Share

ವಾವ್ ಎಷ್ಟು ಚಂದ ಎಂದುಕೊಂಡರೆ ಬದುಕೆಲ್ಲ ಸೊಗಸೇ!
ಅರ್ಚನಾ ಎ ಪಿ

 

 

 

ಕೆಲವೊಂದನ್ನು ಅದಿರುವ ಹಾಗೇ ನೋಡೋದನ್ನು ಕಲಿಯಬೇಕು. ಆಗಲೇ ಬದುಕು ಚಂದ.

 

 

 

ಹಾಂ ವಹಾಂ ಫಿಜಾ ಮೆ ಆವಾರಾ…
ಅಭೀ ತಲಕ್ ಯೇ ದಿಲ್ ಹೈ ಬೇಚಾರಾ…
ಜವಾಬ್ ಸಾ ಕಿಸೀ ತಮನ್ನಾ ಕಾ…
ಲಿಖಾ ತೋ ಹೈ ಮಗರ್ ಅಧೂರಾ ಸಾ…

ಅಧೂರಾ ಸಾ…
-ಏನೋ ಒಂದು ಕೊರತೆ, ಎಲ್ಲಾ ಇದ್ದೂ ಅದ್ಯಾವುದೋ ಇದ್ದಿದ್ರೆ ಅನ್ನೋ ಆಸೆ, ಕುತೂಹಲ, ಹಂಬಲ… ಒಟ್ನಲ್ಲಿ ಸಮಯಕ್ಕೆ ಬೈಯ್ತಾ, ಅದೇ ಸಮಯವನ್ನು ಕಳೆಯಲು ಬೇಡದ ವಿಚಾರಗಳಲ್ಲಿ ‘ತೊಡಗಿಸಿಕೊಳ್ಳೋದು’
ಹೇಗೆ???
ಹೇಗೆಂದರೆ,
ಈಗಂತೂ ಅಂಗೈಯಲ್ಲೇ ಪ್ರಪಂಚ ದರ್ಶನ ಮಾಡಿಸೋ, ಮೂಲೋಕವೆಲ್ಲಾ ಮೈವೆತ್ತಂತೆ ಭಾಸವಾಗೋ ತಂತ್ರಜ್ಞಾನದ ಪರಮಾಪ್ತ ಸಾಥಿ ಇದೆಯಲ್ಲಾ… ಅದೇ ಜಂಗಮವಾಣಿ…
ಅದರ ನಂತರದ ಸರದಿ ಮೂರ್ಖರ ಪೆಟ್ಟಿಗೆಯದ್ದು…
ನಿಜ. ಈ ದೂರದರ್ಶನ ಅನ್ನೋದು ಪ್ರಾರಂಭ ಆಗಿದ್ದು, ಜನರಲ್ಲಿ ಆರೋಗ್ಯದ ಬಗ್ಗೆ, ಸರ್ಕಾರದ ಕಾರ್ಯ ಕ್ರಮಗಳ ಬಗ್ಗೆ, ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸೆ ಬಗ್ಗೆ, ಜಾಗೃತಿ ಮೂಡಿಸೋದಕ್ಕೆ. ಆದರೆ ಈಗ ಇದನ್ನೆಲ್ಲಾ ಬದಿಗಿಟ್ಟು, ತನ್ನ ಮೂಲೋದ್ದೇಶವನ್ನೇ ಮರೆತು ತೀರಾ ವಿರುದ್ಧ ದಿಕ್ಕಿಗೆ ಪ್ರಯಾಣಿಸ್ತಿದೆ, ನಮ್ಮನ್ನೂ ತನ್ನ ಸೆಳೆವಿನಲ್ಲಿ ಎಳೆದುಕೊಂಡು…

