Share

ಮೌನದೊಳಗಿನ ಮಾತದು ನಿನಗೂ ಕೇಳೀತು
ಮುದ್ದು ತೀರ್ಥಹಳ್ಳಿ

 

 

 

ಕವಿಸಾಲು

 

 

 

 

ಪಾಪಿ ಪದ್ಯಗಳು

ನಾನು ಒಂದು ಸುಳ್ಳು ಹೇಳಿದೆ
ನಂತರ
ಸುಳ್ಳೇ ನನ್ನನ್ನು ಹೇಳಿಸಿಕೊಂಡು ಹೋಯಿತು!

~

ಪ್ರಶ್ನೆಪತ್ರಿಕೆಯಲ್ಲಿ
“ಮೋಸ” ಎಂಬುದಕ್ಕೆ
ಅರ್ಥ ಕೇಳಿದ್ದರು
ನನಗೆ ಉತ್ತರ ಗೊತ್ತಿರಲಿಲ್ಲ
ಪ್ರ್ಯಾಕ್ಟಿಕಲ್ ಆಗಿ ಕೇಳಿದ್ದರೆ
ಮಾಡಿ ತೋರಿಸಬಹುದಿತ್ತು!!

~

ವರು
“ಸುಳ್ಳು ಹೇಳಬೇಡ” ಎಂದರು
ನಾನು ಸುಳ್ಳು ಹೇಳಲಿಲ್ಲ
ಆದರೆ
ಸತ್ಯಗಳನ್ನೆಲ್ಲ ಬಚ್ಚಿಟ್ಟೆ!

~

ವರು ದೊಡ್ಡ ದೊಡ್ಡದನ್ನೇ
ದಾನ ಮಾಡಿದರು
ಈಗವರು ಬಹುದೊಡ್ಡ ವ್ಯಕ್ತಿ!
ನಾನು ಸಣ್ಣಾತಿಸಣ್ಣ ವಿಷಯದಲ್ಲೂ
ಉಳಿತಾಯ ಮಾಡಿದೆ
ಈಗಲೂ ನಾನು
ಚಿಲ್ಲರೆಯಾಗಿಯೇ ಉಳಿದುಬಿಟ್ಟೆ..!!

~

ವರಿಗೆ
ಜೀವದ ಮೇಲೆ
ಅತಿಹೆಚ್ಚು ಪ್ರೀತಿ
ಜೀವನದ ಮೇಲಲ್ಲ!

~

ಮೊದ ಮೊದಲು
ತಪ್ಪು ಮಾಡಿದಾಗ
ನಾನು ‘ಪಶ್ಚಾತ್ತಾಪ’ ಪಡಲಿಲ್ಲ
ಈಗ ನನ್ನ ಶಬ್ದಕೋಶದಲ್ಲಿ
ಆ ಪದವೇ
ಉಳಿದಿಲ್ಲ!

~

ಪ್ರಪಂಚವೆಲ್ಲ ಉಲ್ಟಾಪಲ್ಟಿ
ಆಗಿಬಿಟ್ಟಿದ್ದರೆ
ಎಷ್ಟು ಚೆನ್ನಾಗಿರುತ್ತಿತ್ತು!
ಆಗ,
ಸಹಾಯ ಮಾಡಿದವ
ತಾನು ಮಾಡಿದುದನ್ನೆಲ್ಲ ಮರೆತಿರುತ್ತಿದ್ದ,
ಮತ್ತು ಸಹಾಯ ಪಡೆದವ
ಉಪಕಾರಗಳನ್ನೊಂದೂ ಬಿಡದೆ
ನೆನಪಿಟ್ಟುಕೊಳ್ಳುತ್ತಿದ್ದ!!

~

ಡ್ಡಿ, ಚಕ್ರಬಡ್ಡಿಗೆ ಸಾಲ ಕೊಡುತ್ತಾ
ಮರಿಮಕ್ಕಳಿಗೂ ಆಗುವಷ್ಟು
ಆಸ್ತಿ ಸಂಪಾದಿಸಿದೆ;
ಮದುವೆಯ ವಯಸ್ಸಿಗೆ ಬಂದ
ನನ್ನ ಮಕ್ಕಳಿಬ್ಬರೂ
ದುರಂತದಲ್ಲಿ ತೀರಿಹೋದರು!

~

ಲೆಕ್ಕವಿಲ್ಲದಷ್ಟು
ಪಾತಕಗಳನ್ನು ಮಾಡಿದ ನಾನು
ಕಡು ಪಾಪಿಯೇ ಸರಿ!
ಅಂಗಳದಲ್ಲಾಡುವ
ಎಳೆ ಮಗುವ ಕಂಡು ಕರುಬುತ್ತೇನೆ;
ಜೊತೆಗೆ
ಅದೆಲ್ಲಿ ದೊಡ್ಡದಾಗಿಬಿಡುತ್ತದೋ ಎಂಬ
ಆತಂಕದಿಂದ ಮರುಗುತ್ತೇನೆ!!

