Share

ಕ್ಯಾಲೆಂಡರ್ ಬದಲಾಯಿತು!
ಸುಧಾ ಶರ್ಮಾ ಚವತ್ತಿ ಕಾಲಂ

 

 

 

 

ವಿಕಸನ ಎಂದೋ ಆಗಿಹೋಗುವುದಲ್ಲ. ವಿಕಸನ ನಿರಂತರವಾಗಿ ನಮ್ಮೊಳಗೇ ಕ್ಷಣ ಕ್ಷಣವೂ ಆಗುವಂತಹದ್ದು. ವಿಕಸನ ಒಂದು ಹಂತ ಅಲ್ಲ. ವಿಕಸನ ಒಂದು ಪ್ರಾಸೆಸ್. ನಮ್ಮ ಇಡೀ ಬದುಕೇ ವಿಕಸನಕ್ಕಿರುವ ಅವಕಾಶ.

“ಹೊಸ ವರ್ಷಕ್ಕೆ ಏನು ಪ್ಲಾನ್?” ಎಂದು ಸಹಜವಾಗಿ ಯಾರಾದರೂ ಕೇಳಿದರೂ ನನ್ನ ಬಳಿ ಉತ್ತರವಿಲ್ಲ. “ಏನೂ ಇಲ್ಲ” ಎನ್ನಬೇಕು. ಇನ್ನೂ ಹೆಚ್ಚೆಂದರೆ “ಹೊಸ ಕ್ಯಾಲೆಂಡರ್ ತೂಗುಹಾಕಬೇಕು” ಎನ್ನಬೇಕು. ಇಷ್ಟು ಬಿಟ್ಟರೆ ಬೇರೆ ಇಲ್ಲ.

ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಅಂಗಡಿಗಳಲ್ಲಿ, ಮಾಲ್‍ಗಳಲ್ಲಿ, ಹೊಸ ವರ್ಷದ ಭರಾಟೆ ನೋಡಿದರೆ, ಇದು ನಿಜಕ್ಕೂ ಒಳಗಿನಿಂದ ಹುಟ್ಟುವ ಸಂಭ್ರಮವಾ? ಅಥವಾ ಸಂಭ್ರಮಿಸಬೇಕೆಂಬ ಹಂಬಲವಾ?

ಹೊಸ ವರ್ಷದ ಉನ್ಮಾದ, ಅಪಘಾತದಲ್ಲಿ ಕೊನೆಯಾಗುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆಸ್ಪತ್ರೆಯ ಟ್ರಾಮಾ ಸೆಂಟರ್‍ಗಳು ಹೊಸ ವರ್ಷದ ಹಿಂದಿನ ರಾತ್ರಿ ಅಪಘಾತಕ್ಕೊಳಗಾಗಿ ಬರುವವರಿಗಾಗಿ ಕಾಯುತ್ತಾರೆ. ನನಗೆ ಇದು ಉತ್ಪ್ರೇಕ್ಷೆ ಅನ್ನಿಸುತ್ತಿತ್ತು. ಆದರೆ ಅಂಕಿ ಅಂಶ ತೋರಿಸಿದಾಗ ನಂಬಲೇಬೇಕು. ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆದು ಕಣ್ಣು ಕಳೆದುಕೊಳ್ಳುವವರದ್ದೂ ಇದೇ ಕಥೆ. ಯಾಕೆ ಹೀಗಾಗತ್ತೆ? ಸ್ವತ: ನಮ್ಮ ಬದುಕು ಇಷ್ಟು ಅಮೂಲ್ಯವೆಂದು ನಮಗೇ ಅರಿವಾಗದೇ ಹೋಯಿತೇ?

