Share

ಒಳ್ಳೆಯತನ ಅದೆಷ್ಟು ಒಳ್ಳೆಯದು?
ಅರ್ಚನಾ ಎ ಪಿ

 

 

 

ಈ ಜಗತ್ತಿನಲ್ಲಿ ಒಳ್ಳೆಯವರು ಯಾರು ಗೊತ್ತಾ?

 

 

 

 

 

न्होंने हमें आज़मा कर देख लिया
इक धोका हमने भी खाकर देख लिया
क्या हुआ हम हुए जो उदास
उन्होंने तो अपना दिल बहला के देख लिया.

ಅವರ ‘time pass’ಗೆ ಒದಗಿ ಬಂದರೆ ಮಾತ್ರ ಒಳ್ಳೆಯವರು. ಬಸ್ ನಿಲ್ದಾಣದಿಂದ ಮನೆಗೆ ಹೋಗುವವರೆಗೋ, ಮನೆಯಲ್ಲಿ ಯಾರೂ ಇಲ್ಲ ಅಂತಲೋ, ಮಗು ಮಲಗಿದೆ ಬಿಡುವಿದೆ ಅಂದ್ಕೊಂಡೋ ಸಮಯದ ‘ಸದುಪಯೋಗ’ಕ್ಕೆ ಕರೆ ಮಾಡಿದಾಗ ನಮ್ಮ schedule ಗಮನಿಸದೆ ಮಾತಾಡಲು ಸಿಕ್ಕರೆ ಮಾತ್ರ ಒಳ್ಳೆಯವರು. ಬಟ್ಟೆ ಅಂಗಡಿಗೆ ಹೋಗಿ ಅವರು ತೋರಿಸುವ ನಾಲ್ಕೈದು ವೈವಿಧ್ಯಗಳಲ್ಲಿ ಒಂದನ್ನು ಆರಿಸಿಕೊಂಡು, ಐವತ್ತೋ ನೂರೋ, ಕಡಿಮೆ ಮಾಡಿ ಹೇಳಿದಷ್ಟು ಕೊಟ್ಟು ಹೋದರೆ ಒಳ್ಳೆಯವರು. ಚಿಲ್ಲರೆ ಇಲ್ಲ ಅಂತ ಟಿಕೆಟ್ ಹಿಂದೆ ಉಳಿದ ಹಣ ಬರೆದು ಕೊಟ್ಟು, ಅದನ್ನು ಇಳಿಯುವಾಗ ಮರೆತು ಇಳಿದರೆ ನಿರ್ವಾಹಕರಿಗೆ ಒಳ್ಳೆಯ ಪ್ರಯಾಣಿಕರು. ತರಕಾರಿಯೋ ಹಣ್ಣೋ ವ್ಯಾಪಾರ ಮಾಡಿದಾಗ ಅವರ ಆಯ್ಕೆಯ ತರಕಾರಿ ಹಣ್ಣು ಕೊಂಡರೆ ಒಳ್ಳೆಯ ಗ್ರಾಹಕರು. ಹಗಲೋ ರಾತ್ರಿಯೋ, ಮನೆಯಲ್ಲಿ ಅನುಮತಿ ಸಿಗುತ್ತೋ ಇಲ್ಲವೋ ಅಂತಲೂ ಯೋಚಿಸದೆ, ಕೇಳಿದಾಗಲೆಲ್ಲ ಸಿನಿಮಾ, ನಾಟಕಕ್ಕೆ ಕರೆದಾಗ ಹೋಗುವವರು ಮಾತ್ರ ಒಳ್ಳೆಯ ಸ್ನೇಹಿತರು. ಮನೆಯಲ್ಲಿ ಆಗಷ್ಟೇ ಕುರುಕ್ಷೇತ್ರ ನಡೆದು ಅದರ ಕುರುಹು ಒಡತಿಯ ಮುಖದ ಮೇಲೋ, ಕೂದಲಲ್ಲೋ ಇದ್ದರೂ ಅದಕ್ಕೆ ಕಾರಣರಾದ ‘ಯಜಮಾನ’ನ ಮಾನ ಉಳಿಸುವ ಪ್ರಯತ್ನ – ಬಂದವರೆದುರಿಗೆ – ಮಾಡುವ ಸಹಧರ್ಮಿಣಿಯೇ ಒಳ್ಳೆಯ ಗೃಹಿಣಿ. ಸಂಬಂಧದಲ್ಲಿ ಪರಸ್ಪರರಿಗೆ ಗೌರವ ಕೊಡಬೇಕು ಅಂತ ಅಪೇಕ್ಷಿಸದೇ, ಏಕವಚನದ ಪ್ರಯೋಗ, ಬೈಗುಳಗಳನ್ನು ಯಾವುದೇ ಭಾವವಿಲ್ಲದೆ ಒಪ್ಪಿಕೊಂಡರೆ ಮಾತ್ರ ಒಳ್ಳೆಯವರು.