~

ನಾನು ಕದ್ದೆ
ಸಿಕ್ಕಿಬಿದ್ದಾಗ
ಕಳಕೊಂಡೆ!

~

ನ್ನ ಆಯಸ್ಸು
ಬಲು ದೊಡ್ಡದು ಗೊತ್ತಾ?
ನೂರುಕಾಲ ಬಾಳಿದೆ
ನರಳುತ್ತ!

~

ಹೌದು
ನಾನೊಬ್ಬ ಖದೀಮ
ಹಾಗಾಗಿಯೇ
ದೇವರಲ್ಲಿ
ಪ್ರಾರ್ಥಿಸುತ್ತೇನೆ
ಕದ್ದುಮುಚ್ಚಿ !!

~

 

 

 

 

 

 

 

 

 

 

ಗುರುತು

ಗುರುತು ಉಳಿಸಿ ಹೋಗುವಂಥದ್ದು
ಏನಾದರೂ ಮಾಡಬೇಕು
ಅವಷ್ಟೋ ಸಾಧನೆಗಳಿಲ್ಲಿ
ತಮ್ಮ ತಮ್ಮ ಗುರುತುಳಿಸಿ ಹೋಗಿವೆ
ಹಾಗೆಯೇ ಈ ಹೆಜ್ಜೆಗುರುತುಗಳ ಇಲ್ಲಿ ಊರಬೇಕು
ಅದಕ್ಕೂ ಮೊದಲು ಕಾಲುಗಳ ಗಟ್ಟಿಗೊಳಿಸಬೇಕು

ಗುರುತು ಉಳಿಸುವುದು ಒಂದಾದರೆ
ಗುರುತಿಸಿಕೊಳ್ಳುವಂಥದ್ದೂ ಮತ್ತೊಂದಿದೆ
ಅದಕೆ ಅಸಂಖ್ಯ ದಾರಿಗಳೂ ಇವೆ,
ಅದರ ತುಂಬಾ ಜನದಟ್ಟಣೆಯೂ ಇದೆ
ಜನದಟ್ಟಣೆಯಿದ್ದಲ್ಲಿ ಕಾಲ್ತುಳಿತವೂ ಇರುತ್ತದೆ

ಗುರುತು ಹಿಡಿಯುವುದೂ ಒಂದಿದೆ
ಹಂಚಿನ ಮನೆಯೊಂದು ಬಂಗಲೆಯಾದಾಗ
ಪ್ರಭಾವ ಧನ-ಕಾಂಚನ ದೊಡ್ಡದಾದ ವಾಹನ
ಇವೆಲ್ಲವಿದ್ದಲ್ಲಿ ಗುರುತು ಹತ್ತುತ್ತದೆ ಬೇಗನೆ
ಇಲ್ಲವಾದಲ್ಲಿ ಬರುವುದು ಜಾಣ ಕುರುಡು ಮರೆವು
ಅದಕ್ಕಾಗಿಯೇ ಗುರುತಿನ ಚೀಟಿಯೊಂದಿದೆ
ನೋಡಿದಾಗ ಗುರುತು ಚೀಟಿಯಲ್ಲಿನ ಭಾವಚಿತ್ರಪಟ
ನಮ್ಮನು ನಾವು ಗುರುತಿಸುವುದೇ ಕಷ್ಟ
ಇರುತ್ತದೆ ಕತ್ತಿನಲ್ಲಿ ತನ್ನ ಪಾಡಿಗೆ ನೇತಾಡುತ್ತ
ವರುಷಗಳಿಂದ ಸೆಕ್ಯುರಿಟಿಯವ ಗುರುತು ಪರಿಚಯವುಂಟು
ಆದರೂ ಗುರುತು ಚೀಟಿಯಿಲ್ಲದೆ ತೆಗೆಯುವುದಿಲ್ಲ ಗೇಟು

ಗುರುತು ಕಾರ್ಡಿನ ಅಗತ್ಯ ಯಾವಾಗಲೂ ಇರುವುದಿಲ್ಲ
ಈ ಜನ ನಮ್ಮ ಊನಗಳನ್ನೇ ಗುರುತಾಗಿಟ್ಟುಕೊಳ್ಳುತ್ತಾರೆ

ನಾನಂತೂ ಈ ಶಹರಕ್ಕೆ ಕಾಲಿಟ್ಟ ಪ್ರತಿಬಾರಿಯೂ
ಕಳೆದುಹೋಗುತ್ತಲೇ ಇರುತ್ತೇನೆ
ಎಲ್ಲರೆನ್ನುತ್ತಾರೆ ಬಿಲ್ಡಿಂಗು ಕಟೌಟುಗಳ ನೆನಪಿಟ್ಟುಕೋ
ನಾನು ನೆನಪಿಡುತ್ತೇನೆ ಆದರವು ಪ್ರತಿದಿನಕ್ಕೂ
ತಮ್ಮ ಗುರುತು ಬದಲಾಯಿಸುತ್ತವೆ!

