Share

‘ಹೊಡಿ ನಕಲಿ ಊಸರವಳ್ಳಿ’ ಠರಾವು!

 

‘ಮೊದ್ಲು ಕೈಹಾಕ್ಬೇಕಿರೋದು ನಾಲ್ಗೆಗೇ’ ಅಂತು ಆ ಕಡೇ ಊಸರವಳ್ಳಿ.

 

ನ್ಕಥೆ ಎಂದು ಬಾಯಿ ಕಳಕೊಂಡು ಕೂತಿದ್ದ ಭಾಗವತ. ಗೂಗಲ್ ಗೊತ್ತಿಲ್ಲದ ಅವನು ನೋಡುವುದೇನಿದ್ದರೂ ಗಾಗಲ್ ಮೂಲಕವೇ. ಅದೂ ಬಂಡಿಹಬ್ಬ ಅಥವಾ ಇನ್ನಾವುದೋ ಜಾತ್ರೆಗಳ ಹೊತ್ತಲ್ಲಿ ಚಿಲ್ಲರೆ ಕಾಸಿಗೆ ಸಿಗೋ ಗಾಗಲ್. ಇಂಥ ಗಾಗಲ್ಲುಗಣ್ಣುಗಳಿಗೆ ಕಾಣುವ ಥರಾವರಿ ಬಣ್ಣಗಳ ಕಲಸುಮೇಲೋಗರದ ನೋಟಕ್ಕೆ ಭಾಗವತ ಈ ಜಗತ್ತಿಗೆ ಬೇಕಾದ ಪಾಠಗಳನ್ನೆಲ್ಲ ಹೇಳುವವ ತಾನೇ ಎಂಬ ಗರ್ವವನ್ನೂ ಲೇಪಿಸಿಕೊಂಡು ಕೂರುವನು ಯಾವಾಗಲೂ.

ಹೀಗೆ ಕೂತಿರಬೇಕಾದರೆ ಕಂಗಾಲಾಗುವಂಥದ್ದೊಂದು ಅವನ ಬಣ್ಣದ ಕನ್ನಡಕದ ಆಚೆಯಿಂದ ರಾಚಿತು. ಎದುರಿಗಿದ್ದ ಬೇಣದ ತುಂಬ ಒತ್ತೊತ್ತಾಗಿ ಬೆಳೆದಿದ್ದ ಗೇರುಗಿಡಗಳ ನಡುವೆ ಬಿಸಿಲ ನೆರಳು ಬೆಳಕಿನಾಟದಲ್ಲಿ ಕಂಡ ಆ ದೃಶ್ಯ ಏನೆಂಬುದೇ ಕೆಲವು ಕ್ಷಣಗಳವರೆಗೆ ಬಗೆಹರಿಯಲಿಲ್ಲ ಭಾಗವತನಿಗೆ.

ಒಂದು ಎರಡು ಮೂರು ನಾಲ್ಕು… ಥತ್ ಎಂದುಕೊಂಡ. ಎಣಿಸಿಯೇಬಿಡುವೆ ಎಂದುಕೊಂಡವನಿಗೆ ಒದೆಕೊಡುವ ಹಾಗೆ ಅಲ್ಲಿ ಗೇರುಗಿಡಗಳ ಟಿಸಿಲುಗಳ ನಡುವೆ ದೃಶ್ಯ ಕ್ಷಣಕ್ಷಣಕ್ಕೂ ಬದಲಾಗ್ತಾ ಇತ್ತು. ಎಂಥದು ಎಂದರೆ, ಅದೆಲ್ಲಿಂದ ಬಂದಿದ್ದವೊ ಅಷ್ಟೊಂದು ಊಸರವಳ್ಳಿಗಳು ಅಲ್ಲಿ ನೆರೆದುಬಿಟ್ಟಿದ್ದವು.

