Share

ಇದು ಕ್ರಾಂತಿ ಪರ್ವ
ಕಾದಂಬಿನಿ ಕಾಲಂ

 

 

 

 

 

 

 

 

 

ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.

 

ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ನೈಜ ಘಟನೆಯ ಆಧಾರಿತ ಈ ‘ಹರಿವು’ 2014ನೇ ಸಾಲಿನ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರದಲ್ಲಿ ಸಂಚಾರಿ ವಿಜಯ್ ಅದೆಷ್ಟು ನೈಜವಾಗಿ ಅಭಿನಯಿಸುತ್ತಾರೆಂದರೆ ಇದು ಸಿನೆಮಾ ಎಂದು ಅನಿಸುವುದೇ ಇಲ್ಲ. ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಬೆಂಗಳೂರಿನ ಆಸ್ಪತ್ರೆಗಳ ಅಲೆದಾಟ ನಡೆಸುವ ದೂರದ ಹಳ್ಳಿಗನೊಬ್ಬ ಮಗುವನ್ನು ಕಳೆದುಕೊಂಡ ಮೇಲೆ ಹೆಣವನ್ನು ಊರಿಗೆ ಸಾಗಿಸಲು ಪರದಾಡುವ ಹೃದಯವಿದ್ರಾವಕ ಚಿತ್ರಣವೊಂದು ಕಣ್ಣೆದುರೇ ಘಟಿಸುತ್ತಿರುವಂತೆ ಭಾಸವಾಗುತ್ತದೆ. ಹಲವು ಪ್ರಹಾರಗಳನ್ನು ಏಕಕಾಲಕ್ಕೆ ಸಹಿಸುವ ಮನುಷ್ಯನೊಬ್ಬನ ವಿಲವಿಲಗುಡುವಿಕೆಯನ್ನು ಅನುಭವಕ್ಕೆ ತಂದುಕೊಳ್ಳುವಂತೆ ಮಾಡುತ್ತದೆ. ಸಿನೆಮಾ ನೋಡುತ್ತ 2016ರ ಅಗಸ್ಟ್ ತಿಂಗಳಲ್ಲಿ ಒಡಿಸ್ಸಾದ ದನಾ ಮಾಂಝಿ ತನ್ನ ಪತ್ನಿಯ ಶವವನ್ನು ಆಸ್ಪತ್ರೆಯಿಂದ ತನ್ನ ಊರಿಗೆ 13 ಕಿಲೋಮೀಟರು ಹೊತ್ತುಹೋದ ಮತ್ತೊಂದು ಹೃದಯ ಒಡೆಯುವಂಥ ನೈಜ ಘಟನೆ ಬೇಡವೆಂದರೂ ಕಣ್ಣಮುಂದೆ ಮೂಡತೊಡಗುತ್ತದೆ.

ತೀರ ಮೊನ್ನೆ ಕವಿ, ಸಮಾಜವಾದಿ ಹೋರಾಟಗಾರರೊಬ್ಬರು ಆಕಸ್ಮಿಕ ಘಟನೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ತಮ್ಮ ಮಗನ ಚಿಕಿತ್ಸೆಗಾಗಿ ಹಣ ಹೊಂದಿಸಲು ಪಟ್ಟ ಪಾಡು ನೆನೆದರೆ ಕೈಕಾಲು ನಡುಗುತ್ತವೆ. ಕಳೆದ ವರ್ಷದ ದೀಪಾವಳಿಯ ಸಂಭ್ರಮದಲ್ಲಿ ದೇಶ ಮುಳುಗಿದ್ದಾಗ ಝಾರ್ಖಂಡಿನ ಹನ್ನೊಂದು ವರ್ಷದ ಹುಡುಗಿ ತಿನ್ನಲು ಅನ್ನವಿಲ್ಲದೆ ಮರಣ ಹೊಂದಿದ ಘಟನೆ ನಡೆಯಿತು. ಮತ್ತು ಇಂಥವು ಎಷ್ಟೋ ನಮ್ಮ ದೇಶದಲ್ಲಿ ನಿತ್ಯ ನಡೆದುಬಿಡುತ್ತವೆ. ಎಲ್ಲೋ ವರದಿಯಾದ ಕೆಲವನ್ನು ನಾವು ಹೆಕ್ಕಿ ಉದಾಹರಿಸುತ್ತೇವೆ.

ಬ್ರಿಟಿಷರಿಂದ ಸ್ವತಂತ್ರ ಹೊಂದಿ 70 ವರ್ಷಗಳಾದ, ಪ್ರಜಾಪ್ರಭುತ್ವವಿರುವ ಭಾರತದಂಥ ದೇಶವೊಂದನ್ನು ಹೀಗೆ ಹಸಿವು ಮತ್ತು ಸಾವು-ನೋವುಗಳು ಕಾಡುತ್ತಿರುವ ಭೀಬತ್ಸಕರ ನೋಟಗಳು ಈ ದೇಶದ ಪ್ರಗತಿಯ ಗತಿಯನ್ನು ವಿಶ್ವದೆದುರು ತೆರೆದಿಡುತ್ತಲೇ ಇವೆ. ಹಾಗಾದರೆ ಈ ದೇಶದಲ್ಲಿ ಜೀವವುಳಿಸಿಕೊಳ್ಳಲು ಬಡವನೊಬ್ಬ ಅದೆಷ್ಟು ದುಬಾರಿ ಬೆಲೆ ತೆರಬೇಕು? ಅನ್ನ, ಆರೋಗ್ಯ, ಸೂರು, ಶಿಕ್ಷಣವೆಲ್ಲ ಇನ್ನೆಲ್ಲಿಯ ತನಕ ಮರೀಚಿಕೆಯಾಗುತ್ತಲಿರಬೇಕು? ಯಾಕಿಷ್ಟು ಧರ್ಮ, ಜಾತಿ, ವರ್ಗ ಅಸಮಾನತೆಯ ಕಂದಕಗಳು ಇನ್ನಷ್ಟು ಮತ್ತಷ್ಟು ದೊಡ್ಡವಾಗುತ್ತಾ ವಿಕಾರವಾಗಿ ಕುಣಿಯುತ್ತ ಅಟ್ಟಹಾಸಮಾಡುತ್ತಲಿವೆ? ಕೊನೆಯಿಲ್ಲವೇ ಇವಕ್ಕೆ? ಯಾರು ಕೇಳಬೇಕು ಇವಕ್ಕೆಲ್ಲ ನ್ಯಾಯವನ್ನು? ಏಕಾಯಿತು ನಮ್ಮ ವ್ಯವಸ್ಥೆ ಹೀಗೆ?