ದೈಹಿಕವಾಗಿ ಅದರಲ್ಲೂ ಜೈವಿಕವಾಗಿ ನೋಡಿದರೆ ನಾವು ಮನುಷ್ಯರು ಉಳಿದೆಲ್ಲ ಪ್ರಾಣಿಗಳಿಗಿಂತ ವಿಶೇಷವಾದವರು. ವಿಕಾಸವಾದದಲ್ಲಿ ಮನುಷ್ಯನ ದೇಹ ರಚನೆಯ ಎಲ್ಲ ಹಂತಗಳೂ ಮುಗಿದವು. ಈಗ ಕೇವಲ ಆಗಬೇಕಾದದ್ದು ಸ್ಯಕೋ ಸೋಶಿಯೋ ಎವಲ್ಯೂಷನ್. ಅಂದರೆ ಮನುಷ್ಯ ತನ್ನ ಒಳಗೆ ಹಿಗ್ಗುವ ಮೂಲಕ, ವಿಕಸಿಸುವ ಮೂಲಕ ತಾನು ಬದುಕುವ ಸಮಾಜವನ್ನು, ತನ್ನ ಸುತ್ತಲಿನದನ್ನೂ ವಿಕಸಿಸುತ್ತ ಸಾಗುವುದು. ಸರಳವಾಗಿ ಇದನ್ನೇ ಎಲ್ಲ ಸಾಹಿತ್ಯಕೃತಿಗಳೂ ವಿಕಸನ ಎಂದು ಕರೆದವು. ಸಾಹಿತ್ಯ, ಸಂಗೀತ, ಎಲ್ಲ ಕಲೆಗಳೂ ಮನುಷ್ಯನನ್ನು ವಿಕಸನದೆಡೆಗೆ ಕರೆದೊಯ್ಯುವ ಸಾಧನವಾದವು.

ವಿಕಸನ ಎಂದೋ ಆಗಿಹೋಗುವುದಲ್ಲ. ವಿಕಸನ ನಿರಂತರವಾಗಿ ನಮ್ಮೊಳಗೇ ಕ್ಷಣ ಕ್ಷಣವೂ ಆಗುವಂತಹದ್ದು. ವಿಕಸನ ಒಂದು ಹಂತ ಅಲ್ಲ. ವಿಕಸನ ಒಂದು ಪ್ರಾಸೆಸ್. ನಮ್ಮ ಇಡೀ ಬದುಕೇ ವಿಕಸನಕ್ಕಿರುವ ಅವಕಾಶ. ನಿತ್ಯ ಬದುಕಿನಲ್ಲಿ ನಾವು ಎದುರಿಸುವ ಎಲ್ಲ ಸಮಸ್ಯೆ, ಸವಾಲು, ಸಂಕಷ್ಟಗಳನ್ನು ನಾವು ಹೇಗೆ ನೋಡುತ್ತೇವೋ ಅದು ವಿಕಸನಕ್ಕೆ ರಹದಾರಿ ತೆರೆಯುತ್ತದೆ. ಗೊಣಗುತ್ತ, ಬಯ್ಯುತ್ತ, ನನಗೊಂದೇ ಹೀಗಾಗಬೇಕಾ ಎನ್ನುತ್ತ, ಸ್ವಯಂ ಮರುಕದಲ್ಲಿ, ಸಿಟ್ಟು, ದ್ವೇಷ, ಅರಿತೋ ಅರಿಯದೆಯೋ ಸ್ವಾರ್ಥದಲ್ಲಿ ನಾವು ಬದುಕುವುದು ಕೇವಲ ಜೀವಿಸುತ್ತಿದ್ದೇವೆ ಎನ್ನುವುದ್ನು ಸ್ಪಷ್ಟಪಡಿಸುತ್ತದೆ. ಆದರೆ ನಮ್ಮ ಆಯ್ಕೆ ವಿಕಸಿಸಬೇಕು ಎಂದಾದರೆ ನಮ್ಮ ಬದುಕಿನ ಎಲ್ಲ ಸಂಕಷ್ಟ, ಸಮಸ್ಯೆ ಸವಾಲುಗಳನ್ನು ನಾವು ನೋಡುವ ರೀತಿಯೇ ಬದಲಾಗುತ್ತದೆ. ಇಂತಹ ದೃಷ್ಟಿಕೋನದ ಬದಲಾವಣೆಯೇ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ವ್ಯಕ್ತಿ, ವ್ಯಕ್ತಿ ನಡುವಿನ ಸಂಬಂಧ ಈಗಿರುವ ಬಹುದೊಡ್ಡ ಸವಾಲು. ಈ ಸವಾಲನ್ನು ಸುಲಭವಾಗಿ ಎದುರಿಸಲು ಇರುವ ಮಾರ್ಗವೇ ನಾವು ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳುವುದು. ನಾವು ಹೇಗೆ ನೋಡುತ್ತೇವೋ ಅವರು ಹಾಗೆ ಕಾಣುತ್ತಾರೆ. ನಾನು ಕಪ್ಪು ಕನ್ನಡಕ ಹಾಕಿಕೊಂಡು ನೋಡಿದರೆ ಕಪ್ಪಗಾಗಿಯೇ ಕಾಣುತ್ತಾರೆ. ಹೊಸ ವರ್ಷಕ್ಕೆ ಹೊಸ ಕನ್ನಡಕದ ಹಾಗೆ ಹೊಸ ದೃಷ್ಟಿಯಿಂದ, ದೃಷ್ಟಿಕೋನದಿಂದೆಲ್ಲರನ್ನೂ, ಎಲ್ಲವನ್ನೂ ನೊಡೋದಕ್ಕೆ ಪ್ರಯತ್ನಿಸೋಣ.

