Share

ಅಜಬ್ ದೇಶ್ ಕಿ ಗಜಬ್ ಕಹಾನಿ!

 

ಟೀವಿ ಚಾನೆಲ್ಲುಗಳಲ್ಲೂ ಅದೇ ಸುದ್ದಿ. ಜನ ಹೋ… ಎಂದು ಸೇರುತ್ತಾರೆ. ಲಕ್ಷಾಂತರ ಜನ.

 

ಚಂದ್ರ ಸುರಿವ ರಾತ್ರಿಯ ಅನಂತ ನೀರವ
ಪ್ರಾಣ ಪಡೆದಂತೆ ಸರಿದಾಡುವ ನೆರಳು ಮನಸಿನ
ಚೌಕಿ ದಾಟಿದ ಆಟ

ಮೊದಲು ಕುಣಿಯುವುದೇ
ದೂರ ಬೆಟ್ಟದ ತಿಳಿ ಹಸಿರ ಮೇಲೆ ಸಂಜೆ ಬೆಳಗಿದ್ದ
ಕೊಕ್ಕರೆ ಗೆರೆ

ಮಾರಾಣಿ ಮೈಯೊಳಗೆ ಮಳೆ ಧೋ ಎಂದು
ಕಂಗೊಳಿಸುವುದು ಅಂತಃಪುರದಾಚೆಯಾಕಾಶ; ಒಳಗೆ ಬೆಳಕಿಲ್ಲ
ಭಾಗವತರಿಗೆ ಬೀಡಿ ಸೇದುವ ತಲಬು

ಬೆರಗೇರಿ ಬರುವುದು ಮದ್ದಳೆಯ ತನನ
ಮೂಕ ಗಂಭೀರ ಸಿಂಹಾಸನದಲ್ಲೂ ಬೇಗುದಿಯ ನಿಡುಸುಯ್ಲು
ರಂಗವೇರುವ ಕಥೆ ವ್ಯಾಕುಲಮುಖಿ

ವಿದ್ಯುನ್ಮಾನ ಪ್ರಭಾವಳಿಯ ಧರಣಿ ಮಂಡಲ ಮಧ್ಯದೊಳಗೆ ಹೀಗೆ ಕಥೆಯೊಂದು ತನ್ನ ಟಾರ್ಗೆಟ್ ಕೇಳುಗರು ಓದುಗರು ಅಥವಾ ನೋಡುಗರ ಬಗ್ಗೆಯೇ ಅನಿವಾರ್ಯ ಚಿಂತೆಯ ಮಣಭಾರ ಹೊತ್ತುಕೊಂಡೇ ಪ್ರವೇಶಿಸುತ್ತಿರಬೇಕಾದರೆ-

ಕಥೆಯೊಳಗಿನ ಪಾತ್ರಗಳನ್ನೂ ನಾಚಿಸಬಲ್ಲಂಥ ಮುಖವಾಡದ ಮಂದಿ ತಮ್ಮದೇ ಲೋಕದಲ್ಲಿ ತಲ್ಲೀನರಾಗಿ ಬಲು ಆತುರತೆಯಿಂದ, ಮದದಿಂದ, ವೈಯಾರದಿಂದ ಸಂಚರಿಸುತ್ತಿರುವುದು ಕಾಣಿಸುತ್ತದೆ. ತನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳುವವರಿಲ್ಲವೆನ್ನಿಸಿ ಇನ್ನಷ್ಟು ಚಿಂತೆಯೊಂದಿಗೆ ಕಥೆ ಭಾರವಾದ ಹೆಜ್ಜೆಗಳನ್ನಿಡತೊಡಗುತ್ತದೆ.

ಆಗ-

ಯಾರೋ ಬಿಕ್ಕಳಿಸಿ ಅಳುತ್ತಿರುವುದು ಕತ್ತಲ ಯಾವುದೋ ಮೂಲೆಯಿಂದೆಂಬಂತೆ ಕೇಳಿಸುವುದು. ಅಳುವಿನ ಸದ್ದು ಕೇಳಿಬರುತ್ತಿರುವ ಕಡೆ ಕೆಲವರಾದರೂ ಕಣ್ಣು ಕೀಲಿಸಿ ನೋಡುತ್ತಾರೆ. ಕ್ರಮೇಣ ಅಲ್ಲಿ ಹೌದೊ ಅಲ್ಲವೊ ಅನ್ನಿಸುವಂಥ ಮಸುಕು ಮಸುಕು ಬೆಳಕು. ಅದರೊಳಗೆ ಹೆಂಗಸೊಬ್ಬಳ ಚಹರೆ. ಅವಳೇ ಇರಬೇಕು ಮಾರಾಣಿ.