ಆದರೆ ಈ ಸೆಳವು, ಸುಳಿಯಲ್ಲಿ ಸಿಕ್ಕಿಸೋದ್ರ ಜೊತೆಗೆ, ಒಮ್ಮೊಮ್ಮೆ ಧುತ್ತೆಂದು – ಸಮುದ್ರ ಮಥನದಲ್ಲಿ ಏನೇನೋ ಅಮೂಲ್ಯ ವಸ್ತುಗಳು ಬಂದ್ವು ಅಂತ ಕಥೆ ಕೇಳಿರೋ ಪ್ರಕಾರ, ವಿಸ್ಮಯಗಳನ್ನು ನಮ್ಮ ಮುಂದಿಡತ್ತೆ. ಮನರಂಜನೆಯ ಉದ್ದೇಶ, timepassನ ಗುರಿ, ಬೇರೇನೂ choice ಇಲ್ಲದಿರುವಿಕೆ, ಹೀಗೆ ಈ ಲೋಕದಲ್ಲಿ ಮುಳುಗಿರುವವರಿಗೆ, ಮುಳುಗುವವರಿಗೆ ಬಹುಶಃ ಇದರ ಅರಿವಾಗಿರಲಿಕ್ಕಿಲ್ಲ…
ಆದರೆ, ಕಲೆಗಾರನಿಗೆ ಪ್ರಕೃತಿಯ ಕಣಕಣದಲ್ಲೂ ಸೌಂದರ್ಯವೇ ಕಾಣೋ ಹಾಗೆ, ನೋಡುವವರಿಗೆ ಮಾತ್ರ ನೋಟದಲ್ಲಿ ತಾವು ವೀಕ್ಷಿಸಬಹುದಾದದ್ದು ಕಂಡೇ ಕಾಣತ್ತೆ.

ಉದಾಹರಣೆಗೆ,
ಅದೊಂದು ಪ್ರಸಿದ್ಧ ಮೊಬೈಲ್ ನೆಟ್‌ವರ್ಕ್ ಒಂದರ ಜಾಹೀರಾತು. ಎಷ್ಟು ಮನೋಜ್ಞವಾಗಿ ಮಾಡಿದ್ರು ಅಂದರೆ… ಮಗನನ್ನು ತುಂಬಾ ಪ್ರೀತಿಸೋ ತಂದೆ, ತಂದೆಯನ್ನು ಅದಕ್ಕಿಂತಲೂ ಹೆಚ್ಚು ಗೌರವಿಸೋ ಮಗ. ತಂದೆಗೆ ತನ್ನ ಕೆಲಸದ ಮೇಲೆ ಮರುಭೂಮಿಯ ಪ್ರದೇಶಕ್ಕೆ ಬಹಳ ದಿನಗಳ ಕಾಲ ಹೋಗಬೇಕಾಗಿ ಬಂದಿರತ್ತೆ. ಒಂದ್ ಸಾರಿ ತುಂಬಾ ಒತ್ತಡದ ಸಮಯದಲ್ಲಿ ಇದ್ದಾಗ, ಅಧಿಕಾರಿಗಳೊಂದಿಗೆ ಉರಿಬಿಸಿಲಲ್ಲಿ ನಿಂತು ಕೆಲಸದ ಗಂಭೀರ ಚರ್ಚೆಯಲ್ಲಿದ್ದಾಗ, ಮಗನ ಫೋನ್ ಕಾಲ್ ಬರತ್ತೆ. ಸ್ವಲ್ಪ ಇರುಸುಮುರುಸಿನಿಂದಲೇ ಸ್ವೀಕರಿಸಿ ಮಾತಾಡೋಷ್ಟರಲ್ಲಿ ಆ ಕಡೆಯಿಂದ ಕೇಳಿಬಂದದ್ದು ಮಳೆ ಹನಿಗಳ ಕಲರವ, ಮಂಜುಳನಾದ, ತಂದೆಯ ಮುಖದಲ್ಲಿ ಮಂದಹಾಸ, ಮಗನ ಮುಖದಲ್ಲಿ ತೃಪ್ತಿ…

ಇಲ್ಲಿ ಯಾವುದರಲ್ಲೂ, ‘ಅಧೂರಾ ಸಾ’ ಅನ್ನುವ ಮಾತಿಲ್ಲ, ಕೊರತೆಯಿಲ್ಲ…

ಹಾಗೇ,
ಪ್ರಾಣಿಗಳ ಲೋಕದ್ದೊಂದು ಅಚ್ಚರಿ…
ಅದನ್ನು ಸೆರೆಹಿಡಿದವರೂ ಅತ್ಯಂತ ಭಾವುಕರಾದ ಕ್ಷಣ…
ಆದದ್ದಿಷ್ಟೆ:
ಇಷ್ಟೇ ಅಂದರೆ ತಪ್ಪಾಗತ್ತೆ.
ಆಗ ತಾನೇ ಹುಟ್ಟಿದ ಜಿಂಕೆ ಮರಿಯೊಂದು ತನ್ನ ತಾಯಿಂದ ಬೇರೆ ಆಗಿಬಿಟ್ಟಿದೆ. ಹುಡುಕುತ್ತಾ ಹುಡುಕುತ್ತಾ ತಾಯಿಂದ ವಿರುದ್ಧ ದಿಕ್ಕಿನಲ್ಲಿ ನಡೀತಾ ಇದೆ. ಹೀಗೆ ಹೊಗಬೇಕಾದರೆ ಎದುರಾದದ್ದು ಹೆಣ್ಣು ಹುಲಿ. ಎಲ್ಲರ ಎದೆ ಬಡಿತ ಒಂದ್ ಕ್ಷಣ ನಿಂತುಹೋದ ಅನುಭವ. ಮುಗೀತು ಆ ಮರಿಯ ಕಥೆ, ಹುಲಿಬಾಯಿಗೆ ಆಹಾರ ಆಗೇ ಬಿಡತ್ತೆ ಅಂತ ಕಣ್ಣೆವೆ ಮಿಟುಕಿಸದೆ ನೋಡ್ತಿದ್ರೆ… ಹುಲಿ ಹತ್ತಿರ ಹತ್ತಿರ ಬರ್ತಾ ಇದೆ…ಬರ್ತಾ ಇದೆ… ಬಂದು‌ ಹಿಡಿದೇ‌ ಬಿಡ್ತು.
ಕೊಂಚ ಕಣ್ಣು ಮಿಟುಕಿಸುವಷ್ಟರಲ್ಲಿ ಅರೇ ಇದೇನಾಶ್ಚರ್ಯ!!!
ಅದರ ಹಿಡಿತ ಸಡಿಲಾಗ್ತಾ ಇದೆ, ಬಿಟ್ಟೂ ಬಿಡ್ತು, ಮತ್ತೆ ಹಿಡೀತಾ ಇದೆ, ಬಿಡ್ತಿದೆ…
ಅದರ ಹಿಡಿತದಲ್ಲಿ ಮರಿಗೆ ಸಾವು ತರೋ ಕ್ರೌರ್ಯವಾಗಲೀ, ಅಥವಾ ತನ್ನ ಆಹಾರ ಅನ್ನೋ ಅಹಂಕಾರ ಎರಡೂ ಕಾಣ್ತಿಲ್ಲ.
ಬದಲಾಗಿ, ತಾಯಿಯ ಗರ್ಭದಿಂದ ಹೊರಬರುವಾಗ ಉಳಿದ ಪೊರೆಯನ್ನೆಲ್ಲಾ ನೆಕ್ಕುತ್ತಾ ತನ್ನ ಮರಿಯಂತಲೇ ಕಾಣ್ತಿದೆ. ಇಷ್ಟು ಪ್ರೀತಿ ಸಿಕ್ಕರೆ ಮರಿಗೆ, ತನ್ನ ತಾಯಿಯೇ ಅಥವಾ ಹಿತೈಷಿಯೇ ಇರಬೇಕೆಂದು ಹಾಲು ಕುಡಿಯಲು ಹವಣಿಸಿದಾಗ, ಸಾಧ್ಯ ಆಗಲೇ ಇಲ್ಲ.
ಹೀಗೇ ಬಹಳ ಹೊತ್ತು ನಡೀತು…
ಬಹುಶಃ ಹುಲಿಗೆ ಹೊಟ್ಟೆ ತುಂಬಿದ್ದಿರಬೇಕು. ಹಸಿವಾದ್ರೆ ತಿಂದೇ ತಿನ್ನತ್ತೆ ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಇನ್ನೊಂದು ವಾರದಲ್ಲಿ ಅಂತ ಕಾದಿದ್ದೇ ಬಂತು…
ಊಹೂಂ.
ಹನಿ ರಕ್ತ ಬರದಂತೆ ಬಾಯಲ್ಲಿ ಮರಿಯನ್ನು ಹಿಡಿದು ಅಲ್ಲಿಂದಿಲ್ಲಿಗೆ ಕೊಂಡೊಯ್ಯುತ್ತಿತ್ತು, ಆಟವಾಡುತ್ತಿತ್ತು, ಸಮಯ ಕಳೆಯುತ್ತಿತ್ತು… ಕಣ್ಣಿಂದ ಮರೆಯಾಗಲು ಬಿಡುತ್ತಲೇ ಇರಲಿಲ್ಲ. ತಿನ್ನಲು ಬಂದ ಗಂಡು ಹುಲಿಗಳೊಂದಿಗೆ ಸೆಣಸಾಡಿ ಗಾಯಗೊಂಡರೂ ಮರಿಗೆ ಮಾತ್ರ ಆಹುತಿಯಾಗಲು ಬಿಡಲಿಲ್ಲ.