ಯಾರೋ ಮೂರನೇ ವ್ಯಕ್ತಿಯೆದುರು ತನ್ನ ಪ್ರತಿಷ್ಠೆ ಕಾಯ್ದುಕೊಳ್ಳಲು ಮಕ್ಕಳ ಮೇಲೆ ಬೇಡದ ನೂರೆಂಟು ನಿರ್ಬಂಧ ಹೇರಿದರೂ, ತುಟಿಪಿಟಿಕ್ಕೆನ್ನದೆ, ಎದುರು ಮಾತಾಡದೇ ಅನುಸರಿಸಿಕೊಂಡು ನಡೆದರೆ ಮಾತ್ರ ಒಳ್ಳೆಯ ಮಕ್ಕಳು.

ಮೇಲಧಿಕಾರಿಗಳ ಅನರ್ಹತೆ, ಅಧಿಕಾರದ ದುರುಪಯೋಗ, ಬೇಡದ ಹಲವು ವಿಚಾರಗಳನ್ನು ಕಣ್ಣಾರೆ ಕಂಡೂ, ಜಾಣ ಕಿವುಡು, ಜಾಣ ಕುರುಡು, ಜಾಣ ಮೌನ ತೋರಿಸುತ್ತಿದ್ದರೆ ಮಾತ್ರ ಒಳ್ಳೆಯ ನೌಕರರು. ತರಗತಿಯಲ್ಲಿ ಪಾಠ ಮಾಡೋದು ಬಿಟ್ಟು ಕಥೆ ಹೇಳುತ್ತಾ, ವೈಯಕ್ತಿಕ ವಿಚಾರಗಳನ್ನು, ಸಹೋದ್ಯೋಗಿಗಳ ಕುರಿತು ಕೀಳು ಮಾತನ್ನು ಆಡ್ತಾ, ತಂತ್ರಜ್ಞಾನಾಧಾರಿತ ವಸ್ತುಗಳನ್ನು ಬಳಸಲು ಬಿಟ್ಟರೆ, ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದರೂ ಕಾಣದಂತೆ ಓಡಾಡುತ್ತಿದ್ದರೆ ಮಾತ್ರ ಒಳ್ಳೆಯ ಶಿಕ್ಷಕರು.

ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ, ಅದರ ಬಗ್ಗೆ ಚಕಾರವೆತ್ತದೆ, ಸುಮ್ಮನೆ ಅವರಿವರ ಮುಂದೆ ಚರ್ಚಿಸುತ್ತಾ, ಚುನಾವಣೆ ಸಮಯದಲ್ಲಿ ಬಿಸಾಕೋ ಎಂಜಲು ಕಾಸಿಗೆ ಕೈಚಾಚಿ, ಅರ್ಹರಲ್ಲದ ಅವರನ್ನು ಆರಿಸಿದರೆ ಮಾತ್ರ ಒಳ್ಳೆಯ ಮತದಾರರು, ನಾಗರಿಕರು. ಇಪ್ಪತ್ತು ವರ್ಷಗಳಿಂದ ಮಗುವಿನಂತೆ ಪೋಷಿಸಿ ಸಲಹಿದ ಮರಗಳನ್ನು, ತಮ್ಮ ಮನೆಯ ಅಂದ ಹಾಳಾಗತ್ತೆ ಅಂತಲೋ, ಕಾರ್ ಒಯ್ಯಲು ಬರಲ್ಲ ಅಂತಲೋ ಹೇಳಹೆಸರಿಲ್ಲದಂತೆ ಬುಡಸಮೇತ ಮುಲಾಜಿಲ್ಲದೆ ಕಡಿದು ಹಾಕುವ so called educated ನಾಗರಿಕರನ್ನು ಸಹಿಸಿಕೊಂಡರೆ ಒಳ್ಳೆಯ ನೆರೆಹೊರೆಯವರು.

