Share

ನಿಮಗಿಂತ ಹೆಚ್ಚು ನಿರ್ಜೀವ
ಭಾರತಿ ಬಿ ವಿ

 

 

 

 

|

ಕಮಲಾದಾಸ್ ಕಡಲು

 

 

 

ಇಂದಿರಾಗಾಂಧಿ ಬಿಟ್ಟರೆ…
(Next to Indira Gandhi)
ಕಮಲಾದಾಸ್ ಕವಿತೆಯ ಅನುವಾದ

 

 

 

ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು
ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ
ನಾನು ಐದು ವರ್ಷದವಳಿರುವಾಗ
ಅವರೇ ನನಗೆ ಹೇಳಿದ್ದು
ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು
ಮಾತ್ರ ತೊಡಬೇಕೆಂದು.
ಬೆಳೆಯುವ ದಿನಗಳಲ್ಲಿ
ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ,
ಹಲ್ಲಿಗೆ ಕ್ಲಿಪ್ ಹಾಕಿದ್ದ ಮತ್ತು ಆಮೆ ಚಿಪ್ಪಿನ ಫ್ರೇಮ್’ನ
ಕನ್ನಡಕ ತೊಟ್ಟಿದ್ದ ನನಗೆ ಕೊಡಲು
ಅವರಲ್ಲಿ ಸಮಯವೇ ಇರಲಿಲ್ಲ.
ಅವರೊಬ್ಬರೇ ಪ್ರತಿ ಮಂಗಳವಾರ
ರೋಟರಿಯವರ ಔತಣಕೂಟಕ್ಕೆ
ತಪ್ಪದೇ ಹೋಗುತ್ತಿದ್ದರು
ಮತ್ತು ಅಲ್ಲಿ ದೊಡ್ಡ ಮೊತ್ತದ ಚೆಕ್’ಗಳಿಗೆ ಸಹಿ ಹಾಕಿ
ದಾನವಾಗಿ ಕೊಡುತ್ತಿದ್ದರು.
ಆದರೆ ದಿನವೂ ಮೆಟ್ಟಿಲು ಇಳಿಯುವಾಗ
ನಾನು ಅರೆ ನಿಮಿಷ ಎವೆಯಿಕ್ಕದೆ
ಅವರನ್ನೇ ನೋಡುತ್ತ ನಿಲ್ಲುವಾಗ
ಅವರು ನನ್ನಿಂದಾಚೆ ಎಲ್ಲೋ ಕಣ್ಣು ನೆಡುತ್ತಿದ್ದರು,
ಅವರ ಕಛೇರಿಯ ಸಮಸ್ಯೆಗಳು
ಅವರು ನಮ್ಮ ಯೋಚನೆ ಮಾಡದಂತೆ ತಡೆಯೊಡ್ಡುತ್ತಿದ್ದವು.

