Share

ಷರತ್ತಿಲ್ಲದ ಸಂಬಂಧದ ಬಂಧಿಯಾಗಿ!
ಅರ್ಚನಾ ಎ ಪಿ

 

 

 

ಯಾವ ಷರತ್ತಿಲ್ಲದೆ ಬದುಕೋದು ಸಾಧ್ಯವಿಲ್ಲವಾ?

 

 

 

 

ಹೂವಾಗಿ ಹೋಗ್ತೀನಿ ಆದರೆ ಒಂದು ಷರತ್ತು,
ಕನಸಾಗಿಬಿಡ್ತೀನಿ ಆದರೆ ಒಂದು ಷರತ್ತು,
ಹಾಡಿನ ಪದಗಳಾಗಿ ಕೂರುವೆ ಆದರೆ ಒಂದು ಷರತ್ತು…

ಷರತ್ತು, ವಚನ, ಮಾತು, ಪ್ರಮಾಣ

ಯಾರೊಂದಿಗೆ?

ಈ ಕ್ಯಾಲೆಂಡರ್ ಬದಲಾವಣೆ ಆಗಿ ಅಂದರೆ ೨೦೧೮ ಅನ್ನೋ ಸೂಚಿಯನ್ನು ಬದಲಾಯಿಸಿ ೩೨ ದಿನಗಳು ಕಳೆದೇ ಹೋದವು. ಅಲ್ಲಲ್ಲ. ಆಯಸ್ಸಿನ ಭದ್ರ ಬೀಗ ಹಾಕಿರೋ ಪಟ್ಟಿ ಸೇರಿ ಹೋದವು, ಯಾವ ಷರತ್ತಿಲ್ಲದೆ. ಹೇಗೆಂದರೆ, ಷರತ್ತೇ ಇಲ್ಲದೇ ರವಿಯುದಯವಾಗೋ ಹಾಗೆ, ಷರತ್ತೇ ಇಲ್ಲದೇ ಹುಣ್ಣಿಮೆಯಲ್ಲಿ ಸಾಗರದ ಮೈನವಿರೇಳಿಸಿ, ಅಮಾವಾಸ್ಯೆಗೆ ತನ್ನದೇ ಅಸ್ತಿತ್ವ ಕೊಡೋ ಶಶಿಯ ಹಾಗೆ, ಅಥವಾ ಅಗಣಿತ ತಾರಾಗಣಗಳ ನಡುವೆ ಮಾರ್ಗದೋರೋ ಧ್ರುವತಾರೆಯ ಹಾಗೆ, ಅದೂ ಬಿಟ್ಟರೆ ಏನೊಂದೂ ಬೇಡದೆ, ದೇಶದ ಸದ್ಯದ ಪರಿಸ್ಥಿತಿಯಲ್ಲಿ ಒಳಗಿರೋ ನಾಗರಿಕರು ರೋಸಿಹೋದರೂ, ವ್ಯವಸ್ಥೆ ಇಷ್ಟು ಹದಗೆಟ್ಟು ನಾರುತ್ತಿದ್ದರೂ, ತಳಹಿಡಿಯುತಿದ್ದರೂ, ಮೈನಸ್ ಡಿಗ್ರಿ ತಲುಪಿರೋ ವಾತಾವರಣದಲ್ಲಿ ಹದ್ದಿನ ಕಣ್ಣಿನಿಂದ ಕಾಯುವ ಕಾವಲು ಪಡೆಯ ಹಾಗೆ…

ಎಲ್ಲಾ ಸರಿ, ನಾವ್ ಮಾಡ್ತಿರೋ ಘನಂದಾರಿ ಕೆಲಸಗಳಿಗೆ ಭೂಮಿ ಏನಾದರೂ ಷರತ್ತು ಹಾಕೋಕೆ ಶುರು ಮಾಡಿದ್ರೆ ಹೇಗಿರ್ತಿತ್ತು ಪರಿಸ್ಥಿತಿ? ಊಹಿಸಲು ಕಷ್ಟ.

