Share

ನೀನಿಲ್ಲದೇ ಬದುಕುವುದಾದರೂ ಹೇಗೆ?
ಅರ್ಚನಾ ಎ ಪಿ

 

 

ಕೊಡುವುದನ್ನು ಕೊಟ್ಟರೆ ತಾನೆ ತೆಗೆದುಕೊಳ್ಳುವ ಹಕ್ಕು ಸಿಗುವುದು, ಭೂಮಿಯೊಳಗೆ ಕಾಳನ್ನೇ ಬಿತ್ತಿಲ್ಲವೆಂದರೆ, ತೆನೆಯ ನಿರೀಕ್ಷೆ ಮಾಡೋದು ಹೇಗೆ? ಸಂಬಂಧಗಳಲ್ಲೂ ಹಾಗೇ ಅಲ್ವಾ?

 

 

 

मिलता है यहां सब कुछ
एक मिलता नहीं दिल
इन्सान का नहीं
कहीं नामोनिशान

‘ಮನುಷ್ಯ’

ಮನನಶೀಲ..ಮನುಷ್ಯನದ್ದು ಕುರುಹೇ ಇಲ್ಲ.. ಎಲ್ಲವೂ ಸಿಗುವ ಈ ಸಮಯದಲ್ಲಿ, ಈ ಯುಗದಲ್ಲಿ ಯಾವುದನ್ನೂ ಪಡೆಯಲಾಗುತ್ತಿಲ್ಲ.. ನಾವಿರೋ ಭೂಮಿ ಸೌರಮಂಡಲದ ಒಂದು ಚುಕ್ಕೆ, ಇನ್ನು ಸೌರಮಂಡಲ ಕ್ಷೀರಪಥ ಗ್ಯಾಲಕ್ಸಿಯಲ್ಲಿ ಒಂದು ಚುಕ್ಕೆ. ಇನ್ನು ಕ್ಷೀರಪಥ… ಅಂತರಿಕ್ಷದಲ್ಲೊಂದು ಬಿಂದು. ಇನ್ನು ಆ ಅಂತರಿಕ್ಷ? ಅದುವೆ ಖಾಲಿ ಜಾಗ… ಅನಾಮಧೇಯ ಹೆಸರಿನ ಥರ, ಅಖಂಡದಲ್ಲಿನ ಖಂಡದ ಅಸ್ತಿತ್ವದ ಥರ, ಎಲ್ಲವನ್ನೂ ಕಳೆದುಬಿಟ್ಟು… ಶೂನ್ಯ ಸಂಪಾದಿಸಿದ ಥರ…

ಎಲ್ಲಾ ಸರಿ.
ಹೇಗಿದೆ ಈ ಪಡೆಯಲಾಗಿದ ಸ್ಥಿತಿ ಅಂದರೆ, ಯಾವುದೋ ಗೊತ್ತು ಗುರಿಯಿಲ್ಲದ ಜೀವಂತ ವ್ಯಕ್ತಿಯೋ, ವಸ್ತುವೋ ಇದ್ದು, ಭವಿಷ್ಯ ನಿರ್ಮಾಣ ಮಾಡೋ ಜವಾಬ್ದಾರಿ ಹೊತ್ತಂತೆ, ಕಲ್ಲು ಕೊಡೋದು ಕೆತ್ತಿ ಮೂರ್ತಿ ಮಾಡು ಅಂತ, ಆದರೆ ಉಳಿ ಪೆಟ್ಟು ತಿನ್ನಲು ಯಾರೂ ತಯಾರಿಲ್ಲ..ರಚ್ಚೆ ಹಿಡಿವ ಮಗುವನ್ನು ಕೊಟ್ಟು, ಸಂಸ್ಕಾರಯುತ, ಜಗತ್ತನ್ನು ಬೆಳಗೋ ಮಾರ್ಗದರ್ಶಕನನ್ನಾಗಿ ಪ್ರತಿಫಲ ಪಡೆಯೋ ಹಂಬಲ..ಆದರೆ ಯಾವ ನೋವೂ ಆಗಬಾರದಷ್ಟೆ.. ಯಾವ ದೂರುಗಳು ಬರಬಾರದಷ್ಟೆ.

