Share

ಪಡೆದು ಮರಳಿಸುವ ಈ ಲೆಕ್ಕದಲಿ…
ಅರ್ಚನಾ ಎ ಪಿ

 

 

 

ಪ್ರಶ್ನೆಗಳಲ್ಲಿರುವ ಅಸಹಾಯಕತೆಯ ಲೆಕ್ಕವನ್ನು ವಾಪಸು ನೀಡಲಾಗತ್ತಾ?

 

 

 

 

ಮೇರಾ ವೋ ಸಾಮಾನ್ ಲೌಟಾದೋ
ಏಕ್ ಇಜಾಜತ್ ದೇ ದೋ ಬಸ್
ಜಬ್ ಇಸಕೋ ದಫನಾಊಂಗಿ
ಮೈ ಭೀ ವಹೀ ಸೋ ಜಾಊಂಗಿ…

ಪತ್ ಝಡ್ ಕೀ ಓ ಶಾಖ್ ಅಭೀ ತಕ್ ಕಾಂಪ್ ರಹೀ ಹೈ…ವೋ ಶಾಖ್ ಗಿರಾದೋ…ಮೇರಾ ವೋ ಸಾಮಾನ್ ಲೌಟಾದೋ..

ವಾಪಸು ಕೊಡು ಅಷ್ಟೇ..
ಏನಾದರೂ ಆಗ್ಲಿ …ಅಂತ ಹಠ ಹಿಡಿದ್ರೆ ಮುಗಿದೇ ಹೋಯ್ತು..ಮಹಾಭಾರತದಲ್ಲಿ ದ್ರೌಪದಿಯ ಹಠದ ಥರಾ ಗುರಿ ಮುಟ್ಟುವವರೆಗೆ ನಿಲ್ಲೋದಿಲ್ಲ..ಅಂತಾ ಹಠ ಯಾರಿಗೆ? ಇನ್ಯಾರಿಗೆ..so called ‘ಮನಸ್ಸಿಗೆ’.
ಈಗಷ್ಟೇ ಹಿನ್ನೆಲೆಯಲ್ಲಿ ಮಾತುಗಳು ಕೇಳಿಬರ್ತಿವೆ..ಕಾಡಿನ ಮೂಲಕ ಒಬ್ಬ ಮರ ಕಡಿಯುವವ ಹೋಗ್ತಿದ್ದ. ಅಲ್ಲೊಂದು ವಯಸ್ಸಾದ ಹುಲಿ ನೋವಿನಲ್ಲಿ ಒದ್ದಾಡ್ತಿತ್ತು, ಸಹಾಯಕ್ಕಾಗಿ ಬೇಡ್ತಿತ್ತು. ನೋಡಿದ ಈತ ಹತ್ತಿರ ಹೋದಾಗ ಗೊತ್ತಾಯ್ತು, ಕಾಲಿಗೆ ಕಾಡಿನ ಮುಳ್ಳು ಚುಚ್ಚಿ ದೊಡ್ಡ ವ್ರಣವಾಗಿತ್ತು. ಮುಳ್ಳು ತೆಗೆದು ಗಿಡಮೂಲಿಕೆ ಹಚ್ಚಿ ವಾಸಿ ಆಗೋಕೆ ಸಹಾಯ ಮಾಡಿದ. ಸ್ವಲ್ಪ ದಿನ ಬಿಟ್ಟು ಹೋದಾಗ ಚೇತರಿಸಿಕೊಂಡಿತ್ತು ಹುಲಿ. ಆದರೆ ಇವನ ಕಳೆಗುಂದಿದ ಮುಖ ನೋಡಿ ಏನಾಯ್ತು ಅಂತ ಕೇಳಿತು. ಮಗಳ ಮದುವೆ ಇದೆ, ಹುಡುಗ ತುಂಬಾ ಒಳ್ಳೆಯವ. ಆದರೆ ಮದುವೆಗೆ ಹಣವಿಲ್ಲ. ಮರ ಕಡಿದು ಬರೋ ಹಣ ಊಟ ಬಟ್ಟೆಗಾಗಿಬಿಡತ್ತೆ. ಉಳಿಕೆ ಇಲ್ಲ ಅಂತ ಹೇಳಿದ. ಕೇಳಿದ ಹುಲಿ ಅವನ ಪಂಚೆ ಹಿಡಿದು ತನ್ನ ಗುಹೆಗೆ ಕೊಂಡೊಯ್ದು ಅಲ್ಲಿದ್ದ ನಗನಾಣ್ಯವನ್ನೆಲ್ಲಾ ಕೊಟ್ಟಾಗ ಮಾತು ಹೊರಡಲೇ ಇಲ್ಲ. ಪ್ರೀತಿಯಿಂದ ಮದುವೆಗೆ ಆಹ್ವಾನಿಸಿದಾಗ ನಾ ಬಂದರೆ ಜನರೆಲ್ಲಾ ಹೆದರಿ ಓಡುತ್ತಾರೆ ಬೇಡ ಅಂತು ಹುಲಿ. ಆದರೆ ಸ್ನೇಹದ ಮುಂದೆ ಸೋತು ಮದುವೆ ದಿನ ಒಂದು ಪರದೆ ಹಿಂದೆ ನಿಂತು ನೋಡುವಾಗ ಜೋರಾಗಿ ಗಾಳಿ ಬೀಸಿ ಹುಲಿ ಕಂಡು ಎಲ್ಲಾ ಚೆಲ್ಲಾಪಿಲ್ಲಿಯಾಗುವಾಗ ಇವ ಸಂತೈಸುತ್ತಿರೋವಾಗ, ಅವನ ಹೆಂಡತಿ ಇದು ಏನೂ ಮಾಡಲ್ಲ ಹುಲಿಯಲ್ಲ ಇದು ನರಿ ಅಂದದ್ದು ಕೇಳಿಸಿ ಕ್ಷಣ ಮಾತ್ರ ನಿಲ್ಲದೆ ಕಾಡಿಗೆ ಹೋಯ್ತು. ಇವ ಮರ ಕಡಿಯಲು ಹೋದಾಗ ಎದುರಾದಾಗಲೂ ಮಾತಾಡಿಸಲಿಲ್ಲ. ಏನೂ ತಿಳಿಯದ ಈತ ವಿಚಾರಿಸಿದಾಗ, ಹುಲಿ ನಿನ್ ಹತ್ತಿರ ಇರೋ ಕೊಡಲಿಯಿಂದ ನನ್ನ ಕತ್ತರಿಸಿ ಬಿಡು ಅಂತು. ದಿಗಿಲುಗೊಂಡ ಇವನು ಒತ್ತಾಯ ಮಾಡಿ ಕೇಳಿದಾಗ ನಿನ್ನ ಹೆಂಡತಿ ಹೀಗಂದ್ಲು. ನಿನ್ನ ಉಪಕಾರ ಒಂದಿರದಿದ್ದರೆ ತೋರಿಸ್ತಿದ್ದೆ ನಾನೇನು ಅಂತ… ಹೇಳಿ ಕಾಡಲ್ಲಿ ಮರೆಯಾಯ್ತು.

ವಾಪಸು ಕೊಡೋದೇನನ್ನು? ವಾಪಸು ಪಡೆಯುವ ನಿರೀಕ್ಷೆ ಆದರೂ ಯಾಕೆ?

ಕೆರೆಯಂಚಿನಲ್ಲಿ ಕಾಲಿಳಿಬಿಟ್ಟು ಕಲ್ಲೆಸೆಯುತ್ತಾ ಏಳೋ ತರಂಗಗಳನ್ನು ನೋಡ್ತಾ, ಮನಸ್ಸಿನ ತರಂಗಗಳನ್ನು ಮೇಳೈಸೋ ಪ್ರಯತ್ನವನ್ನು ವಾಪಸು ಮಾಡಲಾಗತ್ತಾ? ಲೆಕ್ಕ ಹಾಕಲಾಗತ್ತಾ?