ತೀರಾ ದೊಡ್ಡ ದೊಡ್ಡ ಷರತ್ತುಗಳ ಕಡೆ ಹೋಗದೆ, ನೀನ್ ತುಳಿದುಕೊಂಡು ಓಡಾಡ್ತೀಯಾ? ಇನ್ಮೇಲೆ ಹಾಗೆ ಮಾಡೋ ಹಾಗಿಲ್ಲ ಅಂತ ಸುಮ್ಮನೆ ಒಂದರೆಕ್ಷಣ ಕಂಪಿಸಿಬಿಟ್ಟರೆ ಏನಾಗಬಹುದು? ಉತ್ತರ ಗೊತ್ತಿರೋದೇ. ಆದರೂ ಷರತ್ತು ಹಾಕಿಸಿಕೊಳ್ಳೋದು ಮಾತ್ರ ಕ್ಷಮಯಾ ಧರಿತ್ರಿಯೇ.

ನೀನ್ ಬಟ್ಟೆ ಒಗೆದರೆ, ನಾನ್ ತಿಂಡಿ ಮಾಡೋದು ಅನ್ನೋ ಆಗ್ರಹದ ಷರತ್ತು, ನಾನೂ ಕೆಲಸಕ್ಕೆ ಹೋಗೋದ್ರಿಂದ ಮಗುವನ್ನು ಇಬ್ರೂ ಅರ್ಧರ್ಧ ನೋಡಿಕೊಳ್ಳಬೇಕು ಅನ್ನೋ ಸಮಾನತೆಯ ಷರತ್ತು, ನೀನ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಐಫೋನೋ, ಸೈಕಲ್ಲೋ, ಮತ್ತೇನೋ ಕೊಡಿಸ್ತೀನಿ ಅನ್ನೋ ಆಮಿಷದ ಷರತ್ತು, ಮನೆಯಲ್ಲಿ ಹಬ್ಬಕ್ಕೆ ಸಿಹಿ ಮಾಡಿದ್ರೂ ತಿನ್ನಲು ಕೊಡದೇ ಇರೋ ಮನೆಯೊಡತಿಯ ಕಾಳಜಿಯ ಷರತ್ತು, ಮದುವೆಯಾಗುವಾಗ ನಿನಗೆ ಎಲ್ಲವನ್ನೂ ತಂದುಕೊಡ್ತೀನಿ, ರಾಣಿಯ ಹಾಗೆ ಮೆರೆಸ್ತೀನಿ ಅಂದಿದ್ನಾ ಅನ್ನೋ‌ ಮಾತು ಮುರಿಯೋ ಷರತ್ತು, ಸರಿಯಾಗಿ ಕೆಲಸ ಮಾಡಿ ಕೊಟ್ಟಿರೋ ಟಾರ್ಗೆಟ್ ಪೂರೈಸಿದ್ರೆ ಮಾತ್ರ ಈ ವರ್ಷ ಬಡ್ತಿ ಅಂತ ಹೇಳೋ ಬಾಸ್ ನ ಗತ್ತಿನ, ಅಧಿಕಾರದ ಷರತ್ತು…
ಪಟ್ಟಿ ಬೆಳಿತಾನೇ ಹೋಗತ್ತೆ… ಷರತ್ತಿಲ್ಲದೇ.

ಹಾಗಿದ್ರೆ ಇದಿಲ್ಲದೆ (ಷರತ್ತು) ಯಾರೂ ಇಲ್ವಾ, ಏನೂ ಇಲ್ವಾ?

ಸಂಬಂಧಗಳನ್ನು ಹುಡುಕೋಕೂ ಷರತ್ತು, ಉಳಿಸಿಕೊಳ್ಳೋಕೂ ಷರತ್ತು, ಕೊನೆಗೆ ಬಿಡುಗಡೆ ಹೊಂದೋದೂನೂ ಷರತ್ತು ಹಾಕಿಯೇ. ಒಳ್ಳೇ ಆಟದ ಸ್ಪರ್ಧೆ ಇದ್ದ ಹಾಗೆ.