ಪ್ರಕೃತಿಯನ್ನು ನಿಯಂತ್ರಣದಲ್ಲಿಟ್ಟು, ಬೆಳೆ ತೆಗೆಯುವ ವರ ಪಡೆದ ರೈತನ ಥರದ ಸ್ಥಿತಿ.. ಎಲ್ಲವೂ ಗೊತ್ತು.. ಆದರೆ ಅರ್ಥ ಮಾತ್ರ ಆಗುತ್ತಿಲ್ಲ..

ಸರಿ ಬದಲಾಯಿಸುವ ಜವಾಬ್ದಾರಿ ಕೊಟ್ಟ ಮೇಲೆ, ಮತ್ತೆ ಮೂಗು ತೂರಿಸುವುದ್ಯಾಕೆ? ಅಷ್ಟು ನಂಬಿಕೆ ಇಲ್ಲದಿದ್ದರೆ, ಅಷ್ಟು ಕಳಕಳಿ ಇದ್ದರೆ ಮನೆಯೊಳಗೆ ಇಟ್ಟು ಬೆಳೆಸಿಯಲ್ಲ,. ಯಶಸ್ಸು ಬೇಕು.. ಅದೂ ತಾವೆಣಿಸಿದಂತೆಯೇ ಇರಬೇಕು.. ಆದರೆ ಕಹಿಯಿನಿತೂ ಬೇಡ…

ಹೇಗಾದೀತು?
ಮನೆಯಲ್ಲಿರೋ ಅಮ್ಮ ಅಪ್ಪ ಗಂಡ ಹೆಂಡತಿ ಯಾವುದೇ ಸಂಬಂಧಗಳಿಗೆ ಗೌರವ ಕೊಡದೇ.. ಎಷ್ಟೋ ವಿಷಯಗಳನ್ನು ಮುಚ್ಚಿಟ್ಟು.. ಅವರನ್ನು ಹಿಂಸಿಸುವುದನ್ನು.. ದಿನನಿತ್ಯ ನೋಡಿಯೂ.. ನಾ ಹೇಳೋದನ್ನು ನೋಡು..ನಾ ಮಾಡೋದನ್ನು ನೋಡಬೇಡ ಅಂದರೆ, ಒಳ್ಳೆಯದನ್ನು ಮಾತ್ರ ಹೀರು ಅನ್ನುವ ಹಂಸಕ್ಷೀರ ನ್ಯಾಯವನ್ನು ಈ ಸಂದರ್ಭಕ್ಕೆ ಅಳವಡಿಸಿ ಕೊಳ್ಳಲಾದೀತಾ?

ಎಷ್ಟೋ ಅಪ್ರತಿಮ, ಪವಿತ್ರ, ‘ಸಂಬಂಧ’ಗಳ ಬಂಧ (ಯಾವ ಸಂಬಂಧವೇ ಆಗಿರಲಿ) ಆದರೆ ಅದನ್ನು ಅದರ ಕನಿಷ್ಠ ಮಟ್ಟಕ್ಕೊಯ್ದು ಹೊಲಸುಗೆಡಿಸುವ ಪ್ರಯತ್ನ.
ಎಲ್ಲೋ ಕೆಸರಿನಲ್ಲಿಂದ ‌ಮಣ್ಣನ್ನು ತಂದು ಒಣಗಿಸಿ, ಹದ ಮಾಡಿ, ಕನಿಷ್ಠತಮ ಸ್ಥಿತಿಯಲ್ಲಿರುವ ಅದರಿಂದ the best ಅನಿಸೋ ಮಡಕೆ ತಯಾರಿಸುವ ತವಕ. ಯಾವುದೇ ಮಾರ್ಗದರ್ಶನ ನೀಡದೇ, ಯಾವುದೇ ಚಾಲನಾ ಪರೀಕ್ಷೆ ಇಲ್ಲದೇ, ಪರವಾನಗಿ ಪಡೆಯೋ ಆಸೆ, ನಿರೀಕ್ಷೆ…
ಅಪಘಾತವಾಗದೇ ಇದ್ದೀತೆ?