ಬಡತನ ದೇಶಕ್ಕಂಟಿದ ಶಾಪ ಎನ್ನಲಾಗುತ್ತದೆ ಆದರೆ ನಾನೆನ್ನುವುದು ಈ ದೇಶದ ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ವ್ಯವಸ್ಥೆ ಈ ದೇಶಕ್ಕಂಟಿದ ಶಾಪವೆಂದು. ಈ ಭ್ರಷ್ಟತೆ ದಿನೇ ದಿನೇ ಹೆಚ್ಚುತ್ತಾ ತನ್ನ ಅತ್ಯಂತ ಅಸಹ್ಯ ರೂಪವನ್ನು ತೋರುತ್ತಲಿದೆ. ಸರಕಾರವು ದಿನೇ ದಿನೇ ದಬ್ಬಾಳಿಕೆಯನ್ನು ಮೆರೆಯುತ್ತಾ ಪ್ಯಾಸಿಸಂ ಕಡೆಗೆ ಸರಿದಂತೆ ಗೋಚರವಾಗುತ್ತಲಿದೆ. ಹತ್ಯಾಂಕಾಂಡಗಳು, ಅತ್ಯಾಚಾರ, ಗಲಾಟೆಗಳು, ಕುಟಿಲ ಅಟ್ಟಹಾಸಗಳು, ಮೋಸ, ವಂಚನೆ, ನೈಚ್ಯಾನುಸಂಧಾನಗಳು ಅಂಕೆಯಿಲ್ಲದಂತೆ ನಡೆದಿವೆ. ನಿರುದ್ಯೋಗ, ಹಸಿವು, ಬಡತನಗಳೊಂದೆಡೆಯಾದರೆ ಬೆಲೆಯೇರಿಕೆ, ನೆರೆ ಬರಗಳಂತಹ ಸಮಸ್ಯೆಗಳೊಂದೆಡೆ. ಈ ದೇಶವು ಹಿಂದೆಂದೂ ಕಾಣದಂತಹ ಸುಳ್ಳುಬುರುಕ ಸರಕಾರವಾಗಿ ಅಸಹ್ಯ ಹುಟ್ಟಿಸುತ್ತಿದೆ.

