Share

ದೊರೆ ಏನೆಂದನು ಎಂದರೆ…

 

ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.

 

ವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ.

ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ಹೋದ ಅವನ್ಯಾವನೋ ಬಂದು ಟಿವಿ ಚಾನೆಲ್ಲುಗಳ ಮುಂದೆ ಒದರಿದ್ದೇ ತಡ, ನಾಡೇ ಕಾಡಿಗೇ ಹೋಗಿಬಿಟ್ಟಿತು. ರಾಜಕೀಯದವ್ರು ಮಾತ್ರ ಸುಮ್ಮನೇ ಇರುವರೇ? ಇಲ್ಲ. ಎಲ್ಲಾ ಪಕ್ಷದವರೂ ಅವನನ್ನು ತಮ್ಮಲ್ಲೇ ಪ್ರಮುಖ ಸ್ಥಾನಕ್ಕೇರಿಸೋಕ್ಕೆ ಒಳಗೊಳಗೇ ಪ್ಲಾನು ಮಾಡಿದರು. ಒಂದೊಂದು ಪಕ್ಷದವರೂ ಇನ್ನೊಂದು ಪಕ್ಷದವರಿಗೆ ತಿಳಿಯದ ಹಾಗೆ ಅವನ ಕಡೆಗೆ ಹೋದರು. ಅಲ್ಲಿ ಹೋದಾಗ ಮಾತ್ರ ಅವರು ಇವರನ್ನೂ ಇವರು ಅವರನ್ನೂ ನೋಡಿಕೊಂಡು ತಮ್ಮ ಕಳ್ಳಬುದ್ಧಿಯ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕೆಂದುಕೊಂಡರೆ, ಅದಿರಲೇ ಇಲ್ಲವಲ್ಲ!

ಗಡ್ಡೆ ಗೆಣಸು ತಿಂದುಕೊಂಡಿದ್ದ ಅವನು ಇವರನ್ನೆಲ್ಲ ಒಮ್ಮೆ ದಿಟ್ಟಿಸಿ ನೋಡಿದನಂತೆ. ಆಮೇಲೆ ಸ್ವಲ್ಪ ಹೊತ್ತು ಮೌನ. ಬಳಿಕ ಒಂದು ಗುಂಪಿನ ಕಡೆ ತಿರುಗಿ ನೀವು ಸಸ್ಯಾಹಾರ ಸೇವಿಸುವವರು ಅಲ್ಲವೇ ಎಂದು ಕೇಳಿದ. ಆ ಗುಂಪು ಧನ್ಯವಾದೆ ಎಂದುಕೊಂಡು ಹೌದು ಸ್ವಾಮೀ ಅಂತು. ಅವನು ಮತ್ತೊಂದು ಗುಂಪಿನ ಕಡೆ ತಿರುಗಿ ನೀವು ಮೀನು ಮತ್ತಿತರ ಪ್ರಾಣಿಗಳನ್ನು ತಿನ್ನುತ್ತೀರಲ್ಲ ಎಂದು ಕೇಳಿದ. ಆ ಗುಂಪು ಹೌದು, ಅದರೆ ನಾವು ಸಸ್ಯಾಹಾರವನ್ನೂ ತಿನ್ನುತ್ತೇವೆ ಎಂದು ಅವನನ್ನು ಓಲೈಸುವ ಯತ್ನ ಮಾಡಿತು. ನಿಮ್ಮಲ್ಲಿ ಕೆಲವರು ದನವನ್ನೂ ತಿನ್ನುತ್ತೀರಲ್ಲ ಎಂದು ಆತ ಮತ್ತೊಂದು ಪ್ರಶ್ನೆಯನ್ನು ಈಟಿಯಂತೆ ಎಸೆದ. ಗುಂಪಲ್ಲಿ ಕೆಲವರು ತಲೆತಗ್ಗಿಸಿ ನಿಂತರು.