ಕುಟುಂಬವೊಂದಿದೆ, ಎಲ್ಲರ ಪ್ರೀತಿಯೂ ದಕ್ಕಿದೆ, ಆದಾಗ್ಯೂ.. ಮನೆಯ ಔಷಧ ಮದ್ದಲ್ಲ ಅಲ್ವಾ! ಹೊರಗೆ ಅರಸುವ ಆಟ. ಹೋಗಲಿ ಸಿಕ್ಕ ಪ್ರೀತಿ ವಿಶ್ವಾಸಕ್ಕಾದರೂ ಬೆಲೆ ಕೊಡುವುದಾದರೂ ಬೇಡ್ವಾ? ಮರುಳು ಮಾಡುವ, ಆತ್ಮೀಯತೆ ತೋರಿಸಿದರೆ ಸಾಕು ಯಾರಾದರೂ ಏನಾದರೂ ಮಾಡಲು ಒಪ್ಪಿಕೊಳ್ಳುತ್ತಾರೆ ಎಂಬ ಒಣ ಅಹಂಕಾರವಾದರೂ ಏತರದ್ದು?

ಅತೀ ಪ್ರೀತಿ, ಹಠ ಮಾಡುವುದು, ಬೇಕಾದ್ದನ್ನು ಬೇಡವೆನ್ನದೆ ತೆಗೆದುಕೊಟ್ಟು ಮುಗ್ಧತೆಯನ್ನು ನಾಶ ಮಾಡಿ, ಮೌಲ್ಯಗಳನ್ನು ತುಂಬು, ಕರ್ತವ್ಯದ ಅರಿವು ಮೂಡಿಸು, ನೀತಿ ನಿಯಮಗಳ ಹಳಿ ಮೇಲೆ ಭವಿಷ್ಯ ರೂಪಿಸುವಂತೆ ಮಾಡು ಅನ್ನಲಿಕ್ಕೆ ಅದೇನು ಬಲೂನಿನಲ್ಲಿ ಗಾಳಿ ತುಂಬಿದಷ್ಟು ಸುಲಭವೇ?

ಒಬ್ಬ ಅರ್ಥಶಾಸ್ತ್ರದ ಪ್ರಾಧ್ಯಾಪಕರು ತಮ್ಮ ವೃತ್ತಿ ಜೀವನದ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಶಿಸ್ತೊಂದನ್ನು ಮುರಿಯುವ ಸಂದರ್ಭ ಬಂದಿತ್ತು. ಅಂದರೆ ಅಲ್ಲಿಯವರೆಗೂ ಯಾವೊಬ್ಬ ವಿದ್ಯಾರ್ಥಿಯನ್ನೂ ಫೇಲ್ ಮಾಡದ ಅವರು, ಇಡೀ ತರಗತಿಯನ್ನು ಫೇಲ್ ಮಾಡಿದ್ದರು..! ಹೇಗೆ?