ಇಷ್ಟಾದರೂ ಈ ದೇಶದ ಜನತೆ ಸಿಡಿದೆದ್ದಿದ್ದು ಈ ಸಮಸ್ಯೆಗಳಿಗೊಂದು ತಾರ್ಕಿಕ ಅಂತ್ಯ ಕಾಣಿಸಿದ್ದು ಇಲ್ಲವೇ ಇಲ್ಲ. ಹಾಗೆ ನೋಡಿದರೆ ಮೋದಿ ಸರಕಾರ ಬಂದ ಮೇಲೆ ಅದರ ದಬ್ಬಾಳಿಕೆಯ ವಿರುದ್ಧ, ಹಿಂದೆಂದಿಗಿಂತಲೂ ಹೆಚ್ಚು ಪ್ರತಿಭಟನೆ, ಹೋರಾಟ, ಚಳುವಳಿಗಳನ್ನು ಈ ದೇಶ ಕಾಣುತ್ತಿದೆ. ಆದರೆ ಆ ಎಲ್ಲವೂ ಅಲ್ಲಲ್ಲೇ ಅಡಗುತ್ತಲಿದೆ ಕೂಡ. ರಾಮಮನೋಹರ ಲೋಹಿಯಾ 1962ರಲ್ಲಿ ಬರೆದ ‘ನಿರಾಶಾ ಕೆ ಕರ್ತವ್ಯ’ ಬರಹದಲ್ಲಿ ಕಳೆದ 1500 ವರ್ಷಗಳಿಂದ ದೇಶದಲ್ಲಿ ಜನತೆ ಆಂತರಿಕ ದಬ್ಬಾಳಿಕೆಗಾರನ ವಿರುದ್ಧ ಒಮ್ಮೆಯೂ ಬಂಡೆದ್ದಿಲ್ಲ ಎನ್ನುತ್ತಾರೆ. ಆಳುವವ ದಬ್ಬಾಳಿಕೆಗಾರನಾದರೆ ಅಂಥವನ ವಿರುದ್ಧ ಬಂಡೇಳುತ್ತಾರೆ, ಕಾನೂನು ಉಲ್ಲಂಘಿಸುತ್ತಾರೆ, ಕಟ್ಟಡಗಳನ್ನು ಧ್ವಂಸಗೊಳಿಸುತ್ತಾರೆ ಇಲ್ಲವೇ ಅವುಗಳನ್ನು ವಶಪಡಿಸಿಕೊಳ್ಳುತ್ತಾರೆ, ದಬ್ಬಾಳಿಕೆಗಾರನನ್ನು ಬಂಧಿಸುತ್ತಾರೆ, ಅವನನ್ನು ಗಲ್ಲಿಗೇರಿಸುತ್ತಾರೆ. ಇಂಥ ಪ್ರಸಂಗಗಳು 1500 ವರ್ಷಗಳೀಚೆ ಭಾರತದಲ್ಲಿ ನಡೆದಿಲ್ಲ ಎನ್ನುತ್ತಾರೆ. ಮುಂದುವರಿದು ಅವರು 1500 ವರ್ಷಗಳ ಅಭ್ಯಾಸ ಬಲದಿಂದ ಶರಣಾಗತಿಯನ್ನು ತನ್ನ ರಕ್ತ, ಮಾಂಸದ ಒಂದಂಗ ಮಾಡಿಕೊಂಡಿದೆಯೆನ್ನುತ್ತಾರೆ. ಇದು ನಿಜವೂ ಹೌದೆನ್ನಿಸುತ್ತದೆ. ಗುಜರಾತಿನ ದಲಿತರ ಹೋರಾಟ, ಬುದ್ದಿಜೀವಿಗಳ ಹತ್ಯೆಗಳ ವಿರುದ್ಧದ ಪ್ರಶಸ್ತಿ ವಾಪಸಾತಿ ಚಳುವಳಿಗಳು, ಜೆ.ಎನ್.ಯು., ಅಹಮದಾಬಾದ್, ಹೈದರಾಬಾದ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಚಳುವಳಿಗಳು, ಕೊಲೆ ಅತ್ಯಾಚಾರಗಳ ವಿರುದ್ಧದ ಹೋರಾಟಗಳು, ಭೂಮಿ ನಮ್ಮ ಹಕ್ಕು ಎನ್ನುವ ಸತ್ಯಾಗ್ರಹಗಳು, ನೀರಿಗೆ ಸಂಬಂಧಿಸಿದ ಹೋರಾಟಗಳಿಂದ ಹಿಡಿದು ಪಕೋಡ ಹೇಳಿಕೆಯ ತನಕ ಪ್ರಭುತ್ವದ ವಿರುದ್ಧ ನಡೆಯುತ್ತಿರುವ ಎಲ್ಲ ಹೋರಾಟಗಳೂ ಶಕ್ತಿಮೀರಿ ನಡೆಯುತ್ತಿದ್ದರೂ ಅದು ಪ್ರಭುತ್ವವನ್ನು ಅಲ್ಲಾಡಿಸುವಲ್ಲಿ, ನ್ಯಾಯ ದೊರಕಿಸುವಲ್ಲಿ ಅಂಥ ಪರಿಣಾಮ ಬೀರಲಿಲ್ಲವೆಂದು ಕಾಣುತ್ತದೆ ಅಥವಾ ಅಂಥ ತೀವ್ರ ಹೋರಾಟಗಳಿಗೂ ಒಂದಿನಿತೂ ಬಗ್ಗದಂತಹ ಮೊಂಡು ಸರಕಾರವೊಂದು ಭಾರತವನ್ನು ಆಳುತ್ತಿದೆ ಎನ್ನಬಹುದೇನೋ!