ದಿನಕ್ಕೆ ಎರಡು ಮೂರು ಸಿಗರೇಟ್ ಪ್ಯಾಕ್ ಸೇದೋಂಥ ಬಾಡಿಗೆದಾರರಿಗೆ ಹಣದಾಸೆಗೆ ಮನೆ ಕೊಟ್ಟು, ದೂರದ ಊರಲ್ಲೆಲ್ಲೋ ಕೂತು ಅದರ ಪರಿಣಾಮಕ್ಕೂ ಎಟುಕದ ಮನೆಯ ಮಾಲಿಕರಿಗೆ ಈ ಕುರಿತು ದೂರದೇ, ಕ್ಯಾನ್ಸರ್ ನಂಥ ಚಿಕ್ಕ ಕಾಯಿಲೆಗೆ ನಮ್ಮನ್ನು ನಾವು ಒಡ್ಡಿಕೊಂಡರೆ ಒಳ್ಳೆಯ ಅಕ್ಕಪಕ್ಕದವರು.

ಅವರ ಮನೆಯಲ್ಲಿ ಮಗಸೊಸೆ ನಡುವೆ ಸಾವಿರಾರು ಮನಸ್ತಾಪಗಳಿದ್ದರೂ, ಕಾಟ ತಡೆಯಲಾರದೆ ಸೊಸೆ ಇವರ ಮೇಲೆ ಕೇಸ್ ಹಾಕಿ ಜೈಲಿನ ರುಚಿ ತೋರಿಸಿದ್ದರೂ, ಇನ್ನೊಬ್ಬ ಮನೆಯ ಮಗಳ ಮದುವೆ ಬಗ್ಗೆ ಅವರ ತಂದೆತಾಯಿಗೆ, ಚಿಂತೆ ಇಲ್ವೇನೂ, ಮನೆಯಲ್ಲೇ ಕೂರಿಸಿಕೊಳ್ತೀರೇನೂ? ಅನ್ನೋ ‘ಕಳಕಳಿ’ಯ ಮಾತಿಗೆ, ಮೊದಲು ನಿಮ್ ತಟ್ಟೇಲಿ ಬಿದ್ದಿರೋ ಹೆಗ್ಣ ನೋಡಿಕೊಂಡು, ಆಮೇಲೆ ನನ್ನೆಲೇಲಿ ಇರೋ ಹಲ್ಲಿಯ ಕಡೆ ಗಮನ ಕೊಡಿ ಅಂತ ಅನ್ನದೇ ಕಣ್ಣೀರಿಟ್ಟರೆ ಮಾತ್ರ ಒಳ್ಳೆಯವರು.

ಹೊಸ ಪರಿಚಯ ಆದಾಗ, ಮಾತು ಮಾತಲ್ಲೇ ಮದುವೆಯಾಗಿಲ್ಲ ಎಂಬುದನ್ನು ಜಾಣತನದಿಂದ ತಿಳಿದುಕೊಂಡು, ತಮ್ಮ ಬೇಡದ ಮದುವೆಯ ಸಂಬಂಧಕ್ಕೊಂದು ಪರ್ಯಾಯ ಹುಡುಕಿಕೊಳ್ಳುವ ಮನಸ್ಥಿತಿಯವರಿಗೆ, ಅವರಿಗೆ ಬೇಕಾದ ಹಾಗೆ ಸ್ಪಂದಿಸಿದರೆ ಮಾತ್ರ ಒಳ್ಳೆಯವರು.

