Share

ಘೋರ ವಂಚನೆಯೊಂದು ವಿಜೃಂಭಿಸುತ್ತಿರುವಲ್ಲಿ…
ಸಂಪಾದಕ

ಆನಂದವೆಂಬುದು ರಕ್ತದ ಹಸಿವನ್ನು ಮೆತ್ತಿಕೊಂಡ ವಿಷಮಯ ವಾಸ್ತವ ಎಷ್ಟು ಕ್ರೂರವಾದದ್ದೆಂದರೆ, ಇಲ್ಲಿ ಮುಖ ಯಾವುದು, ಮುಖವಾಡ ಯಾವುದೆಂಬುದೇ ತಿಳಿಯದಂತಾಗಿ ಘೋರ ವಂಚನೆಯೊಂದು ವಿಜೃಂಭಿಸುತ್ತ ಗಹಗಹಿಸುತ್ತಿರುವಂತೆ ಕಾಣಿಸುತ್ತದೆ.

 

ವಿ ದಿನಕರ ದೇಸಾಯಿ ಬರೆದ ಮಕ್ಕಳ ಪದ್ಯವೊಂದು ಹೀಗಿದೆ:

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಎಲ್ಲಿಗೆ ಹೋಗಿದ್ದೆ
ಕರೆದರು ಇಲ್ಲ ಹಾಲು ಬೆಲ್ಲ
ಕಾಯಿಸಿ ಇಟ್ಟಿದ್ದೆ

ಕೇಳೋ ಕಳ್ಳ ಮುದ್ದಿನ ಮಳ್ಳ
ಮೈಸೂರರಮನೆಗೆ
ರಾಜನ ಸಂಗಡ ರಾಣಿಯೂ ಇದ್ದಳು
ಅಂತಃಪುರದೊಳಗೆ

ಬೆಕ್ಕೇ ಬೆಕ್ಕೇ ಬೇಗನೆ ಹೇಳೋ
ನೋಡಿದ ಆನಂದ
ರಾಣಿಯ ಮಂಚದ ಕೆಳಗೇ ಕಂಡೆನು
ಚಿಲಿಪಿಲಿ ಇಲಿಯೊಂದ.

~

ಮೈಸೂರು ಅರಮನೆಗೆ ಹೋಗಿ ಸುಮ್ಮನೆ ಅಲ್ಲಿನ ಝಗಮಗಕ್ಕೆ ಮರುಳಾಗದೆ, ತನಗೇನು ಬೇಕು ಅಥವಾ ತಾನೇನನ್ನು ಕಾಣಬಲ್ಲೆನೋ ಅದನ್ನೇ ಕಂಡಿತಲ್ಲ, ಆ ಬೆಕ್ಕು ನನಗೆ ಬಲು ಇಷ್ಟ. ಮೈಸೂರಿನ ಅರಮನೆಯಲ್ಲಿ ಬರೀ ರಾಜ ರಾಣಿಯರನ್ನಷ್ಟೇ ಕಂಡಿದ್ದರೆ ಬೆಕ್ಕಿನ ಪಾಲಿಗೆ ದಕ್ಕುವುದು ಏನೂ ಇರಲಿಲ್ಲ. ಆದರೆ ಅಂಥ ಅರಮನೆಯ ಒಳಗೂ ರಾಣಿಯ ಮಂಚದ ಕೆಳಗೇ ಇಲಿ ಅದರ ಕಣ್ಣಿಗೆ ಬೀಳುವುದಿದೆಯಲ್ಲ, ಅದು ಸಾರ್ಥಕತೆ.

ಬೆಕ್ಕನ್ನು ಅದರ ಸಹಜ ಚರ್ಯೆಯಲ್ಲೇ ಕಾಣುವುದನ್ನು, ಬಹುಶಃ ತಮಾಷೆಯ ಗುಣದ ಪ್ರಾಣಿಯಾಗಿರುವ ಅದರ ಸ್ವಭಾವಕ್ಕೆ ಅದೇ ಬಗೆಯಲ್ಲಿ ಸ್ಪಂದಿಸುವುದನ್ನು ನಾವು ಮರೆತೇಬಿಟ್ಟಿದ್ದೇವೆ. ಬೆಕ್ಕು ಎಂದರೆ ಹಿಂಸೆ, ಬೆಕ್ಕು ಎಂದರೆ ಕಾಮ ಎಂದು ನೋಡುವ ಭರದಲ್ಲಿ ಬೆಕ್ಕಿನ ಮನಸ್ಸು ಕಾಣಿಸುವುದೇ ಇಲ್ಲ. ಅದನ್ನು ಕಾಣಿಸುವ ಕಾರಣದಿಂದಾಗಿಯೇ ದೇಸಾಯರ ಈ ಪದ್ಯ ಕಾಡುತ್ತದೆ.

