದ ಕಾಣಿಕೆಗಳಾಗಿದ್ದವು. ಯಾವತ್ತೂ ಅಪ್ಪ ನನ್ನಮ್ಮನ ಬಂಗಾರದ ಆಸೆಯನ್ನು ಹುಸಿ ಮಾಡಿರಲಿಲ್ಲ.ನಮ್ಮೂರಿನ ಯಾವ ಹೆಣ್ಣು ತೊಡದ ಆಭರಣ ತೊಟ್ಟ ಹೆಮ್ಮ ಅಮ್ಮನದಾಗಿತ್ತು. ಆದರೆ ತಂದೆಯ ಔಷಧಿಗಾಗಿ, ಆಗತಾನೇ ಚಿಗುರುತ್ತಿದ್ದ ಮನೆಯ ಕೃಷಿ ಕಾರ್ಯಗಳಿಗಾಗಿ,ಮಕ್ಕಳ ಶಿಕ್ಷಣಕ್ಕಾಗಿ ಹಣದ ಅಗತ್ಯವಿದ್ದ ಕಾಲವದು. ಬಂಗಾರದ ಕಿವಿ ಲೋಲಕ, ಹೆರಳಿನ ಕ್ಲಿಪ್ಪುಗಳು,ತುರುಬಿನ ಆಭರಣ ಮಾರಲಾಯಿತು. ಅಮ್ಮ ಮಕ್ಕಳ ಶ್ರೇಯೋಭಿಲಾಷಿ. ಹಾಗಾಗಿ ಬಹುತೇಕ ಹೆಂಗಸರಂತೆ ಬಂಗಾರದ ಆಶೆ ಇದ್ದರೂ, ಕಾರ್ಯಕ್ಕೊದಗುವ ವಸ್ತುವಾಗಿಯೇ ಅದನ್ನು ನೋಡುತ್ತಿದ್ದ ಅವರ ಪ್ರಬುದ್ಧತೆ ಶ್ರೇಷ್ಠವಾಗಿತ್ತು. ಬಂಗಾರವನ್ನು ನನ್ನಮ್ಮ ಆಪತ್ ಧನವೆಂದು ಆಗಾಗ ಹೇಳುತ್ತಿದ್ದರು. ಹಣ ಕೈಗೆ ಬರುತ್ತಲೂ ಅಕ್ಕನ ಶಿಕ್ಷಣ ಮುಂದುವರೆಯಿತು.

ಅದೇ ಸಮಯಕ್ಕೆ ಕೃಷಿ ಕೆಲಸಕ್ಕೆ ಅನುಕೂಲವಾಗಲೆಂದು ಗದ್ದೆಯಲ್ಲಿ ಬಾವಿಯೊಂದನ್ನು ತೋಡುವ ನಿರ್ಧಾರ ಮಾಡಿದ್ದರು ತಂದೆ. ಮನೆ ಮತ್ತು ತೋಟಕ್ಕ ವಠಾರದಲ್ಲಿರುವ ಬಾವಿಯ ನೀರು ಸಾಲುತ್ತಿರಲಿಲ್ಲ. ಸುಮಾರು ಎರಡು ನೂರು ತೆಂಗಿನ ಗಿಡಗಳನ್ನು ಹಾಕಲಾಗಿತ್ತು. ತೋಟಕ್ಕೆ ನೀರಿನ ಅಭಾವ ಕಾಡತೊಡಗಿತ್ತು. ಹಾಗಾಗಿ ಗದ್ದೆಯಲ್ಲಿ ಇನ್ನೊಂದು ಬಾವಿ ತೋಡಿಸುವ ವಿಚಾರ ಸಮಂಜಸವೇ ಅಗಿತ್ತು. ಆದರೆ ಹಣದ ಸಂಕಷ್ಟ ಹೇಳತೀರದು. ಆಗ ಕೂಡ ಆಪತ್ ಧನವಾಗಿ ಬಳಕೆಯಾದದ್ದು ಅಮ್ಮನ ಆಭರಣ ತೋಳಬಂಧಿ. ಇಂದಿಗೆ ಸುಮಾರು ಲಕ್ಷಾಂತರ ಬೆಲೆಬಾಳುವ 10 ತೊಲೆ ತೂಗುವ ಅದನ್ನು ಬರಿಯ ಹತ್ತು ಸಾವಿರಕ್ಕೆ ಮಾರಲಾಯಿತು. ಆ ದಿನ ಮಾತ್ರ ನನ್ನಮ್ಮನ ಕಣ್ಣಲ್ಲಿ ಸಣ್ಣಗೆ ಕಣ್ಣೀರು ಜಿನುಗುತ್ತಲೇ ಇತ್ತು. ತೋಟದ ಬೆಳೆ ಬಂದ ಮೇಲೆ ಪುನಃ ಮಾಡಿಸಿಕೊಡುವ ಭರವಸೆ ನೀಡಿ ಪ್ರೀತಿಯಿಂದ ಸಂತೈಸಿದ್ದರು ಅಮ್ಮನನ್ನು ತಂದೆ. ಯಾಕೆಂದರೆ ಅದು ಅಮ್ಮ ಬಹು ಇಷ್ಟದ ಒಡವೆ ಎಂಬುದು ಅವರಿಗೂ ತಿಳಿದಿತ್ತು. ಆದರೆ ಅವರಿಗೆ ಕೊನೆವರೆಗೂ ಅದನ್ನು ಮರಳಿ ಮಾಡಿಕೊಡಲು ಆಗಲೇ ಇಲ್ಲ. ಕಾರಣ ದಿನಗಳೆದಂತೆ ಬಂದೆರಗಿದ ಕಷ್ಟಗಳು ಸಂಸಾರದ ನೊಗ ಹೊತ್ತ ತಂದೆಯ ಹೆಗಲ ಮೇಲೆ ಒಜ್ಜೆಯಾಗಿದ್ದವು. ಅನಾರೋಗ್ಯ ನಡುವೆಯೂ ಅಪ್ಪ ಜವಾಬ್ದಾರಿಗಳಿಂದ ನುಣುಚಿಕೊಂಡಿರಲಿಲ್ಲ.

