Share

ಔರ್ ಕರೀಬ್ ಆ ಜಾವೋ…
ಅರ್ಚನಾ ಎ ಪಿ

 

 

 

 

 

 

ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್..
ಕೌನ್ ಹೋ ತುಮ್ ಬತಲಾವೋ..
ದೇರ್ ಸೇ ಕಿತನೀ ದೂರ್ ಖಡೀ ಹೋ
ಔರ್ ಕರೀಬ್ ಆ ಜಾವೋ…

ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ?

ಕೊಡೋ ಕೈ ಯಾವಾಗಲೂ ಮೇಲಿರತ್ತೆ, ತೊಗೊಳೋದು ಯಾವಾಗಲೂ ಕೆಳಗೆ. ಹಾಗಾಗಿ ಶ್ರೇಷ್ಠತೆ ಸಿಗೋದು ಕೊಡೋದಕ್ಕೇನೇ. ಹಂಗಂತ, ನಿಯಮದ ಪ್ರಕಾರ ಕೊಟ್ಟದ್ದು ಎರಡು ಪಟ್ಟು ವೇಗದಲ್ಲಿ ವಾಪಸ್ ಬರಬೇಕಲ್ವಾ..ಆದರೆ ಹಾಗ್ಯಾಕಾಗಲ್ಲ?

ಸಂಬಂಧಗಳ ಗಣಿತದಲ್ಲಿ, ಬೀಜಗಣಿತದ x ಗೆ ಮೌಲ್ಯ ಕಂಡು ಹಿಡಿಯೋದು ಸಾಧ್ಯವೇ ಇಲ್ವಾ? ಅಥವಾ ಮೌಲ್ಯವೇ ಇಲ್ವಾ? ಅಥವಾ ಎಲ್ಲರಿಗೂ ಅವರದ್ದೊಂದು ಗೂಡು, ಗೂಡಲ್ಲಿ ತಾಯಿ ತಂದೆ ಪತಿ ಪತ್ನಿ ಅನ್ನೋ ಹಕ್ಕಿಗಳ ಬೆಚ್ಚಗಿನ ಭಾವವಿರುವಾಗ x ನ ಬೆಲೆ ಕಂಡುಹಿಡಿಯುವ ಪ್ರಯತ್ನದ ಅಗತ್ಯವೇ ಇರುವುದಿಲ್ವಾ? ಅಥವಾ x ಸದಾ ಕಾಲಕ್ಕೂ x ಆಗೇ ಉಳಿದುಬಿಡತ್ತಾ? ಉತ್ತರವಿಲ್ಲದ ಪ್ರಶ್ನೆಗಳು.

ಓ ಉತ್ತರವೇ,
ಔರ್ ಕರೀಬ್ ಆ ಜಾವೋ..

ಇರೋದೆಲ್ಲಾ ಬಿಟ್ಟು ಇಲ್ಲದಿರೋ ಕಡೇನೇ ಮನಸ್ಸು ನಾಗಾಲೋಟದಲ್ಲಿ ಓಡತ್ತೆ. ಹೊರನೋಟಕ್ಕೆ ತುಂಬಾ ಚೆನ್ನಾಗಿ ಬೆಳೆದಿದೆ ಬೆಳೆ. ಆದರೆ ಕಾಳು ತೂರಲು ತೆನೆ ತೆಗೆದಾಗ ಗೊತ್ತಾದದ್ದು ಕಾಳೇ ಇಲ್ಲ ಅಂತ. ಕಾರಣ ಪ್ರಕೃತಿಯ ಗಾಳಿ, ಮಳೆ, ಬಿಸಿಲು ಬಿದ್ದೇ ಇಲ್ಲ. ಯಾಕೆ ಅಂದರೆ ದೇವರ ಹತ್ತಿರ ಹಾಗೊಂದು ವರ ಪಡೆದಿದ್ದನಂತೆ ರೈತ. ತಾನಂದುಕೊಂಡಂತೆ ಪ್ರಕೃತಿಯನ್ನು ಅಂಕೆಯಲ್ಲಿಟ್ಟು ಪರಿಪೂರ್ಣ ಬೆಳೆ ಪಡೆಯಲಿಚ್ಛಿಸಿ. ಪರೀಕ್ಷೆಗೆ ಸಮ್ಮತಿಸಿ ವರ‌ ಕೊಟ್ಟಿದ್ದ ಭಗವಂತ. ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ರೈತನಿಗೆ ಭಗವಂತ ಹೇಳಿದನಂತೆ, ನೋಡು ಸರಿಯಾದ, ಮಿರಿ ಮಿರಿ ಮಿಂಚೋ ರಸ್ತೆಗಳು ಯಾವತ್ತೂ ಒಬ್ಬ ಒಳ್ಳೆಯ ಚಾಲಕನನ್ನು ಸೃಷ್ಟಿಸಲ್ಲ. ಶಾಂತ ಸಮುದ್ರ ಯಾವತ್ತೂ ಸಮರ್ಥ ನಾವಿಕನನ್ನು ಗುರುತಿಸಲು ಅವಕಾಶ ಕೊಡಲ್ಲ. ಹಾಗೇ ಮಳೆ ಗಾಳಿ ಬಿಸಿಲಿಲ್ಲದ ಬೆಳೆ ಹೇಗಾಗತ್ತೆ ಅಂತ.