ತಮ್ಮ ಮನೆಯಲ್ಲಿ ಮಗನ ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದರೂ, ಇವರು ಕೊಡೋ ಮಾನಸಿಕ ಹಿಂಸೆ, ಸೊಸೆಯ ದೈಹಿಕ ಸ್ಥಿತಿಯ ಮೇಲೆ, ತಾಯಾಗೋ ಅಂಗದ ಮೇಲೆ, ಹಾರ್ಮೋನುಗಳ ಏರುಪೇರಿನಿಂದ ಬೀರ್ತಾ ಇರೋ ದುಷ್ಪರಿಣಾಮದ ಅರಿವಿಲ್ಲದಂತೆ ವರ್ತಿಸುತ್ತಾ, ಪಾರ್ಕ್ ನಲ್ಲಿ ಎದುರಾಗೋ ಎಲ್ಲರ ವೈಯಕ್ತಿಕ ವಿಷಯಗಳನ್ನು ಕೆದಕೋರಿಗೆ, ಮದುವೆ ಮುಂಜಿ ವಿಚಾರ ಕೇಳೋರಿಗೆ, ಕೊಂಕು ಮಾತಾಡುವವರಿಗೆ, ನೀವ್ ನಿಮ್ಮ ಮೊಮ್ಮಗುವಿಗೆ ಅಜ್ಜಿ ಯಾವಾಗಾಗ್ತೀರೋ ಆಗಲೇ ಮದುವೆ, ಮುಂಜಿ ಅನ್ನೋಣ ಅನಿಸಿದರೂ, ಬಂದ ಕೆಲಸ ಮುಗಿಸಿಕೊಂಡು ನಡೆದರೆ ನಾವೊಳ್ಳೆಯವರು.

ಸ್ನೇಹದಲ್ಲಿ ದುಡ್ಡಿನ ವ್ಯವಹಾರ ಇಟ್ಕೊಳ್ಳಲೇ ಬಾರದಂತೆ. ಆದರೇನು ಮಾಡೋದು, ಅವರ ಒದ್ದಾಟ ತಡೆಯಲಾರದೆ ಸಹಾಯ ಮಾಡಿ, ವರ್ಷಗಳೇ ಕಳೆದರೂ, ಮತ್ತೆ ಕೇಳದೆ, ಬಂದೇ ಬರತ್ತೆ ವಾಪಸ್, ಕಾರಣ ಅವರು ಎಂದಿಗೂ ಮೋಸ ಮಾಡಲ್ಲ ಅಂತ ನಿರೀಕ್ಷೆ ಇಟ್ಕೊಳ್ಳದೇ ಕೊಟ್ಟ ಹಣ ಕುಲಕ್ಕೆ ಹೊರಗು ಅಂತ ಕೇಳದೇ ಇದ್ದರೆ, ಅಯ್ಯೋ ಕೇಳಿದರೆ ಸಂಬಂಧ ಹಾಳಾಗತ್ತೆ ಅಂತ ಯೋಚಿಸಿ ಸುಮ್ಮನಿದ್ದರೆ ಒಳ್ಳೆಯವರು.

ಇಂತಹ ಸಾವಿರಾರು ಜ್ವಾಲಾಮುಖಿಗಳು ಸಿಡಿಯಲು ಸಿದ್ಧವಾಗಿದ್ದರೂ, ಇವರೆಲ್ಲರನ್ನೂ ಯಮನ ನಾಲಿಗೆ ಚಾಚಿ ಆಪೋಷನ ತೊಗೋಳೋಷ್ಟು ಲಾವಾ ಕುದಿಯುತ್ತಿದ್ದರೂ, ಆಸ್ಫೋಟಿಸದೆ, ಬೂದಿ ಮುಚ್ಚಿದ ಕೆಂಡದಂತೆ ಮುಖದ ತುಂಬಾ ನಗು ಹೊತ್ತು ಅತ್ತಿಂದಿತ್ತ ತಿರುಗಾಡುತ್ತಿದ್ದರೆ ನಾವೊಳ್ಳೆಯವರು.

ಛೀ…
ಧಿಕ್ಕಾರವಿರಲಿ ಇಂಥ ಒಳ್ಳೆಯತನಕ್ಕೆ…

ಅಲ್ಲಾ..
ಸಂಬಂಧದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ, ಮೌನವಹಿಸಿ ಪ್ರತಿಭಟಿಸೋಷ್ಟೂ ಸ್ವಾತಂತ್ರ್ಯ ಇಲ್ಲದಿದ್ರೆ ಈ ಒಳ್ಳೆಯತನ ಯಾಕೆ?