ಮನೆಯಲ್ಲಿ ಕೊನೆಯವಳಾದ ನಾನು ಸದಾ ತಂದೆತಾಯಿಯ ಆಪ್ತ ಸಂಭಾಷಣೆಗಳಿಗೆ ಸಾಕ್ಷಿಯಾಗಿರುತ್ತಿದ್ದೆ. ಇದು ನನಗೆ ಈ ಎಲ್ಲ ಸಂಗತಿಗಳು ನೆನಪಿರಲು ಕಾರಣವೂ ಆಗಿರಬಹುದು. ಅದೆಂತಹ ಬಂಧವಿತ್ತು ಅವರಿಬ್ಬರ ನಡುವೆ ಎಂಬುದೇ ಖುಷಿಯ ಸಂಗತಿ. ತಂದೆಯ ಲಹರಿ ಅಮ್ಮನ ಹುಸುಮುನಿಸು ನಡುವೆ ಬದುಕಿನ ಏರಿಳಿತಗಳು. ಇದೆಲ್ಲ ನೆನಪಾದರೆ ಮಧ್ಯವಯಸ್ಸಿನಲ್ಲಿ ನನ್ನ ತಂದೆ ತಾಯಿ ಎಷ್ಟೊಂದು ಸಾಂಸಾರಿಕ ಜಂಜಡಗಳಿಂದ ಜರ್ಜರಿತರಾಗಿದ್ದರು ಎಂದೆನ್ನಿಸುತ್ತದೆ. ನಾವಿಂದು ನಡುವಯಸ್ಸಿನಲ್ಲಿ ಅಂತಹ ಸಂಸಾರದ ಚಿಂತೆಗಳಿಂದ ಮುಕ್ತರಾಗಿರುವುದು ಅವರ ಶ್ರಮ, ತ್ಯಾಗದಿಂದಲೇ ಅಲ್ಲವೇ? ಎಂದೆನ್ನಿಸುವುದು. ಅವರಿಗೇನೂ ಕಷ್ಟಪಡುವ ಅಗತ್ಯವಿರಲಿಲ್ಲ. ಬಂದ ಪೆನ್ಷನ್ ಹಣದಿಂದ ಸರಳವಾಗಿ ಇದ್ದುದರಲ್ಲಿ ತಿಂದುಂಡು ಬದುಕಬಹುದಿತ್ತು. ಆದರೆ ಅವರು ಬದುಕನ್ನು ಶ್ರಮದ ನೆಲೆಯಲ್ಲಿ ಕಂಡವರು, ಸದಾ ಮಕ್ಕಳ ಮುಂದಿನ ಜೀವನಕ್ಕಾಗಿ ತಾವು ಕಷ್ಟದ ಬದುಕನ್ನು ಆಯ್ದುಕೊಂಡರು.

ನಾಗರೇಖಾ ಗಾಂವಕರ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 2 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 1 week ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 1 week ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...

 • 2 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...


Editor's Wall

 • 15 August 2018
  1 day ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  1 week ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  2 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  3 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...