ಇಷ್ಟಾದ ಮೇಲೆ ಅವನು ಹೇಳಿದ. ಈಗ ನಾನು ನಿಮ್ಮ ಪಕ್ಷಕ್ಕೆ ಬರಬೇಕು ಎಂಬುದು ನಿಮ್ಮ ಒತ್ತಾಯ. ಆದರೆ ಯಾರ ಕಡೆ ಬರಬೇಕು ಎಂಬುದೇ ಪ್ರಶ್ನೆ. ಇದನ್ನು ನಾನು ನಿರ್ಧರಿಸುವುದಿಲ್ಲ. ಈ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲವೂ ನಿಮ್ಮಿಂದಲೇ ನಿರ್ಧಾರವಾಗತಕ್ಕದ್ದು. ಅದಕ್ಕಾಗಿ ನಾನೀಗ ನನ್ನ ಎರಡೂ ಕೈಗಳ ಎರಡೆರಡು ಬೆರಳುಗಳನ್ನು ನಿಮ್ಮ ಮುಂದೆ ಹಿಡಿಯುತ್ತೇನೆ. ಆ ಎರಡು ಬೆರಳುಗಳಲ್ಲಿ ಒಂದನ್ನು ಎರಡೂ ಕಡೆಯವರು ಏಕಕಾಲಕ್ಕೆ ಮುಟ್ಟಬೇಕು. ಯಾವ ಬೆರಳನ್ನು ಮನಸ್ಸಲ್ಲಿಟ್ಟುಕೊಂಡು ನಾನು ಅಂದುಕೊಂಡಿರುವ ಪ್ರಕಾರ ನೀವು ಮುಟ್ಟಿದ್ದಲ್ಲಿ ನಾನು ನಿಮ್ಮ ಕಡೆಗೆ ಬರುವುದೇ ಖಚಿತ ಎಂದು ಅರ್ಥಗರ್ಭಿತವಾಗಿ ನಕ್ಕ.

ಎರಡೂ ಗುಂಪಿನವರು ಹತ್ತಿರ ಬಂದರು. ಒಂದು ಗುಂಪು ಅವನ ಬಲಗೈನ ಒಂದು ಬೆರಳನ್ನೂ ಇನ್ನೊಂದು ಗುಂಪು ಎಡಗೈನ ಒಂದು ಬೆರಳನ್ನೂ ಮುಟ್ಟಿತು. ಅವನು ಮತ್ತೆ ನಕ್ಕ. ಅಂತೂ ಸಸ್ಯಾಹಾರಿಗಳೇ ಗೆದ್ದರು ನೋಡಿ ಎಂದು ಮತ್ತೂ ಒಮ್ಮೆ ನಕ್ಕ. ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.

ಅವನನ್ನು ರಾಜ್ಯಕ್ಕೇ ದೊರೆ ಎಂದು ಸಾರಲಾಯಿತು.
ಮತ್ತು ಜನರ ಎಲ್ಲ ಆಸೆ ಆಕಾಂಕ್ಷೆಗಳೂ ಅಡಕವಾದ ಖಾಸಗಿತನವನ್ನು ಅವನಿಗೇ ಮಾರಲಾಯಿತು.

ನಿನ್ನೆಯವರೆಗೂ ಕಾಡಿನ ಗಡ್ಡೆ ಗೆಣಸು ತಿನ್ನುತ್ತಿದ್ದವನು ಸಿಂಹಾಸನ ಏರಿ ಕುಳಿತುಕೊಳ್ಳುತ್ತಿದ್ದಂತೆಯೇ ಮೊಟ್ಟಮೊದಲನೆಯದಾಗಿ, ಕಾಡಿನ ಯಾವ ಗಡ್ಡೆ ಗೆಣಸನ್ನೂ ಯಾರೂ ಈ ಕ್ಷಣದಿಂದ ತಿನ್ನುವುದಿರಲಿ, ಮುಟ್ಟಲೂಕೂಡದು ತನ್ನ ಅನುಮತಿಯಿಲ್ಲದೆ ಎಂದು ಹುಕುಂ ಹೊರಡಿಸಿಬಿಟ್ಟ.

ಮತ್ತು ಗಹಗಹಿಸಿ ನಕ್ಕ.