ಆದದ್ದಿಷ್ಟೆ.
ತರಗತಿಯ ವಿದ್ಯಾರ್ಥಿಗಳೆಲ್ಲಾ ಹೇಳಿದರು, ಸಮಾಜವಾದದ ಪ್ರಕಾರ ಯಾರೂ ಬಡವರಲ್ಲ. ಯಾರೂ ಶ್ರೀಮಂತರಲ್ಲ. ಎಲ್ಲರೂ equal under a great equalizer ಅಂತ.
ಸರಿ ಅಂತ ಪ್ರಾಧ್ಯಾಪಕರು, ನಾವೊಂದು ಪ್ರಯೋಗ ಮಾಡೋಣ ಏನಪ್ಪಾಂದ್ರೆ, ಇನ್ಮೇಲೆ ಪರೀಕ್ಷೆಯಲ್ಲಿ ಬರೋ ಒಟ್ಟು ಅಂಕಗಳನ್ನು ಭಾಗಿಸಿ ಸಿಗುವ ಶ್ರೇಣಿ(grade)ಯೇ ಪ್ರತೀ ವಿದ್ಯಾರ್ಥಿಯ ಗ್ರೇಡ್ ಆಗಿರತ್ತೆ.

ಮುಂದೆ?
ಮುಂದೇನು? ಮೊದಲ ಪರೀಕ್ಷೆ ಆಯ್ತು, ಸರಾಸರಿ ಅಂಕಗಳನ್ನು ಹಂಚಿದಾಗ ಎಲ್ಲರಿಗೂ b grade ಸಿಕ್ತು. ಹೌದು, ಕಷ್ಟ ಪಟ್ಟು ಓದಿದವರಿಗೆ ನಿರಾಸೆ, ಓದದಿದ್ದವರಿಗೆ ಲಾಡು ತಿಂದಷ್ಟು ಖುಷಿ. ಮತ್ತೊಂದಿಷ್ಟು ಸಮಯ ಬಿಟ್ಟು ಎರಡನೇ ಪರೀಕ್ಷೆ ಆಯ್ತು. ಹಿಂದಿನ ಅನುಭವದಂತೆ, ಹೇಗಿದ್ದರೂ ಓದಿರುವವರು ಬರೆದೇ ಬರೆಯುತ್ತಾರೆ ಅಂತ ಕನಿಷ್ಠ ಓದನ್ನೂ ಮಾಡದೇ ಪರೀಕ್ಷೆ ಬರೆದರು. ಓದದವರು. ಪರಿಶ್ರಮೀ ವಿದ್ಯಾರ್ಥಿಗಳೂ ಈ ಬಾರಿ ನಾವೂ ಸುಮ್ಮನೆ ಬರೆಯುವ ಅಂತ ಬರೆದರು ಫಲಿತಾಂಶದ ಅಂಕಗಳನ್ನು ಸರಾಸರಿ ಹಂಚಿದಾಗ ಎಲ್ಲರಿಗೂ ಸಿಕ್ಕಿದ್ದು d grade.

ಇನ್ನು ಕಡೆಯ ಪರೀಕ್ಷೆಯಲ್ಲಿ ಓದದವರೊಂದಿಗೆ, ಓದುವವರೂ ಓದದೇ ಎಲ್ಲರೂ ಫೇಲ್ ಆಗಿದ್ದರು.

ಹಾಗಿದ್ರೆ ಇಲ್ಲಿ ತಪ್ಪು ಯಾರದ್ದು?
ಪ್ರಾಧ್ಯಾಪಕರದ್ದಾ?
ಓದದ ವಿದ್ಯಾರ್ಥಿಗಳದ್ದಾ?
ಪರಿಶ್ರಮೀ ವಿದ್ಯಾರ್ಥಿಗಳದ್ದಾ?
ಸಮಾಜವಾದದ ಸಮಾನರು ಎಲ್ಲರೂ ಎಂಬ ತತ್ವದ್ದಾ?
ಅಥವಾ
ಅದರ ಅನುಸರಣೆಯದ್ದಾ?

ಅಬ್ಬಾ..
ಸಮುದ್ರದ ತರಂಗಗಳಂತೆ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು.. ಆದರೆ ತರಂಗಗಳು ಸಮುದ್ರದ ಅವಿಭಾಜ್ಯ ಅಂಗ. ಹಾಗಂತ ಪ್ರಶ್ನೆಗಳೂ ಜೀವನದ ಅವಿಭಾಜ್ಯ ಅಂಗವೇ. ಇಲ್ಲಿ ಬೇಕಾಗಿರೋದು ಅವುಗಳನ್ನು ಪರಿಹರಿಸೋ ಜಾಣ್ಮೆ ಅಷ್ಟೇ.