ಈ ಭಾಗವತನನ್ನು ಬಿಡಿ ಸೇದುವುದಕ್ಕೆ ಬಿಟ್ಟು, ಅ್ಲಲೇನಾಗ್ತಿದೆ ಎಂದು ನೋಡುವುದಾದರೆ-

ಊಸರವಳ್ಳಿ 1: ಅಲ್ಲಾ, ಬಣ್ಣ ಬದಲಿಸೋದು ನಮ್ ವಿದ್ಯೆ ಅಂದ್ಕೊಂಡ್ರೆ ಆ ಅವ್ನೊಬ್ಬ ಯಕಃಶ್ಚಿತ್ ಮನುಷ್ಯ ನಮ್ಗಿಂತ ಸ್ಪೀಡಾಗಿ ಬಣ್ಣ ಬದಲಿಸೋಕ್ಕೆ ನಿಂತಿದ್ದಾನಲ್ಲ!

ಊಸರವಳ್ಳಿ 2 : ತೊಟ್ಕೊಂಡಿರೋದೆಲ್ಲ ಕಿತ್ಬಿಸಾಕಿ ಬತ್ಲೆ ನಿಂತಿದ್ದಾನೆ. ತಾನು ಕಣ್ಕಟ್ಕೊಂಡು ಜಗತ್ತಿಗೆಲ್ಲ ತನ್ನ ಅಪರಾವತಾರ ತೋರಿಸ್ತಾ ಇದ್ದಾನೆ.

ಊಸರವಳ್ಳಿ 3: ಅದೂ ನಡುಬೀದೀಲಿ.

ಊಸರವಳ್ಳಿ 4: ಮಾನ ಮರ್ಯಾದೆಯೇ ಇಲ್ಲ ನೋಡಿ.

ಊಸರವಳ್ಳಿ 5: ಆದ್ರೆ ನಾಲ್ಗೆ ಇದ್ಯಲ್ಲ ಊದ್ದಕ್ಕೆ.

ಈ ಮಾತಿಗೆ ಊಸರವಳ್ಳಿಗಳೆಲ್ಲ ಗಹಗಹಿಸಿ ನಕ್ಕವು. ತಲೆ ಎತ್ತೆತ್ತಿ ಅವು ನಗುವ ಪರಿಗೆ ಗೇರುಗಿಡಗಳೂ ತಲೆದೂಗಿದವು.

ಈಗ ಮೊದಲ ಊಸರವಳ್ಳಿಯೇ ಎಲ್ಲರನ್ನೂ ಶಾಂತವಾಗಿರಲು ಸೂಚಿಸುತ್ತ,

ಊಸರವಳ್ಳಿ 1: ಅವ್ನು ಅಂತಾನಂತೆ, ತಾನು ಬದಲಿಸೋದಕ್ಕೇ ಬಂದಿರೋದು ಅಂತ.

ಊಸರವಳ್ಳಿ 2: ಹಾಂ, ಬದಲಿಸಿದ್ದಾನಲ್ಲ, ಮೈಮೇಲಿರೋದನ್ನೆಲ್ಲ ಬಿಚ್ಚಿಹಾಕ್ಕಂಡು.

ಊಸರವಳ್ಳಿ 3: ಇಲ್ಲ ಇಲ್ಲ, ಮೈಮೇಲಿರೋದನ್ನೆಲ್ಲ ಬಿಚ್ಚಿಲ್ಲ. ಅದೊಂದು ನೂಲು ಮೈಮೇಲೆ ಹೀಗೆ ಸುತ್ಹಾಕ್ಕೊಂಡು ಇದ್ಯಂತೆ.

ಊಸರವಳ್ಳಿ 4: ಇದೇ ನೋಡ್ರಿ ನನ್ನ ಐಡೆಂಟಿಟಿ. ನೀವೂ ಇಂಥದೇ ಏನಾದ್ರೂ ಒಂದು ಸರ್ಟಿಫಿಕೇಟು ತೋರಿಸ್ರಿ, ಆಗ ನಿಮ್ಮನ್ನ ನಂಬ್ತೇನೆ ಅಂತ ತನ್ನ ಚಂದಕ್ಕೆ ತಾನೇ ಬೆರಗಾಗ್ತಾ ಇದ್ದಾನಂತೆ. ಕೋಡ ಕುಣಿದ ಹಂಗೆ ಕುಣೀತಾನಂತೆ.