ಒಂದು ಬೆಕ್ಕಿಗೆ ಇಲಿಯನ್ನು ಕಾಣುವುದಕ್ಕಿಂತ ಹೆಚ್ಚಿನ ಆನಂದ ಇನ್ನಾವುದರಿಂದ ಸಿಗುವುದಕ್ಕೆ ಸಾಧ್ಯವಿದೆ? ಇಲಿ ಅನ್ನೋದು ಬೆಕ್ಕಿನ ಸಹಜ ಬೇಟೆ. ಆದರೆ ಇಲಿಯನ್ನು ಕಂಡು ಬೆಕ್ಕು ಆನಂದಿಸುವುದೆಂದರೆ ಅದು ಹಿಂಸೆಗೆ ತುಡಿಯುವ ಆನಂದವೇ ಆಗಬೇಕಿಲ್ಲ. ಮತ್ತು ನಿಜವಾಗಿಯೂ ಆನಂದಿಸುವಲ್ಲಿ ಹಿಂಸೆಯನ್ನು ಮೀರುವ ಧನ್ಯತೆಯೊಂದಿರುತ್ತದೆ. ಈ ಕವಿತೆಯಲ್ಲಿ ಇಲಿಯನ್ನು ಕಂಡು ಬೆಕ್ಕು ಆನಂದಪಡುವುದು ಗೊಂಬೆಯನ್ನು ಕಂಡು ಮಗುವೊಂದು ಆನಂದಿಸುವಷ್ಟೇ ಮಾರ್ದವ ಘಟನೆ. ಹಾಗಾಗಿ ಇದು ಮಾರ್ಜಾಲ ಮನಃಸ್ಥಿತಿಯಲ್ಲ.

ಗೊತ್ತಿರುವಂತೆ ಇದು ಮಕ್ಕಳ ಪದ್ಯ. ಮಗುವಿನ ಮನಸ್ಸನ್ನು ಆಕರ್ಷಿಸುವ ಮತ್ತು ಆಸೆ ಹುಟ್ಟಿಸುವ ಆಟಿಕೆ ಮತ್ತು ತಿನಿಸಿನಂತೆ ಇಲ್ಲಿ ಬೆಕ್ಕಿಗೆ ಆಟಿಕೆ ಮತ್ತು ತಿನಿಸು ಎರಡೂ ಆಗಿರುವುದು ಇಲಿ. ಹಾಗಾಗಿ ಬೆಕ್ಕಿನ ಇಲ್ಲಿನ ಮನಃಸ್ಥಿತಿ ಸಹಜವಾಗಿಯೇ ಮಗುವಿಗೆ ಆಪ್ತವಾಗುವಂಥದ್ದು. ಮೈಸೂರರಮನೆಗೆ ಹೋಗಿಬಂದ ಬೆಕ್ಕನ್ನು ಮಗು ಇನ್ನಾವುದರ ಬಗ್ಗೆಯೂ ಕೇಳದೆ, ಕಂಡ ಆನಂದದ ಬಗ್ಗೆ ಕೇಳುತ್ತದೆ. ಶುದ್ಧವಾದದ್ದನ್ನು, ಕೋಮಲವಾದದ್ದನ್ನು ಮಾತ್ರ ಬಯಸುವ, ಸ್ವೀಕರಿಸುವ ಮನಸ್ಸು ಅದು. ಬೆಕ್ಕಿಗೆ ರಾಣಿಯ ಮಂಚದ ಕೆಳಗೆ ಇಲಿ ಕಂಡಿತು ಎಂಬುದರೆಡೆಗೆ ತೀರಾ ಲವಲವಿಕೆಯಿಂದ ಮಗುವಿನ ಮನಸ್ಸು ವಾಲುತ್ತದೆ. ಹಲವು ಕುತೂಹಲಗಳಿಗೆ ತೆರೆದುಕೊಳ್ಳುವ ಮಗುವಿಗೆ, ಬೆಕ್ಕಿಗೆ ಇಲಿ ಕಾಣಿಸಿಕೊಳ್ಳುವುದರಿಂದಾಗಿ ಆಗುವ ಸಡಗರ ಬಹುಶಃ ಬೆಕ್ಕಿಗೆ ಆದದ್ದಕ್ಕಿಂತ ಹೆಚ್ಚು.

ಹೀಗೆ ಖುಷಿಯ ಭಾವನೆ ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ದಾಟುವಾಗ, ಆ ಎರಡೂ ಮನಸ್ಸುಗಳ ನಿಷ್ಕಲ್ಮಷ ಗುಣವೇ ಅವೆರಡರ ನಡುವಿನ ವಾಹಕ. ಚಿಲಿಪಿಲಿ ಇಲಿ ಕಂಡ ನಂತರ ಬೆಕ್ಕಿನ ಮನಸ್ಸಿನಲ್ಲಿ ಉಂಟಾದ ಸಂಭ್ರಮ ಬೆಳೆದುಕೊಳ್ಳುವುದು ಮಗುವಿನ ಮನಸ್ಸಿನಲ್ಲಿ.