ಸಣ್ಣ ಪುಟ್ಟ ಕಾದಾಟ, ಕಿತ್ತಾಟಗಳಾಗಿ ಮತ್ಯಾವುದೋ ಸಂದರ್ಭದಲ್ಲಿ ಒಂದಾಗಿ ಮಾತಾಡಿದಾಗ ಪ್ರತೀ ಬಾರಿಯೂ ನನ್ ಕಡೆಯಿಂದಲೇ ಆರಂಭ ಮಾತು ಅಂತ ನೀಡೋ ಭಾಗಾಕಾರದ ಗಣಿತದಲ್ಲಿ ಉಳಿಯುವ ಶೇಷವನ್ನು ಹಿಂತಿರುಗಿಸಲಾಗತ್ತಾ?

ಹಿಂದೆಲ್ಲಾ ಆದರೆ ಪತ್ರ ಬರೆಯೋ ರೂಢಿ ಇತ್ತು. ಬರೆದವರ ನೆನಪು ಬಂದಾಗಲೆಲ್ಲಾ ಪತ್ರದ ಸಖ್ಯದಿಂದ ಸಿಗ್ತಿದ್ದ ಭದ್ರತಾ ಭಾವ, ಸನಿಹದ ಸಾಂತ್ವನವನ್ನು ಪಡೆಯೋ ಸಂಬಂಧ, ಕೇಳ್ತಿದ್ದಿದ್ದನ್ನು ವಾಪಸು ಮಾಡಲಾಗತ್ತಾ?
ಈಗಿನ ವಿಷಯಕ್ಕೆ ಬಂದರೆ ಕರೆ ಮಾಡಿ ಗಂಟೆಗಟ್ಟಲೆ ಮಾತಾಡಿ ಇನ್ನೇನು ವಿದಾಯ ಸೂಚಿಸಿ ಅವರೇ ಕರೆ ಮುಗಿಸಲಿ ಅಂತ ಕಾಯೋ ಕೆಲವೇ ಕ್ಷಣಗಳ ತೃಪ್ತ ಭಾವ ಕೊಡೋ, ನಮ್ಮತನವನ್ನು ಅನುಭವಿಸೋ ಅವಕಾಶವನ್ನು ವಾಪಸು ಮಾಡಲಾಗತ್ತಾ?

ನೂರಾರು ನಿರೀಕ್ಷೆಗಳನ್ನು ಇಟ್ಕೊಂಡು, ಆಸೆಗಣ್ಣಿಂದ ಮನೆ ತುಂಬಿಕೊಂಡಾಗ, ಹಿಂದಿನದೆಲ್ಲವನ್ನೂ ಮರೆತು, ಬೆಳೆದ ಮಣ್ಣಿಂದ ಮೂಲ ಬೇರನ್ನು ಕಿತ್ತು, ಇಲ್ಲಿನ ಮಣ್ಣಿನಲ್ಲಿ ನೆಟ್ಟು ಬೆಳೆಯೋ ಛಲ ಇರೋ ಜೀವವನ್ನು ಭೂತಕಾಲದಲ್ಲಿ ಆದ ತಿಳಿಯದ ತಪ್ಪಿನಿಂದ – ಅದನ್ನು ಮುಚ್ಚಿಡದೇ ಹೇಳೋ ಧೈರ್ಯ, ಸತ್ಯ ಸಂಬಂಧವೊಂದನ್ನು ಗಟ್ಟಿ ಮಾಡತ್ತೆ ಅನ್ನೋ ನಂಬಿಕೆಯಿಂದ – ಹಿಯಾಳಿಸೋ, ಅವಮಾನಿಸೋ, ವಸ್ತುವಾಗಿ ಕಾಣೋ ಕ್ರೌರ್ಯವನ್ನೂ ಸ್ವೀಕರಿಸುವ ‘ಅನಿವಾರ್ಯತೆ’ಯನ್ನು ಹಿಂತಿರುಗಿಸಲಾಗತ್ತಾ?