ಊಸರವಳ್ಳಿ 5: ಬಾಲ ಮಾತ್ರ ಇಲ್ಲ. ಆದ್ರೇನು, ನಾಲ್ಗೆ ಇದ್ಯಲ್ಲ ಊದ್ದಕ್ಕೆ.

ಮತ್ತೆ ನಕ್ಕವು ಎಲ್ಲ ಊಸರವಳ್ಳಿಗಳು.

ಊಸರವಳ್ಳಿ 1: ಈಗೊಂದು ಥರ ಆಡೋದು, ಮರುಕ್ಷಣವೇ ಎಲ್ಲಾ ಅಂಗಗಳೂ ನೆಲಕ್ಕೆ ತಾಕೋ ಹಾಗೆ ಬಿದ್ದು ಕ್ಷಮೆ ಕೇಳೋದು. ಮತ್ತೆ ಯಥಾಪ್ರಕಾರ ಬಾಲ ಬಿಚ್ಚೋದು.

ಊಸರವಳ್ಳಿ 2: ಬಾಲ ಅಲ್ಲ, ನಾಲ್ಗೆ; ನಾಲ್ಗೆ ಬಿಚ್ಚೋದು.

ಊಸರವಳ್ಳಿ 3: ಇಂಥ ನಕಲಿ ಊಸರವಳ್ಳಿಗಳಿಂದಾಗಿ ನಮ್ಮ ಕುಲಕ್ಕೇ ಅಪಾಯ ಬಂದಿರೋ ಹಾಗಿದೆ. ಯಾವುದಕ್ಕೂ ನಾವು ಹುಷಾರಾಗಿರ್ಬೇಕು.

ಊಸರವಳ್ಳಿ 4: ನಾವೀಗ ಹೊಡಿ ನಕಲಿ ಊಸರವಳ್ಳಿ ಆಪರೇಷನ್ ಶುರು ಮಾಡದೇ ಬೇರೆ ದಾರಿಯೇ ಇಲ್ಲ.

ಊಸರವಳ್ಳಿ 5: ಮೊದ್ಲು ಕೈಹಾಕ್ಬೇಕಿರೋದು ನಾಲ್ಗೆಗೇ. ನೆನಪಿಟ್ಕೊಳ್ಳಿ.

ಠರಾವು ಪಾಸಾದ ಬಳಿಕ ಊಸರವಳ್ಳಿಗಳೆಲ್ಲ ಒಂದೊಂದಾಗಿ ಚದುರಿದವು. ಇಷ್ಟು ಹೊತ್ತಿಗೆ ಗಾಗಲ್ಲನ್ನೂ ತೆಗೆದಿಟ್ಟು ಇತ್ತ ಪಿಳಿ ಪಿಳಿ ಕಣ್ಣುಬಿಡುತ್ತಿದ್ದ ಭಾಗವತ ಏನೂ ಅರ್ಥವಾಗದೆ ಕಣ್ಣುಜ್ಜಿಕೊಂಡ.

ಆಗಲೂ ಏನೂ ಅರ್ಥವಾದಂತೆ ಕಾಣಲಿಲ್ಲ.

Share

Leave a comment

Your email address will not be published. Required fields are marked *

Recent Posts More

  • 4 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 5 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 7 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

  • 18 January 2018
    7 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 15 January 2018
    1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 14 January 2018
    2 weeks ago No comment

    ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

              | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

  • 11 January 2018
    2 weeks ago No comment

    ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                        ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

  • 04 January 2018
    3 weeks ago No comment

    ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                        ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...