ಉದಾಹರಣೆಗೆ ಒಬ್ಬ ಬಾಲಕನಿಗೆ ಉಪನಯನ ಮಾಡಿ, ಆಚಮನ, ಪ್ರಾಣಾಯಾಮ, ಜಪ-ತಪಗಳ ನಿಯಮದ ಬಾಹ್ಯ ಚಟುವಟಿಕೆಯ ಷರತ್ತು ವಿಧಿಸಿ ಶಿಸ್ತಿನಲ್ಲಿಡಬಹುದೇ ಹೊರತು ಮನಸ್ಸಿನಾಳಕ್ಕಿಳಿದು ಬದಲಾಯಿಸುವುದು ಅಸಾಧ್ಯ.

ಹಾಗಂತ ಷರತ್ತಿಲ್ಲದೆ, ವಚನಗಳಿಲ್ಲದೆ, ಪಯಣ ಸಾಧ್ಯವಾ? ಅದೂ ಅಲ್ಲದೇ ಷರತ್ತು ವಿಧಿಸೋದು, ಆಗ್ರಹಿಸೋದಾದರೂ ಯಾವ ಕಾರಣಕ್ಕೆ ಇರಬಹುದು? ಒಂದು ಕಳೆದುಕೊಂಡುಬಿಡುತ್ತೇವೇನೋ ಅನ್ನೋ ಆತಂಕ, ಭಯಕ್ಕಾಗಿ ಅಥವಾ ನನ್ನ ಮಾತೇ ನಡೆಯಬೇಕು ಅನ್ನೋ ಅಹಂ ತೃಪ್ತಿಗಾಗಿಯಾ? ಉತ್ತರಕ್ಕೆ ಷರತ್ತು ವಿಧಿಸುವವರನ್ನೇ ಕೇಳಬೇಕು.

ಸರಿ, ಕೇಳಿದ್ರೆ ಬರೋ ಉತ್ತರವಾದರೂ ಎಷ್ಟು ಸತ್ಯದ್ದು? ನಾವೊಪ್ಪಬೇಕಷ್ಟೆ. ಷರತ್ತಿಲ್ಲದೆ… ವಿಧಿಯಿಲ್ಲದೆ. ಕಾರಣ ಪ್ರತಿಯೊಬ್ಬರ ಅಂತರಂಗವನ್ನು ಹೊಕ್ಕು ನೋಡೋಕೆ ಸಾಧ್ಯವಿಲ್ಲ. ಅಕಸ್ಮಾತ್ ಆ ವರವೂ ದೊರಕಿ ಬಿಟ್ಟಿದ್ರೆ ಇನ್ನೆಲ್ಲಿರ್ತಿದ್ದನೋ ಮನುಷ್ಯ. ಎಲ್ಲರಿಗೂ ಅವರವರ ಆಂತರ್ಯದಲ್ಲಿ ನಡೆಯೋ ಮನೋ ವ್ಯಾಪಾರ ಬಚ್ಚಿಡೋ ಹಕ್ಕಿದೆ, ಹಾಗಂತ ಬೇರೆಯವರಿಗೂ ಬಚ್ಚಿಡೋದನ್ನು ಹೇಳಿಕೊಡೋ ಷರತ್ತು ವಿಧಿಸೋದೆಷ್ಟು ಸರಿ?