ಪ್ರೀತಿಯಿಂದ, ಇಷ್ಟದ ಅಡುಗೆ ಮಾಡಿ, ಕಾಯ್ತಾ, ಬಂದ ಮೇಲೆ ಅಷ್ಟೇ ಆಸ್ಥೆಯಿಂದ ಬಡಿಸಿ, ತನಗುಳಿದಿದೆಯೋ ಇಲ್ಲವೋ ಎಂದು ನೋಡದ ಸನ್ನಿವೇಶದಲ್ಲಿರೋ ಅವಳತನವನ್ನು ಹಿಂತಿರುಗಿಸಲಾಗತ್ತಾ?
ಯಾವುದೋ ಮಂಗಳಕಾರ್ಯಕ್ಕೋ, ಸಮಾರಂಭಕ್ಕೋ, ಹೋಗುವಾಗ ಎಲ್ಲವನ್ನೂ ಸಮರ್ಪಿಸಿಕೊಂಡವಳ ಮೊಳ ಮಲ್ಲಿಗೆ ಹೂವಿನ ನಿರೀಕ್ಷೆಗೆ, ಅದಕ್ಕೆ ಬೇಕಾದ ಹಣವನ್ನೇನು ನಿನ್ನ ತವರು ಮನೆಯವರು ಕೊಟ್ಟಿದ್ದಾರಾ, ಅಥವಾ ತಂದುಕೊಡ್ತೀನಿ ಅಂತ ಅಗ್ರಿಮೆಂಟ್ ಬರೆದು ಕೊಟ್ಟಿದ್ದೀನಾ ಅಂತ ಕೇಳಿದ ಪ್ರಶ್ನೆಗೆ ಏನೂ ಆಗೇ ಇಲ್ಲ ಅನ್ನೋ ಹಾಗೆ ಮರುದಿನ ಅವರು ಬರಲು ತಡವಾದಾಗ, ಯಾಕೋ, ಏನಾಯ್ತೋ, ಅಂತ ಚಡಪಡಿಸೋದನ್ನು ಲೆಕ್ಕ ಹಾಕಿ ಹಿಂತಿರುಗಿಸಲಾಗತ್ತಾ?

ಆ ಕ್ಷಣವನ್ನು ಅಲ್ಲಲ್ಲಿಗೇ ಅನುಭವಿಸಿ ಮುಂದುವರಿಯಬೇಕು ಅಂತ ಎಲ್ಲರೂ ಹೇಳಿದ್ದನ್ನು ಕೇಳಿ ಅನುಸರಣೆಯಲ್ಲಿ ತೊಡಗಿದಾಗ, ಓಹೋ ಏನು ಮಾಡಿದರೂ ನಡೆಯತ್ತೆ, ಹೇಗೆ ನಡೆಸಿಕೊಂಡರೂ ನಡೆಯತ್ತೆ ಅಂತ ಉಪಯೋಗಿಸಿಕೊಳ್ಳುವವರನ್ನು ನೋಡಿ ನಮ್ಮ ಮೂರ್ಖತೆಗೆ ನಗಬೇಕೋ, ಮೋಸ ಹೋಗ್ತಿರೋದನ್ನೂ ತಿಳಿದು, ಇದು ಇಷ್ಟೇ ಅಂತ ಸ್ವೀಕಾರ ಮಾಡಿ ಮುಂದುವರಿಯುವ ಧನಾತ್ಮಕ ಗುಣಕ್ಕೆ, ಕಳೆಯೋ ಸಮಯದ ಬೆಲೆಯನ್ನು ಹಿಂತಿರುಗಿಸಲಾಗತ್ತಾ?