ಹೆರಳು ಹಾಕಿಲ್ಲ ಸೊಗಸಾಗಿ; ಮುಡಿದಿಲ್ಲ ಘಮ ಸೂಸುವ ಮಲ್ಲಿಗೆ
ನಿರಾಭರಣೆ; ಮೈಮೇಲಿನ ಸೀರೆಯೂ ಬಡತನದ ಬೇಸಿಗೆ
ನಿಜವೇನಾ? ಮಾರಾಣಿ ಇವಳೇನಾ?

ನಗೆ ಮಾಸಿ ಮೊಗದಲ್ಲಿ ಕಾಲವಾಯಿತೊ ಎಷ್ಟು?
ಚರಿತೆ ತಲ್ಲಣಿಸುತ್ತಿದೆ ದುಃಖದ ಕಡಲಲ್ಲಿ ಜೀವದ ದೀಪವಿಟ್ಟು
ನಿಜವೇನಾ? ಮಾರಾಣಿ ಇವಳೇನಾ?

ನಕ್ಷತ್ರಗಳಿಲ್ಲ ಕಣ್ಣಲ್ಲಿ ಇಲ್ಲ ಮಿಂಚು; ಮರೆತಿವೆ ಮಾತು
ಎದೆಯೊಳಗೆ ಹರಿವಿಲ್ಲ ನಿರೀಕ್ಷೆಗಳಲ್ಲೇ ಹೂತು ಸೋತು
ಇವಳಲ್ಲ ಮಾರಾಣಿ ಇವಳಲ್ಲ ಎಂದು

ಗುಸುಗುಡತೊಡಗುತ್ತಾರೆ ಗಂಡಸರು, ಹೆಂಗಸರೆಲ್ಲ. ಅದು ಗದ್ದಲವೇ ಆಗಿ ಬೆಳೆಯುತ್ತದೆ. ಎಷ್ಟೆಲ್ಲ ಬಡವರ ಮನೆಗೆ ಬೆಳಕು ಕೊಟ್ಟಿದ್ದಳು ಮಾರಾಣಿ ಎಂಬುದನ್ನು ಮರೆತಿರದ ಮಂದಿಯ ಸಮೂಹ ಅದು. ಅವರೆಲ್ಲರ ಕಳವಳದ ಸದ್ದಿಗೆ ಕಾವಳದ ಸೆರಗಿನಲ್ಲೇ ಮುಖ ಹುದುಗಿಸಿಕೊಳ್ಳುವ ರಾಣಿಯ ಪ್ರಯತ್ನ ವ್ಯರ್ಥವಾಗಿಬಿಡುತ್ತದೆ. ಇನ್ನು ಮರೆಮಾಚಲಾರೆ ಇವರಿಂದ ಎನ್ನಿಸುತ್ತದೆ. ಅಳುವಿನ ಕಟ್ಟೆಯೊಡೆದುಕೊಳ್ಳುತ್ತದೆ. ಸುತ್ತಲೂ ಜನ; ನಡುವೆ ರಾಣಿ. ಸುತ್ತಲೂ ಸಂತೈಕೆ; ನಡುವೆ ಎಂದೆಂದೂ ತೀರದಂಥ ಅಳು. ಒಂದು ಬದುಕಿನ ಪ್ರವಾಹ ಉಕ್ಕುವ ಉಮೇದೂ ಬತ್ತುವ ಆರ್ತತೆಯೂ ಬಿಡಿಸಿ ನೋಡಲಿಕ್ಕಾಗದ ಬಗೆಯಲ್ಲಿ ಅಲ್ಲಿ ತೋರಿದಂತಾಗುತ್ತದೆ.

ಸಿಂಗರದ ಒಳಗೊಳಗೆ ರಂಗಿರದ ಸಂಸಾರ
ಧೂಳಲ್ಲಿ ಮೂಡಿಕೊಂಡವು ಅವಳ ಹೆಜ್ಜೆ
ಕತ್ತಲೆಯ ಕದ ತಟ್ಟಿ ಯಾರೋ ನಕ್ಕಂತಾಯ್ತು ಎತ್ತಲಿಂದಲೊ ನೆಗೆದಂತೆ ಬೆಕ್ಕು

ಹಿಮ್ಮೇಳದವರು ಒಂದು ತಲ್ಲಣದ ಆಖ್ಯಾನಕ್ಕೆ ತಯಾರಾದವರ ಹಾಗೆ ಸೊಲ್ಲು ಎತ್ತುತ್ತಾರೆ. ಅವರ ಕಥನದೊಳಗೆ ರಾಣಿ-