ಎಲ್ಲಾ ಸರೀನೇ.. ಆದರೆ ಬರೀ ಬಿರುಗಾಳಿ, ಬರೀ ನಿರ್ಲಕ್ಷ್ಯ, ಬರೀ ಸ್ವಾರ್ಥಕ್ಕಾಗಿ ಉಪಯೋಗಿಸಲ್ಪಡುವುದು. ಇದೇ ಅನುಭವಗಳು ಸಿಗ್ತಾ ಹೋದರೆ… ಮತ್ತದೇ ದ್ವಂದ್ವ. ಯಾಕೆ ಹೀಗೆ? ಮತ್ತದೇ ಪ್ರಶ್ನೆಗಳ ಸರಮಾಲೆ. ಉತ್ತರವಿಲ್ಲದ್ದು…

ಓ ಪರಿಹಾರವೇ..
ಔರ್ ಕರೀಬ್ ಆ ಜಾವೋ…

ನಿನ್ನನ್ನು ದ್ವೇಷಿಸ್ತೀನಿ, ನೀನ್ ನನ್ ಶತ್ರು ಅಥವಾ ನನಗೆ ನಿನ್ ತಲೆ ಕಂಡರೆ ಆಗಲ್ಲ ಅಂತ ಹೆಮ್ಮೆಯಿಂದ, ಅಹಂಕಾರದಿಂದ ಹೇಳಿಕೊಳ್ಳುವಷ್ಟು ನಿನ್ನನ್ನು ಇಷ್ಟಪಡ್ತೀನಿ, ನಿನ್ ಸ್ನೇಹ ಬಯಸ್ತೀನಿ, ಯಾರ ಹಂಗೂ ಇಲ್ಲದೆ, ಯಾವ ಪ್ರಶ್ನೆಗಳಿಗೂ ಹೆದರದೆ, ಮುಚ್ಚು ಮರೆಯಿಲ್ಲದೆ, ನನ್ನ ವೃತ್ತದಲ್ಲೊಂದು ಜಾಗ ಕೊಡ್ತೀನಿ ಅಂತ ಯಾರೂ (ಯಾರಂದ್ರೆ ಯಾರೂ) ಹೇಳಿಕೊಳ್ಳೋದೇ ಇಲ್ಲ.

ಕಾರಣ… ಗೊತ್ತಿಲ್ಲ…

ಓ‌ ಗೊತ್ತಿರುವ ಕಾರಣವೇ..ಗೊತ್ತು ಮಾಡಿಸಲಾದರೂ..
ಔರ್ ಕರೀಬ್ ಆ ಜಾವೋ…

ಕೈಯಲ್ಲಿ ಮೂಲೋಕವನ್ನೂ ತೋರಿಸುವ ವಸ್ತುವಿದೆ. ಹೊಸ ಹೊಸ ಪರಿಚಯವನ್ನು ಆಸೆಗಣ್ಣುಗಳಿಂದ ನೋಡಿ, ಕೊಂಚ ಖುಷಿಯಿಂದಲೇ ಸ್ವೀಕರಿಸಿ, ಮತ್ಯಾವುದೋ ಕಾರಣಗಳಿಗಾಗಿ ಅಷ್ಟೇ ವೇಗವಾಗಿ ದೂರಮಾಡಿಬಿಡುವ ಮನಸ್ಥಿತಿಗೆ ಯಾರು ಏನಂತ ಅರ್ಥೈಸುವರು?

ಓ ಅರ್ಥೈಸುವವರೇ… ನನಗೂ ಒಂದಿಷ್ಟು ತಿಳಿಹೇಳಿ..
ಬಳಿ ಬಂದು…

ದೇವರ ಆಲಯವಂತೆ ಅದು. ಅಲ್ಲಿನ ವಿಗ್ರಹಕ್ಕೆ ಭಾರಿ ಶಕ್ತಿಯುಂಟಂತೆ, ಹೊರಟೆ ನೋಡೋಣವೆಂದು. ಆಗ ತಿಳೀತು ಅದನ್ನು ನೋಡಲೂ ಒಂದಿಷ್ಟು entry fee ಕೊಟ್ಟು ತಾಸುಗಟ್ಟಲೆ ಕಾಯ್ದರೆ, ಕ್ಷಣವೊಂದೆರಡರಲ್ಲಿ ನೋಡಿ ಓಡಬೇಕಂತೆ. ಇನ್ನು ಆರತಿ ತಟ್ಟೆಗೆ ಹತ್ತೋ, ನೂರೋ ಹಾಕಿದರೆ ಮಾತ್ರ ಹೂ ತೀರ್ಥ.. ಹಾಕಲಿಲ್ಲ.. ಅದಕ್ಕೆ ಹೂವೂ ಇಲ್ಲ ತೀರ್ಥವೂ ಇಲ್ಲ.. ಹತ್ತು ನಿಮಿಷ ಕೂತು ಆಟವನ್ನೆಲ್ಲಾ ನೋಡುವಾಗ ಕಂಡ ಅಚ್ಚರಿ ಏನಂದರೆ, ಆರತಿ ತಟ್ಟೆಗೆ ಹಣ ಹಾಕದವರಿಗೆ ಕೊಡದೇ ಉಳಿದ ಹೂವೆಲ್ಲಾ ಸೇರಿದ್ದು ಹಸಿಕಸದ ಬುಟ್ಟಿ.