ಲೋಹಿಯಾ ಹೇಳುತ್ತಾರೆ: ‘ಶರಣಾಗತಿಯನ್ನು ನಮ್ಮ ದೇಶದಲ್ಲಿ ಹೀಗೆ ಸುಂದರವಾಗಿ ಬಣ್ಣಿಸಲಾಗುತ್ತದೆ: ‘ನಮ್ಮ ದೇಶ ತುಂಬ ಸಮನ್ವಯಿಯಾಗಿದ್ದು ಎಲ್ಲ ಒಳ್ಳೆಯ ವಿಚಾರಗಳನ್ನ ಅಂಗೀಕರಿಸುತ್ತದೆ’ ಎಂದು. ವಾಸ್ತವದಲ್ಲಿ ಸಮನ್ವಯ ಎರಡು ರೀತಿಯದ್ದಾಗಿರುತ್ತದೆ. ಒಂದು ದಾಸನ ಸಮನ್ವಯ, ಇನ್ನೊಂದು ಪ್ರಭುವಿನ ಸಮನ್ವಯ. ಪ್ರಭು ಅಥವ ಬಲಶಾಲಿ ದೇಶ ಅಥವಾ ಬಲಶಾಲಿ ಜನ ಸಮನ್ವಯ ಸಾಧಿಸಿದರೆ, ಅನ್ಯರ ಯಾವ ವಿಚಾರ ಒಳ್ಳೆಯದು, ಯಾವ ವಿಧದಲ್ಲಿ ಅದನ್ನು ಅಂಗೀಕರಿಸಿದರೆ ನಮ್ಮ ಶಕ್ತಿ ವೃದ್ಧಿಸಬಲ್ಲದು ಎನ್ನುವುದನ್ನು ಪರಿಶೀಲಿಸಿದ ಮೇಲೆ ಅದನ್ನು ಅಂಗೀಕರಿಸುತ್ತಾನೆ. ಆದರೆ ಸೇವಕ ಅಥವಾ ದಾಸ ಅಥವಾ ಗುಲಾಮ ಅದನ್ನು ಪರಿಶೀಲಿಸಲಾರ. ತನ್ನ ಗಮನಕ್ಕೆ ಯಾವುದೇ ಹೊಸ ವಿಚಾರ, ಅನ್ಯರ ವಿಚಾರ ಬಂದರೆ ಅದು ಪ್ರಭಾವಶಾಲಿಯಾಗಿದ್ದರೆ ಅದನ್ನು ಸ್ವೀಕರಿಸಿಬಿಡುತ್ತಾನೆ. ಅದು ಗತ್ಯಂತರವಿಲ್ಲದೆ ಸ್ವೀಕರಿಸುವ ಪ್ರಸಂಗ’ ಎಂದು. ನೋಟ್ ರದ್ಧತಿ, ಜಿಎಸ್ಟಿ ಹೇರಿಕೆ, ಬೆಲೆ ಏರಿಕೆ ಇತ್ಯಾದಿಗಳಾದಾಗ ಆದದ್ದೂ ಇದೇ ಎಂದು ನನಗನಿಸುವುದು.