ಇವೆಲ್ಲದರ ಮಧ್ಯೆ ನಡೆದ ಮುಖ್ಯವಾದ ಮತ್ತೊಂದು ಸಂಗತಿ ಎಂದರೆ, ಮರಿ ಸಿಕ್ಕ ಕ್ಷಣದಿಂದ ಊಟವನ್ನೇ ಮಾಡಿರಲಿಲ್ಲ, ಬೇಟೆಯಾಡಿರಲಿಲ್ಲ. ಹೀಗೆ ಮೂರು ವಾರ ಕಳೆದು ತಿಂಗಳು ಪೂರ್ತಿಯಾಗುವಷ್ಟರಲ್ಲಿ ಮರಿ ತನ್ನ ಪ್ರಾಣ ಕಳೆದುಕೊಂಡಿತು.

ಮತ್ತೂ ನೋವಿನ ವಿಚಾರವೆಂದರೆ,
ಇದಾದ ಕೆಲವೇ ದಿನಗಳಲ್ಲಿ ಹುಲಿಯೂ ಪ್ರಾಣ ಬಿಟ್ಟಿತ್ತು. ಈ ಕುರಿತು ಮನಃಶಾಸ್ತ್ರಜ್ಞರೂ, ಪ್ರಾಣಿ ಶಾಸ್ತ್ರಜ್ಞರೂ, ಇಂದಿಗೂ ಅಧ್ಯಯನ ನಡೆಸುತ್ತಲೇ ಇದ್ದಾರೆ.
ಆದರೆ ಯಾವುದೇ ತೀರ್ಮಾನಕ್ಕೆ ಬರುವ ಲಕ್ಷಣಗಳಿಲ್ಲ.

ಅಲ್ಲಾ…
ತೀರ್ಮಾನಗಳಿಗೆ ಯಾಕಾದರೂ ಬರಬೇಕು?? ಇದು ಹೀಗೆ ಅಂದುಬಿಟ್ಟರೆ ಮುಗೀತಾ?? ಇಲ್ಲ. ಅದು ಹೇಗೆ ಅಂತ ಮತ್ತೆ ಹುಡುಕಾಟ ಶುರು. ಹುಡುಕಾಟದಿಂದಲೇ ಬೆಂಕಿ. ಚಕ್ರದ ಆವಿಷ್ಕಾರದಿಂದ ಶುರುವಾಗಿ, ಭಾವನೆಗಳನ್ನು ವ್ಯಕ್ತಪಡಿಸುವ, ತನಗೂ ಸಂಗಾತಿ ಬೇಕು ಅಂತ ಕೇಳೊ ರೋಬೋ ಸುಂದರಿಯವರೆಗಿನ ಎಲ್ಲಾ ಸಂಶೋಧನೆಗಳು ನಡೆದಿರೋದು, ನಡೆಯುತ್ತಿರೋದು.

