Share

ಪ್ರೀತಿಸುವವಳೂ ಅವಮಾನಗೊಳ್ಳುವವಳೂ ನಾನು ಮಾತ್ರ
ಭಾರತಿ ಬಿ ವಿ

 

 

 

 

|

ಕಮಲಾದಾಸ್ ಕಡಲು

 

 

 

 

 

 

ಒಂದು ಪರಿಚಯ
(An introduction)
ಕಮಲಾ ದಾಸ್ ಕವಿತೆಯ ಅನುವಾದ

 

ನಗೆ ರಾಜಕೀಯ ಗೊತ್ತಿಲ್ಲ, ಆದರೆ ಅಧಿಕಾರದಲ್ಲಿರುವವರ ಹೆಸರೆಲ್ಲ ಗೊತ್ತು,
ಮತ್ತು ಅವುಗಳನ್ನು ವಾರದ ದಿನಗಳಂತೆ, ತಿಂಗಳುಗಳ ಹೆಸರಂತೆ, ನೆಹರುವಿನಿಂದ ಮೊದಲುಗೊಂಡು ಹೇಳುತ್ತಾ ಹೋಗಬಲ್ಲೆ.
ನಾನು ಭಾರತೀಯಳು, ಗೋಧಿ ಬಣ್ಣ,
ಮಲಬಾರಿನಲ್ಲಿ ಹುಟ್ಟಿದವಳು
ನಾನು ಮೂರು ಭಾಷೆಗಳಲ್ಲಿ ಮಾತಾಡಬಲ್ಲೆ,
ಎರಡು ಭಾಷೆಯಲ್ಲಿ ಬರೆಯಬಲ್ಲೆ,
ಮತ್ತು ಒಂದು ಭಾಷೆಯಲ್ಲಿ ಕನಸು ಕಾಣಬಲ್ಲೆ.
ಇಂಗ್ಲಿಷ್ ನಲ್ಲಿ ಬರೆಯಬೇಡ, ಅವರು ಹೇಳಿದರು, ಇಂಗ್ಲಿಷ್ ನಿನ್ನ ಮಾತೃಭಾಷೆಯಲ್ಲ,
ನನ್ನ ಪಾಡಿಗೆ ನನ್ನನ್ನು ಬಿಡಬಾರದೇಕೆ,
ಟೀಕಾಕಾರರೆ, ಗೆಳೆಯರೇ, ರಕ್ತಸಂಬಂಧಿಗಳೆ,
ನೀವೆಲ್ಲ ಸುಮ್ಮನಿರಬಾರದೇಕೆ?‌ ನನಗೆ ಬೇಕಾದ ಭಾಷೆಯಲ್ಲಿ ಸಂವಹಿಸಲು ಬಿಡಲೊಲ್ಲಿರೇಕೆ?
ಯಾವ ಭಾಷೆ ಮಾತನಾಡುವೆನೋ ಅದು ನನ್ನದಾಗುವುದು, ಅದರ ವಿರೂಪ, ವಕ್ರತೆ ಎಲ್ಲದರ ಸಹಿತ ಅದು ನನ್ನದು ಮಾತ್ರ.
ಅರ್ಧ ಇಂಗ್ಲಿಷ್, ಅರ್ಧ ಭಾರತೀಯ ವಿಚಿತ್ರವೆನ್ನಿಸಿದರೂ ಅದು ಎದೆಯಾಳದಿಂದ ಬಂದದ್ದಾಗಿರುತ್ತದೆ, ನಾನೆಷ್ಟರ ಮಟ್ಟಿಗೆ ಮನುಷ್ಯಳೋ ಅದರಷ್ಟೇ ಮನುಷ್ಯರ ಲೋಕದ್ದು ಈ ಭಾಷೆ ಕೂಡಾ, ತಿಳಿಯಿತಲ್ಲವೇ?
ಅದು ನನ್ನ ಸಂತಸಕ್ಕೆ, ನನ್ನ ಆಸೆಗಳಿಗೆ, ನನ್ನ ಭರವಸೆಗಳಿಗೆ ದನಿಯಾಗಬಲ್ಲದು ಮತ್ತು ಕಾಗೆ ಕಾಕಾ ಎಂದಷ್ಟು, ಸಿಂಹ ಗರ್ಜಿಸಿದಷ್ಟು ಸುಲಭಕ್ಕೆ ಅದು ನನ್ನದಾಗುವುದು. ಮನುಷ್ಯರ ಭಾಷೆ ಇದೆಯಲ್ಲ, ಅದು ಆಗಾಗ ಬೇರೆಯೇ ಆದ, ಬುದ್ಧಿ ಉಪಯೋಗಿಸಿ ಆಡುವ ಭಾಷೆ,‌ ಎಲ್ಲವನ್ನೂ ಕಾಣುವ-ಕೇಳುವ ಮತ್ತು ಎಚ್ಚರಿಕೆಯ ಸ್ಥಿತಿಯಲ್ಲಿನ ಮನಸ್ಸಿನ ಭಾಷೆ. ಬಿರುಗಾಳಿಗೆ ಸಿಕ್ಕ ಮರಗಳ ಕಿವುಡು, ಕುರುಡಿನ ಭಾಷೆಯಲ್ಲ, ಮುಂಗಾರು ಮೋಡಗಳ ಭಾಷೆಯಲ್ಲ, ಮಳೆಯ ಭಾಷೆಯಲ್ಲ, ಅಥವಾ ಧಗಧಗಿಸುವ ಚಿತೆಯ ಅಸ್ಪಷ್ಟ ವಟಗುಟ್ಟುವಿಕೆಯೂ ಅಲ್ಲ.
ನಾನು ಮಗುವಾಗಿದ್ದೆ, ಒಂದು ದಿನ ನಾನು ದೊಡ್ಡವಳಾದೆ ಎಂದರು, ಏಕೆಂದರೆ ನಾನು
ಎತ್ತರವಾಗುತ್ತಿದ್ದೆ, ನನ್ನ ಕೈಕಾಲುಗಳು ಉಬ್ಬಿದವು, ಮತ್ತು ಒಂದೆರಡು ಭಾಗಗಳಲ್ಲಿ
ಚಿಗುರೊಡೆದವು ಕೂದಲು. ಮತ್ತೇನನ್ನು ಬಯಸಬೇಕೆಂದು ತಿಳಿಯದೆ, ಪ್ರೀತಿಗಾಗಿ ತಹತಹಿಸಿದೆ, ಅವ ಹದಿನಾರರ ಹರೆಯದವನೊಬ್ಬನನ್ನು ಮಲಗುವ ರೂಮಿಗೆಳೆದು ತಂದು ಬಾಗಿಲು ಮುಚ್ಚಿದ.
ಅವನು ನನ್ನನ್ನು ಹೊಡೆಯಲಿಲ್ಲ, ಆದರೆ ನನ್ನ ಹೆಣ್ಣು ದೇಹ ಜರ್ಝರಿತವಾಯಿತು. ನನ್ನ ಮೊಲೆಗಳು ಮತ್ತು ಗರ್ಭಕೋಶದ ಭಾರ ನನ್ನನ್ನು ನುಚ್ಚುನೂರಾಗಿಸಿತು, ನಾನು ದಯನೀಯವಾಗಿ ನಲುಗಿದೆ.
ನಂತರ … ನಾನು ಶರಟು ಧರಿಸಿ, ಅಣ್ಣನ ಪ್ಯಾಂಟು ಧರಿಸಿ, ಕೂದಲು ತುಂಡರಿಸಿ ನನ್ನ ಹೆಣ್ಣುತನವನ್ನು ನಿರ್ಲಕ್ಷಿಸಿದೆ.
ಸೀರೆ ಉಡು, ಹೆಣ್ಣಂತೆ ಇರು, ಹೆಂಡತಿಯಂತಿರು ಎಂದರು … ಕಸೂತಿ ಹಾಕು, ಅಡುಗೆ ಮಾಡು, ಕೆಲಸದಾಕೆಯೊಡನೆ ಜಗಳವಾಡು, ಎಲ್ಲರಂತೆ ಹೊಂದಿಕೋ,
ಓಹ್ ಅವರಲ್ಲಿ ಒಬ್ಬಳಾಗು ಎಂದು ಕೂಗಿದರು, ಗೋಡೆಗಳ ಮೇಲೆ ಕೂರಬೇಡ ಎಂದರು ಮತ್ತು ನಮ್ಮಲೇಸಿನ ಕರ್ಟನ್ ಗಳಾವರಿಸಿದ ಕಿಟಕಿಯಲ್ಲಿ ಇಣುಕಬೇಡವೆಂದೂ …
ಅಮಿಯಾಗಿರು, ಕಮಲಳಾಗಿರು, ಅಥವಾ
ಮಾಧವಿಕುಟ್ಟಿಯಾಗಿಯೇ ಉಳಿದರೆ ಇನ್ನೂ ಒಳಿತು. ನೀನು ಹೆಸರೊಂದನ್ನು ಆರಿಸಿಕೊಳ್ಳುವ ಸಮಯ ಬಂದಿದೆ, ಹಾಗೇ ಪಾತ್ರವೊಂದನ್ನೂ ಕೂಡಾ. ವೇಷಗಳ ಧರಿಸಿ ನಾಟಕದ ಆಟವಾಡದಿರು, ದ್ವಂದ್ವ ಮನಸ್ಥಿತಿಯವಳಂತೆ ಅಥವಾ ಅತೀವ ಕಾಮಾಸಕ್ತಳಂತೆ ಆಡದಿರು.