ಈ ಷರತ್ತು ವಿಧಿಸುವಿಕೆ ಒಂಥರಾ ಬಂಧನವೇ… ಚಿನ್ನದ ಬಂದೀಖಾನೆಯಲ್ಲಿಡ್ತೀನಿ, ಮುತ್ತಿನ ರತ್ನದ ಸರಪಳಿ ತೊಡಿಸ್ತೀನಿ ಅಂತ ಸಂಬಂಧವನ್ನು ಹಿಡಿದಿಡುವ ನಿಟ್ಟಿನಲ್ಲಿ ಅದು ಉಸಿರು ಕಟ್ಟಿ, ಸತ್ತೇ ಹೋಗತ್ತೆ ಅಂತ ಅರಿವಿಗೆ ಬರೋದೇ ಇಲ್ಲ. ಬಂದರೂ, ಬರೋಷ್ಟರಲ್ಲಿ ಸಮಯ, ಕಾಲ ಮಿಂಚಿ ಹೋಗಿರತ್ತೆ.
ಈ ಷರತ್ತು ಹಾಕಿ ಮಾಡೋ ಕಾರ್ಯ ಒಂಥರಾ ದೇವರನ್ನು ಅನುಭವಿಸೋ ಹಾಗೆ, ಎಷ್ಟು ದೊಡ್ಡ ಷರತ್ತು ಹಾಕ್ತೇವೋ ಆ ಸಂಬಂಧದ ಸವಿ ಅಷ್ಟು. ಎಷ್ಟು ಸಂಕುಚಿತಗೊಳಿಸಿಕೊಳ್ತೀವೋ ಅಷ್ಟೇ ಕನಿಷ್ಟ ಪ್ರಾಪ್ತಿ. ನಮಗೆ, ನಮ್ಮ ಭಾವನೆಗೆ ಬರೋದು ಎಷ್ಟು ಭಾವಿಸಿದ್ರೆ ಅಷ್ಟೇ. ಹೇಗೆ ಭಾವಿಸ್ತೀವೋ ಹಾಗೆ. ಇಲ್ಲಿ ನಮ್ಮ ಷರತ್ತು, ನಮ್ಮ ಭಾವನೆ, ನಮ್ಮ ಅನುಭವ, ‌ನಾವ್ ಕಾಣೋ ರೂಪ ನಮಗಷ್ಟೇ ಸೀಮಿತ.

ಅದಕ್ಕೇ ಇರಬೇಕು ಹಿರಿಯರು, ಅಪ್ಪ ಮಕ್ಕಳು, ಗಂಡ ಹೆಂಡತಿ, ಸ್ನೇಹ ಸಂಬಂಧಗಳಲ್ಲಿ ಬೇಷರತ್ತಾಗಿ ನಡ್ಕೊಳ್ತಿದ್ರು. ಒಪ್ಪಕೊಳ್ತಿದ್ರು, ಕಡೇವರೆಗೂ ಪಾಲಿಸ್ತಿದ್ರು. ಹಾಗಾಗೀನೇ ಇನ್ನೂ ನಾವದರ ಸವಿ ಉಣ್ಣುತ್ತಿದ್ದೇವೆ. ಅವರ ಆ ತ್ಯಾಗ ನಾವ್ ಮಾಡದೇ ಇರೋದಕ್ಕೇ ಇವತ್ತು ಲಕ್ಷಗಟ್ಟಲೆ ವಿಚ್ಛೇದನದ ಅರ್ಜಿಗಳು, ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ‘ಬಿಡುಗಡೆ’ಗಾಗಿ ಕಾಯ್ತಾ ಇವೆ.

ಎಲ್ಲರೂ… ತಮ್ಮ ತಮ್ಮ ಒಡೆದ ಪಾತ್ರೆಗಳಿಗೆ ಫೆವಿಕಾಲೋ, ಗೋಂದೋ‌ ಹಚ್ಚಿ ಅದರಲ್ಲಿ ಶೇಖರಣೆ ಆಗಿರೋ ಹನಿ ಪ್ರೀತಿ ರಸವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪರಸ್ಪರರ ನಡುವೆ ಹೆಣೆದು ಕೊಂಡ ದಾರ ಹರಿದು, ಗಂಟು ಹಾಕಿ, ಎಷ್ಟು ಗಂಟಾಗಿವೆ ಅಂದರೆ, ಮೂಲ ದಾರದ ಅಸ್ತಿತ್ವವೇ ಇಲ್ಲದಂತೆ, ತಾಯಿ ಮಗನಿಗೆ ಷರತ್ತು ಹಾಕ್ತಾಳೆ, ಮಗ ತನ್ನ ಹೆಂಡತಿಗೆ ಷರತ್ತು ವಿಧಿಸ್ತಾನೆ, ಹೆಂಡತಿ ಮಗುವಿಗೆ, ಮಗು‌ ತನ್ನ ಭವಿಷ್ಯಕ್ಕೆ… ಹೀಗೇ ಇದರ ವಿಷವರ್ತುಲದ ಸುಳಿಯಲ್ಲೇ ಸಿಲುಕಿ ಹೋಗೋ ಮುನ್ನ…