ಒಗ್ಗರಣೆ:

ಹಳ್ಳಿಯಲ್ಲಿ ಯಕ್ಷಗಾನ. ಬಾಲಗೋಪಾಲರು, ಕೋಡಂಗಿ ನಂತರ ಮೊದಲು ಪ್ರವೇಶವಾಗುವ ಪಾತ್ರ ಕಟ್ಟುವವನು ಎಲೆಮಾರೂ ಪೊಕ್ಕನೇ. ಅವನು ರಂಗಸ್ಥಳಕ್ಕೆ ಬಂದು ಒಡ್ಡೋಲಗದ ಕುಣಿತದಲ್ಲಿ ರಾಜಗಾಂಭೀರ್ಯದ ಅಭಿನಯದಲ್ಲಿರುವಾಗ ತೀರಾ ಮುಂದೆ ಕೂತಿರುವ ಕೆಲ ಹೆಂಗಸರೂ ಮಕ್ಕಳೂ ‘ಎಲೆಮಾರೂ ಪೊಕ್ಕ’ ಎಂದು ಸಾಕಷ್ಟು ಜೋರು ದನಿಯಲ್ಲೇ ಪಿಸುಗುಡುತ್ತಾರೆ. ಕುಣಿಯುತ್ತಿರುವ ಎಲೆಮಾರೂ ಪೊಕ್ಕನೂ ಬೆಂಡಿ ಬಾಜಾರಿನಲ್ಲಿ ತಾನು ಎಲೆ ಮಾರಲು ಕೂರುವ ಕಲ್ಲನ್ನೇ ನೆನಪು ಮಾಡಿಕೊಂಡು, ಅದರ ಕರಾಮತಿಯೆಂಬಂತೆ ‘ಥೂ ನಿಮ್ಮ’ ಎಂದು ಉಗುಳಿ, ಅನಂತರ, ‘ಅಯ್ಯಾ ಭಾಗವತರೇ ಈ ಪಾಂಚಾಲ ದೇಶಕ್ಕೆ ಅಧಿಪತಿ ಯಾರೆಂದು ಕೇಳಿದ್ದೀರಿ?’ ಎಂದು ಶುರು ಹಚ್ಚಿಕೊಳ್ಳುತ್ತಾನೆ. ಅದಕ್ಕೆ ಭಾಗವತರು ಉತ್ತರಿಸುವುದಕ್ಕೂ ಮೊದಲೇ ಯಾರೋ ಹುಡುಗರು, ‘ಎಲೆ ಮಾರೂ ಪೊಕ್ಕನೆಂದು ಕೇಳಿ ಬಲ್ಲೆವು’ ಎಂದು ಭಾಗವತರ ಶೈಲಿಯಲ್ಲೇ ಹೇಳಿ ಪೊಕ್ಕನ ಸಹನೆಯನ್ನೇ ಕೆಣಕುತ್ತಾರೆ. ಪೊಕ್ಕ ಎಲ್ಲಾ ಮರೆತು, ಸೀದಾ ಯುದ್ಧಕ್ಕೆ ಹೋಗುವ ಪದದ ಸೊಲ್ಲು ಎತ್ತಿಕೊಡುತ್ತಾನೆ.

Share

Leave a comment

Your email address will not be published. Required fields are marked *

Recent Posts More

  • 11 hours ago No comment

    ಇರಬಲ್ಲೆವಾ ಭಾವುಕರಾಗದೆ?

                  Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

  • 3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 4 days ago No comment

    ಎರಡು ಕವಿತೆಗಳು

        ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

  • 7 days ago No comment

    ಈ ಸಂಜೆ ಪ್ರಿತಿಯೊಡನೆ…

        ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

  • 1 week ago No comment

    ಯಾವುದು ಈ ಧಾವಂತದ ದಿಕ್ಕು?

      ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...


Editor's Wall

  • 22 February 2018
    3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 15 February 2018
    1 week ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 12 February 2018
    2 weeks ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

  • 11 February 2018
    2 weeks ago One Comment

    ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

      ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

  • 11 February 2018
    2 weeks ago No comment

    ನಿಮಗಿಂತ ಹೆಚ್ಚು ನಿರ್ಜೀವ

            | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...