ಇದೇ ಬರಹದ ಮುಂದುವರಿದ ಭಾಗದಲ್ಲಿ ಲೋಹಿಯಾ ಹೀಗೆ ಹೇಳುತ್ತಾರೆ: ‘ನಮ್ಮ ದೇಶದಲ್ಲಿ ಬಹುತೇಕ ಇದೇ ತೆರನ ಸಮನ್ವಯ ನಡೆದಿದೆ. ಅದರ ಪರಿಣಾಮವಾಗಿ ಮನುಷ್ಯ ತನ್ನತನಕ್ಕಾಗಿ- ಸ್ವಾತಂತ್ರ್ಯವೂ ಅದರ ಒಂದು ಅಂಗ-ತನ್ನ ಅಸ್ತಿತ್ವಕ್ಕಾಗಿ ಹೋರಾಡಲು, ಪ್ರಾಣವನ್ನೇ ಪಣಕ್ಕಿಡಲು ಅಷ್ಟಾಗಿ ಮುಂದೆ ಬರುವುದಿಲ್ಲ. ಅವನು ತಲೆಬಾಗುತ್ತಾನೆ ಮತ್ತು ಸ್ಥಿರತೆಯ ಹಂಬಲವೂ ಮೂಡುತ್ತದೆ. ಎಷ್ಟೇ ಬಡವನಾಗಿರಲಿ, ಎಷ್ಟೇ ಅನಾರೋಗ್ಯದಿಂದ ಬಳಲುತ್ತಿರಲಿ, ಶರೀರ ಕೊಳೆತುಹೋಗುತ್ತಿದ್ದರೂ ತನ್ನ ಜೀವಕ್ಕಾಗಿ ಹಾತೊರೆಯುವವರನ್ನು ನಿಮ್ಮ ದೇಶದಲ್ಲಿ ಎಲ್ಲೆಲ್ಲೂ ಕಾಣುವಿರಿ. ಯಾವುದೇ ಕಾರ್ಯ ನಿರ್ವಹಿಸುವಾಗ ಅಲ್ಲಿ ತಮ್ಮ ಪ್ರಾಣಕ್ಕೆ ಅಪಾಯವಿದೆಯೋ ಎನ್ನುತ್ತಿರುತ್ತಾರೆ. ಮನುಷ್ಯನು ಬಡವನಾದಷ್ಟೂ ಹಣಕ್ಕಾಗಿ ಹಪಾಹಪಿ ಹೆಚ್ಚುತ್ತದೇನೋ ಅನಿಸುತ್ತದೆ. ಒಟ್ಟಾರೆ ಒಂದು ವಿಚಿತ್ರ ಸನ್ನಿವೇಶ ನಿರ್ಮಾಣವಾಗುತ್ತದೆ. ಶರೀರ ದುರ್ಬಲವಾಗಿದೆ. ಜೇಬು ಬರಿದಾಗಿದೆ. ಆದರೆ ಇಲ್ಲಿ ಮನುಷ್ಯನಿಗೆ ಹಣ ಮತ್ತು ಜೀವದ ಬಗೆಗೆ ಅದೆಷ್ಟು ವ್ಯಾಮೋಹವೆಂದರೆ ಅವನು ಎಂದೂ ಸಾಹಸಕ್ಕೆ ಇಳಿಯಲಾರ. ಸಾಹಸಕ್ಕೆ ಮುಂದಾಗದ ಸಂದರ್ಭದಲ್ಲಿ ಏನೂ ಸಾಧ್ಯವಾಗುವುದಿಲ್ಲ. ಕ್ರಾಂತಿ ಅಸಂಭವವೇ ಆಗಿಬಿಡುತ್ತದೆ. ಆದರೂ ಕ್ರಾಂತಿಯ ವಿಚಾರ ಮಾತನಾಡುವಾಗ ‘ಅಸಂಭವ’ ಶಬ್ದ ಬಳಸಲಾರೆ’ ಎನ್ನುತ್ತಾರೆ. ಲೋಹಿಯಾರ ಮಾತುಗಳು ನನಗೆ ನಿಜ ಎನಿಸಿಬಿಡುತ್ತವೆ. ಈ ದಿನಗಳಲ್ಲಿ ಕೆಲವರೇ ಹೋರಾಟದ ಕಣಕ್ಕಿಳಿದು ಗುದ್ದಾಡುತ್ತಿರುವುದನ್ನು ಬಿಟ್ಟರೆ ಪ್ರಭುತ್ವತ ದಬ್ಬಾಳಿಕೆ, ತಪ್ಪು ನಿರ್ಧಾರ, ದುರಾಡಳಿತದಿಂದ ದಿನನಿತ್ಯ ಹೈರಾಣಾಗುತ್ತಿರುವ ಜನಸಾಮಾನ್ಯ ತುಟಿ ಎರಡು ಮಾಡುತ್ತಿಲ್ಲ. ಲೋಹಿಯಾ ಹೇಳುವಂತೆ ಕ್ರಾಂತಿಯ ಅವಶ್ಯಕತೆ ಯಾರಿಗಿದೆಯೋ ಅವರಲ್ಲಿ ಶಕ್ತಿಯೇ ಇಲ್ಲವಾಗಿದೆ. ಅವರು ಜಾಗೃತರಾಗಿ ಅದಕ್ಕಾಗಿ ಹಂಬಲಿಸಲಾರರು. ಯಾರಿಗೆ ಕ್ರಾಂತಿ ಮಾಡುವ ಸಾಮರ್ಥ್ಯವಿದೆಯೋ ಅವರಿಗೆ ಕ್ರಾಂತಿ ಬೇಕಿಲ್ಲ ಅಥವಾ ಅವರು ಆ ಮನೋಧರ್ಮದವರಲ್ಲ. ಸ್ಥೂಲವಾಗಿ ರಾಷ್ಟ್ರೀಯ ನಿರಾಶೆಯ ಸ್ಥಿತಿಯಿದು.