ಎಲ್ಲ ನಿಟ್ಟುಸಿರುಗಳನ್ನು ಒಳಗೊಳಗೇ ದಹಿಸುತ್ತ
ಎಲ್ಲ ಕಾವಲಿನವರನ್ನು ಕಣ್ಣಲ್ಲೇ ಪ್ರತಿಭಟಿಸುತ್ತ
ಎಲ್ಲ ರಾತ್ರಿಗಳನ್ನು ಕಾತರಿಸುತ್ತಲೇ ಕಳೆಯುತ್ತ
ಎಲ್ಲ ಅನುಮಾನಗಳನ್ನು ಮೌನದಲ್ಲೇ ನೀಗುತ್ತ
ಎಲ್ಲ ಅಗ್ನಿದಿವ್ಯಗಳನ್ನು ನಿಷ್ಕಳಂಕದಿಂದಲೇ ಉತ್ತರಿಸುತ್ತ
ಎದೆಬಿಡದೆ ಹರಿದಳು

ಕ್ಷಣಕ್ಷಣವನ್ನೂ ಎಣಿಸಲು ಕಲಿತಳು
ಅಣು ಅಣುವನ್ನೂ ಮುಟ್ಟಿ ಮುಟ್ಟಿ ಕೇಳಿದಳು
ಹೊಸಿಲ ಒಳಗೇ ನಿಶ್ಚಯಗಳ ನೇರಕ್ಕೆ ಮಣಿದು ನಡೆದಳು
ಮಳೆಯ ಭಾಸದಲ್ಲಿ ನೆನೆದಳು; ಬೆಳದಿಂಗಳ ಹಿತಕ್ಕೆ ಹಂಬಲಿಸಿದಳು
ಎದೆಯೊಳಗೇ ಉರಿವ ಸೂರ್ಯಗೋಳವ ಸ್ಫೋಟಗೊಳ್ಳದಂತೆ ಕಾದಳು

ಮರುಭೂಮಿಯಾಗಿದೆ ಹಾಸಿಗೆ
ಕನಸೊಳಗೇ ನಡೆದ ದೂರವೆಷ್ಟು ಕಾತರಿಸಿ ಮೃಗಜಲದ ಆಸೆಗೆ
ಸುಖದ ಶೃಂಗದಲ್ಲಿ ಮಿಡುಕುವವಳ ಭೋರ್ಗರೆತ ಗೋಡೆಯಾಚೆಗೆ

ರಾಣಿ ಮತ್ತೆ ಕಣ್ಣೀರಾಗುತ್ತ ಹೋದಳು. ಸಂತೈಸುತ್ತಿದ್ದ ಮಂದಿಯ ತೋಳುಗಳಲ್ಲಿ ನೋವಿನ ನದಿಯಂತೆ ನಲುಗಿದಳು. ಅವಳನ್ನು ಸಮಾಧಾನಿಸುವ ಮದ್ದಿಲ್ಲ ತಮ್ಮ ಬಳಿ ಅನ್ನಿಸಿತು ಮಂದಿಗೆ. ಎಲ್ಲ ಮಾತು ಕಳೆದುಕೊಂಡು ನಿಂತರು. ಆ ಮೌನವನ್ನು ಸೀಳಿದ್ದೇ ಗೋಡೆಮರೆಯಲ್ಲಿನ ಕತ್ತಲಿಂದ ಎದ್ದೆದ್ದುಬಂದ ಉತ್ಕಟ ಉಸಿರಿನ ಸದ್ದು. ಮತ್ತೆ ಕಣ್ಣು ಕೀಲಿಸಿ ನೋಡಿತು ಮಂದಿ. ಅಲ್ಲಿನ ದೃಶ್ಯಕ್ಕೆ ಅವರ ಎದೆಯೊಡೆದುಹೋದಂತಾಯಿತು. ಬೆತ್ತಲಾಗಿ ಬೆಸೆದುಕೊಂಡಿದ್ದ ಜೋಡಿ. ಅವನು ರಾಜ, ಅವಳು ದಾಸಿ. ಯುದ್ಧದಂಥ, ಪೈಪೋಟಿಯಂಥ, ಆಕ್ರಮಿಸುವಿಕೆಯಂಥ, ಜೀರ್ಣಿಸಿಕೊಳ್ಳುವಿಕೆಯಂಥ, ವಿಜಯೋತ್ಸಾಹದಂಥ ಆ ಮೈಮರೆತ ಜೋಡಿಯ ಕದಲುವಿಕೆಗೆ ಕಣ್ಣಾಗಲು ಒಪ್ಪದೆ ಅಸಹ್ಯಿಸಿಕೊಂಡು ಮುಖ ತಿರುಗಿಸಿತು ಆ ಅನಕ್ಷರಸ್ಥ ಮಂದಿ. ಆದರೆ ಅವರೆಲ್ಲರ ಸಾತ್ವಿಕ ತಾಕತ್ತಿಗೆ ಬಲು ದೊಡ್ಡ ಮೋಸವಾಗುವ ಹಾಗೆ ಬೆಳೆದುಕೊಂಡಿತ್ತು ವಾಸ್ತವ. ರಾಜ ಅಂತಃಪುರದಲ್ಲಿ ಹಗಲೆಲ್ಲ ರಾಣಿಯ ಕೆಲಸದವಳಾಗಿರುವ, ಆದರೆ ಬಲು ರೂಪದವಳಾದ ಯುವತಿಯ ಜೊತೆ ಕತ್ತಲಾದರೆ ಸಾಕು ಕಂಡ ಕಂಡ ಗೋಡೆಗಳ ಮರೆಯಲ್ಲಿ ಸರಸದಲ್ಲಿ ನಿರತನಾಗುತ್ತಾನೆಂಬ ಸಂಗತಿ ವಿಡಿಯೋ ಸಹಿತ ಆಗಲೇ ಇಂಟರ್ನೆಟ್ಟಿನ ತುಂಬಾ ಲೀಕ್ ಆಗಿಬಿಟ್ಟಿರುತ್ತೆ. ಟೀವಿ ಚಾನೆಲ್ಲುಗಳಲ್ಲೂ ಅದೇ ಸುದ್ದಿ. ಜನ ಹೋ… ಎಂದು ಸೇರುತ್ತಾರೆ. ಲಕ್ಷಾಂತರ ಜನ.