ಆದರೆ,
ಕೆಲವೊಂದನ್ನು ಅದಿರುವ ಹಾಗೇ ನೋಡೋದನ್ನು ಕಲಿಯಬೇಕು. ಆಗಲೇ ಬದುಕು ಚಂದ, ಸುಂದರ.
ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆಯನ್ನು ಪ್ರೀತಿಸ್ತಾ ಹೋದ ಹಾಗೆ, ಸಜ್ಜನಿಕೆ, ವಿನಯವನ್ನು ಮೈಗೂಡಿಸಿಕೊಳ್ತಾ ಹೋಗ್ತೀವಿ. ಯಾರೂ ಕೂಡಾ ದುಃಖದಲ್ಲಿ ಓಡಾಡಬೇಕು, ಅಳ್ತಾ ಕೂತಿರಬೇಕು ಅಂತ ಬಯಸ್ತೀವಾ? ಖಂಡಿತವಾಗಿ ಇಲ್ಲ.

ಹಾಗಂತ ಖುಷಿಯಾಗಿರುವವರೆಲ್ಲರೂ, ಅಥವಾ ನಗುನಗುತ್ತಾ ಇರೋರೆಲ್ಲರ ಜೀವನದಲ್ಲಿ ಕಣ್ಣೀರಿಗೆ ಅವಕಾಶವೇ ಇಲ್ಲ ಅಂತಾನಾ… ಹಿಂಸೆ, ಕಿರಿಕಿರಿ, ದ್ವಂದ್ವ ಇಲ್ಲ ಅನ್ನೋ ಅರ್ಥಾನಾ? ಅಲ್ಲ. ದುಃಖದಲ್ಲಿದ್ರೂ ಅದು ಇರೋಷ್ಟು ದಿನ ಇರತ್ತೆ. ನಗ್ತಾ ಇದ್ದರೂ ಇರೋಷ್ಟು ದಿನ ಇರತ್ತೆ. ಹಾಗಿದ್ಮೇಲೆ ನಗ್ತಾನೇ ಅದನ್ನು ಸ್ವೀಕರಿಸೋಣ ಅಲ್ವಾ? ಅದೇ ಹೇಳ್ತಾರಲ್ಲ… ಶೀತ ಆದ್ರೆ ಒಂದ್ ವಾರ ಪ್ರಾಣ ತಿನ್ನತ್ತೆ. ಔಷಧ ಮಾಡಿದ್ರೆ ಏಳು ದಿನಗಳಲ್ಲಿ ವಾಸಿ ಆಗತ್ತೆ ಅಂತ; ಹಾಗೆ.

ಪ್ರತೀ ಕ್ಷಣವನ್ನೂ,
ಸಿಗೋ ಪ್ರತೀ ವಸ್ತುವನ್ನೂ,
ಎದುರಾಗೋ ಪ್ರತೀ ಸಂಬಂಧವನ್ನೂ,
ವಾವ್ ಎಷ್ಟು ಚಂದ ಅಂದುಕೊಂಡು, ಸಮಸ್ಯೆಗಳಿಂದ ಮೂಡ್ ಹಾಳಾಗದಂತೆ ಇಷ್ಟದ ಕೆಲಸವನ್ನು ಎಂಜಾಯ್ ಮಾಡೋ ನಿರ್ಧಾರವಿದೆ…

ನೋಡೋಣ ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದೋ…

ಖೂಬ್ ಸೂರತ್ ಬಾತ್ ಯೇ…
ಚಾರ್ ಪಲ್ ಕಾ ಸಾಥ್ ಯೇ…
ಸಾರೀ ಉಮರ್ ಮುಝುಕೋ ರಹೇಗಾ ಯಾದ್…

ಮೈ ಅಕೇಲೀ ಹೂಂ ಮಗರ್…
ಬನ್ ಗಯಾ ವೋ ಹಮ್ ಸಫರ್…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...