ಲೋಹಿಯಾ ವಿದ್ಯಾರ್ಥಿಗಳು, ಯುವ ಜನರು ಕೆಚ್ಚೆದೆಯಿಂದ ಕ್ರಾಂತಿಗಿಳಿಯಬೇಕೆನ್ನುತ್ತಾರೆ. ಆದರೆ ನಮ್ಮಲ್ಲೀಗ ವಿದ್ಯಾರ್ಥಿ ಮತ್ತು ಯುವ ಸಮುದಾಯಗಳನ್ನೇ ಗುರಿಯಾಗಿಟ್ಟುಕೊಂಡು ಜಾತಿ ಧರ್ಮದ ವಿಷ ಉಣಿಸಲಾಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿ ಅಥವಾ ಅವರ ನಿರುದ್ಯೋಗದ ಖಾಲಿತನವನ್ನು ಅವರ ಮೆದುಳುಗಳಿಗೆ ಧರ್ಮದ ನಂಜುಣಿಸುವ ಕೆಲಸಗಳಿಗೆ ಬಳಸಲಾಗುತ್ತಿದೆ. ಮತ್ತು ಇದನ್ನು ಮಾಡುತ್ತಿರುವವರು ಸುರಕ್ಷಿತವಾಗಿದ್ದುಕೊಂಡು ನಮ್ಮ ಮಕ್ಕಳನ್ನೇ ನಮ್ಮ ಮಕ್ಕಳ ವಿರುದ್ಧವೇ ಹೊಡೆದಾಡಿ ಸಾಯಲು ಅಣಿಗೊಳಿಸಲಾಗುತ್ತಿದೆ.