ಸಂಬಂಧಗಳ ಉಳಿವಿನಲ್ಲೂ ಹೀಗೇ ಆಗುತ್ತಿರುವುದಲ್ವಾ? ಯಾರದೋ ಫಲ ಯಾರೋ ಉಣ್ಣುತ್ತಿದ್ದಾರೆ. ಮತ್ಯಾರದೋ ರೌದ್ರನರ್ತನಕ್ಕೆ ಇನ್ಯಾರೋ ಬಲಿಯಾಗುತ್ತಿದ್ದಾರೆ. ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಜಾಣ ಕುರುಡು, ಜಾಣ ಕಿವುಡು, ಜಾಣ ಮೌನ…

ಮೇಲಿನ ಸಂದರ್ಭದಲ್ಲಿ ನೋಡಿದಾಗ ತಿಳಿಯೋದಿಷ್ಟೆ, ಒಬ್ಬರ ಹತ್ತಿರ ಇರೋದನ್ನು ಕಿತ್ತು ಇನ್ನೊಬ್ಬರಿಗೆ ಕೊಡೋದು ಸಮಾನತೆ ಅಲ್ಲ. ಆ ಮಟ್ಟಕ್ಕೆ ಬೆಳೆಯೋ ಶಕ್ತಿ ತುಂಬೋದು ಸಮಾನತೆ.

ಆಮೇಲೆ…
ಯಾರೋ ಒಬ್ಬರಿಗೆ ಕೆಲಸ ಮಾಡದೆಯೂ ಫಲ ಸಿಗುತ್ತದೆ ಅಂತಾದರೆ, ಮತ್ಯಾರೋ ಫಲವಿಲ್ಲದೆ ದುಡಿಯುತ್ತಿದ್ದಾರೆ ಅಂತರ್ಥ ಅಲ್ವಾ? ಭೂಮಿಯ ಮೇಲೆ ಒಂದ್ಕಡೆ ಬೆಳಕಿದ್ರೆ, ಅದರ ಹಿಂಬದಿಯಲ್ಲಿರುವವರು ಕತ್ತಲಲ್ಲಿದ್ದಾರೆ ಅಂತಾನೇ ತಾನೆ?

ಅಂದರೆ ಸ್ನೇಹದಲ್ಲೂ ಅಷ್ಟೇ, ಒಮ್ಮೆ ನೋವಿದ್ರೆ ಮತ್ತೊಮ್ಮೆ ನಲಿವಿರಬೇಕು. ಹಾಗಲ್ಲದೆ ನಿನ್ನ ಸಮಸ್ಯೆಗಳು, ನಿನಗಿರೋ ಇತಿಮಿತಿಗಳ ಬಗ್ಗೆ ನನಗೆ ಯಾವ ಸಂಬಂಧವೂ ಇಲ್ಲ. ಆದರೆ ನೀನು ಮಾತ್ರ ನನ್ನ ಅಗತ್ಯಕ್ಕೆ ಒದಗಿಬರಬೇಕು ಅಂತ ಏನೂ ಮಾಡದೇ, ಎಲ್ಲಾ ಬೇಕೆಂದು ಹಠ ಹಿಡಿವ ಮನೋಭಾವದಿಂದ ಸಿಗುವ ಪ್ರತಿಫಲವೇನು?