~

ನೋವಿನ ಸಂಗತಿಯೆಂದರೆ, ಹಿಂಸೆಯನ್ನು ಹೊತ್ತು ಮೆರೆಸಲಾಗುತ್ತಿರುವ ತಲ್ಲಣದ ದಿನಗಳು ಇಲಿಯನ್ನು ಕಂಡು ಸಾತ್ವಿಕತೆ ತೋರಿಸುವ, ಅದನ್ನು ಬೇಟೆಯಾಡಬಯಸದ ಬೆಕ್ಕನ್ನು ಸಹಿಸಲಾರವು ಎಂಬುದು. ಆನಂದವೆಂಬುದು ರಕ್ತದ ಹಸಿವನ್ನು ಮೆತ್ತಿಕೊಂಡ ವಿಷಮಯ ವಾಸ್ತವ ಎಷ್ಟು ಕ್ರೂರವಾದದ್ದೆಂದರೆ, ಇಲ್ಲಿ ಮುಖ ಯಾವುದು, ಮುಖವಾಡ ಯಾವುದೆಂಬುದೇ ತಿಳಿಯದಂತಾಗಿ ಘೋರ ವಂಚನೆಯೊಂದು ವಿಜೃಂಭಿಸುತ್ತ ಗಹಗಹಿಸುತ್ತಿರುವಂತೆ ಕಾಣಿಸುತ್ತದೆ.

ನಮ್ಮ ಕಾಲದ ರೂಪಕಗಳಲ್ಲಿ, ಯಾವುದೋ ಅಸ್ಪಷ್ಟ ನೆರಳೊಂದು ಹಂದಾಡುತ್ತಲಿದೆ. ಮತ್ತೆಲ್ಲೋ ಮಗುವಿನ ಅಳುವಿನಂಥ ದನಿಯೊಂದು ಕೇಳಿಸುತ್ತಲಿದೆ. ಮತ್ತು ಈ ನೋವಿನ ದನಿ ಆ ವಿಲಕ್ಷಣ ನೆರಳಿನದ್ದೇ ಎಂದು ಬಿಂಬಿಸುವ ಮತ್ತು ನಂಬಿಸುವ ಹಿಕಮತ್ತು ಸಿಂಹಾಸನವನ್ನೇರಿ ಕೂತಿದೆ.

ಇಂಥ ಕರಾಳತೆಯ ನಡುವೆ ಮುದ್ದಿನ ಸೊಕ್ಕಿನಂಥ ಬೆಕ್ಕನ್ನೂ ಅದರ ಆನಂದವನ್ನು ತಿಳಿಯಲು ಕಾತರಿಸುವ ಮಗುವನ್ನೂ ಹುಡುಕಿಕೊಳ್ಳುವುದು ಹೇಗೆ?

ಬದುಕಿನ ಪ್ರಶ್ನೆ ಇದು!

Share

Leave a comment

Your email address will not be published. Required fields are marked *

Recent Posts More

 • 16 hours ago No comment

  ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ

      ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ...

 • 16 hours ago No comment

  ಚಿತ್ರದಲ್ಲಿನ ಹೆಂಗಸು

    ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ಬಾಯೆಂಬ ಬಾಯಿ ಅಚ್ಚುಕಟ್ಟಾಗಿ ಪಳಗಿ ಸರಿಯೆಂಬುದ ದಿಟ್ಟವಾಗಿ ಅರುಹಿ ಉದ್ದುದ್ದ ಭಾಷಣಗಳ ಕಟ್ಟಿಟ್ಟು ತೂಗಿ ಬಿಡಿಸಲಾಗದ ಒಗಟಿನ ಜೀವನ ಸೌಂದರ್ಯವ ಆಸ್ವಾದಿಸುವಲ್ಲಿ ಜೀವಂತವಿದ್ದಾಳೆ, ಕಳೆಯಿಲ್ಲ ಶಿರವೆಂಬ ಶಿಖರವ ...

 • 7 days ago No comment

  ಕೊನಾರ್ಕ್ ‘ಕಾಲ ದೇಗುಲ’

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

 • 1 week ago No comment

  ಅಳಿದುಳಿದ ಊರಿನ ಹೂದೋಟದೊಳಗೆ

    ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

 • 2 weeks ago No comment

  ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                    ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...


Editor's Wall

 • 11 May 2018
  2 weeks ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 weeks ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 weeks ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  4 weeks ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  4 weeks ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...