ಆಫೀಸ್ ನಲ್ಲೋ, ಕೆಲಸದ ಜಾಗದಲ್ಲೋ, ಅಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸ್ತಿದ್ದರೂ, ದುರ್ವರ್ತನೆ ತೋರಿಸುತ್ತಿದ್ದರೂ, ಹೇಳಿದರೆ ಎಲ್ಲಿ ನನ್ನ ಬುಡಕ್ಕೆ ಕೊಡಲಿ ಹಾಕ್ತಾರೋ ಅಂತ ಹೆದರಿ ಸಾಯೋ ಒಳ್ಳೆಯತನ ಯಾಕೆ?

ಐದು ರೂಪಾಯಿ ಆಗಲಿ, ಹತ್ತಾಗಲೀ, ಟಿಕೆಟ್ ಪಡೆದೇ ಸಂಚರಿಸುತ್ತೇನೆ, ಒಂದು ರೂಪಾಯಿ ಕೊಟ್ಟು, ನಾಲ್ಕು ರೂಪಾಯಿ ಜೇಬಿಗೆ ಹಾಕಿಕೊಳ್ಳೋ ನಿರ್ವಾಹಕರಿಗೆ ಪ್ರಶ್ನಿಸಲು ಹೋಗದ ಒಳ್ಳೆಯತನ ಯಾಕೆ?

ಸ್ವಂತ ಮನೆ, ಬದಲಾಯಿಸುವ ಅವಕಾಶವಿಲ್ಲ, ಅಂತ ಅಕ್ಕಪಕ್ಕದವರ ದುರ್ನಡತೆಯನ್ನು, ದುರ್ವ್ಯವಹಾರವನ್ನು, ಅನೈತಿಕ ಚಟುವಟಿಕೆಗಳನ್ನು, ನಮಗ್ಯಾಕೆ ಆ ಸುದ್ದಿ ಅಂತ ನಿರ್ಲಕ್ಷ್ಯಿಸುವ ಒಳ್ಳೆಯತನ ಯಾಕೆ?

ಸಿಗ್ನಲ್ ನಲ್ಲಿ ಇನ್ನೂ ೩೦ ಸೆಕೆಂಡಿದ್ದರೂ, ದಾಟುವಂತೆ ಒಂದೇ ಸಮನೆ ಹಾರ್ನ್ ಮಾಡಿ, ಕೇಳದಿದ್ದರೆ ಗುದ್ದೋದಕ್ಕೂ ಹೇಸದ ವಿದ್ಯಾವಂತ ಅನಾಗರಿಕರನ್ನು ಪ್ರಶ್ನಿಸುವ ಗೋಜಿಗೆ ಹೋಗದ ಸ್ಥಿತಿಯನ್ನು ಕಲಿಸದ, ನಿರ್ಲಿಪ್ತವಾಗಿರಲು ಹೇಳಿಕೊಡುವ ಒಳ್ಳೆಯತನ ಯಾಕೆ?

ಅಯ್ಯೋ, ಅವರು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ಬಿಟ್ಟು ಹೊಗುತ್ತಾರೇನೋ, ನನ್ನನ್ನು ನಾನು ಅವರಿಗೆ ಬೇಕಾದಂತೆ ಬದಲಿಸಿಕೊಳ್ಳದಿದ್ದರೆ ಏನು ಗತಿ ಅಂತ ಇಷ್ಟವಿಲ್ಲದಿದ್ದರೂ, ಎಲ್ಲಾ ಮಾತುಗಳಿಗೂ ಮೌನ ಸಮ್ಮತಿ ಸೂಚಿಸ್ತಾ ಬಲೆಯೊಳಗೆ ಸಿಲುಕುವ ಒಳ್ಳೆಯತನ ಯಾಕೆ?

ಅಬ್ಬಾ…

तुझसे नाराज़ नहीं ಒಳ್ಳೆಯತನವೇ
हैरान हूं मैं….
ನಿಜಕ್ಕೂ ಆಶ್ಚರ್ಯ ಆಗ್ತಿದೆ…

ನಾನು ನಾನೇನಾ?
ಸಜೀವ, ಸಚೇತನ.

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 7 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 1 week ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...


Editor's Wall

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...