ಯಾವ ಷರತ್ತಿಲ್ಲದೆ ಹಣ್ಣು ಕೊಡೋ ವೃಕ್ಷಗಳಂತೆ, ಯಾವ ಷರತ್ತಿಲ್ಲದೆ ಕಾಳಿಗೆಂಟು ತೆನೆ ಉಕ್ಕಿಸೋ ಧರಣಿಮಂಡಲದಂತೆ, ಮಣ್ಣಲ್ಲಿರಲಿ, ಕೆಸರಲ್ಲಿರಲಿ ಚಿಗುರೋದೇ ನನ್ನ ಕರ್ತವ್ಯ ಅಂತ ಬೆಳೆಯೋ ಬೀಜದಂತೆ, ಯಾವ ಷರತ್ತಿಲ್ಲದೆ ಕ್ಷಣಮಾತ್ರದಲ್ಲಿ ಆಯಸ್ಸು ಮಗಿಯುವುದು ಗೊತ್ತಿದ್ದರೂ ನಗುವುದನ್ನು, ಮಕರಂದವನ್ನು ಹಂಚುವ ಹೂವಿನಂತೆ, ಯಾವ ಷರತ್ತಿಲ್ಲದೆ, ಉರಿಯೋ ಸೂರ್ಯನ ಶಾಖಕ್ಕೆ ಮೈಯೊಡ್ಡಿ ಮೋಡವಾಗುವ ಸಮುದ್ರದ ನೀರಿನಂತೆ, ಯಾವ ಷರತ್ತಿಲ್ಲದೆ, ಹಸಿರು ಸಾಮ್ರಾಜ್ಯದ ನಮ್ರ ಪ್ರಜೆ ನಾನು ಅಂತ ಬದುಕೋದು ಸಾಧ್ಯವಿಲ್ಲವಾ?

ಏನೂ ಕೇಳಲಿಲ್ಲ, ಏನೂ ಹೇಳಲೂ ಇಲ್ಲ,
ನೀನು ಹೃದಯದಿಂದ ಏನು ಕೊಟ್ಟೆಯೋ ಕೊಟ್ಟೆ.
ಏನೂ ಪ್ರಶ್ನಿಸಲಿಲ್ಲ, ಏನೂ ಅಳೆದು ತೂಗಲಿಲ್ಲ,
ನಕ್ಕು ಕೊಟ್ಟದ್ದೇನನ್ನೋ.
ನೀನೇ ಬಿಸಿಲು, ನೀನೇ ನೆರಳು,
ನೀನೇ ನನ್ನವ, ಅಪರಿಚಿತನೂ.

ಷರತ್ತಿಲ್ಲದ ಸಂಬಂಧದ ಬಂಧಿಯಾಗಿ!

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

One Comment For "ಷರತ್ತಿಲ್ಲದ ಸಂಬಂಧದ ಬಂಧಿಯಾಗಿ!
ಅರ್ಚನಾ ಎ ಪಿ
"

 1. Rajesh
  3rd February 2018

  ಷರತ್ತು ಒಂಥರಾ ಶರಬತ್ತು ಇದ್ದ ಹಾಗೆ..‌ಮನುಷ್ಯನನ್ನ ಕಟ್ಟಿಹಾಕೋಕೆ ಪ್ರಯತ್ನಿಸುತ್ತದೆ…

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...