ಇವನ್ನೆಲ್ಲಾ ಆ ವಿಗ್ರಹದೊಳಗಿರುವ ಶಕ್ತಿಯುತ ಶಕ್ತಿಗೆ ನೋಡೋ ಅನಿವಾರ್ಯತೆ.

ಅಯ್ಯೋ ಶಕ್ತಿಯೇ.. ಏನು ನಿನ್ನ ಸ್ಥಿತಿ..
ಅವನ್ನೆಲ್ಲಾ ಬಿಟ್ಟು..
ಔರ್ ಕರೀಬ್ ಆ ಜಾವೋ…

ನಮ್ ಹಿರಿಯರು, ಮಾತಾಗಲೀ, ನಡೆಯಾಗಲಿ, ನಡೆದು ತೋರಿಸಿದರೇ ಹೊರತು ಬರೀ ಆಡಿ ತೋರಿಸಿದ್ದಿಲ್ಲ. ಅಂಥದೇ ಒಂದು ಮಾತು ‘ದೊಡ್ಡವರ ಮನೆ ನೋಟ ಚಂದ, ಬಡವರ ಮನೆ ಊಟ ಚಂದ’ ಅನ್ನೋದು. ಹೀಗೆ ದೊಡ್ಡವರ ಮದುವೆ ಸಮಾರಂಭದ ಆಹ್ವಾನವಿತ್ತು, ಪತ್ರಿಕೆಯಲ್ಲಿ ಸ್ಥಳ, ದಿನಾಂಕ, ಸಮಯದ ಮೇಲಷ್ಟೇ ಕಣ್ ಹಾಯಿಸಿದ್ದು. ಪೂರ್ತಿ ಓದಿರಲಿಲ್ಲ. ಅಲ್ಲಿ ಎದುರಾದ‌ ತಲ್ಲಣದ ವಿಷಯ ಅಂದರೆ, ಮಂಟಪದಲ್ಲಿ ಒಳ ಹೋಗಲು ಅದೇ ಅಹ್ವಾನ ಪತ್ರಿಕೆಯೇ ‘ಅರ್ಹತೆ’ಯಂತೆ.

ಓ ನೋಟವೇ ಹೇಗಿರುವೆ ಈ ಉಸಿರು ಕಟ್ಟಿಸೋ ಜಾಗದಲ್ಲಿ…
ಔರ್ ಕರೀಬ್ ಆ ಜಾವೋ…

ಇದಕ್ಕೆ ವಿರುದ್ಧವಾಗಿ, ಸಹೋದ್ಯೋಗಿಯೊಬ್ಬರ ಮದುವೆಗೆ ದೂರದ ದುರ್ಗಕ್ಕೆ ಹೋಗಿದ್ದಾಗ, ನಾವೇ ಅಲ್ಲಿ ವಿವಿಐಪಿ ಆತಿಥ್ಯ ಪಡೆದುದಷ್ಟೇ ಅಲ್ಲ… ರಾತ್ರಿ ಉಳಿಯಲು ತಮ್ಮ ಮನೆಯನ್ನು ಹಿಂದು ಮುಂದು ನೋಡದೆ ನಮ್ಮ ಸುಪರ್ದಿಗೆ ಬಿಟ್ಟು ಹೋದದ್ದು. ಬೀಗದ ಕೀಲಿ ಗೊಂಚಲನ್ನು ಕೊಡೋ ಔನ್ನತ್ಯಕ್ಕೆ ಮೌನವೇ ಉತ್ತರ…

ಓ ಮೌನವೇ..
ಔರ್ ಕರೀಬ್ ಆ ಜಾವೋ…

ಜೀ ಮೇ ಆತಾ ಹೈ… ತೆರೇ ದಾಮನ್ ಪೇ
ಸರ್ ಝುಕಾಕೇ ಹಮ್.. ರೋತೇ ರಹೇ.. ರೋತೇ ರಹೇ..
ಕಾರಣವಿಲ್ಲದೆ.. ಮನಸ್ ಪೂರ್ತಿಯಾಗಿ…
ಯಾರಿಗೂ ಕಾಣದಂತೆ…

ಓ ಅಶ್ರುಗಳೇ ಕಾಣದಂತೆ ಮಾಡೋ ಮಳೆಹನಿಗಳೇ..
ಔರ್ ಕರೀಬ್ ಆ ಜಾವೋ…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...