ಅದಲ್ಲದೇ
ಮೊದಲಿಗೆ, ಕೊಡುವುದನ್ನು ಕೊಟ್ಟರೆ ತಾನೆ ತೆಗೆದುಕೊಳ್ಳುವ ಹಕ್ಕು ಸಿಗುವುದು, ಭೂಮಿಯೊಳಗೆ ಕಾಳನ್ನೇ ಬಿತ್ತಿಲ್ಲವೆಂದರೆ, ತೆನೆಯ ನಿರೀಕ್ಷೆ ಮಾಡೋದು ಹೇಗೆ? ಸಂಬಂಧಗಳಲ್ಲೂ ಹಾಗೇ ಅಲ್ವಾ? ಸಮಯವಾಗಲೀ ನಿಷ್ಠೆಯಾಗಲೀ ಸತ್ಯವಾಗಲೀ… ಕೊಟ್ಟರೆ ತಾನೆ ವಾಪಸ್ ಬರೋದು?

ಇದರ ಜೊತೆಗೆ, ಹತ್ತನ್ನು ಹತ್ತು ಭಾಗ ಮಾಡಿದರೆ ನೂರೋ ಸಾವಿರವೋ ಆಗುವುದಾ? ಸಂಬಂಧಗಳು ಹಾಲಿದ್ದಂತೆ. ಇನ್ನೊಬ್ಬರ ಹಾಲು ಸೇರಿದ್ರೆ ಪ್ರಮಾಣ ದುಪ್ಪಟ್ಟಾಗತ್ತೆ, ನೀರ್ ಸೇರಿದ್ರೆ ತಳ ಹಿಡಿಯತ್ತೆ, ಹುಳಿ ಹಿಂಡಿದ್ರೆ ಒಡೆದೇ ಹೋಗತ್ತೆ, ಮುಚ್ಚಿಟ್ರೆ ಯಾರ ಮುಂದೆಯೂ ಹೇಳಿಕೊಳ್ಳದ ಸಂಬಂಧವಾಗಿ ಮಾಡಿದರೆ, ಅಸ್ತಿತ್ವವನ್ನೇ ಕಳೆದುಕೊಳ್ಳತ್ತೆ.

ಇವೆಲ್ಲಾ ಹೀಗೆ ಮುಂದುವರಿದ್ರೆ.. ಒಂದು ಗಟ್ಟಿ ಬಂಧ ಉಳಿಯಲು ಪ್ರಾಮಾಣಿಕ ಪ್ರಯತ್ನ ಒಂದೇ ಕಡೆಯಿಂದ ಆಗ್ತಿದೆ ಅಂದರೆ ಎಷ್ಟು ದಿನ ಹಾಗೇ ನಿಭಾಯಿಸಲಾಗತ್ತೆ?
ಅದಕ್ಕೇ ಇವತ್ತು ಆಸ್ಪತ್ರೆಗಳು, ದೇವಾಲಯಗಳು ತುಂಬಿ ತುಳುಕ್ತಾ ಇರೋದು..
ಒಂದು ದೈಹಿಕ ಆರೋಗ್ಯ ಸುಧಾರಿಸಲು..
ಮತ್ತೊಂದು ಮಾನಸಿಕ ನೆಮ್ಮದಿ.. ಶಾಂತಿಗಾಗಿ.

ಎರಡನ್ನೂ ಮುಚ್ಟಟೆಯಿಂದ ಕಾಪಾಡುವ, ರಕ್ಷಿಸುವ ವಿಧಾನ ಎಲ್ಲರಿಗೂ ಗೊತ್ತು..
ಆದರೆ…

ಹಮೇ ಔರ್ ಜೀನೆ ಕೀ ಚಾಹತ್ ನ ಹೋತೀ…
ಅಗರ್ ತುಮ್ ನ ಹೋತೇ…

ನೀನಿಲ್ಲದೇ ಬದುಕುವುದಾದರೂ ಹೇಗೆ?

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

  • 1 day ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 6 days ago One Comment

    ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

            ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

  • 1 week ago No comment

    ವಸಂತದ ನೆನಪು; ಮಾಗುವ ಹುರುಪು!

      ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

  • 1 week ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 2 weeks ago No comment

    ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

    ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

  • 11 May 2018
    1 month ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 months ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    2 months ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    2 months ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    2 months ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...