ಪ್ರೇಮದಲ್ಲಿ ವಂಚನೆಗೊಳಗಾದಾಗ, ಜೋರಾಗಿ ಅತ್ತು, ಕೂಗಾಡಿ ಮುಜುಗರಕ್ಕೀಡು ಮಾಡದಿರು … ನಾನು ಒಬ್ಬ ಗಂಡಸನ್ನು ಭೇಟಿಯಾದೆ, ಪ್ರೀತಿಸಿದೆ, ಅವನನ್ನು ಯಾವ ಹೆಸರಿನಿಂದಲೂ ಕರೆಯದಿರಿ, ಅವನು ಹೆಣ್ಣನ್ನು ಬಯಸುವ ಎಲ್ಲ ಗಂಡಸರಂಥವನೇ ಒಬ್ಬ ಅಂದರೆ ಸಾಕು, ಹೇಗೆ ಪ್ರೀತಿ ಬಯಸುವ ಎಲ್ಲ ಹೆಂಗಸರಂಥ ಹೆಂಗಸು ನಾನಿರುವೆನೋ ಹಾಗೆ,
ಅವನಲ್ಲಿ ನದಿಯ ಹಸಿವಿನ ಆತುರವಿತ್ತು, ನನ್ನಲ್ಲಿ ಸಾಗರದ ದಣಿವಿಲ್ಲದ ಕಾಯುವಿಕೆಯಿತ್ತು.
ನೀನು ಯಾರು, ಎದುರಾದ ಪ್ರತಿಯೊಬ್ಬರನ್ನೂ ಕೇಳುತ್ತೇನೆ,
ಎಲ್ಲರೂ ‘ನಾನು’ ಎಂದೇ ಉತ್ತರಿಸುವರು. ಎಲ್ಲೆಡೆಯೂ ನೀನು ಯಾರೆಂದರೆ ತನ್ನನ್ನು ‘ನಾನು’ ಎಂದು ಕರೆದುಕೊಳ್ಳುವವನೇ ಎದುರಾದ.
ಈ ಜಗತ್ತಿನ ಎಲ್ಲ ಗಂಡಸರೂ ಒರೆಯಲ್ಲಿಟ್ಟ ಕತ್ತಿಯಂತೆ ಭದ್ರ ಮಾಡಲ್ಪಟ್ಟಿರುತ್ತಾರೆ. ನಡುರಾತ್ರಿಯ ಹನ್ನೆರಡಕ್ಕೆ ಅಪರಿಚಿತ ಊರುಗಳಲ್ಲಿನ ಹೋಟೆಲ್ಲುಗಳಲ್ಲಿ ಒಂಟಿಯಾಗಿ ಕುಡಿಯುವವಳು ನಾನು ಮಾತ್ರ, ನಗುವವಳು ನಾನು ಮಾತ್ರ, ಪ್ರೀತಿಸುವವಳೂ ನಾನು ಮಾತ್ರ, ನಂತರದಲ್ಲಿ ಅವಮಾನಗೊಳ್ಳುವವಳೂ ನಾನು ಮಾತ್ರ, ವಟಗುಟ್ಟುತ್ತ ಯಾತನೆಯಲ್ಲಿ ಬಿದ್ದುಕೊಳ್ಳುವವಳೂ ನಾನು ಮಾತ್ರ,
ಪಾಪವೆಸಗುವವಳೂ ನಾನು ಮಾತ್ರ, ಸಂತಳೂ ನಾನು ಮಾತ್ರ,
ಪ್ರೀತಿಸಲ್ಪಟ್ಟವಳು ನಾನು, ವಂಚನೆಗೊಳಗಾದವಳೂ ನಾನು,
ನಿನ್ನದಲ್ಲದ ಯಾವ ಖುಷಿಯೂ ನನ್ನದೂ ಅಗಿರುವುದಿಲ್ಲ, ನಿನ್ನದಲ್ಲದ ಯಾವ ನೋವೂ ನನ್ನದಾಗಿರುವುದಿಲ್ಲ,
ಈಗೀಗ ನಾನೂ ನನ್ನನ್ನು ‘ನಾನು’ ಎಂದೇ ಪರಿಚಯಿಸಿಕೊಳ್ಳುತ್ತೇನೆ

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...