“ವನಸುಮದಂತೆ ವಿಕಸಿಸಲಿ ಎನ್ನ ಮನ” ಯಾಕೋ ಈ ಸಾಲು ಪದೇ ಪದೇ ನೆನಪಾಯಿತು. ಕಾಡಿನಲ್ಲಿ ಅರಳಿ ನಿಂತ ಹೂವಿಗೆ ಯಾರಾದರೂ ತನ್ನನ್ನು ನೋಡಲಿ, ಹೊಗಳಲಿ ಎನ್ನುವುದಿರುವುದಿಲ್ಲ. ಕಾಡಿನ ಹೂವು ಯಾರ ಮುಡಿಗಾದರೂ ಸರಿ, ಯಾರ ಅಡಿಗಾದರೂ ಸರಿ ಅದಕ್ಕೆ ವ್ಯತಾಸವಿಲ್ಲ. ಇಷ್ಟಕ್ಕೂ ಅದು ಯಾರಿಗಾಗಿಯೂ ಅರಳಲಿಲ್ಲ. ಅರಳುವುದು ಅದರ ಸಹಜ ಧರ್ಮ. ಯಾವ ಹೂವಿಗೂ ತಾನು ದೊಡ್ಡದು, ಚಿಕ್ಕದು ಇತ್ಯಾದಿ ಭೇದ ಇಲ್ಲ. ಗುಲಾಬಿಯ ಪಕ್ಕ ಅರಳಿದ ಪುಟ್ಟ ತುಂಬೆ ಹೂ ಕೂಡ ಅನುಪಮವೇ…

ಹೂವಿನಂತಹ ಹೂವು ಬದುಕಿನ ಸಾರ್ಥಕ್ಯಕ್ಕೆ ಮಾದರಿಯಂತೆ ನಿಂತಿದೆಯಲ್ಲ. ನಮಗೇನಾಗಿದೆ?

ಸುಧಾ ಶರ್ಮಾ ಚವತ್ತಿ

‘ಒದ್ದೆ ಕಣ್ಣುಗಳ ಪ್ರೀತಿ’ ಕವನಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. ‘ಆವಿಯಾಗಿದೆ ಮಾತು’ (ಮಲ್ಲಿಗೆ), ‘ಷೇರೆಂಬ ಮಾಯಾಂಗನೆ’ ( ವಿಜಯ ಕರ್ನಾಟಕ ), ‘ಪ್ರಾಫಿಟ್ ಪ್ಲಸ್’ (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...