ಈ ಗುರುತುಗಳ ಅಷ್ಟು ಸುಲಭಕ್ಕೆ ನಂಬಬೇಡಿ
ಆಳವಾದ ಗಾಯದ ಗುರುತುಗಳು
ಜೀವಮಾನಪರಿಯಂತ ಕಾಡಿಯಾವು
ಅಳಿಸಲಾಗದ ಗುರುತುಗಳು ನಮ್ಮನ್ನೇ ಅಳಿಸಿಯಾವು
ಗುರುತಿರುವವರೇ ಗುರುತುಗಳ ಮಾಡಿಯಾರು…

ಅದಕ್ಕೇ
ಗುರುತು ಪರಿಚಯವಿಲ್ಲದ
ಒಂದು ಬಯಲಲ್ಲಿ ಮನೆಮಾಡಿ
ಅಲ್ಲೊಂದು ಗುರುತುಳಿಸಿ ಹೋಗುವಾಸೆ…

~

ಮೌನ ಮಾತು

ಮಾತುಗಳೆಲ್ಲ ತೇಲುವ ಗಾಳಿಯಾಗಿ
ಮತ್ತು ಮೌನವು ಹರಿವ ನೀರಾಗಿ…
ಹರಿವ ನೀರಿಗೆ ಜುಳು ಜುಳು ರವ
ತೇಲುವ ಗಾಳಿಯದು ಸದ್ದಿರದ ನೀರವ
ಆದರೂ
ಮಾತುಗಳೆಲ್ಲ ತೇಲುವ ಗಾಳಿಯಾಗಿ
ಮೌನವು ಹರಿವ ನೀರಾಗಿ…

ಹಾಡಿದ್ದು ಖುಷಿಯಲ್ಲಿ ಕೇಕೆಹಾಕಿ ಕಿರುಚಾಡಿದ್ದು
ಮಂದಾನಿಲವಾಗಿ ಕಚಗುಳಿಯಿಡುವಂತೆ
ಪಿಸುಗುಟ್ಟಿದ್ದು
ಮಾತನಾಡಿದ್ದು, ಭಾಷಣ ನೀಡಿದ್ದು
ಅನಂತದ ಸಂದೇಶವಿಟ್ಟು ದಿಗಂತದೆಡೆಗೆ ತೇಲಿ
ಮತ್ತೊಂದಷ್ಟು ಬಿರುಗಾಳಿ, ಸುಂಟರಗಾಳಿಯಾಗಿ
ಮನೆ ಮಠಗಳ ಮರಗಿಡಗಳ ಬುಡಹತ್ತ ಕಿತ್ತು ಚೆಲ್ಲಾಡಿ
ಗಾಳಿಯಲಿ ಊರು ಕೇರಿ ತಿರುಗುವುದು..

ಹರಿವ ನೀರನು ತಂದು ಎಲ್ಲಿ ಸುರಿದರೂ
ಅದರದೇ ಆಕಾರವ ತಳೆವುದು
ಮೌನವೊಮ್ಮೆ ಸಮ್ಮತಿಯ ಲಕ್ಷಣವಾಗಿ
ತಾಳ್ಮೆಯಾಗಿ ತ್ಯಾಗವಾಗಿ, ಒಲವಾಗಿ ಬಲವಾಗಿ
ಕ್ಷಮೆಯಾಗಿ ಭ್ರಮೆಯಾಗಿ, ಕೊನೆಗೊಮ್ಮೆ ಸಾವಾಗಿ
ಪರಿತಪಿಸುವ ಪಶ್ಚಾತ್ತಾಪವಾಗಿ
ಕರುಣೆಯಾಗಿ ಕಣ್ಣೀರಾಗಿ..