ಇದರ ನಡುವೆಯೇ ಈ ದೇಶದ ಒಂದು ಆಶಾದಾಯಕ ಬೆಳವಣಿಗೆಯೆಂದರೆ ಜಿಗ್ನೇಶ್, ಕನ್ಹಯಾ, ಶೆಹ್ಲಾ, ಉಮರ್ ಖಾಲಿದ್ ರಂತಹ ಯುವ ಪಡೆ ಸರಕಾರದ ದುರಾಡಳಿತದ, ಅನ್ಯಾಯದ ವಿರುದ್ಧ ತಿರುಗಿಬಿದ್ದಿದೆ. ದೇಶದ ಸಂಕಟದ ದಿನಗಳಲ್ಲಿ ದೇಶದ ಮೂಲೆ ಮೂಲೆಗೂ ಸಂಚರಿಸಿ ಹೋರಾಟದ ಕಾವಿಗೆ ಕಸುವು ತುಂಬುತ್ತಲಿದ್ದಾರೆ. ಸರಕಾರದ ಸೊಂಟ ಅಲ್ಲಾಡುವಂತೆ ಗುಡುಗುತ್ತ ತೊಡೆ ತಟ್ಟಿನಿಂತಿದ್ದಾರೆ. ಈ ಹೊತ್ತಿನಲ್ಲಿ ಚಂಪಾ, ದೊರೆಸ್ವಾಮಿ ಅವರಂತಹ ಹಿರಿಯರು ಸರಕಾರದ ಕೆಟ್ಟ ನಡೆಗಳನ್ನು ಟೀಕಿಸುತ್ತಿದ್ದರೂ ಎಲ್ಲೋ ಒಂದೆಡೆ ಬಹುತೇಕ ಹಿರಿಯರು ಮೌನ ವಹಿಸಿಬಿಟ್ಟಂತೆ ಕೆಲವೊಮ್ಮೆ ಜಾಣಮೌನ ವಹಿಸಿಬಿಟ್ಟಂತೆಯೂ ಕಾಣುತ್ತಿರುವುದು ಸುಳ್ಳಲ್ಲ. ತೀರಾ ಮೊನ್ನೆ ವಿಚಾರವಾದದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆಗೀಡಾದ ಗೌರಿ ಲಂಕೇಶರ ಜನ್ಮದಿನ ಗೌರಿದಿನವನ್ನಾಗಿ ಪ್ರಗತಿಪರರು ಆಚರಿಸುವಾಗ ಸಾಮಾಜಿಕ ಹೋರಾಟಕ್ಕೆ ಟೊಂಕಕಟ್ಟಿ ನಿಂತ ಪ್ರಕಾಶ್ ರೈ ಅವರೊಂದಿಗೆ ಜಿಗ್ನೇಶ್, ಕನ್ಹಯಾ, ಶೆಹ್ಲಾ, ಖಾಲಿದ್ ಮುಂತಾದ ಅದೇ ಯುವ ಸಮೂಹ ವೇದಿಕೆಯಲ್ಲಿ ಮಾತಾಡಿದುದನ್ನು ಕುರಿತು ಹಿರಿಯ ಸಮಾಜವಾದಿ ಲೇಖಕರು ‘ಗೌರಿ ದಿನವನ್ನು ಮೋದಿಯನ್ನು ಜರಿಯಲು ಬಳಸಲಾಯಿತು’ ಎಂದು ದೂರಿದ್ದನ್ನು ನೋಡುವಾಗ ನಿಜಕ್ಕೂ ಅಚ್ಚರಿಯೆನಿಸುತ್ತದೆ. ಜೊತೆಗೆ ಖೇದ ಕೂಡ ಉಂಟಾಗುತ್ತದೆ. ದೇಶ ಅತ್ಯಂತ ಕೆಟ್ಟ ಆಡಳಿತವನ್ನು ನೋಡುತ್ತಿರುವಾಗ, ಸಂವಿಧಾನವನ್ನು ಬದಲಿಸಬೇಕು ಎಂಬಂಥ ಹೇಳಿಕೆಗಳು ಅಲ್ಲಿಂದ ಹೊರಡುತ್ತಿರುವಾಗ, ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.

ಚುನಾವಣೆಗಳು ಹೊಸ್ತಿಲಲ್ಲಿ ನಿಂತಿರುವ ಹೊತ್ತಲ್ಲಿ ಅರಾಜಕತೆಗಳು ಇನ್ನಷ್ಟು ಮತ್ತಷ್ಟು ಹೆಚ್ಚುತ್ತಿರುವ ಹೊತ್ತಲ್ಲಿ ಹಿರಿಕಿರಿಯರೆನ್ನದೆ ಒಗ್ಗೂಡಿ ಕ್ರಾಂತಿಗಿಳಿಯುವುದು ಅತ್ಯವಶ್ಯವಾಗಿದೆ. ಇಲ್ಲವಾದರೆ ಪ್ರಕಾಶ್ ರೈಯವರು ಹೇಳುವಂತೆ, ಖಂಡಿತವಾಗಿ ‘ಮುಂದೆ ಒಂದೈದು ವರ್ಷ ಇದೇ ಸರಕಾರ ಬರಬಹುದು. ಆದರೆ ಅದು ಮಾಡಿಹೋಗುವ ಗಾಯಗಳನ್ನು ಮುಂದಿನ ಇಪ್ಪತ್ತು ವರ್ಷಗಳ ತನಕ ಅನುಭವಿಸಬೇಕಾಗುತ್ತದೆ.’

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

 

 

 

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 7 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 1 week ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...


Editor's Wall

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...