ಇವತ್ತಲ್ಲಾ ನಾಳೆ, ನಾಳೆಯಲ್ಲಾ ನಾಡಿದ್ದು, ಒಂದು ವರ್ಷ, ಎರಡು ವರ್ಷ, ಅಂತ ಜೀವನವೆಲ್ಲಾ ಕಳೆದುಬಿಡೋ ವಯಸ್ಸನ್ನು ಯಾರಿಗಾಗಿ ಕಳೆದಿರ್ತೀವಿ ಅವರಿಂದ ವಾಪಸು ಮಾಡಲಾಗತ್ತಾ? ಯಾವ್ಯಾವ ಸಮಯದಲ್ಲಿ ಏನೇನು ಆಗಬೇಕೋ, ಪ್ರಕೃತಿಸಹಜವಾಗಿ ನಡೆಯಬೇಕೋ ಅದು ಆಗದೆ, ಕರ್ಮದ ಮೊರೆ ಹೋಗಿ ಕಾದು, ಕಾಲ ಮೀರಿದ ಮೇಲೆ ಸಿಕ್ಕಾಗ, ಸಂತೋಷ ಪಡಬೇಕಾ ದುಃಖಿಸಬೇಕಾ ಅಂತ ಮೂಡೋ ಪ್ರಶ್ನೆಗಳಲ್ಲಿರುವ ಅಸಹಾಯಕತೆಯ ಲೆಕ್ಕವನ್ನು ವಾಪಸು ನೀಡಲಾಗತ್ತಾ?

ಸಂಬಂಧಗಳೆಂದರೆ,
ನೀನೂ ನಾನೂ ಸಮ, ಒಮ್ಮೆ ನಾನು ಗುಡ್ ಮಾರ್ನಿಂಗ್ ಹೇಳಿದ್ರೆ, ಮುಂದಿನ ಸಲ ಅದರ ಜವಾಬ್ದಾರಿ ನಿಂದು ಅಂತಲೋ, ನಾನು ಚಹಾ ಮಾಡಿದ್ರೆ ನೀನ್ ತಿಂಡಿ ಮಾಡಬೇಕು, ನಾನು ನನ್ನ ಸ್ನೇಹಿತರನ್ನು ಮನೆಗೆ ಕರೆದ್ರೆ, ಮುಂದಿನ ಬಾರಿ ನನ್ ಕಡೆಯವ್ರು ಬಂದಾಗ ಚಕಾರವೆತ್ತಬಾರದು ಅನ್ನೋ agreementಗಳಾಗಿ ಹೋಗ್ತಿರೋ ಸ್ಪೀಡನ್ನು ಹಿಂತಿರುಗಿಸಿ, ಮತ್ತದೇ ಹಿಂದಿನ ನಿಶ್ಚಿಂತ ಸಮಯಕ್ಕೆ ಹೋಗೋ ಟೈಮ್ ಮಷಿನ್ ಎಂಬ ಉಡುಗೊರೆಯನ್ನು ಹಿಂತಿರುಗಿಸಲಾಗತ್ತಾ?

ಗೊತ್ತಿಲ್ಲ…

ಒಟ್ಟಾರೆ ಬೇಕಾದ್ದೋ, ಬೇಡದ್ದೋ ಸಾವಿರಾರು ಪ್ರಶ್ನೆಗಳು, ‌ಉತ್ತರವಿಲ್ಲದ್ದು…
ನಾವ್ ಏನನ್ನು ಯೋಚಿಸ್ತೀವೋ ಅದನ್ನೇ ಆಕರ್ಷಿಸ್ತೀವಂತೆ..ಹೌದಾ?
ಪ್ರಶ್ನೆಗಳ ಈ ಸಿರೀಸನ್ನು ನಿಲ್ಲಿಸಲು ಉತ್ತರಗಳ ಹುಡುಕಾಟ ಶುರು ಮಾಡಿದ್ರೆ ಕಳೆದುಕೊಂಡೊರೋದು ವಾಪಸು ಸಿಗತ್ತಾ?

ಏಕ್ ಸೌ ಸೋಲಹ್ ಚಾಂದ್ ಕೆ ರಾತೇಂ
ಗೀಲಿ ಮೆಹಂದೀ ಕಿ ಖುಷುಬೂ,
ಸಬ್ ಯಾದ್ ಕರಾದೂಂ, ಸಬ್ ಭಿಜವಾದೋ..
ಮೇರಾ ವೋ ಸಾಮಾನ್ ಲೌಟಾದೋ…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 21 hours ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 1 day ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...