ಒಮ್ಮೊಮ್ಮೆ ಬಿಸಿಯಾಗಿ,
ಯಾರಿಗೂ ಕೇಳದಂತೆ ಕೊತಕೊತ ಕುದಿದು
ಮತ್ತೊಮ್ಮೆ ಚೂರಿಯಾಕಾರದ ಅಚ್ಚೊಳಗೆ
ಘನವಾಗಿ ಮಂಜುಗಡ್ಡೆಯಾಗಿ
ಆಯುಧವಾಗಿ ತಿವಿಯಲೂಬಹುದು
ಅದೇ ಮಂಜುಗಡ್ಡೆ
ನೋವ ಶಮನಗೊಳಿಸಲೂ ಬಹುದು

ನನ್ನಲ್ಲೀಗ
ಗುಟುಕರಿಸಿದ ಹರಿವು ಒಳಗೆ
ನಿಡುಸುಯ್ದ ಗಾಳಿ ಹೊರಗೆ

~

ನಾನು ಮೌನವಾಗಿದ್ದೇನೆ

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ಮಾತಾಡುತ್ತಿರುವ ನೀನು
ಹೇಳುತ್ತಿರುವುದಷ್ಟೇ ಸತ್ಯವೆಂದು

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ನನ್ನಲ್ಲಿ
ಜ್ಯೋತಿ ಬೆಳಗುವುದಿಲ್ಲವೆಂದು

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ನನ್ನೆದೆಯೊಳಗೆ
ಕತ್ತಿ ಕೂರ್ದಸಿಗಳ ಮಸೆದಿರಿಸಿಕೊಂಡಿದ್ದೇನೆಂದು

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ನಾನು
ಕೇವಲ ಒಂದು ಶೂನ್ಯವೆಂದು

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ನನ್ನೆದೆ
ಪಸೆಯಿಲ್ಲದ ಬರಡು ಬೆಂಗಾಡೆಂದು

ನಾನು ಮೌನವಾಗಿದ್ದೇನೆ
ಎಂದರದರರ್ಥವಲ್ಲ ನನಗೆ
ಮಾತೇ ಬಾರದೆಂದು

ನಾನು ಮೌನವಾಗಿದ್ದೇನೆ
ಯಾಕೆಂದರೆ ನೀನು ಮಾತನಾಡುತ್ತಿದ್ದೀಯಾ
ಮತ್ತು ಕಲ್ಲಿಗೆ ಕಲ್ಲು ತಾಕಿ ಜ್ವಾಲೆಯೇಳುವುದೆಂದು

ನಾನು ಮೌನವಾಗಿದ್ದೇನೆ
ಕ್ಷಣಕಾಲ ನೀನೂ ಮೌನವಾಗು
ಮೌನದೊಳಗಿನ ಮಾತದು ನಿನಗೂ ಕೇಳೀತು ಎಂದು!

ಮುದ್ದು ತೀರ್ಥಹಳ್ಳಿ

ಕಾನೂನು ವಿದ್ಯಾರ್ಥಿನಿ. ಕನ್ನಡ, ಕೊಂಕಣಿ ಭಾಷೆಗಳಲ್ಲಿ ಬರೆಯುತ್ತಾರೆ. ಕಾಡ ಹಾದಿಯ ಹೂಗಳು, ಒಂದು ಚಂದ್ರನ ತುಂಡು, ಕಾನನ ಕಲರವ, ಎಷ್ಟು ಬಣ್ಣದ ಇರುಳು ಹಾಗೂ ಹೂ ಗೊಂಚಲು ಇವರ ಕನ್ನಡ ಕೃತಿಗಳು. ‘ಕಾಡ ಹಾದಿಯ ಹೂಗಳು’ ಕಾದಂಬರಿ ಅದೇ ಹೆಸರಲ್ಲಿ ಚಲನಚಿತ್ರವಾಗಿದೆ. ಕೊಂಕಣಿಯ ನಮಾನ್ ಬಾಳೋಕ್ ಜೆಜು ಪತ್ರಿಕೆಗೆ ಕಳೆದ ನಾಲ್ಕು ವರ್ಷಗಳಿಂದ ಅಂಕಣ ಬರೆಯುತ್ತಿದ್ದಾರೆ. ‘ಮಂದಾನಿಲ’ ಎಂಬ ಪತ್ರಿಕೆಯನ್ನು ಐದು ವರ್ಷ ನಡೆಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಲಬುರ್ಗಿ ಹತ್ಯೆ ಖಂಡಿಸಿ ಈ ಪ್ರಶಸ್ತಿಯನ್ನು ಮರಳಿಸಿದ್ದಾರೆ), ಕಾವ್ಯಾನಂದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಜ್ಯೋತಿ ಪುರಸ್ಕಾರ ಹಾಗೂ ಶಾರದಾ ಆರ್ ರಾವ್ ಮತ್ತು ಕರಿಯಣ್ಣ ದತ್ತಿ ಪ್ರಶಸ್ತಿಗಳು, ಬೇಂದ್ರೆ ಗ್ರಂಥ ಬಹುಮಾನ, ಅರಳು ಮೊಗ್ಗು ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಅಡ್ವೈಸರ್ ಪ್ರಶಸ್ತಿ ಬಂದಿವೆ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...