ತನ್ನ ಕಡೆ ನಿಜವಾಗಿಯೂ ಜನ ಯಾವಾಗ ತಿರುಗಿ ನೋಡುತ್ತಾರೆ ಅನ್ನೋದು ಕಥೆಗೆ ಈಗ ಹೊಳೆಯುತ್ತದೆ. ರಾಜ ಮತ್ತು ದಾಸಿ ಮೈಮರೆವ ಸನ್ನಿವೇಶಗಳನ್ನು ಮತ್ತೆ ಮತ್ತೆ ಒಳಗೊಳ್ಳಬೇಕೆಂದು ಕಥೆ ಆಸೆಪಡುತ್ತದೆ.

ಹಿಮ್ಮೇಳದವರು ಹಾಡುತ್ತಾರೆ. ಆದರೆ ಅದು ಈಗ ಯಾರಿಗೂ ಕೇಳಿಸುವುದಿಲ್ಲ.

ಒಗ್ಗರಣೆ:

ಮೊಲ ಮತ್ತು ಆಮೆ ನಡುವೆ ಓಟದ ಸ್ಪರ್ಧೆ ನಡೆದು, ಆಮೆ ಬಗೆಗಿನ ಉಪೇಕ್ಷೆಯ ಕಾರಣದಿಂದ ಮೊಲ ಸೋತಿತ್ತಲ್ಲ; ಈ ಸಲ ಮತ್ತೆ ರೇಸ್ ಎಂದಾಗ ನಿದ್ದೆ ಗಿದ್ದೆ ಮಾಡಿ ಯಡವಟ್ಟು ಮಾಡಿಕೊಳ್ಳಬಾರದು ಅಂತ ಮೊಲ ತೀರ್ಮಾನಿಸಿತು. ಸ್ಪರ್ಧೆ ಶುರುವಾಯಿತು. ಮೊಲ ಒಂದೇ ಗುಕ್ಕಿಗೆ ಓಡಿ ಗುರಿಯನ್ನು ಮುಟ್ಟಿದ್ದು ಮಾತ್ರವಲ್ಲ, ಅದನ್ನು ದಾಟಿ ಮುಂದೆ ಓಡಿತು. ಅದು ಎಂಥ ಸ್ಪೀಡಲ್ಲಿತ್ತೆಂದರೆ, ಅದು ಓಡಿಬಂದು ಗುರಿ ಮುಟ್ಟಿ ಮುಂದೆ ಓಡಿದ್ದನ್ನು ಅಲ್ಲಿದ್ದ ಯಾರೂ ಗಮನಿಸಲೇ ಇಲ್ಲ. ಇತ್ತ ತೆವಳಿಕೊಂಡು ಬಂದ ಆಮೆ ಅಂತೂ ಗುರಿ ಮುಟ್ಟಿ ಎಲ್ಲರಿಂದ ವಾವ್ ವಾವ್ ಅನ್ನಿಸಿಕೊಂಡು, ಪ್ರತಿಸ್ಪರ್ಧಿ ಮೊಲ ಮತ್ತೆಲ್ಲಿ ನಿದ್ದೆಹೋಗಿದೆಯೋ ಎಂದು ತನ್ನಷ್ಟಕ್ಕೇ ಮುಸಿಮುಸಿ ನಗುತ್ತ ಅದರ ದಾರಿ ಕಾಯುತ್ತ ಕೂತಿತು.

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 7 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 1 week ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...


Editor's Wall

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...