ಅಪ್ಪ, ಈಗ ನಾನು ಭಯವಿಲ್ಲದೇ
ನಿಮ್ಮನ್ನು ಪ್ರಶ್ನಿಸುತ್ತಿರುವೆ,
ನಿಮಗೆ ನಾನು ಬೇಕಾಗಿದ್ದೆನೇ,
ನಿಮಗೆ ಒಬ್ಬಳು ಮಗಳು ನಿಜಕ್ಕೂ ಬೇಕಿದ್ದಳೇ,
ನಿಮ್ಮಷ್ಟೇ ಕಪ್ಪಾದ ಚರ್ಮದಿಂದ ಮತ್ತು
ನನ್ನ ಅನ್ಯಮನಸ್ಕ ಸ್ವಭಾವದಿಂದ
ನಾನು ನಿಮಗೆ ನಿರಾಸೆ ಉಂಟು ಮಾಡಿದ್ದೆನೇ?
ಶನಿವಾರಗಳಂದು ನೀವು ಮೆಟ್ರೋ ಥಿಯೇಟರಿನಲ್ಲಿ
ಮೂರನೆಯ ಸಾಲಿನಲ್ಲಿ ಕುಳಿತು ಮಧ್ಯಾಹ್ನದ
ಸಿನೆಮಾ ಪ್ರದರ್ಶನ ನೋಡುತ್ತಿದ್ದಿರಿ, ಹೌದೇ?
ಸ್ಮಿತ್ ದಂಪತಿಗಳು ಅಥವಾ ಮತ್ಯಾವುದೋ
ತೆಳ್ಳಗಿನ, ಬೆಳ್ಳಗಿನ ದಂಪತಿಗಳು ನಿನ್ನೊಡನೆ ಇರುತ್ತಿದ್ದರು
ನಾನೂ ಎರಡು ಬಾರಿ ನಿನ್ನೊಡನೆ ಕುಳಿತಿದ್ದೆ,
ಶ್ರೀಮತಿ ಸ್ಮಿತ್ ಒತ್ತಾಯಿಸಿದ್ದಕ್ಕೆ,
ಆ ಸಿನೆಮಾಗಳೂ ಲಾರಲ್ ಮತ್ತು ಹಾರ್ಡಿ ಥರದವು.
ನೀವು ನಾನು ತೊಡುವ ಬಟ್ಟೆಗಳನ್ನು
ನನಗಾಗಿ ಆರಿಸುತ್ತಿದ್ದಿರಿ
ನನ್ನ ಮನೆಪಾಠದ ಶಿಕ್ಷಕ, ನನ್ನ ಹವ್ಯಾಸಗಳು,
ನನ್ನ ಸ್ನೇಹಿತರು ಮತ್ತು ನನಗೆ ಹದಿನೈದು ವರ್ಷ ತುಂಬಿ
ಮೊದಲ ಬಾರಿ ಸೀರೆಯುಟ್ಟಾಗ ಒಬ್ಬ ಗಂಡನನ್ನೂ.
ನನಗಾಗಿ ಒಬ್ಬ ಗಂಡಸನ್ನು ಆರಿಸಿದ್ದಕ್ಕೆ
ಮತ್ತು ಉಪನಗರವೊಂದರ ನೀರಸತೆಯನ್ನು
ಕಸೂತಿ ಮತ್ತು ಕ್ರೋಶಾ ಕೆಲಸದಿಂದ
ಉಜ್ವಲವಾಗಿ ಬೆಳಗಿಸುವ ಬದುಕನ್ನು
ನನಗಾಗಿ ಆರಿಸಿದ್ದಕ್ಕೆ ನಾನು ನಿನಗೆ ಕೃತಜ್ಞಳಾಗಿರುತ್ತೇನೆ
ಮತ್ತು ಗುರುವಾರದ ಪಾಕಶಾಸ್ತ್ರದ ತರಗತಿಗಾಗಿಯೂ.
ಆದರೆ ಅದು ನನಗೆ ತಕ್ಕುದಾದ ಜಾಡಾಗಿರಲಿಲ್ಲ ಅಷ್ಟೇ,
ಅದು ಎಂದೂ ನನ್ನ ತುತ್ತಾಗಿರಲಿಲ್ಲ.
ನನಗೆ ಗೊತ್ತು, ನಾನು ನಿನ್ನನ್ನು ನಿರಾಸೆಗೊಳಿಸಿದ್ದೇನೆ ಅಪ್ಪ,
ಆದರೆ ನೀವು ಅದಕ್ಕೆ ಸರಿದೂಗುವಷ್ಟು
ಶಿಕ್ಷೆಯನ್ನೂ ನೀಡಿರುವಿರಿ, ಅಲ್ಲವೇ?
ಇಲ್ಲಿಗೆ ಲೆಕ್ಕ ಚುಕ್ತಾ ಆಯಿತು.
ನೀವೀಗ ಸತ್ತು ಹೋಗಿರುವಿರಿ,
ನಿಮ್ಮನ್ನು ಕಂಡರೆ ಈಗ ಯಾರೂ ಹೆದರುವುದಿಲ್ಲ,
ಮತ್ತು ನಾನು ಕೊನೆಗೂ ಭಯದಿಂದ ಮುಕ್ತಳಾದೆ,
ಆದರೂ ಯಾಕೋ ನನಗೆ ಅಂಥ ನೆಮ್ಮದಿಯೇನೂ ಅನ್ನಿಸುತ್ತಿಲ್ಲ
ನಾನು ನಿರ್ಜೀವವಾದಂತೆ ಅನಿಸುತ್ತಿದೆ,
ನಿಮಗಿಂತ ಹೆಚ್ಚು ನಿರ್ಜೀವ….

Share

Leave a comment

Your email address will not be published. Required fields are marked *

Recent Posts More

  • 1 week ago No comment

    ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

          ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

  • 1 week ago No comment

    ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

        ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

  • 2 weeks ago No comment

    ಸಾಹಸದ ಆ ನಿಮಿಷಗಳು

            ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

  • 3 weeks ago No comment

    ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

    ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

  • 3 weeks ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

  • 11 May 2018
    2 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 months ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    2 months ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    3 months ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    3 months ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...